Thursday, September 16, 2010


ಹೈದರಬಾದ್ ಕನರ್ಾಟಕ ವಿಮೋಚನೆ ದಿನಾಚರಣಿ ವೀರಗಾಥೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 562 ಚಿಕ್ಕಪುಟ್ಟ ಸಂಸ್ಥಾನಗಳೊಂದಿಗೆ ಹಿರಿಯ ಸಂಸ್ಥಾನಗಳು ಬ್ರೀಟಿಷ್ ಸಕರ್ಾರದ ಪ್ರತಿನಿಧಿಗಳಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾಲುದಾರರಾಗಿದ್ದವು. ಬ್ರೀಟಿಷ್ರ ಆಡಳಿತಕ್ಕೆ ಸಕರಾತ್ಮಕವಾಗಿ ಸಹಕಾರನೀತಿ ಕಾಲಕಾಲಕ್ಕೆ ಕಪ್ಪಕಾಣಿಕೆಗಳನ್ನು ನೀಡುತ್ತಿದ್ದ ಸಂಸ್ಥಾನಗಳಲ್ಲಿ ಹೈದರಾಬಾದ್ ಪ್ರಾಂತ್ಯದ ಸಕರ್ಾರವು ಒಂದಾಗಿತ್ತು. 224 ವರ್ಷಗಳ ಸುದೀರ್ಘ ಅವಧಿಗೆ ರಾಜ್ಯಭಾರ ನಿರ್ವಹಿಸಿದ (ಕ್ರಿ.ಶ1724ರಿಂದ1948) ಅಸಫ್ಜಹಾ ಮನೆತನದ ಮೀರ್ಕಮ್ರುದ್ದೀನ್ ಜಿನ್ ಖಿಲಿಚ್ಖಾನ್ರಿಂದ ಸ್ಥಾಪಿಸಲ್ಪಟ್ಟಿತು. 16ಜಿಲ್ಲೆಗಳನ್ನು ಹೊಂದಿದ ಹೈದರಾಬಾದ್ ಸಂಸ್ಥಾನದಲ್ಲಿ ಮರಾಠ ಭಾಷಿಕರ ಐದು ಜಿಲ್ಲೆಗಳು, ತೆಲುಗು ಭಾಷಿಕರ ಎಂಟು ಹಾಗೂ ಕನ್ನಡ ಭಾಷೆ ಮಾತನಾಡುವ ಮೂರು ಜಿಲ್ಲೆಗಳಿಂದ ಕೂಡಿತ್ತು.ಮೊಘಲ ಸಾಮ್ರಾಜ್ಯದ ಅವನತಿಯ ನಂತರ ಈ ಭಾಗ ಆಂಗ್ಲರ ಆಡಳಿತಕ್ಕೆ ಒಳಪಟ್ಟ ಅಧೀನ (ಮಾಂಡಳಿಕ) ರಾಜ್ಯವಾಗಿತ್ತು. ಆದರೂ ಈ ರಾಜ್ಯ ತನ್ನದೇ ಆದ ವಿಶಿಷ್ಟ ಅಂಚೆ, ರೈಲು ವ್ಯವಸ್ಥೆಯೊಂದಿಗೆ ಸ್ವತಂತ್ರ ಆಥರ್ಿಕ ವ್ಯವಸ್ಥೆಯನ್ನು ಹೊಂದಿತ್ತು. ಸ್ವಂತ ನಾಣ್ಯ ಮತ್ತು ನೋಟುಗಳನ್ನು ಹಾಲಿ ಎಂದು ಕರೆಯುವ ಪರಿಪಾಠವಿತ್ತು.ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಅಸಹಕಾರ ಆಂದೋಲನ, ಸ್ವದೇಶಿ ಆಂದೋಲನ, ಕ್ವಿಟ ಇಂಡಿಯಾ ಕಂಪನಿ ಮೇಲೆ ಗಂಭೀರ ಪರಿಣಾಮವನ್ನು ಬೀರಿತು. ಎರಡನೇ ಮಹಾಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಇಂಗ್ಲೆಂಡ ಅನಿವಾರ್ಯವಾಗಿ ಭಾರತಕ್ಕೆ ಸ್ವಾತಂತ್ರ ನೀಡಲು ನಿರ್ಧರಿಸಿತು. ಆಗ ಭಾರತದಲ್ಲಿ ಬ್ರಿಟೀಷರ ಆಡಳಿತದಲ್ಲಿ 562 ಸಂಸ್ಥಾನಗಳು ನೇರವಾಗಿ ತಮ್ಮ ರಾಜಕೀಯ ಸಂಬಂಧಗಳನ್ನು ಹೊಂದಿದ್ದವು. ಭಾರತಕ್ಕೆ ಸ್ವಾತಂತ್ರ ನೀಡಲು ಬ್ರಿಟಿಷ್ ಸರಕಾರ ನಿರ್ಧರಿಸಿ ಆ ಒಪ್ಪಂದದನ್ವಯ 562 ಸಂಸ್ಥಾನಗಳು ನೂತನವಾಗಿ ನಿಮರ್ಾಣಗೊಂಡ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಬಹುದು. ಇಲ್ಲವೆ ಯಥಾಸ್ಥಿತಿ ಒಪ್ಪಂದದನ್ವಯ ಸ್ವತಂತ್ರವಾಗಿ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಯಿತು. ಇದರ ಪರಿಣಾಮವಾಗಿ ಮೂರು ರಾಜ್ಯಗಳು ತಮ್ಮದೇ ಆದ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬರಲು ನಿರ್ಧರಿಸಿದವು. ಕಾಶ್ಮೀರದ ರಾಜಾ ಪರೀಸಿಂಗ್ ರೊಂದಿಗೆ ಜುನಾಗಡ ಮತ್ತು ಹೈದ್ರಾಬಾದ ಸಂಸ್ಥಾನದ ನಿಝಾಮರು ಸ್ವತಂತ್ರರಾಗಲು ಹವಣಿಸಿ ರಾಜ ಪ್ರಭುತ್ವದ ನಿರಂಕುಶ ಆಡಳಿತವನ್ನು ಜನತೆಯ ಮೇಲೆ ಹೇರಲು ನಿರ್ಧರಿಸಿದರು.ಹೈದ್ರಾಬಾದ ಸಂಸ್ಥಾನದ ನಿಝಾಮರು 26 ಜೂನ್ 1947 ರಂದು ವಿಶೇಷ ಫರಮಾನು ಹೊರಡಿಸಿ ತಾನು ಭಾರತಕ್ಕೂ ಸೇರುವದಿಲ್ಲಾ, ಪಾಕಿಸ್ತಾನಕ್ಕೂ ಸೇರುವದಿಲ್ಲ, ಹೈದ್ರಾಬಾದ ಸಂಸ್ಥಾನ ಪ್ರತ್ಯೇಕವಾಗಿ ಸ್ವತಂತ್ರ ಸಂಸ್ಥಾನವಾಗಿರುತ್ತೇನೆ ಎಂದು ಸಾರಿದರು. ಈ ಆದೇಶದ ಪರಿಣಾಮವಾಗಿ ಹೈದ್ರಾಬಾದ ಪ್ರಾಂತದ ಉದ್ದಗಲಕ್ಕೂ ಸ್ವಾತಂತ್ರ್ಯ ಹೋರಾಟದ ಜಾತಿಗಳು ಭುಗಿಲೆದ್ದವು. ಹೈದ್ರಾಬಾದ ನಿಝಾಮರ ನಿರಂಕುಶ ಪ್ರಭುತ್ವವನ್ನು ಸ್ವಾತಂತ್ರ್ಯ ಸೇನಾನಿಗಳೆಲ್ಲರೂ ವಿರೋಧಿಸಿದರು.ಹೈದ್ರಾಬಾದ ಸಂಸ್ಥಾನದ ಸ್ವಾತಂತ್ರ್ಯ ಹೋರಟಗಾರರ ವಿರುದ್ಧ ಇತ್ರೆಹಾ ಮುಸಲ್ಮಾನ ಪಕ್ಷದ ಅಧ್ಯಕ್ಷ ಹಾಗೂ ಆಕರ್ಷಕ ಮಾತುಗಾರ ಲಾತೂರಿನ ಖಾಸೀಮ್ ರಝವಿ ತನ್ನದೇ ಆದ ರಝಾಕರ ಅರೆಸೈನ್ಯ ಪಡೆಯನ್ನು ನಿಮರ್ಿಸಿದ. ಭಾರತದೊಂದಿಗೆ ಹೈದ್ರಾಬಾದ ಪ್ರಾಂತ ವಿಲೀನಗೊಂಡರೆ ಮುಸಲ್ಮಾನರಿಗೆ ಅನ್ಯಾಯವಾಗುತ್ತದೆ. ಹಾಗೂ ಇಸ್ಲಾಂ ಧರ್ಮಕ್ಕೆ ಅಪಾಯ ಸಂಭವಿಸುತ್ತದೆ ಎಂದು ಸಾರಿದರು. ಹೈದ್ರಾಬಾದ ಸಂಸ್ಥಾನದ ದುರಂತ ನಾಯಕನಾಗಿ ರೂಪುಗೊಂಡ ಖಾಸೀಮ ರಝವಿ ಇಡೀ ರಾಜ್ಯಾದ್ಯಂತ ಅನ್ಯಾಯ, ಅತ್ಯಾಚಾರ, ದೊಂಬಿ, ಮಹಿಳೆಯರ ಮಾನಹರಣ ಮುಂತಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರು.ಅಖಿಲ ಭಾರತ ಕಾಂಗ್ರೇಸ್ ಪಕ್ಷ ಮತ್ತು ಆರ್ಯ ಸಮಾಜ ಕೈಗೊಂಡ ಸ್ವತಂತ್ರ ವಿರೋಧಿ ಸಂಘಟನೆಗಳ ಪ್ರಯತ್ನಗಳನ್ನು ರಜಾಕರ ಸೈನ್ಯ ಬಗ್ಗುಬಡಿಯಲು ಪ್ರಯತ್ನಿಸಿತು.ಹೈದ್ರಾಬಾದ್ನ ಸ್ವಾತಂತ್ರ ಪ್ರೇಮಿ ಹಾಗೂ ಧೀಮಂತ ಪತ್ರಕರ್ತ ಶೋಯಿಬುಲ್ಲಖಾನ್ ಸ್ವತಂತ್ರ ಹೋರಾಟಗಾರರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ಸ್ವಾತಂತ್ರ್ಯಪರ ವಿಚಾರಗಳನ್ನು ತಮ್ಮ ಇಮ್ರೋಜ್ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಸಂಪಾದಕ ಶೋಯಿಬುಲ್ಲಖಾನ್ ಅಂತಿಮವಾಗಿ ರಜಾಕ್ರ ಪಿತೂರಿಗೆ ಬಲಿಯಾದದ್ದು ರಾಜಕೀಯ ದುರಂತಕ್ಕೆ ಜ್ವಲಂತ ಸಾಕ್ಷಿ.ಹೈದ್ರಾಬಾದ್ ಸಂಸ್ಥಾನದ ಉದ್ದಗಲಕ್ಕೂ ಸ್ವತಂತ್ರ ಚಳುವಳಿ ತೀವ್ರಗೊಳ್ಳುತ್ತಿದ್ದಂತೆ ಅಖಂಡ ರಾಯಚೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ದಗೊಳಿಸುವಲ್ಲಿ ಪಂಡಿತ ತಾರಾನಾಥರು ಪ್ರಮುಖ ಪಾತ್ರ ವಹಿಸಿದ್ದರು. ಕ್ರಿ.ಶ 1942ರಲ್ಲಿ ಡಾ ಬಿ.ಜಿ ದೇಶಪಾಂಡೆಯವರ ನಾಯಕತ್ವದಲ್ಲಿ ಕಮಾಂಡರ್ ಗಾಣದಾಳ ನಾರಾಯಣಪ್ಪ ಗೋಲಠಾಣಾದಲ್ಲಿ ಸತ್ಯಾಗ್ರಹವನ್ನು ಆರಂಬಿಸಿದರು. ಇವರೊಂದಿಗೆ ಅಡವಿರಾವ ಪತ್ನಿವಿಸ್, ಗುಡಿಹಾಳ ಹನುಮಂತರಾವ್, ಪತ್ರಕರ್ತರಾದ ಕಾಶೀರಾವ್ ಪಾಟೀಲ್, ರಾ.ಗು ಜೋಷಿ, ಪಾಂಡು ರಂಗರಾವ್ ಕಸಬೆ, ಮಟಮಾರಿ ನಾಗಪ್ಪ, ಬೆಟ್ಟದೂರು ಶಂಕರಗೌಡ, ಸದಾಶಿವ ರಾಜಪುರೋಹಿತ, ಗಂಗನಗಾರು ನಾಗಣ್ಣ, ಪಂಪಣ್ಣ ಸೇವಿನ್ ಮತ್ತು ಅಸಂಖ್ಯಾತ ಭೂಗತ ಹೋರಾಟಗಾರರು , ಮುಂತಾದವರು ತಮ್ಮ ಸಮಗ್ರ ಬದುಕನ್ನು ಸ್ವತಂತ್ರ ಚಳುವಳಿಗೆ ಸಮಪರ್ಿಸಿಕೊಂಡರು. ಲಕ್ಷಾಂತರ ಜನರ ಯಾತನೆ, ದಟ್ಟದಾರಿದ್ರತೆಯ ಮಧ್ಯೆ 15ಆಗಸ್ಟ್1947ರಂದು ಸ್ವಾತಂತ್ರ್ಯದ ಗುಲಾಬಿ ಅರಳಿತು. ಆದರೆ ದುರಂತವೆಂದರೆ, ಸ್ವತಂತ್ರ ಭಾರತದ ಹೊಂಗಿರಣಗಳು ಹೈದ್ರಾಬಾದ್ ಸಂಸ್ಥಾನದಲ್ಲಿ ಪ್ರಕಾಶಭೀರುವಲ್ಲಿ ವಿಫಲಗೊಂಡವು.ರಾಯಚೂರಿನಲ್ಲಿ ನಿಜಾಮರೇ ಭಾರತ ಒಕ್ಕೂಟಕ್ಕೆ ಸೇರಿರಿ ಎನ್ನುವ ಸತ್ಯಾಗ್ರಹವನ್ನು 7ನೇ ಆಗಸ್ಟ್ 1947ರಂದು ರಾ.ಘು ಜೋಷಿ, ಗುಡಿಹಾಳ ಹನುಮಂತರಾವ್, ದೋಮಕುಂಟಿ ನಾರಾಯಣಪ್ಪನವರು ರಾಮಶಾಲಾ ಬಯಲಿನಲ್ಲಿ ಕೈಗೊಂಡರು. ಸ್ವತಂತ್ರ ಸೇನಾನಿಗಳನ್ನು ಬಂಧಿಸಿದ ನಿಜಾಮ್ ಸಕರ್ಾರ ಅವರನ್ನು ಕಾರಾಗೃಹಕ್ಕೆ ಕಳುಹಿಸಿತು. ತ್ರಿವರ್ಣ ರಾಷ್ಟ್ರಧ್ವಜ ನಿಷೇದಿಸಲ್ಪಟ್ಟಿತು. ಇದರೊಂದಿಗೆ ರಾಷ್ಟ್ರಪಿತ ಮಹಾತ್ಮಗಾಂಧಿಜಿ, ಸಧರ್ಾರ್ ವಲ್ಲಭಾಯಿ ಪಟೇಲ್, ಮೌಲಾನ ಅಬ್ದುಲ್ ಕಲಾಂ ಮುಂತಾದ ಮಹಾನ್ ನಾಯಕರ ಭಾವಚಿತ್ರಗಳನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿತ್ತು. ಒಂದೇ ಮಾತರಂ ಹಾಡುವುದು, ಗಾಂಧಿಟೊಪ್ಪಿಗೆ ಧರಿಸುವುದು, ತ್ರಿವರ್ಣ ಧ್ವಜ ಹಾರಿಸುವುದನ್ನು ರಾಜದ್ರೋಹವೆಂದೆ ಪರಿಗಣಿಸಲಾಗಿತ್ತು. ಹೈದರಾಬಾದ್ ಪ್ರಾಂತ್ಯದ ಯಾವುದೇ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸದಂತೆ ನಿಜಾಮ ಸಕರ್ಾರ ಆದೇಶವನ್ನು ನೀಡಿತು. ಸೈನಿಕ ಪಥಸಂಚಲನೆಯ ಮುಖಾಂತರ ನಾಗರೀಕರಲ್ಲಿ ಭಯದ ವಾತಾವರಣ ಸೃಷ್ಟಿಸಿತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಸೇನಾನಿ ಮಠಮಾರಿ ನಾಗಪ್ಪನವರು ರಾಯಚೂರಿನ ಸಾಥ್ ಕಛೇರಿಯ ಮೇಲೆ ನಿಜಾಮ ಸೈನಿಕರ ಕಣ್ಣು ತಪ್ಪಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಶೌರ್ಯವು ಸ್ವಾತಂತ್ರ್ಯ ಹೋರಾಟಕ್ಕೆ ವಿನೂತನ ಆಯಾಮವನ್ನು ನೀಡಿತು. ಮಠಮಾರಿ ನಾಗಪ್ಪನವರ ಅಪ್ರತಿಮ ಸಾಹಸದಲ್ಲಿ ಸ್ವಾತಂತ್ರ್ಯ ಸೇನಾನಿಗಳಾದ ಬಸಣ್ಣ, ಶರಭಯ್ಯಸ್ವಾಮಿ, ಚಂದ್ರಯ್ಯ ಹಾಗೂ ಪರ್ವತರೆಡ್ಡಿಯವರು ತಮ್ಮ ಜೀವದ ಹಂಗು ತೊರೆದು ತಮ್ಮ ಸ್ವಾತಂತ್ರ್ಯ ಪ್ರೀತಿಯನ್ನು ಮೆರೆದರು. ಇದೇ ಸಂದರ್ಭದಲ್ಲಿ ರಾಯಚೂರಿನ ಗುಬ್ಬೇರ ಬೆಟ್ಟದ ಮೇಲೆ ಯಾರೋ ಅನಾಮಿಕರು ತ್ರಿವರ್ಣ ಧ್ವಜ ಹಾರಿಸಿದ್ದರು. ಇದೇ ಸಂದರ್ಭದಲ್ಲಿ ಭಾರತ ಒಕ್ಕೂಟ ಸೇರಿರೆಂದು ಜಿ. ಮಧ್ವರಾಜ, ಲಕ್ಷ್ಮಣಾಚಾರ್ಯ, ವೈಧ್ಯ ಲಿಂಗನಕಾನ ದೊಡ್ಡಿಯ ರಾಘವೇಂದ್ರರು ಸತ್ಯಾಗ್ರಹ ಮಾಡಿ ಬಂಧನಕ್ಕೊಳಗಾದರು. ರಾಯಚೂರು ತಾಲೂಕಿನ ಹೆಂಬೆರಾಳಿನಲ್ಲಿ ಕವಿ ಶಾಂತರಸರು ತ್ರಿವರ್ಣ ಧ್ವಜ ಹಾರಿಸಿದರು. ಇದರೊಂದಿಗೆ ಕಲ್ಲೂರ, ಮಾನವಿ, ಲಿಂಗಸ್ಗೂರು, ಸಿಂಧನೂರು ಮುಂತಾದ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವತಂತ್ರ್ಯ ಚಳುವಳಿಯ ಬಿಸಿಯನ್ನು ಹೆಚ್ಚಿಸಿದರು.2ನೇ ಅಕ್ಟೋಬರ್ 1947ರಂದು ರಾಯಚೂರು ನಗರದ ನೂರಾರು ವಿಧ್ಯಾಥರ್ಿಗಳು ಸದಾಶಿವರಾವ ಪುರೋಹಿತರ ನಾಯಕತ್ವದಲ್ಲಿ ನಿಜಾಮರೇ ಭಾರತದ ಒಕ್ಕೂಟದಲ್ಲಿ ಸೇರಿರಿ ಎಂದು ಘೋಷಣೆ ಕೂಗುತ್ತಾ, ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ರೈಲ್ವೆ ನಿಲ್ದಾಣದಿಂದ ಹೊರಟರು. ಜಿಲ್ಲಾಧಿಕಾರಿಗಳಿಗೆ ಮನವಿ ಅಪರ್ಿಸಲು ಶಾಂತಿ ಹೋರಾಟದಲ್ಲಿ ಪಾಲ್ಗೊಂಡಿದ್ದ 32ವಿಧ್ಯಾಥರ್ಿಗಳನ್ನು ಬಂಧಿಸಿ, ಉಳಿದ ಪ್ರತಿಭಟನಾಕಾರರನ್ನು ಲಾಠಿ ಚಾಜರ್್ ಮಾಡಿ ಓಡಿಸಲಾಯಿತು. ಅದರಲ್ಲಿ ಇಬ್ಬರನ್ನು ಬಿಟ್ಟು 30ಜನರನ್ನು ಶಿಕ್ಷಿಸಿ ಜೈಲಿಗೆ ಹಾಕಿದರು.ಜಿಲ್ಲೆಯಾಧ್ಯಂತ ಆಚರಿಸುತ್ತಿರುವ ಸತ್ಯಾಗ್ರಹಗಳನ್ನು ಬಗ್ಗುಬಡಿಯಲು ನಿಜಾಮ ಸಕರ್ಾರ ತನ್ನ ಸೈನಿಕರನ್ನು ರಜಾಕರನ್ನು ಹಳ್ಳಿಹಳ್ಳಿಗೆ ಕಳುಹಿಸಲಾಯಿತು. ಭಯಭೀತರಾಧ ಜನತೆ ಭಾರತ ಸಕರ್ಾರದ ಗಡಿಪ್ರದೇಶಗಳಿದ್ದ ಮಂತ್ರಾಲಯ, ಕನರ್ೂಲ್, ಗದಗ ಮತ್ತು ಹೊಸಪೇಟೆ ಮುಂತಾದ ಕಡೆ ಓಡಿದರು. ಮುದುಕರು ಮಾತ್ರ ಮನೆಯಲ್ಲಿಯೇ ವಾಸಿಸುತ್ತಿದ್ದರು. ಲಕ್ಷಾಂತರ ಸಂಖ್ಯೆಯ ನಿರಾಶ್ರಿತರು ಭಾರತ ಸಕರ್ಾರದ ಗಡಿಗಳಲ್ಲಿ ಆಶ್ರಯ ಪಡೆದರು. ಇಂತಹ ಪರಿಸ್ಥಿತಿಯಲ್ಲಿ ಖಾಸೀಂರಜವಿ ನೇತೃತ್ವದ ರಜಾಕ್ರು ಹಿಂಸೆ, ದಬ್ಬಾಳಿಕೆ, ಸ್ತ್ರೀಯರ ಮೇಲೆ ಅತ್ಯಾಚಾರ ಮುಂತಾದ ದುಷ್ಕೃತ್ಯಗಳಲ್ಲಿ ತೊಡಗಿದರು. ಇದನ್ನು ಪ್ರತಿಭಟಿಸಿದ ಸ್ವಾತಂತ್ರ್ಯ ಸೇನಾನಿಗಳು ಶ್ವೇತಪತ್ರ ಹೊರಡಿಸಿ ನಿಜಾಮರಿಗೆ ಎಚ್ಚರಿಕೆ ಕೊಟ್ಟರೂ ಯಾವುದೇ ರೀತಿಯ ಫಲಕಾರಿಯಾಗಲಿಲ್ಲ.ನಿಜಾಮ ಸಕರ್ಾರದ ಹಿಂಸೆ ತಾಳಲಾರದೇ ತರುಣರೆಲ್ಲರೂ ಸೇರಿ ಕಾಂಗ್ರೇಸ್ ಪಕ್ಷದ ಸಹಾಯ ಪಡೆದು ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಶಿಬಿರಗಳನ್ನು ಆರಂಭಿಸಿದರು. ಮಂತ್ರಾಲಯದಲ್ಲಿ ಗುಡ್ಡದ ರಾಘವೇಂದ್ರರಾಯರು, ತುಂಗಭದ್ರಾದಲ್ಲಿ ಸಂಗಮ ಹುಚ್ಚಾಚಾರ ಮಾಸ್ತಾರ, ಚಳ್ಳೆಕೂಡ್ಲೂರಿನಲ್ಲಿ ಬೆಟ್ಟದೂರು ಶಂಕರಗೌಡರು ಶಿಬಿರಗಳನ್ನು ಸ್ಥಾಪಿಸಿ ತರುಣ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ಸಕರ್ಾರ ಸಂಗ್ರಹಿಸಿದ್ದ ಮಾಲ್ಲು ಜಾರಿ ಹಾಗೂ ಲೇವಿ ಧವಸಧಾನ್ಯಗಳನ್ನು ಲೂಟಿ ಮಾಡಿದರು. ಹೀಗಿನ ಆಕ್ಟ್ರಾಯಿ ನಾಕಾಗಳಂತೆ ಕಾರ್ಯನಿರ್ವಹಿಸುತ್ತಿದ್ದ ಕರೋಡಗಿರಿಗಳನ್ನು ಸುಟ್ಟುಹಾಕಿದರು.ಪೊಲೀಸ್ ಠಾಣಿಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ಪ್ರತಿಹಳ್ಳಿಗೆ ತೆರಳಿ ಜನರಿಗೆ ಹಪ್ತೆ,(ಭೂಕಂದಾಯ) ಮತ್ತು ಲೇವಿಗಳನ್ನು ಸಕರ್ಾರಕ್ಕೆ ಸಲ್ಲಿಸದಂತೆ ಜನರನ್ನು ಪ್ರಚೋಧಿಸಿ ಅಸಹಕಾರ ಆಂಧೋಲನವನ್ನು ಆರಂಭಿಸಿದರು. ಈ ನಿಟ್ಟಿನಲ್ಲಿ ಗಡಿಭಾಗದಲ್ಲಿ ಆಯೋಜಿಸಿದ್ದ ಶಿಬಿರಗಳು ನಿಣರ್ಾಯಕ ಪಾತ್ರ ವಹಿಸಿದವು.ಸ್ವಾತಂತ್ರ್ಯ ಸೇನಾನಿಗಳು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ತುಂಗಭದ್ರಾ ಪೊಲೀಸ್ ಚೌಕಿಯ ಮೇಲೆ ದಾಳಿ ಮಾಡಿದರು. ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಹಫ್ತೆ ವಸೂಲಿಗೆ ಬಂದಿದ್ದ ತಹಸಿಲ್ದಾರರ ಟೈರಿಗೆ ಬೆಂಕಿ ಹಚ್ಚಿದರು. ಎಡಿವಾಳ ಕರೋಡಗಿರಿ ನಾಕಾಕ್ಕೆ ಬೆಂಕಿಇಟ್ಟು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ಗಾಣದಾಳ, ಮದ್ಲಾಪೂರಗಳ ಕರೋಡಗಿರಿ ನಾಕಾಗಳನ್ನು ಸುಟ್ಟುಹಾಕಿದರು. ರಾಯಚೂರಿನ ನೀರು ಸರಬರಾಜಿನ ಪಂಪ್ಹೌಸ್ಗೆ ದಾಳಿ ಮಾಡಿದಾಗ ಎಂ. ನಾಗಪ್ಪ, ಪಿ. ವೀರಣ್ಣ, ಬಸವರಾಜಸ್ವಾಮಿ, ಈಶ್ವರರಾಜ, ಮುಂತಾದವರನ್ನು ಮುನ್ನಚ್ಚರಿಕೆಯ ಕ್ರಮವಾಗಿ ಬಂಧಿಸಲಾಯಿತು. ಹೀಗೆ ಈ ಭಾಗದಲ್ಲಿ ಹೋರಾಟದ ನೂರಾರು ಪ್ರಕರಣಗಳು ದಾಖಲಾದವು. ಸ್ವಾತಂತ್ರ್ಯವನ್ನೇ ಗುರಿಯಾಗಿಸಿಕೊಂಡಿದ್ದ ಸ್ವತಂತ್ರ್ಯ ಸೇನಾನಿಗಳು ತಮ್ಮ ಜೀವವನ್ನು ಪಣವಾಗಿಟ್ಟಿದ್ದು ಸ್ವಾತಂತ್ರ್ಯ ಹೋರಾಟ ಕಂಡ ರೋಮಾಂಚನಕಾರಿ ದಾಖಲೆಯಾಗಿದೆ. 12 ಅಕ್ಟೋಬರ್ 1947ರಂದು ಗುಂಜಳ್ಳಿಯ ಭೀಮಸೇನರಾವ್ ಕುಲಕಣರ್ೀಯವರು ಪೊಲೀಸ್ಗೌಡ, ಮಾಲೀಗೌಡ, ಕುಲಕಣರ್ಿಯವರನ್ನೆಲ್ಲ ಒಂದೆಡೆ ಸೇರಿಸಿ ರಾಜೀನಾಮೆ ನೀಡಿ ನಿಜಾಮ ಸಕರ್ಾರದ ವಿರುದ್ದ ಹೋರಾಟಕ್ಕೆ ಅಣಿಗೊಳಿಸಿದರು.ಹೈದರಾಬಾದ್ ಸಂಸ್ಥಾನದ ಉದ್ದಗಲಕ್ಕೂ ನಿಜಾಮಶಾಹಿ ವಿರುದ್ಧದ ಹೋರಾಟ ತೀವ್ರಗೊಂಡಾಗ ಅಸಹಾಯದಾಯಕ ನಿಜಾಮರು ಇಂಗ್ಲೇಂಡಿನ ಪ್ರಧಾನಿ ಸರ್ ವಿನಸ್ಟನ್ ಚಚರ್ಿಲ್ರ ಸಹಾನುಭೂತಿ ಗಳಿಸಲು ಪ್ರಯತ್ನಿಸಿ ಪಾಕಿಸ್ತಾನದೊಂದಿಗೆ ಮೈತ್ರಿ ಮಾಡಿಕೊಂಡರು. ಪೋಚರ್್ಗೀಸರೊಂದಿಗೆ ರಾಜಕೀಯ ಸಂಬಂಧ ಬೆಳೆಸಿ ಭಾರತದ ಮೇಲೆ ಯುದ್ದವನ್ನು ಮಾಡಲು ಸನ್ನಧ್ದರಾದರು. ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವದರೊಂದಿಗೆ ಹೈದರಾಬಾದ್ನಲ್ಲಿ ಶಸ್ತ್ರಾಸ್ತ್ರದ ಕಾಖರ್ಾನೆಯನ್ನು ಆರಂಭಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಭಾರತ ಸಕರ್ಾರದ ಗೃಹಮಂತ್ರಿ ಹಾಗೂ ಉಕ್ಕಿನಮನುಷ್ಯ ಖ್ಯಾತಿಯ ಸಧರ್ಾರ ವಲ್ಲಾಭಾಯಿ ಪಟೇಲ್ರು 13 ಸೆಪ್ಟೆಂಬರ್ 1948ರಂದು ಪೊಲೀಸ್ ಆ್ಯಕ್ಷನ್ (ಆಪರೇಷನ್ ಪೊಲೋ) ಕೈಗೊಂಡಿತು. ಹೈದರಾಬಾದ್ ಪ್ರಾಂತ್ಯವನ್ನು ವಿವಿಧ ದಿಕ್ಕುಗಳಿಂದ ಆಕ್ರಮಿಸಿದ ಭಾರತೀಯ ಸೈನ್ಯ ಹೈದರಬಾದಿನ ಮೇಲೆ ಮುತ್ತಿಗೆ ಹಾಕಿತು. ಭಾರತದ ಪ್ರಧಾನ ದಂಡನಾಯಕ ಲೆ.ಜ ಮಹಾರಾಜಸಿಂಗ್ರ ನೇತೃತ್ವದಲ್ಲಿ ಮೇಜರ್ ಜನರಲ್ ಡಿ.ಎಸ್ ಬ್ರಾ ಜನರಲ್ ಜಯಂತನಾಥ ಚೌದ್ರಿ, ಜನರಲ್ ಎ.ಎ.ರುದ್ರಬ್ರಿಗೇಡಿಯರ್, ಶೋಯದತ್ತ್ಸಿಂಗ್ ಮೊದಲಾದವರು ಭಾರತೀಯ ಸೈನ್ಯವನ್ನು ಮುನ್ನಡೆಸಿದರು. ಭಾರತೀಯ ಸೈನ್ಯವನ್ನು ನಿಜಾಮ ಸಕರ್ಾರದ ಸೈನ್ಯ ಪಠಾಣರ ಪಡೆ, ರಜಾಕಾರರು ಇಲ್ಲಿಯೂ ಅಡೆ-ತಡೆಯೊಡ್ಡಲಿಲ್ಲ. ಆದರೆ, ವಳದುರ್ಗ ಮತ್ತು ರಾಯಚೂರು ಜಿಲ್ಲೆಯ ಮುನೀರಾಬಾದ್ನಲ್ಲಿ ಚಿಕ್ಕಪ್ರಮಾಣದ ಯುದ್ದವನ್ನು ಎದುರಿಸಿದ ಸೈನಿಕರು ಭಾರತೀಯ ಸೈನ್ಯಕ್ಕೆ ಅಂತಿಮವಾಗಿ ಸೋತು ಶರಣಾದರು.ಕೇವಲ ನಾಲ್ಕು ದಿನಗಳ ಸೈನ್ಯಾಚರಣೆಯಲ್ಲಿ ಹೈದರಬಾದ್ ನವಾಬನು ಭಾರತೀಯ ಸೈನ್ಯಕ್ಕೆ ಶರಣಾಗಿ ಭಾರತದ ಒಕ್ಕೂಟದಲ್ಲಿ ಸೇರುವ ಒಪ್ಪಂದಕ್ಕೆ 17ಸೆಪ್ಟೆಂಬರ್ 1948 ಸಂಜೆ 05ಗಂಟೆಗೆ ಸಹಿ ಹಾಕಿದರು. ಮಾರನೇಯ ದಿನ 18 ಸೆಪ್ಟೆಂಬರ್ 1948ರ ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಹೈದ್ರಾಬಾದ್ ಪ್ರಾಂತ್ಯವು ಭಾರತ ಸಕರ್ಾರದಲ್ಲಿ ವಿಧಿವತ್ತಾಗಿ ವೀಲಿನಗೊಂಡಿತು. ಆಗ ರಾಯಚೂರು ಜಿಲ್ಲೆಯ ಜನತೆ ಅಖಂಡ ಭಾರತದ ಅವಿಭಾಜ್ಯ ಅಂಗವಾಗಿ ಮೆರೆಯುವ ಸೌಭಾಗ್ಯದ ಸಂತಸದ ಕ್ಷಣಗಳನ್ನು ಅನುಭವಿಸಿದರು.ಹೈದರಬಾದ್ ಸಂಸ್ಥಾನದ ವಿಮೋಚನೆಯಲ್ಲಿ ಹೋರಾಟ ಕೇವಲ ನಾಯಕರಿಗೆ ಮಾತ್ರ ಸೀಮಿತಗೊಳ್ಳದೇ ಸಾಮಾನ್ಯರು ಮತ್ತು ಅವರ ಪರಿವಾರ ಪಾಲ್ಗೊಂಡಿರುವುದು ಭಾರತೀಯ ಚರಿತ್ರೆ ಕಂಡ ರೋಮಾಂಚನಕಾರಿ ಅಧ್ಯಾಯ. ಡಾಮಹಾವೀರ ಕಲ್ಯಾಣಕಾರಿ, ಫೀರೋಜಿರಾವ್ ನಿಜಾಮಕಾರಿ, ದೇವೂಜಿರಾವ್ ಮಿಧಾರಕೇರಿ, ರಾಂಪ್ರಕಾಶ ಮಲ್ಕಾರಿ, ಮನೋಜರಾವ್ ಮಲ್ಕಾರಿ, ನರಸೋಜಿರಾವ್ ನಿಜಾಮಕಾರಿ, ನರಸೋಜಿರಾವ್ ಜಗತಕಾರಿ, ಮೋಚಿರಾವ್, ತಿಪ್ಪೋಜಿರಾವ್ ಕಲ್ಯಾಣಕಾರಿ, ಪಂಡಿತ ಮಾಣಿಕ್ಯರಾವ್, ರಾಮೋಜಿರಾವ್ ಕಲ್ಯಾಣಕಾರಿ, ಸ್ವಾಮಿ ಸುಧಾನಂದ ಜೀ ಮುಂತಾದವರ ಅಮರತ್ಯಾಗ, ಬಲಿದಾನಗಳ ಫಲವಾಗಿ ನಾವೀಂದು ಸ್ವಾತಂತ್ರ್ಯದ ಸ್ವಚ್ಛಂದ ಗಾಳಿಯಲ್ಲಿ ಉಸಿರಾಡಲು ಸಾಧ್ಯವಾಗಿದೆ.16-9-1948ರಂದು ರಜಾಕಾರರು, ಪಠಾಣರು ರಾಯಚೂರಿನ ಬಜಾರಿನಲ್ಲಿ ನುಗ್ಗೇ ವ್ಯಾಪಾರಿಗಳನ್ನು ಲೂಟಿ, ಕೊಲೆ ಮುಂತಾದ ವಿಧ್ವಾಂಸಕಾರಿ ಕೃತ್ಯಗಳನ್ನು ಆರಂಭಿಸಿದರು. ಎರಡು ದಿನಗಳಲ್ಲಿ 50ಸಾವಿರ ಮೊತ್ತದ ಹಣವಸ್ತುಗಳು ಲೂಟಿಯಾದವು.ಮುನ್ನೂರು ನಾಗಣ್ಣ, ತಿಮ್ಮಾಪೂರ ಪೇಟೆಯ ದಾಸಪ್ಪ, ಕೊಂದಡ್ಡಿ ನರಸಣ್ಣ ಮತ್ತು ಅವರ ಸಂಗಡಿಗರು ರಾಯಚೂರಿನ ಜನರನ್ನೆಲ್ಲ ಕೂಡಿಕೊಂಡು ಲೂಟಿಯನ್ನು ತಡೆಯಲು ಪ್ರಯತ್ನಿಸಿದರು. ನಾಲ್ಕುಜನರನ್ನು ಕೊಂದ ರಜಾಕಾರರು ಅವರ ತಲೆಗಳನ್ನು ಬೆಟ್ಟದ ಮೇಲೆ ತೂಗುಹಾಕಿದರು. ರಾಯಚೂರು ಜಿಲ್ಲೆಯಾಧ್ಯಂತ ರೂಪಿಸಿದ್ದ ಹೋರಾಟದಲ್ಲಿ ಹಲವಾರು ಹೃದಯವಂಥ ಮುಸ್ಲಿಂ ಪರಿವಾರದವರು ಹಿಂದೂ ಸ್ವಾತಂತ್ರ್ಯ ಸೇನಾನಿಗಳನ್ನು ರಕ್ಷಿಸುವುದು ಮಾನವೀಯತೆಗೆ ಸಂದ ಗೌರವವಾಗಿದೆ. ಮಾನವ ಚರಿತ್ರೆಯಲ್ಲಿ ವ್ಯಕ್ತಿಗಿಂತ ಸಮಾಜ ಶ್ರೇಷ್ಠ. ಸಮಾಜಕ್ಕಿಂತ ಧರ್ಮ ಶ್ರೇಷ್ಠ. ಧರ್ಮಕ್ಕಿಂತ ರಾಷ್ಟ್ರ ಶ್ರೇಷ್ಠ ಎನ್ನುವುದು ಮತ್ತೊಮ್ಮೆ ರುಜುವಾತುಗೊಂಡಿತು. ಇಷ್ಟೆಲ್ಲ ಸಮಸ್ಯೆ ಹೋರಾಟಗಳ ಮಧ್ಯೆ ಅಂದಿನ ಡೆಪ್ಯೂಟಿ ಕಲೆಕ್ಟರ್ ಆಗಿದ್ದ ರಾಮಪ್ಪನವರು ಜಿಲ್ಲೆಯಾಧ್ಯಂತ ಶಾಂತಿ ಮತ್ತು ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಂಡರು.17 ಸೆಪ್ಟೆಂಬರ್ 1948ರ ಸಂಜೆ 5ಗಂಟೆ ಹೈದ್ರಾಬಾದ್ ಸಂಸ್ಥಾನದ ನಿಜಾಮರು ಭಾರತ ಸಕರ್ಾರದ ಒಕ್ಕೂಟದಲ್ಲಿ ಸೇರುವ ಇಂಗಿತ ವ್ಯಕ್ತಪಡಿಸಿ ಒಪ್ಪಂದಕ್ಕೆ ಸಹಿ ಹಾಕುವದರೊಂದಿಗೆ 224ವರ್ಷಗಳ ಅಸಫಜಹಾ ಮನೆತನದ ಆಡಳಿತ ಕೊನೆಗೊಂಡು ಇತಿಹಾಸದ ಪುಟಗಳನ್ನು ಸೇರಿತು.ಅಯ್ಯಪ್ಪ ತುಕ್ಕಾಯಿ