Friday, May 11, 2012

ಬಾಲಕಾರ್ಮಿಕನೆಂಬ ಬಾಲಕುಸುಮ..


ಡಾ|| ಅಂಬಿಕಾವತಿ.ಎಂ
ಬಾಗಿಲೊಳು ಕೈ ಮುಗಿದು ಒಳಗೆ ಬಾ ವಿದ್ಯಾಥರ್ಿಯೇ, ವಿದ್ಯಾದೇಗುಲವಿದು ಎಂದು ವಿದ್ಯೆಗೆ ದಾಸನಾಗಿ ವಿದ್ಯೆಯನ್ನು ಅಥರ್ೈಸಿಕೊಂಡು, ಜ್ಞಾನದಾಹವ ಇಂಗಿಸುವ ಪ್ರಯತ್ನದತ್ತ ದಾಪುಗಾಲು ಹಾಕುತ್ತಾ, ತಾನು ಹುಟ್ಟಿದ ದೇಶಕ್ಕೊಂದು ಉತ್ತಮ ಕೊಡುಗೆಯನ್ನು ನೀಡಬೇಕಾದ ಇಂದಿನ ಮಕ್ಕಳು ಬಾಲಕಾಮರ್ಿಕರಾಗಿ ಪರಿವರ್ತನೆ ಹೊಂದಿ, ದಾಸ್ಯದ ಬೇಲಿಯೊಳಗೆ ಸಿಲುಕಿ ನಲುಗುತ್ತಿದ್ದಾರೆ.
ಗಗನಚುಂಬಿ ಕಟ್ಟಡದ ನಿಮರ್ಾಣಕ್ಕೆ  ತಳಪಾಯ ಹಾಕುವ ಕಲ್ಲನ್ನು ಹೊರುವ ಮಕ್ಕಳು, ಮರಳಿನ ಕಣಕಣದಲ್ಲೂ ಸೇರಿಕೊಂಡು, ತಮ್ಮ ವಯಸ್ಸಿಗೆ ಮೀರಿದ ಸಾಮಥ್ರ್ಯವನ್ನು ಪ್ರದಶರ್ಿಸಬೇಕಾದಂತಹ  ದುಃಸ್ಥಿತಿ ಎದುರಾಗಿರುವುದು ವಿಪರ್ಯಾಸವಲ್ಲವೇ?
ಎಲ್ಲರೊಡನೊಡಗೂಡಿ, ಅಪ್ಪ-ಅಮ್ಮನನ್ನು ಗೋಗೆರೆದು, ಹೋಟೆಲ್ನಲ್ಲಿ ತನಗೆ ಏನೆಲ್ಲಾ ಬೇಕೋ ಅದೆಲ್ಲವನ್ನು ತರಿಸಿ ತಿನ್ನಬೇಕಾದ ಮಗು, ದುರಾದೃಷ್ಟಾವಶತ್ ಇಂದು ಯಾರೋ ಅಧಿಕಾರ ಅಂತಸ್ತುಗಳ ಅಮಲಿನಲ್ಲಿ ಅರ್ಧತಿಂದು, ಅರ್ಧಬಿಟ್ಟಿರುವ ತಟ್ಟೆಯನ್ನು ತನ್ನ ಪುಟ್ಟ ಕೈಗಳಲ್ಲಿ ತೊಳೆಯಬೇಕಾಗಿ ಬಂದಿದೆ.
ಅಷ್ಟೇ ಅಲ್ಲ, ಬೀದಿ-ತಳ್ಳುವ ಗಾಡಿಯಲ್ಲಿ ತಯಾರಾಗುವ ಜಂಕ್ ಪುಡ್, ಲಘುಉಪಹಾರ ಬಳಕೆಯಲ್ಲಿ ಚಿಕ್ಕಮಕ್ಕಳನ್ನು ಬಳಸಲಾಗುತ್ತದೆ.
ಬೀದಿ ಕಸಗುಡಿಸುವುದು, ಕಾಖರ್ಾನೆ, ಮನೆಗಳ ನಿಮರ್ಾಣದ ಕೆಲಸಗಳಲ್ಲಿ ಇಟ್ಟಿಗೆ, ಕಲ್ಲುಗಳನ್ನು ಹೊತ್ತುಕೊಂಡು ಹೋಗುವುದು, ದಿನ ಬೆಳಗಾದರೆ ನಾವು ಓದುವ ದಿನಪತ್ರಿಕೆಯನ್ನು ಮನೆಮನೆಗಳಿಗೆ ತಲುಪಿಸುವುದು, ಕಬ್ಬಿನ ಹಾಲಿನ ಅಂಗಡಿ, ಹೆಸರಾಂತ ಮತ್ತು ಸಾಮಾನ್ಯ ಹೋಟೆಲ್ಗಳು ಇತ್ಯಾದಿ ಎಲ್ಲಕಡೆಗಳಲ್ಲಿಯೂ ಇಂದು ಬಾಲಕಾಮರ್ಿಕರು ಬಳಕೆಯಾಗುತ್ತಿದ್ದಾರೆ.
ಸಕರ್ಾರಗಳು ಅದೆಷ್ಟೋ ಕಾನೂನುಗಳನ್ನು ಜಾರಿಗೆ ತಂದರೂ ಸಹ ಬಾಲಕಾಮರ್ಿಕ ಪದ್ದತಿಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಸಂಘ ಸಂಸ್ಥೆಗಳು, ಪ್ರಗತಿಪರರು ಸಾಕಷ್ಟು ಹೋರಾಟ, ಪ್ರತಿಭಟನೆ, ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದಾಗ್ಯೂ ಬಾಲಕಾಮರ್ಿಕ ಪದ್ದತಿ ನಿಯಂತ್ರಣಕ್ಕೆ ಬಾರದಿರುವುದು ದುರಂತ.
ಸ್ನೇಹಿತರೇ....
ಮರಳಿ ಬಾ ಶಾಲೆಗೆ" ಎಂಬ ಸಕರ್ಾರಿ ಯೋಜನೆ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಊಟ ಎಲ್ಲವನ್ನು ಒದಗಿಸಿದೆ. ಆದರೂ ಕೂಡ ಸಕರ್ಾರಿ ಶಾಲೆಗಳಲ್ಲಿ ದಿನೇ ದಿನೇ ಹಾಜರಾತಿ ಕಡಿಮೆಯಾಗುತ್ತಿದೆ. ದಾಖಲಾತಿಗಳಲ್ಲಿ ಮಕ್ಕಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಶೈಕ್ಷಣಿಕ ವರ್ಷಗಳಲ್ಲಿಯೇ ಮಕ್ಕಳು ಶಾಲೆಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಶಾಲೆ ಕಲಿಯದ ಮಕ್ಕಳನ್ನು ಪತ್ತೇ ಹಚ್ಚಲು ಸಕರ್ಾರ ಹತ್ತಾರು ಸಮೀಕ್ಷೆಯನ್ನು ಮಾಡಿದೆ. ಅದರ ಫಲಿತಾಂಶವನ್ನು ನೋಡಿದರೆ, ನಮಗೆ ಅಲ್ಲಿಯೂ ನಿರಾಶೆ ಕಾಡುತ್ತದೆ.
ಸುಸ್ಥಿತಿಯ ಮಕ್ಕಳಿಗೆ ಹತ್ತಾರು ಆರೋಗ್ಯದ ಸಮಸ್ಯೆಗಳಿರುವಾಗ ಇನ್ನು ಬಾಲ ಕಾಮರ್ಿಕ ಸಮಸ್ಯೆಗಳು ಕೇಳುವಂತೆಯೇ ಇಲ್ಲ. ಹೋಟೆಲ್, ಬಸ್ನಿಲ್ದಾಣ, ಸಾರ್ವಜನಿಕ ಸ್ಥಳಗಳೇ ಬಾಲಕಾಮರ್ಿಕರಿಗೆ ಆಶ್ರಯತಾಣವಾಗಿರುವದರಿಂದ ದೂಳು, ಕಲುಷಿತ ನೀರು, ಕಳಪೆಮಟ್ಟದ ಆಹಾರ ಎಲ್ಲವನ್ನು ಸೇವಿಸಿ ಶ್ವಾಸಕೋಶ ಸಂಬಂಧಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಾರೆ.
ದೇಶದಲ್ಲಿ ನಡೆದ ಹಲವಾರು ಸಮೀಕ್ಷೆಗಳಲ್ಲಿ ಹುಟ್ಟುವ ಮಕ್ಕಳೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂಬ ವರದಿ ಇದೆ. ಆದರೆ, ಇಲ್ಲಿ ಪ್ರತಿಯೊಬ್ಬ ಬಾಲಕಾಮರ್ಿಕರು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ.
ದೈಹಿಕವಾಗಿ ಕಾಡುವ ಈ ಕಾಯಿಲೆಗಳ ಹೊರತಾಗಿ ಮನಸ್ಸನ್ನು ದಿನೇ ದಿನೇ ಕುಗ್ಗಿಸುವ, ತನ್ನ ಜೊತೆಗಾರರ ಜೊತೆಯಲ್ಲಿ ಆಟ-ಪಾಠಗಳಿಂದ ವಂಚಿತರಾಗುವ ಪ್ರಮೇಯಗಳೇ ಹೆಚ್ಚು.
ಹೂವೊಂದು ತಾನು ಅರಳಿ ಸುಗಂಧವನ್ನು ಎಲ್ಲೆಡೆ ಹರಡುವ ಬದಲಿಗೆ ಅರಳುವ ಮುನ್ನವೇ ಮುದುಡುವ ಪರಿಯಂತಾಗಿದೆ ಬಾಲಕಾರ್ಮಿಕ ಬದುಕು.
ಆತ್ಮೀಯರೇ ನನ್ನ  ಆಶಯವಿಷ್ಟೆ !
ಬಾಲಕ-ಬಾಲಕಿಯರನ್ನು ಅವರ ಆಟ-ಊಟ-ಪಾಠಗಳಿಂದ ವಂಚಿತರನ್ನಾಗಿಸುವ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲೀ, ಈ ಮಕ್ಕಳೆಲ್ಲಾ ಶಾಲೆಗಳಿಗೆ ತೆರಳಿ ಪುಸ್ತಕಗಳ ಪುಟಗಳನ್ನು ತಿರುವಿ, ಜ್ಞಾನವಂತರಾಗಿ ದೇಶಕ್ಕೆ ವಿವೇಕಾನಂದ, ಸರ್.ಎಂ.ವಿಶ್ವೇಶ್ವರಯ್ಯ, ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರಂತಹ ಅಮೂಲ್ಯ ರತ್ನಗಳಾಗಿ ಪರಿವರ್ತನೆ ಹೊಂದಲಿ.
ದೇಶ ಕಾಯುವ ವೀರಯೋಧರಾಗಲಿ ಹೊರತು ಕಾಖರ್ಾನೆಗಳ ಮುಂದೆ ನಿಲ್ಲುವ ಜವಾನನಾಗುವುದು ಬೇಡ, ಹಲವರ ಪ್ರಾಣವನ್ನು ಉಳಿಸುವ ವೈದ್ಯನಾಗಲಿಯೇ ಹೊರತು ಕೈಗಾರಿಕೆ ಕಟ್ಟಡಗಳಲ್ಲಿ ಸಿಲುಕಿ ನರಳುವವನಾಗುವುದು ಬೇಡ, ಸಮಾಜವನ್ನು ತಿದ್ದುವ ಉತ್ತಮ ಶಿಕ್ಷಕನಾಗಲಿ, ಕಾನೂನನ್ನು ರಕ್ಷಣಿ ಮಾಡುವ ಪೊಲೀಸ್ ಅಧಿಕಾರಿಯಾಗಲಿ, ಅದು ಬಿಟ್ಟು ಚಿಕ್ಕಮಕ್ಕಳು ಬಾಲಕಾಮರ್ಿಕತೆಯ ಬಂಧನಲ್ಲಿ ಸಿಲುಕುವುದು ಬೇಡವೆಂದು ಹೇಳುತ್ತೇನೆ.. ಏನಂತೀರಿ..?
ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ ತಿಂಗಳನ್ನು ಆ್ಯಂಟಿ ಚೈಲ್ಡ್ ಲೇಬರ್ ಡೇ ಎಂದು ಆಚರಿಸಲಾಗುತ್ತದೆ. ಎಲ್ಲರೂ ಕೈ ಜೋಡಿಸಿ ಬಾಲಕಾಮರ್ಿಕ ಎಂಬ ರೋಗವನ್ನು ಹೋಗಲಾಡಿಸಲು ಪ್ರಯತ್ನಿಸೋಣ..!
ಕರುಣಾಳು ಬಾ ಬೆಳಕೆ, ಮುಸುಕಿನ ಮಬ್ಬಲಿ ಕೈ ಹಿಡಿದು ನಡೆ ಸುಮ್ಮನೆ


ಡಾ|| ಅಂಬಿಕಾವತಿ.ಎಂ.
ಶಸ್ತ್ರ ಚಿಕಿತ್ಸಕರು,
ಶ್ರೀ ದೇವರಾಜ ಅರಸು ಮೆಡಿಕಲ್ ಕಾಲೇಜು ಕೋಲಾರ.
ambikaashri67@live.com   

No comments:

Post a Comment

Thanku