
ವ್ಯವಸ್ಥೆಯಲ್ಲಿ ಕಳ್ಳತನ, ಸುಲಿಗೆ, ದರೋಡೆ, ಕೊಲೆಯಂತಹ ಪ್ರಕರಣಗಳು ಆಧುನಿಕ ತಂತ್ರಜ್ಞಾನಗಳು ಬೆಳೆದಂತೆ ಹೆಚ್ಚಾಗುತ್ತಾ ಸಾಗುತ್ತವೆ. ಹಾಗಂತ ತಂತ್ರಜ್ಞಾನ ಬೆಳೆಯುತ್ತಿದೆಯೆಂದು ನಡೆಯುವ ಪ್ರಕರಣಗಳನ್ನು ಪತ್ತೆಹಚ್ಚದೇ ಪೊಲೀಸರು ಸುಮ್ಮನೆ ಕೂಡಲು ಆಗುತ್ತದೆಯಾ..? ಎಂಬ ಪ್ರಶ್ನೆಯ ಬೆನ್ನು ಹತ್ತಿ ಹೊರಟಾಗ ನಮಗೆ ದೀಡಿರನೇ ಅಂತಹದೇ ಒಂದು ಪ್ರಕರಣ ನಮ್ಮ ಜಿಲ್ಲೆಯಲ್ಲಿ ಚಿಗುರೊಡಿದಿರುವುದು ಕಂಡು ಬಂದಿತು. ಯದ್ದಲದಿನ್ನಿ ಮಹಿಳಾ ಕೊಲೆ ಪ್ರಕರಣವನ್ನು ವ್ಯವಸ್ಥಿತವಾಗಿ ಪೊಲೀಸರು ಭೇದಿಸದೇ ಕೈಚೆಲ್ಲಿ ಕುಳಿತರೇ ವ್ಯವಸ್ಥೆ ಏನಾಗಬಹುದು ಎಂಬುದರ ಕುರಿತು ನಮ್ಮ ಪ್ರತಿನಿಧಿ ಪೌಲರಾಜ್ ಯದ್ದಲದಿನ್ನಿ ನೀಡಿರುವ ಒಂದು ತನಿಖಾ ವಿಶ್ಲೇಷಣಾ ವರದಿ.
ರಾಯಚೂರು ಜಿಲ್ಲೆಯ ಕವಿತಾಳ ವ್ಯಾಪ್ತಿಯಲ್ಲಿ ಬರುವ ಪುಟ್ಟದೊಂದು ಹಳ್ಳಿಯಲ್ಲಿ ಆಧುನಿಕ ಜಗತ್ತಿಗೆ ಸವಾಲಾಗುವಂತಹ ಖತರ್ನಾಕ್ ರೀತಿಯಲ್ಲಿ ಅಮಾಯಕ ಒಂಟಿ ಮಹಿಳೆಯ ಕಾಣೆ ನಂತರ ಕೊಲೆಯೆಂಬ ಶಂಕೆ ನಡೆದು ಹೋಗುತ್ತದೆ! ಈ ಘಟನೆ ನಡೆದು ಸುಮಾರು 6ತಿಂಗಳು ಗತಿಸಿದರೂ ವ್ಯವಸ್ಥೆಯ ಯಾರೊಬ್ಬರ ಕಣ್ಣಿಗೆ ಬೀಳುವುದಿಲ್ಲ. ನಂತರ ಇದೊಂದು ವರದಕ್ಷಣಿ ಕಿರುಕುಳ, ನಾಪತ್ತೆ ಪ್ರಕರಣವೆಂದು ದಾಖಲಾಗಿ ಸುಖಾಂತ್ಯ ಕಾಣುವ ಹಂತ ತಲುಪಿರುತ್ತದೆ. ದುರದೃಷ್ಟಕ್ಕೆ ಮತ್ತೇ ಈ ಪ್ರಕರಣ ಮುಂದೊಂದು ದಿನ ಎದ್ದು ಕೂಡಬಹುದೆಂದು ಅಲ್ಲಿನ ಪೊಲೀಸರು ಅಂದುಕೊಂಡಿರಲಿಲ್ಲ. ಜೊತೆಯಲ್ಲಿ ಆರೋಪಿಯೂ ಇದನ್ನು ಕನಸಿನಲ್ಲಿಯೂ ನೆನಸಿರಲಿಲ್ಲ.ಕೊಲೆಯ ಹಿಂದಿನ ರಹಸ್ಯ? ದೇವದುರ್ಗ ತಾಲೂಕಿನ ಫಲಕನಮರಡಿ ಗ್ರಾಮದ ಓರ್ವ ಅನಕ್ಷರಸ್ಥ ಮಹಿಳೆಯಾದ ಹನುಮಂತಿ (22) ಎಂಬಾಕೆಯನ್ನು 05-05-2009ರಂದು ಮಾನವಿ ತಾಲೂಕಿನ ಯದ್ದಲದಿನ್ನಿ ಗ್ರಾಮದ ಹನುಮಂತ (28)ಎಂಬಾತನಿಗೆ ಕೊಟ್ಟು ಮದುವೆಯನ್ನು ಮಾಡಲಾಗಿತ್ತು. ಮದುವೆಯಾದ ನವದಂಪತಿಗಳು ಒಳ್ಳೆಯ ಜೀವನವನ್ನು ಸಾಗಿಸಲಿ ಎಂದು ಎಲ್ಲರೂ ನಾಲ್ಕು ಅಕ್ಕಿ ಕಾಳನ್ನು ಹಾಕಿ ಆಶರ್ಿವಧಿಸುತ್ತಾರೆ. ಆದರೆ, ಹನುಮಂತಿಯ ಬದುಕಿನಲ್ಲಿ ಅದು ನಡೆಯಲಿಲ್ಲ. ತನ್ನ ಬಾಲ್ಯದಲ್ಲಿ ಕಳೆದ ಜೀವನವನ್ನು ಆಕೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಮದುವೆಯಾದ ಎರಡೇ ತಿಂಗಳಲ್ಲಿ ಗಂಡನಾದ ಹನುಮಂತ ಕಿರುಕುಳ ಕೊಡಲು ಪ್ರಾರಂಭಿಸಿದ. ನಿನ್ನ ತವರು ಮನೆಗೆ ಹೋಗಿ 1ತೊಲೆ ಬಂಗಾರ, 10ಸಾವಿರ ರೊಕ್ಕ ತೆಗೆದುಕೊಂಡು ಬಾ, ಎಂದು ಒಂದೇ ಸಮನೇ ವರದಕ್ಷಣೆ ಕಿರುಕುಳ ಕೊಡುತ್ತಾ, ಹೊಡೆಯುವದನ್ನು ಮಾಡುತ್ತಿದ್ದ. ನಂತರ ಬೇಸತ್ತ ಹನುಮಂತಿ ತನ್ನ ತಂದೆಗೆ ಈ ವಿಷಯವನ್ನು ತಿಳಿಸಿ 1ತೊಲೆ ಬಂಗಾರವನ್ನು ನನ್ನ ಗಂಡನಿಗೆ ನೀಡುವಂತೆ ತನ್ನ ತಂದೆಯನ್ನು ಒಪ್ಪಿಸುತ್ತಾಳೆ. ಅದಾದ ಕೆಲವೇ ದಿನಗಳಲ್ಲಿ ಯದ್ದಲದಿನ್ನಿ ಗ್ರಾಮಕ್ಕೆ ಹನುಮಂತಿ ತನ್ನ ತಂದೆಯ ಜೊತೆಯಲ್ಲಿ ಹೋಗಿ ಬಂಗಾರವನ್ನು ಕೊಟ್ಟು ಸುಖಿಸಂಸಾರ ನಡೆಸಲು ಆಲೋಚನೆ ನಡೆಸಿದಳು. ಯಾಕೋ ಹನುಮಂತನಿಗೆ ಆಸೆ ಜಾಸ್ತಿಯಾಯಿತು. ಹಿಂದಿನ ಇತಿಹಾಸದಲ್ಲಿ ಹೇಳುವಂತೆ ಕಡ್ಡಿ ತಾಂಬರೋ ಹನುಮ ಅಂದರೆ, ಅವನು ಗುಡ್ಡನೇ ತಂದಿದ್ದನಂತೆ ಅದರಂತೆ ಈ ಕಲಿಯುಗದ ಹನುಮಂತನಿಗೆ ಹೆಂಡತಿಯ ಜೊತೆ ಬಾಳುವುದು ಇಷ್ಟವಾಗಲಿಲ್ಲ. ತಾನು ಹೇಳಿದಂತೆ ತನ್ನ ಭೀಗರು ಬಂಗಾರವನ್ನು ಕೊಟ್ಟರೂ ಸಹ ಮತ್ತೇ ಕಿರುಕುಳ ಕೊಡಲು ಪ್ರಾರಂಭಿಸಿದನು. ನಂತರದ ದಿನಗಳಲ್ಲಿ ಹನುಮಂತನ ಹಣದ ವ್ಯಾಮೋಹ ಮತ್ತು ಆಲೋಚನೆಗಳು ತನ್ನ ಹೆಂಡತಿಯನ್ನೇ ನಾಪತ್ತೆ, ಕೊಲೆ ಮಾಡುವ ಮಟ್ಟಿಗೆ ಹೋಗಿವೆ. ಇದಕ್ಕೆ ಸಾಥ್ ಆಗಿ ಅವನ ಅಣ್ಣ ಶರಣಪ್ಪ, ಅವನ ತಾಯಿ ಅನ್ನಮ್ಮ ಸಹಕಾರ ನೀಡುತ್ತಾರೆೆ!ತನ್ನ ಹೆಂಡತಿಯನ್ನು ನಾಪತ್ತೆ, ಕೊಲೆ ಮಾಡಲು ಹನುಮಂತ ಕಳೆದುಕೊಂಡದ್ದಾದರೂ ಏನು? ಹಣಕ್ಕಾಗಿ ಹಗಲಿರುಳು ಪೀಡಿಸುತ್ತಿದ್ದ ಹನುಮಂತ ಮತ್ತು ಅವನ ಕುಟುಂಬದವರು ಒಂದು ದಿನ ಹನುಮಂತಿಯ ಕೊರಳಲ್ಲಿನ ತಾಳಿಯನ್ನು ತೆಗೆದು ನಿಗೂಡವಾಗಿ ಕೊಲೆ ಮಾಡಿದ್ದಾರೆ! ಅದು ಹನುಮಂತನ ಕುಟುಂಬದವರಿಗೆ ಬಿಟ್ಟರೆ, ಊರಿನಲ್ಲಿ ಮತ್ಯಾರಿಗೂ ಗೊತ್ತಿಲ್ಲ. ಇತ್ತ ಫಲಕನಮರಡಿಯಲ್ಲಿ ಹನುಮಂತಿಯ ಕುಟುಂಬದವರು ಕೆಲವು ದಿನಗಳ ಹಿಂದೆ ಮಗಳದ್ದು ದುಡ್ಡಿನ ಸಂಭಂಧ ಕಿರಿಕಿರಿ ಉಂಟಾದಾಗ ತಾವೇ ಖುದ್ದಾಗಿ ಭೀಗರ ಊರಿಗೆ 1ತೊಲೆ ಬಂಗಾರವನ್ನು ನೀಡಿ ಬಂದಿದ್ದರು! ಹೀಗಾಗಿ ಬಹಳ ದಿನಗಳಾಗಿದೆ ಮಗಳನ್ನು ನೋಡಿದರಾಯಿತು. ಅದೇ ಹೊತ್ತಿನಲ್ಲಿ ಮೊಹರಂ ಹಬ್ಬವು ಸಮೀಪಕ್ಕೆ ಬಂದಿತ್ತು. ಆದ್ದರಿಂದ ಹನುಮಂತಿಯ ತಂದೆ ತನ್ನ ತಮ್ಮನ ಮಗನಿಗೆ ಹೇಳಿ ಯದ್ದಲದಿನ್ನಿಗೆ ಹೋಗಿ ನಿಮ್ಮ ತಂಗಿಯನ್ನಾದರೂ ಕರೆದುಕೊಂಡು ಬಾ ಹೋಗು ಎಂದು ಹೇಳಿದ್ದಾನೆ.ಮಾರನೇ ದಿನ ಹನುಮಂತಿಯ ಅಣ್ಣ ಯದ್ದಲದಿನ್ನಿ ಹೋದಾಗ ಭೀಗರ ಮನೆಯಲ್ಲಿ ತನ್ನ ತಂಗಿ ಕಂಡಿಲ್ಲ. ನಿಧಾನವಾಗಿ ಆಲೋಚಿಸುತ್ತಾ ಮನೆ ಕೆಲಸಕ್ಕಾಗಿ ಇಲ್ಲಿ-ಎಲ್ಲಿಯಾದರೂ ಹೋಗಿರಬೇಕು ಬಿಡು, ಎಂದು ನಿರಾಳವಾಗಿ ಅರ್ಧಗಂಟೆ ಕಳೆದಿದ್ದಾನೆ. ಆದರೂ, ಕೂಡ ತಂಗಿ ಬಾರದೇ ಇರುವುದನ್ನು ನೋಡಿ ತನ್ನ ಅಳಿಯನಿಗೆ ಕೇಳಿದ್ದಾನೆ. ಏನಪ್ಪ ಎಲ್ಲಿದ್ದಾಳೆ ನಮ್ಮ ತಂಗಿ.., ಆಗ, ಜಝರ್ಿರಿತನಾದ ಅಳಿಯ ಹನುಮಂತ ; ನಿಮ್ಮ ತಂಗಿ ಇವತ್ತಿಗೆ ಎರಡು ದಿನ ಆಯಿತು. ಗೂಟಕ್ಕೆ ತಾಳಿಯನ್ನು ನೇತುಹಾಕಿ ಮನೆ ಬಿಟ್ಟು ಎಲ್ಲಿಗೋ ಓಡಿ ಹೋಗಿದ್ದಾಳೆ. ನಾವು ಕೂಡ ಆಕೆಯನ್ನೇ ಹುಡುಕಾಡುತ್ತಿದ್ದೇವೆ ಅಂದಿದ್ದಾನೆ. ಆಗ ಅಣ್ಣನು ದಂಗಾಗಿ ನಂತರ ಅತ್ತೆ, ಮನೆಯಲ್ಲಿರುವ ಎಲ್ಲರನ್ನು ವಿಚಾರಿಸಿದ್ದಾನೆ. ಎಲ್ಲರಿಂದಲೂ ಇದೇ ಉತ್ತರ ಬಂದಾಗ ಕೂಡಲೇ ಆತ ವಿಷಯವನ್ನು ತಮ್ಮೂರಿನ ದೊಡಪ್ಪನಿಗೆ ತಿಳಿಸಿದ್ದಾನೆ. ಮನೆಯಲ್ಲಿ ಈ ವಿಷಯವನ್ನು ಕೇಳುತ್ತಿದ್ದಂಥೆ ಎಲ್ಲರೂ ಒಂದು ಕ್ಷಣ ಗಲಿಬಿಲಿಗೊಂಡಿದ್ದಾರೆ.(ಆದರೆ, ಯಾರಿಗೂ ಆ ಕ್ಷಣ ಹನುಮಂತಿ ನಿಗೂಡವಾಗಿ ಕೊಲೆಯಾಗಿದ್ದಾಳೆ! ಎಂಬುದು ಆ ಕ್ಷಣಕ್ಕೆ ಗೊತ್ತಾಗಿಲ್ಲ. ಸಮಯ ಕಳೆದಂತೆ ಅಳಿಯನ ಮೇಲೆ ಭೀಗರು ಅನುಮಾನ ಮಾಡಿದ್ದಾರೆ.) ಹನುಮಂತಿಯ ಕಡೆಯವರು ತಮ್ಮಮಗಳ ನಾಪತ್ತೆಗಾಗಿ ದೂರನ್ನು ಕವಿತಾಳ ಠಾಣೆಗೆ ಸಲ್ಲಿಸಲು ಹೋದಾಗ ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ನಂತರ ಹನುಮಂತನ ಕರೆಯಿಸಿಕೊಂಡು ಬೇಕಾಬಿಟ್ಟಿಯಾಗಿ ಆತನಿಂದಲೇ ಕಾಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ! ಪದ್ದತಿಯಂತೆ ಮೊಬೈಲ್ನ ಸಿಮ್ ಕಳೆದರೆ ಹೇಗೆ ನಾವು ಕಛೇರಿಗೆ ಹೋಗಿ ಹೇಗೆ ಕಂಪ್ಲೇಟ್ ಕೊಡುತ್ತೇವೆ. ಅದರಂತೆ ಹನುಮಂತನು ಕೂಡ ತನ್ನ ಹೆಂಡತಿ ಕಳೆದುಹೋಗಿದ್ದಾಳೆ ಎಂದು ಸ್ಥಳೀಯ ಕವಿತಾಳ ಪೊಲೀಸ್ ಕಛೇರಿಗೆ ದೂರನ್ನು ಕೊಟ್ಟಿದ್ದಾನೆ. ದೂರನ್ನು ಸ್ವೀಕರಿಸಿದ ಠಾಣಾಧಿಕಾರಿಗಳು ತನಿಖೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪೊಲೀಸ್, ಕಛೇರಿ ಇಂತವುಗಳನ್ನೆಲ್ಲ ಊರಿನ ಗೌಡರು, ಕುಲಕಣರ್ೀಯವರೇ ನೋಡಿಕೊಳ್ಳುತ್ತಾರೆ. ಅದರಲ್ಲಿ ಅಲ್ಪಸ್ವಲ್ಪ ಪಾಲಿಟಿಕ್ಸ್ ಸೇರಿರುತ್ತದೆ. ಏನೇ ಆಗಲಿ ಪೊಲೀಸರು ಕಾಣೆಯಾದ ಹನುಮಂತಿಯನ್ನು ಹುಡುಕಿದ ಪ್ರಯತ್ನ ವಿಫಲವಾಯಿತು. ಇದು ಹೀಗೆ ನಡೆದುಹೋಗಿದ್ದರೆ, ಒಂದು ಅಮಾಯಕ ಮಹಿಳೆಯ ಕೊಲೆಯ ಪ್ರಕರಣವೊಂದು ವ್ಯವಸ್ಥೆಯಲ್ಲಿ ಬೆಳಕಿಗೆ ಬಾರದೇ ಹಾಗೇಯೇ ಮುಚ್ಚಿಹೋಗುತ್ತಿತ್ತು. ಅದೃಷ್ಟಕ್ಕೆ ಸತ್ಯಕ್ಕೆ ಸಮಾಜದಲ್ಲಿ ಸಾವಿಲ್ಲ ಎಂಬಂಥೆ ಹನುಮಂತನನಿಂದಲೇ ಈ ಪ್ರಕರಣ ಮುಂದೊಂದು ದಿನ ಬೆಳಕಿಗೆ ಬರುತ್ತದೆ ಎಂದು ಯಾರೊಬ್ಬರು ಅಂದು ಊಹಿಸಿರಲಿಲ್ಲ. ಇಷ್ಟೆಲ್ಲ ಘಟನೆ ನಡೆದು ತಿಂಗಳುಗಳೇ ಕಳೆಯುತ್ತಾ ಹೋಯಿತು. ಫಲಕನಮರಡಿಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಮನೆಯವರೆಲ್ಲ ಚಿಂತಿಸುತ್ತಿದ್ದರೆ, ಅತ್ತ ಹನುಮಂತ ನಾನು ಹೆಂಡತಿಯನ್ನು ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಿಲ್ಲ. ಪೊಲೀಸರಿಗೂ ನನ್ನ ಮೇಲೆ ಯಾವುದೇ ಅನುಮಾನ ಬಂದಿಲ್ಲ. ಅಂದ ಮೇಲೆ ನಾನೇಕೆ ಸುಮ್ಮನೆ ಒಂಟಿ ಜೀವನ ನಡೆಸುವುದು ಎಂದು ಯೋಚಿಸಿ ಇನ್ನೊಂದು ಮದುವೆಯಾಗಲು ಇಚ್ಚಿಸಿದ್ದಾನೆ. ಇದಕ್ಕೆ ಮನೆಯಮಂದಿ ಸೊಪ್ಪು ಹಾಕಿದ್ದರಿಂದ ಬೇಗನೇ ಮದುವೆಗೆ ಮುಹೂರ್ತವು ಫಿಕ್ಸ್ ಆಯಿತು. (ಪಾಪ..ಹನುಮಂತನಿಗೆ ಗೊತ್ತಾಗಿಲ್ಲ. ಕೊಲೆ ಮಾಡಿದ್ದು ಬಯಲಿಗೆ ಬಿದ್ದರೆ, ನನಗೂ ಮತ್ತು ಇನ್ನೊಬ್ಬ ಹೆಂಡತಿಯೂ ಕಂಬಿ ಎಣಿಸಿವುದು ಬರುತ್ತದೆ ಎಂದು.) 02-08-2010 ಹನುಮಂತ ಅಲ್ಲಿಯ 73ಕ್ಯಾಂಪಿನ ಹುಚ್ಚಪ್ಪ ಕಾಚಾಪೂರ ಎಂಬುವವರ ಮಗಳನ್ನು 50ಸಾವಿರ ವರದಕ್ಷಣಿಯನ್ನು ಪಡೆದು ಅದ್ದೂರಿಯಾಗಿ ಮದುವೆಯಾಗಿದ್ದಾನೆ.! ಒಂದು ಮದುವೆಯಾಗಿ ಸರಿಯಾಗಿ ಇನ್ನೂ 1ವರೆವರ್ಷ ಕಳೆದಿಲ್ಲ. ಅದರಲ್ಲಿ ಹೆಂಡತಿ ಕಾಣೆಯಾಗಿದ್ದಾಳೆ ದೂರು ಕೊಟ್ಟು ಕೆಲವು ತಿಂಗಳೂ ಗತಿಸಿಲ್ಲ. ಅಂತಹದರಲ್ಲಿ ಈತನು ಇನ್ನೊಂದು ಮದುವೆ ಮಾಡಿಕೊಳ್ಳುತ್ತಿರುವುದು ನೋಡಿ ಎಲ್ಲರಿಗೂ ಅನುಮಾನ ಬಂದಿದೆ. ಇದೇ 2ನೇ ಮದುವೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಕಂಬಿ ಎಣಿಸುವಂತೆ ಮಾಡುತ್ತದೆ ಎಂಬುದು ತಿಳಿದಿರಲಿಕ್ಕಿಲ್ಲ.ಹನುಮಂತ ಮದುವೆಯಾದ ಮಾರನೇ ದಿನವೇ ಮೊದಲ ಹೆಂಡತಿ ಹನುಮಂತಿಯ ಕುಟುಂಬದವರು ಕವಿತಾಳ ಠಾಣೆಗೆ ಬಂದು ನಮ್ಮ ಅಳಿಯ ಕೆಲವು ತಿಂಗಳುಗಳ ಹಿಂದೆ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರನ್ನು ಕೊಟ್ಟಿದ್ದ.. ಅದರ ತನಿಖೆಯನ್ನು ನೀವು ನಡೆಸುತ್ತಿದ್ದೀರಿ.. ಆದಾಗ್ಯೂ ಕೂಡ ಆತನು 02-08-2010ರಂದು ಇನ್ನೊಬ್ಬಳ ಜೊತೆಯಲ್ಲಿ ಮದುವೆಯಾಗಿದ್ದಾನೆಂದರೆ ಏನರ್ಥ ಸಾರ್.. ಎಂದು ಕೆಲವೊಂದು ಸ್ಥಳೀಯ ಸಂಘಟನೆಗಳ ಮುಖಂಡರಾದ ತಿಮ್ಮಣ್ಣ ನಾಯಕ ಹಟ್ಟಿ, ಜಮದಗ್ನಿ ಕೋಠಾರವರ ಜೊತೆಗೆ ಹೋಗಿ ಕೇಳಿದ್ದಾರೆ.ಆಗ ಕೂಡ ಕವಿತಾಳ ಪೊಲೀಸರು ನಿರ್ಲಕ್ಷತನ ತೋರಿದ್ದರಿಂದ ಕುಟುಂಬದವರು ಸ್ಥಳೀಯ ಮುಖಂಡರ ಜೊತೆ ಮಾರನೇ ದಿನ ಎಸ್ಪಿಯವರನ್ನು ಭೇಟಿಯಾಗಿ ಮತ್ತೊಂದು ದೂರನ್ನು ಸಲ್ಲಿಸಿದ್ದಾರೆ. ಅಲ್ಲಿಯೂ ಕೂಡ ಎಸ್ಪಿಯವರು ಮತ್ತೇ ಪ್ರಕರಣವನ್ನು ಅದೇ ಪಿ.ಎಸ್.ಐ ಅವರಿಗೆ ವಹಿಸಿದ್ದಾರೆ. ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿ ಹನುಮಂತನನ್ನು ಹಿಡಿಯಲು ಸಫಲರಾಗಿದ್ದಾರೆ. ಹನುಮಂತನನ್ನು ಠಾಣೆಗೆ ಕರೆತಂದ ಪೊಲೀಸರು ಆತನಿಗೆ ತಮ್ಮ ಆತಿಥ್ಯವನ್ನು ನೀಡುತ್ತಿದ್ದಂತೆ ಆತನೇ ಭಯಾನಕ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾನೆ. ಅದು ನಾನೇ ನನ್ನ ಹೆಂಡತಿಯನ್ನು ಕೊಲೆ ಮಾಡಿರುವುದು.! ನನ್ನ ಹೆಂಡತಿಯನ್ನು ಕೊಂದು ನನ್ನ ಮನೆಯ ಹಿಂದಿನ ಹೊಲಗದ್ದೆಯಲ್ಲಿ ಹೂತುಹಾಕಿದ್ದೇನೆ.! ಎಂತೆಲ್ಲ ಮಾಹಿತಿಯನ್ನು ಪೊಲೀಸರ ಒಂದೊಂದು ಏಟಿಗೆ ಹೇಳಿದ್ದಾನೆ. ನಂತರ ಪೊಲೀಸರು ಆಕೆಯ ತಾಯಿಯನ್ನು ಬಂಧಿಸಿದ್ದಾರೆ. ಸ್ವಲ್ಪದರಲ್ಲಿಯೇ ಈ ಕೊಲೆ ಪ್ರಕರಣದ ರೂವಾರಿ ಆತನ ಅಣ್ಣ ಶರಣಪ್ಪನು ತಪ್ಪಿಸಿಕೊಂಡು ಓಡಿದ್ದ. (ನಂತರ ಅವನು ಕೂಡ ಸಿಕ್ಕಿಬಿದ್ದ) ಜೊತೆಗೆ ಅವನ ತಮ್ಮನನ್ನು ಹಿಡಿದು ತಂದಿದ್ದಾರೆ ಪೊಲೀಸರು. ಮಗಳನ್ನು ಕಳೆದುಕೊಂಡ ಫಲಕನಮರಡಿಯವರು ಕವಿತಾಳ ಪೊಲೀಸ್ ಠಾಣೆಗೆ ಅಲೆಯುತ್ತಾ, ನಮ್ಮ ಮಗಳ ಕೊಲೆ ಮಾಡಿದವರಿಗೆ ಶಿಕ್ಷೆ ನೀಡಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪೊಲೀಸ್ ಅಧಿಕಾರಿಗಳತ್ತ ಅಂಗಲಾಚಿಕೊಳ್ಳುತ್ತಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡಿರುವ ಹನುಮಂತ ಈಗ ಪೊಲೀಸರ ಅತಿಥಿಯಾಗಿ ವರದಕ್ಷಣಿ ಪ್ರಕರಣದಲ್ಲಿ ಜೈಲುಪಾಲಾಗಿ ನಂತರದ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗಡೆ ಬಂದು ರಾಜಾರೋಷವಾಗಿ ತಿರುಗುತ್ತಿದ್ದಾನೆ.ಕೊಲೆಯಾದ್ದದ್ದು ಗೊತ್ತಾದರೂ ಪೊಲೀಸರಿಂದ ದೇಹವನ್ನು ಹುಡುಕಲು ಆಗುತ್ತಿಲ್ಲ.!ಹನುಮಂತ ಕೊಲೆ ಮಾಡಿದ್ದೇನೆಂದು ಹೇಳಿದ ಮೇಲೆ ಆತ ದಿನಕ್ಕೊಂದು ನಾಟಕವಾಡುತ್ತಿದ್ದಾನೆ. ಮೊದಲ ದಿನ ನನ್ನ ಮನೆಯ ಸುತ್ತ 20ಅಡಿಯಲ್ಲಿ ಹೂತಿಟ್ಟಿದ್ದೇನೆಂದು ಹೇಳಿದ! ಮಾರನೇ ದಿನ ನನ್ನ ಹೆಂಡತಿಯನ್ನು ನಾನೇ ಕೊಲೆ ಮಾಡಿ ಕಾಲುವೆಗೆ ಹಾಕಿದ್ದೇನೆ ಎಂದು ಹೇಳಿದ್ದ. ಇನ್ನೊಂದು ದಿನ ನಾನು ನನ್ನ ತಾಯಿ ಊರ ಹೊರಗೆ ಇರುವ ಕಾಲುವೆ ಪಕಕ್ಕೆ ತಗ್ಗುತೋಡಿ ಇಟ್ಟಿದ್ದೇವೆ ಎಂದು ಹೇಳಿಕೆ ನೀಡಿದ್ದಾನೆ! ಹೀಗೆ ದಿನಕ್ಕೊಂದು ಸ್ಥಳವನ್ನು ತೋರಿಸುತ್ತಾ, ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಅದಕ್ಕೆ ಪೂರಕವಾಗಿ ಪೊಲೀಸರು ಆತ ಎಲ್ಲೆಲ್ಲಿ ಹೇಳುತ್ತಾನೆ ಅಲ್ಲಲ್ಲಿ ತಗ್ಗು ತೋಡುತ್ತಾ, ಸಮಯವನ್ನು ಕಳೆದಿದ್ದಾರೆ. ಈ ಘಟನೆ ನಡೆದು ಇಷ್ಟು ದಿನಗಳು ಕಳೆದರೂ ಇಲ್ಲಿಯವರಗೆ ಹನುಮಂತನನ್ನು ಸರಿಯಾಗಿ ಬಾಯಿಬಿಡಿಸಿ ಕೊಲೆಯಾದ ಮೃತದೇಹವನ್ನು ಪತ್ತೆಹಚ್ಚಲು ಪೊಲೀಸರಿಗೆ ಆಗಿಲ್ಲವೆಂದರೆ ದುರಂತವಲ್ಲದೇ ಮತ್ತೇನು.!ಪೊಲೀಸರಿಂದ ಹನುಮಂತಿ ಕುಟುಂಬದವರಿಗೆ ಉಪದೇಶ ನೋಡ್ರೀಪ್ಪ.. ಕೊಲೆಯಾದವರ ಪೈಕಿ ನೀವು ಬ್ಯಾಡರು, ಕೊಲೆ ಮಾಡಿದ ನಿಮ್ಮ ಅಳಿಯನು ಬ್ಯಾಡರವ, ಜೊತೆಯಲ್ಲಿ ನಾನು ಕೂಡ ಬ್ಯಾಡರು ಇದನ್ನು ನಾವೇ ಕುಳಿತುಕೊಂಡು ಬಗೆಹರಿಸಿಕೊಳ್ಳೋಣ! ಮಂದಿ ಮಾತು ಕೇಳಿ ಯಾಕೆ ನೀವು ಎಸ್ಪಿ ಹತ್ತಿರ ಹೋಗುವುದು! ಪೇಪರ್ದವರ ಹತ್ತಿರ ಹೋಗ್ರೀರಿ.! ಎಂದು ಠಾಣಿಯ ಅಧಿಕಾರಿಗಳು ಹನುಮಂತಿಯ ಕುಟುಂಬದವರಿಗೆ ಉಪದೇಶ ನೀಡುತ್ತಿದ್ದಾರೆ. ಮತ್ತೇ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಅಳಿಯನೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡ ಮೇಲೆ ನಿಮ್ಮ ಮಗಳ ದೇಹವನ್ನು ತಗೊಂಡು ಏನ್ ಮಾಡ್ತೀರಿ.. ಅವನ ಮೇಲೆ ಕೊಲೆ ಕೇಸ್ ಹಾಕಿ ಕೋಟರ್ಿಗೆ ಕಳುಹಿಸೋಣ ಎಂದೇಳುತ್ತಿದ್ದಾರೆ.! (ಅಂದರೆ, ಪೊಲೀಸರು ಈ ಪ್ರಕರಣವನ್ನೇನು ಮಟ್ಕಾ, ಇಸ್ಪೀಟ್ ಕೇಸ್ ಅಂತ ತಿಳಿದಿರಬೇಕು. ಎಂಬುದು ಹನುಮಂತಿ ಕುಟುಬಂದವರ ಅಳಲು.) ಅಯ್ಯೋ.. ಪೊಲೀಸ್ರೇ, ಅವನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿಕೊಂಡಿದ್ದಾನೆಂದು ಚಾಜರ್್ಶೀಟ್ನಲ್ಲಿ ಹಾಕಿ ಅವನನ್ನು ಕೊಟರ್ಿಗೆ ಕಳುಹಿಸಿದಾಗ ಆತನು ಅಲ್ಲಿ ಜಡ್ಜ್ ಸಾಹೇಬರೇ, ಪೊಲೀಸರು ನನಗೆ ದಿನನಿತ್ಯ ಹೊಡೆಯುತ್ತಿದ್ದರೂ ಅದಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಹೇಳಿದರೆ ನೀವೇನು ಮಾಡುತ್ತೀರಿ. ಜಡ್ಜ್ ಎಲ್ಲಿದೆ ಪೊಲೀಸಪ್ಪ ಹನುಮಂತ ಕೊಲೆ ಮಾಡಿದ ಆ ಮಹಿಳೆಯ ಮೃತದೇಹ ಅಥವಾ ಪೋಸ್ಟ್ಮಾಟಂ ರಿಪೋಟರ್್ ಎಂದು ಕೇಳಿದರೆ, ನೀವೇನು ಉತ್ತರಿಸುತ್ತೀರಿ. ನಿಮ್ಮಿಂದ ಮೃತದೇಹವನ್ನು ಪತ್ತೆಹಚ್ಚಲು ಆಗಿಲ್ಲವೆಂದರೆ, ನ್ಯಾಯಾಲಯಕ್ಕೆ ಬಲವಾದ ಸಾಕ್ಷಿಯೊಂದನ್ನು ಎಲ್ಲಿಂದ ತರುತ್ತೀರಿ? ಎಂಬುದು ಕುಟುಂಬದವರ ಪ್ರಶ್ನೆ. ಕೊನೆಗೆ ನ್ಯಾಯಾಲಯ ಕೊಲೆಗೆ ಸರಿಯಾದ ಸಾಕ್ಷಿ ಇಲ್ಲದ ಕಾರಣ ಹನುಮಂತ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದರೂ ಅದಕ್ಕೆ ಸರಿಯಾದ ಸಾಕ್ಷಿ ಆಧಾರದ ಕೊರತೆಯಿಂದ ಹನುಮಂತನನ್ನು ಈ ಪ್ರಕರಣದಿಂದ ಮುಕ್ತ ಮಾಡಲಾಗಿದೆ ಎಂದು ತೀರ್ಪನ್ನು ನೀಡಿದರೆ, ಹನುಮಂತಿಯನ್ನು ಕಳೆದುಕೊಂಡ ಕುಟುಂಬಕ್ಕೆ ಮರಳಿ ಹನುಮಂತಿ ಸಿಗುತ್ತಾಳೆಯೇ? ಇಲ್ಲವಾದರೆ, ಆಧುನಿಕ ಸಮಾಜದಲ್ಲಿ ಎಲ್ಲವನ್ನು ಕೃತಕ ಮಾಡಿದಂತೆ ಹನುಮಂತಿಯನ್ನೇನಾದರೂ ಕೃತಕವಾಗಿ ತಯಾರಿಸಲು ಆಗುತ್ತದೆಯೇ? ಇದರಿಂದ ಆರೋಪಿಗೆ ನಿಜವಾಗಿ ಶಿಕ್ಷೆಯಾದಂತಾಗುತ್ತದೆಯೇ? ಬಡವರಿಗೆ ಪೊಲೀಸರು ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆಯೇ? ಇಂತಹ ಇನ್ನು ಅನೇಕ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯೇ ನೇರ ಉತ್ತರ ನೀಡಬೇಕಾಗುತ್ತದೆ. ಆದ್ದರಿಂದ ಆರೋಪಿಗಳನ್ನು ಮತ್ತೇ ಅರೆಸ್ಟ್ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕೊಲೆ ಮಾಡಿ ಹೂತಿಡಲಾಗಿರುವ ಹನುಮಂತಿಯ ಹೆಣವನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕಾಗಿದೆ. ಇಲ್ಲವಾದಲ್ಲಿ ಪೊಲೀಸ್ ಇಲಾಖೆ ನಮ್ಮಲ್ಲಿ ಇದ್ದರೂ ಇಲ್ಲದಂತಾಗುತ್ತದೆ.ಒಟ್ಟಾರೆ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯೂ ಸಂಪೂರ್ಣವಾಗಿ ವಿಫಲವಾಗಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತದೆ.


