Thursday, September 1, 2011

"ನಿರಂತರ ಹೋರಾಟಗಾರ ಬಾಲಸ್ವಾಮಿ ಕೊಡ್ಲಿ"

ರಾಯಚೂರು ಜಿಲ್ಲೆ ಎಂದರೆ, ಹೆಚ್ಚುಕಡಿಮೆ ಬಿಸಿಲು, ಬಡತನ, ನಿರುದ್ಯೋಗದ ತವರು ಎಂಬುದು ಕೆಲವರ ಉವಾಚ. ಅದರಂತೆ ಇಲ್ಲಿ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರು ತಮ್ಮದೇ ರೀತಿಯಲ್ಲಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಕೊಡುಗೆಗಳನ್ನು ನೀಡಿರುತ್ತಾರೆ ಎಂಬುದು ಕೂಡ ಇನ್ನು ಕೆಲವರ ಅಭಿಪ್ರಾಯ.ಈ ನಿಟ್ಟಿನಲ್ಲಿ ನಾವು ಜಿಲ್ಲೆಯ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ, 80ರ ದಶಕದಲ್ಲಿ ನಡೆದ ಭೂಹೋರಾಟಗಳು, ದಲಿತ ಚಳುವಳಿಗಳು ನೆನಪಿಗೆ ಬರುತ್ತವೆ. ಯಾಕೆಂದರೆ, ಅದೊಂದು ಸಮಯ ಭೂಮಾಲೀಕ ಪದ್ದತಿ, ಜೀತುದಾಳು ವ್ಯವಸ್ಥೆ, ಅಸ್ಪೃಶ್ಯತೆ ರಾಯಚೂರು ಜಿಲ್ಲೆಯನ್ನು ಬಲುಜೋರಾಗಿ ಅವಲಂಭಿಸಿಕೊಂಡಿತ್ತು. ಹಾಗಾಗಿ ಅವುಗಳ ವಿರುದ್ಧ ಹೋರಾಟಗಳನ್ನು ರೂಪಿಸಲು, ಜನರನ್ನು ಜಾಗೃತಿಗೊಳಿಸಲು, ದೂರದ ಊರಿಂದ ಬಂದಂಥಹ ಪ್ರಗತಿಪರ, ದಲಿತ ಸಂಘಟನೆಗಳು ಹುಟ್ಟಿಕೊಂಡವು. ಕ್ರಮೇಣ ಹೋರಾಟದ ರೂಪುರೇಷೆಗಳು ಜಿಲ್ಲೆಯಾಧ್ಯಂತ ವಿಸ್ತರಿಸಿಕೊಳ್ಳುತ್ತಿದ್ದಂತೆ ವ್ಯವಸ್ಥೆಯಲ್ಲಿ ತಕ್ಕಮಟ್ಟಿನ ಬದಲಾವಣೆಗಳು ಆಗತೊಡಗಿದವು.ಆದರೆ, 80ರ ದಶಕದಲ್ಲಿ ನಡೆದ ಅವ್ಯಾಹತ ದಲಿತ ಚಳುವಳಿಗಳಲ್ಲಿ ಒಬ್ಬ ದಲಿತ ಕುಟುಂಬದ ನಾಯಕನೊಬ್ಬ ಪ್ರಗತಿಪರ ಆಲೋಚನೆಗಳನ್ನೊಳಗೊಂಡು ಭವಿಷ್ಯತ್ತಿನ ನಿರಂತರ ನಾಯಕನಾಗಿ ಬೆಳೆಯುತ್ತಾನೆ. ಅಂದಿನ ಎಲ್ಲಾ ಹೋರಾಟಗಳಲ್ಲಿ ಮುಂಚೂಣೆ ನಾಯಕತ್ವವನ್ನು ಪಡೆಯುತ್ತಾ, ಜನಸಮೂಹದ ಮುಖಂಡನಾಗಿ ಮುನ್ನುಗ್ಗುತ್ತಾನೆ. ಆ ವ್ಯಕ್ತಿ ಮುಂದೊಂದು ದಿನ ಸಕರ್ಾರಿ ನೌಕರನಾಗಿ ಸಮಾಜದ ಸುಧಾರಣೆಗಾಗಿ ಹಗಲಿರುಳು ಶ್ರಮಿಸುತ್ತಾ ಬರುತ್ತಾನೆ. ಅಂತಹ ವ್ಯಕ್ತಿಯನ್ನು ನಾವೀಗ ಈ "ಎಲೆಮರೆಯಕಾಯಿ" ಅಂಕಣದಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ.1962ರಲ್ಲಿ ಆಶರ್ಿವಾದಪ್ಪ ಮರಿಯಮ್ಮ ದಂಪತಿಗಳಿಗೆ ಜನಿಸಿದ ಈ ವ್ಯಕ್ತಿಯೇ "ಬಾಲಸ್ವಾಮಿ ಕೊಡ್ಲಿ" ಹುಟ್ಟೂರು ಉದ್ಬಾಳ ಆದರೂ ಮಾನ್ವಿ ಹಾಗೂ ಸಿಂಧನೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು, ರಾಯಚೂರಿನ ಎಲ್.ವಿ.ಡಿಯಲ್ಲಿ ಪದವಿ ಮುಗಿಸಿದರು. ತಮ್ಮ ಓದಿನ ಜೊತೆಯಲ್ಲಿ ಸಮಾಜ ಪರಿವರ್ತನೆಯಂತಹ ಚಳುವಳಿಗಳಲ್ಲಿ ತೊಡಗಿಕೊಳ್ಳುತ್ತಿದ್ದರು.ಜಿಲ್ಲೆ ಕಂಡ, ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ ರಂತ ಹೋರಾಟಗಾರರ ಜೊತೆ ಸಖ್ಯ ಬೆಳೆಸಿದ್ದರು. ಇವರ ಗುರುಗಳಾದ ಭೀಮಣ್ಣ ನಗನೂರುರವರ ಜೊತೆಗೂಡಿ, ಹಳ್ಳಿಹಳ್ಳಿಗಳಿಗೆ ಸಾಗಿ ದಲಿತ ಸಂಘಟನೆಯನ್ನು ಗಟ್ಟಿಗೊಳಿಸುತ್ತಿದ್ದರು. ಉತ್ತಮ ಸಮಾಜವನ್ನು ನಿಮರ್ಾಣ ಮಾಡಬೇಕಾದರೆ, ಹೋರಾಟವು ಅನಿವಾರ್ಯ. ಅದುವೇ ಪಯರ್ಾಯ ಎಂದು ತಿಳಿದು ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದೇ ಇಂದು ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ ಎಂದರೆ, ತಪ್ಪಾಗಲಾರದು.1984ರಲ್ಲಿ ಸಕರ್ಾರಿ ನೌಕರಿಗೆ ಸೇರಿದ ಬಾಲಸ್ವಾಮಿಕೊಡ್ಲಿ, ಪ್ರಾರಂಭದಲ್ಲಿ ಕೋಲಾರದ ಭಾಗೇಪಲ್ಲಿಯಲ್ಲಿ ರೇಷ್ಮೇ ಇಲಾಖೆಯ ನೌಕರರಾಗಿ ಕೆಲಸ ಮಾಡಿದರು. ಅಲ್ಲಿಯೂ ಕೂಡ ಜನಪರ ಹೋರಾಟಗಳನ್ನು ರೂಪಿಸುತ್ತಾ, ನೊಂದವರಿಗಾಗಿ ಶ್ರಮಿಸಿದರು. ಒಂದು ಸಂದರ್ಭದಲ್ಲಿ ಅಲ್ಲಿನ ಬರಪರಿಸ್ಥಿತಿಯ ಹೊತ್ತಿನಲ್ಲಿ ಡಾ||ರಾಜಕುಮಾರ್ರನ್ನು ಆಹ್ವಾನಿಸಿ ಬಹುದೊಡ್ಡ ಮನೋರಂಜನಾ ಕಾರ್ಯಕ್ರಮವನ್ನು ಮಾಡಿ, ಬರಪರಿಹಾರಕ್ಕೆ ತುತ್ತಾದವರಿಗೆ 1ಲಕ್ಷರೂಪಾಯಿಯನ್ನು ಕಲಾವಿದರಿಂದ ಕೊಡಿಸಿದ್ದರು. ಅದು ಬರಪೀಡಿತರಿಗೆ ಆಸರೆಯಾಯಿತು.ನಂತರ ಅಲ್ಲಿಂದ ತವರು ಜಿಲ್ಲೆಗೆ ವರ್ಗವಾಗಿ ಬಂದ ಬಾಲಸ್ವಾಮಿ ಕೊಡ್ಲಿ, ಜಿಲ್ಲೆಯಲ್ಲಿ ಹತ್ತಾರು ಹೋರಾಟಗಳನ್ನು ರೂಪಿಸುತ್ತಾ, ಜನಪರ ಪ್ರತಿಭಟನೆಗಳಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡುತ್ತಾ ವ್ಯವಸ್ಥೆಯ ಮಜಲುಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು.ವಿಚಾರ ಸಂಕೀರ್ಣಗಳು, ಕವಿಗೋಷ್ಠಿಗಳಂತಹ ತದಿತರ ವೇದಿಕೆಗಳಲ್ಲಿ ಕೆಚ್ಚೆದೆಯ ಮಾತುಗಳನ್ನಾಡಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು.ಆ ನಂತರದ ದಿನಗಳಲ್ಲಿ ಕೊಡ್ಲಿ, ಮಾನ್ವಿ ತಾಲೂಕಿನ ಸಕರ್ಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇವರಲ್ಲಿನ ನಾಯಕತ್ವದ ಗುಣಗಳು ರಾಜ್ಯಮಟ್ಟದ ನಾಯಕರನ್ನು ಇಣುಕಿಸಿ ನೋಡುವಂತಿದ್ದವು. ಪ್ರಬಲ ನಾಯಕತ್ವವನ್ನು ಹೊಂದಿದ ಬಾಲಸ್ವಾಮಿಯವರು ಸಕರ್ಾರಿ ನೌಕರರ ಹತ್ತಾರು ಸಮಸ್ಯೆಗಳನ್ನು ರಾಜ್ಯಸಕರ್ಾರಗಳ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಂಡುಕೊಂಡಿದ್ದರು. ರಾಜ್ಯಾಧ್ಯಂತ ಎಲ್ಲಿಯಾದರೂ ಸಕರ್ಾರಿ ನೌಕರರ ಮೇಲೆ ಹಲ್ಲೆ, ದೌರ್ಜನ್ಯಗಳಾದರೆ, ತಕ್ಷಣವೇ ಪ್ರತಿಭಟಿಸುವ ಬಲವನ್ನು ಹೊಂದಿದ್ದರು. ನೌಕರಿಗಿಂತ ಮುಂಚೆ ದಲಿತ ಚಳುವಳಿಗಳಲ್ಲಿ ಕಲಿತಿದ್ದ ಹೋರಾಟದ ಮಾದರಿಗಳನ್ನು ಇಲ್ಲಿಯೂ ಅಳವಡಿಸಿಕೊಂಡು ಸಮಾಜಪರಿವರ್ತನೆಯ ಕೆಲಸವನ್ನು ಮಾಡತೊಡಗಿದರು. ಇವರ ಹೋರಾಟದ ಚಾಕಚಕ್ಯತೆಯನ್ನು ಅರಿತಿರುವ ರಾಜ್ಯಮುಖಂಡರು ಇವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುಲ್ಬಗರ್ಾ ವಿಭಾಗೀಯ ಮಟ್ಟದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಜಿಲ್ಲೆಯಲ್ಲಿ ಸಕರ್ಾರಿ ನೌಕರರು ಎಂಥಹದ್ದೇ ಸಮಸ್ಯೆಯೊಂದನ್ನು ಹೊತ್ತು ತಂದರೆ, ಅದಕ್ಕೆ ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಕೊಡಿಸುತ್ತಿದ್ದರು.ಇತ್ತೀಚಿಗೆ ನವೆಂಬರ್ನಲ್ಲಿ ಬಾಲಸ್ವಾಮಿಯವರು ಮಾಡಿದ ಮಹಾ ಸಾಧನೆಯೆಂದರೆ, ಒಬ್ಬ ಸಕರ್ಾರಿ ನೌಕರರಾಗಿ ಹತ್ತಾರು ಜಾತಿಗಳ ಭಾವೈಕ್ಯತೆಯ, ಸರ್ವಧರ್ಮ 193ಜೋಡಿ ಸಾಮೂಹಿಕ ವಿವಾಹಗಳನ್ನು ನೆರೆಹಾವಳಿಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗಾಗಿ ಮಾಡಿದರು. ಅದೊಂದು ಇತಿಹಾಸ. ಇಂದಿನ ಸಮಾಜ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅವಲಂಭಿಸಿದೆ. ದಲಿತರು, ಹಿಂದುಳಿದವರು ಯಾವುದಾದರೂ ಕಾರ್ಯಕ್ಕೆ ಕೈ ಹಾಕಿದರೆ, ಅದನ್ನು ಯಶಸ್ವಿ ಮಾಡುವವರಿಗಿಂತ ಹಾಳು ಮಾಡಬೇಕೆಂಬುವವರ ಸಂಖ್ಯೆಯೆ ಜಾಸ್ತಿ ಇರುತ್ತದೆ. ಅಂತಹದರಲ್ಲಿ ಒಬ್ಬ ದಲಿತ ನೌಕರನಾಗಿ ಸಾಮೂಹಿಕ ವಿವಾಹಗಳನ್ನು ಮಾಡುವುದೆಂದರೆ, ಸುಲಭದ ಮಾತೇನಲ್ಲ.ಹಿಂದೂ, ಮುಸ್ಲಿಂ, ಕ್ರೈಸ್ತ ರಿಗೆ ಅವರವರ ಧರ್ಮದನ್ವಯ ಗುರುಗಳನ್ನು ಕರೆತಂದು ಅದ್ದೂರಿಯಾಗಿ ಮಾನ್ವಿಯಲ್ಲಿ ಸಾಮೂಹಿಕ ವಿವಾಹಗಳನ್ನು ಮಾಡುತ್ತಾ, 193ಜೋಡಿಗಳ ಕುಟುಂಬಗಳಿಗೆ ನೆರವಾದರು. (1ಜೋಡಿಗೆ ಸರಾಸರಿ ಬಡತನದ ಮದುವೆಯೆಂದರೆ, ಇಂದು 50ಸಾವಿರ ಆಗುತ್ತದೆ. ಅಂತಹದರಲ್ಲಿ 193ಜೋಡಿಗಳಿಗೆ ಏನಿಲ್ಲವೆಂದರೂ 1ಕೋಟಿ ರೂಪಾಯಿ ವೆಚ್ಚವಾಗುತ್ತದೆ.) ತಾವು ಮುಂದೆ ನಿಂತು ಸಾಮೂಹಿಕ ವಿವಾಹಗಳನ್ನು ಯಶಸ್ವಿ ಮಾಡುವದರೊಂದಿಗೆ ಎಲ್ಲ ಕುಟುಂಬಗಳಿಗೆ ತಗುಲುವ ವೆಚ್ಚವನ್ನು ತಪ್ಪಿಸಿದರು.ಇಂತಹ ಹತ್ತಾರು ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಬಾಲಸ್ವಾಮಿ ಕೊಡ್ಲಿಯವರ ಕುರಿತು ಎಷ್ಟು ಜನರಿಗೆ ಗೊತ್ತಿದೆ? ನೊಂದವರಿಗೆ ಧ್ವನಿಯಾಗಿ, ಹಸಿದವನಿಗೆ ಅನ್ನವಾಗಿರುವ ಬಾಲಸ್ವಾಮಿ ಕೊಡ್ಲಿಯವರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ.ಇನ್ಮುಂದೆಯೂ ಬಾಲಸ್ವಾಮಿಯವರು ಇದೇ ರೀತಿ ಜನಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಲಿ ಎಂದು ಪತ್ರಿಕೆ ಅವರನ್ನು ಹಾರೈಸುತ್ತದೆ.