Friday, February 25, 2011

ಹೊಸ ಸಂಚಿಕೆ 8


ಬಿಜೆಪಿ ಸಾವಿರ ದಿನದಲ್ಲಿ ಸಾಧಿಸಿದ್ದು...



ಈ ಸಲ......
ಬಿಜೆಪಿ ಸಾವಿರ ದಿನದಲ್ಲಿ ಸಾಧಿಸಿದ್ದು...
ದಕ್ಷಿಣ ಭಾರತದ ಬಿಜೆಪಿಯ ಪ್ರಥಮ ಸಕರ್ಾರ 1000ದಿನಗಳತ್ತ ದಾಪುಗಾಲು ಇಡುತ್ತಿದೆ. ಮಾನ್ಯ ಯಡಿಯೂರಪ್ಪನವರು ಕನರ್ಾಟಕದಲ್ಲಿ ಜನಪರ ಆಡಳಿತವನ್ನು ಕೊಡುತ್ತಿದ್ದಾರೆ, ಕಂಡಕಂಡಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೆಂದು ಬಿಜೆಪಿ ಹೈಕಮಾಂಡ್ ರಾಷ್ಟ್ರಮಟ್ಟದಲ್ಲಿ ಹತ್ತಾರು ಮಾಧ್ಯಮ ಗೋಷ್ಠಿಗಳಲ್ಲಿ ಹೇಳಿಕೊಳ್ಳುತ್ತಿದೆ.ಆದರೆ, ವಾಸ್ತವಾಂಶ ಬಿಜೆಪಿ ಹೈಕಮಾಂಡ್ನ ಹೇಳಿಕೆಗೆ ತದ್ವಿರುದ್ದವಾಗಿದೆ. 1000ದಿನಗಳ ಆಡಳಿತದಲ್ಲಿ ಯಡಿಯೂರಪ್ಪನವರು ರಾಜ್ಯದ ಅಭಿವೃದ್ಧಿ ಕುರಿತು 1000 ಸುಳ್ಳುಗಳನ್ನು ಹೇಳಿದ್ದಾರೆ. ಅಧಿಕಾರಕ್ಕೆ ಬಂದಾಗಿನಂದ ತಮ್ಮ ಕೌಟುಂಬಿಕ ಅಭಿವೃದ್ಧಿಯನ್ನೇ ಹೆಚ್ಚಿಸಿಕೊಂಡಿದ್ದಾರೆ. ಹಿಂದೆ ಕನರ್ಾಟಕದಲ್ಲಿ ಎಷ್ಟೆಲ್ಲ ಸಕರ್ಾರಗಳು ಆಡಳಿತದಲ್ಲಿ ಭ್ರಷ್ಟಾಚಾರ ನಡೆಸಿವೆಯೋ ಅದರ 3ಪಟ್ಟು ಭ್ರಷ್ಟಾಚಾರವನ್ನು ಯಡಿಯೂರಪ್ಪನವರ ಸಕರ್ಾರ ಬರೀ 2ವರೆ ವರ್ಷದಲ್ಲಿ ಮಾಡಿ ಗಿನ್ನಸ್ ದಾಖಲೆ ನಮರ್ಿಸಿದೆ. ಈ ದೇಶದಲ್ಲಿ ಕನರ್ಾಟಕ ನಂ.1ಭ್ರಷ್ಟಾಚಾರ ರಾಜ್ಯವಾಗಿದೆ. (ಈ ಕುರಿತು ಔಟಲುಕ್ ಎಂಬ ರಾಷ್ಟ್ರೀಯ ಪತ್ರಿಕೆಯಲ್ಲಿ ಅಂಕಿಅಂಶಗಳ ಸಮೇತ ಸವಿಸ್ತಾರವಾದ ವರದಿ ಬಂದಿದೆ.) ಈ ಕುರಿತು ಚಕಾರವೆತ್ತದ ಹೈಕಮಾಂಡ್ ಯಡಿಯೂರಪ್ಪರಿಗೆ ಶಹಬ್ಬಾಸ್ಗಿರಿ ಕೊಡುವಲ್ಲಿಯೇ ನರತವಾಗಿದೆ. ಒಂದು ಬದಿಯಿಂದ ನೋಡಿದರೆ ಬಿಜೆಪಿ ಹೈಕಮಾಂಡ್ಗೆ ಯಡಿಯೂರಪ್ಪರನ್ನು ಹೊಗಳುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಯಾಕೆಂದರೆ ಬಿಜೆಪಿಯ ಎಲ್ಲ ಹೈಕಮಾಂಡ್ಗಳು ಹಣದಾಹಿಗಳು. ಅವುಗಳಿಗೆ ಸಮಯಕ್ಕನುಗುಣವಾಗಿ (ಬೇರೆ ರಾಜ್ಯಗಳ ಚುನಾವಣಿಗಳು ಬಂದಾಗ) ಹಣ ಬೇಕಾದರೆ ಅನವಾರ್ಯವಾಗಿ ಹೊಗಳಬೇಕು. ಇಲ್ಲವೆಂದರೆ ತಮ್ಮ ಮುಂದಿನ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಅದಕ್ಕಾಗಿ ಯಡಿಯೂರಪ್ಪ ಎಂತಹ ಕೆಲಸ ಮಾಡಿದರೂ ಆತನ ಬೆಂಗಾವಲಿಗೆ ನಂತಿರುತ್ತದೆ ಹೈಕಮಾಂಡ್.ಆಡಳಿತಕ್ಕೆ ಬರುವ ಮುಂಚೆ ಜನತೆಗೆ ನೂರಾರು ಭರವಸೆ, ಆಶ್ವಾಸನೆಗಳನ್ನು ನಡಿದ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನಲ್ಲಿಯ ಗೊಂದಲಗಳನ್ನು ನವಾರಣಿ ಮಾಡಿಕೊಳ್ಳುವಲ್ಲಿಯೇ 1000ದಿನಗಳನ್ನು ಕಳೆಯಿತು!ಯಡಿಯೂರಪ್ಪ ಅನೈತಿಕ ಆಪರೇಷನ್ ಕಮಲದ ಮೂಲಕ ತಮ್ಮ ಸಕರ್ಾರವನ್ನು ಸುಭದ್ರ ಮಾಡಿಕೊಳ್ಳಲು ಹೋಗಿ ತಾವೇ ಆಪರೇಷನ್ ಭೀತಿಗೆ ಎದುರುವಂತಾದರು. ಆರಂಭದ ಸಿಹಿಯನ್ನು ಅನುಭವಿಸಿದವರು ಕೊನೆಗೆ ಕಹಿಯನ್ನು ತಿನ್ನಬೇಕಲ್ಲವೇ? ಅದು ಈಗ ಯಡಿಯೂರಪ್ಪನವರ ಪಾಳೆ.ರಾಜ್ಯದ ಹಲವಾರು ಹಗರಣಗಳಲ್ಲಿ ಯಡಿಯೂರಪ್ಪ ಭಾಗಿಯಾಗುವದರ ಮೂಲಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕಿರುವ ಘನತೆ, ಗೌರವಕ್ಕೆ ಚ್ಯುತಿ ತಂದಿದ್ದಾರೆ. ಮಾತೆತ್ತಿದರೆ ಸಾಕು ಹಿಂದೆ ಅವರೇನು ಮಾಡಿಲ್ಲವೇ..? ಎಂಬ ಉದ್ದಟತನದ ಪ್ರಶ್ನೆಯನ್ನು ಹಾಕುತ್ತಾ ಸಮಯ ಕಳೆಯುತ್ತಿದ್ದಾರೆ.ಹಿಂದಿನ ಸಕರ್ಾರಗಳು ಹಗರಣ, ಭ್ರಷ್ಟಾಚಾರವನ್ನು ಮಾಡಿವೆ ಎಂಬ ಕಾರಣಕ್ಕೆ ಜನರು ಭಾರತೀಯ ಜನತಾ ಪಕ್ಷವನ್ನು ಚುನಾವಣಿಯಲ್ಲಿ ಗೆಲ್ಲಿಸಿರುವುದು. ಅವರು ಮಾಡಿದಂತೆ ನವು ಮಾಡುವುದಾದರೆ, ನಮಗಿಂತ ಅವರೇ ಎಷ್ಟೋ ಲೇಸು ಎಂಬ ಭಾವನೆ ಜನರಲ್ಲಿ ಸಹಜವಾಗಿ ಮೂಡುತ್ತದೆ.ಹಲವು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕಾರ್ಯನರ್ವಹಿಸಿದ ಯಡಿಯೂರಪ್ಪನವರಿಗೆ ಸಕರ್ಾರ ಎಲ್ಲೆಲ್ಲಿ ಎಡವುತ್ತದೆ, ಯಾವ್ಯಾವ ಘಟನೆಗಳು ಹೇಗೆ ಸಂಭವಿಸುತ್ತವೆ ಎಂಬುದೆಲ್ಲ ಚನ್ನಾಗಿ ಗೊತ್ತು.ಆದರೆ, ತಾವು ಮುಖ್ಯಮಂತ್ರಿಯಾಗುತ್ತಿದ್ದಂತೆ ವಿರೋಧ ಪಕ್ಷದಲ್ಲಿ ಮಾಡಿದ ಕೆಲಸ, ಕರ್ತವ್ಯಗಳನ್ನು ಮರೆತರು. ಹಿಂದಿನವರಂತೆ ತಾವು ಕೂಡ ಭ್ರಷ್ಟಾಚಾರ, ಅವ್ಯವಹಾರಗಳನ್ನು ಮಾಡಲು ರೆಡಿಯಾದರು. ದೇವೆಗೌಡರಂತೆ ತಾವು ಕೂಡ ಕುಟುಂಬ ರಾಜಕಾರಣ ಮಾಡಲು ಹೊರಟರು. ಮನೆ ಮಕ್ಕಳು, ಸಂಬಂಧಿಕರಿಗೆ ಆಸ್ತಿ, ಜಮೀನು, ಸೈಟು, ತದಿತ್ಯಾದಿಗಳನ್ನು ನಡಿದರು. ಮಠಮಾನ್ಯ, ಸ್ವಾಮಿಗಳಿಗೆ ಬೇಕಾಬಿಟ್ಟಿಯಾಗಿ ಹಣವನ್ನು ನಡಿದರು. ದೆಹಲಿಯ ನಾಯಕರು ತಮ್ಮ ಪರವಾಗಿ ಸದಾ ವಕಾಲತ್ತು ವಹಿಸಲು ಅವರಿಗೆ ತಪ್ಪದೇ ಸೂಟಕೇಸ್ಗಳನ್ನು ಕಳುಹಿಸುವ ಪ್ರವೃತ್ತಿ ಬೆಳೆಸಿಕೊಂಡರು.ಒಟ್ಟಾರೆ ರಾಜ್ಯದ ಖಜಾನೆಯಿಂದ ತಮ್ಮ ಮನಸ್ಸಿಗೆ ಬಂದಂತೆ ಹಣವನ್ನು ಖಚರ್ು ಮಾಡಿ, ರಾಜ್ಯದ ಆಥರ್ಿಕತೆಯ ಹಾದಿ ತಪ್ಪಿಸಿದರು.ಒಂದು ಕಡೆ ಖಜಾನೆ ಬರಿದಾಗುತ್ತಿದ್ದರೆ ಇನ್ನೊಂದಡೆ ನನ್ನ ಸಕರ್ಾರದಲ್ಲಿ ಸಾಕಷ್ಟು ಹಣವಿದೆ. ತೆರಿಗೆಯಿಂದ ಅಪಾರ ಹಣ ಬಂದಿದೆ. ಮುಂದಿನ ಬಾರಿ 2ಬಜೆಟ್ಗಳನ್ನು ಮಂಡಿಸಲು ತಯಾರಿ ನಡೆಸಿದ್ದೇನೆ. ನಾಡಿನ ಅಭಿವೃದ್ಧಿ, ರೈತರ ಏಳಿಗೆಗಾಗಿ ಕೆಲಸ ಮಾಡಲು ನಾ ಸದಾ ಸಿದ್ದನದ್ದೇನೆ. ಆದರೆ, ನನ್ನನ್ನು ಕೆಲವು ಶಕ್ತಿಗಳು ಕಟ್ಟಿಹಾಕಿವೆ, ನನ್ನನ್ನು ಮುಗಿಸಲು ಸಂಚುಹೂಡಿವೆ ಎಂದು ಅಪಹಾಸ್ಯವಾಗಿ ಹೇಳುತ್ತಿದ್ದಾರೆ. ಇದು ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಹೇಳುವ ಮಾತಾ? ಛೇ..ಛೇ..ಸಕರ್ಾರದ ಪ್ರತಿಯೊಂದು ಇಲಾಖೆಯಲ್ಲಿ ಅಕ್ರಮ, ಭ್ರಷ್ಟಾಚಾರವೆಂಬ ಭೂತಗಳು ವ್ಯವಸ್ಥಿತವಾಗಿ ಕಾರ್ಯನರ್ವಹಿಸುತ್ತಿವೆ. ಕೆಲವೊಂದು ಅವ್ಯವಹಾರಗಳು ಮಾಧ್ಯಮಗಳ ಕಣ್ಣಿಗೆ ಬಿದ್ದರೆ, ಇನ್ನು ಕೆಲವು ಮಾಧ್ಯಮದವರ ಸಮ್ಮುಖದಲ್ಲಿಯೇ ನಡೆಯುತ್ತಿವೆ. ರೈತ, ಕೃಷಿ ಹೆಸರಿನ ಮೇಲೆ ಸಾಕಷ್ಟು ಬಹುರಾಷ್ಟ್ರೀಯ ಕಂಪನಗಳು ರಾಜ್ಯದ ಫಲವತ್ತಾದ ಭೂಮಿಯನ್ನು ಹಾಳುಗೆಡುವುತ್ತಿವೆ. ನೆಪ ಮಾತ್ರಕ್ಕೆ ರೈತನ ಹೆಸರೇಳಿ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನಾಡಿನ ರೈತರ ಬದುಕಿನ ಬಗ್ಗೆ ಎಂದೆಂದೂ ಚಿಂತಿಸುವವರಲ್ಲ. ಅವರಿಗೆ ಅಸಲಿಗೆ ರೈತರ ಮೇಲಲ್ಲ ಪ್ರೇಮ, ರೈತರ ಜಮೀನುಗಳನ್ನು ಲೀಸ್ಗೆ ಪಡೆಯುವ ಕಾಪೋರೇಟರ್ಗಳ ಮೇಲಿದೆ.ಯಡಿಯೂರಪ್ಪನವರಿಗೆ ಶ್ರೀಮತಿ ಶೋಭಾ, ತನ್ನ ಪಕ್ಷದಲ್ಲಿನ ವಿರೋಧಿಗಳು, ಕುಮಾರಸ್ವಾಮಿ, ಸಿದ್ದರಾಮಯ್ಯರವರನ್ನೆಲ್ಲ ಸಮಜಾಯಿಸಲು ಸಮಯ ಸಿಗುತ್ತಿಲ್ಲ. ಇನ್ನು ಯಾವಾಗ ರಾಜ್ಯದ ಜನರ ನೋವು, ನಲಿವು, ಸಂಕಷ್ಟಗಳನ್ನು ನೋಡಲು ಬಿಡುವಿರುತ್ತದೆ ಹೇಳಿ.ಸುಮ್ಮೆನೆ ಮಾಧ್ಯಮ ಮಿತ್ರರ ಮುಂದೆ ಪ್ರತಿವರ್ಷ ದೀಪಾವಳಿಯನ್ನು ನರಾಶ್ರಿತರ ಜೊತೆ ಆಚರಿಸುತ್ತೇನೆ. ಪ್ರತಿ ತಿಂಗಳು ಒಬ್ಬ ರೈತನ ಮನೆಯಲ್ಲಿ ತಂಗುತ್ತೇನೆ. ತಿಂಗಳಲ್ಲಿ 1ವಾರ ಕಡ್ಡಾಯವಾಗಿ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ. 15ದಿನಕ್ಕೊಮ್ಮೆ ಜನರ ಬಳಿಗೆ ನೇರವಾಗಿ ನಾನೇ ಹೋಗಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆಂದು ಬೊಗಳೆ ಬಿಡುತ್ತಾರೆ. ಇದೆಲ್ಲ ಸಮಯವನ್ನು ದೂಡವ ಕೆಲಸ.ಚಿಕ್ಕಮಕ್ಕಳಂತೆ ಆಡೋಣ ಬಾ.. ಕೆಡಿಸೋಣ ಬಾ..ಎಂದು ಯಡಿಯೂರಪ್ಪನವರು ದಿನಗಳನ್ನು ಕಳೆಯುತ್ತಿದ್ದಾರೆಯೇ ವಿನಃ ಎಲ್ಲಿಯೂ ಅವರಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮನಸ್ಸಿಲ್ಲ. ನೆರೆಹಾವಳಿಯಿಂದ ತತ್ತರಿಸಿಹೋಗಿದ್ದ ಉತ್ತರಕನರ್ಾಟಕ ಜನತೆ ಇನ್ನು ಸಹಜ ಸ್ಥಿತಿಗೆ ಬಂದಿಲ್ಲ. ರೈತರ ಆತ್ಮಹತ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆಯೆ ವಿನಃ ನಂತಿಲ್ಲ. ಕರವಾಳಿಯಲ್ಲಿ ಕೋಮುಜ್ವಾಲೆ ಹೊತ್ತಿ ಉರಿಯುತ್ತಿದೆ. ರಾಜ್ಯದಲ್ಲಿ ಅಶಾಂತಿ ನಮರ್ಾಣವಾಗಿದೆ. ರಾಜ್ಯದ ಆಡಳಿತ ಚುಕ್ಕಾಣಿ ದಿಕ್ಕುತೋಚದಂತಾಗಿದೆ. ಅದಕ್ಕಾಗಿ ಮೊದಲು ಇರುವಷ್ಟು ಸಮಯದಲ್ಲಿ ಜನಪರವಾಗಿ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ. ಅದು ಬಿಟ್ಟು ಮಾಟ, ಮಂತ್ರ, ಗುಡಿ, ಗುಂಡಾರ ಅಂತ ತಿರುಗಿದರೆ ಲಾಭವಿಲ್ಲ. ಇಲ್ಲವೆಂದರೆ ಮೊದಲಿಗಿದ್ದ ವಿರೋಧ ಪಕ್ಷವೇ ಯಡಿಯೂರಪ್ಪನವರಿಗೆ ಗಟ್ಟಿಯಾಗುತ್ತದೆ.
* ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್.* ದಾವಣಗೆರೆ ಸೇರಿದಂತೆ ರಾಜ್ಯದ ಹಲವಾರು ಚಚರ್್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ. * ಗಿನ್ನಿಸ್ ದಾಖಲೆ ತಲುಪುವಂತಹ ಅಧಿಕಾರಿಗಳ ವಗರ್ಾವಣೆಗಳು.* ಆಪರೇಷನ್ ಕಮಲದ ಹೆಸರಿನ ಮೇಲೆ ಪ್ರಜಾಪ್ರಭುತ್ವದ ಕಗ್ಗೊಲೆ. * ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ, ಲೋಡ್ ಶೆಡಿಂಗ್ ಹೆಸರಲ್ಲಿ ಕತ್ತಲ್ಲಿಟ್ಟಿರುವುದು.* ರಾಮಸೇನೆಯ ಕರಸೇವಕರಿಂದ ಮಸೀದಿ ಒಳಗೆ ಹಂದಿಯ ತಲೆಯನ್ನು ಎಸೆದು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿರುವುದು.* ಕರಾವಳಿ ಅಲೆ ಪತ್ರಿಕಾ ಸಂಪಾದಕರಾದ ಬಿ.ವಿ.ಸೀತಾರಾಮ್ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದರೊಂದಿಗೆ ಪತ್ರಿಕಾ ಸ್ವಾತಂತ್ರವನ್ನು ಮೊಟಕು ಗೊಳಿಸುವ ಹುನ್ನಾರ ನಡೆಸಿರುವುದು.* ಮಾಧ್ಯಮಗಳ ಕಡಿವಾಣಕ್ಕೆ ಒಂಬುಡ್ಸ್ಮನ್ ನೇಮಿಸುವುದು.* ಸಂಪಂಗಿಯೆಂಬ ಕೋಡಂಗಿ ಲಂಚವನ್ನು ಪಡೆದು ಲೋಕಾಯುಕ್ತರ ಬಲೆಗೆ ಸಿಕ್ಕಿರುವುದು* ಪಬ್ಮೇಲೆ ದಾಳಿಯನ್ನು ಮಾಡಿರುವುದು.* ರೆಡ್ಡಿಗಳ ಜೊತೆಗೂಡಿ ರಾಜ್ಯದ ಗಡಿಯನ್ನೇ ಬದಲಿಸಿರುವುದು.ಅದೆಲ್ಲ ಸಾಲದೆಂಬಂತೆ ಇನ್ನುಳಿದ ವರ್ಷ ನಾನೇ ಮುಖ್ಯಮಂತ್ರಿ ಎಂದು ಭಂಡತನದಿಂದ ಹೇಳಿಕೊಳ್ಳುವುದು.* ಹಿಂದಿನ ಸಕರ್ಾರಗಳು ಮಾಡಿರುವ ಎಲ್ಲ ಅಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಿರುವುದು.* ಕಂಡಕಂಡ ಸ್ವಾಮಿಗಳ ಕಾಲಿಗೆ ಬಿದ್ದು ಸಕರ್ಾರಿ ಹಣವನ್ನು ತನ್ನ ಆಸ್ತಿಯೆಂಬಂತೆ ನೀಡಿರುವುದು.* ಹಠಕ್ಕೆ ಬಿದ್ದು ಅವಿವೇಕಿ ಸೋಮಣ್ಣ, ಕುಮಾರಿ ಶೋಭಾಳನ್ನು ಸಂಪುಟಕ್ಕೆ ಕರೆದುಕೊಂಡದ್ದು.* ತನ್ನ ಸ್ಥಾನಕ್ಕೆ ಕುತ್ತುಬರುವುದು ನಿಶ್ಚಿತ ಎನ್ನುತ್ತಿದ್ದಂಥೆ ಮಠಾಧೀಶರನ್ನೆಲ್ಲ ಬೀದಿಗಿಳಿಸಿ ತನ್ನ ಬೆಂಬಲ ತೋರಿಸಿಕೊಂಡಿರುವುದು.* ಉತ್ತರ ಕನರ್ಾಟಕದ ಜನತೆ ನೆರೆಹಾವಳಿಗೆ ಸಿಕ್ಕು ತತ್ತರಿಸಿದ್ದರೆ, ತನ್ನ ಕುಚರ್ಿಗಾಗಿ ರೆಸಾಟರ್್ ರಾಜಕೀಯಕ್ಕೆ ಮೊರೆ ಹೋಗಿರುವುದು.* ಮಕ್ಕಳು, ಅತ್ತೆ, ಮಾವಂದಿರ ಹೆಸರಿಗೆ ಸಕರ್ಾರಿ ಭೂಮಿಗಳನ್ನು ಡಿನೋಟಿಪೈ ಮಾಡಿರುವುದು.* ಇಂತಹ ಸಾಧನೆಗೆ ಮಾರ್ವಾಡಿ ಗಡ್ಕರಿಯಿಂದ ಬೆಸ್ಟ್ ಸಿಎಂ ಎಂದೆನಿಸಿಕೊಂಡಿರುವುದು.