Saturday, December 17, 2011

Dec 2011 New Edition

ಹಟ್ಟಿಯಲ್ಲಿ ಮತ್ತೇ, ಮತ್ತೇ, ಮತ್ತೇ ಖೋಟಾನೋಟು ಹಾವಳಿ

ಜ್ಯೋತಿ, ಕಾಮತ್, ಶೀಲವಂತ, ದತ್ತಾತ್ರೇಯರಂತ ಅನೇಕ ದಕ್ಷ ಪಿ.ಎಸ್.ಐಗಳು ಹಟ್ಟಿ ಠಾಣಿಗೆ ಬಂದು ಹೋದರೂ, ಹಟ್ಟಿಯಲ್ಲಿ ಮಾತ್ರ ಖೋಟಾನೋಟು, ಮಟ್ಕಾ, ಇಸ್ಪೀಟ್ ಹಾಗೂ ಸೂಳೇಗಾರಿಕೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಬಂಗಾರದ ಹಟ್ಟಿಗೆ ಛೋಟಾಮುಂಬಯಿ ಪಟ್ಟ ಬಂದಿದೆ ಎನ್ನುತ್ತಾರೆ ನಮ್ಮ ಪ್ರತಿನಿಧಿ ಸತ್ಯ.
ರಾಯಚೂರು ಜಿಲ್ಲೆಯಲ್ಲಿರುವ ಹಟ್ಟಿ ಚಿನ್ನದ ಗಣಿ ಬಂಗಾರವನ್ನು ಉತ್ಪಾದಿಸುತ್ತಾ, ದೇಶದಲ್ಲಿ ಅದೆಷ್ಟು ಖ್ಯಾತಿಯನ್ನೋ ಗಳಿಸಿದೆಯೋ, ಅಷ್ಟೇ ಕುಖ್ಯಾತಿಯನ್ನು ಖೋಟಾನೋಟು, ಮಟ್ಕಾ, ಇಸ್ಪೀಟ್, ಸೂಳೇಗಾರಿಕೆಯಂತಹ ದಂಧೆಗಳಲ್ಲಿ ಪಡೆದಿದೆ.

Venkob Badiger

ಒಂದು ಕಡೆ ಇಲ್ಲಿನ ಕಂಪನಿಯನ್ನು ಬಂಗಾರದ ಕಂಪನಿ ಎಂದರೆ, ಮತ್ತೊಂದೆಡೆ ಹಿರಿಯಮಂದಿ ಇದನ್ನು "ತೊಗಲಿನ ಕಂಪನಿ" ಎಂದು ಕರೆಯುವರು. ಕಂಪನಿಯಲ್ಲಿ ಕೆಲಸ ಮಾಡುವ ಉನ್ನತ ವರ್ಗದ ಅಧಿಕಾರಿ ತನ್ನ ಮನೆಯಾಳಿನ ಜೊತೆ ಅನೈತಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದಾಗಲಿ, ಊರಿನ ಗಣ್ಯನಾಗಿದ್ದರೂ ಹೋಟೆಲ್ನಲ್ಲಿ ಕೆಲಸ ಮಾಡುವ ಮಹಿಳೆಯ ಜೊತೆ ಚಕ್ಕಂದವಾಡುವುದಾಗಲಿ, ಇಲ್ಲಿ ಸವರ್ೇಸಾಮಾನ್ಯ.

ಬ್ರೀಟಿಷರು ಬಿಟ್ಟುಹೋಗಿರುವ ಅರೆಬೆತ್ತಲೆ ಸಂಸ್ಕೃತಿಯನ್ನು ಇಲ್ಲಿ ಇಂದಿಗೂ ಕಾಣಬಹುದಾಗಿದೆ. ಹಟ್ಟಿಯ ಜನರು ಎಂತಹದ್ದೇ ಮಹಾನಗರಗಳಲ್ಲಿ ವಾಸವಿದ್ದರೂ, ಅವರನ್ನು ಹಟ್ಟಿಯವರೆಂದು ಬೇಗನೇ ಪತ್ತೇ ಹಚ್ಚಬಹುದು. ಯಾಕೆಂದರೆ, ಹಟ್ಟಿ ಜನರ ಶೋಕಿ, ಬದುಕು ಎಲ್ಲವೂ ವಿಭಿನ್ನವಾಗಿರುತ್ತವೆ.

ಹಟ್ಟಿಯ ಅವಧೂತ ಹೇಳಿದಂತೆ ಮುಂದೊಂದು ದಿನ ಬಂಗಾರ ಹಟ್ಟಿ "ಛೋಟಾ ಮುಂಬಯಿ" ಆದರೂ ಆಗಬಹುದು. ಇದೆಲ್ಲ ಹಟ್ಟಿಗೆ ಒಂದೆಡೆ ಪೀಠಿಕೆಯಾದರೆ, ಸಾರಾಂಶವೇ ವಿಚಿತ್ರವಾಗಿದೆ. ಬನ್ನಿ ಈಗ ವಿಷಯಕ್ಕೆ ಬರೋಣ.

ಸೂಳೇಗಾರಿಕೆ, ಮಟ್ಕಾ, ಇಸ್ಪೀಟ್, ಖೋಟಾನೋಟುಗಳು ಕಾಲಕಾಲದಿಂದ ಸಮಾಜದಲ್ಲಿ ಚಾಲ್ತಿಯಲ್ಲಿವೆ. ಅವುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಯಾರಿಂದಲೂ ಆಗಿಲ್ಲವಾದರೂ, ಸ್ವಲ್ಪಮಟ್ಟಿಗೆ ನಿಯಂತ್ರಿಸುವ ಕೆಲಸವಾದರೂ ನಡೆಯಬೇಕು. ಆದರೆ, ಅದಿಂದು ಹಟ್ಟಿಯಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ.

ಹಟ್ಟಿ ಠಾಣಿಗೆ ಜಾತಿಯ ಆದಾರದ ಮೇಲೆ ಪಿ.ಎಸ್.ಐಗಳನ್ನು ಕಳುಹಿಸಲಾಗುತ್ತದೆ. (ರಾಜಕೀಯ ಇಚ್ಛಾಶಕ್ತಿಯೂ ಕಾರಣ) ಇದು ರೂಡಿಗತ. ಇಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ದಲಿತ, ಅಲ್ಪಸಂಖ್ಯಾತ ಅಧಿಕಾರಿಗಳಿದ್ದರೆ, ಪ್ರಕರಣಗಳು ಕಡಿಮೆಯಾಗಬಹುದೆಂಬ ಕಾರಣಕ್ಕೆ. ದಲಿತರನ್ನು ಹೊರತುಪಡಿಸಿ ಇನ್ನುಳಿದ ಅನ್ಯಜಾತಿಯ ಅಧಿಕಾರಿಗಳು ಬಂದರೆ, ಹಟ್ಟಿ ನಿಯಂತ್ರಣಕ್ಕೆ ಬರುವುದಿಲ್ಲ ಎಂಬ ಮಾಹಿತಿಯನ್ನು ಈ ಹಿಂದೆ ಅದ್ಯಾರೋ ಪುಣ್ಯಾತ್ಮರು ಮೈಕ್1 ಸಾಹೇಬರಿಗೆ ನೀಡಿದ್ದಾರೆ.

ಅದಕ್ಕಾಗಿಯೇ ಹಟ್ಟಿಗೆ ಬಂದಂತಹ ಶೇಕಡವಾರು ಅಧಿಕಾರಿಗಳಲ್ಲಿ ಬಹಳಷ್ಟು ದಲಿತರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಹಟ್ಟಿಯಲ್ಲಿ ಸ್ವಲ್ಪಮಟ್ಟಿಗೆ ಹೆಸರು ಮಾಡಿಹೋಗಿರುವ ಪಿ.ಎಸ್.ಐ ಜ್ಯೋತಿ, ದತ್ತಾತ್ರೇಯ ಎಂ ಕನರ್ಾಡ್, ಭಜಂತ್ರಿ ಮೊದಲಾದ ಅಧಿಕಾರಿಗಳೆಲ್ಲರೂ ದಲಿತ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ಆದಾಗ್ಯೂ ಇಲ್ಲಿ ದಲಿತರ ಮೇಲೆ ದೌರ್ಜನ್ಯಗಳೇನು ಕಡಿಮೆಯಾಗಿಲ್ಲ. ಪಿಸಿ ಟು ಪಿಎಸ್ಐ ನರಸಿಂಗಪ್ಪನಂತವರು ಬಂದರೂ ಅಟ್ರಾಸಿಟಿಗೇನು ಕೊರತೆಯಾಗಲಿಲ್ಲ.

ಈ ವಿಷಯವನ್ನು ಯಾಕೆ ಇಲ್ಲಿ ಹೇಳಬೇಕಾಗಿ ಬಂತೆಂದರೆ, ಐಜಿ ಲೇವಲ್ಲಿನಲ್ಲಿ ಹಟ್ಟಿಯಲ್ಲಿ ದಲಿತ ಅಧಿಕಾರಿಗಳು ಇರುವದರಿಂದ ಅಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ. ವಿಶೇಷವಾಗಿ ಕಾಮರ್ಿಕರನ್ನು ಹೊಂದಿರುವ ಪ್ರದೇಶ ಅದಾಗಿರುವದರಿಂದ ಸಣ್ಣಪುಟ್ಟ ನ್ಯಾಯಗಳನ್ನು ಹೊರತುಪಡಿಸಿದರೆ, ದೊಡ್ಡ ಪ್ರಕರಣಗಳು ಅಲ್ಲಿ ಸಂಭವಿಸುವುದೇ ಇಲ್ಲ ಎಂಬ ಮಾಹಿತಿ ಇದೆ.

ಆದರೆ, ಇಲ್ಲಿ ದಲಿತ ಅಧಿಕಾರಿಗಳು ಇದ್ದರೆನು, ಬಿಟ್ಟರೇನು ಮೇಲೆ ಹೇಳಿದ ಎಲ್ಲಾ ಕೃತ್ಯಗಳು ವ್ಯವಸ್ಥಿತವಾಗಿ ನಡೆಯುತ್ತವೆ.

ಲಿಂಗಸ್ಗೂರು ತಾಲ್ಲೂಕುವೊಂದರಲ್ಲಿಯೇ ಸುಮಾರು ದಲಿತರ ಕೊಲೆಗಳಾಗಿವೆ. ಯಾವೊಂದು ಕೊಲೆಯ ತನಿಖೆಯಿಂದ ಸರಿಯಾದ ನ್ಯಾಯ ಸಿಗಲೇ ಇಲ್ಲ. ಅದರಂತೆ ಬೆರಳಣಿಕೆ ಮಂದಿಗೆ ಶಿಕ್ಷೆಯಾಗಿದೆ.

ಮತ್ತೇ, ಮತ್ತೇ, ಮತ್ತೇ ಖೋಟಾನೋಟು ಹಾವಳಿ

ಹಟ್ಟಿಯಲ್ಲಿ ಅವ್ಯಾಹತವಾಗಿ ನಡೆದಿರುವ ಖೋಟಾ ನೋಟು ಹಂಚಿಕೆಯಲ್ಲಿ ವರ್ಷಕ್ಕೊಬ್ಬರಾದರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಕಳೆದ ವರ್ಷ ಖೋಟಾನೋಟು ಪ್ರಕರಣವನ್ನು ದೂರದ ಪೊಲೀಸ್ ಅಧಿಕಾರಿಗಳು ಭೇದಿಸಿದ್ದರು. ಆದರೆ, ಈ ವರ್ಷ ಖೋಟಾನೋಟು ಆರೋಪಿ ಪೊಲೀಸ್ರಿಗೆ ರೆಡ್ಆ್ಯಂಡ್ ಆಗಿ ಸಿಕ್ಕಿಬಿದ್ದರೂ, ಆತನನ್ನು ಪೊಲೀಸರು ಬಂಧಿಸದೇ ವ್ಯವಹಾರವನ್ನು ಕುದುರಿಸಲು ಹೋಗಿದ್ದರು. ಆದರೆ, ಅದೃಷ್ಟಕ್ಕೆ ಯಾರೋ ಮೈಕ್1 ಸಾಹೇಬರಿಗೆ ಪೋನ್ ಮಾಡಿದ್ದಕ್ಕಾಗಿ ಪ್ರಕರಣವೊಂದು ದಾಖಲಾಯಿತು.

ಸಿಕ್ಕಿಹಾಕಿಕೊಂಡ ಆರೋಪಿ ವೆಂಕೋಬ ಬಡಿಗೇರ ಹಟ್ಟಿಯಲ್ಲಿ ಈ ಮೊದಲಿನಿಂದಲೂ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಲೇ ಬಂದಿದ್ದಾನೆ. ಸಾಕಷ್ಟು ಆಸ್ತಿ (ಇಡೀ ಹಟ್ಟಿಯಲ್ಲಿ ಈತನ ಕುಟುಂಬದ್ದೇ ಅತಿಹೆಚ್ಚಿನ ಆಸ್ತಿ ಇರುವುದು) ಹೊಂದಿರುವ ಈತ ಯಾರೊಬ್ಬರಿಗೆ ಹಟ್ಟಿಯಲ್ಲಿ ಎರಡು ರೂಪಾಯಿಯ ಚಹಾ ಕುಡಿಸಿರುವ ಉದಾಹರಣೆ ಇಲ್ಲ. ಆದರೆ, ಹಟ್ಟಿಯ ಅಂಗಡಿಗಳೆಲ್ಲೆಲ್ಲ ಸಾವಿರದ ನೋಟನ್ನು ಒಯ್ದು ಚಿಲ್ಲರೆ ಕೇಳಿದ ಅದೆಷ್ಟೋ ಉದಾಹರಣಿಗಳನ್ನು ಹೆಸರೇಳಲಿಚ್ಚಿಸಿದ ಆತನ ಸ್ನೇಹಿತರು ಹೇಳುತ್ತಾರೆ.

ಮಂದಿಯ ಕಣ್ಣಿಗೆ ಪಕ್ಕಾ ಮೆಂಟಲ್ ತರಹ ಕಾಣುವ ಈತ ಬಹಳ ಬುದ್ದಿವಂತ. ಸ್ವಾಮಿ ವಿವೇಕಾನಂದ ಹೆಸರಿನ ಮೇಲೆ ಶಾಲೆ ಮತ್ತು ಒಂದೆರಡು ಎನ್.ಜಿ.ಓಗಳನ್ನು ತೆಗೆದಿರುವ ಈತ ಎಲ್ಲದರಲ್ಲಿಯೂ ಲೂಟಿ ಮಾಡುವದನ್ನೇ ನೋಡುತ್ತಿರುತ್ತಾನೆ. ಡಬ್ಬಾ ಸಿಡಿ100 ಗಾಡಿಯನ್ನು ಓಡಿಸುತ್ತಾ ಚಿಲ್ಲರೆ ದಂಧೆಯನ್ನು ಮಾಡುತ್ತಿರುವ ಈತನ ಹಿಂದೆ ದೊಡ್ಡದಾದ ಜಾಲವೇ ಇದೆ. ಪಾರದರ್ಶಕ ತನಿಖೆ ನಡೆದದ್ದೇ ಆದರೆ, ವೆಂಕೋಬನ ಬಹುಪಾಲು ಸಹಚರರು ಕಂಬಿ ಸೇರುವುದು ಗ್ಯಾರಂಟಿ.

ಹಿಂದೊಮ್ಮೆ ಖೋಟಾನೋಟು ಪ್ರಕರಣದಲ್ಲಿ ಹಟ್ಟಿಯ ಮಂದಿ ಸಿಕ್ಕಿಹಾಕಿಕೊಂಡಾಗ, ಹಟ್ಟಿಯ ಹೆಸರು ಚಾಲ್ತಿಗೆ ಬಂದಿತ್ತು. ಆದರೆ, ಅಂದಿನ ಪ್ರಕರಣ ಸ್ಥಳೀಯ ಪೊಲೀಸರಿಗೆ ಸಂಬಂಧಿಸಿದ್ದಿಲ್ಲವಾದ್ದರಿಂದ, ಯಾರು ಹೆಚ್ಚಿಗೆ ಒತ್ತನ್ನು ನೀಡಲಿಲ್ಲ.

ಈ ಹಿಂದೆಯೇ ಸಿಕ್ಕಿಹಾಕಿಕೊಂಡ ಮಂದಿ ಅಸಲಿ ಫಲಾನುಭವಿಗಳ ಹೆಸರು ಹೇಳದೇ ಜೈಲಿನಲ್ಲಿಯೇ ಕೆಲವು ತಿಂಗಳುಗಳನ್ನು ಕಳೆದು ಈಗ್ಗೆ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. ಒಂದು ವೇಳೆ ಆಗಲೇ ಮೂಲ ಖೋಟಾನೋಟು ಮಾಡುವ ಮಂದಿ ಯ ಹೆಸರು ಬಯಲಿಗೆ ಬಂದಿದ್ದರೆ ಭವಿಷ್ಯ ವೆಂಕೋಬ ಬಡಿಗೇರ ಸಿಕ್ಕಿಹಾಕಿಕೊಳ್ಳುತ್ತಿದ್ದಿಲ್ಲ!

ಹತ್ತಾರು ಭಾಷೆಗಳ ಜನ ವಾಸಿಸುವ ಬಂಗಾರ ಹಟ್ಟಿಯಲ್ಲಿ ವೆಂಕೋಬನಿಗೆ ಖೋಟಾನೋಟು ಚಲಾವಣೆ ದೊಡ್ಡದೇನಲ್ಲ. ಯಾಕೆಂದರೆ, ಈತನು ಸಿಕ್ಕಿಹಾಕಿಕೊಂಡಿರುವುದು ಎಂತವರ ಬಳಿ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ.

ದೂರದ ಆಂಧ್ರಪ್ರದೇಶದಿಂದ ಸೋಫಾಸೆಟ್ ಗಳನ್ನು ಮಾರಲು ಶ್ರಮಜೀವಿಗಳು ಹಟ್ಟಿಗೆ ಬಂದಿದ್ದಾರೆ. ಅವರಿಗೆ ಇಲ್ಲಿನ ಪರಿಸ್ಥಿತಿ ಯಾವುದು ಗೊತ್ತಿಲ್ಲ. ಹೊಟ್ಟೆಪಾಡಿನ ಜೀವನ ಅವರದ್ದು. ಆದರೆ, ವೆಂಕೋಬ ಇವರ ಅಸಹಾಯಕತೆಯನ್ನು ಬಳಸಿಕೊಂಡು, ಅವರಲ್ಲಿಯೇ ಒಂದು ಸೋಪಾವನ್ನು ಖರೀಧಿಸಿ ಸಾವಿರ ರೂಪಾಯಿಯ 5 ನಕಲಿ ನೋಟುಗಳು, ಐದುನೂರು ರೂಪಾಯಿಯ 3 ಅಸಲಿ ನೋಟುಗಳು ಸೇರಿ ಒಟ್ಟು 6500ರೂ.ನ್ನು ನೀಡಿ, ಸೋಪಾಗಳನ್ನು ತನ್ನ ಶಾಲೆಗೆ ತೆಗೆದುಕೊಂಡು ಹೋಗಿದ್ದಾನೆ.

ಆ ನಂತರ ಶ್ರಮಜೀವಿಗಳು ಸಾವಿರ ಬೆಲೆಯ 5ನೋಟುಗಳನ್ನು ಮೇಲೆ ಕೆಳಗೆ ಪರೀಶಿಲಿಸಿದಾಗ ಅದು ಖೋಟಾನೋಟು ಎಂಬುದು ಗೊತ್ತಾಗಿದೆ. ತತ್ಕ್ಷವೇ ಶ್ರಮಜೀವಿಗಳು ಆಟೋವನ್ನು ಬೆನ್ನುಹತ್ತಿ ವೆಂಕೋಬನನ್ನು ನಕಲಿ ನೋಟುಗಳನ್ನು ವಾಪಸ್ಸು ಕೊಟ್ಟಿದ್ದಾರೆ. ಆದರೆ, ವೆಂಕೋಬ ಆ ನೋಟುಗಳನ್ನು ನಮಗೆ ಕೊಡು,, ನಿನಗೆ ಅಸಲಿ 3 ನೋಟುಗಳನ್ನು ಕೊಡುತ್ತೇನೆಂದು ಹೇಳಿದ್ದಾನೆ.

ಶ್ರಮಜೀವಿ ಅದ್ಯಾವದನ್ನು ಕೇಳದೇ, ನಕಲಿ ನೋಟುಗಳನ್ನು ಹಿಂದುರಿಗಿಸಿ ತಮ್ಮ ಮಾಲನ್ನು ವಾಪಸ್ಸು ತಂದಿದ್ದಾನೆ.

ನಂತರ ವಿಷಯ ಪೊಲೀಸರ ಗಮನಕ್ಕೆ ಬಂದಾಗ ವೆಂಕೋಬ ಮತ್ತು ಪೊಲೀಸರ ನಡುವೆ ಅಂದರ್ಬಾಹರ್ ವ್ಯವಹಾರ ಶುರುವಾಗಿದೆ. ಆ ಮೇಲೆ ಇಬ್ಬರೂ ಸೋಫಾ ಮಾರುವವನ ಹತ್ತಿರ ಹೋಗಿ ಈತನು ಕೊಟ್ಟ ನೋಟಿನ ಕುರಿತು ತಾವುಗಳು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾರೆ!

ವ್ಯವಹಾರ 50,000ಕ್ಕೆ ಪಿಕ್ಸ್ ಆದ ನಂತರ ವೆಂಕೋಬ 30,000ವನ್ನು ಕೊಡಲು ಒಪ್ಪಿದ್ದಾನೆ. ಆಸೆಯೆಂಬುದು ಬಲುಕೋಡಿಯಂತೆ, ಅದರಂತೆ 50ಕ್ಕೆ ಪೊಲೀಸರು ಹಠ ಹಿಡಿದಾಗ ಗುಂಡಪ್ಪ (ಹೆಸರು ಬದಲಾವಣೆಯಾಗಿರಬಹುದು) ಎಂಬಾತ ತನ್ನ ಮನೆಯಲ್ಲಿರುವ ಬಂಗಾರವನ್ನು ಸ್ಥಳೀಯ ಬ್ಯಾಂಕಿನಲ್ಲಿ ಅಡವಿಟ್ಟು, 30,000 ರೂಗಳನ್ನು ತಂದಿದ್ದಾನೆ. ಇನ್ನುಳಿದ 20,000ಗಳನ್ನು ಒಂದೆರಡು ದಿನಗಳಲ್ಲಿ ಕೊಡುವುದಾಗಿಯೂ ಮಾತು ನಡೆದಿದೆ. ಹೀಗಾಗಿ 02 ನವೆಂಬರ್ ಕಳೆದು ಹೋಯಿತು.

ಜಗತ್ತಿನ ಯಾವ ಮೂಲೆಯಲ್ಲಿಯಾದರೂ ನಡೆಯುವ ಘಟನೆಯನ್ನು ಹಟ್ಟಿಯ ಮಂದಿ ಕ್ಷಣಾರ್ಧದಲ್ಲಿ ತಿಳಿದುಕೊಳ್ಳುತ್ತಾರೆ. ಅಷ್ಟೊಂದು ಪಾಸ್ಟ್ ಆಗಿ ಹಟ್ಟಿಯ ಜನರಿದ್ದಾರೆ.

ಆರೋಪಿಯ ಹತ್ತಿರ ಸಿಕ್ಕಿರುವ ನೋಟುಗಳು ಜೆರಾಕ್ಸ್ ಮಾಡಿರುವಂತವು. ಅವುಗಳನ್ನು ಕಂಪ್ಯೂಟರ್ ಪ್ರಿಂಟರ್ನಲ್ಲಿ ಮುದ್ರಿಸಲಾಗಿದೆ ಎಂಬೆಲ್ಲಾ ಸಬೂಬುಗಳು ನಡೆದಿವೆ.

ಇಷ್ಟೇಲ್ಲ ನಡೆದು ಹಟ್ಟಿಗೆ ಹಟ್ಟಿಯೇ ಬೋ... ಎನ್ನುತ್ತಿರುವಾಗ ಯಾರೋ ಒಬ್ಬರು ಈ ವಿಷಯವನ್ನು ಮೈಕ್1 ಸಾಹೇಬರಿಗೆ ಪೋನ್ ಮಾಡಿ ತಿಳಿಸಿದ್ದಾರೆ.

ನಂತರ ಸಿಟ್ಟಿಗೆ ಬಂದ ಮೈಕ್1 ಸಾಹೇಬರು ಲಿಂಗಸ್ಗೂರಿನ ಮೈಕ್3ರವರನ್ನು ವಿಚಾರಿಸಿದ್ದಾರೆ. ಅಷ್ಟೋತ್ತಿಗೆ ಘಟನೆ ನಡೆದು 24 ಘಂಟೆಗಳಾಗಿ, ಖೋಟಾನೋಟಿನ ಸುದ್ದಿ ಎಲ್ಲಾ ಚಾನೆಲ್ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು.

ಕೊನೆಗೆ ಸೋಪಾ ಮಾರುವ ನಾಗರಾಜ ಎಂಬಾತ ನೀಡಿದ ದೂರಿನ ಮೇಲೆ ಹಟ್ಟಿ ಠಾಣೆ ಗುನ್ನೆ ನಂ: 143/2011 ಕಲಂ: 420.489(ಎ). ಸಹಿತ 34 ಐಪಿಸಿ ನೇದ್ದರಲ್ಲಿ ವೆಂಕೋಬ ಬಡಿಗೇರ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ನೋಟುಗಳನ್ನು ತಯಾರಿಸುತ್ತಿದ್ದ ಎನ್ನಲಾದ ಪ್ರಿಂಟ್ರ್ನ್ನು ವಶಪಡಿಸಿಕೊಳ್ಳಲಾಗಿದೆ.

ನಿಂಗಪ್ಪ ಕಡೇಮನಿಯವರಿಗೆ ನ್ಯಾಷನಲ್ ಫೆಲೋಶಿಪ್

ಸ್ವತಂತ್ರ ಪೂರ್ವ ಮತ್ತು ನಂತರ ಭಾರತದ ಈ ನೆಲದಲ್ಲಿ ಹಲವಾರು ರೀತಿಯಲ್ಲಿ ಮನುಕುಲವನ್ನು ವಗರ್ೀಕರಿಸಿ ಒಡೆದಾಳುವ ಪದ್ದತಿ ರೂಡಿಗತವಾಗಿ ಬಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ದಲಿತಪರ ಹೋರಾಟಗಳು ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಹೋರಾಟವೆಂಬ ಅಸ್ತ್ರವನ್ನು ಇನ್ನು ಕೂಡ ಮುಂದುವರಿಸಿಕೊಂಡು ಬರುತ್ತಲೇ ಇವೆ. ಆದರೆ, ದಲಿತರು ತೃಪ್ತಿಕರವಾದಂತಹ ಹಂತವನ್ನು ತಲುಪುವಲ್ಲಿ ವಿಫಲವಾಗಿವೆಂಬುದು ಮಾತ್ರ ಬಹಳ ವಿಷಾದಕರ ಸಂಗತಿ.
ಶಿಕ್ಷಕರಾದ ನಿಂಗಪ್ಪ ಕಡೇಮನಿಯವರು ತಮ್ಮ ವಿದ್ಯಾಥರ್ಿ ಜೀವನದಲ್ಲಿ ದಲಿತ ಸಂಘಟನೆಗಳಲ್ಲಿ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವೈಖರಿಯನ್ನು ಮೆಲುಕು ಹಾಕಿದಾಗ ಇಂದಿನ ಯುವ ಪೀಳಿಗೆ ದಿಗ್ಬ್ರಾಂತಗೊಳ್ಳುತ್ತದೆ.

ಬಡತನದ ಬವಣಿಯಲ್ಲಿ ಬೆಂದಂತ, ಒಂದು ದಲಿತ ಕುಟುಂಬದಲ್ಲಿ 09/6/1982ರಂದು ಸ್ವ(ಕು)ಗ್ರಾಮವಾದ ಲಿಂಗಸ್ಗೂರು ತಾಲ್ಲೂಕಿನ ಹಿರೇನಗನೂರು ಎಂಬಲ್ಲಿ ಸಿದ್ದಪ್ಪ, ಯಲ್ಲಮ್ಮ ದಂಪತಿಗಳಿಗೆ 4ನೇ ಮಗನಾಗಿ ಜನಿಸಿದ ಇವರು, ಪ್ರಾಥಮಿಕ ಶಾಲೆಯ ವಿದ್ಯಾಬ್ಯಾಸವನ್ನು ಹಿರೇನಗನೂರಿನಲ್ಲಿಯೇ ಪೂರ್ಣಗೊಳಿಸಿದರು. ಉತ್ತರ ಕನರ್ಾಟಕದ ದಲಿತ ಚಳುವಳಿಗಳಲ್ಲಿ ಅಂದು ಮುಂಚೂಣಿಯಲ್ಲಿದ್ದ ನಗನೂರು ಭೀಮಣ್ಣನವರ ಪ್ರಭಾವಕ್ಕೊಳಗಾಗಿ, ದಲಿತರ ಚಿಂತನೆ, ಹೋರಾಟಗಳಲ್ಲಿ ಸಮಾಜದಲ್ಲಿನ ಸಮಾನತೆಗಾಗಿ ದುಡಿಯುವ ಹುಮ್ಮಸ್ಸು ಆ ಬಾಲ್ಯದಲಿಯೇ ರೂಡಿಸಿಕೊಂಡರು. ಒಟ್ಟಾರೆ ಈ ಎಲ್ಲಾ ವಿಚಾರಧಾರೆಗಳು ಅವರಲ್ಲಿ ಕ್ರಮೇಣ ಚಿಗುರೊಡೆಯ ತೊಡಗಿದವು.

ನಂತರ ಮಾನ್ವಿ ತಾಲ್ಲೂಕಿನ ಅಡವಿ ಅಮರೇಶ್ವರ ಸಕರ್ಾರಿ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿದ್ದುಕೊಂಡೆ ಪಡೆದರು. ಆ ವಸತಿ ನಿಲಯದ ಅವ್ಯವಸ್ಥೆಯನ್ನು ಕಂಡು ಅಂದೇ ಅವರಲ್ಲಿ ಹೋರಾಟದ ಕಿಚ್ಚು ಹತ್ತತೊಡಗಿತ್ತು. ಆಗ ಆ ವಯಸ್ಸಿನಲ್ಲಿ ನಿಲಯದ ವಿದ್ಯಾಥರ್ಿಗಳನ್ನು ಸಂಘಟಿಸಿ, ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಂಡರು. ನಂತರ 1999ರಲ್ಲಿ ಪ್ರೌಢಶಾಲಾ ವಿದ್ಯಾಬ್ಯಾಸವನ್ನು ಪೂರ್ಣಗೊಳಿಸಿ, ಪ್ರಥಮ ದಜರ್ೆಯಲ್ಲಿ ಎಸ್.ಎಸ್.ಎಲ್.ಸಿಯನ್ನು ಪಾಸು ಮಾಡಿದರು. ತದನಂತರ ಜೀವನದಲ್ಲಿನ ಮಹೋನ್ನತವಾದ ಗುರಿಯನ್ನು ತಲುಪುವ ಉದ್ದೇಶವನ್ನಿಟ್ಟುಕೊಂಡು ಹುನಗುಂದದ ಎಸ್.ವಿ.ಎಂ ಕಾಲೇಜಿನಲ್ಲಿ ಪಿ.ಯು.ಸಿ ವಿಜ್ಞಾನ ವಿಭಾಗವನ್ನು ಆಯ್ಕೆಮಾಡಿಕೊಂಡರು.ಕೌಟುಂಬಿಕ ಕಾರಣಗಳಿಂದಾಗಿ ಹಾಗೂ ಆಥರ್ಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದುದರಿಂದ ವಿಜ್ಞಾನ ವಿಭಾಗವನ್ನು ಕೈಬಿಡುವ ಪರಿಸ್ಥಿತಿ ಎದುರಾಯಿತು.

ಆದರೂ, ಛಲ ಬಿಡದೇ 2002ರಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿದರು. ಆದರೆ, ವಿಜ್ಞಾನ ವಿಭಾಗದಲ್ಲಿಯೇ ಮುಂದುವರೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಮಹೋನ್ನತವಾಗಿ ಹೊಂದಿದ್ದ ಗುರಿಗೆ, ಕಟ್ಟಿಕೊಂಡಿದ್ದ ಕನಸುಗಳಿಗೆ ನೀರೆರಚಿದಂತಾಯಿತು. ನಂತರ 2003ರಲ್ಲಿ ಪಿ.ಯು.ಸಿ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕಲಾ ವಿಭಾಗದಿಂದ ಪ್ರಥಮ ದಜರ್ೆಯಲ್ಲಿ ತೇರ್ಗಡೆ ಹೊಂದಿದರು. ಮತ್ತು ಬಿ.ಎ ಪದವಿಗಾಗಿ ಲಿಂಗಸ್ಗೂರಿನ ವಿ.ಸಿ.ಬಿ ಕಾಲೇಜಿಗೆ ಸೇರಿಕೊಂಡರು. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಕಂಡು, ಇಂದಿನ ಯುಗದಲ್ಲಿ ಶಿಕ್ಷಣದಲ್ಲಿ ಬದಲಾವಣಿಗಳನ್ನು ತರಬೇಕೆಂಬ ಗುರಿಯೊಂದಿಗೆ, ವಿದ್ಯಾಲಯದ ವಿದ್ಯಾಥರ್ಿಗಳನ್ನೆಲ್ಲ ಸಂಘಟಿಸಿ, ಶಿಕ್ಷಣದ ಸುಧಾ ರಣಿಗೆ ಹಲವಾರು ಕಾರ್ಯಕ್ರಮ ಯೋಜನೆಗಳನ್ನು ಹಾಕಿಕೊಂಡು ಕಾರ್ಯಗಾರ ಗಳನ್ನು ನಡೆಸಿ, ಇವರ ವಿಚಾರ ವಿವಿಯಲ್ಲಿ ಚಚರ್ೆಗೆ ಅವಕಾಶವಿತ್ತವು. ಹಾಗೂ ಹಿಂದುಳಿದ ಶೋಷಿತರ ವಿದ್ಯಾಥರ್ಿಗಳ ನಿಲಯದಲ್ಲಿ ಮೂಲಸೌಕರ್ಯಗಳನ್ನು ಒದಗಿಸು ವದಕ್ಕಾಗಿ ವಿವಿಧ ರೀತಿಯ ಹೋರಾಟದ ಹಾದಿಗ ಳನ್ನು ತುಳಿದು, ಇದರಲ್ಲಿ ಯಶಸ್ಸನ್ನು ಕಂಡರು. ಹೀಗೆ ವಿದ್ಯಾಥರ್ಿಪರ ಹೋರಾಟಗಳನ್ನು ಹಮ್ಮಿ ಕೊಂಡು, ಈ ಭಾಗದಲ್ಲಿಯೇ ಯುವ ವಿದ್ಯಾಥರ್ಿ ಮುಖಂಡನೆಂಬ ವಿಷಯ ಮನೆಮಾತಾಯಿತು. 2003ರಲ್ಲಿ ಕನರ್ಾಟಕ ಕಲಾ ಮಹಾವಿದ್ಯಾಲಯದ ಪ್ರತಿಯೊಂದು ವಿದ್ಯಾಥರ್ಿ ನಿಲಯಗಳಿಗೆ ಭೇಟಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ, ಅವರ ಹಕ್ಕುಗಳಿಗಾಗಿ ದನಿಗೂಡಿಸಿದರು.

ಇಂತಹ ಸಂದರ್ಭದಲ್ಲಿ ಕೌಟುಂಬಿಕ ಒತ್ತಾಯದ ಮೇರೆಗೆ ಡಿ.ಇಡಿ ವೃತ್ತಿಪರ ಶಿಕ್ಷಣವನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು 2007ರಲ್ಲಿ ವೃತ್ತಿಪರ ಶಿಕ್ಷಣವನ್ನು ಮುಗಿಸಿದರು. ನಂತರ 2007ರಲ್ಲಿ ಸಹಶಿಕ್ಷಕರಾಗಿ ಸಕರ್ಾರಿ ಸೇವೆಗೆ ಸೇರಿಕೊಂಡರು. ಇದರಿಂದ ಸಮಸ್ಥ ವಿದ್ಯಾಥರ್ಿ ಬಳಗ ಅನಾಥವಾದಂತಾಗಿತ್ತು.

2010/11ರಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದರು. ಈ ಸ್ನಾತಕೋತ್ತರ ಪದವಿ ಪಡೆಯುವ ಸಮಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಅವಿರತವಾಗಿ ಶ್ರಮಿಸಿದ್ದಾರೆ. ಹೀಗೆ ಸಕರ್ಾರಿ ಸೇವೆಯಲ್ಲಿದ್ದುಕೊಂಡೇ, ದಲಿತರ ಏಳ್ಗೆಗಾಗಿ, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಹೋರಾಟವನ್ನು ವೈಯಕ್ತಿಕವಾಗಿ ಮುನ್ನಡೆಸಿಕೊಂಡು ಹೊರಟಿದ್ದಾರೆ.

ಇಂತಹ ಕೆಚ್ಚೆದೆಯ ದಲಿತಪರ ಹೋರಾಟಗಳನ್ನು ಮೈಗೂಡಿಸಿಕೊಳ್ಳಲು ನಗನೂರು ಭೀಮಣ್ಣ, ಬಾಲಸ್ವಾಮಿಕೊಡ್ಲಿ ಮಾನ್ವಿಯ ಯಲ್ಲಪ್ಪ ನಕ್ಕುಂದಿ, ಚಿನ್ನಪ್ಪ ಕೊಟ್ರಿಕಿಯಂತಹ ನಾಯಕರು ಪ್ರೇರಣಿಯಾಗಿದ್ದರು.

ಇಂದು ನಿಂಗಪ್ಪ ಕಡೇಮನಿಯವರ ಸಾಮಾಜಿಕ ಕಳಕಳಿಯನ್ನು ಪರಿಗಣಿಸಿರುವ ಅಖಿಲ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ, "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್" ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
VKBH

ಮಾಯಾವತಿಯವರ ಉತ್ತರಪ್ರದೇಶ ವಿಭಜನೆ ಯೋಜನೆಯಲ್ಲಿ ತಪ್ಪೇನಿದೆ..?

ಉತ್ತರ ಪ್ರದೇಶವನ್ನು 4 ರಾಜ್ಯಗಳನ್ನಾಗಿ ವಿಭಜಿಸಲು ಆ ರಾಜ್ಯದ ಮುಖ್ಯಮಂತ್ರಿ ಕು.ಮಾಯಾವತಿ ನಿರ್ಧರಿಸಿದ್ದಾರೆ ಒಂದರ್ಥದಲಿ ಮಾಯಾವತಿಯವರ ಈ ನಿಧರ್ಾರ ಎಲ್ಲರಿಗೂ ಆಶ್ಚರ್ಯಕರ. ಹಾಗೆ ಕೆಲವರಿಗೆ ಆಘಾತಕಾರಿಯಾಗಿಯೂ ಪರಿಣಮಿಸಿದೆ! ಅರೆರೆ..! ಇದೇನಿದು? ಮಾಯಾವತಿ ಸ್ವತಃ ತಾವು ಆಳ್ವಿಕೆ ನಡೆಸುತ್ತಿರುವ ದೇಶದ ಬೃಹತ್ರಾಜ್ಯವನ್ನು ಸ್ವತಃ ತಾವೇ ವಿಭಜಿಸಲು ಹೊರಟಿದ್ದಾರಲ್ಲ ಎಂದು ಕೆಲವರಿಗೆ ಆಶ್ಚರ್ಯಕರವೆನಿಸಿದರೆ. ಇನ್ನೂ ಕೆಲವರಿಗೆ ಇದೇನಿದು ಮಾಯಾವತಿಯವರ ಹೊಸ ವರಸೆ? ಇದನ್ನು ಬೆಂಬಲಿಸಬೇಕೋ ಬೇಡವೋ ಎಂಬ ಗೊಂದಲ ಕಾಡುತ್ತಿದೆ. ಅಂದಹಾಗೆ ಈ ಸಂಧರ್ಭದಲ್ಲಿ ಮಾಯಾವತಿಯವರ ಈ ನಿಧರ್ಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಯಾವತಿಯವರು ತಮ್ಮ ರಾಜ್ಯವನ್ನು ನಾಲ್ಕು ಹೋಳುಗಳಾಗಿ ವಿಭಜಿಸುವುದನ್ನು ಇದ್ದಕ್ಕಿದಂತೆ ಮಾಡಿದರೆ? ಯಾರನ್ನೋ ಗೊಂದಲಕ್ಕೆ ನೂಕಬೇಕು, ಆ ಗೊಂದಲದಲ್ಲಿ ತನ್ನ ಬೇಳೆ ಬೆಯಿಸಿಕೊಳ್ಳಬೇಕು ಎಂದು ಇದನ್ನು ಮಾಡಿದರೆ? ಎಂಬುವುವೇ ಆ ಪ್ರಶ್ನೆಗಳು. ಕಾರಣವಿಷ್ಟೆ ರಾಜ್ಯವನ್ನು 4 ಹೋಳುಗಳಾಗಿ ವಿಭಜಿಸಲು ನಿಧರ್ಾರಕೈಗೊಂಡು ಮಾರನೇ ದಿನಕ್ಕೆ ಎಲ್ಲರೂ ಹೇಳುತ್ತಿರುವುದು, ವಿಶೇಷವಾಗಿ ಮಾಯಾವತಿಯವರ ಶೈಲಿಯಲ್ಲೇ ಹೇಳುವುದಾದರೆ ಮನುವಾದಿಗಳು ಹೇಳುತ್ತಿರುವುದು ಆಢಳಿತ ವಿರೋಧಿ ಅಲೆಯಿಂದ ಹೊರಬರಲು ಭ್ರಷ್ಟಾಚಾರದ ಪ್ರಕರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು, ವಿರೋಧಿಗಳ ಬಾಯಿ ಮುಚ್ಚಿಸಲು ಮಾಯಾವತಿ ಈ ನಿಧರ್ಾರ ಕೈಗೊಂಡಿದ್ದಾರೆ. ಹಾಗೆ ಹೀಗೆ. ಒಂದಂತು ನಿಜ ಒಂದೊಂದು ಕಡೆಯಿಂದಲೂ ಒಂದೊಂದು ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ .ಆದರೆ? ಪ್ರಶ್ನೆ ಏನೆಂದರೆ ಇದೇ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದರೆ? ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಕ್ಷಣ ಉತ್ತರಪ್ರದೇಶವನ್ನು ನಾಲ್ಕು ರಾಜ್ಯವನ್ನಾಗಿ ವಿಭಜಿಸುವುದು ಎಂದು ರಾಹುಲ್ ಆಶ್ವಾಸನೆ ನೀಡಿದ್ದರೆ? ಖಂಡಿತ ಅದು ಚಾಣಾಕ್ಷ ನಿಧರ್ಾರವಾಗುತ್ತಿತ್ತು. ರಾಹುಲ್ ಬುದ್ಧಿವಂತ ರಾಜಕಾರಣಿ ಎನಿಸಿಕೊಳ್ಳುತ್ತಿದ್ದರು! ಆದರೆ ಈಗ? ಮಾಯಾವತಿಯವರ ಈ ದೂರದೃಷ್ಟಿಯ ನಿಧರ್ಾರಕ್ಕೆ ಕಲ್ಲೆಸೆಯುವ ಕೆಲಸ ನಡೆಯುತ್ತಿದೆ.
ಏನು ತೆಲಂಗಾಣ, ವಿಧರ್ಭ, ಗೂಖರ್ಾಲ್ಯಾಂಡ್ ಇತ್ಯಾದಿ ಪ್ರತ್ಯೇಕ ರಾಜ್ಯಗಳ ಬೇಡಿಕೆಗಳ ಹೋರಾಟಗಳಿಗೆಲ್ಲ ಇನ್ನಿಲ್ಲದ ಪ್ರಚಾರ, ಬೆಂಬಲ ನೀಡಲಾಗುತ್ತಿದೆಯೋ, ಅದೇ ಕೆಲಸವನ್ನು ದಲಿತ ಹೆಣ್ಣು ಮಗಳೊಬ್ಬಳು ಯಾವುದೇ ರಕ್ತಪಾತವಿಲ್ಲದೆ, ಪ್ರತಿಭಟನೆ, ರಸ್ತೆ ತಡೆ, ರೈಲುಗಳಿಗೆೆ ಬೆಂಕಿ ಹಚ್ಚುವುದು ಇತ್ಯಾದಿ ಪ್ರಭುತ್ವ ವಿರೋಧಿ ಕೃತ್ಯಗಳಿಲ್ಲದೆ ಮಾಡಿದರೆ ಅದರಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಡೆಯುತ್ತಿರುವುದು ದುರಂತವೇ ಸರಿ. ಮೇಲ್ಜಾತಿಗಳು ಒಳ್ಳೆಯ ಕೆಲಸ ಮಾಡಿದರೆ ಅದು ಶ್ರೇಷ್ಠ. ಅದೇ ಕೆಲಸವನ್ನು ಮಾಯಾವತಿಯಂತಹ ದಲಿತ ಹೆಣ್ಣು ಮಗಳು ಮಾಡುತ್ತಿರುವುದು ತಪ್ಪಾಗಿ ಕಾಣಿಸುತ್ತಿದೆ. ಅದೇನೆ ಇರಲಿ, ಮಾಯಾವತಿಯವರು ಮಾಡಹೊರಟಿರುವುದು ತಪ್ಪೇ? ಅವರ ಎದುರಾಳಿಗಳು ಬೆಹನ್ಜೀಯ ಆ ನಿಧರ್ಾರದ ವಿರುದ್ಧ ನೀಡುತ್ತಿರುವ ಸಬೂಬುಗಳು ಸರಿಯೇ? ಎಂಬುವು ಮಾತ್ರ ತುತರ್ಿನ ಪ್ರಶ್ನೆಗಳಾಗಿವೆ.

ಮೊದಲಿಗೆ ಉತ್ತರಪ್ರದೇಶವನ್ನು ನಾಲ್ಕು ರಾಜ್ಯಗಳನ್ನಾಗಿ ವಿಭಜಿಸುವ ಕನಸು ಮತ್ತು ಅಭಿಪ್ರಾಯ ಯಾರದ್ದಾಗಿತ್ತು ಎಂದು ತಿಳಿಯುವುದು ಸೂಕ್ತ. ವಾಸ್ತವವಾಗಿ ಮಾಯಾವತಿಯವರು ಹಿಂದೆ ಅಂಬೇಡ್ಕರರು ಹೇಳಿದ್ದ ಮಾತುಗಳನ್ನು ಈಗ ಪಾಲಿಸುತ್ತಿದ್ದಾರಷ್ಟೇ..

ಉತ್ತರ ಪ್ರದೇಶದಲ್ಲಿ ಮಾಯಾವತಿ ಎಂದಾಕ್ಷಣ ಎಲ್ಲರಿಗೆ ಗೋಚರವಾಗುವುದು ಅವರುಗಳು ಅಲ್ಲಿ ನಿಮರ್ಿಸಿರುವ ಅಂಬೇಡ್ಕರ್, ಕಾನ್ಸಿರಾಂ, ಬುದ್ದ, ಪೆರಿಯಾರರ ಪ್ರತಿಮೆಗಳು. ಆದರೆ ಮಾಯಾವತಿಯವರು ಬರೀ ಪ್ರತಿಮೆಗಳನ್ನಷ್ಟೆ ಉತ್ತರ ಪ್ರದೇಶದಲ್ಲಿ ನಿಮರ್ಿಸಿಲ್ಲ! ಆ ಪ್ರತಿಮೆಗಳ ಸಿದ್ದಾಂತಗಳನ್ನೂ ಆ ರಾಜ್ಯದಲ್ಲಿ ನಿಮರ್ಿಸಿದ್ದಾರೆ. ಬರೀ ಅವುಗಳು ಪ್ರತಿಮೆಗಳೇ ಆಗಿದ್ದರೆ ಅವರು ಯಾವೊತ್ತೊ ಆ ರಾಜ್ಯದಿಂದ ಹೇಳ ಹೆಸರಿಲ್ಲದಂತಾಗಿರುತ್ತಿದ್ದರು. ಅಧಿಕಾರ ಕಳೆದುಕೊಳ್ಳುತ್ತಿದ್ದರು. ಆದರೆ ಆ ಪ್ರತಿಮೆಗಳಲ್ಲಿನ ದಾರ್ಶನಿಕರ ಸಿದ್ದಾಂತವನ್ನು ಆ ರಾಜ್ಯದಲ್ಲಿ ಅವರು ಜಾರಿಗೆ ತಂದಿರುವುದು ಅವರನ್ನು ಉತ್ತರಪ್ರದೇಶದಲ್ಲಿ ಭದ್ರವಾಗಿ ಉಳಿಯುವಂತೆ ಮಾಡಿದೆ. ಇದೇ ಕಾರಣಕ್ಕೆ ಮಾಯಾವತಿ ಉತ್ತರಪ್ರದೇಶದಲ್ಲಿ ಬೆಳೆದುನಿಂತಿರುವುದು.

ಉತ್ತರಪ್ರದೇಶದಲ್ಲಿ ಪ್ರತಿಮೆಗಳು ಎಂದಾಕ್ಷಣ ಮೇರುಸ್ಥಾನದಲ್ಲಿ ನೆನಪಿಗೆ ಬರುವುದು ಅಂಬೇಡ್ಕರ್ ಪ್ರತಿಮೆ ಮತ್ತು ಅವರ ಸಿದ್ದಾಂತ. ಹೌದು, ಮಾಯಾವತಿ ಉತ್ತರ ಪ್ರದೇಶದಲ್ಲಿ ಪ್ರತಿಯೊಂದು ಹಂತದಲ್ಲೂ ಅಂಬೇಡ್ಕರ್ ಸಿದ್ದಾಂತವನ್ನು ಅವರ ಆಸೆ ಆಕಾಂಕ್ಷೆಗಳನ್ನು ಜಾರಿಗೊಳಿಸಲು ಹೊರಟಿದ್ದಾರೆ. ರಾಜ್ಯದಲ್ಲಿನ ಶಾಂತಿ ಸುವ್ಯವಸ್ಥೆ, ದಲಿತರ ಸಬಲೀಕರಣ ಎಲ್ಲವನ್ನು ಮಾಯಾವತಿಯವರು ಅಂಬೇಡ್ಕರ್ರ ಸಿದ್ದಾಂತದ ಅನ್ವಯ ಜಾರಿ ಮಾಡಲು ಹೊರಟಿದ್ದಾರೆ.

ಅದರ ಮುಂದುವರೆದ ಭಾಗವಾಗಿ ಈಗ ಉತ್ತರಪ್ರದೇಶದ ವಿಭಜನೆ ನಡೆದಿದೆ. ಅಂದೇ ಉತ್ತರಪ್ರದೇಶವನ್ನು ಜನಸಂಖ್ಯಾ ಆದಾರದ ಮೇಲೆ ವಿಭಜನೆ ಮಾಡಬೇಕೆಂದು ಅಂಬೇಡ್ಕರ್ ಹೇಳಿದ್ದರು. ಅದು ಈಗ ಜಾರಿಯಾಗುತ್ತಿದೆಯಷ್ಟೇ..

ಅರೆ! ಇದೇನಿದು ಅಂಬೇಡ್ಕರ್ ಕನಸು? ಉತ್ತರಪ್ರದೇಶದ ವಿಭಜನೆಗೂ ಅಂಬೇಡ್ಕರ್ರ ಹೊರಾಟಕ್ಕೂ ಎತ್ತಣಿದಿಂದೆತ್ತಣ ಸಂಬಂಧ ಎಂದು ಕೆಲವರಿಗಾದರೂ ಅನಿಸಬಹುದು. ಆದರೆ ಈ ದೇಶದ ಸಂವಿಧಾನ ಶಿಲ್ಪಿ ಯಾರು ಎಂದರೆ? ಖಂಡಿತ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

ದೇಶದ ಸಂವಿಧಾನ ರಚನೆಯ ಹೊಣೆ ಹೊತ್ತ ಅಂಬೇಡ್ಕರ್ರ ಮುಂದೆ ಭಾಷಾವಾರು ರಾಜ್ಯಗಳ ರಚನೆಯ ಪ್ರಶ್ನೆಯೂ ಬಂತು. ಆ ಸಂದರ್ಭದಲ್ಲಿ ಅಂಬೇಡ್ಕರ್ರು ತಮ್ಮ ಭéಾಷಾವಾರು ರಾಜ್ಯಗಳು ಎಂಬ ಕೃತಿಯನ್ನು ಬರೆದಿದ್ದಾರೆ. ಆ ಕೃತಿಯಲ್ಲಿ ಅಂಬೇಡ್ಕರ್ರು ಭಾಷಾವಾರು ರಾಜ್ಯ ರಚನೆಯ ಆಗುಹೊಗುಗಳು, ಅಂತಹ ಭಾಷಾವಾರು ರಾಜ್ಯಗಳ ನಕ್ಷೆಗಳು, ಅದರ ಸಾಧಕ-ಭಾಧಕಗಳು, ಅಂಕಿಅಂಶಗಳು ಇತ್ಯಾದಿಗಳನ್ನು ಸಮಗ್ರವಾಗಿ ಚಚರ್ಿಸಿದ್ದಾರೆ. ಮಾಯಾವತಿಯವರ ರಾಜ್ಯ ವಿಭಜನೆ ಹಿಂದೆ ಕೆಲಸ ಮಾಡಿರುವುದೇ ಅಂಬೇಡ್ಕರ್ರ ಆ ಕೃತಿ.

ಹಾಗಿದ್ದರೆ ಭಾಷಾವಾರು ಪ್ರಾಂತ್ಯದ ರಚನೆಯ ಬಗ್ಗೆ ಅಂಬೇಡ್ಕರರು ಅಂದು ಹೇಳಿದ್ದಾದರೂ ಏನು? ಉತ್ತರ ಪ್ರದೇಶ ರಾಜ್ಯ ವಿಭಜನೆಗೆ ಅವರ ಸಲಹೆಯಾದರೂ ಏನು? ಅಂಬೇಡ್ಕರರ ಪ್ರಕಾರ ಸಂವಿದಾನದ ವಿಧಿ 3ನೇ ನಿಯಮದ ಅನ್ವಯ ರಾಜ್ಯ ಪುನವರ್ಿಂಗಡಣಾ ಆಯೋಗವನ್ನು ಆಗಿನ ನೆಹರೂರವರ ಸಕರ್ಾರ ನೇಮಿಸಿತ್ತು. ಮತ್ತು ಹಾಗೆ ನೇಮಿಸಲ್ಪಟ್ಟ ಆಯೋಗ ತನ್ನ ವರದಿಯನ್ನೂ ಸಹ ಸಲ್ಲಿಸಿತು. ಅಂದಹಾಗೆ ಆ ವರದಿ 16 ಭಾಷಾವಾರು ಪ್ರಾಂತ್ಯಗಳನ್ನು ರಚಿಸಲು ಶಿಫಾರಸ್ಸು ಮಾಡಿತು. ಬೇರೆ-ಬೇರೆ ಭಾಷೆಗಳಿಗೆ 13 ರಾಜ್ಯಗಳಾದರೆ, ಹಿಂದಿ ಭಾಷೆಗೆ ಕೇವಲ 3 ರಾಜ್ಯಗಳನ್ನು ಆ ಆಯೋಗ ಸೃಷ್ಟಿಸಿತು! ವಾಸ್ತವವೆಂದರೆ, ಈ ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ. 48, ಆದರೆ ಆ ಭಾಷೆಗೆ ಕೇವಲ ಮೂರೇ ರಾಜ್ಯಗಳು! ಅದೂ ಎಂತಹ ರಾಜ್ಯಗಳೆಂದರೆ, ಅವುಗಳು ಬೃಹತ್ ಗಾತ್ರದ, ಬೃಹತ್ ಜನಸಂಖ್ಯೆಯ ರಾಜ್ಯಗಳಾಗಿದ್ದವು. ಉತ್ತರ ಪ್ರದೇಶ, ಮದ್ಯಪ್ರದೇಶ, ಬಿಹಾರವೇ ಆ ಮೂರು ರಾಜ್ಯಗಳು.

ಉತ್ತರ ಪ್ರದೇಶ 1,13,410 ಚದರ ಮೈಲು ವಿಸ್ತೀರ್ಣ, 6.32ಕೋಟಿ ಜನಸಂಖ್ಯೆ. ಮದ್ಯಪ್ರದೇಶ 1,71,200 ಚದರ ಮೈಲು ವಿಸ್ತೀರ್ಣ, 2.61 ಕೋಟಿ ಜನಸಂಖ್ಯೆ. ಬಿಹಾರ 66,530 ಚದರ ಮೈಲು ವಿಸ್ತೀರ್ಣ, 3.83 ಕೋಟಿ ಜನಸಂಖ್ಯೆ (1941 ಜನಗಣತಿ ಆಧಾರ). ಒಟ್ಟಾರೆ ಮೂರು ರಾಜ್ಯಗಳು ವಿಸ್ತೀರ್ಣ ಮತ್ತು ಜನಸಂಖ್ಯೆ ದೃಷ್ಟಿಯಿಂದ ಬೃಹತ್ ರಾಜ್ಯಗಳು.

ಅಂಬೇಡ್ಕರರು ಪ್ರಶ್ನಿಸಿರುವುದೇ ಇದನ್ನು.. ರಾಜ್ಯಗಳ ವಿಂಗಡಣಾ ಆಯೋಗ ರಾಜ್ಯಗಳ ಗಾತ್ರವನ್ನು ಜನಸಂಖ್ಯೆಯ ಸಮಾನತೆಯ ಆಧಾರದ ಮೇಲೆ ವಿಂಗಡಿಸಲು ಹೋಗಿಲ್ಲ ಎಂಬುದು ಅವರ ಅಕ್ಷೇಪಣೆಯಾಗಿತ್ತು. ಅವರ ಪ್ರಕಾರ ರಾಜ್ಯಗಳನ್ನು ವಿಂಗಡಿಸಲು ಆಯೋಗ 2 ಕೋಟಿ ಜನಸಂಖ್ಯೆಯ ಮಾನದಂಡವನ್ನು ಇಟ್ಟುಕೊಳ್ಳ ಬೇಕಾಗಿತ್ತು ಎಂಬುದಾಗಿತ್ತು. ಆದರೆ ಇದ್ಯಾವುದನ್ನು ಪರಿಗಣಿಸದೆ ಆಯೋಗ ಎ.ಸಿ.ರೂಮಿನಲ್ಲಿ ಕುಳಿತು ಮನಸೋ ಇಚ್ಛೆ ವರದಿ ತಯಾರಿಸಿದೆ ಎಂಬುದು ಅಂಬೇಡ್ಕರರ ಆರೋಪವಾಗಿತ್ತು. ಅಂದಹಾಗೆ ಆಯೋಗದ ಇಂತಹ ಗೊತ್ತು ಗುರಿ ಇಲ್ಲದ ವರದಿಯಿಂದ ಉತ್ತರ ಭಾರತದಲ್ಲಿ ದೊಡ್ಡ ದೊಡ್ಡ ರಾಜ್ಯಗಳೂ ಹಾಗೂ ದಕ್ಷಿಣ ಭಾರತದಲ್ಲಿ ಸಣ್ಣ ಸಣ್ಣ ರಾಜ್ಯಗಳು ನಿಮರ್ಾಣವಾಗಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಒಂದು ಹೊಸ ಸಮಸ್ಯೆಯೇ ಸೃಷ್ಟಿಯಾಗಿದೆ ಎಂಬುದು ಕೂಡ ಆ ಸಂದರ್ಭದಲ್ಲಿ ಅಂಬೇಡ್ಕರರ ಗಂಭೀರ ಆರೋಪವಾಗಿತ್ತು. ಅದರಲ್ಲೂ ಉತ್ತರ ಪ್ರದೇಶವನ್ನು ಒಂದು ಬೃಹತ್ ರಾಜ್ಯವಾಗಿ ಇರಲು ಬಿಟ್ಟಿದ್ದನ್ನು ಅವರು ಅಂತಹ ರಾಜ್ಯ ಕೇಂದ್ರದ ಮೇಲೆ ವಿಪರೀತ ಪ್ರಭಾವ ಬೀರುತ್ತದೆ ಮತ್ತು ಅದು ನಿಜಕ್ಕು ಅಪಾಯಕಾರಿ ಸಂಗತಿ ಎಂದು ಆ ಕಾಲದಲ್ಲೆ ತಮ್ಮ ಆತಂಕ ವ್ಯಕ್ತಪಡಿಸಿದ್ದರು!

ಅಂದಹಾಗೆ, ಅಂಬೇಡ್ಕರರ ಅಂದಿನ ಆತಂಕ ಸುಳ್ಳಾ ಯಿತೇ? ಖಂಡಿತ ಇಲ್ಲ. ಏಕೆಂದರೆ ಉತ್ತರ ಪ್ರದೇಶವೆಂಬ ಬೃಹತ್ ರಾಜ್ಯ ಇದುವರೆಗೆ ಈ ದೇಶಕ್ಕೆ ಬರೋಬ್ಬರಿ 8 ಪ್ರಧಾನಮಂತ್ರಿಗಳನ್ನು ಕೊಟ್ಟಿದೆ. ಅಲ್ಲದೆ ಈ ದೇಶದ ಮುಂದಿನ ಪ್ರಧಾನ ಮಂತ್ರಿಗಳಾಗಿ ಬಿಂಬಿತರಾಗುತ್ತಿರುವವರಾದರೂ ಯಾರು? ಅವರುಗಳು ಕೂಡ ಉತ್ತರ ಪ್ರದೇಶದವರೆ! ಸ್ವತಃ ಮಾಯಾವತಿ ಅವರಲ್ಲೊಬ್ಬರಾದರೆ ಸೋನಿಯಾಗಾಂಧಿ ಪುತ್ರ ರಾಹುಲ್ ಗಾಂಧಿ ಮತ್ತೊಬ್ಬರು. ಹೀಗಿರುವಾಗ ಉತ್ತರ ಪ್ರದೇಶವೆಂಬ ಆ ಬೃಹತ್ ರಾಜ್ಯ ಕೇಂದ್ರದ ಮೇಲೆ ಈ ಪರಿಯ ಪ್ರಭಾವ ಬೀರುತ್ತಿರುವಾಗ ಅಂಬೇಡ್ಕರ್ರವರು ಅಂದು ವ್ಯಕ್ತಪಡಿಸಿದ ಆತಂಕದಲ್ಲಿ ತಪ್ಪಾದರು ಏನಿದೆ?

ಉತ್ತರ ಭಾರತದ ರಾಜ್ಯಗಳು ದಕ್ಷಿಣ ಭಾರತದ ರಾಜ್ಯಗಳ ಮೇಲೆ ದಬ್ಬಾಳಿಕೆ ನಡೆಸಬಹುದೆಂದು ಆ ಕಾಲದಲ್ಲೇ ಸ್ವತಃ ಕಾಂಗ್ರೆಸ್ ನಾಯಕರಾದ ಸಿ. ರಾಜಗೋಪಾಲಚಾರಿಯವರು ಅನುಮಾನ ವ್ಯಕ್ತಪಡಿಸಿದ್ದರು. ರಾಜಗೋಪಾಲಚಾರಿಯವರ ಆ ಅಭಿಪ್ರಾಯಗಳನ್ನು ಅಂಬೇಡ್ಕರರು ತಮ್ಮ ಆ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಒಂದು ಸಂದರ್ಭದಲ್ಲಿ ರಾಜಗೋಪಾಲಚಾರಿಯವರು ಅಂಬೇಡ್ಕರ್ರವರ ಜೊತೆಯಲ್ಲಿ ಮಾತನಾಡುತ್ತಾ ಹೀಗೆ ಹೇಳುತ್ತಾರೆ. ನೀವು ತುಂಬಾ ದೊಡ್ಡತಪ್ಪು ಮಾಡುತ್ತಿದ್ದೀರಿ. ಇಡೀ ಭಾರತಕ್ಕೆ ಎಲ್ಲಾ ಪ್ರದೇಶಗಳಿಗೂ ಸಮಾನ ಪ್ರಾತಿನಿದ್ಯ ವಿರುವ ಒಂದೇ ಗಣರಾಜ್ಯವಿರುವುದು ವ್ಯಾವಹಾರಿಕವಲ್ಲ. ಅಂತಹ ಗಣ ರಾಜ್ಯದಲ್ಲಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಾ ಧ್ಯಕ್ಷರಿಬ್ಬರೂ ಯಾವಾಗಲೂ ಹಿಂದೀ ಮಾತನಾಡುವ ಪ್ರದೇಶದವರೇ ಆಗಿರುತ್ತಾರೆ. ಆ ಕಾರಣದಿಂದ ನೀವು ಎರಡು ಗಣರಾಜ್ಯಗಳನ್ನು ರೂಪಿಸಬೇಕು. ಒಂದು ಉತ್ತರ ಭಾರತದ ಗಣರಾಜ್ಯ. ಮತ್ತೊಂದು ದಕ್ಷಿಣ ಭಾರತದ ಗಣರಾಜ್ಯ. ಅವೆರ ಡನ್ನು ಸೇರಿಸಿ ಒಂದು ಸಂಯುಕ್ತ ಗಣರಾಜ್ಯವನ್ನು ನಿಮರ್ಿಸ ಬೇಕು. ಅದರಲ್ಲಿ ಮೂರು ಪ್ರಮುಖ ವಿಷಯಗಳ ಬಗ್ಗೆ (ರಕ್ಷಣೆ, ಹಣಕಾಸು, ಗೃಹ) ಮಾತ್ರ ಆ ಸಂಯುಕ್ತ ಆಡಳಿತ ಗಮನಹರಿಸ ಬೇಕು. ಆ ಸಂಯುಕ್ತ ಗಣರಾಜ್ಯದಲ್ಲಿ ಉತ್ತರ ಮತ್ತು ದಕ್ಷಿಣ ಎರಡೂ ಗಣ ರಾಜ್ಯಗಳಿಗೂ ಸಮಾನ ಪ್ರಾತಿನಿದ್ಯವಿರಬೇಕು. ಇದು ರಾಜಾಜಿಯವರ ಪ್ರ್ರಾಮಾಣಿಕ ಅಭಿಪ್ರಾಯ.

ಇದನ್ನೇ ಅಂಬೇಡ್ಕರ್ರವರು ನಾವು ಉತ್ತರವನ್ನು ಬಲಪಡಿಸಿ ದಕ್ಷಿಣವನ್ನು ಒಡೆಯುವ ಪ್ರಯತ್ನದಲ್ಲಿ ಕೇವಲ ಭಾಷಾ ಸಮಸ್ಯೆಯನ್ನು ಮಾತ್ರ ಪರಿಗಣಿಸಬಾರದು, ರಾಜಕೀಯ ಸಮಸ್ಯೆಯನ್ನೂ ಸಹ ಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜ್ಯಗಳ ಪುನರ್ ವಿಂಗಡಣಾ ಆಯೋಗಕ್ಕೆ ಎಚ್ಚರಿಕೆ ನೀಡಿ ದ್ದರು! ಹಾಗೆಯೇ ಉತ್ತರ ಮತ್ತು ದಕ್ಷಿಣದವರ ಮದ್ಯೆ ಏಳಬಹು ದಾದ ಅಂತಹ ರಾಜಕೀಯ ಸಂಘರ್ಷಕ್ಕೆ ಈಗಿಂದೀಗಲೇ ಸೂಕ್ತಕ್ರಮಕೈಗೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದರು.

ಹಾಗಿದ್ದರೆ ಅಂದರೆ ಉತ್ತರ ಮತ್ತು ದಕ್ಷಿಣ ಭಾರತದ ಮಧ್ಯೆ ಏಳಬಹುದಾದ ರಾಜಕೀಯ ಸಂಘರ್ಷದ ಪರಿಹಾರಕ್ಕೆ ಅಂಬೇಡ್ಕರ್ರವರು ಅಂದು ನೀಡಿದ ಸಲಹೆಯಾದರೂ ಏನು ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೋದರೆ, ನಮಗೆ ಸಿಗುವುದು ಉತ್ತರದ ವಿಭಜನೆ ಎಂಬುದು.

ಹೌದು, ಅಂಬೇಡ್ಕರ್ರವರು ಅಂದು ಹೇಳಿದ್ದು, ಉತ್ತರ ಭಾರತದ ಮೂರು ಬೃಹತ್ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳನ್ನು ವಿಭಜಿಸಬೇಕು ಎಂಬುದು. ಸ್ವತಃ ಅಬೇಂಡ್ಕರ್ರವರ ಮಾತುಗಳನ್ನು ಇಲ್ಲಿ ಹೇಳುವುದಾದರೆ ನಾನು ಈಗಾಗಲೇ ಹೇಳಿರುವಂತೆ ಭಾಷಾವಾರು ರಾಜ್ಯಗಳ ರೂಪುರೇಖೆ ಹಾಕವುದರಲ್ಲಿ ಆಯೋಗ ಉತ್ತರವನ್ನು ಬಲಪಡಿಸಿ ದಕ್ಷಿಣವನ್ನು ಒಡೆದಿದೆ. ನನಗೆ ಗೊತ್ತು ಆಯೋಗವು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಆದರೆ ಉದ್ದೇಶಪೂರ್ವಕ ವೋ ಅಥವಾ ಇಲ್ಲವೋ ತಪ್ಪು ಆಗಿರುವುದಂತೂ ಸತ್ಯ. ಹಾಗೆ ಅದರ ಕೆಟ್ಟಪರಿಣಾಮಗಳೂ ಕೂಡ ಅಷ್ಟೇ ಸುಸ್ಪಷ್ಟ. ಆದ್ದರಿಂದ ಈ ಪರಿಸ್ಥಿತಿಯನ್ನು ಸರಿಪಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಇದಕ್ಕಿರುವ ಏಕೈಕ ಮಾರ್ಗವೆಂದರೆ ಉತ್ತರ ಭಾರತದ ಮೂರು ಬೃಹತ್ ರಾಜ್ಯಗಳಾದ 1. ಉತ್ತರಪ್ರದೇಶ, 2. ಮಧ್ಯಪ್ರದೇಶ, 3. ಬಿಹಾರಗಳನ್ನು ಸಣ್ಣಸಣ್ಣ ಭಾಗಗಳಾಗಿ ವಿಭಜಿಸುವುದು. ಇದು ಉತ್ತರ ಭಾರತದ ವಿಭಜನೆಗೆ ಸಂಬಂದಿಸಿದಂತೆ ಅಂಬೇಡ್ಕರರ ಅಭಿಪ್ರಾಯ.

ಅವರ ಅಭಿಪ್ರಾಯದಂತೆ ಈಗಾಗಲೇ ಬಿಹಾರ ಮತ್ತು ಮಧ್ಯಪ್ರದೇಶಗಳನ್ನು ವಿಭಜಿಸಲಾಗಿದೆ. ಬಿಹಾರವನ್ನಂತೂ ಅಂಬೇಡ್ಕರ್ರವರು ಹೇಗೆ ಹೇಳಿದ್ದರೋ ಹಾಗೆಯೇ ವಿಭಜಿಸಲಾಗಿದೆ!. ವ್ಯತ್ಯಾಸವೆಂದರೆ ಅಂಬೇಡ್ಕರ್ ವಿಭಜಿತ ಬಿಹಾರವನ್ನು ದಕ್ಷಿಣ ಬಿಹಾರವೆಂದಿದ್ದರು. ಆದರೆ, ಈಗ ಅದನ್ನು ಜಾರ್ಖಂಡ್ ರಾಜ್ಯವೆಂದು ಕರೆಯಲಾಗಿದೆ. ಅಂಬೇ ಡ್ಕರ್ರವರು ಹೇಳಿದ್ಧ ಹಾಗೆ ರಾಂಚಿಯನ್ನೇ ಅದರ ರಾಜಧಾನಿ ಯನ್ನಾಗಿ ಮಾಡಲಾಗಿದೆ! ಮಧ್ಯಪ್ರದೇಶವನ್ನೂ ಅಷ್ಟೆ. ಅಂಬೇ ಡ್ಕರ್ರವರು ಅದನ್ನು ಉತ್ತರ ಮಧ್ಯಪ್ರದೇಶ ಮತ್ತು ದಕ್ಷಿಣ ಮಧ್ಯಪ್ರದೇಶ ಎಂಬ ಎರಡು ರಾಜ್ಯಗಳಾಗಿ ವಿಭಜಿಸಲು ಸಲಹೆ ನೀಡಿದ್ದರು. ಅದರಂತೆ ವಿಭಜಿಸಿ ದಕ್ಷಿಣ ಮಧ್ಯಪ್ರದೇಶಕ್ಕೆ ಛತ್ತೀಸ್ಗಢ ಎಂದು ಹೆಸರಿಡಲಾಗಿದೆ. ಉತ್ತರ ಪ್ರದೇಶವನ್ನು ಮಾತ್ರ ಹಾಗೇಯೇ ಕರೆಯಲಾಗಿದೆ.

ಈ ದೇಶದಲ್ಲಿ ಉತ್ತರಪ್ರದೇಶವೊಂದೇ ಅಂತಹ ವಿಭಜನೆ ಕಾಣದ ಬೃಹತ್ ರಾಜ್ಯ. ಕೆಲವೇವರ್ಷಗಳ ಹಿಂದೆ ಉತ್ತರಖಂಡ ಎಂಬ ಸಣ್ಣ ರಾಜ್ಯ ಅದರಿಂದ ಪ್ರತ್ಯೇಕವಾಯಿ ತಾದರೂ ಒಟ್ಟಾರೆ ಅದರ ಗಾತ್ರ ಮತ್ತು ಜನಸಂಖ್ಯೆಯಲ್ಲಿ ಅಂತಹ ವ್ಯತ್ಯಾಸವೇನು ಕಂಡು ಬಂದಿಲ್ಲ. ಅಲ್ಲದೆ ಅಂಬೇ ಡ್ಕರರು ಅಂದು ಸಲಹೆ ನೀಡಿದ ಪ್ರಕಾರ ಅದರ ವಿಭಜನೆ ನಡೆದಿಲ್ಲ. ಹಾಗಿದ್ದರೆ ಉತ್ತರಪ್ರದೇಶದ ನಿಖರ ವಿಭಜನೆಗೆ ಅಂಬೇಡ್ಕರ್ರವರು ಹೇಳಿದ್ದಾದರೂ ಏನು? ಅವರ ಅಭಿಪ್ರಾ ಯಗಳನ್ನು ಯಥಾವತ್ತಾಗಿ ದಾಖಲಿಸುವುದಾದರೆ ಉತ್ತರ ಪ್ರದೇಶವನ್ನು ಮೂರು ಭಾಗಗಳಾಗಿ ವಿಭಜಿಸಬೇಕು. ಈ 3 ರಾಜ್ಯಗಳಲ್ಲಿ ಪ್ರತಿಯೊಂದರಲ್ಲಿಯೂ ಎರಡು ಕೋಟಿ ಜನಸಂಖ್ಯೆ ಇರಬೇಕು (ಏಕೆಂದರೆ ಆಗಿನ ಉತ್ತರ ಪ್ರದೇಶದ ಜನಸಂಖ್ಯೆ 6.3ಕೋಟಿ). ಸಮರ್ಥ ಆಡಳಿತಕ್ಕಾಗಿ 1 ರಾಜ್ಯದ ಜನಸಂಖ್ಯೆ ಸುಮಾರು ಎರಡು ಕೋಟಿ ಇರಬೇಕೆಂಬುದನ್ನು ಒಂದು ಅಳತೆ ಗೋಲಾಗಿ ಪರಿಗಣಿಸಬೇಕು.

(ಅಂಬೇಡ್ಕರ್ರವರು ಉತ್ತರಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಆ 3 ರಾಜ್ಯಗಳನ್ನು ವಿಭಜಿಸುವ ಭೂಪಟಗಳನ್ನು ತಮ್ಮ ಆ ಕೃತಿಯಲ್ಲಿ ನೀಡಿದ್ದಾರೆ. ಲೇಖಕರು). ಉತ್ತರ ಪ್ರದೇಶದ 3 ರಾಜ್ಯಗಳು 1.ಮೀರತ್, 2.ಕಾನ್ಪುರ, 3.ಅಲಹಾಬಾದ್ಗಳನ್ನು ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಳ್ಳಬೇಕು. ಈ 3ರಾಜ್ಯಗಳಲ್ಲಿ ಪ್ರತಿಯೊಂದರ ಮಧ್ಯಭಾಗದಲ್ಲಿ ಆ ನಗರಗಳು ಇವೆ.

ಉತ್ತರಪ್ರದೇಶದ ವಿಭಜನೆಗೆ ಸಂಬಂದಿಸಿದಂತೆ ಅಂಬೇಡ್ಕರ ರಿಗಿದ್ದ ನಿಲುವನ್ನೇ ಇಂದು ಮಾಯಾವತಿ ಪ್ರಸ್ತಾಪಿಸಲು ಹೊರಟಿದ್ದಾರೆ. ಅಂಬೇಡ್ಕರರ ಅಭಿಪ್ರಾಯವನ್ನು, ಕನಸ್ಸನ್ನು ನನಸುಗೊಳಿಸುವ ಹಿನ್ನೆಲೆಯಲ್ಲಿಯೇ ಕು.ಮಾಯಾವತಿಯವರು ಸಣ್ಣರಾಜ್ಯಗಳ ರಚನೆಗೆ ಅಂಬೇಡ್ಕರರು ಒಲವು ತೋರಿದ್ದರು ಎಂಬ ಪ್ರಮುಖ ಸಮರ್ಥನೆಯನ್ನು ತಮ್ಮ ರಾಜ್ಯ ವಿಭಜನೆ ಯನ್ನು ವಿರೋಧಿಸುವವರಿಗೆ ನೀಡುತ್ತಿದ್ದಾರೆ. ಹಾಗೆಯೇ ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದ್ದಾರೆ.

ಮಾಯಾವತಿಯವರ ಕಾರ್ಯಚರಣೆಯಲ್ಲಿ ಸಣ್ಣ ವ್ಯತ್ಯಾಸವೊಂದಿದೆ. ಅದೆಂದರೆ ಅಂಬೇಡ್ಕರ್ರವರು ಉತ್ತರ ಪ್ರದೇಶವನ್ನು ಪಶ್ಚಿಮ ಭಾಗ, ಮಧ್ಯಭಾಗ, ಮತ್ತು ಪೂರ್ವಭಾಗ ಎಂದು 3 ಭಾಗವಾಗಿ ವಿಂಗಡಿಸಲು ಸಲಹೆ ನೀಡಿದ್ದರು ಆದರೆ, ಬದಲಾದ ಪರಿಸ್ಥಿತಿಯಲ್ಲಿ ಮಾಯಾವತಿಯವರು ಅದನ್ನು 4 ಭಾಗಗಳಾಗಿ ವಿಂಗಡಿಸಲು ಹೊರಟಿದ್ದಾರೆ. ಪಶ್ಚಿಮ ಪ್ರದೇಶ, ಅವಧ್ ಪ್ರಾಂತ್ಯ, ಪೂವರ್ಾಂಚಲ ಮತ್ತು ಬುಂದೇಲ ಖಂಡ, ಎಂಬುವುವೇ ಆ ನಾಲ್ಕು ರಾಜ್ಯಗಳು.

ಒಂದಂತು ನಿಜ, ತಮ್ಮ 4 ಅವದಿಗಳ ಆಡಳಿತದಲ್ಲಿ ಮಾಯಾವತಿಯವರು ದಲಿತರಿಗೆ ಮೀಸಲಾತಿಯನ್ನು ಪರಿ ಪೂರ್ಣವಾಗಿ ಜಾರಿಗೊಳಿಸಿದ್ದಾರೆ. ಬ್ಯಾಕ್ಲಾಗ್ ಹುದ್ದೆಗಳನ್ನೂ ಸಹ ಸಂಪೂರ್ಣವಾಗಿ ಭತರ್ಿಮಾಡಿದ್ದಾರೆ. ಖಾಸಗೀ ಕ್ಷೇತ್ರದಲ್ಲಿ ಶೇ10ರಷ್ಟು ಮೀಸಲಾತಿ ಜಾರಿಗೆ ತಂದಿದ್ದಾರೆ. ಅದರ ಜೊತೆ ಯಲ್ಲಿ ಅಂಬೇಡ್ಕರರ ಸಹಸ್ರಾರು ಪ್ರತಿಮೆಗಳನ್ನು ರಾಜ್ಯಾದ್ಯಂತ ನಿಮರ್ಿಸಿದ್ದಾರೆ. ಇತ್ತೀಚೆಗಷ್ಟೇ 700 ಕೋಟಿ ವೆಚ್ಚದ ವಿಶ್ವದಲ್ಲಿಯೇ ಬೃಹತ್ ಅಂಬೇಡ್ಕರ್ ಉದ್ಯಾನವನ್ನು ದೆಹಲಿಯ ಬಳಿಯ ನೊಯ್ಡಾ (ಗೌತಮಬುದ್ದ ನಗರ)ದಲ್ಲಿ ಉದ್ಘಾಟಿಸಿದ್ದಾರೆ. ಒಟ್ಟಾರೆ ತಮ್ಮ ಪ್ರತಿಯೊಂದು ಯೋಜನೆಗಳಲ್ಲಿ, ಆಲೋಚನೆಗಳಲ್ಲಿ ಮಾಯವತಿಯವರು ಅಂಬೇಡ್ಕರರ ಸಿದ್ದಾಂತ ಮತ್ತು ಹೆಸರನ್ನು ಸಾಕಾರಗೊಳಿಸುತ್ತಿದ್ದಾರೆ. ಹೀಗಿರುವಾಗ ಅಂಬೇಡ್ಕರರ ಆ ಕನಸಿನ ಉತ್ತರ ಪ್ರದೇಶ ರಾಜ್ಯ ವಿಭಜನೆಯ ಕಾರ್ಯವನ್ನು ಮಾಯಾವತಿ ಮಾಡಿದರೇ ತಪ್ಪೇನಿದೆ.

ಮಾಯಾವತಿಯವರ ಈ ನಡೆಯನ್ನು ಆಡಳಿತ ವಿರೋಧಿ ಅಲೆ ತಗ್ಗಿಸಲು, ಭ್ರಷ್ಟಾಚಾರ ಪ್ರಕರಣಗಳಿಂದ ಜನರ ಗಮನ ಬೇರೆಡೆ ಸೆಳೆಯಲು, ಮುಂಬರುವ ಚುನಾವಣೆ ದೃಷ್ಟಿಕೋನ, ರಾಜಕೀಯ ಗಿಮಿಕ್, ಹಾಗೆ ಹೀಗೆ ಏನೆಲ್ಲಾ ಅಂದರೂ ಅದು ಹಾಗೆ ಅನ್ನುವವರ ಮೂರ್ಖತನವಾಗುತ್ತದಷ್ಟೆ.

ರಘೋತ್ತಮ ಹೊ.ಬ

ನಾನು ಬೇಡವಾದೆನಾ.. ನಿಮಗೆ!

ಬಡತನ, ಅನಕ್ಷರತೆಯ ಕೊರತೆಯಿಂದಾಗಿ ಭ್ರೂಣಹತ್ಯೆಯೂ ದೇಶದಲ್ಲಿ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ.. ಸಕರ್ಾರ ಭ್ರೂಣಹತ್ಯೆ ನಿಮರ್ೂಲನೆ ಮಾಡಲು ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಸಾಮಾಜಿಕ ಹೊಣೆಗಾರಿಕೆಯಿಂದ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಜನಸಾಮಾನ್ಯರಿಗೆ ತಿಳಿಸಬೇಕು. ಅಂದಾಗ ಮಾತ್ರ ಭ್ರೂಣಹತ್ಯೆ ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ. ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ಅಂಬಿಕಾವತಿ ಎಂ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗಂಡಿಗಿಂತ ಹೆಣ್ಣಿಗೆ ಉನ್ನತ ಸ್ಥಾನವಿದೆ. ಹೆಣ್ಣು ದೇವತೆಯ ಸ್ವರೂಪಿ, ಮನೆಯ ಲಕ್ಷ್ಮೀಯೆಂದು ಕರೆಯುವುದು ರೂಡಿಯಲ್ಲಿದೆ. ಇದು ಎಲ್ಲರಿಗೆ ಗೊತ್ತಿರುವ ವಿಷಯವು ಹೌದು.

ಇಂದು ನಮ್ಮ ಆಧುನಿಕ ಭಾರತದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಗಂಡಿಗೆ ಸಮನಾಗಿ ಬೆಳೆದು ನಿಂತಿದ್ದಾಳೆ. ಅದು ಸಂತೋಷದ ವಿಷಯ ಆದರೆ, ಅಷ್ಟೇ ಖೇದಕರವಾಗಿ ಮಹಿಳೆ ತಾನು ಬಾಣಂತಿಯ ಸಂದರ್ಭದಲ್ಲಿ ತನ್ನ ಹೊಟ್ಟೆಯಲ್ಲಿ ಹೆಣ್ಣಿದೆ ಎಂದು ಗೊತ್ತಾದರೆ, ಅದನ್ನು ಹತ್ಯೆ (ಭ್ರೂಣಹತ್ಯೆ) ಮಾಡಿಸುವ ಕೆಲಸಕ್ಕೆ ಮುಂದಾಗಿದ್ದಾಳೆ. ಮತ್ತೊಂದೆಡೆ ಅನೈತಿಕ ಸಂಬಂಧಗಳಿಂದ ಹುಟ್ಟುವ ಮಗುವು ಹತ್ಯೆಯಾಗುತ್ತಿದೆ. ತಾವು ಮಾಡಿದ ತಪ್ಪಿಗೆ ಅಸುಳೆಯನ್ನು ಬಲಿಕೊಡುವ ಸಂಪ್ರದಾಯ 2ವರ್ಗದಲ್ಲೂ ನಡೆಯುತ್ತಿದೆ. ವಿದ್ಯಾಂವತರು ಮತ್ತು ಅನಕ್ಷರಸ್ಥರು ತಾವು ಮಾಡುವ ತಪ್ಪಿಗೆ ಇಂತಹ ಕೃತ್ಯವನ್ನು ಮಾಡಲು ಮುಂದಾಗುತ್ತದೆ3. ಒಟ್ಟಾರೆ ಭ್ರೂಣಹತ್ಯೆ ಎಂಬುದು ದೇಶದ ಸಾಮಾಜಿಕ ಪಿಡುಗಾಗಿ ಪರಿಣಮಿಸತೊಡಗಿದೆ.

ಸಕರ್ಾರಗಳು ಸಾಕಷ್ಟು ಸುರಕ್ಷತಾ ಕ್ರಮಗಳು, ಕಾನೂನುಗಳನ್ನು ಜಾರಿಗೆ ತಂದರೂ ಭ್ರೂಣಹತ್ಯೆಗಳು ಮೊದಲಿಗಿಂತ ಇಂದು ಜಾಸ್ತಿಯಾಗಿವೆ.

ನಾಗರಿಕ ಸಮಾಜವು ಎಂತಹ ಕೀಳು ಕ್ರೌರ್ಯಕ್ಕೆ ಇಳಿದಿದೆ ಹೋಗಿವೆ ಎಂದರೆ, ಹೇಳತೀರದು. ಭ್ರೂಣಹತ್ಯೆಯ ವಿಷಯದಲ್ಲಿ ನಮ್ಮ ಮಾನವೀಯ ಮೌಲ್ಯಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಲಿಂಗಧಾರಿತ ಗರ್ಭಪಾತ (Sex selective abortion) ಇಂದು ಸಮಾಜದ ಸೂಕ್ಷ್ಮ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಜಾತಿ, ಮತ, ಪ್ರೇಮ ವೇಗಗಳ ಗಡಿ ಇಲ್ಲ್ಲದೆ ದೇಶದ್ಯಂತ ಈ ಪಾಪದ ಕ್ರೌರ್ಯ ವ್ಯಾಪಕವಾಗಿ ಹರಡುತ್ತಿದೆ.

ಆಧುನಿಕ ವೈದ್ಯಕೀಯ ವಿಜ್ಞಾನದ ಅನ್ವಯಗಳಾದ Amniocentesis ಮತ್ತು Ultrasoundಗಳ ದುರ್ಬಳಕೆ, ಹಾಗು ಕೆಲವೊಂದು ಜಾಹೀರಾತುಗಳು ಜನರ ಮನಸ್ಸಿನ ಮೇಲೆ ತುಂಬ ಕೆಟ್ಟ ಪರಿಣಾಮವನ್ನು ಬೀರುತ್ತಿವೆ. Pay Rs/- 500 now and save Rs/- 5oooo later ಎಂಬ ನಾಮ ಫಲಕಗಳು Scanning centreಗಳಲ್ಲಿ ನಾವು ನೋಡಬಹುದಾಗಿದೆ.

Kolloor
ಮಕ್ಕಳಿಗೆ ಜನ್ಮ ನೀಡುವುದಕ್ಕೆ ಮತ್ತು ಮನೆಯನ್ನು ನಿಭಾಯಿಸುವದಕ್ಕೆ ಹೆಣ್ಣು/ಹೆಂಡತಿ ಬೇಕು ಆದರೆ ಹೆಣ್ಣಿನ ಜನನ ಮಾತ್ರ ಬೇಡ ಎಂಬ ಈ ಮೂರ್ಖತನ, ಮೂಡನಂಬಿಕೆ ಈ ಸಮಾಜದಲ್ಲಿ ತೊಲಗಬೇಕು. ಅದಕ್ಕಾಗಿ ಪ್ರತಿಯೊಬ್ಬರು ಜಾಗೃತಿ ಹೊಂದಬೇಕು.

ನನ್ನ ಇಪ್ಪತ್ತು ವರ್ಷದ ವೈದ್ಯಕೀಯ ಅನುಭವದಲ್ಲಿ ನಾನು ಭ್ರೂಣಹತ್ಯೆಗೆ ಕಂಡುಕೊಂಡ ಕಾರಣಗಳೇನೆಂದರೆ ಬಡತನ ಮತ್ತು ಅನಕ್ಷರತೆ. ಇವೆರಡರ ಕೊರತೆಯಿಂದಾಗಿ ಸ್ತ್ರೀ ಸಮಾನತೆ ಹಾಗೂ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಣ್ಣುಮಕ್ಕಳನ್ನು ಭಾರ/ಹೊರೆ, ಅವಳಿಂದ ಏನೂ ಪ್ರಯೋಜನ ಇಲ್ಲ, ಅವಳಿಗೆ ಮದುವೆ ವರದಕ್ಷಿಣೆಯ ಖಚರ್ು ಇತ್ಯಾದಿಗಳೆಲ್ಲ ಮಾಡಬೇಕಾಗುತ್ತದೆ ಎಂದು ಭಾವಿಸಿ ಅವಳನ್ನು ಪೋಷಿಸುವುದೇ ವ್ಯರ್ಥವೆಂಬ ಕೀಳು ಧೋರಣೆ ಗ್ರಾಮಾಂತರ ಮಹಿಳೆಯರನ್ನು ಭ್ರೂಣಹತ್ಯೆಗೆ ಪ್ರಚೋಧಿಸುತ್ತಿದೆ.

ಭ್ರೂಣಹತ್ಯೆ ಬರೀ ಶಿಶುವಿನ ಶೋಷಣೆಯಲ್ಲದೇ ತಾಯಿಯ ಶೋಷಣೆಯು ನಡೆಯುತ್ತಿದೆ. ಗಂಡು ಹೆಣ್ಣಿನ ಜನನವಾಗುವುದು ವೈಜ್ಞಾನಿಕವಾಗಿ ಗಂಡಿನ ಕ್ರೋಮೋಜೋಮ್ ಎಕ್ಸ್ ವೈ ಇಂದ ನಿಧರ್ಾರವಾಗುತ್ತದೆ. ಹೆಣ್ಣಿನ ಎಕ್ಸ್ ಎಕ್ಸ್ ಕ್ರೋಮೋಜೋಮ್ನಿಂದ ಮಾತ್ರವಲ್ಲ. ಈ ಸತ್ಯವನ್ನು ಎಲ್ಲರೂ ಅರಿಯಬೇಕಾಗಿದೆ. ತನ್ನದೇನೂ ತಪ್ಪಿಲ್ಲದಿದ್ದರೂ ಹೆಣ್ಣು ನಿಂದನೆಗೆ ಒಳಗಾಗಿ ಗಂಡನ, ಅತ್ತೆ ಮಾವಂದಿರ ಒತ್ತಾಯಕ್ಕೆ ಮಣಿದು ಭ್ರೂಣಹತ್ಯೆಗೆ ಒಪ್ಪುತ್ತಾಳೆ ಆದರೆ ನಿಜಸ್ಥಿತಿಯಲ್ಲಿ ಯಾವ ತಾಯಿಯೂ ತನ್ನ ಕರುಳಿನ ಕುಡಿಯನ್ನು ಬೆಳೆಯುವ ಮುನ್ನ ಕೊಲ್ಲುವದನ್ನು ಒಪ್ಪುವುದಿಲ್ಲ. ಈ ನಾಗರಿಕ ಸಮಾಜ ಭ್ರೂಣಹತ್ಯೆಯ ನೆಪದಲ್ಲಿ ಹೆಣ್ಣನ್ನು ಮಾನಸಿಕವಾಗಿ, ಶಾರೀರಿಕವಾಗಿ ಶೋಷಣೆಗೆ ಒಳಪಡಿಸಿ ಆಕೆಯನ್ನು ಗಂಡು ಮಗುವಿಗೆ ಜನ್ಮ ನೀಡುವ ಯಂತ್ರ ಎಂದು ಭಾವಿಸಿ ಅಬಲೆಯನ್ನಾಗಿಸಿದೆ.

ಇನ್ನಾದರೂ ಭ್ರೂಣಹತ್ಯೆಯನ್ನು ನಿಲ್ಲಿಸಲು ಪ್ರಯತ್ನಿಸೋಣ. ಎಲ್ಲಾ ಶಾಲಾ ಕಾಲೇಜುಗಳಲ್ಲಿ, ವೈದ್ಯಕೀಯ ಕೇಂದ್ರಗಳಲ್ಲಿ/ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಹಿಳಾ ಜಾಗೃತಿಯನ್ನು ಉಂಟುಮಾಡುವ ಕಾರ್ಯಕ್ರಮಗಳಿಗೆ ಚಾಲನೆ ನೀಡೋಣ. ಅದರಿಂದ ಸ್ವಲ್ಪಮಟ್ಟಿಗೆ ಜಾಗೃತಿಯನ್ನಾದರೂ ಕಾಣಬಹುದಾಗಿದೆ..

ಭಾರತ ಸಕರ್ಾರದ ಬಾಲಿಕ ಯೋಜನೆಗಳು, ಕುಟುಂಬ ಕಲ್ಯಾಣ ಯೋಜನೆಗಳು ಹೆಣ್ಣು ಅಬಲೆಯಲ್ಲ ಸಬಲೆ ಎಂದು ಘೋಷಿಸಿ 2001ರ ವರ್ಷವನ್ನು ಸ್ತ್ರೀ ಸಬಲೀಕರಣ ವರ್ಷವೆಂದು ಘೋಷಿಸಿದ್ದರೂ, ಹೆಣ್ಣು ಆಂತರಿಕವಾಗಿ ಶೋಷಣೆಯನ್ನು ಅನುಭವಿಸುತ್ತಿರುವಳು.

ಗರ್ಭಪಾತ ಮಾಡುವ ಮುನ್ನ ವೈದ್ಯರೂ ಸಹ ಸ್ವಲ್ಪ ಪ್ರಜ್ಞೆಯಿಂದ ವತರ್ಿಸಬೇಕಾಗಿದೆ ಅನಗತ್ಯ ಗರ್ಭಪಾತ ಮಾಡುವುದನ್ನು ತಮ್ಮಲ್ಲಿಯೇ ಚಚರ್ಿಸಿ ನಿಲ್ಲಿಸಬೇಕು. ಶಿಶು ಹತ್ಯೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಯಾಗಬೇಕು.

ಇನ್ನೊಂದೆಡೆ ಹೆಣ್ಣುಮಕ್ಕಳನ್ನು ಕಸದ ಬುಟ್ಟಿಗೆ ಬಿಸಾಡುವ ಜನ..; ತಮ್ಮ ಮಗು ತಮಗೆ ಹೊರೆಯಾದರೆ ಅನಾಥಾಶ್ರಮಕ್ಕಾದರೂ ಸೇರಿಸಬಹುದಲ್ಲವೇ? ತಮಿಳುನಾಡು ಸಕರ್ಾರವು ವೈಟ್ ಕ್ರೆಡಲ್ಎಂಬ ಶಿಶು ಸಂರಕ್ಷಣಾ ಕೇಂದ್ರಗಳನ್ನು ರೂಪಿಸಿದೆ. ಇಲ್ಲಿ ಬೇಡವಾದ ನವಜಾತ ಶಿಶು, ಅನಾಥ ಶಿಶುಗಳನ್ನು ಪೋಷಿಸಲಾಗುತ್ತಿದೆ. ಇಂತಹ ಕೇಂದ್ರಗಳನ್ನು ನಮ್ಮ ಸಕರ್ಾರವು ಪ್ರಾರಂಭಿಸಿದಲ್ಲಿ ಭ್ರೂಣಹತ್ಯೆಯನ್ನು ತಡೆಯಬಹುದು.

ಎರಡೂ ದಶಕಗಳ ಕಾಲ ಭಾರತವನ್ನಾಳಿದ ಇಂದಿರಾಗಾಂಧಿ, ಗಗನ ಯಾತ್ರೆಯನ್ನು ಮಾಡಿದ ಕಲ್ಪನಾ ಚಾವ್ಲ, ಆಟೋಟದಲ್ಲಿ ಮಿಂಚಿದ ಪಿ.ಟಿ. ಉಷಾ, ಸಂಗೀತ ಕ್ಷೇತ್ರದಲ್ಲಿ ಗಂಗೂಭಾಯಿ ಹಾನಗಲ್ ಹೀಗೆ ಸಾಕಷ್ಟು ಮಹಿಳೆಯರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇಂತಹ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ಮೇಲಿಂದ ನಡೆಯುತ್ತಿರುವುದು ನಮ್ಮೆಲ್ಲರ ದೌಭರ್ಾಗ್ಯ..!

ಹೆಣ್ಣು ಭ್ರೂಣಹತ್ಯೆ ಅಪರಾಧ ಎಂಬ ಪ್ರಜ್ಞೆ ಎಲ್ಲಾ ಜನತೆಯಲ್ಲಿ ಬರಬೇಕಾಗಿದೆ ಈ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು, ವೈದ್ಯರು ಶಿಶುಹತ್ಯೆಯನ್ನು ನಿಲ್ಲಿಸುವುದು ತಮ್ಮ ಕರ್ತವ್ಯವೆಂದು ಭಾವಿಸಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡಲು ಕಾರ್ಯಕ್ರಮ ಗಳನ್ನು ನಡೆಸಬೇಕು. ಶಿಶುಹತ್ಯೆಯನ್ನು ನಿಮರ್ೂಲನೆ ಮಾಡಿ ಆ ಮೂಲಕ ಹೆಣ್ಣಿನ ರಕ್ಷಣೆ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಚಿಸಬೇಕಾಗಿದೆ. ಹೆಣ್ಣು ಮಗುವನ್ನು ಸಾಯಿಸುವ ಮೊದಲು ಅದಕ್ಕೂ ಜೀವವಿದೆ, ಬದುಕುವ ಹಕ್ಕು ಇದೆ ಎಂಬುದನ್ನು ಯೋಚಿಸಿ ಬದುಕಲು ಬಿಡಬೇಕಾಗಿದೆ. ನನ್ನ ಕಳಕಳಿಯ ಮನವಿ.

ಡಾ.ಅಂಬಿಕಾವತಿ.ಎಂ.
ಮುಖ್ಯ ಶಸ್ತ್ರಚಿಕಿತ್ಸಕರು. ಎಸ್.ಡಿ.ಯು.ಎಂ.ಸಿ.ಕೋಲಾರ.

ದಲಿತರ ನಿರಂತರ ದೌರ್ಜನ್ಯಕ್ಕೆ ಕೊನೆ ಎಂದು..?

ಬುದ್ಧ, ಬಸವ, ಅಂಬೇಡ್ಕರರು ಹುಟ್ಟಿದ ಭಾರತದಲ್ಲಿ ದಲಿತರ ನಿರಂತರ ದೌರ್ಜನ್ಯಕ್ಕೆ ಕೊನೆ ಎಂದು..?

ಪ್ರಜಾಪ್ರಭುತ್ವದ 3ಅಂಗಗಳು, ಬೃಹತ್ ಪೊಲೀಸ್ ವ್ಯವಸ್ಥೆ, ಕಠಿಣ ಕಾನೂನುಗಳು ಎಲ್ಲವೂ ಇದ್ದರೂ, 1995 ರಿಂದ 2007ರವರೆಗೆ ದಲಿತರ ಮೇಲೆ ದೇಶಾಧ್ಯಂತ 4,41,424 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದರೆ, ದಲಿತರ ಸ್ಥಿತಿಗತಿಗಳು ಈ ದೇಶದಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿವೆ ಎಂದು ವಿಶ್ಲೇಷಿಸುತ್ತಾರೆ ರಘೋತ್ತಮ ಹೊ.ಬ

ಪ್ರಜಾಪ್ರಭುತ್ವ ಹೊಂದಿದ ಈ ದೇಶದಲ್ಲಿ ಜನಸಮೂಹವೊಂದು ಸ್ವಾಭಿಮಾನಿಯಾಗಿ ಬದುಕಲು ಬಯಸುವುದು, ಸ್ಚತಂತ್ರವಾಗಿ ಬಾಳಲು ಇಚ್ಛಿಸುವುದು ಖಂಡಿತ ತಪ್ಪಾಗಿ ಪರಿಣಮಿಸಿದೆ! ಏಕೆಂದರೆ ಅಂತಹ ಪ್ರಯತ್ನಶೀಲ ಸಮೂಹದ ಮೇಲೆ ಅನೇಕ ದಬ್ಬಾಳಿಕೆ, ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಸ್ವಾಭಿಮಾನಿ ಮಾರ್ಗದ ಮುಖಾಂತರ ನಡೆಸುವ ಇವರುಗಳು ಹೋರಾಟಕ್ಕೆೆೆ ತಡೆಯೊಡ್ಡಲಾಗುತ್ತದೆ!

ವ್ಯವಸ್ಥೆಯಲ್ಲಿನ ಅನಿಷ್ಟ ಪದ್ದತಿಗಳನ್ನು ಒಪ್ಪಿಕೊಳ್ಳದಿದ್ದರೆ, ಬಹಿಷ್ಕಾರ ಹಾಕಿ ಬೀದಿಯಿಂದ ಹೊರ ಅಟ್ಟಲಾಗುತ್ತಿದೆ. ಅಂದಹಾಗೆ ಸ್ವಾಭಿಮಾನದ ನಿರಂತರ ತುಡಿತದಲ್ಲಿ ಬದುಕುವ ಅಂತಹ ಪ್ರಯತ್ನಶೀಲ ಸಮೂಹ ಬೇರ್ಯಾವುದು ಅಲ್ಲ. ಅವರೇ ಭರತ ಖಂಡವನ್ನು ಕಟ್ಟಿದ ದಲಿತರು.

ದಲಿತರ ಮೇಲೆ ನಡೆಸುವ ದಬ್ಬಾಳಿಕೆ, ದೌರ್ಜನ್ಯಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಕಾನೂನಿನ ಅನ್ವಯ ಎಷ್ಟೇ ಕಠಿಣಕ್ರಮಗಳನ್ನು ಒಂದೆಡೆ ಜಾರಿಮಾಡುತ್ತಿದ್ದರೂ, ದೌರ್ಜನ್ಯಗಳೇನು ಕಡಿಮೆಯಾಗುತ್ತಿಲ್ಲ. ಅದಕ್ಕೆ ಮೂಲಭೂತ ಕೊರೆತೆ ಇರುವುದು ದಲಿತರಿಗೆ ವಿಶೇಷ ಸಲವತ್ತುಗಳನ್ನು ನೀಡದೇ, ಅವರನ್ನು ಜಾಗೃತಗೊಳಿಸದೇ, ಇರುವುದು. ಜಾಗೃತಿ ಕಾರ್ಯ ದೇಶದಲ್ಲಿ ಸಮರ್ಪಕವಾಗಿ ನಡೆಯದಿದ್ದಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ, ದಲಿತರ ಮೇಲಿನ ದೌರ್ಜನ್ಯಕ್ಕೆ ಕೊನೆ ಸಿಗುತ್ತಿಲ್ಲ.

ಅಂದಹಾಗೆ ದಲಿತರ ಮೇಲೆ ಎಸಗುವ ಇಂತಹ ದೌರ್ಜನ್ಯ ಶೀಕ್ಷಾರ್ಹ ಅಪರಾಧವಾಗಿದೆ. ಆದರೆ ನಡೆಯುತ್ತಿರುವುದೇ ಬೇರೆ? ಶಿಕ್ಷೆ ನೀಡಿದರೂ ನಾವು ದಲಿತರ ವಿರುದ್ಧದ ದೌರ್ಜನ್ಯ ನಿಲ್ಲಿಸುವುದಿಲ್ಲ ಎಂಬುದು ವ್ಯವಸ್ಥೆಯ ನಿಲುವಾಗಿದೆ! ಹಾಗಿದ್ದರೆ ದಲಿತರೇನು ಈ ದೇಶದಲ್ಲಿ ಬದುಕಬಾರದೇ..? ದಶಕಗಳು ಕಳೆದರೂ ದಲಿತರು ಮುಖ್ಯವಾಹಿನಿಗೆ ಬರಲು ಹೆಣಗಾಡುತ್ತಿದ್ದಾರೆ. ಎಷ್ಟು ದಿನ ಅಂತ ಹೀಗೆ ದೌರ್ಜನ್ಯವನ್ನು ಸಹಿಸಿಕೊಂಡಿರಬೇಕು? ಎಂಬಿತ್ಯಾದಿ ಪ್ರಶ್ನೆಗಳು ಪ್ರಗತಿಪರ ದಲಿತವರ್ಗವನ್ನು ಇಂದು ಕಾಡುತ್ತಿವೆ.

ಏಕೆಂದರೆ ರಾಷ್ಟ್ರೀಯ ಅಪರಾಧ ಇಲಾಖೆಯ ದಾಖಲೆಯ ಪ್ರಕಾರ ನಮ್ಮ ಮಕ್ಕಳನ್ನು ಅಂದರೆ ದಲಿತರ ಮಕ್ಕಳನ್ನು ಶೇ.37.8 ಹಳ್ಳಿಗಳಲ್ಲಿ ಶಾಲೆಗಳಲ್ಲಿ ಪ್ರತ್ಯೇಕ ಕೂರಿಸಲಾಗುತ್ತಿದೆ. ಶೇ.33 ರಷ್ಟು ಹಳ್ಳಿಗಳಲ್ಲಿ ಸಕರ್ಾರಿ ಆರೋಗ್ಯ ಸಹಾಯಕರು ದಲಿತರ ಮನೆಗಳಿಗೆ ಭೇಟಿ ನೀಡುತ್ತಿಲ್ಲ. ಶೇ.48.4 ದಲಿತರಿಗೆ ಕುಡಿಯುವ ನೀರನ್ನು ನಿರಾಕರಿಸಲಾಗುತ್ತಿದೆ. ಶೇ23.5ರಷ್ಟು ದಲಿತರ ಮನೆಗಳಿಗೆ ಅಂಚೆ ಪೇದೆ ಅಂಚೆ ತಲುಪಿಸುವುದಿಲ್ಲ. ಶೇ.64 ರಷ್ಟು ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ.

ಇವೆಲ್ಲದಕ್ಕಿಂತ ದುರಂತವೆಂದರೆ, ಈ ದೇಶದಲ್ಲಿ ಪ್ರತಿದಿನ ಇಬ್ಬರು ದಲಿತರ ಕಗ್ಗೊಲೆ ನಡೆಯುತ್ತಿದೆ. ಪ್ರತಿದಿನ ಮೂವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಪ್ರತಿ 18 ನಿಮಿಷಕ್ಕೆ ಒಬ್ಬನೆಂಬತೆ ದಲಿತರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ! ಇದನ್ನೆಲ್ಲ ನೋಡಿದರೆ, ಗಿನ್ನೆಸ್ ಬುಕ್ ದಾಖಲೆಗಳನ್ನೂ ದಲಿತರ ಮೇಲಿನ ಈ ದೌರ್ಜನ್ಯದ ದಾಖಲೆಗಳು ಮೀರಿಸುತ್ತಿವೆ ಎನ್ನಬಹುದು!

ಏಕೆಂದರೆ 1995 ರಿಂದ 2007 ರವರೆಗೆ ದಲಿತರ ಮೇಲೆ ದೇಶದಾದ್ಯಂತ 4,41,424 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ರಾಜ್ಯದ ಪಾಲು 21,352 ಪ್ರಕರಣಗಳು! 2010ರ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 1632 ಪ್ರಕರಣಗಳು ದಾಖಲಾಗಿವೆ. ಅಂದಹಾಗೆ ಇದು ದಾಖಲಾದ ಪ್ರಕರಣಗಳ ಕಥೆ. ಇನ್ನು ದಾಖಲಾಗದೆ ದಿನನಿತ್ಯ ನಡೆಯುವ ದೌರ್ಜನ್ಯಗಳ ಕಥೆಗಳು, ಕಥೆಯಾಗದೇ ನಿತ್ಯ ವ್ಯಥೆಯಾಗಿವೆ.

ಯಾಕೆಂದರೆ ಮೊನ್ನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಎಂಬಲ್ಲಿ ದಲಿತನೋರ್ವನಿಗೆ ಕ್ಷೌರ ಮಾಡಲು ನಿರಾಕರಿಸಿ ಬ್ಲೇಡಿನಿಂದ ಆತನ ಮೂಗು ಕುಯ್ಯಲಾಗಿದೆ.

ಅದೇ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಸುವಿನಹಳ್ಳಿ ಎಂಬಲ್ಲಿ ಗಣೇಶೋತ್ಸವದ ಸಂಧರ್ಭದಲ್ಲಿ ತಮಟೆ ಬಡಿಯಲು ದಲಿತರು ಕೂಲಿ ಕೇಳಿದರು ಎಂಬ ಕಾರಣಕ್ಕಾಗಿ ಅವರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಹಾಸನ ಜಿಲ್ಲೆಯಲ್ಲೂ ಅಷ್ಟೆ ತಮಟೆ ಬಾರಿಸಲು ನಿರಾಕರಿಸಿದ ಕೆರೆಗೋಡು ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಮಸವತ್ತೂರು ಎಂಬಲ್ಲಿಯೂ ಹೆಣ ಹೂಳಲು ಗುಂಡಿ ತೆಗೆಯಲು ನಿರಾಕರಿಸಿದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಂಬೇಡ್ಕರ್ ನಾಮ ಫಲಕ ಹಾಕಿದರು ಎಂಬ ಕಾರಣಕ್ಕೆ ಬೆಳವಾಡಿ ಎಂಬ ಗ್ರಾಮದಲ್ಲಿ ದಲಿತರ ಮೇಲೆ ಭೀಭತ್ಸ ಹಲ್ಲೆ ನಡೆಸಲಾಗಿದೆ.

ಇಂತಹ ಹತ್ತಾರು ಪ್ರಕರಣಗಳು ನಮ್ಮ ಮುಂದೆ ನಡೆಯುತ್ತಲೇ ಇವೆ. ವ್ಯವಸ್ಥೆಯ ಆಡಳಿತ ಮಾತ್ರ ಮೂಕಪ್ರೇಕ್ಷಕನಾಗಿ ಎಲ್ಲವನ್ನೂ ನೋಡುತ್ತಿದೆ. ರಾಜಕಾರಣಿಗಳು ತಮ್ಮತಮ್ಮ ಅನುಕೂಲಕ್ಕೆ ತಕ್ಕಂತೆ ದಲಿತ ವರ್ಗವನ್ನು ಬಳಸಿಕೊಳ್ಳುತ್ತಿದ್ದಾರೆ.

ದಲಿತರ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆಬರಲೆಂದು ಮೀಸಲಾತಿಯನ್ನು ನೀಡಿದರೂ, ಅದು ಕೂಡ ದುರ್ಬಳಕೆಯಾಗುತ್ತಿದೆ. ಇಂದು ಮೀಸಲು ಕ್ಷೇತ್ರಗಳು ಉಳ್ಳವರ ಹಿಡಿತದಲ್ಲಿದ್ದು, ಅಲ್ಲಿ ದಲಿತರು ಹೆಸರಿಗೆ ಮಾತ್ರ ಆ ಕ್ಷೇತ್ರದ ಪ್ರತಿನಿಧಿಗಳಾಗಿದ್ದಾರೆ.

ದಲಿತರ ಶಾಸಕಾಂಗದ ಕಥೆ ಹಾಗಿದ್ದರೆ, ಇನ್ನೂ ಕಾಯರ್ಾಂಗದ ಸ್ಥಿತಿ ವಿಭಿನ್ನ. ದಲಿತ ಅಧಿಕಾರಿಗಳು ಎಲ್ಲಿಯಾದರೂ, ಉನ್ನತ ಸ್ಥಾನದಲ್ಲಿದ್ದರೆ, ಆತನ ಪಕ್ಕಕ್ಕೆ ಕೆಳದಜರ್ೆಯಲ್ಲಿ ಕಾರ್ಯನಿರ್ವಹಿಸುತ್ತಿರುವವನಿಗೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟು, ದಲಿತರನ್ನು ದಲಿತರಿಗೆ ಎತ್ತಿಕಟ್ಟಿ ತೊಂದರೆ ನೀಡುವಂತಹ ವಾತಾವರಣ ಸೃಷ್ಟಿಯಾಗಿದೆ. ಕನರ್ಾಟಕದಲ್ಲಿರುವ ಅದೆಷ್ಟು ದಲಿತ ಅಧಿಕಾರಿಗಳಿಗೆ ದಿನನಿತ್ಯ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಸಮೀಕ್ಷೆಯೂ ನಡೆಯುವ ಕಾಲ ದೂರವಿಲ್ಲ. ಮೀಸಲಾತಿಯನ್ನು ಪಡೆದು ಅದೆಷ್ಟೋ ಮಂದಿ ಮುಖ್ಯವಾಹಿನಿಗೆ ಬರಬೇಕೆಂದು ಪ್ರಯತ್ನಿಸುತ್ತಿದ್ರೆ, ಅದಕ್ಕೆ ಅಡ್ಡಗಾಲು ಹಾಕುವ ಮಂದಿಯೇ ಹೆಚ್ಚಾಗಿದ್ದಾರೆ.

ಪ್ರಜಾಪ್ರಭುತ್ವದ ಕೊನೆಯ ಅಂಗವಾದ ನ್ಯಾಯಾಂಗದಲ್ಲಿ ದಲಿತರು ಇರುವುದು ಬೆರಳಣಿಕೆಯಷ್ಟು..? ದಲಿತ ನ್ಯಾಯಮೂತರ್ಿಗಳು ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೆ, ವಿನಾಕಾರಣ ಅವರಿಗೆ ತೊಂದರೆ ನೀಡುವುದು.. ಅವರ ವಿರುದ್ಧ ಇಲ್ಲಸಲ್ಲದ ಭ್ರಷ್ಟಾಚಾರದ ಆರೋಪಗಳನ್ನು ಮಾಡಿ, ಮಾನಸಿಕವಾಗಿ ಜರ್ಝರಿತರಾಗುವಂತೆ ಮಾಡುವುದು ವ್ಯವಸ್ಥಿತವಾಗಿ ನಡೆದಿದೆ. ಕನರ್ಾಟಕ ಲೋಕಾಯುಕ್ತಕ್ಕೆ ದಲಿತ ನ್ಯಾಯಮೂತರ್ಿಗಳನ್ನು ನೇಮಕ ಮಾಡಬೇಕೆಂದು ಪ್ರಸ್ತಾವ ಹೊರಬಿದ್ದದ್ದೇ ತಡ, ಎಲ್ಲರಿಗೆ ಇರುಸು ಮುರುಸು.

ಕೊನೆಯದಾಗಿ ತಾನೇ ಸ್ವಯಂ ಅಂಗವೆಂದುಕೊಂಡಿರುವುದು ಪತ್ರಿಕಾರಂಗ. ಈ ಪತ್ರಿಕಾರಂಗವು ಮೊದಲಿನಿಂದಲೂ ಮೇಲ್ವರ್ಗದ ಹಿಡಿತದಲ್ಲಿದೆ. ಇಲ್ಲಿ ದಲಿತರ್ಯಾಕೆ, ಬೇರೊಂದು ವರ್ಗದವರು ಕೂಡ ಭದ್ರವಾಗಿ ಉಳಿಯಲು ಆಗಿಲ್ಲ. ಇನ್ನೂ ದಲಿತರ ಮಾತು ಒತ್ತಟೆಗುಳಿಯಿತು. ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಟ ಮಾಡುವ ಮಂದಿಯನ್ನು ಖರೀಧಿ ಮಾಡಲಾಗಿದೆ. ಅವರಲ್ಲಿಯೇ ವಿವಾದಗಳನ್ನು ಸೃಷ್ಟಿಸಿ ಒಂದಿದ್ದ ದಲಿತ ಸಂಘವನ್ನು ಡಜನ್ಗಟ್ಟಲೇ ಹೊಡೆದುಹಾಕಲಾಗಿದೆ. ಸಾಹಿತಿಗಳು, ಬುದ್ದಿಜೀವಿಗಳು ಎಷ್ಟೇ ಮಂದಿ ಇದ್ದರೂ, ಅವುಗಳಿಗೆ ಎಡ, ಬಲವೆಂಬ ಹುಚ್ಚು ನೆತ್ತೀಗೇರಿದೆ.

ಪರಿಸ್ಥಿತಿ ಹೀಗಿರುವಾಗ ಈ ದೇಶದಲ್ಲಿ ದಲಿತರ ಮೇಲಿನ ನಿರಂತರ ದೌರ್ಜನ್ಯಕ್ಕೆ ಮುಕ್ತಿಯಾದರೂ ಎಂದು ಸಿಗುತ್ತದೆ. ಇದಕ್ಕೆ ಪ್ರಜ್ಞಾವಂತ ನಾಗರೀಕ ಸಮಾಜವೇ ಉತ್ತರಿಸಬೇಕಷ್ಟೆ.

ಶರಣರು ಮತ್ತು ಸಮಾನತೆ

ಬಸವಣ್ಣನವರು ಮಾನವಕುಲದ ವಿಮೋಚಕ ರಾಗಿದ್ದಾರೆ. ಮಾನವ ಕುಲದ ವಿಮೋಚಕರಾಗಬೇಕಾದರೆ ಮಾನವರು ಮೊದಲಿಗೆ ತಮ್ಮನ್ನು ಅರಿತುಕೊಳ್ಳಬೇಕು. ಸತಿಪತಿ ಮಧುರಭಾವದ ಮಹತ್ವವನ್ನು ತಿಳಿದುಕೊ ಳ್ಳಬೇಕು. ಆ ಮೂಲಕ ಮಧುರಭಕ್ತಿಯ ಸಂಸ್ಕಾರ ಪಡೆಯ ಬೇಕು. ಆ ಮಧುರಭಕ್ತಿಯು ಅವರಿಬ್ಬರೊಳಗೆ ಶಾಂತಿ ಸಮಾಧಾನ ತರುವಂಥದ್ದಾಗಿರಬೇಕು. ಸಮಾಜದಲ್ಲಿ ಬೆಳೆಯುವಾಗ ಅವರ ನಡತೆಯೇ ಶಾಂತಿ ಸಮಾಧಾನಕ್ಕೆ ಪೂರಕವಾಗಿರುವುದರಿಂದ ಸಹಜವಾಗಿಯೇ ಸಾಮಾಜಿಕ ನೆಲೆಯಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಯ ವಿಕಸನಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುವರು. ಇಂಥ ಸಮಾನತೆಯ ಪ್ರಜ್ಞೆ ಮೂಡಿಸುವ ವ್ಯಕ್ತಿತ್ವ ವಿಕಸನ ಹೊಂದಿದವರೇ ಶರಣರು ಎನ್ನುತ್ತಾರೆ ವಚನ ಅಧ್ಯಯನ ಕೇಂದ್ರದ ನಿದರ್ೇಶಕರಾದ ರಂಜಾನ್ದಗರ್ಾ.
ವಚನ ಸಾಹಿತ್ಯ ಎಲ್ಲ ದೃಷ್ಟಿಯಿಂದಲೂ ಆಧುನಿಕ ಸಾಹಿತ್ಯವೇ ಆಗಿದೆ. ಅದರ ಶೈಲಿ ಕೂಡ ಆಧುನಿಕವಾದ ಗದ್ಯಶೈಲಿಗೆ ಸಮೀಪವಾಗಿದೆ. ಅದೇರೀತಿ ಹಾಡುಗಾರಿಕೆಗೆ ಬೇಕಾದ ಅಂಶಗಳನ್ನೂ ಒಳಗೊಂಡಿದೆ. ಹೀಗೆ ಗದ್ಯದ ದೇಹ ಮತ್ತು ಪದ್ಯದ ಜೀವವನ್ನು ಹೊಂದಿರುವ ತ್ರಿವಿಧಸಾಹಿತ್ಯ ಎಲ್ಲಿಯೂ ಕಾಣಸಿಗುವುದಿಲ್ಲ.

ವಚನಗಳು ಶಾಸ್ತ್ರ, ಸಾಹಿತ್ಯ ಮತ್ತು ಸಮಾಜವೆಂಬ ತ್ರಿವಿಧ ಅಂಶಗಳನ್ನು ಒಳಗೊಂಡಿವೆ. ಮೊದಲನೆ ಯದಾಗಿ ಧಾಮರ್ಿಕ ಸಾಹಿತ್ಯವಾಗಿರುವುದರಿಂದ ಇದರಲ್ಲಿ ಲಿಂಗವಂತ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳು ಮೂಡಿಬಂದಿವೆ. ಇದು ಸೃಜನಶೀಲ ಸಾಹಿತ್ಯವೂ ಆಗಿರುವುದರಿಂದ ಶಬ್ದಾರ್ಥದ ಜೊತೆಗೆ ಲಕ್ಷಣಾರ್ಥ ಮತ್ತು ಧ್ವನ್ಯರ್ಥಗಳು ಸಹಜವಾಗಿಯೇ ಮೂಡಿಬಂದಿವೆ. ಇವುಗಳ ಜೊತೆಗೇ ತತ್ತ್ವಾರ್ಥ ಮತ್ತು ಬೆಡಗಿನ ಅರ್ಥಗಳನ್ನೂ ಒಳಗೊಂಡಿವೆ. ಅನ್ಯೋಕ್ತಿ. ಅಲಂಕಾರ, ಪ್ರತಿಮೆ, ಪ್ರತೀಕ ಮುಂತಾದ ಕಾವ್ಯಮೀಮಾಂಸೆಯ ಇತರ ಅಂಶಗಳೂ ಸೇರಿಕೊಂಡಿವೆ.

ಲಿಂಗಾಯತದ ಧರ್ಮಶಾಸ್ತ್ರವೇ ಆಗಿರುವ ವಚನ ಗಳು ಸಾಹಿತ್ಯಕವಾಗಿ ಸಾರ್ವತ್ರಿಕವಾಗಿವೆ. ಅಲ್ಲದೆ ಸಕಲ ಜೀವಾತ್ಮರ ಬಗೆಗಿನ ಕಾಳಜಿಯಿಂದಾಗಿ ಜನಮನವನ್ನು ಸೂರೆಗೊಳ್ಳುವ ಮೂಲಕ ಸಾಮಾಜಿಕವಾಗಿ ಮಹತ್ವದ್ದೆನಿ ಸುತ್ತವೆ. ಹೀಗೆ ವಚನಗಳು ಶಾಸ್ತ್ರವೂ ಹೌದು, ಸಾಹಿ ತ್ಯವೂ ಹೌದು. ಅಷ್ಟೇ ಅಲ್ಲದೆ ಸಾಮಾಜಿಕ ಬದುಕಿನ ಮೇಲೆ ನಡೆ ನುಡಿ ಸಿದ್ಧಾಂತದ ಪರಿಣಾಮ ಬೀರುವ ಸಮಾಜೋ ಧಾಮರ್ಿಕ ಸಂವಿಧಾನವೂ ಹೌದು.

1939ರಿಂದ 1945ರ ವರೆಗೆ ನಡೆದ ಎರಡನೇ ಮಹಾಯುದ್ಧದಲ್ಲಿ ಜಗತ್ತಿನಲ್ಲಿ ಒಟ್ಟು 5 ಕೋಟಿ ಜನ ಜೀವಕಳೆದುಕೊಂಡರು. ನಂತರ ಜಗತ್ತಿನ ಜನ ಸಮು ದಾಯಗಳಲ್ಲಿ ಮಾನವಹಕ್ಕುಗಳ ಕುರಿತು ವಿಶ್ವಾಸ ಮೂಡಿಸುವ ಮತ್ತು ದೇಶಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ವಿಶ್ವಸಂಸ್ಥೆಯ ಉದಯವಾಯಿತು. ಆದರೆ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಇಂಥ ವಿಶ್ವಸಂಸ್ಥೆಯ ಕಾರ್ಯ ನಿರ್ವಹಿಸಿದರು.

ಜಾತಿವಿನಾಶಕ್ಕಾಗಿ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಏರ್ಪಡಿಸಿದಾಗ ಪಟ್ಟಭದ್ರ ಹಿತಾ ಸಕ್ತಿಗಳು ಶರಣರ ಕಗ್ಗೊಲೆ ಮಾಡಿದವು ಮತ್ತು ವಚನ ಕಟ್ಟುಗಳನ್ನು ಸುಟ್ಟವು. ಸಹಸ್ರಾರು ಶರಣರು ಕಲ್ಯಾಣ ಬಿಟ್ಟು ಹೋಗಬೇಕಾಯಿತು. ಹೀಗೆ ವಚನಸಾಹಿತ್ಯವು ಸಮತಾವಾದದಿಂದ ಕೂಡಿದ ಆಧುನಕ ಸಮಾಜದ ಕನಸುಗಳನ್ನು ಬಿತ್ತುವ ಸಾಹಿತ್ಯ ಎಂದರೆ ತಪ್ಪಾಗದು.

ಹಿಂದೂ ಧರ್ಮದಲ್ಲಿನ ಶ್ರೇಣೀಕೃತ ಸಮಾಜದಲ್ಲಿ ಸಮಗಾರ ಜಾತಿಯವರಾಗಿದ್ದ ಹರಳಯ್ಯನವರು ಇಷ್ಟಲಿಂಗದೀಕ್ಷೆಯ ನಂತರ ಲಿಂಗವಂತರಾದರು. ಆಗ ಸಮಗಾರ ಎಂಬುದು ಜಾತಿಯ ಸಂಕೇತವಾಗಿ ಉಳಿಯದೆ ಕೇವಲ ಕಾಯಕದ ಸಂಕೇತವಾಗಿ ಉಳಿಯಿತು. ಬಿಜ್ಜಳನ ಆಸ್ಥಾನದಲ್ಲಿದ್ದ ಮಧುವರಸರು ಬ್ರಾಹ್ಮಣರಾಗಿದ್ದರು. ಆದರೆ ಲಿಂಗದೀಕ್ಷೆಯ ನಂತರ ಲಿಂಗವಂತರಾದರು. ಹೀಗೆ ಇಬ್ಬರೂ ಬಸವಣ್ಣನವರ ಶರಣಸಂಕುಲದ ಸದಸ್ಯರಾದರು.

ಕುಲಗೋತ್ರಗಳಿಲ್ಲದ, ಜಾತಿ ಉಪಜಾತಿಗಳಿಲ್ಲದ, ಅಸ್ಪೃಶ್ಯತೆ ಇಲ್ಲದ, ವರ್ಗ, ವರ್ಣ ಮತ್ತು ಲಿಂಗಭೇದ ಗಳಿಲ್ಲದ, ಖಾಸಗಿ ಆಸ್ತಿ ಇಲ್ಲದ ಆದರೆ ಸಮೂಹ ಸಂಪ ತ್ತಾದ ಶಿವನಿಧಿಯನ್ನು ಹೊಂದಿದ್ದ ಶರಣಸಂಕುಲವು ವಿಶ್ವದ ಮೊಟ್ಟಮೊದಲ ಪರಿಪೂರ್ಣ ಸಮಾನತೆಯನ್ನು ಹೊಂದಿದ ಸಮಾಜವಾಗಿದೆ. ಖಾಸಗಿ ಆಸ್ತಿಯು ಮನುಷ್ಯತ್ವದ ವಿರುದ್ಧವಾಗಿರುತ್ತದೆ. ಮನುಷ್ಯತ್ವವು ಖಾಸಗಿ ಆಸ್ತಿಯ ವಿರುದ್ಧವಾಗಿರುತ್ತದೆ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಜಗತ್ತಿಗೆ ತೋರಿಸಿಕೊಟ್ಟು ಯಾವ ವೈರುಧ್ಯವೂ ಇಲ್ಲದ ಶರಣಸಂಕುಲವೆಂಬ ಸರ್ವ ಸಮತ್ವದ ಸಮಾಜವನ್ನು ನಿಮರ್ಿಸಿದ ಕೀತರ್ಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಹರಳಯ್ಯ ಮಧುವರಸರು ಲಿಂಗವಂತರಾಗುವ ಮೂಲಕ ಇಂಥ ಶರಣಸಂಕುಲದ ಸದಸ್ಯರಾದ ಕಾರಣ ಹಿಂದೂಧರ್ಮ ಎಂದು ಕರೆಯಿಸಿ ಕೊಳ್ಳುವ ಮನುಧರ್ಮದ ಕಾರಣ ತಮಗೆ ಅಂಟಿಕೊಂ ಡಿದ್ದ ಕೃತ್ರಿಮ ಜಾತಿ ಮತ್ತು ಮೇಲು ಕೀಳುಗಳೆಂಬ ಅಂತಸ್ತುಗಳನ್ನು ಕಳೆದುಕೊಂಡು ನಿಜಮಾನವರಾದರು.

ಆಗ ಅವರಿಗೆ ಯಾವ ಭೇದವೂ ಕಾಣಲಿಲ್ಲ. ಹರಳಯ್ಯನವರ ಮಗ ಶೀಲವಂತ ಮತ್ತು ಮಧುವರಸರ ಮಗಳು ಲಾವಣ್ಯಳ ಕೂಡ ಲಿಂಗವಂತರಾದ ಕಾರಣ ಅವರ ಮದುವೆ ಸಹಜವಾಗಿಯೇ ಆಗಬೇಕಿತ್ತು. ಆದರೆ ಬಿಜ್ಜಳನ ಆಸ್ಥಾನದಲ್ಲಿದ್ದ ಪಟ್ಟಭದ್ರ ಹಿತಾಸಕ್ತಿಗಳು ಆ ಮದುವೆ ಧರ್ಮಬಾಹಿರ ಎಂದು ಹುಯಿಲೆಬ್ಬಿಸಿದವು. ಮನುಧರ್ಮದ ಪ್ರಕಾರ ಆ ಮದುವೆ ಧರ್ಮಬಾಹಿರ ಆಗಿತ್ತು. ಆದರೆ ಲಿಂಗವಂತ ಧರ್ಮದ ಪ್ರಕಾರ ಧರ್ಮ ಸಮ್ಮತವಾಗಿತ್ತು. ಮನುವಾದಿಗಳಿಗೆ ಅದು ಬ್ರಾಹ್ಮಣ ಕನ್ಯಾ ಮತ್ತು ಸಮಗಾರ ವರನ ಮಧ್ಯೆ ನಡೆಯುವ ಮದುವೆ ಯಾಗಿತ್ತು. ಶರಣ ಸಂಕುಲದ ಪ್ರಕಾರ ಅದು ಲಿಂಗವಂತರ ಮದುವೆಯಾಗಿತ್ತು.

ಲಿಂತವಂತ ಧರ್ಮವು ಸನಾತನವಾದಿಗಳ ಚೌಕಟ್ಟಿನ ಧರ್ಮವಲ್ಲ. ಇದು ಚೌಕಟ್ಟಿಲ್ಲದ ಬಯಲಧರ್ಮ. ಶೂನ್ಯ ಎಂಬದು ಬಯಲೇ ಆಗಿದೆ. ಇದು ಸಕಲ ಚರಾಚರಗಳ ಸಮೇತ ಎಲ್ಲವನ್ನೂ ಒಳಗೊಂಡಿದೆ. ಎಲ್ಲರೂ ನಮ್ಮವರು. ಯಾರೂ ಹೊರಗಿನವರಲ್ಲ ಎಂಬುದು ಲಿಂಗವಂತ ಧರ್ಮವಾದ ಬಸವಧರ್ಮದ ಘೋಷಣೆಯಾದರೆ, ವರ್ಣ, ಜಾತಿ, ಉಪಜಾತಿ, ವರ್ಗ ಮತ್ತು ಲಿಂಗಭೇದ ಸೃಷ್ಟಿಸಿ ನಿರಂತರ ಶೋಷಣೆಯ ಸಮಾಜವನ್ನು ಸೃಷ್ಟಿಸುವುದೇ ಮನುಧರ್ಮದ ಉದ್ದೇಶವಾಗಿದೆ.

ಮಾನವ ಘನತೆ ಮತ್ತು ಮಾನವ ಹಕ್ಕುಗಳಿಗಾಗಿ ಮನುಧರ್ಮದ ಕ್ರೌರ್ಯದ ವಿರುದ್ಧ ಹೋರಾಡಿದ ಶರಣರು, ತಮ್ಮ ತತ್ತ್ವದ ಅನುಷ್ಠಾನಕ್ಕಾಗಿ ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧರಾದರು. ಹರಳಯ್ಯ ಮಧುವರಸರ ಮಕ್ಕಳ ಮದುವೆಗೆ ಮನುವಾದಿಗಳ ಮತ್ತು ಮನು ಧರ್ಮದ ರಕ್ಷಣೆ ರಾಜಧರ್ಮ ಎಂದು ಅನಿವಾರ್ಯವಾಗಿ ನಂಬಿದ್ದ ದೊರೆ ಬಿಜ್ಜಳನ ವಿರೋಧವಿದ್ದರೂ ಶರಣರು ಆ ಮದುವೆಯನ್ನು ನೆರವೇರಿಸಿದರು. ಅದರಿಂದಾಗಿ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲವಾಯಿತು. ತಮ್ಮ ನಿಜ ಸಂಪತ್ತಾಗಿದ್ದ ವಚನಕಟ್ಟುಗಳ ರಕ್ಷಣೆಗಾಗಿ ಎಲ್ಲವನ್ನೂ ಬಿಟ್ಟು ಕಲ್ಯಾಣವನ್ನು ತೊರೆದವರು ಶರಣರು. ಒಂದು ಮದುವೆಗಾಗಿ ಶರಣರು ಎಲ್ಲವನ್ನೂ ಕಳೆದುಕೊಂಡು ಸಮತಾ ತತ್ತ್ವದ ರಕ್ಷಣೆ ಮಾಡಿದರು. ನಡೆ ನುಡಿ ಸಿದ್ಧಾಂತದಿಂದ ಕೂಡಿದ ತತ್ತ್ವಕ್ಕಾಗಿ ಸಹಸ್ರಾರು ದಾರ್ಶನಕರು ಹುತಾತ್ಮರಾಗಲು ಕಾರಣವಾದ ಕಲ್ಯಾಣ ಕ್ರಾಂತಿ ಎಂಬ ಇಂಥ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಇನ್ನೊಂದಿಲ್ಲ!

ವಚನ ಸಾಹಿತ್ಯವು ಭಾರತ ಸಂವಿಧಾನದ ಅಂಶ ಗಳನ್ನು ಒಳಗೊಂಡಿದೆ. ಅದೇ ರೀತಿ ಮಾನವ ಹಕ್ಕುಗಳ ಎಲ್ಲ ಅಂಶಗಳನ್ನು ಒಳಗೊಂಡಿದೆ. 1948ನೇ ಡಿಸೆಂಬರ್ 10 ರಂದು ನಡೆದ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ 30 ಅಂಶಗಳುಳ್ಳ ಮಾನವ ಹಕ್ಕುಗಳನ್ನು ಜಾಗತಿಕ ಘೋಷಣೆಯೊಂದಿಗೆ ಸ್ವೀಕರಿಸಲಾಯಿತು. ಲಿಂಗಭೇದ, ವರ್ಣಭೇದ ಮುಂತಾದ ಅನಷ್ಟಗಳನ್ನು ತೊಡೆದು ಹಾಕಲು ಯತ್ನಿಸಿತು. ಅನೈತಿಕ ಸಂಬಂಧಗಳಿಂದ ಜನಸಿದ ಮಕ್ಕಳ ಹಕ್ಕುಗಳಲ್ಲಿ ಮತ್ತು ಸತಿ-ಪತಿಗಳ ಸಂಬಂಧದಿಂದ ಜನಸಿದ ಮಕ್ಕಳಲ್ಲಿ ವ್ಯತ್ಯಾಸವಿಲ್ಲವೆಂದು ವಿಶ್ವಸಂಸ್ಥೆ ಸಾರಿತು.

ಲಿಂಗವ ಪೂಜಿಸಿ ಫಲವೇನಯ್ಯಾ ಸಮರತಿ, ಸಮಕಳೆ, ಸಮಸುಖವ ಅರಿಯದನ್ನಕ್ಕ ಎಂದು ಬಸವಣ್ಣನವರು ತಿಳಿಸಿದ್ದಾರೆ. ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದವನ್ನು ಅಲ್ಲಗಳೆಯುವ ಈ ವಚನವು ಸಮಾನತೆಯ ತತ್ತ್ವವನ್ನು ಸಾರುತ್ತದೆ. ಹೀಗೆ ಆಧುನಿಕ ಯುಗದ ಸವಾಲುಗಳಿಗೆ ಉತ್ತರವಾಗಿ ವಚನ ಸಾಹಿತ್ಯ ನಿಲ್ಲುತ್ತದೆ. ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ ಎಂದು ಹೇಳುವ ಮೂಲಕ ಬಸವಣ್ಣನವರು ಅನೈತಿಕವಾಗಿ ಜನಿಸಿದ ಮಕ್ಕಳ ಹಕ್ಕುಗಳನ್ನು ಹಿಡಿದಿದ್ದಾರೆ.

ವಚನ ಸಾಹಿತ್ಯವು ಸಮಷ್ಟಿ ಪ್ರಜ್ಞೆಯಿಂದ ಕೂಡಿದ ಸಾಹಿತ್ಯವಾಗಿದೆ. ವಚನಕಾರರು ತಮ್ಮ ವಚನಗಳನ್ನು ಸಮಾಜೋ ಧಾಮರ್ಿಕ ಸಂಸತ್ ಆಗಿದ್ದ ಅನುಭವ ಮಂಟ ಪದಲ್ಲಿ ಮಂಡಿಸಬೇಕಿತ್ತು. ಅಲ್ಲಿ ಚಚರ್ೆ ನಡೆದ ನಂತರವೇ ಅದಕ್ಕೆ ಧಾಮರ್ಿಕ, ಸಾಹಿತ್ಯಕ ಮತ್ತು ಸಾಮಾಜಿಕ ಮಹತ್ವ ಬರುತ್ತಿತ್ತು. ಈ ರೀತಿ ಸಾಮಾಜಿಕವಾಗುವ ಮತ್ತು ನಡೆ ನುಡಿ ಸಿದ್ಧಾಂತದಿಂದ ಕೂಡಿದ ವಚನಸಾಹಿತ್ಯದಂಥ ಸಾಹಿತ್ಯವೊಂದು ಧರ್ಮಗ್ರಂಥವಾಗಿರುವುದು ಜಗತ್ತಿನಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.

ಜಗತ್ತಿನ ಎಲ್ಲ ಧರ್ಮಗ್ರಂಥಗಳು ದೇವರ ವಾಕ್ಯಗ ಳಾಗಿವೆ. ದೇವರು ಮನುಷ್ಯರಿಗೆ ಹೇಳಿದ ಕ್ರಮ ಅಲ್ಲಿದೆ. ಆದರೆ ಲಿಂಗವಂತ ಧರ್ಮಗ್ರಂಥ ದೇವರ ವಾಕ್ಯಗಳಿಂದ ಕೂಡಿಲ್ಲ. ಶರಣರ ವಚನಗಳಿಂದ ಕೂಡಿದೆ. ಸತ್ಯಶುದ್ಧ ಶರಣರು ತಮ್ಮೊಳಗಿನ ದೇವರಿಗೆ ಮಾಡಿಕೊಂಡ ನಿವೇದ ನೆಯೆ ವಚನಗಳು. ತಮ್ಮ ನಡೆ ನುಡಿ ಸಿದ್ಧಾಂತದ ಕುರಿತು ಅವರೆಲ್ಲ ತಮ್ಮೊಳಗಿನ ದೇವರಿಗೆ ವರದಿ ಒಪ್ಪಿಸಿದ್ದಾರೆ.

ಮುಖ್ಯವಾಗಿ ಬಸವಣ್ಣನವರ ಷಟ್ಸ್ಥಲದ ವಚನಗಳು, ಅಲ್ಲಮಪ್ರಭುದೇವರ ಮಂತ್ರಗೋಪ್ಯ ಮತ್ತು ಚನ್ನಬಸವಣ್ಣನವರ ಕರಣಹಸಗೆಗಳೆಂಬ ಮೂರು ಗ್ರಂಥಗಳು ಸೇರಿ ಲಿಂಗವಂತರ ಧರ್ಮಗ್ರಂಥದ ರೂಪ ತಾಳಿವೆ. ಆದರೆ ಎಲ್ಲ ಶರಣರ ವಚನಗಳು ಲಿಂಗವಂತರ ಧರ್ಮಗ್ರಂಥದ ಭಾಗಗಳು ಎಂಬುದು ಸಮಂಜಸವಾಗಿದೆ.

ಬಸವಣ್ಣನವರ ವಚನಗಳು ಭೂಮಿ ಪ್ರಧಾನ ವಾಗಿವೆ, ಅಲ್ಲಮಪ್ರಭುಗಳ ವಚನಗಳು ಬಾಹ್ಯಾಕಾಶ ಪ್ರಧಾ ನವಾಗಿವೆ. ಚನ್ನಬಸವಣ್ಣನವರ ವಚನಗಳು ದೇಹ ಮತ್ತು ಮನಸ್ಸು ಪ್ರಧಾನವಾಗಿವೆ. ಹೀಗೆ ಲಿಂಗವಂತರ ಧರ್ಮ ಗ್ರಂಥ, ಭೂಮಿ (ಬಸವಣ್ಣನವರ ಲೋಕಜ್ಞಾನ), ಬಾಹ್ಯಾ ಕಾಶ (ಅಲ್ಲಮ ಪ್ರಭುಗಳ ವಿಶ್ವಜ್ಞಾನ) ದೇಹ ಮತ್ತು ಮನ ಸ್ಸಿನ (ಚನ್ನಬಸವಣ್ಣನವರ ಸ್ವಯಂಜ್ಞಾನ) ಕಡೆಗೆ ಒಯ್ಯುವ ಮಾರ್ಗದಶರ್ಿಯಾಗಿದೆ.

ಹೀಗೆ ವಿಶ್ವಪ್ರಜ್ಞೆಯೊಂದಿಗೆ ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತ್ಯತೀತ ಮನೋಭಾವ, ಲಿಂಗ ಭೇದ, ವರ್ಣಭೇದ ಮತ್ತು ವರ್ಗಭೇದಗಳನ್ನು ಅಲ್ಲಗಳೆ ಯುವ ಕ್ರಮ, ಕಾಯಕಜೀವಿಗಳ ಸಂಘಟನೆ, ಕಾಯಕ ಜೀವಿಗಳಿಗೆ ವಯಸ್ಕರ ಶಿಕ್ಷಣ, ದಲಿತ ಮತ್ತು ಮಹಿಳಾ ಶಿಕ್ಷಣ, ಮಂದಿರ ಮತ್ತು ಮೂತರ್ಿಗಳ ನಿರಾಕರಣೆ, ಶಿವನ ಸೊಮ್ಮು ಎಂಬ ಸಾಮಾಜಿಕ ನಿಧಿ. ಕಾಯಕಜೀವಿಗಳ ಕೇಂದ್ರಿತ ಸಮಾಜ ವ್ಯವಸ್ಥೆ, ಸರ್ವಸಮಾಜಗಳಿಗೆ ಅನುಭವ ಮಂಟಪದಲ್ಲಿ ಪ್ರಾತಿನಧ್ಯ, ಕಾಯಕ, ಪ್ರಸಾದ ಮತ್ತು ದಾಸೋಹದ ಕುರಿತ ಕ್ರಾಂತಿಕಾರಿ ಪರಿಕಲ್ಪನೆ ಮುಂತಾದವು ಶರಣರ ಕೊಡುಗೆಗಳಾಗಿವೆ.

ಕಾಯಕ, ಪ್ರಸಾದ ಮತ್ತು ದಾಸೋಹ ಪದಗಳು ಧರ್ಮಶಾಸ್ತ್ರದ ಪದಗಳಷ್ಟೇ ಅಲ್ಲದೆ ಅರ್ಥಶಾಸ್ತ್ರದ ಪದಗಳೂ ಆಗಿವೆ. ಕಾಯಕ ಎಂಬುದು ಯೋಗ್ಯ ಉತ್ಪಾದನೆ, ಪ್ರಸಾದ ಎಂಬುದು ಸದ್ಬಳಕೆ ಹಾಗೂ ದಾಸೋಹ ಎಂಬುದು ಸಮಾಜದಲ್ಲಿ ಯೋಗ್ಯ ವಿತರಣ.ೆ ಹೀಗೆ ಬಸವ ಧರ್ಮದ ಈ ಪದಗಳು ಬಸವಣ್ಣನವರ ಅರ್ಥಶಾಸ್ತ್ರದ ಪದಗಳೂ ಆಗಿವೆ.

ಕಾಯಕವೇ ಕೈಲಾಸ ಎಂಬುದು ಕಾಯಕಜೀವಿಗಳ ಈ ಧರ್ಮದ ಮಹಾವಾಕ್ಯಗಳಲ್ಲಿ ಒಂದಾಗಿದೆ. ಕಾಯಕ ದಲ್ಲಿ ತೊಡಗುವುದರ ಮೂಲಕ ವ್ಯಕ್ತಿಯೊಬ್ಬ ತನ್ನ ಅರಿವಿನ ವಿಸ್ತಾರದೊಂದಿಗೆ ಉತ್ಪಾದನಾ ವ್ಯವಸ್ಥೆಯ ಭಾಗವಾ ಗುತ್ತಾನೆ. ತಾನು ಉತ್ಪಾದಿಸಿದ್ದನ್ನು ಸದ್ಬಳಕೆ ಮಾಡುವುದರ ಮೂಲಕ ಜಗತ್ತಿಗೆ ಆ ವಸ್ತುವಿನ ಮಹತ್ವವಿರುವುದನ್ನು ಕಂಡುಕೊಳ್ಳುತ್ತಾನೆ. ದಾಸೋಹದಲ್ಲಿ, ತನಲ್ಲಿ ಕೂಡಿಸಿ ಟ್ಟಿರುವ ವಸ್ತುಗಳ ಸಾಮಾಜಿಕ ವಿತರಣೆಗೆ ಸಿದ್ಧನಾಗುತ್ತಾನೆ.

ಆಧುನಿಕ ಜಗತ್ತಿನ ಅರ್ಥವ್ಯವಸ್ಥೆ ಹದಗೆಡುತ್ತಿದ.ೆ ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನವರ ಅರ್ಥಶಾಸ್ತ್ರ ಹೊಸ ರೀತಿಯಲ್ಲಿ ಸರ್ವ ಸಮತ್ವಭಾವದೊಂದಿಗೆ ಬದುಕು ವುದನ್ನು ಕಲಿಸುತ್ತದೆ. ಶರಣರು ವೈಯಕ್ತಿಕ ಸಂಪತ್ತನ್ನು ಶಿವನಿಧಿಯ ಭಾಗವಾಗಿಸಿ ಸಮಾಜದಲ್ಲಿ ಯಾರೂ ಅಸ ಹಾಯಕರಾಗಿ ಬಳಲದಂತೆ ನೋಡಿಕೊಳ್ಳುತ್ತಿದ್ದರು.

ಸಕಲಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ಎಂದು ಹೇಳುವಲ್ಲಿ ಬಸವಣ್ಣನವರ ಜೀವಕಾರುಣ್ಯ ಎದ್ದು ಕಾಣುತ್ತದೆ. ಮಾನವ ಈ ಜಗತ್ತಿನ ಕೇಂದ್ರಬಿಂದು ಅಲ್ಲ, ಸಕಲ ಜೀವಾ ತ್ಮರಿಂದ ಕೂಡಿದ ಜೀವಜಾಲವೇ ಈ ಜಗತ್ತಿನ ಕೇಂದ್ರ ಬಿಂದು ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ. ಆಧುನಕ ಪರಿಸರ ವಿಜ್ಞಾನಗಳು 20ನೇ ಶತಮಾನದಲ್ಲಿ ಹೇಳಿದ್ದನ್ನು ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದಾರೆ. ಜೀವಜಾಲದಲ್ಲಿದೆ ಚರಾಚರವೆಲ್ಲ ಎಂದು ಬಸವಣ್ಣನವರು ಹೇಳುವ ಮೂಲಕ ಪರಿಸರದ ಮಹತ್ವವನ್ನು ಸಾರಿದ್ದಾರೆ.

ಕಾಯಕಜೀವಿಗಳು ವಸ್ತುಗಳ ಉತ್ಪಾದನೆ ಮಾಡು ತ್ತಲೇ ತತ್ತ್ವ, ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವಂಥ ಸಾಹಿತ್ಯ ರಚನೆ ಮಾಡಿದ್ದು ನಮಗೆಲ್ಲ ಮಾದರಿಯಾಗಿದೆ. 21ನೇ ಶತಮಾನದ ಹಾಹಾಕಾರವನ್ನು ತಡೆಗಟ್ಟಲು ಮತ್ತು ಸರಳ ಸಹಜವಾದ ಸಮೃದ್ಧ ಬದುಕನ್ನು ಕಟ್ಟಲು ವಚನಗಳು ಬಹಳ ಅವಶ್ಯವಾಗಿವೆ. ಹೀಗೆ ವಚನ ಸಾಹಿತ್ಯ ಆಧುನಿಕ ಯುಗದಲ್ಲೂ ಪ್ರಸ್ತುತವಾಗಿದೆ.

ಬಸವಣ್ಣನವರು ಮಾನವಕುಲದ ವಿಮೋಚಕ ರಾಗಿದ್ದಾರೆ. ಮಾನವ ಕುಲದ ವಿಮೋಚಕರಾಗಬೇಕಾದರೆ ಮಾನವರು ಮೊದಲಿಗೆ ತಮ್ಮನ್ನು ಅರಿತುಕೊಳ್ಳಬೇಕು. ಸತಿಪತಿ ಮಧುರಭಾವದ ಮಹತ್ವವನ್ನು ತಿಳಿದುಕೊ ಳ್ಳಬೇಕು. ಆ ಮೂಲಕ ಮಧುರಭಕ್ತಿಯ ಸಂಸ್ಕಾರ ಪಡೆಯ ಬೇಕು. ಆ ಮಧುರಭಕ್ತಿಯು ಅವರಿಬ್ಬರೊಳಗೆ ಶಾಂತಿ ಸಮಾಧಾನ ತರುವಂಥದ್ದಾಗಿರಬೇಕು. ಈ ಶಾಂತಿ ಸಮಾ ಧಾನದ ಸಂಸ್ಕಾರವು ಇಡೀ ಕುಟುಂಬವನ್ನು ಆವರಿ ಸಬೇಕು. ಮಕ್ಕಳು ಬೆಳೆಯಲು ಇಂಥ ಸಂಸ್ಕಾರ ಸಹಕಾರಿ ಯಾಗುವಂಥ ವಾತಾವರಣ ಮನೆಯಲ್ಲೇ ನಿಮರ್ಾಣ ವಾಗಬೇಕು. ಹೀಗೆ ಮಧುರಭಾವವು ಕುಟುಂಬವನ್ನು ಆವರಿಸಿದಾಗ ಮಕ್ಕಳು ಸುಸಂಸ್ಕೃತರಾಗಿ ಬೆಳೆಯುವರು. ನಂತರ ಸಮಾಜದಲ್ಲಿ ಬೆಳೆಯುವಾಗ ಅವರ ನಡತೆಯೇ ಶಾಂತಿ ಸಮಾಧಾನಕ್ಕೆ ಪೂರಕವಾಗಿರುವುದರಿಂದ ಸಹಜವಾಗಿಯೇ ಸಾಮಾಜಿಕ ನೆಲೆಯಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಯ ವಿಕಸನಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುವರು. ಇಂಥ ಸಮಾನತೆಯ ಪ್ರಜ್ಞೆ ಮೂಡಿಸುವ ವ್ಯಕ್ತಿತ್ವ ವಿಕಸನ ಹೊಂದಿದವರೇ ಶರಣರು.

ಇಂಥವರು ಯಾವ ದೇಶದಲ್ಲೇ ಇದ್ದರೂ ಕಳ್ಳರಾ ಗಿರುವುದಿಲ್ಲ; ಕೊಲೆಗಡುಕರಾಗಿರುವುದಿಲ್ಲ; ಸುಳ್ಳು ಹೇಳುವವರಾಗಿರುವುದಿಲ್ಲ; ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡುವವರಾಗಿರುವುದಿಲ್ಲ; ತಮ್ಮನ್ನೇ ಹೊಗಳಿಕೊ ಳ್ಳುವಂಥ ಆತ್ಮರತಿಯಲ್ಲಿ ತೊಡಗಿರುವುದಿಲ್ಲ; ಪರನಿ ಂದೆಯನ್ನು ಮಾಡುವವರಾಗಿರುವುದಿಲ್ಲ; ಬೇರೆಯವರು ಟೀಕಿಸಿದಾಗ ಅವರು ಟೀಕಿಸಿದರೇಕೆ ಎಂಬುದಕ್ಕೆ ಕಾರಣ ವನ್ನು ಹುಡುಕದೆ ಪ್ರತಿಯಾಗಿ ಟೀಕಿಸುವ ಅನಾಗರೀಕತೆ ಯನ್ನು ಪ್ರದಶರ್ಿಸುವವರಾಗಿರುವುದಿಲ್ಲ. ಇಂಥ ವ್ಯಕಿತ್ವವುಳ್ಳವರೇ ಶರಣರು.

ಹೀಗೆ ಬದುಕುವುದರಿಂದ ಅಂತರಂಗ ಶುದ್ಧಿಯಾ ಗುತ್ತದೆ. ಬಹಿರಂಗದಲ್ಲಿ ಸಮಾಜದ ಶುದ್ಧಿಯಾಗುತ್ತದೆ. ಇಂಥ ಜೀವನಕ್ರಮದಿಂದ ಮಾತ್ರ ದೇವರನ್ನು ಒಲಿಸಲು ಸಾಧ್ಯ ಎಂಬುದು ಬಸವಣ್ಣನವರ ದೃಢನಧರ್ಾರವಾಗಿದೆ. ಈ ಮಾತಿನಲ್ಲಿ ವ್ಯಕ್ತಿ, ಕುಟುಂಬ, ಸಮಾಜ, ದೇಶ ಮತ್ತು ವಿಶ್ವದ ಸಂಬಂಧವನ್ನು ಹೊಸೆಯುವ ಶಕ್ತಿ ಇದೆ. ಇಂಥ ಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಾರೆ. ಹೀಗೆ ಲೇಸನ್ನೇ ಬಯಸುವುದರಲ್ಲಿ ಶಾಂತಿ, ಪ್ರೀತಿ ಮತ್ತು ಸಮಾನತೆಯ ತತ್ತ್ವ ಅಡಗಿದೆ. ವ್ಯಕ್ತಿಯಿಂದ ವಿಶ್ವದವರೆಗೆ ಜೀವಜಾಲದ ಸಂಬಂಧ ಅಡಗಿದೆ.

ಇಂಥ ಶರಣರಿದ್ದ ದೇಶ ಪಾವನವಾಗುತ್ತದೆ. ಅದುವೇ ವಿಶ್ವಶಾಂತಿಗೆ ಕಾರಣವಾಗುತ್ತದೆ. ಹೀಗೆ ಇಷ್ಟಲಿಂಗದಿಂದ ಒಳಗಿನ ಸಂಸ್ಕಾರ ಪಡೆದು ಜಂಗಮ ಲಿಂಗದ ಅಂದರೆ ಸರ್ವಸಮತ್ವಭಾವದಿಂದ ಕೂಡಿದ ಸಮಾಜವೆಂಬ ದೇವರ ಸೇವೆ ಮಾಡಲು ಸಾಧ್ಯವಾ ಗುತ್ತದೆ. ವ್ಯಷ್ಟಿಯಿಂದ ಸಮಷ್ಟಿಯವರೆಗೆೆ ಸರ್ವಸಮತ್ವದ ಪ್ರಜ್ಞೆಯಿಂದ ಮತ್ತು ಪ್ರೇಮಭಾವದಿಂದ ಬದುಕುವುದೇ ಮಧುರಭಕ್ತಿ. ದಯವನ್ನೇ ಧರ್ಮದ ಮೂಲವಾಗಿಸಿ ವಿಶ್ವಕಲ್ಯಾಣವನ್ನು ಸಾಧಿಸುವ ಭಕ್ತಿ.

ಹಳೆಯ ಸಾಮಾಜಿಕ ವ್ಯವಸ್ಥೆ ಇಂಥ ಮಧುರ ಭಕ್ತಿಯ ಸಾಧನೆಗೆ ತೊಡಕಾಗುವುದನ್ನು ಬಸವಣ್ಣನವರು ಗಮನಿಸಿದರು. ಹಳೆಯ ವ್ಯವಸ್ಥೆಯಿಂದಾಗಿ ಬಹುಪಾಲು ಜನಸಾಮಾನ್ಯರ ಬದುಕು ಕಷ್ಟಕರವಾಗಿತ್ತು. ಜಾತಿಭೇದದ ಕಾರಣ ಮೇಲ್ಜಾತಿಯವರು ಕೆಳಜಾತಿಯವರನ್ನು ಮುಟ್ಟಿಸಿಕೊಳ್ಳದಿರುವುದು, ಹೆಣ್ಣು ಗಂಡಿನ ಮಧ್ಯದ ಭೇದಭಾವದಿಂದಾಗಿ ಹೆಣ್ಣನ್ನು ಕೀಳಾಗಿ ನೋಡುವುದು. ಬಡವರು ಮತ್ತು ಉಳ್ಳವರು ಎಂಬ ಭೇದದಿಂದ ಬಡವರನ್ನು ಕೀಳಾಗಿ ನೋಡುವುದು. ಮಹಿಳೆಯರು, ಕೆಳಜಾತಿ ಮತ್ತು ಹಿಂದುಳಿದ ಜಾತಿಗಳಿಗೆ ಅಂದರೆ ಒಟ್ಟಾರೆ ಎಲ್ಲಾ ಮಹಿಳೆಯರು ಮತ್ತು ಶೂದ್ರ ವರ್ಣದಲ್ಲಿ ಹುಟ್ಟಿದವರಿಗೆ ಶಿಕ್ಷಣವನ್ನು ಕೊಡದಿರುವುದು. ಎಲ್ಲ ರೀತಿಯಿಂದಲೂ ಅವರು ಸದಾ ಸೇವಕರಾಗಿಯೇ ಇರು ವಂತೆ ನೋಡಿಕೊಳ್ಳುವುದು. ಅಸಮಾನತೆಯ ಸಮಾಜ ದಲ್ಲಿ ಕಾಯಕಜೀವಿಗಳ ಶೋಷಣೆ ಮಾಡುತ್ತ ಐಹಿಕ ಸುಖವನ್ನು ಅನುಭವಿಸುತ್ತ್ತ ದಾಸಿಯರನ್ನು ಮತ್ತು ವೇಶ್ಯೆ ಯರನ್ನು ಸುಖದ ಸಾಧನಗಳಾಗಿ ಬಳಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಪುರೋಹಿತಶಾಹಿಗಳು, ಅಧಿಕಾರಶಾಹಿಗಳು & ಕುಲೀನರು ಎನ್ನಿಸಿಕೊಳ್ಳುವವರು ಯಥಾಸ್ಥಿತಿವಾದಿ ಗಳಾಗಿ ಬದುಕುವುವಂಥ ಸಮಾಜವನ್ನು ಕಳೆದ ಐದು ಸಾವಿರ ವರ್ಷಗಳಿಂದ ಪೋಷಿಸಿಕೊಂಡು ಬರಲಾಗಿತ್ತು. ಇಂಥವರ ಸುಖಲೋಲುಪತೆಗೆ ತಕ್ಕಂತೆ ಲೈಂಗಿಕ ಶಿಲ್ಪಗಳಿಂದ ಕೂಡಿದ ಬೃಹತ್ ದೇವಾಲಯಗಳನ್ನು ನಿಮರ್ಿಸುವುದು; ಆ ದೇವಾಲಯಗಳನ್ನು ದೇವದಾಸಿ ಯರಿಂದ ಕೂಡಿದ ಸುಖದ ತಾಣಗಳನ್ನಾಗಿಸುವುದು ಮತ್ತು ಮೃಷ್ಟಾನ್ನ ಭೋಜನ, ಹಾಡು, ಕುಣಿತ, ರಸಕತೆ ಮತ್ತು ಧನಕನಕ ಸಂಪತ್ತಿನ ರಕ್ಷಣಾ ತಾಣವನ್ನಾಗಿ ದೇವಾಲಯಗಳನ್ನು ಬೆಳೆಸುತ್ತ ಪಟ್ಟಭದ್ರರು ರಾಜ್ಯ ಸತ್ತೆಯನ್ನು ಕೂಡ ತಮ್ಮ ಅಂಕಿತದಲ್ಲಿಟ್ಟುಕೊಳ್ಳುವಂಥ ಸಾಮಥ್ರ್ಯ ಪಡೆದದ್ದನ್ನು ಬಸವಣ್ಣವರು ಗಮನಿಸಿದರು. ರಾಜಸ್ಥಾನದಿಂದ ಅಷ್ಟೇ ಅಲ್ಲದೆ ದೇವಸ್ಥಾನದಿಂದಲೂ ಕಾಯಕಜೀವಿಗಳ ನಿರಂತರ ಶೋಷಣೆ ನಡೆಯುತ್ತಿರು ವುದನ್ನು ಕೊನೆಗೊಳಿಸಿದರು. ದೇಗುಲ ಸಂಸ್ಕೃತಿಗೆ ತಿಲಾಂಜಲಿಯನ್ನಿಟ್ಟು ಭಕ್ತಿಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟರು.

ಬಸವಣ್ಣನವರ ಭಕ್ತಿಸಾಮ್ರಾಜ್ಯ ಸರ್ವಸಮತ್ವದ ಮೇಲೆ ನಿಂತಿದೆ. ಅಂದರೆ ಅಲ್ಲಿ ಅಸ್ಪೃಶ್ಯತೆ ಇಲ್ಲ, ಜಾತಿ ಭೇದವಿಲ್ಲ, ಕಾಯಕಭೇದವಿಲ್ಲ, ಲಿಂಗಭೇದವಿಲ್ಲ, ವರ್ಣ ಮತ್ತು ವರ್ಗಭೇದಗಳಿಲ್ಲ. ಇಂಥ ಭಕ್ತಿ ಸಾಮ್ರಾಜ್ಯದ ಸಮಾಜಕ್ಕೆ ಬಸವಣ್ಣನವರು ಶರಣಸಂಕುಲವೆಂದು ಕರೆದರು. ಶರಣರು ಸರ್ವಸಮಾನತೆಯ ವಕ್ತಾರರಾಗಿ ನುಡಿದಂತೆ ನಡೆದು ಬದುಕಿ ತೋರಿಸಿದರು. ಜಾತಿ ಸಂಕರವಾದ ಬಳಿಕ ಕುಲವನರಿಸುವರೆ ಎಂದು ಬಸವಣ್ಣನವರು ಪ್ರಶ್ನಿಸಿದರು. ವರ್ಗ, ವರ್ಣ ಮತ್ತು ಲಿಂಗಭೇದಕ್ಕೆ ಕುಲಭೇದವೇ ಮೂಲವಾಗಿರುವುದನ್ನು ಕಂಡುಕೊಂಡರು. ಇಂಥ ಯಾತನಾಮಯವಾದ ವ್ಯವಸ್ಥೆಗೆ ವರ್ಣವ್ಯವಸ್ಥೆ ಎಂದು ಮನುವಾದಿಗಳು ಕರೆಯುತ್ತಾರೆ.

ಈ ವರ್ಣವ್ಯವಸ್ಥೆಯು ಕರ್ಮಸಿದ್ಧಾಂತದ ಮೇಲೆ ನಿಂತಿದೆ. ಕರ್ಮಸಿದ್ಧಾಂತದ ತಾಯಿಬೇರನ್ನು ಕೊಚ್ಚಿ ಹಾಕದೆ ವರ್ಣವ್ಯವಸ್ಥೆಯನ್ನು ನಿನರ್ಾಮ ಮಾಡಲು ಸಾಧ್ಯವಿಲ್ಲ. ಕರ್ಮಸಿದ್ಧಾಂತವು ಮೂಢನಂಬಿಕೆಯ ಆಗರವಾಗಿದೆ; ಶೋಷಣೆಯ ಮೂಲವಾಗಿದೆ; ಭೇದ ಭಾವದ ಗಂಗೋತ್ರಿಯಾಗಿದೆ. ಈ ಕರ್ಮಸಿದ್ಧಾಂತವು ಲೋಕಕ್ಕೆ ಪುಣ್ಯ, ಮೋಕ್ಷ ಮತ್ತು ಸ್ವರ್ಗದ ಆಸೆ ಹಚ್ಚಿಸಿದೆ. ಪಾಪ ಮತ್ತು ನರಕದ ಭಯ ಹುಟ್ಟಿಸಿದೆ. ಭಯವೇ ಧರ್ಮದ ಮೂಲ ಎನ್ನುವಂತೆ ಧರ್ಮದ ರೂಪುರೇಷೆಗಳನ್ನು ಸೃಷ್ಟಿಸಲು ಸಹಕಾರಿಯಾಗಿದೆ. ಮಾನವನ ಸುಖ ಮತ್ತು ದುಃಖಗಳು ಪೂರ್ವನಿ ಧರ್ಾರಿತ ಎಂಬ ಭ್ರಮೆಯನ್ನು ಸೃಷ್ಟಿಸಿದೆ. ಇದು ಶುಭ ಗಳಿಗೆ, ಇದು ಕೆಟ್ಟ ಗಳಿಗೆ ಎಂದು ಕಾಲನರ್ಣಯ ಮಾಡಿದೆ. ನಮ್ಮ ಹಸ್ತರೇಖೆಗಳು ನಮ್ಮನ್ನು ಭವಿಷ್ಯದ ಕಡೆಗೆ ಒಯ್ಯುವ ದಾರಿಪಟ ಎಂಬ ನಂಬಿಕೆಗೆ ಕಾರಣವಾಗಿವೆ. ಜನ್ಮಜನ್ಮಾಂತರಗಳಲ್ಲಿ ರಾಶಿಯಾಗುತ್ತ ಬಂದಿರುವ ಸಂಚಿತ ಕರ್ಮ, ಹಿಂದಿನ ಜನ್ಮದ ಪ್ರಾರಬ್ಧ ಕರ್ಮ ಮತ್ತು ಮುಂಬರುವ ಜನ್ಮದಲ್ಲಿ ಬರುವ ಆಗಾಮಿ ಕರ್ಮಗಳ ಸುಳ್ಳುಸೃಷ್ಟಿಯ ಮೂಲಕ ಮಾನವ ಸಮಾಜ ಎಂದೆಂದೂ ಬದಲಾಗದೆ ಮನೋರೋಗಿಗಳ ತಾಣವಾಗುವಂತೆ ನೋಡಿಕೊಂಡಿದೆ.

ದೇವಸ್ಥಾನ ಸಂಸ್ಕೃತಿಯು ಅಸ್ಪೃಶ್ಯತೆ, ಅಸಮಾನತೆ, ಭೇದಭಾವ ಮತ್ತು ಮೂಢನಂಬಿಕೆಯ ರಕ್ಷಣಾ ಸ್ಥಾನವಾಗಿದೆ. ಬಡವರ ಶೋಷಣೆ ಮತ್ತು ಶ್ರೀಮಂತರ ಅಭಿವೃದ್ಧಿಗೆ ಕಾರಣವಾಗಿದೆ. ಈಕಾರಣದಿಂದಲೇ ಶೋಷಕ ವರ್ಗ ದೇವಾಲಯಗಳನ್ನು ನಿಮರ್ಿಸಿತು. ಶೋಷಿತ ವರ್ಗ ಆ ದೇವರುಗಳ ಮುಂದೆ ನಿಂತು ತಮ್ಮ ದುಃಖ ನಿವಾರಣೆಗೆ ಯತ್ನಿಸಿತು. ಹೀಗೆ ಶೋಷಕರ ವಾಸ್ತವ ಮತ್ತು ಶೋಷಿತರ ಭ್ರಮೆಗಳು ಒಟ್ಟೊಟ್ಟಿಗೆ ಸಾಗುತ್ತಿರುವುದನ್ನು ಬಸವಣ್ಣನವರು ಗಮನಿಸಿದರು. ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡಲಿ ಬಡವನಯ್ಯಾ ಎಂದು ಬಡವರ ಪರವಾಗಿ ನಿಂತರು. ಉಳ್ಳವರು ಶಿವಾಲಯಗಳನ್ನೇಕೆ ನಿಮರ್ಿಸುವರು? ಎಂಬ ರಹಸ್ಯವನ್ನು ಬಹಿರಂಗ ಪಡಿಸಿದರು. ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲ ಸಲುಗೆವಂತರಾಗಿ ಒಳಗೈದಾರೆ. ಆನು ದೇವಾ ಹೊರಗಣವನು ಎಂದು ತಾವು ಗುಡಿ ಸಂಸ್ಕೃತಿಯಿಂದ ದೂರವಾದವರು ಎಂಬುದನ್ನು ಬಸವವಣ್ಣನವರು ಸ್ಪಷ್ಟಪಡಿಸಿದರು. ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಸ್ಥಾವರ ದೈವಕ್ಕೆರಗಲಾಗದು ಎಂದು ಎಚ್ಚರಿಸಿದರು. ವೇದ, ಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ? .. .. .. ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ? ಎಂದು ಪ್ರಶ್ನಿಸಿ ಕಟ್ಟಕಡೆಯ ಮನುಷ್ಯನ ಮತ್ತು ಆತನ ಜೀವನಾನುಭವದ ಪರವಾಗಿ ನಿಂತರು. ಗಿಳಿಪಾಠದ ಶಾಸ್ತ್ರಪಂಡಿತರು ಅದು ಹೇಗೆ ಹಿರಿಯರಾಗುತ್ತಾರೆ ಎಂದು ಪ್ರಶ್ನಿಸಿದರು. ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿ ಅದೇಕೊ? .. .. ಕರ್ಮ ಹರಿಯದೊಡಾ ಪೂಜೆಯದೇಕೊ? ಎಂದು ಕರ್ಮಸಿದ್ಧಾಂತವನ್ನು ನಾಶಮಾಡುವುದೇ ಇಷ್ಟಲಿಂಗ ಪೂಜೆಯ ಮುಖ್ಯ ಉದ್ದೇಶ ಎಂಬುದನ್ನು ಸೂಚಿಸಿದರು. ಕಳ್ಳ ನಾಣ್ಯ ಸಲುಗೆಗೆ ಸಲ್ಲದು ಎಂದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರು. ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಮ್ಮಾಣೆ ಎಂದು ಸಂಗ್ರಹ ಬುದ್ಧಿಗೆ ಕಡಿವಾಣ ಹಾಕಿದರು. ಲಿಂಗವ ಪೂಜಿಸಿ ಫಲವೇನಯ್ಯಾ ಸಮರತಿ, ಸಮಕಳೆ, ಸಮಸುಖವನರಿಯದನಕ್ಕ? ಎಂಬ ಒಂದೇ ವಾಕ್ಯದಲ್ಲಿ, ಲಿಂಗ ಸಮಾನತೆ (ಸಮರತಿ), ವರ್ಣ ಸಮಾನತೆ (ಸಮಕಳೆ) ಮತ್ತು ಸಮಸುಖ (ವರ್ಗ ಸಮಾನತೆ) ಎಂಬ ಅರಿವೇ ಇಷ್ಟಲಿಂಗ ಪೂಜಾಫಲ ಎಂಬ ಸತ್ಯದ ದರ್ಶನ ಮಾಡಿಸಿದರು. ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ ಎಂದು ಎಲ್ಲ ಕಾಯಕಜೀವಿಗಳು ಸಮಾನರು ಎಂಬುದನ್ನು ಸೂಚಿಸಿದರು. ಒಮ್ಮೆ ಶರಣೆಂದಡೆ ಪಾಪ ಕರ್ಮ ಓಡುವವು ಎಂದು ಕರ್ಮಸಿದ್ಧಾಂತದಿಂದ ತುಳಿತಕ್ಕೊಳಗಾದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಅಹಂಕಾರವೆಂಬಸದ ಮದಗಜವೇರಿ ವಿಧಿಗೆ ಗುರಿಯಾಗಿ ನವು ಹೋದಿರಲ್ಲಾ ಎಂದು ಶೋಷಕ ವರ್ಗದ ಕೃತ್ರಿಮ ಬದುಕಿನ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಏನಯ್ಯಾ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ ತಮಗೊಂದು ಬಟ್ಟೆ (ದಾರಿ), ಶಾಸ್ತ್ರಕ್ಕೊಂದು ಬಟ್ಟೆ ! ಎಂದು ಪುರೋಹಿತಶಾಹಿಗಳ ಜೀವನವಿಧಾನಕ್ಕೆ ಅಸಹ್ಯಪಟ್ಟರು. ಎರೆದಡೆ ನನೆಯದು, ಮರೆದಡೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಎಂದು ಸಾಮಾಜಿಕ ಪ್ರಜ್ಞೆ ಇಲ್ಲದೆ ಇಷ್ಟಲಿಂಗ ಪೂಜೆ ಮಾಡುವುದು ನಿಷ್ಪ್ರಯೋಜಕ ಎಂದು ಸಾರಿದರು. ಇನ್ನು ಜಂಗಮವೇ ಲಿಂಗ ಎಂದು ನಂಬಿದೆ ಎಂದು ತಿಳಿಸುತ್ತ ಸಮಾಜ (ಜಂಗಮ)ವೇ ದೇವರು ಎಂಬ ಪರಿಕಲ್ಪನೆಯನ್ನು ಮೂಡಿಸಿದರು. ಕುಲಕ್ಕೆ ತಿಲಕ್ಕೆ ನಮ್ಮ ಮಾದಾರ ಚೆನ್ನಯ್ಯ, ನಿಮ್ಮಿಂದಧಿಕ ಕೂಡಲಸಂಗಮದೇವಾ ಎಂದು ತಿಳಿಸುತ್ತ ಮನುವಾದಿ ಸಮಾಜದಲ್ಲಿನ ಕಟ್ಟಕಡೆಯ ಮನುಷ್ಯರು ಕೂಡ ತಮ್ಮ ಸಚ್ಚಾರಿತ್ರ್ಯದ ಮೂಲಕ ವ್ಯಕ್ತಿತ್ವ ವಿಕಸನ ಹೊಂದುತ್ತ ದೇವರಿಗಿಂತ ದೊಡ್ಡವರಾಗಬಲ್ಲರು ಎಂಬ ಆಶಾಭಾವವನ್ನು ಮೂಡಿಸಿದರು. ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ. ಲೋಕ ವಿರೋಧಿ ಶರಣನಾರಿ ಗಂಜುವವನಲ್ಲ ಎಂದು ಎಂದು ಅನ್ಯಾಯವನ್ನು ವಿರೋಧಿಸಿದರು. ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ಎಂದು ಮಾನವಕುಲದ ಏಕತೆಯ ಬಗ್ಗೆ ಅರಿವು ಮೂಡಿಸಿದರು. ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ ಎಂದು ಸ್ವರ್ಗದ ಮಹತ್ವವನ್ನು ಅಲ್ಲಗಳೆದರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದರು. ಪುಣ್ಯ ಪಾಪವೆಂಬ ಉಭವ ಕರ್ಮವನಾರು ಬಲ್ಲರು? ಎಂದು ಪ್ರಶ್ನಿಸುವ ಮೂಲಕ ಪುಣ್ಯ ಪಾಪವನ್ನು ಅಲ್ಲಗಳೆದರು.ಕೂಡಲಸಂಗನ ಶರಣರು ನಿಚ್ಚ ಲಿಂಗೈಕ್ಯರು ಎಂದು ಹೇಳಿ ಮೋಕ್ಷವನ್ನು ಅಲ್ಲಗಳೆದರು. ಸಕಲ ಜೀವತ್ಮಾರಿಗೆ ಲೇಸ ಬಯಸುವ ಜೀವಕಾರುಣ್ಯವೊಂದೇ ಧರ್ಮದ ತಳಹದಿ ಎಂಬುದನ್ನು ಲೋಕದ ಜನರಿಗೆ ತಿಳಿಸಿಕೊಟ್ಟರು. ಗಣತಿಂಥಿಣಿಯೊಳಗಿರಿಸೆನ್ನ ಲಿಂಗವೆ ಎಂದು ಜನಸಾಗರದ ಮಧ್ಯೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡರು. ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ ಎಂದು ಪ್ರತಿಪಾದಿಸುವ ಮೂಲಕ ಮಾನವಹಕ್ಕುಗಳನ್ನು ಎತ್ತಿಹಿಡಿದರು. ಭಕ್ತಿ ಇಲ್ಲದ ಬಡವ ನಾನಯ್ಯ; ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ ಎಂದು ಹೇಳುತ್ತ ಕೆಳಜಾತಿ ಮತ್ತು ಕೆಳವರ್ಗದ ಜನರ ಅನುಭವಗಳನ್ನು ಎತ್ತಿಹಿಡಿದು ಅವುಗಳಿಂದ ಪಾಠಕಲಿತಿರುವುದಾಗಿ ತಿಳಿಸುತ್ತಾರೆ. ದೇವನೊಬ್ಬ ನಾಮ ಹಲವು ಎನ್ನುವ ಮೂಲಕ ವಿವಿಧ ದೇವರುಗಳ ಆರಾಧಕರ ಮೂಲ ದೇವರು ಒಬ್ಬನೆ ಮತ್ತು ಆರಾಧ ಕರೆಲ್ಲರೂ ಒಂದೇ ಮಾನವ ಜನಾಂಗ ಹಾಗೂ ಒಂದೇ ಜಗತ್ತಿಗೆ ಸೇರಿದವರು ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಸರ್ವ ಸೂತಕಗಳು .. ಲಿಂಗಭಕ್ತರಿಗಿಲ್ಲ ನೋಡಾ , ಹೋಮ ನೇಮ ಜಪ ತಪದಿಂದ ವೆಗ್ಗಳ ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ ಎಂದು ಮುಂತಾಗಿ ಘೋಷಿಸುವ ಮೂಲಕ ಎಲ್ಲತೆರನಾದ ಮೂಢನಂಬಿಕೆಗಳನ್ನು ಬಸವಣ್ಣನವರು ಅಲ್ಲಗಳೆದರು. ಲಿಂಗವ್ಯಸನಿ ಜಂಗಮಪ್ರೇಮಿ ಎಂದೆನಿಸಯ್ಯಾ ಎಂದು ಬೇಡುವ ಮೂಲಕ ಆದರ್ಶಗಳಿಗೆ ಅಂಟುಕೊಂಡು ಸಮಾಜಪ್ರೇಮಿ ಗಳಾಗಿರಬೇಕು ಎಂಬ ಭಾವ ವ್ಯಕ್ತಪಡಿಸಿದರು. ಹೀಗೆ ಬಸವಣ್ಣನವರಿಗೆ ಸಮಾಜವೇ ದೇವರಾಗಿದೆ. ಜನಸೇ ವೆಯೇ ಪೂಜೆ, ಪ್ರಾರ್ಥನೆಗಳಾಗಿವೆ. ಬಸವ ಧರ್ಮವು ನಿಜವಾದ ಅರ್ಥದಲ್ಲಿ ಸಮಾಜಸೇವಾ ಧರ್ಮವಾಗಿದೆ. ಸರ್ವಸಮತ್ವವನ್ನು ಸಾಧಿಸುವ ಮಹಾಸಾ ಧನವಾಗಿದೆ.

ಬಸವಣ್ಣನವರ ಜೊತೆಗಿದ್ದ ಶರಣರೆಲ್ಲರೂ ಇದೇ ಕ್ರಮದಲ್ಲಿ ಚಿಂತನೆ ಮಾಡಿದ್ದಾರೆ. ವೈವಿಧ್ಯದಲ್ಲಿ ಏಕತೆಯನ್ನು ಸಾಧಿಸಿದ್ದಾರೆ.

ಪೃಥ್ವಿಯಿಂದ ಸಕಲ ಜೀವರೆಲ್ಲರೂ ಉದ್ಭವ ಗುಹೇಶ್ವರಾ ಎಂದು ಅಲ್ಲಮ ಪ್ರಭುಗಳು ಹೇಳುವಲ್ಲಿ ಸಕಲಜೀವರಾಶಿಗಳ ಮಧ್ಯದ ಘನಸಂಬಂಧವನ್ನು ಸೂಚಿಸುತ್ತಾರೆ. ಸರ್ವಸಮತ್ವದ ಚಿಂತನೆಗೆ ಮೂಲ ಆಕರ ಒದಗಿಸುತ್ತಾರೆ. ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮ ಎಂದಾಯಿತು ಎಂದು ಉರಿ ಲಿಂಗಪೆದ್ದಿಗಳು ಜೀವ ಮತ್ತು ದೇವರ ಮಧ್ಯದ ಅವಿರತ ಸಂಬಂಧವನ್ನು ಗುರುತಿಸುತ್ತಾರೆ. ಗುರುವಾದರೂ ಕಾಯಕ ದಿಂದಲೇ ಜೀವನ್ಮುಕ್ತಿ ಎಂದು ಹೇಳುವ ಮೂಲಕ ನುಲಿಯ ಚಂದಯ್ಯನವರು ಎಲ್ಲರೂ ಉತ್ಪಾದನೆಯಲ್ಲಿ ತೊಡಗಿದಾಗ ಮಾತ್ರ ಸರ್ವಸಮತ್ವದ ಸಮಾಜ ನಿಮರ್ಾಣ ಮಾಡಲು ಸಾಧ್ಯ ಎಂದು ಸೂಚಿಸುತ್ತಾರೆ. ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು ಎಂದು ಆಯ್ದಕ್ಕಿ ಮಾರಯ್ಯನವರು ಇನ್ನೂ ಮುಂದುವರಿದು ಮೇಲಿನ ಮಾತಿಗೆ ಪುಷ್ಟಿ ಕೊಡುತ್ತಾರೆ. ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ ಎಂದು ಕಾಳವ್ವೆ ಹೇಳುತ್ತ ಉತ್ಪಾದನಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲದ ಮಹತ್ವವನ್ನು ಸಾರುತ್ತಾಳೆ. ಹದ ಮಣ್ಣಲ್ಲದೆ ಮಡಕೆಯಾಗಲಾರದು ಎಂದು ಕೇತಲದೇವಿ ಗುಣಮಟ್ಟದ ಉತ್ಪನ್ನವಿರಬೇಕು ಮತ್ತು ಬದುಕು ಕೂಡ ಹಾಗೇ ಇರಬೇಕು ಎಂದು ಸೂಚಿಸುತ್ತಾಳೆ. ಲಂಚ ವಂಚನಕ್ಕೆ ಕೈಯಾನದ ಭಾಷೆ ಎಂದು ಕಸಗುಡಿಸುವ ಸತ್ಯಕ್ಕ, ಸಮಾಜವು ಕಾಯಕದಿಂದ ಬದುಕಬೇಕೆ ಹೊರತು ಭ್ರಷ್ಟಾಚಾರದಿಂದ ಅಲ್ಲ ಎಂಬ ಸಂದೇಶವನ್ನು ನೀಡುತ್ತಾಳೆ. ಆನೆ ಕುದುರೆ ಭಂಡಾರವಿರ್ದಡೇನೊ ತಾನುಂಬುದು ಪಡಿಯಕ್ಕಿ ಎಂದು ಮೋಳಿಗೆಯ ಮಾರಯ್ಯನವರು ಸಂಗ್ರಹಬುದ್ಧಿಗೆ ಕಡಿವಾಣ ಹಾಕುತ್ತಾರೆ.

ಹೀಗೆ ಎಲ್ಲ ಶರಣರು ಬಸವಣ್ಣನವರ ಕಾಯಕ ತತ್ತ್ವವನ್ನು ಎತ್ತಿಹಿಡಿದಿದ್ದಾರೆ. ಬಸವತತ್ತ್ವ, ಕಾಯಕತತ್ತ್ವ ಮತ್ತು ಇಷ್ಟಲಿಂಗತತ್ತ್ವ ಬೇರೆ ಅಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಸಮಾನತೆಯಿಂದ ಕೂಡಿದ ಸಮಾಜದ ಬೇರುಗಳು ಯೋಗ್ಯರೀತಿಯಲ್ಲಿ ಉತ್ಪಾದನೆ, ಯೋಗ್ಯರೀತಿಯಲ್ಲಿ ಬಳಕೆ ಮತ್ತು ಯೋಗ್ಯರೀತಿಯಲ್ಲಿ ಸಾಮಾಜಿಕ ವಿತರಣೆ ಎಂಬ ಸೂತ್ರದ ಮೇಲೆ ನಂತಿವೆ ಎಂಬುದನ್ನು ಶರಣರೆಲ್ಲ ಸೂಚಿಸಿದ್ದಾರೆ. ಇದನ್ನೇ ಬಸವಧರ್ಮದ ಪರಿಭಾಷೆಯಲ್ಲಿ ಕಾಯಕ - ಪ್ರಸಾದ ದಾಸೋಹ ಎಂದು ಹೇಳಲಾಗಿದೆ.

ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ, ನಿರ್ಮಳ ಬಸವಾ, ಶಿವಜ್ಞಾನ ಬಸವಾ, ನಮ್ಮ ಧರ್ಮವಯ್ಯಾ ಈ ಭಕ್ತಿಯ ಪದವು ಕರುಣಿ ಕಪಿಲ ಸಿದ್ಧಮಲ್ಲಿನಾಥಯ್ಯಾ ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ ಎಂದು ಸಿದ್ಧರಾಮರು ಹೇಳುವಲ್ಲಿ ಬಸವಣ್ಣನವರೇ ಸಮಾನತೆ ಸಾರುವ ಲಿಂಗವಂತ ಧರ್ಮಸ್ಥಾಪಕರು ಎಂಬುದನ್ನು ಸೂಚಿಸಿದ್ದಾರೆ.

ಯಾರಿಗೆ ಯಾರೋ..

ತಂಗಿ, ಜೀವನಾನ ಸಾಕಾಗಿ ಹೋಗ್ಯದ ಯಾಕೋ? ಒಂದು ತರದ ಬ್ಯಾಸರ ಆಗ್ಯದ. ಜೀವನ ಅನ್ನೋದು ಕುದ್ದು ಹೋಗ್ಯದ. ಜಲ್ಮ ಸಾಕು ಅನ್ನಿಸಲಿಕ್ಕ ಹತ್ಯದ. ಶಿವಪ್ಪಾ, ಕರುಣೆ ತೋರ್ಸಿ, ಈ ಜೀವ ಕರ್ಕೊಂಡು ಬಿಡಪ್ಪಾ? ಎಂದು ದಿನಾಲೂ ನಾ ದೇವರಲ್ಲಿ ಬೇಡಿಕೊಳ್ಳಕ ಹತ್ತೀನಿ.

ಯಾಕಬೇ ಎಕ್ಕಾ, ಹಂಗ್ಯಾಕಂತೀದಿ? ಬಿಡ್ತು ಅನ್ನು. ಅಷ್ಟ್ಯಾಕ ಬ್ಯಾಸರ ಮಾಡಿಕೊಂಡಿರುವಿ? ಈಗೇನು ಎಲ್ಲಾ ಜವಾಬ್ದಾರಿ ಮುಗಿಸಿ ಬಿಟ್ಟಿರುವಿ. ಮೂರೂ ಮಕ್ಕಳ ಮದುವಿ ಮುಗಿದು ಹೋಗ್ಯದ. ಬಸಿರು, ಬಾಣಂತನ ಸಹ ಎಲ್ಲಾ ಮುಗಿದು ಹೋಗ್ಯವ. ಮೊಮ್ಮಕ್ಕಳೂ ಸಾಕಷ್ಟು ಆಗ್ಯವ. ಈಗ್ಯಾಕ ಈ ಬ್ಯಾಸರದ ಮಾತು? ತಗೀ, ತಗೀ ಎಲ್ಲಾ ದೇವರ ಮ್ಯಾಲ ಭಾರ ಹಾಕಿ, ಶಿವ, ಶಿವ ಅಂತ ಆರಾಮಿರೋದು ಕಲ್ತುಕೋ. ಎಲ್ಲಾ ಸರಿಯಾಗುತ್ತ ತನ್ನಿಂದ ತಾನ

ಹೌದು ತಂಗೀ ನಿ ಹೇಳೋ ಮಾತು ಬರೋಬ್ಬರಿ ಐತೆ, ಖರೇ ಐತೆ. ಮೂರೂ ಮಕ್ಕಳ ಮದುವಿ, ಬಸಿರು, ಬಾಣಂತನ ಎಲ್ಲಾ ಮುಗಿದದವ ಖರೇ ಅಂದ್ರ. ಎಲ್ಲಾ ಮುಗಿದೈತಪಾ, ಇನ್ನ ಮುಂದ ನಾವು ಆರಾಮ ಇರಬಹುದೆಂದು ನಾನೂನು ಅಂದುಕೊಂಡಿದ್ದೆ. ಮೂರು ಮಕ್ಕಳಿಗಾಗಿ ಜೀವ ತೇಯ್ದು, ತೇಯ್ದು ಮೈ ಅನ್ನೋದು ಸವೆದು ಹೋಗ್ಯದ. ಮೈಯಾಗ ರಸ ಅನ್ನೋದ ಉಳಿದಿಲ್ಲ. ನಿನಗ ಕಾಣತೈತೆಲ್ಲ, ನಾ ಹೆಂಗ ಅದೀನಂತ?

ಹೌದಬೇ, ಈಗೇನಾಗೇದ ಅಂತ ಬ್ಯಾಸರ ಮಾಡಿಕೊಂಡಿ?

ಏನಂತ ಹೇಳಲವ್ವಾ ತಂಗಿ? ಒಂದ್ಯ, ಎರಡ್ಯ? ಬಾಳ ಅದವ ಬಿಡು.

ಬಿಡು, ಬಿಡು, ಕಷ್ಟ, ಸುಖ ಅನ್ನೋದು ಎಲ್ಲರ ಜೀವನದಾಗ ಇದ್ದದ್ದ. ನಿನ್ನ ಧೈರ್ಯ, ಕಷ್ಟ ಎದುರಿಸುವ ಶಕ್ತಿ, ಸಂಸಾರದ ರಥ ನಡೆಸುವ ತಾಕತ್ತು, ಜಾಣ್ಮೆ ಮೆಚ್ಚಿ ನಮ್ಮೆಜಮಾನರು ನಿನಗೆ, ಕಿತ್ತೂರು ಚೆನ್ನಮ್ಮ ಅಂತ ಆವಾಗಾವಾಗ ಶಹಬ್ಬಾಸಗಿರಿ ಕೊಡುತ್ತಿರುತ್ತಾರ. ನನ್ನ ನೋಡಿ ಬ್ಯಾರೆದವರು ಕಲ್ತುಕೊಳ್ಳುವುದು ಬಹಳ ಐತೆ ಅಂತ ಹೇಳ್ತಿರುತ್ತಾರ. ನಿನ್ನಂಥಹ ಧೈರ್ಯಗಾತಿ, ಎದೆಗಾರಿಕೆ ಉಳ್ಳಾಕಿ ಹೀಂಗ ಮಾತಾಡಿದರ ಹೆಂಗ? ಆದದ್ದಾರೂ ಏನವ? ಹೇಳ್ತಿಯಾ?

ಅಲ್ಲಾ ತಂಗಿ ಅಂಬಿಕಾ, ನಿನ್ನ ನಾ ನೀ ಹುಟ್ಟಿದಾಗಿಂದ ನೋಡಿನಿ. ಹಾಗೇ ನೀ ಸಹ ನನಗೆ ಬುದ್ಧಿ ತಿಳಿದಾಗಿಂದ ನನ್ನ ನೋಡಿರುವಿ. ನಾನೆಷ್ಟಾದರೂ ನನಗಿಂತ ದೊಡ್ಡಾಕಿ ಅಲ್ಲೇನು ವಯಸ್ಸಿನಾಗ? ಆರೇಳು ವರ್ಷ ನಾ ದೊಡ್ಡಾಕಿರಬೇಕು. ನಮ್ಮವ್ವ, ನಿಮ್ಮವ್ವ ಇಬ್ರೂ ಖಾಸಾ ಅಕ್ಕ-ತಂಗೇರು. ನಮ್ಮವ್ವ ದೊಡ್ಡಾಕಿ, ನಿಮ್ಮವ್ವ ಸಣ್ಣಾಕಿ. ನೀ ಸಣ್ಣಾಕಿದ್ದಾಗ ನಿನ್ನ ಸಾಲಿ ಸೂಟ್ಯಾಗ ನಮ್ಮೂರಿಗೆ ಮ್ಯಾಲಿಂದ ಮ್ಯಾಲೆ ಬರ್ತಿದ್ದಿ. ನಿನೇನವ್ವ, ನಿಮ್ಮಪ್ಪ-ನಿಮ್ಮವ್ವಗ ಒಬ್ಬಾಕೇ ಮಗಳು. ರಾಜಕುಮಾರಿ ಹಂಗ ಇದ್ದಿ, ಹಂಗ ಬೆಳದಿ. ಈಗ ಮಹಾರಾಣಿ ಅಂಗ ಅದಿ. ಆದರ ನೀ ಎಂದೂ ನಿನ್ನ ಸಾವ್ಕಾರಿಕಿ ತೋರ್ಸಲಿಲ್ಲ. ಗತ್ತು ಮಾಡ್ಲಿಲ್ಲ. ಬಾಳ ದೊಡ್ಡ ಗುಣದಾಕಿ ನೀ. ನಿನ್ನ ಮನಸು ಬಾಳ ದೊಡ್ಡದೈತೆವ. ನಿನ್ನ ಮನಸ್ಸಿಗೆ ತಕ್ಕಂಗ ನಿನಗ ಒಳ್ಳೆಯ ಗಂಡ ಸಹ ಸಿಕ್ಕಾನ ನೋಡು. ನೀ ಸಣ್ಣಾಕಿದ್ದಾಗ ನಮ್ಮ ಊರಿಗೆ ಬಂದಾಗ, ನಮ್ಮ ಜೊತಿಗೇ ಹೊಲಕ್ಕ ಬರ್ತಿದ್ದಿ, ಹೊಲದಾಗ ಸಣ್ಣ, ಪುಟ್ಟ ಕೆಲಸಾನೂ ಮಾಡ್ತಿದ್ದಿ. ನಿಮ್ಮ ಊರಿನಾಗ ನೀ ಎಂದೂ ಹೊಲ ನೋಡದಾಕಿ, ನಮ್ಮ ಕೂಡ ಹೊಲಕ್ಕ ಬರ್ತಿದ್ದುದನ್ನು ನೋಡಿ, ಅಪ್ಪ, ಅವ್ವ, ಆಕಿನ್ಯಾಕ ನಿಮ್ಮ ಜೊತಿ ಕರ್ಕೊಂಡು ಹೋಕ್ಕಿರಿ? ಬ್ಯಾಡ ಅಂತ ಅನ್ತಿದ್ರು. ಆದರ, ನೀ ಮಾತ್ರ ದೊಡ್ಡಪ್ಪಾ, ದೊಡ್ಡವ್ವಾ, ನಾ ಸುಮ್ಮನ ಇವರ ಜೊತಿ ಹೋಗ್ತೀನಿ. ಕೆಲಸ, ಗಿಲಸ ನಾ ಏನೂ ಮಾಡೋದಿಲ್ಲ. ಅಂತ ಹೇಳಿ ನಮ್ಮ ಕೂಡ ಬರ್ತಿದ್ದಿ. ದೊಡ್ಡವ್ವನ ಮಗಳು ರುದ್ರಮ್ಮ ಹೇಳುತ್ತಿದ್ದುದನ್ನು ಕೇಳುತ್ತಿದ್ದ ಅಂಬಿಕಾ ನೆನಪಿನಾಳಕ್ಕೆ ಇಳಿದಳು. ಬಾಲ್ಯದ, ಹದಿ ಹರೆಯದ ನೆನಪುಗಳು ಮನದಲ್ಲಿ ಮೂಡತೊಡಗಿದವು.

ರುದ್ರಮ್ಮ ಮತ್ತು ಅಂಬಿಕಾ ಅವರ ತಾಯಿಯಂದಿರು ಖಾಸಾ ಅಕ್ಕ, ತಂಗಿಯರು. ರುದ್ರಮ್ಮ, ಅಂಬಿಕಾ ಇಬ್ಬರೂ 1950ರ ದಶಕದಲ್ಲಿ ಜನಿಸಿದವರು. ರುದ್ರಮ್ಮನ ತಂದೆ-ತಾಯಿಯರಿಗೆ ಬರೋಬ್ಬರಿ ಅರ್ಧ ಡಜನ್ ಮಕ್ಕಳಾದರೆ, ಅಂಬಿಕಾ ತನ್ನ ತಂದೆ-ತಾಯಿಯರಿಗೆ ಏಕೈಕ ರಾಜಕುಮಾರಿ. ಮೂರು ಜನ ಹೆಣ್ಣು ಮಕ್ಕಳು, ಮೂರು ಜನ ಗಂಡು ಮಕ್ಕಳಲ್ಲಿ ರುದ್ರಮ್ಮನೇ ದೊಡ್ಡಾಕಿ. ಊರಲ್ಲಿ ಏಳನೇ ತರಗತಿಯವರೆಗೆ ಶಾಲೆ ಇದ್ದರೂ ರುದ್ರಮ್ಮ ಓದಿದ್ದು ನಾಲ್ಕನೇ ತರಗತಿಯವರೆಗೆ ಅಷ್ಟೆ. ಮೂವರೂ ಹೆಣ್ಣು ಮಕ್ಕಳೇ ದೊಡ್ಡವರು, ನಂತರ ಮೂವರು ಗಂಡು ಮಕ್ಕಳು.

ರುದ್ರಮ್ಮನ ತಂದೆ-ತಾಯಿಯವರಿಗೆ ತಕ್ಕ ಮಟ್ಟಿಗೆ ಹೊಲ ಇದ್ದರೂ, ಜೀವನ ನಿರ್ವಹಣೆಗೆ ತೊಂದರೆ ಇಲ್ಲವೆನ್ನಲಿಕ್ಕೆ ಸಾಧ್ಯವಿದ್ದಿಲ್ಲ. ಮಳೆ ಸರಿಯಾಗಿ ಆಗಿ ಬೆಳೆಗಳು ಚೆನ್ನಾಗಿ ಬಂದರೆ ಅವರನ್ನು ಹಿಡಿಯುವವರಾರೂ ಇದ್ದಿಲ್ಲ. ಬಡತನವಿದ್ದರೂ ಗಂಡ-ಹೆಂಡತಿಯರ ಪ್ರೀತಿಗೇನು ಕಡಿಮೆ ಇರಲಿಲ್ಲ. ಅವರಿಬ್ಬರ ಜೋಡಿ ಅನ್ಯೋನ್ಯವಾಗಿದ್ದು, ಇನ್ನೊಬ್ಬರಿಗೆ ಮಾದರಿಯಾಗುವಂತಿತ್ತು.

ಅಂಬಿಕಾ, ತನ್ನ ದೊಡ್ಡಮ್ಮನ ಊರಿಗೆ ಹೋದಾಗ, ಆಕೆಯ ದೊಡ್ಡಮ್ಮ ಅವಳಿಗಾಗಿ ಬೆಳಿಗ್ಗೇನೇ ಬಿಸಿ, ಬಿಸಿ ಬಿಳಿಜೋಳದ ರೊಟ್ಟಿ ಮಾಡಿಕೊಡುತ್ತಿದ್ದಳು. ಅಂಬಿಕಾಗೆ ಚಹ, ಕಾಫಿ ಕುಡಿಯುವ ಹವ್ಯಾಸ ಇರದಿದ್ದುದರಿಂದ, ಮಗುಗೆ ಬಿಸಿ, ಬಿಸಿ ರೊಟ್ಟಿ ಮಾಡಿಕೊಡು ಎಂದೆನ್ನುತ್ತಿದ್ದ ಆಕೆಯ ದೊಡ್ಡಪ್ಪ. ಬಿಸಿ, ಬಿಸಿ ರೊಟ್ಟಿಯ ಜೊತೆಗೆ ಕಾಯಿಪಲ್ಲೆ, ಬೆಣ್ಣೆ, ಹಸಿ ಮೆಣಸಿನ ಕಾಯಿ ಹಿಂಡಿ, ಹುಣಸೇತೊಕ್ಕು ಹಚ್ಚಿಕೊಡುತ್ತಿದ್ದಳು ಅವಳ ದೊಡ್ಡಮ್ಮ. ಇದೆಂದರೆ, ಅಂಬಿಕಾಗೂ ತುಂಬಾ ಖುಷಿ. ಎರಡು ರೊಟ್ಟಿ ಹೊಡೆದು ಅಂಬಿಕಾ, ರುದ್ರಮ್ಮ ಮತ್ತು ತಂಗಿಯರ ಜೊತೆ ಊರಿಗೆ ಸಮೀಪವೇ ಇದ್ದ ಅವರ ತೋಟದ ಹೊಲಕ್ಕೆ ಹೋಗಿ ಅವರ ಜೊತೆ ದನಕರುಗಳಿಗೆ ಬೇಕಾದ ಹಸಿ ಮೇವನ್ನು ಕೊಯ್ದು ಕೊಡಲು ಪ್ರಯತ್ನಿಸುತ್ತಿದ್ದಳು ಅಕ್ಕ-ತಂಗಿಯರು ಬೇಡವೆಂದರೂ. ಬ್ಯಾಡ ತಾಯಿ, ನೀನೇನಾದರೂ ಮೇವು ಕೊಯ್ದದ್ದು ಅಪ್ಪ-ಅಮ್ಮಗೆ ಗೊತ್ತಾದರೆ, ನಮ್ಮನ್ನ ಬೈತಾರೆ. ಎಂದು ಹೇಳಿದರೂ ಆಕೆ ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ತೋಟದಲ್ಲಿ ತರಕಾರಿಗಳಾದ ಬೆಂಡೆ, ಬದನೆ, ಚವಳಿ, ಮೆಣಸಿನಕಾಯಿಗಳಿದ್ದರೆ ಅವುಗಳನ್ನು ಹರಿದುಕೊಟ್ಟು ಸಹಾಯ ಮಾಡುತ್ತಿದ್ದಳು. ಅಂಬಿಕಾಗೆ ಪ್ರಕೃತಿಯೆಂದರೆ ಖುಷಿ. ಗಿಡ, ಮರ, ಹಸಿರು ಎಂದರೆ ಆಕೆಯ ಮನಸ್ಸಿಗೆ ತುಂಬಾ ಸಂತೋಷವಾಗುತ್ತಿತ್ತು.

ರುದ್ರಮ್ಮನ ಊರಿನ ಪಕ್ಕವೇ ಹಳ್ಳ ಹರಿಯುತ್ತಿತ್ತು. ಮಳೆಗಾಲದ ದಿನಗಳಲ್ಲಿ ಹಳ್ಳದಲ್ಲಿ ನೀರು ತುಂಬಿಕೊಂಡು ನೋಡುಗರಿಗೆ ರಮಣೀಯವಾಗಿ ಕಾಣುವಂತೆ ಅಂಕು ಡೊಂಕಾಗಿ ಹರಿಯುತ್ತಿತ್ತು. ಮಧ್ಯಾಹ್ನದ ವೇಳೆಗೆ ಬಟ್ಟೆ ಒಗೆಯಲಿಕ್ಕೆ ಹೋಗುತ್ತಿದ್ದ ರುದ್ರಮ್ಮನ ಜೊತೆಗೆ ಅಂಬಿಕಾ ಯಾವಾಗಲೂ ಹಾಜರ್. ಹಳ್ಳದಲ್ಲಿ ವೈಯಾರವಾಗಿ ಹರಿಯುತ್ತಿದ್ದ ನೀರಿನ ಧಾವಂತ ನೋಡಲು ಆಕೆಯ ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು, ಗರಿಗೆದರುತ್ತಿತ್ತು. ಹಳ್ಳದ ದಂಡೆಯ ಮೇಲಿನ ಹಸಿರು ಗಿಡ, ಮರ, ಬಳ್ಳಿಗಳು, ವಿವಿಧ ಬಣ್ಣದ, ವಾಸನೆಗಳ ಹೂವುಗಳ ಚೆಲುವನ್ನು ಆಸ್ವಾದಿಸುವುದು ಅವಳಿಗೆ ತುಂಬಾ ಖುಷಿ ನೀಡುತ್ತಿತ್ತು. ಅಲ್ಲಿಯ ಪಕ್ಷಿಗಳ ಕಲರವ ಅಂಬಿಕಾಳ ಮನಸ್ಸಿಗೆಮುದ ನೀಡುತ್ತಿತ್ತು. ಹಾಗೇ ಹಾದಿಯಲ್ಲಿ ಕವಳೆ, ಕಾರೆ ಹಣ್ಣುಗಳ ರುಚಿಯನ್ನೂ ಸವಿದು ನಾಲಿಗೆ ಚಪಲ ತೀರಿಸಿಕೊಳ್ಳುತ್ತಿದ್ದಳು.

ಅಂಬಿಕಾ ತಮ್ಮ ಊರಿಗೆ ಬಂದಾಗೊಮ್ಮೆ ಆಕೆಯ ದೊಡ್ಡಪ್ಪ ಬಂಡಿ ಕಟ್ಟಿಕೊಂಡು, ಪಕ್ಕದ ಊರಿನ ಸಿನಿಮಾ ಥೇಟರಿಗೆ ಮನೆಯವರೆಲ್ಲರ ಜೊತೆಗೆ ಆಕೆಯನ್ನು ಕರೆದುಕೊಂಡು ಹೋಗಿ ಸಿನಮಾಗಳನ್ನು ತೋರಿಸಿಕೊಂಡು ಬರುತ್ತಿದ್ದ. ದೊಡ್ಡಮ್ಮನ ಊರಿನ ನೆನಪುಗಳು ಅವಳ ಮನಸ್ಸಿನಲ್ಲಿ ಇನ್ನೂ ಹಸಿ, ಹಸಿಯಾಗಿಯೇ ಇವೆ. ಈ ನೆನಪುಗಳ ಹುಡುಕಾಟದಲ್ಲಿ ಅವಳ ಮನಸ್ಸು ಕಳೆದು ಹೋಗಿತ್ತು ತುಸು ಹೊತ್ತು. ಗತಕಾಲದ ಸವಿನೆನಪುಗಳ ಸುಳಿಯಲ್ಲಿ ಸಿಲುಕಿದ್ದ ಅಂಬಿಕಾಳನ್ನು ರುದ್ರಮ್ಮ ವಾಸ್ತವಕ್ಕೆ ತರಲು ಪ್ರಯತ್ನಿಸಿದಳು.

ಏನ್ ತಂಗೆವ್ವಾ, ಹಳೆದನ್ನು ಬಾಳ ನೆನಿಸಿಕೊಳ್ಳಾಕ ಹತ್ತಿದಂಗ ಕಾಣಿಸಕತ್ತೇದ. ಅಂತ ಎಚ್ಚರಿಸದಳು.

ಹೌದಬೇ ಎಕ್ಕಾ, ನಿ ಹೇಳೋದೆಲ್ಲಾ ಖರೇ ಐತೆ. ನೀ ಹೇಳಿದಂಗ ನನಗ ನಾ ಸಣ್ಣಾಕಿದ್ದಾಗ ನಿಮ್ಮ ಊರಿಗೆ ಬಂದು ಹೋದಾಗಿನ ದಿನಗಳು ಬಾಳ ನೆನಪಾಗ್ಲಿಕ್ಕತ್ಯಾವು. ಖರೇ ಅಂದ್ರ ಆಗಿನ ನೆನಪುಗಳು ನನಗ ಆವಾಗಾವಾಗ ಈಗಲೂ ಕಾಡ್ಸುತ್ತಿರುತ್ತಾವ. ಮರೀಲಿಕ್ಕ ಆಗಂಗಿಲ್ಲ ನೋಡು ಆ ದಿನಗಳನ್ನು. ನಿಜವಾಗ್ಲೂ ಎಷ್ಟು ಖುಷಿ ಇತ್ತಲ್ಲ ಆಗಿನ ದಿನಗಳಲ್ಲಿ? ಅಲ್ವೇನಕ್ಕಾ? ಅದಿರಲಿ ಅಕ್ಕಾ, ನೀ ಯಾಕ ಬ್ಯಾಸರ ಮಾಡಿಕೊಂಡಿರುವಿ ಎಂದು ಮೊದಲು ಹೇಳು. ಅಂಬಿಕಾ ಪುನಃ ವಾಸ್ತವಕ್ಕೆ ಬಂದಳು.

ಅಲ್ಲಬೇ ತಂಗಿ, ನಿನಗೆ ಎಲ್ಲಾ ಗೊತ್ತೈತಿ. ಆದರೂ ಕೇಳ್ತಿರುವಿ. ನನ್ನ ಬಾಯಿಯಿಂದಾನ ಕೇಳ್ಬೇಕೆಂಬ ಆಶಾ ನಿನಗ ಅಂತ ಕಾಣುತ್ತ. ನಾ ಹೇಳ್ತೀನಿ ಕೇಳಬೇ. ಎಂದು ಶುರು ಮಾಡಿದಳು ರುದ್ರಮ್ಮ.

ನಮ್ಮೂರಿನಾಗ ಏಳನೇ ಕ್ಲಾಸಿನವರೆಗೂ ಶಾಲೆ ಇದ್ರೂ ನಾ ಕಲ್ತಿದ್ದು ನಾಲ್ಕನೇ ಕ್ಲಾಸು ಮಾತ್ರ. ನನಗ ಓದೋ ಮನಸ್ಸಿದ್ದರೂ ಮುಂದೆ ಓದಿಸಲಿಲ್ಲ ಅಪ್ಪ. ನಾ ಸಾಲಿ ಬಿಟ್ಟಾಗ ನನಗ ಹತ್ತು ಅಥವಾ ಹನ್ನೊಂದು ವರ್ಷ ವಯಸ್ಸಿರಬಹುದು. ಆಗಲೇ ತಂಗೇರಾದ ಲತಾ, ಗೀತಾ, ತಮ್ಮನಾದ ಚಂದ್ರಶೇಖರ ಹುಟ್ಟಿದ್ದರು ಅವ್ವಗ. ನಾ ಸಾಲಿ ಬಿಟ್ಟ ಮೇಲೆ ತಮ್ಮಂದಿರಾದ ರಾಜಶೇಖರ ಮತ್ತು ಸೋಮಶೇಖರ ಹುಟ್ಟಿದರು. ಅವ್ವ ಎರಡು ಮೂರು ವರ್ಷಕ್ಕೊಂದು ಹಡೆಯುತ್ತಿದ್ದರಿಂದ ಚಿಕ್ಕ ಮಕ್ಕಳಿಗೆ ನಾನೇ ಅರ್ಧ ಮರ್ಧ ತಾಯಾಗಿದ್ದೆ. ತಂಗಿಯರ, ತಮ್ಮಂದಿರ ದೇಖರೇಕಿ ಜೊತೆಗೆ ಹೊಲ ಮನೆಗಳಲ್ಲಿ ಗಂಡಾಳಿನಂತೆ ದುಡೀತಿದ್ದೆ. ಯಾಕಂದ್ರ ಅಪ್ಪನೂ ಒಂದು ರೀತಿಯ ಸುಸ್ತಿ ಮನುಷ್ಯ ಇದ್ದ. ಯಾವಾಗಲೂ ಕೆಮ್ಮು, ದಮ್ಮು ಎಂದು ಏದುಸಿರು ಹಾಕುತ್ತಿದ್ದ. ಗಂಡು ಮಕ್ಕಳೆಲ್ಲಾ ಸಣ್ಣವರಾಗಿದ್ದರಿಂದ ಎಲ್ಲಾ ಒಜ್ಜೆ ನನ್ನ ಮೇಲೆ ಬಿದ್ದಿತ್ತು. ಆರು ಮಕ್ಕಳನ್ನ ಹಡೆದ್ರಾಗ ಅವ್ವನೂ ಅರ್ಧ ಮರ್ಧ ಸುಸ್ತಾಗಿದ್ದಳೂ ಕೂಡ.

ಹೀಂಗ ಹೊಲ ಮನಿ ಕೆಲಸದೊಳ್ಗ ನಾ ಹರೇಕ ಬಂದೆ. ಅವ್ವ ತನ್ನ ತಮ್ಮಗ ನನ್ನ ಕೊಟ್ಟು ಮದುವೆ ಮಾಡಿದಾಗ ನನಗ ಹದಿನೆಂಟೋ ಹತ್ತೊಂಭತ್ತೋ ಇರಬೇಕು ಅಷ್ಟೆ. ಮದುವೆ ಆದ ಮ್ಯಾಲ ಗಂಡನ ಮನ್ಯಾಗ ಸಂಸಾರದ ರಥ ಎಳೆಯೋದು ಶುರುವಾಯ್ತು. ಇಲ್ಲಿ ಗಂಡನ ಮನ್ಯಾಗೂ ಸಹ ನನಗ ಹೊಲ ಮನಿ ಕೆಲಸ ತಪ್ಪಲಿಲ್ಲ. ಮದುವ್ಯಾದ ಮೂರು ವರ್ಷದ ತನಕ ಮಕ್ಕಳಾಗಲಿಲ್ಲ. ಅದೊಂದು ರೀತಿ ಚೊಲೋ ಆತನ್ನು. ಯಾಕೆಂದ್ರ, ಚಾಂಯ್, ಮಿಂಯ್ ಅಂತ ಕಿರಿ ಕಿರಿ ಇರಲಿಲ್ಲ. ನಿನ್ನ ಮಾವನೂ ನನ್ನ ಚೆನ್ನಾಗೇ ನೋಡಿಕೊಳ್ತಿದ್ದ. ಪ್ರೀತಿಯಿಂದ ನೋಡ್ಕೊಳ್ತಿದ್ದ ಎಂದ ಮೇಲೆ ಎಷ್ಟು ದಿನ ಮಕ್ಕಳಾಗದಿರಲಿಕ್ಕ ಸಾಧ್ಯ ಹೇಳು? ಮದುವೆಯಾದ ನಾಲ್ಕನೇ ವರ್ಷದಿಂದ ಎರಡು ವರ್ಷಕ್ಕೊಂದರಂತೆ, ಒಂದೊಂದೇ ಅಂತ ನಾಲ್ಕು ಮಕ್ಕಳಾದವು. ಎಲ್ಲಾ ಹೆಣ್ಣೇ ಆಗಬೇಕೆ? ನನ್ನ ಹೊಟ್ಯಾಗ ಒಂದಾದರೂ ಗಂಡು ಕೂಸು ಹುಟ್ಟಲಿಲ್ಲ. ಎರಡನೇ ಹುಡುಗಿ ಹನ್ನೆರಡನೇ ವಯಸ್ಸಿನಾಗ ತೀರಿಕೊಂಡಿದ್ದು ನಿನಗೆ ಗೊತ್ತ ಐತೆ.

ಉಳಿದ ಮೂರೂ ಮಕ್ಕಳೂ ಹೆಂಗೋ ಬೆಳದ್ವು, ಹೆಂಗೋ ದೊಡ್ಡವಾದ್ವು. ಹಾಂಗೇ ಮೂವರ್ದೂ ಹೆಂಗೋ ಮದುವಿನೂ ಆಗೋಯ್ತು. ಮಕ್ಕಳ ಮದುವಿಗೆ ಅಂತ ನಿಮ್ಮಂಥಹವರ ಸಂಗಡ ಸಾಲಾನೂ ಆಯ್ತು. ಮಳಿ, ಬೆಳಿ ಸರಿಯಾಗಿದ್ರ ಸಾಲ ಗೀಲ ಆಗ್ತಿರಲಿಲ್ಲ. ಗೊಬ್ಬರದಂಗಡ್ಯಾಗ ಸಾಲ, ಬ್ಯಾಂಕಿನ್ಯಾಗ ಸಾಲ ಅಂತ ಮೈ ತುಂಬಾ ಸಾಲ ಆಗ್ಯಾದ. ಸಾಲಕ್ಕ ಬರೀ ಬಡ್ಡೀ ತೀರ್ಸೋದ್ರೊಳಗ ನಾವು ಹೈರಾಣಾಗೀವಿ. ನಿಮ್ಮ ಮಾವನೂ ಈಗ ಮೊದ್ಲಿನಂಗಿಲ್ಲ. ಮೊದಲು ಬೀಡಿ, ಸಿಗರೇಟು ಅಂತ ಆಗೊಮ್ಮೆ, ಈಗೊಮ್ಮೆ ಸೇದ್ತಿದ್ದ. ಅದರ ಜೊತೆಗೆ ಆವಗೊಮ್ಮೆ ಇವಗೊಮ್ಮೆ ಅಂತ ಗೆಳ್ಯಾರ ಜೊತೆ ಇಸ್ಪೀಟ ಆಡತಿದ್ದ, ಅಷ್ಟೆ. ಆದರ ಈಗೀಗ ಕುಡೀಲಕ್ಕೂ ಚಾಲೂ ಮಾಡ್ಯಾನ. ಕುಡುದು ಬಂದ ಮನ್ಯಾಗ ಒದರ್ಯಾಡಲಿಕ್ಕ ಶುರು ಮಾಡ್ಯಾನ.

ಮೂವರು ಮಕ್ಕಳ ಮದುವಿ ಮುಗ್ಸೋದ್ರೊಳಗ ನಾವು ಗಂಡ-ಹೆಂಡತಿ ಮೆತ್ತಗಾಗಿದ್ವಿ. ಆಮ್ಯಾಲೆ ಒಬ್ಬೊಬ್ಬ ಮಗಳ ಎರಡು ಮೂರು ಬಸಿರು, ಬಾಣಂತನ ಮಾಡೋದ್ರೊಳಗ ನಾನಂತೂ ನಿಕ್ಕಳಕ ಬಿದ್ದೀನಿ. ಅಕ್ಕಡೆ ಹೊಲ ಮನಿ ಕೆಲಸ ನೋಡ್ಕೊಳ್ಳೋದು ಒಂದು ಕೆಲಸ ಆದರ, ಇಕ್ಕಡೆ ಮಕ್ಕಳು, ಮೊಮ್ಮಕ್ಕಳನ್ನು ನೋಡ್ಕೊಳ್ಳೋದು ಇನ್ನೊಂದು ಕೆಲಸ. ಇವರು ಕುಡ್ಯಾಕ ಹತ್ತಿದ ಮ್ಯಾಲ ಹೊಲದ ಕೆಲಸ ಹೆಚ್ಚು ಕಡಿಮೆ ನನಗ ಹತ್ಯದ. ಯಾವುದಕ್ಕೂ ಜವಾಬ್ದಾರಿ ತೊಗೊಳ್ಳೊದಿಲ್ಲ. ಈ ಸಂಸಾರದ ಜಂಜಾಟದೊಳಗ ಆಸರಿಕೆ, ಬ್ಯಾಸರಿಕೆ ಇಲ್ಲದ, ಕತ್ತೆ ಹಂಗ ದುಡಿದು, ದುಡಿದೂ ಮೆತ್ತಗಾಗಿ ಹೋಗೀನಿ.

ಎಲ್ಲಾ ಮಕ್ಕಳ ಮದುವಿ, ಬಾಣಂತನ ಎಲ್ಲಾ ಮುಗ್ಸೀನಿ, ಇನ್ನ ಮುಂದ ಆರಾಮ ಮಾಡಬಹುದೆಂದು ನಾವೂ ಅಂದ್ಕೊಂಡಿದ್ದಿವಿ. ಎಲ್ಲಾ ಸರಿಯಾಗೈತೆ ಎಂದು ಅಂದುಕೊಂಡಾಗ್ಲೇ, ಹೊಸದೊಂದು ಕಿರಿ, ಕಿರಿ ಶುರುವಾಗ್ಲಿಕ್ಯತ್ತದ. ನನ್ನ ಗಂಡನಿಗೆ ಕಡಿಮೆ ವರದಕ್ಷಿಣೆ ಕೊಟ್ಟೀರಿ, ಆಕಿ ಗಂಡಗೆ ಹೆಚ್ಚಿನ ವರದಕ್ಷಿಣೆ ಕೊಟ್ಟೀರಿ. ಅದರಂಗ ನಮಗೂ ಉಳಿದ ಹಣ ಕೊಡ್ರಿ ಎಂದು ಒಬ್ಬಾಕಿ ಹೇಳ್ಲಿಕತ್ಯಾಳ. ನನ ಗಂಡಗ ಬಂಗಾರ ಕೊಟ್ಟಿಲ್ಲ, ಆದರ ಆಕಿ ಗಂಡಗ ಬಹಳ ಕೊಟ್ಟೀರಿ. ಅದರಂಗ ನಮಗೂ ಬಂಗಾರ ಕೊಡ್ರಿ ಎಂದು ಇನ್ನೊಬ್ಬಾಕಿ ಹೇಳಾಕ ಚಾಲೂ ಮಾಡ್ಯಾಳ. ಹೆಂಗೂ ನಾವು ಮೂರು ಜನ ಹೆಣ್ಣುಮಕ್ಕಳೇ ನಿಮಗ. ನಿಮ್ಮ ಹೊಲ, ಮನಿ ನಮ್ಮ ಮೂವರಲ್ಲಿ ಈಗಲೇ ಹಂಚಿಬಿಡ್ರಿ ಎಂದು ಮತ್ತೊಬ್ಬಾಕಿ ಹೇಳಕತ್ಯಾಳ. ನನಗಂತೂ ಒಂದೂ ತಿಳಿದಂಗಾಗ್ಯದ.

ನಿನಗ ಗೊತ್ತಿದ್ದ ಐತೆ, ಎನಂದ್ರ, ಹಿರೇ ಮಗಳು ಪಾರ್ವತಿಯನ್ನು ಖಾಸಾ ತಮ್ಮನಗೇ ಕೊಟ್ಟಿದ್ದು. ಅವ ಗುಮ್ಮನ ಗುಸುಗ, ಮೆತ್ತನ ಕಳ್ಳ, ತನಗ ಆಗ ವರದಕ್ಷಿಣೆ ಕೊಟ್ಟಿಲ್ಲ, ಈಗ ಕೊಡ್ರಿ ಅಂತ ಹೆಂಡ್ತಿಗೆ ಹಚ್ಚಿ ಕುಂತಾನ. ಮೂರನೇ ಮಗಳು ಸರಸ್ವತಿಗೆ ವರದಕ್ಷಿಣೆ ಕೊಟ್ಟದ್ದು ಅವಗ ಕಣ್ಣಾಗ ಒತ್ತಲಿಕ್ಕತೈತೆ. ಆವಾಗ ವರದಕ್ಷಿಣೆ ಬ್ಯಾಡ ಅಂತ ತಾನ ಹೇಳ್ಯಾನ. ಈಗ ನೋಡಿದ್ರ ಹೀಂಗ ಅನ್ನಾಕತ್ಯಾನಂತ. ಮೂರನೇ ಅಳಿಯನಿಗೆ ವರದಕ್ಷಿಣೆನೂ ಜಗ್ಗಿ ಕೊಟ್ಟೀರಿ, ಮತ್ತು ಅವಗ ಆಸ್ತೀಲೂ ಸರಿ ಪಾಲು ಬರತೈತೆ ಅಂತ ಅವನ ವಾದ ಈಗ. ಇದಕ್ಕಾಗೇ ಮಗಳದು ಬಲು ಕಿರಿ, ಕಿರಿ, ರಿಪಿ, ರಿಪಿ ನಡೆದೈತೆ ಈಗ.

ಎರಡನೇ ಅಳಿಯನ ಊರು ನಮ್ಮ ಊರಿನ ಪಕ್ಕದಾಗ ಇರೋದ್ರಿಂದ ನಮ್ಮ ಹೊಲ, ತನ್ನ ಹೊಲಾನೆಲ್ಲಾ ನಮ್ಮ ಮನೆಲೇ ಇದ್ದುಕೊಂಡು ನೋಡ್ಕೊಳ್ಳಲೀ ಅಂತ ಅಳಿಯ, ಮಗಳು ಇಬ್ರುನ್ನೂ ಮನೇಲಿಟ್ಟುಕೊಂಡು ಅವರ ಮೂರೂ ಮಕ್ಕಳ ಹೇಲು, ಉಚ್ಚಿ ಎಲ್ಲಾ ತೊಳ್ದೆವು, ಬಳ್ದೆವು ಬ್ಯಾಸರ ಮಾಡಿಕೊಳ್ಳದಂಗ. ಈಗ ಅವ ಏನಂತಾನ ಅಂತ ಅಂದ್ರ, ನಾನೊಬ್ಬಾತ ಎಲ್ಲರ ಪಾಲಿನ ಹೊಲ ಯಾಕ ಮಾಡ್ಬೇಕು? ಎಲ್ಲರ ಸಲುವಾಗಿ ನಾನ್ಯಾಕ ಇವರ ಮನ್ಯಾಗ ದುಡೀಬೇಕು ಅಂತ ಹೆಂಡತಿ ಮಕ್ಕಳನ್ನು ಹೊಂಡಿಸಿಕೊಂಡು ತನ್ನ ಊರಿಗೆ ಹೋಗ್ಯಾನ. ಮಗಳು ಲಕ್ಷ್ಮೀನೂ ಸಹ ಅವನ ತಾಳಕ್ಕ ಕುಣೀಲಕ್ಕ ಹತ್ಯಾಳ. ತನ್ನ ಗಂಡ ಇವರ ಮನಿ ಸಂಬಳದಾಳೇನು ಅಂತ ಅನ್ನಲಿಕ್ಕ ಹತ್ಯಾಳಂತ.

ಈ ಮೂರೂ ಮಕ್ಕಳ ಕಿತ್ತಾಟ, ಕಿತಾಪತಿ ಕೇಳಿ, ಕೇಳಿ ನನಗಂತೂ ಒಂದು ತರ ಜೀವ ರೋಸಿ ಹೋದಂಗಾಗ್ಯದ. ಇವರಿಗಾಗಿ ನಮ್ಮ ಜೀವನ ತೇಯ್ದದ್ದು ಯಾರಿಗೂ ಬೇಕಾಗಿಲ್ಲಂತ ಅನಸ್ಲಿಕ್ಕತ್ಯದ. ಇವರ ಮೇಲೆ ನನಗ ಒಂದು ತರ ಹೇಸಿಕೆ ಬಂದಂಗಾಗಕ್ಕತ್ಯದ. ಇದನ್ನ ಮನಸ್ಸಿಗೆ ಹಚ್ಚಿಕೊಂಡು ಇವರು ಈಗೀಗ ಇನ್ನೂ ಹೆಚ್ಚಿಗೆ ಕುಡೀಲಕ್ಕ ಹತ್ಯಾರ. ಏನು ಮಾಡಿದ್ರ ಏನೈತೆ? ಮಕ್ಕಳಿಗಾಗಿ ತಾ ಎಷ್ಟೆಲ್ಲಾ ಕಷ್ಟ ಪಟ್ರೂ, ತ್ಯಾಗ ಮಾಡಿದ್ರೂ ಇವರ್ಯಾರಿಗೂ ನಾವು ಬೇಕೇ ಇಲ್ಲವಲ್ಲಾ? ನಾವು ಇನ್ನು ಬದುಕಿದ್ದೂ ಪ್ರಯೋಜನವೇನು? ನಾವು ಯಾರಿಗಾಗಿ ಬದುಕಬೇಕಾಗೈತೆ? ಅಂತ ಪೇಚಾಡ್ಲಿಕ್ಕೆ ಹತ್ಯಾರ ಇವರು. ನನಗಂತೂ ದಿಕ್ಕೇ ತೋಚದಂಗಾಗ್ಯದ. ಇದ ವಿಷಯ ನೋಡು ತಂಗಿ ನನಗ ಬ್ಯಾಸರ ತಂದಿದ್ದು. ಎಂದು ರುದ್ರಮ್ಮ ದುಗುಡದಿಂದ ಹೇಳಿ ಮುಗಿಸಿದಳು.

ಅಯ್ಯಾ, ಹುಚ್ಚು ಕೋಡಿ ಹೆಣ್ಣು ಮಗಳಾ, ನಿನ್ನ ಧೈರ್ಯ ಮೆಚ್ಚಿಕೊಂಡಿದ್ದ ನಮ್ಮ ಮನೆಯವರ ನಂಬಿಕೆಯನ್ನು ನೀ ಹುಸಿ ಮಾಡಲಿಕ್ಕೆ ಹತ್ತಿಯಲ್ಲ? ಇದೇನಂಥ ದೊಡ್ಡ ವಿಷಯವಲ್ಲ ಬಿಡು. ನೀ ಚಿಂತಿ ಮಾಡೂ ಅವಶ್ಯಕತೆನೇ ಇಲ್ಲ. ಬ್ಯಾಸರ ಮಾಡಿಕೋ ಬ್ಯಾಡಬೇ ಎಕ್ಕಾ? ಎಂದು ಸಮಾಧಾನ ಮಾಡತೊಡಗಿದಳು ಅಂಬಿಕಾ.

ಏನಬೇ, ನೀ ಏನ ಮಾತಾಡಕತ್ತೀಯಂತ ನಿನಗ ತಿಳಿವಲ್ತೇನು? ಇದೇನು ಅಂಥಹ ದೊಡ್ಡ ವಿಷಯ ಅಲ್ಲೇನು? ಅದೆಂಗಬೇ? ತಿಳಿಸ್ಯರ ಹೇಳು.

ನೋಡವಾ ಎಕ್ಕಾ, ಇವೆಲ್ಲಾ ಎಲ್ಲರ ಮನ್ಯಾಗ ಇದ್ದದ್ದೇ. ಅದಕ್ಯಾಕ ನೀವು ಗಂಡ-ಹೆಂಡತಿಯರಿಬ್ಬರೂ ಇಷ್ಟು ಬ್ಯಾಸರ ಮಾಡಿಕೋ ಬೇಕು? ಧೈರ್ಯ ತಗೋ. ಎಲ್ಲಾ ಸರಿ ಹೋಕೈತೆ. ಹೊಲ, ಮನ ಎಲ್ಲಾ ಮಾಮನ ಹೆಸರಿಲೇ ಇರೋದಲ್ಲವಾ? ಅಂದ ಮೇಲೆ ಮಕ್ಕಳಿಗೆ, ಅಳಿಯಂದಿರಿಗೆ ಹೇಳ್ರೀ, ಏನಂದ್ರ, ನಾವು ಜೀವಂತ ಇರೋವರೆಗೂ ನಮ್ಮ ಆಸ್ತೀಲಿ ಒಂದು ತುಣುಕೂ ನಿಮ್ಮ ಹೆಸರಿಲೆ ಮಾಡಿಕೊಡೋದಿಲ್ಲ. ನಿಮಗೆ ಆಸ್ತಿ ಕೊಡ್ತೀವಂತ ನಾವೆಂದೂ ನಿಮಗೆ ಹೇಳಿಲ್ಲ. ನಮ್ಮ ಜೀವ ಇರೋಮಟ ಅನುಭವಿಸ್ತೀವಿ. ಹಂಗೇನಾದ್ರೂ ಅಂಥ ಪ್ರಸಂಗ ಬಂದ್ರ, ಆಸ್ತಿ ಮಾರಿ ಮೊದಲು ಸಾಲ, ಗೀಲಾ ಚುಕ್ತಾ ಮಾಡ್ತೀವಿ. ಸಾಲ, ಗೀಲಾ ತೀರ್ಸಿದ ಮ್ಯಾಲ ಉಳಿದ ದುಡ್ಡನ್ನ ನಮ್ಮಿಬ್ರ ಹೆಸರಿನ್ಯಾಗ ಬ್ಯಾಂಕಿನ್ಯಾಗ ಇಟ್ಟು ಜೀವನ ನಡೆಸ್ತೀವಿ. ಅಂತ ಅವರಿಗೆ ಮುಖಕ್ಕೆ ಹೊಡೆದಂಗ ಹೇಳ್ರಿ ಎಂದಳು ಅಂಬಿಕಾ.

ಇದಕ್ಕ ಅವರು ಒಪ್ಪಿ ಸುಮ್ಮನ ಆಗ್ತಾರೇನು? ರುದ್ರಮ್ಮ ಸಂಶಯ ವ್ಯಕ್ತ ಪಡಿಸಿದಳು.

ಅವರು ಒಪ್ಪಿದ್ರೇನು, ಬಿಟ್ರೇನು? ಅವರಿಗೆ ಯಾವ ಅಧಿಕಾರ ಐತೆಂತ ಹೀಂಗ ಕೇಳ್ಲಿಕತ್ಯಾರ? ಅವರಿಗೆ ಯಾವ ಅಧಿಕಾರವೂ ಇಲ್ಲ ತಿಳುಕೋ ನೀ. ಅವ್ರೇನಾದ್ರೂ ಇನ್ನೊಂದು ಸಲ ಆಸ್ತಿಯ ಮಾತೆತ್ತಿದ್ರೆ ಅವ್ರನ್ನು ನಮ್ಮ ಹತ್ರ ಕಳುಹಿಸಿಕೊಡ್ರಿ. ನಾವೆಲ್ಲಾ ಅವ್ರಿಗೆ ತಿಳಿಸಿ ಹೇಳ್ತೀವಿ. ನೋಡವಾ, ಹಂಗ ನಾ ಇನ್ನೊಂದು ಮಾತ ಹೇಳ್ತೀನಿ. ನಾ ಹೀಂಗ ಹೇಳ್ತಿನಂತ ಬ್ಯಾಸರ ಮಾಡಿಕೋ ಬ್ಯಾಡ. ನಿನಗ, ಮಾಮನಿಗೆ ಅಷ್ಟು ಬ್ಯಾಸರ ಆಗಿದ್ರ ನಮ್ಮಲ್ಲಿಗೇ ಬಂದು ಬಿಡ್ರಿ. ನಿಮ್ಮಿಬ್ರಿಗೂ ಹೊಟ್ಟೆ, ಬಟ್ಟೆಗೆ ನೋಡಿಕೊಳ್ಳೊದಕ್ಕ ನಮಗೆ ಆಗೋದಿಲ್ಲೇನು? ಮಾಮಗೆ ನಾ ತಿಳಿಸಿ ಹೇಳ್ತೀನಿ. ಹಾಂಗ ಕುಡಿತದ ಬಗ್ಗೆನೂ ಆತನಿಗೆ ಪಾಠ ಹೇಳ್ತಿನಿ. ನೀವಿಬ್ರೂ ಲವಲವಿಕೆಯಿಂದ ಇರ್ಬೇಕೆಂದು ನನ್ನ ಮನವಿ. ಎಂದಳು ಅಂಬಿಕಾ ಹೃದಯ ತುಂಬಿ.

ಆಯ್ತು ಬಿಡವ್ವಾ, ನೀ ಇಷ್ಟು ಹೇಳ್ತಿದಿಯೆಂದ ಮ್ಯಾಲ ನಾ ಕೇಳಂಗಿಲ್ಲೇನವಾ? ನಿನ್ನ ಮಾತಿಂದ ನನಗಂತೂ ಬಾಳ ಸಂತೋಷ ಆಗೈತೆ. ನಮ್ಮವರೆನ್ನುವವರು ಇದ್ದಾರಲ್ಲ ಅಂತ ಒಂದು ರೀತಿ ಖುಷಿ ಆಗ್ಲಿಕ್ಕತ್ಯದ. ನಿನ್ನ ಮಾತು ಕೇಳಿ ನನಗಂತೂ ಎದೆ ಭಾರ ಇಳಿದಂಗಾತು. ನಿನ್ನ ಮಾವನಿಗೂ ನೀ ಸ್ವಲ್ಪ ಧೈರ್ಯ ಹೇಳವ್ವಾ? ನಮ್ಮ ಮೂರೂ ಜನ ಮಕ್ಕಳೂ, ಅಳಿಯಂದ್ರೂ ಆಸ್ತಿಯ ಲೆಕ್ಕಾಚಾರದಲ್ಲಿ ಮುಳುಗಿರುವಾಗ ನಿನ್ನ ಮಾತು ಕೇಳಿ ನಂಗ ಹೋಳಿಗೆ ತುಪ್ಪ ಉಂಡಂಗಾತವ. ಎಂದು ಹೃದಯ ತುಂಬಿ, ಕಣ್ತುಂಬಿ ಹೇಳುತ್ತಾ ರುದ್ರಮ್ಮ ಅಂಬಿಕಾಳನ್ನು ಬಿಗಿದಪ್ಪಿದಳು.

ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು (9448989332)

Monday, November 28, 2011

Prajsamara Cover Page

"ಸಾಮಾಜಿಕ ನ್ಯಾಯ" ಸಮಾವೇಶ (Build the nation on justice - social justice conference)

ದೇಶದಲ್ಲಿ ದಲಿತ, ಅಲ್ಪಸಂಖ್ಯಾತ ವರ್ಗಗಳಿಗೆ ಎಷ್ಟರ ಮಟ್ಟಿಗೆ ಸಾಮಾಜಿಕ ನ್ಯಾಯ ಎಂಬುದು ಸಿಕ್ಕಿದೆ ಮತ್ತು ದೇಶದ ಪ್ರತಿಷ್ಟಿತ ಸಂವಿಧಾನವನ್ನು ರಾಜಕಾರಣಿಗಳು ಎಷ್ಟರ ಮಟ್ಟಿಗೆ ಒಪ್ಪಿಕೊಂಡಿದ್ದಾರೆ ಹಾಗೂ ದೆಹಲಿಯಲ್ಲಿ ನಡೆಯಲಿರುವ "ಸಾಮಾಜಿಕ ನ್ಯಾಯ" ಸಮಾವೇಶದ ಉದ್ದೇಶವಾದರೂ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ವರದಿ ನೀಡುತ್ತದೆ - ಸಂ.

ಭಾರತ ವಿಶ್ವದ ಶಕ್ತಿ ಶಾಲಿ ರಾಷ್ಟ್ರವಾಗುತ್ತಿದೆ ಭಾರತ ಪ್ರಕಾಶಿಸುತ್ತಿದೆ ಎಂದೆಲ್ಲಾ ತಮ್ಮಷ್ಟಕ್ಕೆ ರಾಜಕಾರಣಿಗಳು ಹಾಡುತ್ತಿರುವಾಗ ಈ ದೇಶ ಎಷ್ಟು ಕೆಳಮಟ್ಟಕ್ಕೆ ತಳ್ಳಲ್ಪಟ್ಟಿದೆ ಎನ್ನುವ ಕಟು ವಾಸ್ತವವನ್ನು ತಿಳಿಯಲೇಬೇಕು. ಸ್ವಾತಂತ್ರ್ಯ ಸಿಕ್ಕು 64 ವರ್ಷಗಳು ಕಳೆದರೂ ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಕೋಮುವಾದ, ಜಾತೀಯತೆ, ಫ್ಯಾಸಿಸಂ, ಬಂಡವಾಳಶಾಹಿತ್ವ, ಸಾಮ್ರಾಜ್ಯ ಶಾಹಿತ್ವ, ಭ್ರಷ್ಟಾಚಾರ ಮುಂತಾದ ಜನವಿರೋಧಿ ಶಕ್ತಿಗಳಿಗೆ ಮೇಲುಗೈಯಾಗುತ್ತಿದೆ. ಸಮಾನ ಅಭಿವೃದ್ಧಿ, ಸಮಾನ ನ್ಯಾಯ ಅವಕಾಶಗಳು, ಸಂಪತ್ತಿನ ಸಮಾನ ಹಂಚಿಕೆ ಮುಂತಾದ ನೈಜ ಸಮಾಜವಾದ ಎಲ್ಲಿ ಮಾಯವಾಗಿದೆಯೋ ಎಂಬಂತಾಗಿದೆ. ಸಾಮಾಜಿಕ ನ್ಯಾಯ ಎಂಬುದು ಇನ್ನೂ ಮರಿಚೀಕೆಯಾಗಿಯೇ ಉಳಿದಿದೆ. ರಾಜಕೀಯ, ಆಥರ್ಿಕ, ಆಡಳಿತ ಮುಂತಾದ ಕ್ಷೇತ್ರಗಳನ್ನು ಮೇಲ್ಜಾತಿಗಳು ಹಾಗೂ ಬಂಡವಾಳಶಾಹಿಗಳು ತನ್ನ ಕಪಿಮುಷ್ಟಿಯಲ್ಲಿ ಭದ್ರವಾಗಿ ಹಿಡಿದಿಟ್ಟಿರುವಾಗ ಸಮಾಜದ ಕೆಳಸ್ತರಗಳ ಜನತೆಗೆ, ಶೋಷಿತ ಅಲ್ಪಸಂಖ್ಯಾತ ವರ್ಗಗಳಿಗೆ, ಗ್ರಾಮೀಣ - ರೈತಾಪಿ ವರ್ಗಗಳಿಗೆ ಅಭಿವೃದ್ಧಿ, ಸಮಾನತೆ ಹಾಗೂ ನ್ಯಾಯ ಸಿಗುವುದಾದರೂ ಹೇಗೆ ?. ಆ ಅರ್ಥದಲ್ಲಿ ನೋಡುವುದಾದರೆ, ಸಾಮಾಜಿಕ ನ್ಯಾಯಕ್ಕಾಗಿ ಮತ್ತೆ ಸ್ವಾತಂತ್ರ್ಯ ಸಂಗ್ರಾಮವನ್ನು ದೇಶದಲ್ಲಿ ನಡೆಸಲೇಬೇಕಾದ ಅನಿವಾರ್ಯತೆ, ಅಗತ್ಯತೆ ಅತ್ಯಂತ ನಿಚ್ಚಳವಾಗುತ್ತಿದೆ.

ಡಾ.ಬಿ.ಆರ್ ಅಂಬೇಡ್ಕರ್ರವರು ರಚಿಸಿದ ನಮ್ಮ ದೇಶದ ಅನುಪಮ ಸಂವಿಧಾನದ ಅಧ್ಯಾಯ 15(1)ರಲ್ಲಿ ದೇಶದ ಯಾವೊಬ್ಬ ಪ್ರಜೆಗೂ ಧರ್ಮ, ಕುಲ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಆಧಾರದಲ್ಲಿ ಸಕರ್ಾರಗಳು ತಾರತಮ್ಯ ಧೋರಣೆಯನ್ನು ತೋರಬಾರದು ಎಂದಿದೆ. ಆದರೆ, ಇಂದು ಈ ಉದಾತ್ತ ಮೌಲ್ಯಗಳನ್ನು ಕೇವಲ ಸಂವಿಧಾನ ಗ್ರಂಥಕ್ಕೆ ಮಾತ್ರ ಸೀಮಿತಿಗೊಳಿಸಿರುವಂತೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದಲಿತರ, ರೈತರ, ಅಲ್ಪಸಂಖ್ಯಾತ, ಆದಿವಾಸಿ ಬುಡಕಟ್ಟುಗಳ ಬದುಕು ಅತ್ಯಂತ ದುಸ್ತರವಾಗಿದೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ, ಜಾತ್ಯಾತೀತ, ಸಮಾಜವಾದಿ ಗಣತಂತ್ರ ರಾಷ್ಟ್ರವೆಂಬ ಹೆಗ್ಗಳಿಕೆಯಿಂದ ಬೀಗುತ್ತಿರುವ ಈ ದೇಶದ ಅಂತರಾಳದಲ್ಲಿ ಹುದಗಿರುವ ಕರುಣಾಜನಕ ಕಹಿ ವಾಸ್ತವಗಳು ನಮ್ಮನ್ನು ಬೆಚ್ಚಿಬೀಳಿಸುತ್ತಿವೆ.

ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಿದೆ ಎನ್ನಬೇಕಾದರೆ, ಆ ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನ ಅಭಿವೃದ್ಧಿ, ನ್ಯಾಯ, ಸ್ವಾತಂತ್ರ್ಯ ಸಿಕ್ಕಿರಬೇಕು. ಹಾಗಲ್ಲದಿದ್ದರೆ ಆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನುವುದೇ ದೊಡ್ಡ ತಮಾಷೆ. ಇಂಡಿಯಾದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡತನದ ಪ್ರಪತಾಕ್ಕೆ ಬೀಳುತ್ತಿದ್ದಾರೆ. ನಮ್ಮ ದೇಶದ ಅಭಿವೃದ್ಧಿಯನ್ನು ಇದೀಗ ತಲಾ ವಾಷರ್ಿಕ ಆದಾಯ ಆಧಾರದಲ್ಲಿ ಪರಿಗಣಿಸದೇ ಕೇವಲ ಶ್ರೀಮಂತ ಉದ್ಯಮಿಗಳ ಅಥವಾ ಒಟ್ಟು ಆದಾಯದ ಲೆಕ್ಕದಲ್ಲಿ ಪರಿಗಣಿಸಲಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಉನ್ನತಿಗಾಗಿ ಸಕರ್ಾರಗಳು, ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿವೆ.

1995 ರಿಂದೀಚೆಗೆ ನಮ್ಮ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 2.50 ಲಕ್ಷಕ್ಕೂ ಅಧಿಕ. ಇದು ದೇಶದ ಅತ್ಯಂತ ದೊಡ್ಡ ದುರಂತ. ಬಿತ್ತನೆ ಬೀಜಕ್ಕೋ, ಗೊಬ್ಬರಕ್ಕೋ ಅಥವಾ ಟ್ರಾಕ್ಟರ್ ಖರೀದಿಸಲೋ ರೈತರು ಪಡೆಯುತ್ತಿರುವ ಸಾಲ ರೂ. 10 ಸಾವಿರದಿಂದ ಒಂದೆರಡು ಲಕ್ಷದವರೆಗೆ ಇರಬಹುದು. ಇದಕ್ಕಾಗಿ ಬ್ಯಾಂಕುಗಳು ಹಾಕುವ ಬಡ್ಡಿ ಕೂಡ ವಾಷರ್ಿಕ ಶೇ.12ರವರೆಗೆ ಇರುತ್ತದೆ. ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗೆ ಸರಿಯಾದ ಬೆಲೆ ಸಿಗದೆ ಪಡಕೊಂಡ ಸಾಲವನ್ನೂ ಬಡ್ಡಿಯನ್ನೂ ತೀರಿಸಲಾಗದೆ ಮನೆ/ಟ್ರಾಕ್ಟರ್/ಜಮೀನು ಜಪ್ತಿಯನ್ನು ನೋಡಲಾಗದೇ ಅಥವಾ ಮಾನಕಳೆದುಕೊಳ್ಳುವದನ್ನು ತಡೆಯಲಾಗದೇ ರೈತ ಆತ್ಮಹತ್ಯೆಗೈಯ್ಯುತ್ತಾನೆ. ಇಷ್ಟೊಂದು ಆಗಾಧ ಸಂಖ್ಯೆಯಲ್ಲಿ ರೈತನು ಸರಣೆ ಆತ್ಮಹತ್ಯೆಗೈಯುತ್ತಿರಬೇಕಾದರೆ, ಸಕರ್ಾರಗಳು ರೈತರ ಕ್ಷೇಮಕ್ಕಾಗಿ ಮಾಡಿದ್ದು ಶೂನ್ಯವಲ್ಲದೆ ಇನ್ನೇನೂ ಇಲ್ಲ. ಅದೇ ಇಡೀ ಉದ್ಯಮಿಗಳಿಗೆ ಬಹುಕೋಟಿ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡುವ ಸಕರ್ಾರ ಅಂತಹ ಉದ್ಯಮಿಗಳಿಗೆ ನೀಡುವ ವಿನಾಯಿತಿ, ಪ್ರೋತ್ಸಾಹ ಅಪಾರ. ಇಂತಹ ಭಾರಿ ತಾರತಮ್ಯ ಧೋರಣೆಯನ್ನು ಸಹಿಸಲು ಸಾಧ್ಯವೇ?

ಕೆಲವು ದಿನಗಳ ಹಿಂದೆ ಕೋಲಾರ ಜಿಲ್ಲೆಯ ಕೆಜಿಎಪ್ ಎಂಬಲ್ಲಿ ಮಲದ ಗುಂಡಿಗೆ ಬಿದ್ದು ಮೂವರು ದಲಿತರು ಸಾವನ್ನಪ್ಪಿದರು. ಮೈಸೂರಿನಲ್ಲಿ ಡೋಲು ಬಾರಿಸಲು ಬಾರದ ದಲಿತರನ್ನು ಮೇಲ್ಜಾತಿಗಳು ಊರಿನಂದಲೇ ಹೊರಹಾಕಿದರು. ತುಮಕೂರಿನಲ್ಲಿ ಬ್ರಾಹ್ಮಣರು ವಾಸಿಸುವ ಸ್ಥಳದಲ್ಲಿದ್ದ ಬಾವಿಯೊಂದರಿಂದ ನರೆತ್ತಿದ್ದಕ್ಕೆ ದಲಿತರನ್ನು ಬಹಿಷ್ಕರಿಸಲಾಯಿತು. ಮಂಡ್ಯದಲ್ಲಿ ಕ್ಷೌರ ಮಾಡಿಸಲು ಹೊರಟ ಹಿರಿಯ ದಲಿತ ವ್ಯಕ್ತಿಯ ಮೂಗನ್ನೇ ಕೊಯ್ಯಲಾಯಿತು... ಇವೆಲ್ಲ ಮುಗಿದ ಕಥೆಗಳು. ಈ ಹಿಂದೆಯೂ ಈಗಲೂ ಇದು ನರಂತರ ಮುಂದುವರಿಯುತ್ತಲೇ ಬಂದ ಅಮಾನವೀಯ ಕೃತ್ಯಗಳು. ದೇಶದೆಲ್ಲೆಡೆ ಈ ರೀತಿಯ ಅಸ್ಪೃಶ್ಯತೆ, ಬಹಿಷ್ಕಾರ, ಹಲ್ಲೆ, ಹತ್ಯೆ ನಿರಂತರ ನಡೆಯುತ್ತಿರುವಾಗ ನಮ್ಮ ದಲಿತ ಬಂಧುಗಳ ಜೀವದ ಘನತೆಗೆ ಯಾವ ಕಳಕಳಿಯಿದೆ.

ದಲಿತರ ಮೇಲಿನ ಅನ್ಯಾಯಗಳನ್ನು ತಡೆಯಲು ಸಾಕಷ್ಟು ಕಾನೂನುಗಳನ್ನು ರಚಿಸಲಾಗಿದೆಯಾದರೂ ಅವು ಯಾವವೂ ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಗಿವೆ. ನ್ಯಾಷನಲ್ ಲಾ ಸ್ಕೂಲ್ ತನ್ನ ಅಭಿಯಾನದಲ್ಲಿ ತಿಳಿಸಿದಂತೆ ಕನರ್ಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಗಳ 646 ಪ್ರಕರಣಗಳ ಪೈಕಿ 578 ಪ್ರಕರಣಗಳು ಇತ್ಯರ್ಥಗೊಂಡಿದ್ದು ಅವುಗಳಲ್ಲಿ 27 ಪ್ರಕರಣಗಳಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದ್ದು ಉಳಿದ 551 ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿದೆ. ಸಮೀಕ್ಷೆಯೊಂದರ ಅಂಕಿ ಅಂಶ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ಗಂಟೆಗೊಮ್ಮೆ ದಲಿತ ಮಹಿಳೆಯ ಅತ್ಯಾಚಾರ ಹಾಗೂ ಪ್ರತಿ ಅರ್ಧ ಗಂಟೆಗೊಮ್ಮೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಯುತ್ತಿದೆ ಎನ್ನುತ್ತಿದೆಯಾದರೆ ದಲಿತ ಬಂಧುಗಳ ಜೀವನಕ್ಕೆ ಭದ್ರತೆ ಏನು? ಹಾಗೂ ದಲಿತರ ಮೇಲೆ ಆಕ್ರಮಣಗಳನ್ನು ಮಾಡುತ್ತಿರುವವರಿಗೆ ಶಿಕ್ಷೆ ಏನು?

ಶೇ.80ರಷ್ಟು ಗ್ರಾಮೀಣ ಪ್ರದೇಶಗಳಿರುವ ರೈತರು ಕೃಷಿ ಪ್ರಧಾನವಾಗಿರುವ ಈ ದೇಶದ ಫಲವತ್ತಾದ ಭೂಮಿಯನ್ನು ಸಕರ್ಾರಗಳು ವಿದೇಶಿ ಕಂಪನಗಳಿಗೆ ಮಾರುತ್ತಿವೆ. ಬಹುರಾಷ್ಟ್ರೀಯ ಕಂಪೆನಿಗಳು ಬೃಹತ್ ಉದ್ಯಮಗಳನ್ನು ಸ್ಥಾಪಿಸಲು ಬೇಕಾದ ಸಾವಿರಾರು ಎಕರೆಗಳಷ್ಟು ಭೂಮಿಯನ್ನು ಪ್ರತಿ ಜಿಲ್ಲೆಗಳಲ್ಲಿ ಸಕರ್ಾರಗಳು ರೈತರಿಂದ ಬಲವಂತದಿಂದ ಕಿತ್ತಿಕೊಳ್ಳುತ್ತಿವೆ. ಅರಣ್ಯಗಳಲ್ಲಿ ಬೆಟ್ಟಗುಡ್ಡ ಪರಿಸರಗಳಲ್ಲಿ ನೂರಾರು ವರ್ಷಗಳಿಂದ ಬದುಕಿ ಬಂದಿರುವ ಆದಿವಾಸಿ, ಬುಡಕಟ್ಟುಗಳನ್ನು ಮೈನಂಗ್ ಮಾಫೀಯಾ ಹಿತಾಸಕ್ತಿಗಳು ಬಲತ್ಕಾರವಾಗಿ ಒಕ್ಕಲೆಬ್ಬಿಸುತ್ತಿವೆ. ಗ್ರಾಮೀಣ ಪರಿಸರಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ರಸ್ತೆ, ನೀರು, ಮೂಲಭೂತ ಅಗತ್ಯೆತೆಗಳ ಬಗ್ಗೆ ಹಾಗೂ ಸಕರ್ಾರಗಳ ಪ್ರಜಾತಂತ್ರ ವಿರೋಧಿ ನೀತಿಗಳ ಬಗ್ಗೆ ಮಾತನಾಡಿದರೆ, ಅಂತಹವರನ್ನು ನಕ್ಸಲ್ವಾದಿಗಳೆಂದು ಚಚ್ಚಲಾಗುತ್ತಿದೆ. ಅಮಾಯಕ / ಅಶಕ್ತ ಗ್ರಾಮೀಣರ, ಹಳ್ಳಿಗರ ಮೇಲೆ ನಕ್ಸಲ್ ನಿಗ್ರಹಪಡೆಗಳು ನಡೆಸುವ ಅನ್ಯಾಯ, ಅತ್ಯಾಚಾರಗಳು ಅಕ್ಷ್ಯಮ್ಯ..

ನಗರಗಳ ಆಧುನಿಕೀಕರಣಕ್ಕೆ ಮಾತ್ರವೇ ಪ್ರಾಶಸ್ತ್ಯ ನೀಡುತ್ತಿರುವ ಸಕರ್ಾರಗಳು ಮತ್ತು ರಾಜಕೀಯ ಪಕ್ಷಗಳು ಗ್ರಾಮ, ಹಳ್ಳಿಗಳ ಉದ್ದಾರಕ್ಕೆ ಚಿಕ್ಕಾಸಿನ ಕಿಮ್ಮತ್ತನ್ನೂ ನೀಡುವುದಿಲ್ಲ. ನಗರಗಳಲ್ಲಿ ಕೆಲಸ ಮಾಡುತ್ತಿರುವ ಐಟಿ/ಬಿಟಿ ಕ್ಷೇತ್ರಗಳಲ್ಲಿರುವ ಮಂದಿಗಳ ಮಾಸಿಕ ಆದಾಯದ ಲೆಕ್ಕ ಒಂದು ಲಕ್ಷದ ಮೇಲೆಯೇ ಇರುವಾಗ ಬಿಸಿಲು ಮಳೆ ಚಳಿಗಳಿಗೆ ಮೈಯೊಡ್ಡಿ ದುಡಿಯುವ ಹಳ್ಳಿಗನ ಸಂಪಾದನೆ ದಿನಕ್ಕೆ ರೂ.20ಕ್ಕೂ ಕಡಿಮೆ. ಇದೇನು ಅಂತರ!

ಸಂವಿಧಾನದ ಅಧ್ಯಾಯ 39(ಎ)ರಲ್ಲಿ ಸಮಾನ ನ್ಯಾಯವನ್ನು ಪ್ರತಿಪಾದಿಸುತ್ತಾ ಸಮಾನ ಅವಕಾಶಗಳ ಆದಾರದಲ್ಲಿ ನ್ಯಾಯಿಕ ವ್ಯವಸ್ಥೆಯು ಕಾಯರ್ಾಚರಿಸುವ ಖಾತರಿಯನ್ನು ಸಕರ್ಾರಗಳು ಪಾಲಿಸಲೇಬೇಕು.. ಯಾವುದೇ ಕೊರತೆಗಳಿಂದಾಗಿ ಯಾವನೇ ಒಬ್ಬ ನಾಗರೀಕನಿಗೂ ನ್ಯಾಯ ನಿರಾಕರಣಿಯಾಗದಂತೆ ಖಾತರಿಪಡಿಸಬೇಕು ಎಂದಿದೆ. ಆದರೆ, ದೇಶದಲ್ಲಿಂದು ನ್ಯಾಯದ ಸಮರ್ಪಕ ಒದಗಿಸುವಿಕೆಯು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿವೆ. ಮುಸ್ಲಿಂ, ಕ್ರೈಸ್ತ ಮುಂತಾದ ಅಲ್ಪಸಂಖ್ಯಾತ ಸಮುದಾಯಗಳ ಜನತೆಯ ಮೇಲಿನ ಆಕ್ರಮಣಗಳನ್ನು ನಡೆಸುವ ಫ್ಯಾಸಿಸ್ಟ್ ಶಕ್ತಿಗಳ ಕೃತ್ಯಗಳ ತನಿಖೆಯಾಗಲೀ, ಶಿಕ್ಷೆಯಾಗಲಿ ನಡೆಯುತ್ತಿಲ್ಲ. ಬಾಬರೀ ಮಸೀದಿ ದ್ವಂಸದ 17 ವರ್ಷಗಳ ಸುದೀರ್ಘ ತನಿಖೆ ನಡೆಸಿದ ಲಿಬಹರ್ಾನ್ ಕಮೀಷನ್ ನಡಿದ ವರದಿಯಲ್ಲಿ 68 ಮಂದಿ ಆರೋಪಿಗಳ ಹೆಸರಿತ್ತು. ಎಲ್.ಕೆ ಅಡ್ವಾಣಿ, ವಾಜಪೇಯಿ, ಜೋಷಿ, ರಿತಾಂಬರ, ಉಮಾಭಾರತಿ ಮುಂತಾದವರು ಆರೋಪಿಗಳು. ಆದರೆ, ದ್ವಂಸದ ನಂತರ ಈ ಆರೋಪಿಗಳು ದೇಶದ ಪ್ರಧಾನಿ, ಗೃಹಮಂತ್ರಿ ಮುಂತಾದ ಹುದ್ದೆಗಳನ್ನು ಅನುಭವಿಸಿದರು. ದೇಶದ ಜಾತ್ಯಾತೀತ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದ ಆ ಕ್ರಿಮಿನಲ್ಗಳ ಮೇಲೆ ಯಾವುದೇ ಕ್ರಿಮಿನಲ್ ಕೇಸುಗಳೂ ಇಲ್ಲ. ಶಿಕ್ಷೆಯೂ ಇಲ್ಲ.

1992 ಡಿಸೆಂಬರ್ -1993 ಜನೆವರಿಯಲ್ಲಿ ಮುಂಬೈಯಲ್ಲಿ ನಡೆದ ನರಮೇದದಲ್ಲಿ ಅಪಾರ ಸಂಖ್ಯೆಯ ಮಂದಿಯ ಹತ್ಯೆ ನಡೆದಿತ್ತು. ಅದೇ ಸಮಯದಲ್ಲಿ ಬಾಂಬ್ ಸ್ಪೋಟದ ನೂರಾರು ಜನರ ಸಾವು ನೋವು ಸಂಭವಿಸಿತ್ತು. ಮುಂಬೈ ಹತ್ಯಾಕಾಂಡದ ತನಿಖೆಗಾಗಿ ಶ್ರೀಕೃಷ್ಣ ಆಯೋಗವನ್ನು ನೇಮಿಸಿ ವರದಿಯೂ ಸಿಕ್ಕಿತು. ಹಲವು ಮಂದಿ ರಾಜಕಾರಣಿಗಳು, ಪೊಲೀಸರು ಮುಖ್ಯ ಆರೋಪಿಗಳೆಂದು ಅದರಲ್ಲಿ ಸೂಚಿಸಲಾಗಿತ್ತು. ಆದರೆ, ಅವರ ವಿಚಾರಣೆಯಾಗಲಿ ಅವರಿಗೆ ಶಿಕ್ಷೆಯಾಗಲಿ ಆಗಲೇ ಇಲ್ಲ. ಬಾಂಬ್ ಸ್ಪೋಟ ನಡೆಸಿದ ಆರೋಪಿಗಳಿಗೆ ಕಠಿಣ ವಿಚಾರಣೆ ನಡೆದು ಜೀವಾವಧಿ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಗುಜರಾತ್ ನರಮೇಧದಲ್ಲಿ ಪೊಲೀಸರು ನಿಷ್ಕ್ರೀಯವಾಗಬೇಕೆಂದು ಆಜ್ಞೆ ನೀಡಿದ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದಿಗೂ ಗುಜರಾತಿನ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿರುವುದು ಜಾತ್ಯಾತೀತ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಅನ್ಯಾಯಕ್ಕೆ ಹಿಡಿದ ಕೈಗನ್ನಡಿಯಲ್ಲವೇ?!

ದೇಶದಾದ್ಯಂತ ನಡೆದ ಬಾಂಬ್ ಸ್ಪೋಟಗಳಿಗೆ ಕಾರಣರೆಂದು ಮುಸ್ಲಿಂರನ್ನು ಅವ್ಯಾಹತವಾಗಿ ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ಎನ್ಕೌಂಟರ್ ಮಾಡಿ ಕೊಲ್ಲಲಾಯಿತು. ಮಕ್ಕಾಮಸೀದಿ, ಅಜ್ಮೀರ ದಗಾ೯, ಸಂಜೋತಾ ಎಕ್ಸ್ಪ್ರೆಸ್ ರೈಲು, ನಾಂದೇಡ್, ಪುಣಿ, ಜಲ್ನಾ, ಮಾಲೇಂಗಾವ್, ಮಡ್ಗಾಂವ್ ಮುಂತಾದ ಕಡೆಗಳಲ್ಲಿ ನಡೆದ ಬೀಕರ ಬಾಂಬ್ ಸ್ಪೋಟಗಳಲ್ಲಿ ಸಂಘಪರಿವಾರದ ಪ್ರಾಯೋಜಕತ್ವ ಬಹಿರಂಗವಾದಾಗ ಅದಾಗಲೇ ಕೆಲವು ವರ್ಷಗಳ ಕಳೆದು ಹೋಗಿದ್ದವು. ಕೇಸರಿ ಉಗ್ರರನ್ನು ಹಿಡಿದು ಜೈಲಿಗೆ ಹಾಕುವಷ್ಟರಲ್ಲಿ ನೂರಾರು ಮುಸ್ಲಿಂ ಯುವಕರು ಭೀಕರ ಚಿತ್ರಹಿಂಸೆಗಳಿಗೆ ಗುರಿಯಾಗಿ ಜೀವನದ ನಾಲ್ಕೈದು ವರ್ಷಗಳನ್ನೂ ಜೈಲಿನಲ್ಲಿ ಕಳೆದಿದ್ದರು. ಕೇಸರಿ ಭಯೋತ್ಪಾದಕರ ಕೃತ್ಯವೆಂದು ನಿಚ್ಚಳವಾಗಿ ಸಾಭೀತಾದರೂ ಈಗಲೂ ಮುಸ್ಲಿಂ ಅಮಾಯಕರು ಜೈಲಿನಂದ ಬಿಡುಗಡೆಯಾಗದೆ ಬಂಧಿಯಾಗಿರುವುದು ಯಾವ ನ್ಯಾಯ?

ಹುಬ್ಬಳ್ಳಿ ಕೋರ್ಟ್ನಲ್ಲಿ ನಡೆದ ಸ್ಪೋಟಕ್ಕೆ ಮುಸ್ಲಿಂರೇ ಕಾರಣರೆಂದು ಬಿಂಬಿಸಿ ಕೆಲವು ಮುಸ್ಲಿಂ ಯುವಕರನ್ನು ಬಂಧಿಸಿ ಚಿತ್ರಹಿಂಸೆಗೆ ಗುರಿಪಡಿಸಲಾಯಿತು. ಈ ಸ್ಪೋಟವು ಪ್ರಮೋದ್ ಮುತಾಲಿಕ್ ಸಹಚರನಾದ ನಾಗರಾಜ್ ಜಂಬಗಿ, ಪ್ರವೀಣ ಮುತಾಲಿಕ್ ಕೃತ್ಯವೆಂದು ಬೆಳಕಿಗೆ ಬಂದ ನಂತರವೂ ಮುತಾಲಿಕ್ನ ಮೇಲೆ ಯಾವುದೇ ಕೇಸುಗಳನ್ನು ಹಾಕಲಿಲ್ಲ. ನನ್ನ ಬಳಿ ಒಂದು ಸಾವಿರ ಮಂದಿ ಸದಸ್ಯವಿರುವ ಆತ್ಮಾಹತ್ಯಾದಳವಿದೆ ಎಂದು ಪದೇಪದೇ ಮುತಾಲಿಕ್ ಹೇಳುತ್ತಿದ್ದರೂ, ಸಕರ್ಾರದ ಕಣ್ಣಿಗೆ ಈತ ಕಾಣುತ್ತಿಲ್ಲ. 9 ವರ್ಷಗಳ ಕಾಲ ಕೊಯಮತ್ತೂರು ಜೈಲಿನಲ್ಲಿದ್ದು, ಕೊನೆಗೆ ನಿರಪರಾಧಿ ಎಂದು ಹೊರಬಂದ ನಾಸಿರ್ ಮದನಿ ಎಂಬುವವರನ್ನು ಮತ್ತೇ ಬೆಂಗಳೂರಿನ ಜೈಲಿಗೆ ಹಾಕಲಾಯಿತು. ಅವರ ತಪ್ಪೇನು ಗೊತ್ತೇ? ಕೊಡಗಿನ ಎಸ್ಟೇಟ್ ಒಂದರಲ್ಲಿ ಉಗ್ರರಿಗೆ ಕ್ಲಾಸನ್ನು ನೀಡಿದ್ದಾರೆ ಎಂಬುದು. ಆದರೆ, ಅದಕ್ಕೆ ಯಾವುದೇ ಪುರಾವೆಯೂ ಇಲ್ಲ. ಅತ್ತ ಕೇಸರಿ ಉಗ್ರರ ಜೊತೆ ನಿಕಟ ನಂಟು ಹೊಂದಿದ (ಪೋಟೋ ಸಹಿತ ಪುರಾವೆಗಳಿವೆ) ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ಸಿಂಗ್, ಪ್ರಮೋದ ಮುತಾಲಿಕ್, ಆರ್.ಎಸ್.ಎಸ್ನ ರಾಷ್ಟ್ರೀಯ ನಾಯಕ ಇಂದ್ರೇಶ್ ಕುಮಾರ ಮುಂತಾದವರು ಈ ದೇಶದಲ್ಲಿ ಭಯೋತ್ಪಾದಕರೆಂದು ಎನಸದಿರುವದಕ್ಕೆ ಕಾರಣಗಳೇನು?

ದಲಿತರು, ಅಲ್ಪಸಂಖ್ಯಾತರು, ಆದಿವಾಸಿ ಬುಡಕಟ್ಟುಗಳು ಹಿಂದುಳಿದ ವರ್ಗಗಳು ಈ ದೇಶದ ಅವಿಭಾಜ್ಯ ಅಂಗ. ಅವರುಗಳು ಅಭಿವೃದ್ಧಿಯಾಗದೇ, ಈ ದೇಶ ಉದ್ದಾರ ಖಂಡಿತ ಸಾಧ್ಯವಿಲ್ಲ. ದೇಶದ ಯಾವೊಂದು ನಗರಗಳಲ್ಲೂ ಸಂಚರಿಸಿದಾಗ ದಲಿತರು, ಮುಸ್ಲಿಂರು ವಾಸಿಸುವ ಪ್ರದೇಶಗಳು ಕೊಂಪೆಕೊಳಚೆಗಳಾಗಿ, ಪ್ರಾಥಮಿಕ ಸೌಲಭ್ಯಗಳಿಂದ ವಂಚಿತವಾಗಿಯೂ ಇರುತ್ತವೆ. ಪಕ್ಕದಲ್ಲೇ ಇರುವ ಮೇಲ್ಜಾತಿಗಳು ಮತ್ತು ಶ್ರೀಮಂತ ಬಡಾವಣೆಗಳು ಅತ್ಯಂತ ಸುಸಜ್ಜಿತವೂ, ಅಲಂಕೃತವೂ ಆಗಿರುವದನ್ನೂ ಕಂಡಾಗ ಇಂಡಿಯಾದಲ್ಲಿ ತಾರತಮ್ಯ ಧೋರಣೆಯೂ ಎಷ್ಟು ದಟ್ಟವಾಗಿದೆಯೆಂಬುದು ಕಾಣುತ್ತದೆ.

ಪ್ರಜೆಗಳನ್ನು ರಕ್ಷಿಸಬೇಕಾದ ಹಾಗೂ ಪ್ರಜೆಗಳ ಘನತೆ ಗೌರವವನ್ನು ಕಾಪಾಡಬೇಕಾದದ್ದು ಸಕರ್ಾರದ ಕರ್ತವ್ಯ. ಆದರೆ, ಸಕಾ೯ರವೇ ಪ್ರಜೆಗಳನ್ನು ಕೊಲ್ಲುವ ಕಾನೂನನ್ನು ತಂದರೆ, ಅಂತಹ ಸಕರ್ಾರಕ್ಕೆೇ ಏನನ್ನಬೇಕು. ಎಎಪ್ಎಸ್ಪಿಎ (ಶಸಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ಯಿಂದ ದೇಶದ ಈಶಾನ್ಯ ರಾಜ್ಯಗಳ ಹಾಗೂ ಕಾಶ್ಮೀರದ ಜನತೆ ತತ್ತರಿಸುತ್ತಿದ್ದಾರೆ. ಪ್ರಜೆಗಳನ್ನು ಗುಂಡಿಟ್ಟು ಕೊಲ್ಲುವ ವಿಶೇಷ ಅಧಿಕಾರವು ಮಿಲಿಟರಿ, ಪೊಲೀಸರಿಗೆ ಇರುವುದೇ ಈ ಕಾಯ್ದೆಯ ವಿಶೇಷ. ಇಂತಹ ಕಾನೂನನ ವಿರುದ್ದ ಕಳೆದ 11 ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಮಣಿಪುರದ ಮಹಿಳೆ ಇರೋಮ್ ಶಮಿ೯ಳಾ ಚಾನು. ಇಂತಹ ಮಾನವತಾವಾದಿ ಮಹಿಳೆಯ ನಿರಶನಕ್ಕೆ ಸಕಾ೯ರ ಕೊಡುವ ಬೆಲೆಯೇನು? ಇನ್ನು ಪೋಟಾ, ಮೋಕ, ಕೋಕಾ ಊಪ ಮುಂತಾದ ಕಾನೂನುಗಳ ಮೂಲಕ ಜನತೆಯ ಜೀವಿಸುವ ಹಕ್ಕನ್ನು ಕಸಿಯುವ ವ್ಯವಸ್ಥೆಯಿಂದ ದೇಶದಲ್ಲಿ ಸಾಮಾಜಿಕ ನ್ಯಾಯ ಉಳಿಯುವುದು ಹೇಗೆ ತಾನೇ ಸಾಧ್ಯ.

ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಮಾಜವಾದ ಇವುಗಳೆಲ್ಲ ಬರೀ ಪುಸ್ತಕದ ಬದನೆಕಾಯಿಯೋ, ಭಾಷಣದ ವಸ್ತುವೋ ಆಗದೇ ನೈಜ ಅರ್ಥದಲ್ಲಿ ಮತ್ತು ನಿಜ ಜೀವನದಲ್ಲಿ ಅಕ್ಷರಶಃ ಬಳಕೆಯಾಗಬೇಕು. ಅದುವೇ ಸಾಮಾಜಿಕ ನ್ಯಾಯ. ಪ್ರತಿಯೊಬ್ಬ ಪ್ರಜೆಗೂ ಈ ಸಾಮಾಜಿಕ ನ್ಯಾಯ ಸಿಗಬೇಕೆಂಬ ಹಂಬಲದೊಂದಿಗೆ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ನವೆಂಬರ್ 26-27ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾಮಾಜಿಕ ನ್ಯಾಯ ಸಮಾವೇಶ ಹಮ್ಮಿಕೊಂಡಿದೆ. ಸಾಮಾಜಿಕ ನ್ಯಾಯಕ್ಕಾಗಿ ಸಂಗ್ರಾಮ ಇಲ್ಲಿಂದಲೇ ಆರಂಭಗೊಳ್ಳಲಿ.
 
ಮುಹ್ಮದ್ ಇಲಿಯಾಸ್ ತುಂಬೆ

Monday, October 31, 2011

Deepavali 2011 Edition

ತಪ್ಪಾಯ್ತು ತಿದ್ದುಕೋತಿನಿ.. ಒಂದು ಅವಕಾಶ ಪ್ಲೀಸ್...

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ, ಭಾರತೀಯ ಜನತಾ ಪಕ್ಷದ ದಕ್ಷಿಣ ಭಾರತದ ಬಹುದೊಡ್ಡ ನಾಯಕ. ಆರಂಭದಿಂದ ಸ್ವಯಂಸೇವಕ ಸಂಘದಲ್ಲಿ ಬೆಳೆದರೂ, ಅಧಿಕಾರಕ್ಕೆ ಬರುವ ಕೆಲವು ತಿಂಗಳುಗಳವರೆಗೆ ಅಲ್ಪಸ್ವಲ್ಪ ಜನಪರ ಕಾಳಜಿಯನ್ನು ಹೊಂದಿದವರು. ದೃಢವಾದ ನಿಲುವು ಮತ್ತು ಜನಪರ ಕಾಳಜಿ ಯಡಿಯೂರಪ್ಪನನ್ನು ಪುರಸಭೆ ಅಧ್ಯಕ್ಷನಿಂ ದಿಡಿದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದವು. ಹೀಗಾಗಿ ಅವರು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರವನ್ನು ತಂದರು.

ತಮ್ಮ ರಾಜಕಾರಣದ ಬಹುಪಾಲು ಅವಧಿ ಯಡಿಯೂರಪ್ಪ ವಿರೋಧ ಪಕ್ಷದಲ್ಲಿಯೇ ಕಳೆದರು. ಸಕಾ೯ರಗಳು ಮಾಡುವ ತಪ್ಪುಗಳನ್ನು ಬಯಲಿಗೆಳೆಯುವುದೇ ಅವರ ದಿನನಿತ್ಯದ ಕಾಯಕವಾಯಿತು. ಪ್ರಾಮಾಣಿಕ ರಾಜಕಾರಣಿಯಂತೆ ಬಿಂಬಿತಗೊಂಡ ಯಡಿಯೂರಪ್ಪ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹಾಗೂ ಜನರ ಮೆಚ್ಚುಗೆಯ ನಾಯಕರಾದರು. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರೆ, ಈ ರಾಜ್ಯದಲ್ಲಿ ಪಾರದರ್ಶಕ ಆಡಳಿತವನ್ನು ನೋಡಬಹುದೆನೋ ಎಂಬ ನೀರಿಕ್ಷೆ ಜನಸಾಮಾನ್ಯರಲ್ಲಿ ಸಣ್ಣಪ್ರಮಾಣದಲ್ಲಿ ಕವಲೊಡೆಯತೊಡಗಿತು. ಪ್ರತಿಯೊಂದನ್ನು ಟೀಕಿಸುತ್ತಾ, ವಿರೋಧಪಕ್ಷವೆಂದರೆ, ಅದರ ಕೆಲಸವೇನು ಎಂಬುದನ್ನು ಎಲ್ಲರಿಗಿಂತ ಚನ್ನಾಗಿ ತಿಳಿಸಿಕೊಟ್ಟು, ವಿಧಾನಸೌಧದ ನಿಯತ್ತಿನ ಕಾವಲು ನಾಯಿಯಾದರು.

ಆದರೆ, ಯಾಕೋ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ಹೋರಾಟ, ಜನಪರ ಕಾಳಜಿ, ವಿರೋಧಪಕ್ಷದ ನಾಯಕನ ಸ್ಥಾನದಲ್ಲಿದ್ದಾಗ ಹೊಂದಿದ್ದ ನಿಲುವುಗಳನ್ನೆಲ್ಲ ಬದಿಗೊತ್ತಿದರು.

ಅಧಿಕಾರ ಸಿಕ್ಕೊಡನೆ ಯಡಿಯೂರಪ್ಪ ಜಾತಿ, ಮಠ, ಕುಟುಂಬ ಹಾಗೂ ಸಂಪತ್ತುಗಳ ವ್ಯಾಮೋಹಕ್ಕೆ ಅಂಟಿಕೊಂಡರು. ಆ ವ್ಯಾಮೋಹ ಯಾವ ಮಟ್ಟಕ್ಕೆ ತಲುಪಿತೆಂದರೆ, ಹಣ-ಅಧಿಕಾರ ಇಲ್ಲದೆ ಹೋದರೆ ಎಲ್ಲವೂ ಶೂನ್ಯ, ಹೋರಾಟ, ಸಿದ್ದಾಂತಗಳು ತಾತ್ಕಾಲಿಕವಾದವು, ಅಧಿಕಾರವೊಂದೇ ಶಾಶ್ವತವಾಗಿರುವುದು ಅದಕ್ಕಾಗಿ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಜಾತಿ, ಮಠ, ಆಸ್ತಿಗಳನ್ನು ಮಾಡಿದರಾಯಿತು. ಅವುಗಳಾದರೂ ಮುಂದೊಂದು ದಿನ ನನ್ನ ಭವಿಷ್ಯಕ್ಕೆ ಭದ್ರವಾದ ಸಪೋಟ್೯ ನೀಡಬಹುದೆಂಬ ಮಟ್ಟಕ್ಕೆ ಹೋಯಿತು.

ಆದರೆ, ಮೊನ್ನೆ ಯಡಿಯೂರಪ್ಪನವರಿಗೆ ಪರಪ್ಪನ ಅಗ್ರಹಾರಕ್ಕೆ ಹೋಗಲೇಬೇಕಾದ ಅನಿವಾರ್ಯತೆಗಳು ಎದುರಾದಾಗ ತಾವುಗಳು ಮಾಡಿದ ತಪ್ಪಿನ ಪುನರಾವರ್ತನೆ ಮಾಡಿಕೊಳ್ಳತೊಡಗಿದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಯಡಿಯೂರಪ್ಪ ಸ್ವಯಂ ಸೇವಕ ಸಂಘದ ಕೆಲವರ ಮಾತುಗಳನ್ನು ಆಗಾಗ ಕೇಳಿದ್ದು ಬಿಟ್ಟರೆ, ಮತ್ತ್ಯಾವ ಸಂದರ್ಭಗಳಲ್ಲಿ ಯಾರೊಬ್ಬರ ಮಾತುಗಳನ್ನು ಪರಿಗಣಿಸುವವರಲ್ಲ. ಯಾಕೆಂದರೆ, ಅಂದು ಯಡಿಯೂರಪ್ಪರೊಬ್ಬರೇ ಬಿಜೆಪಿಗೆ ಮಾಸ್ಲೀಡರ್ ಆಗಿದ್ದರು. ಪರಪ್ಪನ ಅಗ್ರಹಾರ ಗತಿ ಎಂದು ಗೊತ್ತಾದಾಗ ಅವರಿವರ ಮಾತುಗಳನ್ನು ಕೇಳತೊಡಗಿದರು. ನಂತರ ನನ್ನ ತಪ್ಪಿನ ಅರಿವಾಗಿದೆ, ಇದರಿಂದ ಹೊರಬಂದು ಮತ್ತೊಮ್ಮೆ ರಾಜ್ಯದಲ್ಲಿ ಬಹುಮತದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಅದಕ್ಕಾಗಿ ಮತ್ತೇ ರಾಜ್ಯಾಧ್ಯಂತ ಪ್ರವಾಸಗಳನ್ನು ಕೈಗೊಂಡು ಹೋರಾಟಗಳನ್ನು ಮಾಡುತ್ತೇನೆಂದು ಹೇಳತೊಡಗಿದರು.

ಇದ್ದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೇ, ಸಮಯ ಮಿಂಚಿಹೋದ ಮೇಲೆ ಚಿಂತೆ ಮಾಡಿದರೆ ಲಾಭವೇನು..? ಇದ್ದಾಗಲೇ ಆ ಸಮಯವನ್ನು ಬಳಸಿಕೊಂಡಿದ್ದರೆ, ಕನರ್ಾಟಕದಲ್ಲಿ ಏನಾದರೂ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದಿತ್ತು. ಯಡಿಯೂರಪ್ಪರ ಮೇಲೆ ಜನಸಾಮಾನ್ಯರಿಟ್ಟಿದ್ದ ನಂಬಿಕೆಯಾದರೂ ಸ್ವಲ್ಪ ಮಟ್ಟಿಗೆ ಉಳಿದಿರುತ್ತಿತ್ತು. ಆದರೆ, ಅದ್ಯಾವುದು ಕರ್ನಾಟಕದಲ್ಲಿ ಆಗಲೇ ಇಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದದ್ದೆ ತಡ, ಸ್ವಯಂಸೇವಕ ಸಂಘದ ಅಂಗ ಸಂಸ್ಥೆಗಳು ಬಲಾಡ್ಯವಾಗಿ ಬೆಳೆದವು. ಕಂಡಕಂಡಲ್ಲಿ ಚಚ೯, ಮಸೀಧಿಗಳ ಮೇಲೆ ದಾಳಿಗಳು ನಡೆದವು. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗತೊಡಗಿದವು. ಆಡಳಿತಯಂತ್ರವು ಸಂಪೂರ್ಣವಾಗಿ ಕುಸಿದು ಪ್ರತಿಯೊಂದು ತೀಮಾ೯ನಗಳು ಕೇಶವಕೃಪಾದಿಂದ ಹೊರಬರತೊಡಗಿದವು. ಜವಾನನಿಂದಿಡಿದು ದಿವಾನನವರೆಗೆ ವಗಾ೯ವಣಿಯಲ್ಲಿ ಅಕ್ರಮಗಳು ನಡೆದವು. ಬಳ್ಳಾರಿ ಕಳ್ಳರು ನೈಸಗಿ೯ಕ ಸಂಪತ್ತನ್ನೇ ಲೂಟಿ ಮಾಡಿದರು. ಒಟ್ಟಾರೆ ಬಿಜೆಪಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತು, ತಮ್ಮ ಪಕ್ಷದ ಆಂತರಿಕ ಕಿತ್ತಾಟಗಳನ್ನು ಬಗೆಹರಿಸುವಲ್ಲಿ 1000 ದಿನಗಳನ್ನು ಕಳೆಯಿತು.

ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲು ತುಂಬಾ ನೀರು ಎಂಬಂತೆ, ಬಿಜೆಪಿ ಎಲ್ಲ ಕೆಲಸಗಳಲ್ಲಿ ಬಲವಂತವಾಗಿ ತನ್ನ ಅಜೆಂಡಾಗಳನ್ನು ಹೇರಲು ಹೋಯಿತು.

ಪ್ರಬುದ್ದತೆ ಇರದ ಮಂದಿಯೆಲ್ಲ ಮಂತ್ರಿಗಳಾಗಿ ಎಲ್ಲ ಇಲಾಖೆಗಳನ್ನು ಹೊಲಸೆಬ್ಬಿಸಿದರೆ, ಗ್ರಾಮಪಂಚಾಯತ್ಗಳಲ್ಲಿಯೇ ಅಧಿಕಾರ ಪಡೆಯದ ಹಿಂಬಾಲಕರು ನಿಗಮ ಮಂಡಳಿಗಳನ್ನು ಸೇರಿ ಅಕ್ರಮ ಆಸ್ತಿ ಮಾಡಲು ಬಿದ್ದರು.

ಇವೆಲ್ಲವನ್ನು ಕ್ರಮಬದ್ದವಾಗಿ ವಿರೋಧಿಸಬೇಕಾದ ವಿರೋಧಪಕ್ಷಗಳು ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾದವು. ವಿರೋಧ ಪಕ್ಷಗಳು ಭ್ರಷ್ಟಾಚಾರದ ನಂಟನ್ನು ಮೈಗಂಟಿಸಿಕೊಂಡಿರುವದರಿಂದ ಅವೆಲ್ಲವುಗಳು ರಾಜ್ಯದ ಬೆಳವಣಿಗೆಯ ಕುರಿತು ನೀರವ ಮೌನಕ್ಕೆ ಜಾರಿದವು. ಇನ್ನು ಮಾಧ್ಯಮ ಮಂದಿ ಸಕಾ೯ರ ನೀಡುವ ಸೈಟು, ಪ್ರಶಸ್ತಿ ಹಾಗೂ ತದಿತರೆ ಸೌಲಭ್ಯಗಳನ್ನು ಪಡೆದು ನಮಗೇನು ಗೊತ್ತಿಲ್ಲವೆಂಬಂತೆ ವತಿ೯ಸತೊಡಗಿದರು. ಅಲ್ಲಲ್ಲಿ ಪ್ರಗತಿಪರ ಪತ್ರಿಕೆಗಳು, ಅಂಕಣಕಾರರು ಸಕಾ೯ರದ ಕಾರ್ಯವೈಖರಿಯನ್ನು ಕಟುವಾಗಿ ಬರೆದಿದ್ದು ಬಿಟ್ಟರೆ, ಮೊನ್ನೆ ಯಡಿಯೂರಪ್ನ ಅಗ್ರಹಾರಗೆ ಹೋದಾಗಲೂ ಅವರನ್ನು ಸಮಥರ್ಸಿಕೊಂಡು ಬರೆದವರೇ ಹೆಚ್ಚು.

ಅದು ಸಾಲದೆಂಬಂತೆ ರಾಜಕಾರಣದಲ್ಲಿ ದುಡ್ಡು ಮಾಡಿದ ಮಂದಿಯೆಲ್ಲ ತಮ್ಮ ರಕ್ಷಣಿಗಾಗಿ, ತಾವುಗಳು ಮಾಡಿದ ಅಕ್ರಮ ಹಣದ ಚಲಾವಣಿಗಾಗಿ ಕೋಟಿಗಟ್ಟಲೇ ಬಂಡವಾಳಗಳನ್ನು ತೊಡಗಿಸಿ ಒಂದೊಂದು ನ್ಯೂಸ್ ಚಾನೆಲ್ಗಳನ್ನು ಆರಂಭಿಸತೊಡಗಿದರು. ಕೆಲವರು ಇದ್ದ ಚಾನೆಲ್ಗಳನ್ನೇ ಖರೀದಿ ಮಾಡತೊಡಗಿದರು.

ಇನ್ನು ಉದ್ಯೋಗಕ್ಕಾಗಿ ಕೆಲವು ಪತ್ರಕರ್ತರು ತಮ್ಮ ವೃತ್ತಿಪರತೆಯನ್ನು ಮರೆತು, ಸಕರ್ಾರಗಳ ಅಧಿಕೃತ ಹೊಗಳುಭಟ್ಟರಾದರು.

ಏನೇ ಆಗಲಿ ರಾಜ್ಯದಲ್ಲಿ ಎಷ್ಟೇಲ್ಲಾ ಅಕ್ರಮ, ಭ್ರಷ್ಟಾಚಾರ, ರಾಜಕೀಯ ದುರಾಡಳಿತ ನಡೆದಾಗ್ಯೂ, ವ್ಯವಸ್ಥೆಯ ಮಧ್ಯೆ ಇಬ್ಬರೂ ಮಾತ್ರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ, ಪಾರದರ್ಶಕವಾಗಿ, ಮಾಡಿ ಮುಗಿಸಿದರು. ಅವರಿಂದಲೇ ಯಡಿಯೂರಪ್ಪ, ರೆಡ್ಡಿಗಳು ಜೈಲುಪಾಲಾಗಬೇಕಾಗಿದೆ. ಅವರೇ ಸಧ್ಯ ದಕ್ಷಿಣ ಭಾರತದ ಮೊದಲ ಬಿಜೆಪಿಯ ಆಡಳಿತಕ್ಕೆ ಅಂತ್ಯವನ್ನೂ ಬರೆಯುತ್ತಿದ್ದಾರೆ. ಅವರ್ಯಾರೆಂದರೂ ಕೇಳುವೀರಾ... ಮೊದಲನೇಯದ್ದು ಗಣಿಅಕ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತೋಷ ಹೆಗ್ಡೆ ಮತ್ತು ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿಯೊಬ್ಬನನ್ನು ಜೈಲಿಗೆ ಕಳುಹಿಸಿದ ಲೋಕಾಯುಕ್ತ ನ್ಯಾಯಮೂತಿ೯ ಸುದೀಂದ್ರ.ರಾವ್. ಈ ಇಬ್ಬರೂ ನ್ಯಾಯಮೂತಿ೯ಗಳ ಕುರಿತು ಮುಂದಿನ ಸಂಚಿಕೆಯಲ್ಲಿ ವಿವರವಾಗಿ ತಿಳಿಸಲಾಗುವುದು.

ಸಂಪಾದಕೀಯ...

Thursday, October 27, 2011

ವೆಂಕಟೇಶ ಬೇವಿನಬೆಂಚಿಯವರಿಗೆ, "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್"

ಬಡತನವು ನಮ್ಮನ್ನು ದುಖಿಃತರನ್ನಾಗಿ ಹಾಗೆಯೇ ಬುದ್ದಿವಂತರನ್ನಾಗಿ ಮಾಡುತ್ತದಂತೆ - ಬ್ರೈಕ್

ಬಡತನ ಮತ್ತು ಕಷ್ಟದ ದಿನಗಳನ್ನು ಸ್ಪೂತರ್ಿ ಯಾಗಿಸಿಕೊಂಡು ಹಲವಾರು ಸಾಧನೆಗಳನ್ನು ಮಾಡಿದ ವೆಂಕಟೇಶ ಬೆವಿನಬೆಂಚಿಯವರಿಗೆ 2011/12ರ ಸಾಲಿನ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ಲಭಿಸಿದೆ. ವೆಂಕಟೇಶ್ ಬೆವಿನಬೆಂಚಿಯವರು ದಿನಾಂಕ 01/06/1982ರಲ್ಲಿ ತಂದೆ ತಿಪ್ಪಯ್ಯ ನರಸಮ್ಮ ದಂಪತಿಗಳ ಮಗನಾಗಿ ಜನಿಸಿದರು. ಸದರಿ ಗ್ರಾಮವು ರಾಯಚೂ ರಿನಿಂದ ಸುಮಾರು 30 ಕಿ.ಮೀ ಅಂತರದಲ್ಲಿದೆ. ಈ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 63 ವರ್ಷಗಳು ಸಂದರೂ ಕುಡ ಇನ್ನೂ ಸಕರ್ಾರಿ ಬಸ್ಸಿನ ವ್ಯವಸ್ಥೆಯಿಲ್ಲ ಮತ್ತು ಕಳೆದ ಏಳೆಂಟು ವರ್ಷಗಳಿಚೆಗೆ ಈ ಗ್ರಾಮವು ವಿದ್ಯುತ್ನ್ನು ಕಂಡಿದೆ.

ಈ ಗ್ರಾಮದಲ್ಲಿ ಸಮರ್ಪಕವಾದ ಕುಡಿಯುವ ನೀರಿಲ್ಲ, ಆಳುದ್ದ ಗುಂಡಿ ಬಿದ್ದ ರಸ್ತೆಗಳು, ಒಟ್ಟಾರೆ ಈ ಊರು ಕುಗ್ರಾಮವಾಗಿ ಪರಿಣಮಿಸಿದೆ. ಇಂತಹ ಗ್ರಾಮದಲ್ಲಿ ಅರಳಿದ ಪ್ರತಿಭೆ ವೆಂಕಟೇಶ್ 11 ಡಿಸೆಂಬರ್ 2011ರಂದು ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಮ್ಮೇಳನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆಂದರೆ, ಸಾಮಾನ್ಯವಾದದ್ದೇನಲ್ಲ. ವೆಂಕಟೇಶ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸುಗ್ರಾಮದಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಜೇಗರಕಲ್ನಲ್ಲಿ ಪಡೆದರು. ಸಮಾಜಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟೇಲ್ನಲ್ಲಿ ಅಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವೆಂಕಟೇಶ ನಂತರ ರಾಯಚೂರಿನ ಠ್ಯಾಗೋರ್ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. ಬಿ.ಎ ಪದವಿ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಮುಂದುವರೆಸಿ, ಪದವಿಯಲ್ಲಿಯೂ ಪ್ರಥಮ ದಜರ್ೆಯಲ್ಲಿ ಉತ್ತೀರ್ಣರಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದರು.

ಇವರು ಓದುವ ರೀತಿಯನ್ನು ನೋಡಿ, ಊರಿನ ಜನ ತಮ್ಮ ಮಕ್ಕಳಿಗೆ ಇವರ ಉದಾಹರಣೆಯನ್ನು ನೀಡಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಹೇಳುತ್ತಿದ್ದರಂತೆ. ವೆಂಕಟೇಶ ಮುಂದೊಂದು ದಿನ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುತ್ತಾರೆಂದು ಊರಿನ ಜನತೆ ಅಂದಾಜಿಸಿದ್ದರು. ಇದೀಗ ವೆಂಕಟೇಶ ಅದನ್ನು ಸಾಬೀತು ಮಾಡಿದ್ದಾರೆ.

ಪದವಿ ಶಿಕ್ಷಣ ಮುಗಿಸಿದ ನಂತರ ಬಿ.ಇಡಿ ಶಿಕ್ಷಣ ಪಡೆದು ಶಿಕ್ಷಕರಾಗಿ ಮಕ್ಕಳಿಗೆ ತಮ್ಮ ಜ್ಞಾನವನ್ನು ಧಾರೆಯರೆಬೇಕೆಂದು ಅಂದುಕೊಂಡಾಗ ಬಿ.ಇಡಿ ಶಿಕ್ಷಣ ಪಡೆಯಲು ಸಕರ್ಾರಿ ಸೀಟು ಸಿಗಲೇ ಇಲ್ಲ. ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದು ಬಿ.ಇಡಿ ಮಾಡಲೂ ಆಗಲಿಲ್ಲ. ಯಾಕೆಂದರೆ, ಮೊದಲೇ ವೆಂಕಟೇಶ ದಲಿತ ಕುಟುಂಬದಿಂದ ಬಂದಂತವರು. ಕಿತ್ತು ತಿನ್ನುವ ಬಡತನ ಬೇರೆ. ಒಪ್ಪತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಅವರದ್ದಾಗಿತ್ತು. ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ ಹಾಗೂ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇವರ ಮೇಲಿದ್ದರಿಂದ ಶಿಕ್ಷಕರಾಗುವ ಕನಸು ಕನಸಾಗಿಯೇ ಉಳಿಯಿತು.

ಕುಟುಂಬ ನಿರ್ವಹಣೆ ಜೊತೆಯಲ್ಲಿ ಮುಂದಿನ ಶಿಕ್ಷಣಕ್ಕಾಗಿ ಬೇಕಾಗುವ ಹಣದ ವ್ಯವಸ್ಥೆಯನ್ನು ಮಾಡಿಕೊಳ್ಳಲು ವೆಂಕಟೇಶ ರಾಯಚೂರಿನ ಆಕಾಶ ವಾಣಿಯಲ್ಲಿ ಅರೆಕಾಲಿಕ ನೌಕರರಾಗಿ ಸೇರಿಕೊಂಡರು. ಹಾಗೆ ಒಂದು ವರ್ಷ ಬಹಳ ಚುರುಕಾಗಿ ಕಾರ್ಯ ನಿರ್ವಹಿಸಿ, ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಧ್ಯಮಗಳ ವಿಷಯವನ್ನು ಅರಿತು, ಪತ್ರಿಕೋದ್ಯಮದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು.

ಕೆಲವು ದಿನಗಳ ನಂತರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬೆಂಗಳೂರು ವಿವಿಗೆ ಅಜರ್ಿಯನ್ನು ಸಲ್ಲಿಸಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶದಲ್ಲಿ ಪಾಸಾಗಿದ್ದರೂ ಕೂಡ ದಲಿತ ಎಂಬ ಒಂದೇ ಕಾರಣಕ್ಕೆ ಪ್ರವೇಶಾತಿಗೆ ಅನುಮತಿ ನೀಡಲಿಲ್ಲ. ನಂತರ ಅದೇ ಪದವಿಗೆ ಮಂಗಳೂರು ವಿವಿಯಲ್ಲಿ ಪ್ರಯತ್ನಿಸಿದರೂ ಕೂಡ ಜಾತಿ ಕಾರಣಕ್ಕೆ ಪ್ರವೇಶ ಸಿಗಲಿಲ್ಲ. ಮತ್ತೇ ಬೆಂಗಳೂರು ವಿವಿಯಲ್ಲಿ ಒಂದು ವರ್ಷದ ನಂತರ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಗೆ ಪ್ರವೇಶದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಕ್ಕೆ ಎಂ.ಎಸ್.ಸಿ (ವಿದ್ಯುನ್ಮಾನ ಮಾಧ್ಯಮ) ಅಭ್ಯಾಸ ಮಾಡಲು ಪ್ರವೇಶಾತಿ ದೊರೆಯಿತು.

ಬೆಂಗಳೂರು ವಿವಿಯಲ್ಲಿ ಅಭ್ಯಾಸ ಮಾಡುವಾಗ ಬುಡ್ಗೆ ಜಂಗಮ (ದಲಿತರ) ಬಗ್ಗೆ ಒಂದು ಅದ್ಬುತ ಸಾಕ್ಷ್ಯ ಚಿತ್ರವನ್ನು ಮಾಡಿದ್ದಾರೆ.

ವೆಂಕಟೇಶರ ಹುಟ್ಟೂರಿನಲ್ಲಿ ಇದುವರೆಗೂ ಯಾರೊಬ್ಬರು ಸ್ನಾತಕೋತ್ತರ ಪದವಿಯನ್ನು ಪಡೆದಿಲ್ಲ! ಹೀಗಾಗಿ ಮೊಟ್ಟಮೊದಲಿಗೆ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ವೆಂಕಟೇಶ ಅವರಿಗೆ ಸಲ್ಲುತ್ತದೆ. ಪ್ರಾಥಮಿಕ ಶಿಕ್ಷಣದಿಂದಿಡಿದು ಪದವಿಯವರೆಗೆ ಹಾಸ್ಟೇಲ್ಗಳಲ್ಲಿಯೇ ವೆಂಕಟೇಶರು ತಮ್ಮ ವಿದ್ಯಾಬ್ಯಾಸವನ್ನು ಮುಗಿಸಿದರು.

ಬಡತನ ಹೆಚ್ಚಿದ್ದರಿಂದ ಅವರ ಸ್ನಾತಕೋತ್ತರ ಪದವಿ ಮುಗಿದ ತಕ್ಷಣವೇ 2006ರಲ್ಲಿ ಟಿವಿ 9 ಖಾಸಗಿ ಚಾನೆಲ್ನಲ್ಲಿ ಸುದ್ದಿ ಸಂಪಾದಕರಾಗಿ ಸೇರಿಕೊಂಡರು. ನಂತರ ಹಲವಾರು ಕಾರಣಗಳಿಂದ ಟಿವಿ 9 ಚಾನೆಲ್ ಬಿಟ್ಟು 2008 ರಿಂದ ಸುವರ್ಣ ಚಾನೆಲ್ನಲ್ಲಿ ಕಾರ್ಯನಿರ್ವಹಿಸಿದರು. ನಂತರ ಅದೇ ವರ್ಷ ಕೇಂದ್ರ ಸಕರ್ಾರದ ಒಡೆತನದಲ್ಲಿರುವ ರಾಯಚೂರು ಆಕಾಶವಾಣಿಯಲ್ಲಿ ಕಾರ್ಯನಿವರ್ಾಹಕರಾಗಿ ಕೇಂದ್ರಸಕರ್ಾರದ ಸೇವೆಗೆ ಸೇರಿಕೊಂಡರು. ಪ್ರಸ್ತುತ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಇಲಾಖೆ ನಡೆಸುವ ಹತ್ತಾರು ಶಿಬಿರಗಳಲ್ಲಿ ಭಾಗವಹಿಸುತ್ತಾ, ಸಾರ್ವಜನಿಕವಾಗಿ ಕೇಳುಗರು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು. ಜನಸಾಮಾನ್ಯರಿಗೆ ಸಮಾಜದ ಕುರಿತು ಎಂತಹ ತಿಳುವಳಿಕೆಗಳನ್ನು ಹೇಳಬೇಕೆಂಬುದನ್ನು ಈಗಾಗಲೇ ಕರಗತ ಮಾಡಿಕೊಂಡಿದ್ದಾರೆ.

ಪ್ರತಿವರ್ಷ ದೆಹಲಿ, ಪುನಾ, ಭುವನೇಶ್ವರಿ, ತ್ರಿವೇಂಡ್ರಂ ದೇಶದ ಇನ್ನಿತರ ರಾಜಧಾನಿಗಳಲ್ಲಿ ನಡೆಯುವ ವಿಚಾರ ಸಂಕಿರಣ, ಕಾರ್ಯಗಾರಗಳಲ್ಲಿ ಭಾಗವಹಿಸಿ ತಮ್ಮ ವೃತ್ತಿಪರತೆಯನ್ನು ಪ್ರದಶರ್ಿಸುತ್ತಿದ್ದಾರೆ.

ಯಾವ ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು ಬಡತನ ಮತ್ತು ಹಸಿವು ಕಲಿಸುತ್ತವೆ. ಹಾಗಾಗಿ ವೆಂಕಟೇಶರವರು ಬಡತನ ಮತ್ತು ಹಸಿವು ಕಲಿಸಿದ ಪಾಠಗಳಿಂದ ಪ್ರೇರಣಿಗೊಂಡು ಕೇಂದ್ರಸಕರ್ಾರದ ವೃತ್ತಿಯಲ್ಲಿದ್ದುಕೊಂಡೇ ಶೋಷಣೆಗೊಳಗಾದ ಸಮುದಾಯಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾಗುವಷ್ಟು ಸಹಕಾರವನ್ನು ಮಾಡುತ್ತಾ ಬಂದಿದ್ದಾರೆ.

ವೆಂಕಟೇಶರಿಗೆ ಸಂಘಟನೆಯಲ್ಲಿ ವರ್ಗಕಲ್ಪನೆ ಇತ್ತು. ಹಾಗಾಗಿ ಅವರು ಸಮಾಜದ ಹೋರಾಟಗಳಿಗಿಂತ ವರ್ಗಹೋರಾಟಗಳಿಗೆ ಹೆಚ್ಚು ಆಸಕ್ತಿ ನೀಡುತ್ತಿದ್ದರು. 2000ರಲ್ಲಿ ಕಂಬಾಲಪಲ್ಲಿಯಲ್ಲಿ ನಡೆದ ನರಮೇಧವನ್ನು ವಿರೋಧಿಸಿ ರಾಯಚೂರಿನಲ್ಲಿ ಪ್ರತಿಭಟನೆ ನಡೆದಾಗ ವಿದ್ಯಾಥರ್ಿ ಸಂಘಟನೆಯಿಂದ ವೆಂಕಟೇಶ ಬಹುಮುಖ್ಯ ಪಾತ್ರ ವಹಿಸಿದ್ದರು.

ಇಂದು ಜಾಗತೀಕರಣ ಪ್ರಭಾವದಿಂದ ದಲಿತ ಚಳುವಳಿಗಳು, ಪ್ರಗತಿಪರ ಹೋರಾಟಗಳು ಕುಂಠಿತಗೊಳ್ಳುತ್ತಿವೆ. ಆದರೆ, ವೆಂಕಟೇಶರವರು ಶೋಷಿತ ಸಮುದಾಯಗಳು ಅನುಭವಿಸುವ ನೋವನ್ನು ತಮ್ಮದೇ ದೃಷ್ಟಿಕೋನದಿಂದ ಅವಲೋಕಿಸಿ ಪರಿಹಾರಗಳನ್ನು ಹುಡುಕಿ ಕೊಡುತ್ತಾರೆ. ಜಿಲ್ಲೆಯಲ್ಲಿ ಅದೆಷ್ಟೋ ವಿದ್ಯಾಥರ್ಿಗಳು ಇವರ ನಾಯಕತ್ವದಲ್ಲಿ ಪಳಗಿ, ಇಂದು ನಾಯಕರಾಗಿದ್ದಾರೆ. ಇಡೀ ವ್ಯವಸ್ಥೆಯ ಬದಲಾವಣಿಗೆ ನಮ್ಮಿಂದಾದದ್ದನ್ನು ಕೊಡುಗೆ ನೀಡಲೇಬೇಕೆಂಬ ಮನೋಭಾವನೆ ಅವರಿಗಿದೆ.

ದಲಿತ ಸಮುದಾಯದ ಕಾಳಜಿ, ಅಭಿಮಾನ ಹಾಗೂ ಅವರ ಹೋರಾಟದ ಬದುಕನ್ನು ಪರಿಗಣಿಸಿ, ಈ ಬಾರಿ ನವದೆಹಲಿಯ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿ, 2011ನೇ ಸಾಲಿನ "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್" ನ್ನು ನೀಡಿ ಗೌರವಿಸುತ್ತಿದೆ.

ಡಿಸೆಂಬರ್ 11/12 ರಂದು ನವದೆಹಲಿಯಲ್ಲಿ ಲೋಕಸಭೆಯ ಸ್ಪೀಕರ್ ಮೀರಾಕುಮಾರಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವೆಂಕಟೇಶ ಇನ್ನು ಮುಂದಿನ ದಿನಗಳಲ್ಲಿಯೂ ಸಮಾಜದ ಅಭಿವೃದ್ಧಿಗಾಗಿ ಹೆಚ್ಚೆಚ್ಚು ಶ್ರಮಿಸಲಿ ಎಂದು ಈ ಸಂದರ್ಭದಲ್ಲಿ ಪತ್ರಿಕೆಯ ಬಳಗದ ವತಿಯಿಂದ ಹಾರೈಸೋಣ.

ನರಸಿಂಹ ಗುಂಜಳ್ಳಿ,
ಸಂಶೋಧನಾ ವಿದ್ಯಾಥರ್ಿ,
ಮಂಗಳೂರು ವಿಶ್ವವಿದ್ಯಾಲಯ