ಭಾರತವು ಮಧುಮೇಹದಿಂದ ಮುಕ್ತವಾಗಲು ಸಾಧ್ಯವೇ.?
ಪ್ರಜಾಪ್ರಭುತ್ವ ದೇಶದ ಪ್ರಧಾನಿಮಂತ್ರಿಗಳಾದ ಮಾನ್ಯ ಮನಮೋಹನ್ಸಿಂಗ್ ಅವರು ಇಂದು ಮಧುಮೇಹದಿಂದ ಬಳಲಿ ಸುಮಾರು ಎರಡು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಇಂತಹ ಒಂದು ಸಂದಿಗ್ನ ಪರಿಸ್ಥಿತಿಯಲ್ಲಿ ಭಾರತದ ಪ್ರತಿಯೊಬ್ಬ ನಾಗ ರೀಕನ ಗತಿಯೇನು? ಹಾಗೂ ಮಧುಮೇಹ ನಿಯಂತ್ರಿಸಲು ರಾಷ್ಟ್ರಮಟ್ಟದ ಯೋಜನೆಯನ್ನು ರೂಪಿಸುವ ಅವಶ್ಯಕ ತೆಯಿದೆ ಎನ್ನುತ್ತಾರೆ ಖ್ಯಾತ ಅರವಳಿಕೆ ತಜ್ಞರಾದ ಡಾ.ರವೀಂದ್ರನಾಥ ಮಾವಿನಕಟ್ಟಿ.
ಮಾನವನ ಇತಿಹಾಸ ಕೆಣಕುತ್ತಾ ಹೋದಂತೆಲ್ಲ ಅವನ ಜೀವ ನಕ್ರಮದಲ್ಲಿ ಅನೇಕ ರೀತಿಯ ಬೆಳವಣಿಗೆಗಳು ಕಂಡುಬರುತ್ತವೆ. ಇಂತಹ ಬೆಳವಣಿಗೆಯನ್ನು ಅವಲೋಕಿಸುತ್ತಾ ಹೋದಂತೆಲ್ಲ ಅವನ ಆಚರಣಿ, ಆಹಾರ, ಉಡುಗೆ-ತೊಡುಗೆ ಒಟ್ಟಾರೆ ಜೀವನ ಶೈಲಿಯಲ್ಲಿ ಅಜಗಜಾಂತರ ವ್ಯತ್ಯಾಸವನ್ನು ಇಂದು ಕಾಣುತ್ತಿ ದ್ದೇವೆ.
ಇಂದಿನ ಆಧುನಿಕರಣಕ್ಕೆ ಒಳಪಟ್ಟ ಮಾನವ ಹಲವಾರು ರೀತಿಯ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಏಕೆಂದರೆ, ಇಂದು ಮನುಕುಲವು ಉಪಯೋಗಿಸುತ್ತಿರುವ ಆಹಾರ ಪದಾ ರ್ಥಗಳು ಅನುಸರಿಸುತ್ತಿರುವ ಜೀವನ ಶೈಲಿ ಇವೆಲ್ಲದರ ನಡುವೆ ಅವನು ಮಾನಸಿಕ ಖಿನ್ನತೆಗೆ ಒಳಗಾಗಿ ವಿವಿಧ ರೀತಿಯ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಪ್ರಸ್ತುತ ನಮ್ಮ ದೇಶ ದಲ್ಲಿ ನಾಗರೀಕರು ಕೆಲವೊಂದು ಕಾಯಿಲೆಗಳಿಗೆ ತುತ್ತಾಗಿ ನರಳಾಡುತ್ತಿದ್ದಾರೆ.ಅಂತಹ ಕೆಲವು ಕಾಯಿಲೆಗಳಿಗೆ ಮಧುಮೇಹವೆಂಬ ರೋಗವು ಜನಸಾಮಾನ್ಯರನ್ನು ಎಡಬಿಡದೇ ಕಾಡು ತ್ತಿದೆ. ಏಕೆಂದರೆ ನಮ್ಮ ಸಕರ್ಾರಗಳು, ವಿವಿಧ ಸಂಘಸಂಸ್ಥೆಗಳು ಸಮಸ್ತ ಜನತೆಗೆ ಈ ಕಾಯಿಲೆಯ ಬಗ್ಗೆ ತಿಳುವಳಿಕೆ, ಹಾರೈಕೆ ಮಾಡುವ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಅಷ್ಟೊಂದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ
ಮುಂದುವರೆದ ರಾಷ್ಟ್ರಗಳು ಸೇರಿದಂತೆ ನಮ್ಮಲ್ಲಿಯೂ (ಭಾರತ) ಮಧುಮೇಹ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಇದು ಬಹುಕಾಲದವರೆಗೆ ಇರುವದರಿಂದ ದೇಹದ ವಿವಿಧ ಭಾಗಗಳಾದ ಕಿಡ್ನಿ, ಕಾಲು, ಕಣ್ಣು, ನರವ್ಯೂಹದ ಎಲ್ಲ ಭಾಗಗಳಿಗೆ ತೊಂದರೆ ಕೊಡುತ್ತದೆ.
ಡಯಾಬಿಟಿಸ್ನ್ನು ನಿಯಂತ್ರಿಸಲು ವೈಜ್ಞಾನಿಕವಾಗಿ ಕೆಲವೊಂದು ಸೂತ್ರಗಳನ್ನು ಅನುಸರಿಸಲೇಬೇಕು.
ಇತ್ತೀಚಿಗೆ ಚನೈನ ಕೊಳಚೆಪ್ರದೇಶವೊಂದರಲಿ ಎ.ಬಾಲಾಜಿ ಎಂಬ ವೈದ್ಯರು ಡಯಾಬಿಟಿಸ್ನಿಂದ ಬಳಲುತ್ತಿರುವ 323 ಜನರನ್ನು ತಮ್ಮ ಸಮೀಕ್ಷೆಗಾಗಿ ಬಳಸಿಕೊಂಡರು.
ಡಯಾಬಿಟಿಸ್ ರೋಗಿಗಳಿಗೆ ಸಿಗುತ್ತಿರುವ ಉಪಚಾರ ಹೇಗಿದೆ ಎಂಬುದರ ಕುರಿತು ಅವರ ಒಂದು ಅಧ್ಯಯನವಾಗಿತ್ತು. ಅವರು ತಮ್ಮ ಅಧ್ಯಯನದ ನಂತರ ಅಲ್ಲಿ ಭಾಗವಹಿಸಿದ್ದ 323 ಜನರ ಪೈಕಿ ಕೇವಲ 26 ಜನರಿಗೆ ಮಾತ್ರ ಸರಿಯಾದ ಉಪ ಚಾರ ಸಿಗುತ್ತಿದೆ ಎಂಬುದನ್ನು ಕಂಡುಕೊಂಡರು. ಇದು ಕೇವಲ ನೂರಕ್ಕೆ 8% ಜನರಿಗೆ ಮಾತ್ರ ಉಪಚಾರ ಸಿಕ್ಕಂತಾಗುತ್ತದೆ. ಇದರಂತೆ ಈ ದೇಶದಲ್ಲಿ ಎಲ್ಲ ಡಯಾಬಿಟಿಸ್ ರೋಗಿಗಳಿಗೆ ಯಾವ ರೀತಿಯ ಉಪಚಾರ ಸಿಗುತ್ತದೆ ಎಂಬ ಸಂಶೋಧನೆ ನಡೆದರೆ, ನಮಗೆ ನಿಬ್ಬೆರಗಾಗುವ ಫಲಿತಾಂಶ ಸಿಗುವದರಲ್ಲಿ ಅನುಮಾನವಿಲ್ಲ.
ಇದೊಂದು ಆತಂಕಕಾರಿ ವಿಷಯ. ಈ ಕುರಿತು ಚಚರ್ೆ ನಡೆಸಬೇಕಾದ ರಾಜಕಾರಣಿಗಳು, ಉದ್ಯಮಿಗಳು, ಸಾಹಿತಿಗಳು, ವೈದ್ಯರು, ಮೆಡಿಕಲ್ ಕಾಲೇಜುಗಳು, ವಿದ್ಯಾವಂತ ಯುವಕರು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೆ ಈ ಖಾಯಿಲೆಯ ಬಗ್ಗೆ ತಿಳುವಳಿಕೆ ಮೂಡಿಸುವಲ್ಲಿ ವಿಫಲರಾಗಿದ್ದಾರೆ.
ನಮ್ಮ ದೇಶದ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮಧುಮೇಹವನ್ನು ನಿಯಂತ್ರಿಸಲು ಹಲವಾರು ಕಾರ್ಯಕ್ರಮ ಗಳನ್ನು ಕೈಗೊಂಡರೂ ಸಕರ್ಾರವು ಈ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಲು ಆಗದೇ, ಕೆಲವೊಂದು ಸಕರ್ಾ ರೇತರ ಸಂಸ್ಥೆಗಳಿಗೆ ನೀಡುತ್ತದೆ. ಈ ಸಂಸ್ಥೆಗಳು ಅಷ್ಟೊಂದು ಕ್ರಿಯಾಶೀಲ ತೆಯಿಂದ ಕಾಯರ್ೋನ್ಮುಖ ಹೊಂದಲು ಆಸಕ್ತಿ ಯನ್ನು ತೋರುವುದಿಲ್ಲ.
ಪ್ರಮುಖವಾಗಿ ಸಕರ್ಾರವು ಮಧುಮೇಹ ನಿಯಂತ್ರಿಸಲು ರಾಷ್ಟ್ರಮಟ್ಟದ ಕಾರ್ಯಕ್ರಮವೊಂದನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಈ ಹಿಂದಿನ ಆರೋಗ್ಯಮಂತ್ರಿಗಳಾದ ಅನ್ಬುಮಣಿ ರಾಮದಾಸ್ರು ಕೇರಳದ ಒಂದು ಆರೋಗ್ಯ ಶಿಬಿರದಲ್ಲಿ ಇನ್ನಾರು ತಿಂಗಳೊಳಗೆ ಮಧುಮೇಹ ನಿಯಂತ್ರಣಕ್ಕಾಗಿ ಮಂಡಳಿಯೊಂದನ್ನು ರಚಿಸಿ, ಅದರ ನಿಯಂತ್ರಣಕ್ಕಾಗಿ ಪ್ರತ್ಯೇಕ ಕಾರ್ಯ ಕ್ರಮಗಳನ್ನು ರೂಪಿಸಲಾಗುವುದು ಎಂದಿದ್ದರು. ಆದರೆ, ವರ್ಷಗಳು ಕಳೆದರೂ ಮಂಡಳಿ ಹಾಗೂ ಕಾರ್ಯಕ್ರಮಗಳು ರೂಪುಗೊ ಳ್ಳಲಿಲ್ಲ, ಬದಲಿಗೆ ತಾವೇ ಇಲಾಖೆಯಿಂದ ನಿರ್ಗಮಿಸಿದರು.
important - ರಕ್ತ ಪರೀಕ್ಷೆ : ಹೆಚ್ಬಿ,ಎ.ಸಿ 6.5 ಉಪಕರಣದಿಂದ ಪರೀಕ್ಷೆ ಮಾಡಿಸಬೇಕು. - ಮೂತ್ರ ತಪಾಸಣಿ : ಮೈಕ್ರೋಪ್ರೋಟಿನ್ (ಮೂತ್ರಕ್ಕೆ ಸಂಬಂಧಿಸಿದ) ಪರೀಕ್ಷೆಯನ್ನು ಪ್ರತಿ3 ತಿಂಗಳುಗೊಮ್ಮೆ ಮಾಡಿಸ ಬೇಕು. - ನೇತ್ರ ತಪಾಸಣಿ : ಕಣ್ಣಿಗೆ ಸಂಬಂಧಿಸಿದಂತೆಯೂ ತಪಾಸಣೆಯನ್ನು ಮಾಡಿಸಬೇಕು. ನುರಿತ ನೇತ್ರ ತಜ್ಞರನ್ನು ಕಂಡು ಪರೀಕ್ಷೆ ನಡೆಸಬೇಕು. - ಪಾದ ಪರೀಕ್ಷೆ:ಮೈಕ್ರೋಫಿಲಿಮಿನೆಟ್ 10ಗ್ರಾಮ ಎಂಬ ಸಾಧನ ಯಂತ್ರದಿಂದ ಪಾದಸ್ಪರ್ಷವನ್ನು ಪರೀಕ್ಷಿಸಬೇಕು.
ಮೇಲಿನ ಎಲ್ಲವನ್ನು ಸರಿಯಾಗಿ 3ತಿಂಗಳಿಗೊಮ್ಮೆಯಾದರೂ ಪರೀಕ್ಷೆ ಮಾಡಿಸುತ್ತಾ ಹೋದರೆ, ಮಧುಮೇಹವನ್ನು ನಿಯಂತ್ರಣ ಲ್ಲಿಡಬಹುದು.
No comments:
Post a Comment
Thanku