Sunday, September 25, 2011

ಕುಗ್ರಾಮದಲ್ಲಿ ಅರಳಿದ ಪ್ರತಿಭೆ ಡಾ.ಸಂಗಪ್ಪ ಹಾಲಬಾವಿ

ಕುಗ್ರಾಮದಲ್ಲಿ ಅರಳಿದ ಪ್ರತಿಭೆ ಡಾ.ಸಂಗಪ್ಪ ಹಾಲಬಾವಿ



ಹಟ್ಟಿಯಲ್ಲಿ ಸುಮಾರು 6ವರ್ಷಗಳ ಹಿಂದೆ ಸಂಘಟನೆಯ ವತಿಯಿಂದ ಶಿವಪುತ್ರಪ್ಪ ಭೇರಿಯವರ ಅಧ್ಯಕ್ಷತೆಯಲ್ಲಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ ಅತಿಥಿಗಳನ್ನು ಆಯ್ಕೆ ಮಾಡಲು ರಾಯಚೂರಿನ ನೌಕರ ಸಂಘದ ಕಛೇರಿಯಲ್ಲಿ ಸಭೆ ಕರೆದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹನೀಯರನ್ನು ಆಹ್ವಾನಿಸಲು ತೀಮರ್ಾನಿಸಲಾಯಿತು.


ಸಭೆ ಅಧ್ಯಕ್ಷತೆ ವಹಿಸಿದ್ದ ಶಿವಪುತ್ರಪ್ಪ ಭೇರಿಯವರು ಶಿಬಿರಕ್ಕೆ ಮುಖ್ಯ ಅತಿಥಿಯನ್ನಾಗಿ ಸಂಗಪ್ಪ ಹಾಲಬಾವಿ ಎನ್ನುವ ಉಪನ್ಯಾಸಕರನ್ನು ಕರೆಸೋಣ, ಸಧ್ಯ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ, ಒಂದು ಬಾರಿ ಅವರನ್ನು ಕಂಡು ಸಮಯವನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.


ಕಾರ್ಯಕ್ರಮದ ಉಸ್ತುವಾರಿಯನ್ನು ಹೊತ್ತಿದ್ದ ಅಣ್ಣ ಭೀಮಣ್ಣ ನಗನೂರು ಮತ್ತು ನಾನು ಸಂಗಪ್ಪನವರನ್ನು ಸಂಪಕರ್ಿಸುವ ಜವಾಬ್ದಾರಿಯನ್ನು ಹೊತ್ತು, ಅವರಿರುವ ವಿಳಾಸವನ್ನು ಪಡೆದು ನಮ್ಮ ಶಿಬಿರದ ಅಹವಾಲೆನ್ನೆಲ್ಲ ತಿಳಿಸಿದೆವು. ಅದಕ್ಕೆ ಅಂದು ಸಂಗಪ್ಪನವರು ಸಕರಾತ್ಮಾಕವಾಗಿಯೇ ಸ್ಪಂದಿಸಿ, ಸಂತೋಷದಿಂದ ಶಿಬಿರಕ್ಕೆ ಬರುವುದಾಗಿ ತಿಳಿಸಿದ್ದರು. ಕೊನೆಗೆ ವಿಶ್ವವಿದ್ಯಾನಿಲಯದ ಕೆಲಸದ ಒತ್ತಡದಲ್ಲಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲವೆಂದು ತಿಳಿಸಿದರು.


ನಾವು ಅವರನ್ನು ನೋಡದೇ, ಅವರು ನಮ್ಮನ್ನು ನೋಡದೇ, ಸಾಮಾಜಿಕ ಕಾರ್ಯಕ್ರಮಕ್ಕೆ ಬರುತ್ತೀವೆಂದು ಅವರು ಹೇಳಿದ ಮಾತೇ ನಮಗೆ ಆಶಾದಾಯಕವೆನಿಸಿತ್ತು.


ಆಗ ಮಾತ್ರ ಸಂಪರ್ಕದಲ್ಲಿದ್ದ ಸಂಗಪ್ಪನವರನ್ನು ಪುನಃ ಸಂಪಕರ್ಿಸಲು ಬೇರೆ ಬೇರೆ ಕಾರಣಗಳಿಂದ ಇಲ್ಲಿಯವರೆಗೆ ಅಂದರೆ, ಸುಮಾರು 7ವರ್ಷಗಳ ಕಾಲ ಸಾಧ್ಯವಾಗಿರಲಿಲ್ಲ.


ಮೊನ್ನೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿಗಾಗಿ ನೋಟಿಫಿಕೇಷನೊಂದು ಹೊರಬಿದ್ದ ನಂತರ ನಾನು ಮಂಗಳೂರಿಗೆ ಹೋಗಬೇಕಾಗಿ ಬಂತು. (ಪ್ರವೇಶ ಬಯಸಿ ಅಜರ್ಿಯನ್ನು ಸಲ್ಲಿಸಲು) ಅದರಂತೆ ಮಂಗಳೂರಿಗೆ ಹೋಗಿ ನನ್ನ ಕೆಲಸವನ್ನು ಮುಗಿಸಿಕೊಂಡು ಹಿಂತಿರುಗುವಾಗ 2ನೇ ಮಹಡಿಯಲ್ಲಿ ಸಂಗಪ್ಪ ಹಾಲಬಾವಿಯವರ ಕೊಠಡಿಯ ನಾಮಫಲಕ ಕಣ್ಣಿಗೆ ಬಿತ್ತು. ಆ ಕ್ಷಣಕ್ಕೆ 7 ವರ್ಷಗಳ ಹಿಂದೆ ಶಿಬಿರದ ಸಲುವಾಗಿ ಸಂಪರ್ಕ ಮಾಡಿದ್ದ ಸಂಭಾಷಣೆ ನೆನಪಿಗೆ ಬಂತು.


ತಡಮಾಡದೇ, ನೇರವಾಗಿ ಸಂಗಪ್ಪನವರ ಕೊಠಡಿಗೆ ತೆರಳಿ, ಸಾರ್.. ನಾನು ಹಟ್ಟಿಯಿಂದ ಬಂದಿದ್ದೇನೆ, ತಮ್ಮನ್ನು ಈ ಹಿಂದೆ ನಾವುಗಳು ಶಿಬಿರದ ಮುಖ್ಯಅತಿಥಿಗಳಾಗಿ ಆಹ್ವಾನಿಸಿದ್ದೇವು.. ನಂತರ ತಾವ್ಯಾರೆಂಬುದನ್ನು ಸಹಿತ ನೋಡಿಲ್ಲ, ಕಾರಣ ನಾವುಗಳು ತಮ್ಮನ್ನು ಕಾಣಲು ಒಳಗಡೆ ಬರಬಹುದಾ... ಎಂದು ಕೇಳುತ್ತಿದ್ದಂತೆ ಸಂಗಪ್ಪನವರು ಏಕಾಏಕಿ ತಾವು ಮಾಡುತ್ತಿದ್ದ ಪ್ರಾಜೆಕ್ಟ್ನ ಕೆಲಸವನ್ನು ಬಿಟ್ಟು, ಬನ್ನಿ ಸಾರ್.. ಒಳಗಡೆ ಎಂದರು. ನೀವುಗಳು ಸುಮಾರು ಆರೇಳು ವರ್ಷಗಳ ಕೆಳಗೆ ಹಟ್ಟಿಯಲ್ಲಿ ಕಾರ್ಯಕ್ರಮದ ನಿಮಿತ್ಯ ನಮ್ಮನ್ನು ಆಹ್ವಾನಿಸಿದಾಗ ಕಾರಣಾಂತರಗಳಿಂದ ನನಗೆ ಆಗಿರಲಿಲ್ಲವೆಂದು ಹೇಳುತ್ತಾ ಪರಿಚಯ ಮಾಡಿಕೊಂಡು ಮಾತನಾಡಲು ಆರಂಭಿಸಿದರು.


ನನಗೊಂದು ರೀತಿಯಲ್ಲಿ ಸಂತಸ. ಅದರಂತೆ ಸಂಗಪ್ಪನವರಿಗೂ ನಮ್ಮ ಕಡೆಯವರು ಒಬ್ಬರು ಹೆಸರೇಳಿಕೊಂಡು ಬಂದು ಭೇಟಿಯಾಗಿದ್ದರಲ್ಲಾ ಎಂಬ ಖುಷಿ.


ಈ ಎರಡರ ಮಧ್ಯೆ ನಾನೊಬ್ಬ ಪತ್ರಕರ್ತನಾಗಿ ವಿಚಾರ ಮಾಡುತ್ತಾ, ಸಂಗಪ್ಪನವರು ಹಾಲಬಾವಿ ಎಂಬ ಕುಗ್ರಾಮದಿಂದ ಮಂಗಳೂರು ವಿಶ್ವವಿದ್ಯಾನಲಯದವರೆಗೆ ಹೇಗೆ ಬೆಳೆದುಬಂದರು ಎಂಬುದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಅದಕ್ಕಾಗಿ ಸಣ್ಣದೊಂದು ಸಂದರ್ಶನವನ್ನು ಅಂದು ಸಂಗಪ್ಪನವರಿಗೆ ಮಾಡಲು ಕ್ಷಣದಲ್ಲಿ ತೀಮರ್ಾನಿಸಿದೆ.


ಆಗ ಸಂಗಪ್ಪನವರು ತಮ್ಮ ಅದ್ಬುತ ಬದುಕು ಕಟ್ಟಿಕೊಂಡ ಪರಿಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗಿದರು.


1972ರಲ್ಲಿ ಹಾಲಬಾವಿ ಎಂಬ ಕುಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿದ ನಾನು ಹಳ್ಳಿಗಾಡಿನಲ್ಲಿ ಕನ್ನಡ ಶಾಲೆ ಓದಿ, ಗುಲ್ಬಗರ್ಾ ವಿಶ್ವವಿದ್ಯಾನಿಲಯದಿಂದ 1997ರಲ್ಲಿ ಎಂ.ಎಸ್ಸಿ ಭೌತಶಾಸ್ತ್ರ ವಿಷಯದಲ್ಲಿ ಪ್ರಥಮ ದಜರ್ೆಯೊಂದಿಗೆ ಪದವಿಯನ್ನು ಪಡೆದಿದ್ದೇನೆ. ನಂತರ 1998ರಲ್ಲಿ ಅದೇ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದು ನಂತರ ಯುಜಿಸಿ ಆಯೋಜಿಸುವ ನೆಟ್ನ್ನು ಉತ್ತಮ ದಜರ್ೆಯಲ್ಲಿ ತೆರ್ಗಡೆಗೊಳಿಸಿದ್ದೇನೆ.


1990ರಲ್ಲಿ ಮೊದಲ ಬಾರಿಗೆ ಮೈಸೂರಿನ ಯುವರಾಜ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದ ನಾನು ನಂತರ 2003ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಅಧಿಕೃತವಾಗಿ ಸೇರಿಕೊಂಡು ಕೆಲಸ ನಿರ್ವಹಿಸತೊಡಗಿದೆ.

02-05-2008 gÀ°è "Studies on natural and man-made polymers using X-ray diffraction method" ಎಂಬ ವಿಷಯದ ಮೇಲೆ ಪ್ರೋ. ಆರ್ ಸೋಮಶೇಖರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್ಡಿ ಪದವಿ ಬಂತೆಂದು ಹೇಳಿದರು.


ಇಷ್ಟೆಲ್ಲವನ್ನು ಸಂಗಪ್ಪನವರು ಹೇಳುತ್ತಿದ್ದಂತೆ ನಾನು ಮತ್ತಷ್ಟು ಕುತೂಹಲದಿಂದ ಅವರ ಕುರಿತು ಮಾಹಿತಿ ಕಲೆಹಾಕಲು ಪ್ರಯತ್ನಿಸಿದೆ.


ಅಲ್ಲಿಂದ ಹಟ್ಟಿಗೆ ವಾಪಸ್ಸಾದ ನಾನು ಸಂಗಪ್ಪನವರ ಒಡನಾಡಿಗಳು, ಸ್ನೇಹಿತರು, ವಿಶ್ವವಿದ್ಯಾನಿಲಯದ ಸಿಬ್ಬಂದಿಗಳು, ಹಿತೈಷಿಗಳನ್ನು ಭೇಟಿ ಮಾಡಿ ಅವರ ವ್ಯಕ್ತಿತ್ವ, ಅಧ್ಯಯನ, ಆ ಮಟ್ಟದಲ್ಲಿ ಬೆಳೆದುಬಂದ ಹಾದಿ ಎಲ್ಲದರ ಕುರಿತು ಮಾಹಿತಿ ಸಂಗ್ರಹಿಸಿದೆ. ನಂತರದ ಬೆಳವಣಿಗೆಯಲ್ಲಿ ನನಗೆ ಸಿಕ್ಕ ಮಾಹಿತಿ ನನ್ನನ್ನೇ ನಿಬ್ಬೆರಗಾಗುವಂತೆ ಮಾಡಿತು.


ಸಂಗಪ್ಪನವರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಚಂಡಿಘಡ, ಗ್ವಾಲಿಯಾರ್, ಅಮೃತಸರ್, ಮುಂಬಯಿ, ಜೈಪುರ, ಚನೈ, ದೆಹಲಿ, ಕೇರಳದ ಕೊಟ್ಟಾಯಂ ಹಾಗೂ ಜರ್ಮನಿ, ಮಲೇಷಿಯಾದಂತಹ ರಾಷ್ಟ್ರಗಳಲ್ಲಿ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಹತ್ತು ಹಲವು ಅಂತರಾಷ್ಟ್ರೀಯ, ರಾಷ್ಟ್ರೀಯ ಸಮ್ಮೇಳನ, ಕಾರ್ಯಗಾರ ಮತ್ತು ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಸಂಶೋದನಾ ವರದಿ, ಪ್ರಾಜೆಕ್ಟ್ಗಳನ್ನು ಮಂಡಿಸುತ್ತಾ ಉಪನ್ಯಾಸ ನೀಡಿದ್ದಾರೆ.


ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಕಾರ್ಯಗಾರದಲ್ಲಿ ಸಂಗಪ್ಪನವರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿಯೂ ಬಲ್ಲಮೂಲಗಳಿಂದ ತಿಳಿದು ಬಂತು.


ಜೂನ್ 29 ರಿಂದ ಜುಲೈ 1, 2009, ರವೆಗೆ ಕೌಲಾಲಂಪುರದಲ್ಲಿ ನಡೆದ International Conference on Neutron and X-ray Scattering (ICNX-2009) ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸಂಗಪ್ಪನವರು Microstructural parameters in 8 MeV Electron irradiated Bombyx mori silk fibers by wide-angle X-ray scattering studies (WAXS), ವಿಷಯದ ಕುರಿತು ಸುಧೀರ್ಘವಾದ ವರದಿಯನ್ನು ಮಂಡಿಸಿರುತ್ತಾರೆ.


ನಂತರ ಕುಟುಂಬ ಹಿನ್ನಲೆಯ ಕುರಿತು ನಾನೊಂದೆರಡು ಪ್ರಶ್ನೆಗಳನ್ನು ಸಂಗಪ್ಪನವರನ್ನು ಕೇಳಿದಾಗ ಅವರಾಡಿದ ಒಂದೆರಡು ಮಾತುಗಳು ಹೀಗಿವೆ..


ನಮ್ಮದೊಂದು ದಲಿತ ಕುಟುಂಬ, ನಾವೆಲ್ಲರೂ ದುಡಿದೇ ಜೀವನ ಸಾಗಿಸಬೇಕು. ನಮಗಿರುವುದು ತುಂಡುಭೂಮಿ. ಅದು ಮಳೆ ಬಂದರೆ ಮಾತ್ರ ಬೆಳೆ. ಆಥರ್ಿಕವಾಗಿಯೂ ಹಿಂದುಳಿದಿರುವ ನಮ್ಮ ಕುಟುಂಬವನ್ನು ತಂದೆಯವರಾದ ಯಲ್ಲಪ್ಪನವರು ಅಂದು ಮುನ್ನಡೆಸಿಕೊಂಡು ಹೋಗಿ, ನಮಗೆ ತಕ್ಕಮಟ್ಟಿನ ಶಿಕ್ಷಣವನ್ನು ನೀಡಿದ್ದೇ, ನಾವಿಂದು ಈ ಹಂತಕ್ಕೆ ಬರಲು ಸಾಧ್ಯವಾಗಿದೆ.


ನಮ್ಮ ಆಥರ್ಿಕತೆ, ಬಡತನವನ್ನಿರತು ನಾನು ಬುದ್ದಿವಂತಿಕೆಯಿಂದ ಕಷ್ಟಪಟ್ಟು ಓದಿ ಎಲ್ಲದರಲ್ಲಿ ಪ್ರಥಮ ದಜರ್ೆಯಲ್ಲಿ ಮುಂದೆ ಬಂದಿದ್ದೇವೆ. ಇಂದು ಐಷಾರಾಮಿಯಾಗಿ ಹತ್ತಾರು ದೇಶಗಳನ್ನು ಸುತ್ತಿ, ನೂರಾರು ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಅಂದು ನನ್ನ ತಂದೆ ತಾಯಿಗಳು ಕಷ್ಟದ ಸಂದರ್ಭದಲ್ಲಿ ಓದಿಸಿದ್ದೇ ಆಗಿದೆ. ಇಲ್ಲವೆಂದರೆ, ನಮ್ಮಂತವರು ಇಂತಹ ವಿಭಾಗಗಳಲ್ಲಿ ಬರಲು ಆಗುವುದಿಲ್ಲವೆಂದು ಆನಂದ ಬಾಷ್ಪ ಹರಿಸಿದರು.


ಸಂಗಪ್ಪನವರ ಬದುಕು-ಬವಣಿಯನ್ನೆಲ್ಲ ಕೇಳಿದ ನನಗೆ ತಕ್ಷಣ ಅನಿಸಿದ್ದು, ನಮ್ಮ ಪತ್ರಿಕೆಯಲ್ಲಿ ಅಣ್ಣನ ಕುರಿತು ಒಂದೆರಡು ಸಾಲುಗಳಾದರೂ ಬರೆಯಬೇಕೆಂದು.


ಒಬ್ಬ ವ್ಯಕ್ತಿ ಜೀವನದಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ ಹೇಗೆ ಮುಂದೆ ಬರಬೇಕು ಎನ್ನುವವರಿಗೆ ಸಂಗಪ್ಪಣ್ಣ ಮಾದರಿಯಾಗಿದ್ದಾರೆ. ಕಾರಣ ಈ ಸಂಪಾದಕೀಯವನ್ನು ಬರೆಯಬೇಕಾಗಿ ಬಂತು.


ಹೀಗಿರುವಾಗ ನಮ್ಮವರೊಬ್ಬರು ಕಷ್ಟುಪಟ್ಟು ಮೇಲೆ ಹೋಗಿದ್ದಾರೆಂದರೆ ನಾವೆಲ್ಲರೂ ಹೆಮ್ಮೆ ಪಡಬೇಕು ಮತ್ತು ಅವರಿಗೆ ಶುಭವಾಗಲಿ ಎಂದು ಹಾರೈಸಬೇಕು.

No comments:

Post a Comment

Thanku