ಟಿವಿ9 ವರದಿ ಎಷ್ಟರ ಮಟ್ಟಿಗೆ ಸರಿ?ಉತ್ತಮ ಸಮಾಜಕ್ಕಾಗಿ ಎಂಬ ಶಿಷರ್ಿಕೆಯಡಿ ಹೊರಬರುತ್ತಿರುವ ರಾಷ್ಟ್ರದ ನಂ.1 ನ್ಯೂಸ್ ಚಾನೆಲ್ ಎಂಬ ಕೀತರ್ಿಗೆ ಹೆಸರಾಗಿರುವ ಟಿವಿ9 ಕನರ್ಾಟಕ ಮೊನ್ನೆ ಹಟ್ಟಿ ಚಿನ್ನದ ಗಣಿ ಕುರಿತ ವಿಶೇಷ ವರದಿಯೊಂದನ್ನು ಮಾಡುವ ಸಂದರ್ಭದಲ್ಲಿ ಪ್ರತಿನಿಧಿಯ ಅಚಾತುರ್ಯದಿಂದ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದೆ.ಅದು ತನ್ನ ಜಿಲ್ಲಾ ಪ್ರತಿನಿಧಿ ಸಿದ್ದು ಬಿರಾದಾರ ನೀಡಿದ ವರದಿಗೆ ಉಪ್ಪುಕಾರ ಹಚ್ಚಿ ಅದಕ್ಕೊಂದು ಬಂಗಾರದ ಪಂಜರ- ಹಟ್ಟಿ ಚಿನ್ನದ ಗಣಿಯ ಕಂಪ್ಲೀಟ್ ಸ್ಟೋರಿ ಎಂಬ ತಲೆಬರಹವನ್ನು ಕೊಟ್ಟು ಚಿನ್ನ ತೆಗೆಯುವ ಕೈಯಲ್ಲಿ ಬಿಕ್ಷಾಪಾತ್ರೆ ಎಂಬ ವಿಶೇಷ ವರದಿ ಮಾಡಿ ಹಟ್ಟಿಯ ಮಾನ ಮಯರ್ಾದೆಯನ್ನು ಮೂರು ಕಾಸಿಗೆ ಹರಾಜ್ ಹಾಕಿದೆ.ಇಂತಹ ಕುಚೋಧ್ಯ, ಅಸಂಬಂದ್ದ ವರದಿಗಳು ಟಿವಿ9ನಲ್ಲಿ ಹೊಸವೇನಲ್ಲ. ಆಗಾಗ ಕೆಲವೊಂದು ಕಾರ್ಯಕ್ರಮಗಳಲ್ಲಿ ಇಂತಹ ವರದಿಗಳು ಬಿತ್ತರಗೊಳ್ಳುತ್ತಿರುತ್ತವೆ! ಈ ಹಿಂದೆ ಲಾಡುಮಂತ್ರಿ ಕೃಷ್ಣಯ್ಯಶೆಟ್ಟಿಯ ಅವ್ಯವಹಾರ ವಿಷಯದಲ್ಲಿ ಆತ ಅಪರಾಧಿಯೇ ಅಲ್ಲ, ಕೃಷ್ಣಯ್ಯಶೆಟ್ಟಿ ಸಾಚಾ ಎಂಬಂತೆ ವರದಿ ಮಾಡಿತ್ತು. ಆ ವರದಿಯ ತಪ್ಪಿನ ಅರಿವಾಗುತ್ತಿದ್ದಂತೆ ವಾರೆಂಟ್ನಲ್ಲಿದ್ದ ಒಬ್ಬ ಅವಿವೇಕಿ ರಾಘವೇಂದ್ರನನ್ನು ಮಿಶ್ರಾರವರು ಒದ್ದೋಡಿಸಿದ್ದರು. ಅದಾದ ಕೆಲವು ದಿನಗಳ ನಂತರ ಪುರುಷನ ಪರ ಮಾತನಾಡುವ ಇನ್ನೊಬ್ಬ ತಿರುಬೋಕಿಯನ್ನು ತಮ್ಮ ಸ್ಟುಡಿಯೋದ ಪ್ಯಾನಲ್ ಡಿಸ್ಕಶನ್ಗೆ ಕರೆತಂದು ರಾಜ್ಯದ ಎಲ್ಲರ ಕಡೆಯಿಂದಲೂ ಛೀ.. ಥೂ.. ಅಂತ ಕ್ಯಾಕರಿಸಿ ಉಗಿಸಿಕೊಂಡಿತ್ತು. ಅದೆಲ್ಲದರ ಮುಂದುವರೆದ ಭಾಗವಾಗಿ ಈಗ ನಮ್ಮ ಹಟ್ಟಿ ಚಿನ್ನದ ಗಣಿಯ ಸ್ಟೋರಿ ಮಾಡಿದೆ. ಇದು ಅಸಲಿ ಟಿವಿ9 ನಿಲುವಿನ ಸ್ಯಾಂಪಲ್ ಅಷ್ಟೇ..! ಈ ವರದಿಯನ್ನು ನೋಡಿದ ಹಟ್ಟಿಯ ಕೆಲವರು ಕೆಂಡಾಮಂಡಲರಾಗಿದ್ದಾರೆ. ಇನ್ನು ಕಂಪನಿಯವರಂತೂ ಆನೆ ಹೊರಟಾಗ ಶ್ವಾನ ಬೊಗಳಿದರೆ, ಏನು ಲಾಭ ಎಂತೆಲ್ಲ ಟಿವಿ9ನ್ನು ಗೇಲಿ ಮಾಡುತ್ತಿದ್ದಾರೆ.(ವಿಶೇಷವಾಗಿ ಸಡಗೋಪಾನ್ ಕುಟುಂಬವೇ ಈ ವರದಿಯನ್ನು ನೋಡಿ ಬೇಸತ್ತಿದೆ) ಆದರೆ, ಇಂತೆಲ್ಲ ಎಡವಟ್ಟುಗಳನ್ನು ಪ್ರತಿನಿಧಿಗಳು ಮಾಡುವದರಿಂದ ಪರೋಕ್ಷವಾಗಿ ಟಿವಿ9ನ ಮುಖ್ಯಸ್ಥರಿಗೆ ಕೊಂಚಮಟ್ಟಿನ ಮುಜುಗರವೆನಿಸುವದರಲ್ಲಿ ಎರಡು ಮಾತಿಲ್ಲ. ಆ ವಿಷಯ ಒಂದೆಡೆ ಬಿಡಿ.ಈಗ ಬೆಟ್ಟ ಅಗೆದು ಇಲಿ ಹಿಡಿದ ಸಿದ್ದು ಮಾಡಿರುವ ವರದಿಯ ಸ್ಯಾಂಫಲ್ನತ್ತ ದೃಷ್ಟಿ ಹಾಯಿಸೋಣ.ಮೈಸೂರು ವಿಭಾಗದ ವಿದ್ಯಾಥರ್ಿಗಳು ತಮ್ಮ ಪ್ರಾಯೋಗಿಕ ಕೈಗಾರಿಕಾ ತರಬೇತಿಗಾಗಿ 2005ರಲ್ಲಿ ಹಟ್ಟಿ ಚಿನ್ನದ ಗಣಿಯ ಮಾಹಿತಿ ಕುರಿತು ಸಿಡಿಯೊಂದನ್ನು ತಯಾರಿಸಿಕೊಂಡಿದ್ದರು. ಪ್ರಾಯೋಗಿಕ ತರಬೇತಿಗೆ ಅನುಕೂಲವಾಗಿ ಆ ಸಿಡಿಯನ್ನು ವಿಡಿಯೋ ಮಾಡಲಾಗಿತ್ತು. ಮತ್ತು ಅದು ಆಂಗ್ಲಭಾಷೆಯಲ್ಲಿತ್ತು. ಆ ಸಿಡಿ ಇಂದು ಹಟ್ಟಿಯಲ್ಲಿ ಎಲ್ಲರಲ್ಲಿಯೂ ಸಿಗುತ್ತದೆ. ಅಂತಹ ಸಿಡಿಯ ಪ್ರತಿಯನ್ನು ಕಲೆಹಾಕಿಕೊಂಡ ಟಿವಿ9 ಸಿದ್ದು ಕನ್ನಡಕ್ಕೆ ತಜರ್ುಮೆ ಮಾಡಿಕೊಂಡು 20 ನಿಮಿಷಗಳ ಅವಧಿಯ ಹಟ್ಟಿ ವಿವರಣಿಯನ್ನು ನೀಡಿದ್ದಾನೆ.ಅದಾದ ನಂತರ ಸಿಲಿಕೋಸಸ್ ಕುರಿತು ಮತ್ತಿಬ್ಬ ಕಾಮರ್ಿಕರ ಕುಟುಂಬವನ್ನು ಭೇಟಿಮಾಡಿ ಅವರ ಅಳಲನ್ನು ತೋರಿಸಿದ್ದಾನೆ. (ಅದು ಮಾನವೀಯತೆ ಬಿಡಿ) ವರದಿಯ ನಡುವೆ ಅಲ್ಲಲ್ಲಿ ಅವರಿವರು ಹೇಳಿದ ಮಾತುಗಳನ್ನು ಸಿದ್ದು ನಕಲಿ ಮಾಡಿದ್ದು ಮತ್ತು ಕಾಮರ್ಿಕ ಸಂಘದ ಮುಖಂಡರಿರ್ವರು ತಮ್ಮ ಅಭಿಪ್ರಾಯ ಹೇಳಿದ್ದು ಬಿಟ್ಟರೆ, ಅಸಲಿಗೆ ಆ ವರದಿಯಲ್ಲಿ ಎಂತಹದ್ದು ಇಲ್ಲ. ಸಿದ್ದು ಮಾಡಿದ ವರದಿ ವ್ಯವಸ್ಥಿತವಾಗಿ ಹಟ್ಟಿಯ ಮಾನ ಮಯರ್ಾದೆ ಕಳೆಯಲು ಮಾಡಿದ್ದೇ ಆಗಿದೆ.ಹಟ್ಟಿಯ ಕುರಿತು ವರದಿ ಮಾಡಲು ಸಾಕಷ್ಟು ಸಮಸ್ಯೆಗಳಿವೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರಿಗೆ ಸರಿಯಾಗಿ ಇನ್ನು ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ, ಹಟ್ಟಿ ಗ್ರಾಮಕ್ಕೆ ಕಾಲಿಟ್ಟರೆ ನರಕವೇ ಕಣ್ಣಿಗೆ ಕಾಣುತ್ತದೆ. ಹಟ್ಟಿಗೆ ಹತ್ತಿರವಿರುವ ಒಂದು ಕುಗ್ರಾಮ ಕಡ್ಡೋಣಿ ಇಂದಿಗೂ ರಸ್ತೆ ಮತ್ತು ಸಕರ್ಾರಿ ಬಸ್ನ್ನೇ ಕಂಡಿಲ್ಲ. ಅಂತಹ ಹತ್ತಾರು ಸಮಸ್ಯೆಗಳು ಹಟ್ಟಿಯ ಸುತ್ತಮುತ್ತ ಟಿವಿ9 ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದವು. ಇನ್ನು ಭ್ರಷ್ಟಾಚಾರ, ಅವ್ಯವಹಾರ, ಅಕ್ರಮಗಳಂತೂ ಇಲ್ಲಿ ವ್ಯವಸ್ಥಿತವಾಗಿಯೇ ನಡೆಯುತ್ತಿರುತ್ತವೆ. ಅದೆಲ್ಲವನ್ನು ನೈಜವಾಗಿ ವರದಿ ಮಾಡುವದನ್ನು ಬಿಟ್ಟು ಟಿವಿ9 ಸಿದ್ದು ನೇರವಾಗಿ ಹಟ್ಟಿಗೆ ಬಂದು ಇಲ್ಲ-ಸಲ್ಲದ ಮಾಹಿತಿಯನ್ನು ಎಲ್ಲಿಂದಲೋ ಕಲೆಹಾಕಿ ಹಟ್ಟಿಯ ಮಾನ ಹರಾಜಾಕಿದ್ದಾನೆ. ನಾನಂತೂ ಇದನ್ನು ಟಿವಿ9ಸಿದ್ದು ವ್ಯವಸ್ಥಿತವಾಗಿ ಮಾಡಿದ ಸಂಚೆಂದು ಭಾವಿಸುತ್ತೇನೆ.ಗುಡ್ಡವನ್ನು ಅಗೆದ ಮೇಲೆ ಅಮೂಲ್ಯವಾದದನ್ನು ಪಡೆದರೆ ಮಾತ್ರ ಆ ಕಾಯಕ ಸಾರ್ಥಕ. ಅದನ್ನು ಬಿಟ್ಟು ದೊಡ್ಡ ಗುಡ್ಡವನ್ನು ಅಗೆದು ಸಣ್ಣದೊಂದು ಗಣೇಶನ ಇಲಿ ಹಿಡಿದರೆ, ಏನರ್ಥ? ಬರೀ ಸಮಯ ವ್ಯರ್ಥ. ಸಿದ್ದು ಮಾಡಿದ್ದು ಇದನ್ನೇ.ಪ್ರಮುಖವಾಗಿ ವರದಿಯಲ್ಲಿ ಸಡಗೋಪಾನ್ ಎಂಬಾತನಿಗೆ ಗಣಿಯಲ್ಲಿ ಕೆಲಸ ಮಾಡುವಾಗ ಬ್ಲಾಸ್ಟ್ ಆಗಿ ಕಣ್ಣುಹೋಗಿದೆ ಎಂದು ಹೇಳಲಾಗಿದೆ. ಅದಕ್ಕಾಗಿ ಆತ ಎಷ್ಟೇ ಪರಿಹಾರಕ್ಕಾಗಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಆತನ ಕೈಗೆ ಬಿಕ್ಷೆಪಾತ್ರೆ ಬಂದಿದೆ ಎಂದು ಒತ್ತಿ ಹೇಳಲಾಗಿದೆ.ಆದರೆ, ವಾಸ್ತವಾಗಿ ಸಡಗೋಪಾನ್ ಎಂಬಾತ 821 ಬಿಲ್ಲೆಸಂಖ್ಯೆಯೊಂದಿಗೆ 1960 ಜೂನ್28ರಂದು ಕಂಪನಿಯ ಮ್ಯಾಕ್ಜೀನ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.
ಆತನಿಗೆ ಸಧ್ಯ ಇರ್ವರು ಹೆಣ್ಣುಮಕ್ಕಳಿದ್ದಾರೆ. ಅಂದು ಕಂಪನಿಯಲ್ಲಿ ಆತನ ದಿನನಿತ್ಯ ಕಾಯಕ ಕಂಪನಿಯ 3ಶಾಪ್ಟ್ಗಳಿಗೆ ಮದ್ದುಗಳನ್ನು ವಿತರಿಸುವುದೇ ವಿನಃ ಮದ್ದುಗಳನ್ನು ಸಿಡಿಸುವದಲ್ಲ. ಮತ್ತೊಂದೆನೆಂದರೆ, ಅಂಡರ್ಗ್ರೌಂಡ್ನಲ್ಲಿ ಹೆಚ್ಚುಕಡಿಮೆ ಸಡಗೋಪಾನ್ ಕೆಲಸವೇ ಮಾಡಿಲ್ಲ. ಕಾರಣ ಆತ ಕಂಪನಿಯಲ್ಲಿರುವ ಮೇನ್ಮ್ಯಾಕ್ಜೀನ್ (ಮದ್ದಿನಮನೆ) ಯಲ್ಲಿ ಕ್ರಿಂಪರ್ ಆಗಿರುವಾತ.ಮೇಲ್ಮೈ ವಿಭಾಗದಲ್ಲಿ ಕೆಲಸ ಮಾಡುವವನಿಗೆ ಒಮ್ಮಿಂದೊಮ್ಮೆಲೆ ಕಣ್ಣುಗಳು ಹೋಗುವುದಾದರೂ ಹೇಗೆ? ಅಸಲಿಗೆ ಸಡಗೋಪಾನ್ರವರಿಗೆ ಇತ್ತೀಚಿಗೆ ಆಟೋ ಅಪಘಾತ ಸಂಭವಿಸಿ ಕಣ್ಣಿಗೆ ಮುಳ್ಳು ಬಡಿದು ಕಣ್ಣಿನ ತೊಂದರೆಯಾಗಿದೆ. ನಂತರ ಸಡಗೋಪಾನ್ ಅಳಿಯಂದಿರೆ ಕಂಪನಿಯಲ್ಲಿ ಆಯೋಜಿಸಿದ್ದ ಉಚಿತ ನೇತ್ರತಪಾಸಣಿ ಕಾರ್ಯಗಾರದಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದು ಸಾಲದೆಂಬಂತೆ ಹುಬ್ಬಳ್ಳಿಗೆ ಹೋಗಿ ತೋರಿಸಿದ್ದಾರೆೆ. (ಇದು ನಾನು ಹೇಳುವ ಮಾತಲ್ಲ.. ಇತ್ತೀಚಿಗೆ ನಾವುಗಳು ಸಡಗೋಪಾನ್ ಕುಟುಂಬವನ್ನು ಭೇಟಿ ಮಾಡಿದಾಗ ಅವರೇ ಹೇಳಿದ ವಾಕ್ಯಗಳಿವು)ಇನ್ನೊಂದು ಸಡಗೋಪಾನ್ ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿಯುಳ್ಳವರು. ಹಿಂದೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲವೊಂದು ಸುರಕ್ಷತಾ ಕಾರ್ಯಕ್ರಮಗಳಲ್ಲಿ ಅವರೇ ಹಾಮರ್ೋನಿಯಂ ಬಾರಿಸುತ್ತಿದ್ದರು. ಹಾಮರ್ೋನಿಯಂ ಬಾರಿಸುವುದು ಅವರ ವೈಯಕ್ತಿಕ ಕಲೆ.ಇಲ್ಲಿ ಟಿವಿ9 ಸಿದ್ದು ಸಡಗೋಪಾನ್ ಎಂಬ ಹಿರಿಯಜ್ಜನ ಹಾಮರ್ೋನಿಯಂ ಕಲೆ ಮತ್ತು ಅವರಿಗಿರುವ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಸಡಗೋಪಾನ್ ಎಂಬ ಕಾಮರ್ಿಕ ನಿತ್ಯ ಜೀವನ ದೂಡುವುದಕ್ಕಾಗಿ ಕೈಯಲ್ಲಿ ಬಿಕ್ಷೆಪಾತ್ರೆಯನ್ನಿಡಿದು ಗಲ್ಲಿ ಗಲ್ಲಿ ತಿರುಗುತ್ತಿದ್ದಾನೆ. ಪ್ರತಿದಿನ ಬಿಕ್ಷೆ ಬಿದ್ದರೆ ಮಾತ್ರ ಅಂದಿನ ಜೀವನ. ಇಲ್ಲವಾದರೆ ಅಂದೆಲ್ಲ ಗೋಪಾನ್ ಹೊಟ್ಟೆಗೆ ತಣ್ಣೀರಬಟ್ಟೆ ಎಂದೆಲ್ಲ ಅಸಹ್ಯವಾಗಿ ಹೇಳಿದ್ದಾನೆ. (ಮಿಸ್ಟರ್ ಸಿದ್ದು ಮಾನವೀಯ ದೃಷ್ಟಿಯಿಂದ ನೀ ಮಾಡಿದ ವರದಿ ಎಷ್ಟರ ಮಟ್ಟಿಗೆ ಸರಿ? ನೀನೆ ಆತ್ಮವಿಮಷರ್ೆ ಮಾಡಿಕೋ..)ಮತ್ತೊಂದು ಸಿದ್ದು ಮಾಡಿದ ಮಹಾಕಾರ್ಯವೆಂದರೆ, ಸಡಗೋಪಾನ್ರಿಗೆ ಈ ರೀತಿ ಹೇಳುವಂತೆ ಹೇಳಿದ್ದಾನೆ. ನೀವು ಬಿಕ್ಷೆ ಕೇಳುವ ನೆಪದಲ್ಲಿ ಕೂಡಿರಿ.. ನಾವು ಅದನ್ನು ಪೋಟೋ ತೆಗೆದುಕೊಳ್ಳುತ್ತೇವೆ.. ಆ ಮೇಲೆ ಕಂಪನಿಯವರೇ ನಿಮ್ಮ ಮನೆಗೆ ಬಂದು ಪರಿಹಾರ ಕೊಡುತ್ತಾರೆ ಮತ್ತು ನಿಮ್ಮ ಕಣ್ಣಿನ ಧೂಳನ್ನು ತೆಗೆಸಿ ಆಪರೇಷನ್ ಮಾಡಿಸುತ್ತಾರೆಂದು ಹೇಳಿದ್ದಾನೆಅಂದರೆ ಏನರ್ಥ. ತಮ್ಮ ವರದಿಗಾಗಿ ಸೂಳೆಯನ್ನು ಗರತಿ ಮಾಡುವುದು.. ಗರತಿಯನ್ನು ಸೂಳೆ ಮಾಡುವುದಾ? ಇತ್ತೀಚಿನ ದಿನಗಳಲ್ಲಿ ಸಿದ್ದುವಿನ ಹಾಗೆ ಕೆಲವೊಂದು ಮಾಧ್ಯಮ ಸ್ನೇಹಿತರು ಎಕ್ಸ್ಕ್ಲೂಸಿವ್, ಬ್ರೇಕಿಂಗ್ ನ್ಯೂಸ್ಗಳಿಗಾಗಿ ಚಿಲ್ಲರೆ ಕೆಲಸಕ್ಕೆ ಕೈಹಾಕಿದ್ದಾರೆ. ಇದು ಮಾಧ್ಯಮ ಲೋಕದ ದುರಂತ.ದೇಶದ ಶ್ರೀಮಂತಿಕೆ ಸಂಕೇತವಾದ ಚಿನ್ನವನ್ನು ಉತ್ಪಾದಿಸುವ ಹಟ್ಟಿಯಲ್ಲಿ ಅವ್ಯವಹಾರ, ಅಕ್ರಮ, ಅವ್ಯವಸ್ಥೆ, ಭ್ರಷ್ಟಾಚಾರ ನಡೆದಿಲ್ಲ ಎಂಬ ನಿಲುವು ನಮ್ಮದಲ್ಲ. ಭ್ರಷ್ಟಾಚಾರ, ಅವ್ಯವಹಾರ, ಅಕ್ರಮಗಳೆಂಬ ಭೂತಗಳು ಇಡಿ ವ್ಯವಸ್ಥೆಯನ್ನು ಆವರಿಸಿವೆ. ಖ್ಯಾತ ಬರಹಗಾರರಾದ ದಿನೇಶ ಅಮೀನ್ಮಟ್ಟುರವರು ಹೇಳುವಂತೆ ಸಾಮೂಹಿಕ ಬಹಿಷ್ಕಾರದಿಂದ ಮಾತ್ರ ಭ್ರಷ್ಟಾಚಾರದಂತಹ ಕೂಪಗಳನ್ನು ತೊಲಗಿಸಲು ಸಾಧ್ಯ.ಅದನ್ನು ಬಿಟ್ಟು ಯಾರದ್ದೋ ಅಸಹಾಯಕತೆಯನ್ನು ಬಳಸಿಕೊಂಡು ಸುದ್ದಿ ಮಾಡಿದರೆ, ಮಾಧ್ಯಮ ಧರ್ಮಕ್ಕೆ ದ್ರೋಹ ಬಗೆದಂತಾಗುತ್ತದೆ.ಟಿವಿ9ನ ವರದಿಯ ಕುರಿತು ನಮ್ಮ ಸ್ಪಷ್ಟವಾದ ನಿಲುವೇನೆಂದರೆ, ಯಾವುದೇ ವರದಿಯನ್ನು ಮಾಡುವಾಗ ಪ್ರತಿನಿಧಿಯಾದಾತ ವ್ಯವಸ್ಥೆ ಅಥವಾ ವರದಿಯ ವಿಷಯವಸ್ತುವಿನ ಎರಡು ಮಗ್ಗಲುಗಳನ್ನು ಮೊದಲಿಗೆ ವ್ಯವಸ್ಥಿತವಾಗಿ ಗ್ರಹಿಸಿಕೊಳ್ಳಬೇಕು. ಗ್ರಹಿಸಿಕೊಂಡ ವಾಸ್ತವಾಂಶವನ್ನು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ, ಪತ್ರಿಕಾಧರ್ಮವನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರಿಗೆ ಮುಟ್ಟಿಸಬೇಕು.ನಮ್ಮ ದೇಶದ ಪ್ರತಿಷ್ಠಿತ ಮಾಧ್ಯಮಗಳು ವಾಸ್ತವಾಂಶವನ್ನು ಮರೆಮಾಚಿ ತಮ್ಮ ಟಿ.ಆರ್.ಪಿ, ಲಾಭಕ್ಕಾಗಿ ಇಲ್ಲಸಲ್ಲದವುಗಳನ್ನು ತೋರಿಸುತ್ತವೆ. ಅದರಲ್ಲೂ ಇಂದು ಪ್ರತಿಯೊಬ್ಬರು ಸಮರ್ಥನೆಯನ್ನು ರೂಡಿಗತ ಮಾಡಿಕೊಂಡಿದ್ದಾರೆ. ಆಳುವ ವರ್ಗದ ಪರ ಅಧಿಕಾರಶಾಹಿ ಆಲೋಚನೆಗಳನ್ನು ಹೊಂದಿರುವ ಇಂದಿನ ಮಾಧ್ಯಮಗಳು ನಾಮಕಾವಾಸ್ಥೆ ದುಡಿಯುವ ವರ್ಗದ ಪರ ಸಾಮಾನ್ಯ ವರದಿಗಳನ್ನು ಮಾಡುತ್ತ ಸಾಮ್ರಾಜ್ಯಶಾಹಿಯ ಬೂಟಿನಡಿ ಹಗಲಿರುಳು ಕಾರ್ಯನಿರ್ವಹಿಸುತ್ತಿವೆ.ಒಂದು ಕಡೆ ನಮ್ಮ ದೇಶದ ಮಾಧ್ಯಮಕ್ಕೆ ಅವಸಾನ ಎಂಬುದು ಆರಂಭವಾಗಿದೆ. ಭ್ರಷ್ಟ ಬಿಜೆಪಿಗಳು ಪ್ರಜಾಪ್ರಭುತ್ವದಲ್ಲಿ ಹೇಗೆ ಆಪರೇಷನ್ ಕಮಲವನ್ನು ಆರಂಬಿಸಿದವೋ ಅದರಂತೆ ಮಾಧ್ಯಮದಲ್ಲಿಯೂ ಕೆಲವೊಂದು ಹಣದಾಹಿ ರಾಜಕಾರಣಿಗಳು, ಉದ್ದಿಮೆದಾರರು ದಿನನಿತ್ಯ ಹೊಸ ಹೊಸ ಚಾನೆಲ್ಗಳನ್ನು ತೆಗೆದು ಆಪರೇಷನ್ ಮೀಡಿಯಾ ಮಾಡುತ್ತಿದ್ದಾರೆ.ಬೆಳಿಗ್ಗೆ ಒಂದು ಚಾನೆಲ್ನಲ್ಲಿ ಸುದ್ದಿ ಓದಿದಾತ ಮಧ್ಯಾಹ್ಮದ ವಾತರ್ೆಯನ್ನು ಬೇರೊಂದು ಸುದ್ದಿವಾಹಿನಿಯಲ್ಲಿ ಓದುತ್ತಿರುತ್ತಾನೆ. ಮತ್ತೇ ರಾತ್ರಿ ಮಗದೊಂದು ಚಾನೆಲ್ಗೆ ಹೋಗಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುತ್ತಾನೆ. ಅಂದರೆ ಏನರ್ಥ..?ಮೊದಲಿಗೆ ಹೇಳಿದಂತೆ ಮಾಧ್ಯಮದ ಅವಸಾನಕ್ಕೆ ನೀರಾಳ ರಾಡಿಯೇ ಅಡಿಗಲ್ಲಾಗಿದೆ... ಇನ್ಯಾರ್ಯಾರು ಕಾಮಗಾರಿ ಪೂರ್ಣಗೊಳಿಸುತ್ತಾರೆಯೋ ಸಮಯವೇ ನಿರ್ಧರಿಸಬೇಕು.ಎಂ.ಎಲ್