Thursday, June 7, 2012

ಇನ್ನೂ ಮುಟ್ಟಿಸಿಕೊಳ್ಳದ ಭಾರತೀಯ ಮಾಧ್ಯಮಗಳು


(ರಾಬಿನ್ ಜೆಫ್ರಿ ನ್ಯಾಷನಲ್ ಯೂನಿವಸರ್ಿಟಿ ಆಫ್ ಸಿಂಗಪೂರ್ನ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ ಮತ್ತು ಏಷ್ಯಾ ಸಂಶೋಧನಾ ಸಂಸ್ಥೆಯಲ್ಲಿ ಸಂದರ್ಶಕ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ. ಈ ಲೇಖನ ಜೆಫ್ರಿಯವರು 31ನೇ ಮಾಚರ್್ 2012ರಂದು ನವದೆಹಲಿಯ ರಾಜೇಂದ್ರ ಮಾಥೂರ್ ನೆನಪಿನ ಕಾರ್ಯಕ್ರಮದಲ್ಲಿ ಮಂಡಿಸಿದ ಭಾಷಣದ ಬರಹರೂಪ.)

        1992ರಲ್ಲಿ ಹಾಗೆ ಸುಮ್ಮನೆ ಇಣುಕಿ ನೋಡಿದ್ದೆ, ಅವತ್ತೂ ಅಲ್ಲೊಬ್ಬ ದಲಿತ ಸಿಗಲಿಲ್ಲ; ಇವತ್ತೂ ಅಲ್ಲಿ ಸಿಗಲಾರ. ಅದು ಭಾರತೀಯ ಮಾಧ್ಯಮ ರಂಗ. ದಲಿತರನ್ನು ಇನ್ನೂ ಮುಟ್ಟಿಸಿಕೊಳ್ಳಲು ಹೆಣಗುತ್ತಿರುವ ಬೃಹತ್ ಮಾಧ್ಯಮ. ಇಂಡಿಯಾದ ಒಟ್ಟು ಜನಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟಿರುವ ದಲಿತರ ಬದುಕನ್ನು ಸಣ್ಣ ಕುತೂಹಲಕ್ಕಾದರೂ ನೋಡುವುದಿರಲಿ, ಭಾರತೀಯ ಮಾಧ್ಯಮ ತನ್ನ ಸುದ್ದಿಮನೆಗಳಿಂದಲೇ ದಲಿತರನ್ನು ದೂರವಿಟ್ಟಿದೆ.
ದಲಿತರನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಂದ ದೂರವಿಡಲು ಕಾರಣಗಳೇನು? ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಭಾರತೀಯ ಸಂವಿಧಾನದ ಮೂಲಧರ್ಮವಾದ ಸಮಾನತೆ ಮತ್ತು ಭ್ರಾತೃತ್ವವನ್ನು ಈ ದೇಶದ ಎಲ್ಲ ರಂಗಗಳು ನಿರಾಕರಿಸಿರುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವೂ ನಿರಾಕರಿಸಿದೆ. ಹೀಗಾಗಿಯೇ ಮಾಧ್ಯಮದ ಮಂದಿ ಮಾಧ್ಯಮದಲ್ಲಿ ಭ್ರಾತೃತ್ವ ಎಂದರೆ ದೂರ ಸರಿಯುತ್ತಾರೆ. ಎರಡನೆಯದು, ಸುದ್ದಿಮನೆಗಳಲ್ಲಿರುವ ಮಂದಿ ಸದಾ ರೋಚಕತೆಗೆ ಮಣೆಹಾಕಿ ಹೆಚ್ಚು ಜನರನ್ನು ಆಕಷರ್ಿಸುವುದರತ್ತಲೇ ಗಮನಕೊಡುವುದರಿಂದ, ಮಾಧ್ಯಮದ ವ್ಯಾಪಾರಿ ಜಗತ್ತಿಗೆ ದೇಶದ ಕಾಲುಭಾಗದಷ್ಟಿರುವ ದಲಿತರು ಯಾವತ್ತೂ ಮಾರಾಟದ ಸರಕಾಗುವುದಿಲ್ಲ. ಸದಾ ಸಾರ್ವಜನಿಕ ಸಮ್ಮತಿ ಉತ್ಪಾದಿಸುವುದರತ್ತಲ್ಲೇ ಹೆಚ್ಚು ಚಡಪಡಿಸುವ ಈ ಮಾಧ್ಯಮ, ಸಮಾಜದ ಅಂಚಿನಲ್ಲಿದ್ದು ದಿವ್ಯನಿರ್ಲಕ್ಷ್ಯಕ್ಕೊಳಗಾಗಿರುವ ದಲಿತರ ತಾರತಮ್ಯದ ಪ್ರಶ್ನೆಗಳನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪೂರ್ವ ಮತ್ತು ಈಶಾನ್ಯ ಭಾಗದ ಅನೇಕ ರಾಜ್ಯಗಳಲ್ಲಿ ದೊಡ್ಡಪ್ರಮಾಣದಲ್ಲಿ ಜನಪರ ಹೋರಾಟಗಳು ನಡೆದರೂ ಇಂಡಿಯಾದ ಪತ್ರಿಕೆಗಳಿಗೆ ಅವು ಸುದ್ದಿಯೇ ಅನ್ನಿಸಿಲ್ಲ.
ಮೂರನೆಯದು, ಬಹಳ ಹಿಂದೆ ಅಮೆರಿಕಾದ ಕಟ್ಟಾ ಮಾಧ್ಯಮದ ಮಂದಿ ಸುದ್ದಿ ಅನ್ನಿಸುವುದೆಲ್ಲ ಪ್ರಿಂಟಾಗಬೇಕು ಎನ್ನುವ ನ್ಯೂ ಯಾಕರ್್ ಟೈಮ್ಸ್ ಪತ್ರಿಕೆಯ ಟ್ಯಾಗ್ಲೈನನ್ನು ಹೆಚ್ಚು ನಂಬಿಕೊಂಡಿದ್ದರು. ಆದರೆ ದೇಶದ ಕಾಲುಭಾಗದಷ್ಟು ಜನರನ್ನು ಅವರ ಮೇಲೆ ಯಾವುದಾದರೂ ಹಿಂಸೆ, ಬರ್ಬರ ಅನ್ನಿಸುವ ಕೃತ್ಯಗಳು ಜರುಗಿದ ಸಂದರ್ಭಗಳಲ್ಲಿ ಮಾತ್ರ ಮುಟ್ಟಿ ನಂತರ ಅವರನ್ನು ಮಾಧ್ಯಮದ ಗಡಿಗಳಿಂದಲೇ ದೂರ ನೂಕುವ ಪತ್ರಿಕೆಗಳು ಹೆಚ್ಚುಕಾಲ ನೆಲೆನಿಲ್ಲಲಾರವು ಎಂಬ ಪರಮಸತ್ಯ ಇದೇ ಮಾಧ್ಯಮದ ಮಂದಿಗೆ ಬಹುಬೇಗ ಗೊತ್ತಾಯಿತು.
       ಭಾರತೀಯ ಮಾಧ್ಯಮಗಳಲ್ಲಿ ದಲಿತರ ಗೈರುಹಾಜರಿ ಕುರಿತ ಚಚರ್ೆಗಳು 1996ರಿಂದ ಹೆಚ್ಚು ಮುನ್ನೆಲೆಗೆ ಬರುತ್ತಿವೆ. ಖುದ್ದು ಒಬ್ಬ ಆಫ್ರೋ-ಅಮೆರಿಕನ್ ಆಗಿರುವ ವಾಷಿಂಗ್ಟನ್ ಪೋಸ್ಟ್ನ ವರದಿಗಾರರಾದ ಕೆನ್ನೆತ್ ಜೆ.ಕೂಪರ್ ಮೊದಲಿಗೆ ದೆಹಲಿಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದರು. ಅವರ ಹುಡುಕಾಟದಲ್ಲಿ ಅಂಥ ಲಾಭವೇನೂ ಆಗಲಿಲ್ಲ. ಕಡೆಗೆ ಅವರು ಬೇಸತ್ತು ಪಯನೀಯರ್ ಪತ್ರಿಕೆಗೆ ಬರೆದ ತನಿಖಾ ಲೇಖನವನ್ನು ಬಿ.ಎನ್.ಉನಿಯಾಲ್ ಪ್ರಕಟಿಸಿದರು. ಲೇಖನದ ಕೊನೆಗೆ ಕೂಪರ್ ನೊಂದು ಬರೆದಿದ್ದರು: ನನ್ನ ಮೂವತ್ತು ವರ್ಷಗಳ ಜರ್ನಲಿಸ್ಟ್ ಬದುಕಿನಲ್ಲಿ ಒಬ್ಬೇ ಒಬ್ಬ ದಲಿತನನ್ನು ಇಂಡಿಯಾದ ಸುದ್ದಿಮನೆಗಳಲ್ಲಿ ನೋಡಲು ಸಾಧ್ಯವೇ ಆಗಲಿಲ್ಲ.
ಒಬ್ಬ ದಲಿತನೂ ಸಿಗಲಿಲ್ಲ?
ನಾನು 2000ದಲ್ಲಿ ಇಂಡಿಯಾದ ಪತ್ರಿಕಾ ಕ್ರಾಂತಿ ಎಂಬ ಪುಸ್ತಕ ಬರೆದಾದ ನಂತರವೂ ಇಲ್ಲಿ ಅಂಥ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಕೂಪರ್-ಉನಿಯಾಲ್ ತನಿಖಾ ವರದಿಯಲ್ಲಿ ಹೇಳಿರುವಂತೆ ಭಾರತದ ಮೂನ್ನೂರಕ್ಕೂ ಹೆಚ್ಚಿನ ಪತ್ರಿಕೆಗಳಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬೇ ಒಬ್ಬ ಪತ್ರಕರ್ತ ಸಿಗುವುದಿಲ್ಲ. ಆ ವರದಿಗೆ 2006ರಲ್ಲಿ ಹತ್ತು ವರ್ಷಗಳು ತುಂಬಿದವು. ಕಳೆದ ವರ್ಷವಷ್ಟೇ ತಮಿಳು ಪತ್ರಕರ್ತ ಜೆ.ಬಾಲಸುಬ್ರಹ್ಮಣ್ಯಮ್ ಇಂಗ್ಲಿಷ್ ದೈನಿಕವೊಂದರ ಸಂದರ್ಶನದಲ್ಲಿ ತಮಗಾದ ಹಸಿಹಸಿ ಅನುಭವಗಳನ್ನು ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದುಕೊಂಡಿದ್ದರು. ಬಾಲಸುಬ್ರಹ್ಮಣ್ಯಮ್ ದಲಿತ ಅನ್ನುವ ಕಾರಣಕ್ಕೆ ಹಾಗೂ ಅವರು ಸಂದರ್ಶನಕ್ಕೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ದಲಿತರ ಪರವಾದ ಲೇಖನಗಳು ಅವರ ಪಾಲಿಗೆ ಆ ಇಂಗ್ಲಿಷ್ ದೈನಿಕದ ಬಾಗಿಲು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿತು.
ಕೆನೆತ್ ಕೂಪರ್ ಈ ಸದ್ಯ ಬೋಸ್ಟನ್ನಲ್ಲಿ ನೆಲೆಗೊಂಡಿದ್ದು, ಆಫ್ರಿಕನ್-ಅಮೆರಿಕನ್ ಜನರ ಬದುಕನ್ನು ಬಿಂಬಿಸುತ್ತಿರುವ ಸೆಂಟ್ ಲೂಯಿಸ್ ಅಮೆರಿಕನ್ ಎಂಬ ಯಶಸ್ವಿ ಪತ್ರಿಕೆಗೆ ಸಂಪಾದಕರಾಗಿದ್ದಾರೆ. ಇಂಡಿಯಾದ ದಲಿತರು, ಆಫ್ರಿಕಾ-ಅಮೆರಿಕಾ ದೇಶಗಳ ಕಪ್ಪು ಜನಾಂಗದವರು ಒಂದೇ ಬಗೆಯ ತಾರತಮ್ಯ ಮತ್ತು ಅವಮಾನಗಳನ್ನು ಸಾಮಾಜಿಕವಾಗಿ ಅನುಭವಿಸಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ. ಎಬೋನಿ, ಎಸ್ಸೆನ್ಸ್, ಸೆಂಟ್ ಲೂಯಿಸ್ ಅಮೆರಿಕನ್ ಮತ್ತು ಚಿಕಾಗೋ ಡಿಫೆಂಡರ್ ತರಹದ ಪತ್ರಿಕೆಗಳು ಅಲ್ಲಿನ ಶೋಷಿತರನ್ನು ಹತ್ತಿರಕ್ಕೆ ಬಿಟ್ಟು ಕೊಂಡಂತೆ ಇಂಡಿಯಾದ ಪತ್ರಿಕೆಗಳಿಗೇಕೆ ಸಾಧ್ಯವಾಗ ಲಿಲ್ಲ ಎಂಬ ಪ್ರಶ್ನೆ ಕಣ್ಣೆದುರು ಬಂದು ನಿಲ್ಲುತ್ತದೆ.
ಇದಕ್ಕೆ ಉತ್ತರವೂ ಇದೆ. ಇಂಡಿಯಾದ ದಲಿತರು ಮುಟ್ಟದ ಜಗತ್ತೊಂದನ್ನು ಅಮೆರಿಕಾದ ಶೋಷಿತರು 1920ರಲ್ಲಿ ಮುಟ್ಟಿದರು. ಬಹಳ ಮುಖ್ಯವಾಗಿ ಈ ದಶಕದಲ್ಲಿ ಕಪ್ಪು ಜನಾಂಗದಿಂದ ಮಧ್ಯಮ ವರ್ಗವೊಂದು ರೂಪುಗೊಂಡು ಅನೇಕ ಅಂಗಡಿ, ವ್ಯಾಪಾರ-ವಹಿವಾಟುಗಳ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಮಧ್ಯಮ ವರ್ಗದ ಈ ಪುಟ್ಟ ಕಪ್ಪು ಜನಾಂಗವೇ ಮುಂದೆ ಕಪ್ಪು ಅಮೆರಿಕವಾಗಿ ತನ್ನ ಹೊಸ ಹುಟ್ಟನ್ನು ಪಡೆದುಕೊಂಡಿತು. ಈ ವರ್ಗ ತನ್ನ ಆಥರ್ಿಕ ಯಶಸ್ಸಿಗೆ ಆಯ್ದುಕೊಂಡದ್ದು ಪತ್ರಿಕೆಗಳ ಜಾಹೀರಾತು. ಜಾಹೀರಾತು ಪಡೆಯುವ ಸಲುವಾಗಿಯಾದರೂ ಅಮೆರಿಕಾದ ಪತ್ರಿಕೆಗಳು ಈ ಕಪ್ಪು ಮಧ್ಯಮ ವರ್ಗದ ಎದುರು ಮಂಡಿಯೂರಿ ನಿಂತಿತು. ಇಡೀ ಅಮೆರಿಕಾ ಉಸಿರಾಡುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಅಲ್ಲಿನ ಶೋಷಿತರು ಕಷ್ಟಪಟ್ಟು ತಮ್ಮದಾಗಿಸಿಕೊಂಡರು. ಆ ಭಾಷೆಯ ಸಂಪರ್ಕದಿಂದಾಗಿ ಚಚರ್್ನ ಒಳಗೆ ನಡೆಯುತ್ತಿದ್ದ ವಿದ್ಯಮಾನಗಳೆಲ್ಲ ಹೊರಗಿದ್ದ ಶೋಷಿತರಿಗೆ ತಲುಪಿತು. ಇಂಥ ಹೊತ್ತಲ್ಲೇ ಅಲ್ಲೊಬ್ಬ ಮಾಟರ್ಿನ್ ಲೂಥರ್ ಕಿಂಗ್ ಹುಟ್ಟಿಕೊಂಡದ್ದು. ತಮ್ಮ ಚರ್ಮಗಳು ಎಷ್ಟೇ ಭಿನ್ನ ದನಿ ಹೊರಡಿಸಿದರೂ ಕಪ್ಪು ಅಮೆರಿಕಾದ ಆಳದಲ್ಲಿ ಹೆಚ್ಚು ಬಿರುಕು ಕಾಣಿಸಿಕೊಳ್ಳಲಿಲ್ಲ. ಆಫ್ರಿಕಾ ಮತ್ತು ಅಮೆರಿಕಾದಲ್ಲಿ ಈಗ ಜನಾಂಗೀಯ ತಾರತಮ್ಯ ಅನ್ನುವುದು ಮೊದಲಿನಂತೆ ಗುಣಪಡಿಸಲಾಗದ ಗಾಯದಂತೇನೂ ಇಲ್ಲ.
ಮಾಧ್ಯಮದಲ್ಲಿ ದಲಿತರ ಪ್ರಾತಿನಿಧ್ಯದ ಪ್ರಶ್ನೆಗಳು ಬಂದಾಗಲೆಲ್ಲ ಇಂಡಿಯಾದ ಮಾಧ್ಯಮಗಳು ಎರಡು ಸಿದ್ಧ ಉತ್ತರಗಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುತ್ತವೆ: ಒಳ್ಳೆಯ ಪತ್ರಕರ್ತ ಸುದ್ದಿಯ ವಸ್ತುನಿಷ್ಠತೆಯನ್ನು ನೋಡುತ್ತಾನೆಯೇ ಹೊರತು ಜಾತಿಯನ್ನಲ್ಲ  ಮತ್ತು ಮೀಸಲಾತಿ ಎನ್ನುವುದು ಆಧುನಿಕ ಭಾರತಕ್ಕೆ ಮಾರಕ, ಜಾತಿಯನ್ನು ಪಕ್ಕಕ್ಕಿಟ್ಟು ಪ್ರತಿಭೆಯನ್ನಷ್ಟೆ ಪರಿಗಣಿಸಬೇಕು. ಬ್ರಿಟಿಷ್ ಆಳ್ವಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇಲ್ಲಿನ ಪುರಾತನ ಶ್ರೀಮಂತರು ದಿ ಸ್ಟೇಟ್ಸ್ಮ್ಯಾನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದೇನಾದರೂ ತಿಳಿದಿರುವಿರಾ? ಖಂಡಿತ ಇಲ್ಲ. ದಿ ಹಿಂದೂ, ಅಮೃತಾ ಬಜಾರ್ ಪತ್ರಿಕಾ, ಹಿಂದೂಸ್ತಾನ್ ಟೈಮ್ಸ್, ಯಂಗ್ ಇಂಡಿಯಾ ಮೊದಲಾದ ಪತ್ರಿಕೆಗಳು ಇಲ್ಲಿನ ಶೋಷಿತರನ್ನು ಅಷ್ಟಾಗಿ ಪ್ರತಿನಿಧಿಸಲಿಲ್ಲ ಎಂಬುದನ್ನು ಆ ಪತ್ರಿಕೆಗಳು ದಕ್ಕಿಸಿಕೊಂಡ ವ್ಯಾಪಾರಿ ಯಶಸ್ಸಿನಿಂದಲೇ ಅಂದಾಜಿಸಬಹುದು. ನಿಮ್ಮ ಕೈಯಲ್ಲೊಂದು ಪತ್ರಿಕೆ ಇದ್ದರೆ ನೀವು ರಾತ್ರೋರಾತ್ರಿ ಒಬ್ಬ ಹೀರೋನನ್ನು ತಯಾರಿಸಬಹುದು ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಲ್ಲಿ ಹೆಚ್ಚು ಸತ್ಯವಿದೆ.
ಎರಡು ಸಲಹೆಗಳು?
ಹಾಗಿದ್ದರೆ ಇಂಡಿಯಾದ ಮಾಧ್ಯಮಗಳಲ್ಲಿ ದಲಿತರನ್ನು ಕಾಣುವುದು ಹೇಗೆ? ಎರಡು ಸಲಹೆಗಳಿವೆ. ಬಹುಶಃ ಇವು ಉತ್ತರವಾಗಲಾರವು; ಆದರೆ ಇವೆರಡು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬಹುದು. 1978ರಲ್ಲಿ ಸುದ್ದಿಮನೆಯೊಳಗಿನ ಭಿನ್ನತೆಯನ್ನು ಗಣತಿ ಮಾಡಲು ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟಸರ್್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಯಿತು. ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30 ರಷ್ಟಿದ್ದರೂ ಆ ವರ್ಷ ಶೇಕಡಾ 4ರಷ್ಟು ಕಪ್ಪು ವಣರ್ೀಯರು ಅಲ್ಲಿನ ಸುದ್ದಿಮನೆಗಳಲ್ಲಿ ಕೆಲಸಮಾಡುತ್ತಿದ್ದರು. 2000ದ ಹೊತ್ತಿಗೆ ಗುರಿ ಶೇಕಡಾ 20 ಮುಟ್ಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಗುರಿ ಮುಟ್ಟಲಿಲ್ಲ. 2011ರಲ್ಲಿ ಅಮೆರಿಕಾದ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವ ಕಪ್ಪು ವಣರ್ೀಯರು ಶೇಕಡಾ 13ರಷ್ಟು ಹುದ್ದೆಗಳನ್ನು ಅಮೆರಿಕಾದ ಸುದ್ದಿಮನೆಗಳಲ್ಲಿ ಪಡೆದುಕೊಂಡಿದ್ದರು. ಈಗ ಅಮೆರಿಕಾದ ಒಟ್ಟು ಜನಸಂಖ್ಯೆಯಲ್ಲಿ ಅಲ್ಲಿನ ಶೋಷಿತರು ಶೇಕಡಾ 36ರಷ್ಟಿದ್ದಾರೆ. ಇದರಲ್ಲಿ ಆಫ್ರಿಕನ್-ಅಮೆರಿಕನ್, ಲ್ಯಾಟಿನೋಸ್, ನೇಟಿವ್ ಅಮೆರಿಕನ್ಸ್ ಮತ್ತು ಏಷ್ಯಾ ದವರು ಸೇರಿದ್ದಾರೆ. ಈಗ ನ್ಯೂಸ್ ಎಡಿಟಸರ್್ ಸಂಸ್ಥೆ  ತನ್ನ ಗುರಿಯನ್ನು 2020ಕ್ಕೆ ನಿಗದಿಪಡಿಸಿಕೊಂಡಿದೆ.
ಬಹುಶಃ ಈ ತರಹದ ಗುರಿ ನಿಗದಿಪಡಿಸುವ ವಿಚಾರಗಳು ಇಂಡಿಯಾದಲ್ಲಿ ಕಷ್ಟ. (ನೆನಪಿಡಿ, ಇಲ್ಲಿ ಗುರಿಯನ್ನು ಕುರಿತು ಮಾತನಾಡುತ್ತಿದ್ದೇನೆ, ಮೀಸಲಾತಿ ಅಥವಾ ಕೋಟಾ ಕುರಿತಾಗಲಿ ಅಲ್ಲ). ಇಂಡಿಯಾದಲ್ಲಿ ಜಾತಿ ಅನ್ನುವುದು ತುಂಬಾ ಸೂಕ್ಷ್ಮವಾದ ಸಂಗತಿ. ಈ ದೇಶಕ್ಕೆ ಈಗ ಒಂದು ಸಾಮಾಜಿಕ ಅಕೌಂಟೆಬಲಿಟಿ ನಡೆಸುವ ಸಂಸ್ಥೆಯೊಂದರ ಅಗತ್ಯವಿದೆ. ಇದಕ್ಕೆ ದೊಡ್ಡ ಸಂಸ್ಥೆಯ ಅಗತ್ಯವಿದೆ. ಇಂಡಿಯಾದ ಸುದ್ದಿಮನೆಗಳಲ್ಲಿನ ಭಿನ್ನತೆ ಅಂದರೆ ಇಲ್ಲಿರುವ ದಲಿತರು, ಮುಸ್ಲಿಮರು ಮತ್ತು ಮಹಿಳೆಯರ ಸಂಖ್ಯೆಗಳನ್ನು ಒಟ್ಟುಗೂಡಿಸಿ ಲೆಕ್ಕಹಾಕಬೇಕಿದೆ. ಅನೇಕ ಮಾಧ್ಯಮ ಸಂಸ್ಥೆಗಳು ಇದನ್ನು ಖಂಡಿತ ಒಪ್ಪಲಾರವು. ಬೇಕಿದ್ದರೆ ಜಾತಿವಾರು ಪತ್ರಕರ್ತರ ಮಾಹಿತಿ ನೀಡಿದ ಮತ್ತು ನೀಡದ ಮಾಧ್ಯಮ ಸಂಸ್ಥಗಳ ಕುರಿತು ಸಾಮಾಜಿಕ ಆಡಿಟಿಂಗ್ ನಡೆಯಲಿ.
ಪಿರಮಿಡ್ ಆಕಾರದಲ್ಲಿರುವ ಇಂಡಿಯಾದ ಸಮಾಜದೊಳಗೆ ನಿಧಾನವಾಗಿಯಾದರೂ ಮಧ್ಯಮ ವರ್ಗವೆಂಬುದು ಬೆಳೆಯುತ್ತಿದೆ. ಪಿರಮಿಡ್ನ ತಳದಲ್ಲಿರುವ ದಲಿತರಿಗೆ ಅವರ ಜಗತ್ತನ್ನು ಅವರದೇ ಕಣ್ಣಿನಿಂದ ಪ್ರಕಟಪಡಿಸಲು ಅಮೆರಿಕಾದ ಎಬೋನಿ, ಎಸ್ಸೆನ್ಸ್ನಂತಹ ಪತ್ರಿಕೆಗಳ ಅಗತ್ಯವಿದೆ. ಈ ಎರಡು ಪತ್ರಿಕೆಗಳು ಕಪ್ಪು ಅಮೆರಿಕಾದ ಯಶಸ್ಸಿನ ಮುಖವಾಣಿಯಾಗಿವೆ.
ಭಾರತೀಯ ಮಾಧ್ಯಮಗಳು ದಲಿತರನ್ನು ಒಳಗೊಳ್ಳದ ಇದೇ ಸಂದರ್ಭದಲ್ಲಿ ದಲಿತಪರ ಕಾಳಜಿಯನ್ನು ಕೇಂದ್ರೀಕರಿಸಿ ನವಯಾನ ಪ್ರಕಾಶನ ಹೊರತರುತ್ತಿರುವ ಅನೇಕ ಪುಸ್ತಕಗಳ ಕುರಿತು ನಾವು ಗಂಭೀರವಾಗಿ ನೋಡಬೇಕಿದೆ. ಈ ತರಹದ ಪ್ರಕಾಶನ ಸಂಸ್ಥೆಗಳು ಮಧ್ಯಮ ವರ್ಗದ ದಲಿತರ ಆಥರ್ಿಕ ಬೆಂಬಲದಿಂದ ಟ್ರಸ್ಟ್ನಂತೆ ಬೆಳೆಯಬೇಕಾದ ಅನಿವಾರ್ಯವಿದೆ. ಆದರೂ ಇಂಥ ಸಂಸ್ಥೆ ಕಟ್ಟಲು ಬರೀ ದಲಿತರ ಹಣವೇ ಸಾಲದು. ತಳ ಸಮುದಾಯಗಳ ಕುರಿತು ನಿಜವಾದ ಪ್ರೀತಿ ಹೊಂದಿರುವ ಎಲ್ಲ ಜಾತಿ ಸಮುದಾಯಗಳಿಂದಲೂ ಹಣ ಸಂಗ್ರಹಿಸಿ, ಸಾಧ್ಯವಾದರೆ ಸಕರ್ಾರದಿಂದ ಹಣದ ಸೌಲಭ್ಯ ಸಿಗುವುದಾದರೆ ಅಲ್ಲಿಂದಲೂ ಪಡೆದು ಅದನ್ನು ಟ್ರಸ್ಟ್ನಲ್ಲಿ ಕಾರ್ಪಸ್ ರೂಪದಲ್ಲಿ ಸಂಗ್ರಹಿಸಿ ಇಡಬೇಕಿದೆ. ಹೀಗೆ ಕೂಡಿಟ್ಟ ಹಣದಿಂದ ಮಾತ್ರ ಪ್ರಕಾಶನದಂತಹ ದೊಡ್ಡ ಸಂಸ್ಥೆಗಳನ್ನು ಕಟ್ಟಲು ಸಾಧ್ಯ.
ಮುದ್ರಣ ಮಾಧ್ಯಮವಾಯಿತು, ಈ ಟಿ.ವಿ. ಮಾಧ್ಯಮಗಳ ಕತೆ ಏನು? 1967ರಲ್ಲಿ ನಾನು ಮೊದಲ ಸಲ ಭಾರತಕ್ಕೆ ಬಂದಿದ್ದೆ. ಆ ಸಂದರ್ಭದಲ್ಲಿ ಟೆಲಿವಿಷನ್ ಮಾಧ್ಯಮದ ಕುರಿತು ಪಶ್ಚಿಮ ಕೆನಡಾದ ಸಣ್ಣ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದೆ. ಅಷ್ಟೊತ್ತಿಗಾಗಲೇ ನಾನು ಕೆನಡಾ ಮತ್ತು ಅಮೆರಿಕಾದ ಅನೇಕ ಟಿ.ವಿ. ಕಾರ್ಯಕ್ರಮಗಳನ್ನು ನೋಡಿದ್ದೆ. ಆಗ ಕಪ್ಪು ಮುಖಗಳೇ ನನಗೆ ಟಿ.ವಿ.ಯಲ್ಲಿ ಕಾಣಲಿಲ್ಲ. 1970ರಲ್ಲಿ ನಾನು ಉತ್ತರ ಅಮೆರಿಕಾಗೆ ಹಿಂತಿರುಗಿದಾಗ ಫ್ಲಿಪ್ ವಿಲ್ಸನ್ ಎಂಬ ಆಫ್ರಿಕನ್-ಅಮೆರಿಕನ್ ಹಾಸ್ಯ ಕಲಾವಿದ ಟಿ.ವಿ. ಶೋಗಳಲ್ಲಿ ಬಹಳ ಜನಪ್ರಿಯನಾಗಿರುವುದನ್ನು ಕಂಡೆ. ಮುಂದೆ ಅಮೆರಿಕಾ ನೆಲದಲ್ಲೇ ಅನೇಕ ನಾಟಕೀಯ ಬೆಳವಣಿಗೆಗಳು ನಡೆದವು. ಕಪ್ಪು ಜನರನ್ನು ಟಿ.ವಿ.ಯಲ್ಲಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅಮೆರಿಕಾ ದೇಶವೇ 38 ವರ್ಷಗಳ ನಂತರ ಕಪ್ಪು ಜನಾಂಗಕ್ಕೆ ಸೇರಿದ ಅಧ್ಯಕ್ಷನನ್ನು ಪಡೆಯಿತು.
ಇಂಡಿಯಾದ ಟಿ.ವಿ. ಚಾನಲ್ಗಳಲ್ಲಿ ದಲಿತರು ಯಾವುದಾದರೂ ಕಾರ್ಯಕ್ರಮದ ನಿರೂಪಕರಾಗಿ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದ್ದಾರೆಯೇ? ನನ್ನ ಸಂಪರ್ಕದಲ್ಲಿದ್ದ ಅನೇಕರನ್ನು ವಿಚಾರಿಸಿದೆ. ಇಲ್ಲ ಎಂಬ ಉತ್ತರ ಬಂತು. ಮಾಧ್ಯಮಗಳು ದಲಿತರನ್ನು ಮುಟ್ಟಿಸಿಕೊಂಡ ದಿನ ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತೆಂದೇ ಅರ್ಥ.
ನನಗನ್ನಿಸುತ್ತಿದೆ ಆಫ್ರಿಕನ್-ಅಮೆರಿಕನ್ ಕಪ್ಪು ಜನ ತುಳಿದ ಕಷ್ಟದ ಹಾದಿಗಿಂತಲೂ ಇಂಡಿಯಾದಲ್ಲಿ ದಲಿತರ ಹಾದಿ ಕಡುಕಷ್ಟದಲ್ಲಿದೆ. ಇಲ್ಲಿ ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾಣುವುದು ಅಷ್ಟ ಸಲೀಸಲ್ಲ. ಇಲ್ಲಿ ಎಲ್ಲವೂ ಛಿದ್ರಗೊಂಡಿದೆ, ದಲಿತರಿಗೆ ಇಲ್ಲಿ ದಕ್ಕುವ ಸಂಪನ್ಮೂಲ ಕಮ್ಮಿಯಾದರೆ ತಾರತಮ್ಯ ಮುಗಿಲು ಮುಟ್ಟಿದೆ. ಸಂವಿಧಾನದ ಆಶಯಗಳು ಅಷ್ಟು ಸುಲಭವಾಗಿ ಜಾರಿಯಾಗಲಾರವೇನೋ. ಸಾಮಾಜಿಕ ನ್ಯಾಯದ ಮೇಲೆ ರಾಷ್ಟ್ರದ ಸ್ವ-ಹಿತಾಸಕ್ತಿಗಳು ನಿಂತರೆ ಮಾತ್ರ ಮಾಧ್ಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ದಲಿತರನ್ನು ನಾವೆಲ್ಲ ಕಾಣಬಹುದೇನೋ.

ನಮ್ಮ ಗುರು ಭೀಮಣ್ಣ (ಬಿ.ಎನ್.ಆರ್)


ಬಿ.ಎನ್.ಆರ್ ಎಂಬ ಹೆಸರಿನೊಂದಿಗೆ ಪ್ರಖ್ಯಾತಿಯನ್ನು ಹೊಂದಿರುವ ಅಣ್ಣ ಭೀಮಣ್ಣ ಅವಕಾಶವಾದಿತನವನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಇಂದು ಅಧಿಕಾರಿಶಾಹಿಯ ಹಲವು ಹಂತಗಳನ್ನು ದಾಟಿ ನಿಂತಿರುತ್ತಿದ್ದರು. ತತ್ವ ಸಿದ್ದಾಂತದ ಮೇಲೆ ಅಗಾಧವಾದ ನಂಬಿಕೆಯನ್ನಿಟ್ಟುಕೊಂಡು ಚಳವಳಿಯನ್ನು ಕಟ್ಟಿದರು. ಆದರೆ, ಅವರಲ್ಲಿದ್ದ ತತ್ವ ಸಿದ್ದಾಂತಗಳು ಎಲ್ಲಿಯೂ ರಾಜಿ ವ್ಯವಸ್ಥೆಯನ್ನು ಬಯಸಿಲ್ಲ. ಅದು ಒರ್ವ ಹೋರಾಟಗಾರನ ದೂರದೃಷ್ಟಿಯನ್ನು ಎತ್ತಿ ತೋರಿಸುತ್ತದೆ.
ಉತ್ತರ ಕನರ್ಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಸಂಘವನ್ನು ಪರಿಚಯಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ. ವಿದ್ಯಾಥರ್ಿ ದೆಸೆಯಿಂದ ಹೋರಾಟಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಭೀಮಣ್ಣನವರು ಹತ್ತಾರು ಮಂತ್ರಿ, ಮಹನೀಯರನ್ನು, ನಾಯಕರನ್ನು ಹಾಗೂ ಸಾಹಿತಿಗಳನ್ನು ಬೆಳೆಸಿದ್ದಾರೆ.
70 ಕಾಲಘಟ್ಟದಲ್ಲಿ ಚಳವಳಿ ಕಟ್ಟಿದ ನಾಯಕರಲ್ಲಿ ಭೀಮಣ್ಣ ಕೂಡ ಒಬ್ಬರು. ರಾಯಚೂರು ಜಿಲ್ಲೆಯಿಂದ ಧಾರವಾಡಕ್ಕೆ ವಿದ್ಯಾಬ್ಯಾಸಕ್ಕೆಂದೆ ಹೋದವರು. ಸರಿಯಾಗಿ ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದರೆ, ಎಸಿ ಅಥವಾ ಡಿಸಿ ಆಗಬಹುದಿತ್ತು!. ಅಂತಹ ಬುದ್ಧಿಮಟ್ಟ ಅವರಲ್ಲಿತ್ತೆಂದು ಅವರನೇಕ ಆಗಿನ ಸಹಪಾಠಿಗಳು ಹೇಳುತ್ತಾರೆ.
ಪದವಿ ಹಂತದಲ್ಲಿ ಅಪರಾಧಶಾಸ್ತ್ರವನ್ನು ಮುಖ್ಯವಿಷಯವನ್ನಾಗಿ ತೆಗೆದುಕೊಂಡು ಅಭ್ಯಸಿಸಿದ ಭೀಮಣ್ಣನವರಿಗೆ ಧಾರವಾಡದ ಹಾಸ್ಟೇಲ್ಗಳಲ್ಲಿ ದಲಿತ ಚಳವಳಿಗಳ ಪರಿಚಯವಾಯಿತು. ನಂತರ ಅವರು ಶಿಕ್ಷಣಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡದೇ, ದಲಿತ ಸಂಘವನ್ನು ಕಟ್ಟಲು ರಾಜ್ಯಾಧ್ಯಂತ ಪ್ರವಾಸ ಮಾಡಿದರು.
ಭೀಮಣ್ಣನವರ ಪರಿಶ್ರಮದ ಭಾಗವಾಗಿ ಉತ್ತರ ಕನರ್ಾಟಕದಲ್ಲಿ ದಲಿತ ಚಳವಳಿ ಪ್ರಬಲವಾಗಿ ಬೆಳೆಯಿತು! ರಾಯಚೂರು ಜಿಲ್ಲೆಯ ಹೀರೆನಗನೂರು ಗ್ರಾಮದ ಇವರು ಕೊನೆಗೆ ಎಲ್.ಎಲ್.ಬಿ ತನಕ ಓದಿ ವಿದ್ಯಾಭ್ಯಾಸಕ್ಕೆ ಪೂರ್ಣ ವಿರಾಮ ಹೇಳಿದರು.
ಮುಂದೆಲ್ಲ ಓದುವ ಅವಕಾಶಗಳು ಇದ್ದರೂ ಕೂಡ, ಸಂಘಟನೆಯ ಕಡೆ ಹೆಚ್ಚಿನ ಒಲವು ಕೇಂದ್ರಿಕರಿಸದ್ದರಿಂದ ಚಳವಳಿಗಳನ್ನು ಕಟ್ಟುವಲ್ಲಿ ತಮ್ಮ ಜೀವನವನ್ನು ಮೀಸಲಿಟ್ಟರು. ಮಾಕ್ಸರ್್, ಲೆನಿನ್, ಮಾವೋ ವಿಚಾರಗಳನ್ನು ಸಂಪೂರ್ಣವಾಗಿ ಅಥರ್ೈಸಿಕೊಂಡರು. ವ್ಯವಸ್ಥೆಯಲ್ಲಿ ಮೇಲು-ಕೀಳು ಎಂಬ ಭಾವನೆ ಹೋಗಿ ದುಡಿಯುವ ವರ್ಗದ ಕೈಗೆ ಅಧಿಕಾರ ಬರಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ವ್ಯವಸ್ಥೆಯನ್ನು ಮಾಕ್ಸರ್್ವಾದಿ ನೆಲಗಟ್ಟಿನಲ್ಲಿ ಕಟ್ಟಲು ಸಿದ್ದರಾಗಬೇಕೆಂದು ಭಾವಿಸಿದರು. ನಂತರದ ದಿನಗಳಲಿ ಎಡಪಂಥೀಯ ವಿಚಾರಧಾರೆಯ ಹಲವು ಮಜಲುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜನಸಾಮಾನ್ಯರಲ್ಲಿ ಅತಿಸಾಮಾನ್ಯರಂತಿದ್ದು, ಮದುವೆ, ಮನೆ ಕುಟುಂಬ ತದಿತ್ಯಾದಿಗಳನ್ನು ಮಾಡಿಕೊಂಡರು.
ಇಂದು ಇವರ ನಾಯಕತ್ವದಲ್ಲಿ ಪಳಗಿದ ಅದೆಷ್ಟೋ ಶಿಷ್ಯಂದಿರು ಮಂತ್ರಿಗಳಾಗಿದ್ದಾರೆ. ಸಮಾಜದ ಆಯಾಕಟ್ಟಿನ ಸ್ಥಳಗಳಲ್ಲಿ ಉತ್ತಮವಾದ ಸ್ಥಾನಮಾನಗಳನ್ನು ಹೊಂದಿದ್ದಾರೆ.
ಹನುಮಂತಪ್ಪ ಆಲ್ಕೋಡ ಎಂಬುವವರು ಭೀಮಣ್ಣನವರ ಗರಡಿಮನೆಯಲ್ಲಿ ಪಳಗಿಯೇ ಮಂತ್ರಿಯಾಗಿದ್ದು, ಜೀವಂತ ಸಾಕ್ಷಿ. ಮಂತ್ರಿಯಾದ ಹಲವು ಸಂದರ್ಭಗಳಲ್ಲಿ ನಮ್ಮ ಗುರು ಭೀಮಣ್ಣ, ನಾನು ಈ ಹಂತಕ್ಕೆ ಬರಲು ಭೀಮಣ್ಣನವರ ಮಾರ್ಗದರ್ಶನ ಬಹಳ ಮುಖ್ಯವೆಂದು ಹೇಳಿದ್ದನ್ನು ನಾವಿಲ್ಲಿ ಉಲ್ಲೇಖಿಸಬಹುದು.
ಕನರ್ಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೋ|| ಬಿ.ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಚಳುವಳಿಯನ್ನು ಕಟ್ಟಿದ ಭೀಮಣ್ಣನವರು ಮೊದಲಿಗೆ ಹೇಳಿದಂತೆ ಅವಕಾಶವಾದಿ ರಾಜಕಾರಣವನ್ನು ತುಳಿಯದೇ, ರಾಮಕೃಷ್ಣ ಹೆಗಡೆಯಂತ ಮುಖ್ಯಮಂತ್ರಿಗಳಿಗೆ ಹೋರಾಟಗಳಲ್ಲಿ ಬೆವರಿಳಿಸಿದರು. ಒಮ್ಮೆ ಧಾರವಾಡಕ್ಕೆ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ಭೇಟಿ ನೀಡಿದಾಗ ಭೀಮಣ್ಣನವರು ತಮ್ಮ ನಾಯಕತ್ವದಲ್ಲಿ ಪ್ರಧಾನಿಯವರಿಗೆ  ಘೇರಾವ್ ಹಾಕಿ ಪ್ರಶ್ನೆಗಳನ್ನು ಕೇಳಿದಾಗ ನರಸಿಂಹರಾವ್ರವರು ಉತ್ತರಗಳನ್ನು ಹೇಳಲು ಚಡಪಡಿಸಿದ್ದು, ಯಾರು ಮರೆಯುವಂತಿಲ್ಲ. ನಂತರ ಪಿ.ವಿ.ಎನ್ ತಮ್ಮ ಕನರ್ಾಟಕ ಪ್ರವಾಸದ ಹಲವು ಭಾಗಗಳಲ್ಲಿ ಭೀಮಣ್ಣನವರ ಬೇಡಿಕೆಗಳ ಕುರಿತೇ ಮಾತನಾಡಿದ್ದು ಈಗ ಇತಿಹಾಸ.
ಇಂದಿಗೂ ಕೂಡ ಕೆಲವು ಹಿರಿಯ ಐಎಎಸ್, ಕೆ.ಎ.ಎಸ್ ಶ್ರೇಣಿಯ ಅಧಿಕಾರಿಗಳು ಭೀಮಣ್ಣನವರ ಹೆಸರು ಕೇಳಿದರೆ, ಒಂದು ಕ್ಷಣ ದಂಗಾಗುತ್ತಾರೆ. ಹೆಸರಾಂತ ಸಾಹಿತಿಗಳೆನೆಸಿಕೊಂಡವರು ಕೂಡ ಇದರಿಂದ ಹೊರತಾಗಿಲ್ಲ.
ವ್ಯವಸ್ಥೆಯನ್ನು ಆಥರ್ಿಕ ದೃಷ್ಟಿಕೋನದಿಂದ ನೋಡುವ ಭೀಮಣ್ಣನವರು ಸಿದ್ದಾಂತ, ತತ್ವದ ಚಚರ್ೆ ಬಂದಾಗ ಎಲ್ಲಿಯೂ ರಾಜಿ ಮಾಡಿಕೊಳ್ಳುವುದಿಲ್ಲ. ವಿಚಾರ ಸಂಕೀರ್ಣ, ಗೋಷ್ಟಿಗಳಲ್ಲಿ ಭಾಗವಹಿಸುವ ಭೀಮಣ್ಣನವರು ಕೆಲವೊಂದು ಪ್ರಶ್ನೆಗಳನ್ನು ಎತ್ತಿದಾಗ ವೇದಿಕೆಗಳಲ್ಲಿ ಉತ್ತರವೇ ಸಿಗುವುದಿಲ್ಲ. ಪಕ್ಕಾಮಾಕರ್ಿಸ್ಟ್ ಆದ ಇವರು ಹಲವು ನಕಲಿ ಮಾಕರ್ಿಸ್ಟ್ ಮಂದಿಗೆ ಸಮಯ ಸಿಕ್ಕಾಗಲೆಲ್ಲ ಕ್ಲಾಸು ತೆಗೆದುಕೊಳ್ಳುತ್ತಿರುತ್ತಾರೆ. ಇಂದು ಸಂಘ ಕಟ್ಟುವ ಮಂದಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಾರೆ.
ಇವರ ಶಿಷ್ಯ ಬಳಗ ಸಾಕಷ್ಟಿದ್ದು, ಹಲವರು ಇವರ ಮಾರ್ಗದಲ್ಲಿಯೇ ಮುನ್ನಡೆದರೆ, ಕೆಲವರು ಅವಕಾಶವನ್ನು ಬಳಸಿಕೊಂಡು ಬೇರೆಯ ಹಾದಿ ತುಳಿದಿದ್ದಾರೆ. ಕವಲು ಹಾದಿ ತುಳಿದವನಿಗೆ ಬೆಲೆ ಕೊಡುವ ಈ ಸಮಾಜ ಭೀಮಣ್ಣನವರ ತತ್ವ ಆಚಾರ, ವಿಚಾರಕ್ಕೆ ಎಂದು ಮಾನ್ಯ ಮಾಡುವುದಿರುವುದು ವ್ಯವಸ್ಥೆಯ ದುರಂತ.

ಲಿಂಗಸ್ಗೂರು ಕ್ಷೇತ್ರಕ್ಕೆ ಬಿ.ಎನ್.ಆರ್
ಮೀಸಲು ಕ್ಷೇತ್ರವಾದ ಲಿಂಗಸ್ಗೂರಿನಲ್ಲಿ ಈ ಬಾರಿ ಬಹುಜನ ಸಮಾಜ ಪಕ್ಷವು ಭೀಮಣ್ಣನವರನ್ನು ಕಣಕ್ಕಿಳಿಸಲು ಯೋಚಿಸಿದೆ ಎಂಬ ಮಾಹಿತಿ ಎಲ್ಲೆಡೆ ಹರಡಿದೆ. ಭೀಮಣ್ಣನವರು ಕಣಕ್ಕಿಳಿಯಲಿದ್ದಾರೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಒಂದು ಕ್ಷಣ ನಡುಕ ಉಂಟಾಗಿದೆ.
ಇಂದು ಹಣಕೊಟ್ಟು ಅಭಿಮಾನಿಗಳನ್ನು ಖರೀದಿ ಮಾಡುವ ಮಂದಿ ಸಾಕಷ್ಟಿದೆ. ಆದರೆ, ಲಿಂಗಸ್ಗೂರು ಮೀಸಲು ಕ್ಷೇತ್ರದ ಪ್ರಮುಖ ಕೇಂದ್ರಗಳಾದ ಹಟ್ಟಿ, ಗುರುಗುಂಟಾ, ಲಿಂಗಸ್ಗೂರು, ಗೆಜ್ಜಲಗಟ್ಟಾ ಭಾಗಗಳಲ್ಲಿ ಭೀಮಣ್ಣನವರಿಗಿರುವಷ್ಟು ಜನಮನ್ನಣಿ ಬೇರೆ ಪಕ್ಷದ ನಾಯಕರಿಗೆ ಇಲ್ಲ! ಇಲ್ಲಿ ಭೀಮಣ್ಣನವರ ಬಳಿ ಹಣವಿಲ್ಲವೆಂಬುದೊಂದೆ ಕೊರತೆ. ಚುನಾವಣಿಗೆ ಬೇಕಾಗುವ ಹಣದ ಕೊರತೆಯನ್ನು ನೀಗಿಸಲು ಕೆಲವು ಪ್ರಗತಿಪರರು ಮುಂದೆ ಬಂದಿದ್ದಾರೆ.
ಈ ಲೆಕ್ಕಾಚಾರದ ಮೇಲೆಯೇ ಬಹುಜನಸಮಾಜ ಪಕ್ಷವು ಲಿಂಗಸ್ಗೂರು ಕ್ಷೇತ್ರದ ಮೇಲೆ ತನ್ನ ಕಾರ್ಯತಂತ್ರವನ್ನು ಎಣಿಯಲು ಸಿದ್ದವಾಗುತ್ತಿದೆ. ಬಿ.ಎಸ್.ಪಿಯ ಬಾಮ್ಸೇಪ್ ತಂಡವು ಕೂಡ ಈ ನಿಟ್ಟಿನಲ್ಲಿಯೇ ತಾಲ್ಲೂಕಿನಲ್ಲಿ ಒಂದೆರಡು ತಿಂಗಳುಗಳಿಂದ ಬೀಡುಬಿಟ್ಟಿದ್ದು, ಎಲ್ಲರ ಕಡೆಯಿಂದ ಗುಪ್ತಚರ ಮಾಹಿತಿಯನ್ನು ಕಲೆಹಾಕುತ್ತಿದೆ!
ಚುನಾವಣಿ ವ್ಯವಸ್ಥೆಯಲ್ಲಿ ಹಣ ನಡೆಯುತ್ತಿರುವುದು ಕಳವಳಕಾರಿಯಾದರೂ, ಅದುವೇ ಎಲ್ಲವನ್ನು ಗೆಲ್ಲಿಸುತ್ತದೆ ಎಂಬುದು ಸುಳ್ಳು. ಜನರನ್ನು ರಾಜಕೀಯವಾಗಿ ತಯಾರಿಸುವ ಕೆಲಸ ಕೆಲವೊಂದು ಸಂಘಟನೆಗಳು ಈಗಾಗಲೇ ಮಾಡುತ್ತಿವೆ. ಜನರು ರಾಜಕೀಯವಾಗಿ ತಯಾರಾದಾಗ ಹಣ, ಹೆಂಡ ಕೆಲಸಕ್ಕೆ ಬರುವುದಿಲ್ಲ.
ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಮತದಾರರು ಹೇಗೆ ಸನ್ನಧ್ದರಾಗುತ್ತಿದ್ದಾರೋ, ಅದರಂತೆ ಲಿಂಗಸ್ಗೂರಿನಲ್ಲಿಯೂ ಕೂಡ ಹಣವಂತ ರಾಜಕಾರಣಿಗಳನ್ನು ದೂರವಿಡಲು ಕಾರ್ಯತಂತ್ರಗಳು ಸಿದ್ದವಾಗುತ್ತಿವೆ. ಭೀಮಣ್ಣನವರಿಗೆ ಅವರ ಅಭಿಮಾನಿಗಳು ಚುನಾವಣಿಯಲ್ಲಿ ಸ್ಪಧರ್ಿಸಲು ಒತ್ತಡ ಹೇರುತ್ತಿದ್ದಾರೆ. ಭೀಮಣ್ಣನವರ ವಿಚಾರದಿಂದ ಪ್ರೇರೆಪಿತಗೊಂಡ ಯುವಕರು ಕಾರ್ಯಪಡೆಯಾಗಿ ಕೆಲಸ ಮಾಡಲು ಸಿದ್ದರಾಗಿದ್ದಾರೆ.
ಹಣವೊಂದಿದ್ದರೆ ಸಾಕು ಲಿಂಗಸ್ಗೂರು ಕ್ಷೇತ್ರವನ್ನು ಖರೀದಿ ಮಾಡಬಹುದೆಂದು ಹಲವರು ತಿಳಿದು, ಹತ್ತಾರು ಕೋಟಿಗಳನ್ನು ಈಗಾಗಲೇ ಅಭಿಮಾನಿಗಳ ಬಳಗ, ಒಕ್ಕೂಟ, ಸಾಮೂಹಿಕ ವಿವಾಹಗಳ ಹೆಸರಲ್ಲಿ ಖಚರ್ು ಮಾಡುತ್ತಾ ಅಭಿಮಾನಿಗಳ ದಂಡನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅತಿಥಿಗಳಂತೆ ತಾಲ್ಲೂಕಿಗೆ ಭೇಟಿಕೊಟ್ಟು ಉತ್ತಮ ಸಂಭಂಧವನ್ನು ಹೊಂದುವ ಪ್ರಯತ್ನ ಮಾಡುತ್ತಿದ್ದಾರೆ.
ನಾಡಿನ ಶ್ರೇಷ್ಟ ಚಿಂತಕರಲ್ಲಿ ಒಬ್ಬರಾದ ಭೀಮಣ್ಣನವರ ಗುರುಗಳಾದ ದಿವಂಗತ ಆರ್.ಶಿವಪುತ್ರಪ್ಪ ಭೇರಿಯವರು ಈ ಸಂದರ್ಭದಲ್ಲಿ ಇದ್ದರೆ, ಈ ಬಾರಿಯ ಚುನಾವಣಿಯ ಮಹತ್ವವೇ ಬೇರೆಯಾಗುತ್ತಿತ್ತು. ದುರಾದೃಷ್ಟಕ್ಕೆ ಶಿವಪುತ್ರಪ್ಪನವರು ನಮ್ಮೊಂದಿಗಿಲ್ಲ. ಆದರೆ, ಅವರ ವಿಚಾರ ತತ್ವಗಳು ನಮ್ಮೊಂದಿಗಿದ್ದು, ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆದರೆ ಸಾಕು. ಎಲ್ಲವು ಸರಿಹೋಗುತ್ತದೆ.
ಲಿಂಗಸ್ಗೂರು ತಾಲ್ಲೂಕಿನ ಪ್ರಜ್ಞಾವಂತ ಜನರು ಈ ಬಾರಿಯ ಚುನಾವಣಿಯನ್ನು ತಮ್ಮ ಪ್ರತಿಷ್ಟೆಯಾಗಿ ಸ್ವೀಕರಿಸಿ, ಹಣ-ಹೆಂಡ-ಬಟ್ಟೆ ಕೊಡುವವನನ್ನು ದೂರವಿಟ್ಟು, ಉತ್ತಮ ಆಡಳಿತಗಾರನನ್ನು ಆಯ್ಕೆಮಾಡಿಕೊಳ್ಳಬೇಕಾದದ್ದು ಅನಿವಾರ್ಯವಾಗಿದೆ.
ಅವಕಾಶವಾದಿತನಕ್ಕೆ ಬಲಿಯಾಗಿ ಕಳೆದ ಚುನಾವಣಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಅನುಭವಿಸಿರುವ ನೈಜ ಘಟನೆಗಳು ಇನ್ನೂ ಹಸಿಹಸಿಯಾಗಿವೆ.
ಆದ್ದರಿಂದ ನಿಮ್ಮ ಮತಕ್ಕೆ ದೇಶ ಬದಲಾವಣಿ ಮಾಡುವ ಶಕ್ತಿ ಇದೆ. ಅಂತಹ ಮತವನ್ನು ಅನ್ಯದಕ್ಕೆ ಮಾರಿಕೊಂಡು ಮತ್ತೈದು ವರ್ಷ ಗುಲಾಮರಾಗಿ ಕುಳಿತುಕೊಳ್ಳುವುದು ಬೇಡ. ಅಂಬೇಡ್ಕರರು ಹೇಳಿರುವಂತೆ ಈ ದೇಶವನ್ನು ಬಹುಜನರು ಆಳಬೇಕಾಗಿದೆ. ಇದು ಬಹುಜನರ ದೇಶ. ಇಲ್ಲಿ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಸಂವಿಧಾನವಿಲ್ಲ. ಬ್ರಹತ್ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ಭಾರತದಲ್ಲಿ ಒಮ್ಮೆಯಾದರೂ, ಬಹುಜನರನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ. ಜಯ ಸಿಕ್ಕೇ ಸಿಗುತ್ತದೆ.

ಹೀಗೊಂದು ಮದುವೆ..


ಕಡೇನಂದಿಹಳ್ಳಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಒಂದು ಕುಗ್ರಾಮ. ಹತ್ತಿರಹತ್ತಿರ ಐನೂರು ಮನೆಗಳಿರುವ ಈ ಹಳ್ಳಿಯಲ್ಲಿ ದ್ವಾರದಲ್ಲೇ ಸುಮಾರು ನೂರು ವರ್ಷದಷ್ಟು ಹಳೆಯದಾದ ಪುಟ್ಟ ಶಾಲೆ ಇದೆ. ಈಗ ಈ ಹಳ್ಳಿಯ ಎಲ್ಲರ ಕೈಗಳಿಗೆ ಮೊಬೈಲ್ ಫೋನ್ಗಳು ಬಂದಿದ್ದರೂ ಹಳ್ಳಿಗೆ ಇಲ್ಲಿಯ ತನಕ ಒಂದು ಆಲೋಪಥಿಕ್ ಆಸ್ಪತ್ರೆ ಬಂದಿಲ್ಲ.
ಹಳೆ ಮೈಸೂರು ಸಂಸ್ಥಾನದ ಕೊನೆ ಹಳ್ಳಿಯಾಗಿದ್ದ ಕಡೇನಂದಿಹಳ್ಳಿ ತನ್ನ ಚಹರೆಯಲ್ಲಿ ನಮ್ಮ ಬಹಳಷ್ಟು ಹಳ್ಳಿಗಳಂತೆಯೇ ಇದೆ. ಉದಾಹರಣೆಗೆ ಕೆಟ್ಟದಿಕ್ಕು ಎಂದೇ ಪರಿಗಣಿಸಲಾಗುವ ದಕ್ಷಿಣಕ್ಕೆ ದಲಿತರ ಕೇರಿ ಇದೆ. ಇದಾದ ನಂತರ ಮಧ್ಯಮ ಜಾತಿಗಳ ಕೇರಿ. ಅದಾದನಂತರವೇ ಮೇಲು ಜಾತಿಯ ಲಿಂಗಾಯತರ ಮನೆಗಳಿವೆ. ಲಿಂಗಾಯತರ ಕೇರಿಯ ಪಕ್ಕವೇ ಒಂದು ಹಳೇ ದೇವಸ್ಥಾನ ಇದೆ. ಅದೀಗ ಪಾಳು ಬಿದ್ದಿರುವುದರಿಂದ ಅದರ ಪಕ್ಕದಲ್ಲೇ ಒಂದು ಹೊಸ ದೇವಸ್ಥಾನ ನಿಮರ್ಾಣದ ಕೆಲಸ ನಡೆಯುತ್ತಿದೆ. ದೇವಸ್ಥಾನದ ಪಕ್ಕದಲ್ಲೇ ಇರುವ ಶಾಲಾ ಕಟ್ಟಡ ಸುಣ್ಣದ ಮುಖ ನೋಡಿ ಹಲವಾರು ವರ್ಷಗಳೇ ಆಗಿದ್ದರೂ ಅದರ ಹತ್ತಿರವೇ ಕೆತ್ತನೆಗಳನ್ನು ಹೊಂದಿರುವ ಕಲ್ಲಿನ ಗೋಡೆಗಳು ದೇವಸ್ಥಾನಕ್ಕೆಂದು ಸಿದ್ಧವಾಗುತ್ತಿರುವುದು ಕಡೇನಂದಿಹಳ್ಳಿಯ ಮತ್ತೊಂದು ಮುಖವೊಂದನ್ನು ಅನಾವರಣ ಮಾಡುವಂತಿದೆ.
ಸ್ವಲ್ಪ ಎತ್ತರದ ಪ್ರದೇಶದಲ್ಲಿ ಈ ಹಳ್ಳಿ ಇದ್ದು ಇದರ ಸುತ್ತ 32 ಚಿಕ್ಕ ಮತ್ತು ದೊಡ್ಡ ಕೆರೆಗಳಿವೆ. ಪುರಾತನ ಕಾಲದ ಈ ಕೆರೆಗಳನ್ನು ಎಷ್ಟು ವ್ಯವಸ್ಥಿತವಾಗಿ ನಿಮರ್ಿಸಲಾಗಿದೆ ಎಂದರೆ ಒಂದು ಕೆರೆಯ ನೀರು ತುಂಬಿದರೆ ಇನ್ನೊಂದು ಕೆರೆಗೆ ಹೋಗುವಂತೆ ಹಾಗೂ ಊರಿನ ಎಲ್ಲಾ ಕೆರೆಗಳು ತುಂಬಿದ ನಂತರವಷ್ಟೇ ಆ ಊರಿನಲ್ಲಿ ಬಿದ್ದ ಮಳೆನೀರು ಪಕ್ಕದ ಹಿರೇಕೇರೂರಿನ ದುರ್ಗಮ್ಮನ ಕೆರೆಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಏಳನೆ ತರಗತಿ ತನಕ ಇಲ್ಲಿರುವ ಶಾಲೆಯಲ್ಲಿ ಓದಿದ ನೂರಾರು ಹಳ್ಳಿಯ ಹುಡುಗರು ಆನಂತರ ಹತ್ತಿರದ ಪೇಟೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ರಾಜ್ಯದ ವಿವಿಧ ಭಾಗಗಳಲ್ಲಿ ಸಕರ್ಾರಿ ನೌಕರರಾಗಿ, ಇಂಜಿನಿಯರ್ಗಳಾಗಿ, ವೈದ್ಯರಾಗಿ, ಅಧ್ಯಾಪಕರಾಗಿ, ವಕೀಲರಾಗಿ ಬದುಕುತ್ತಿದ್ದಾರೆ.
ನೀರಾವರಿ ಇಲ್ಲದಿರುವುದರಿಂದ ಈ ಹಳ್ಳಿಯ ರೈತಾಪಿಗಳು ಮಳೆಯನ್ನೇ ಆದರಿಸಿದ್ದಾರೆ. ಹೆಚ್ಚಿನವರು ಚಿಕ್ಕ ಹಿಡುವಳಿದಾರರಾಗಿದ್ದು, ಹತ್ತಿ ಮತ್ತು ಮೆಕ್ಕೆ ಜೋಳ ಬೆಳೆಯುತ್ತಾರೆ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ಇದ್ದಾಗ ಈ ಹಳ್ಳಿಯ ಒಂದಿಷ್ಟು ಜನ ರೈತ ಸಂಘದೊಂದಿಗೆ ಗುರುತಿಸಿಕೊಂಡಿದ್ದರೂ ಆ ಸಂಘಟನೆಯ ಪ್ರಗತಿಪರ ಯೋಚನೆಗಳು ಇಲ್ಲಿನ ಬದುಕನ್ನು ತಟ್ಟಲೇ ಇಲ್ಲ. ಇಲ್ಲಿಯ ತನಕ ಯಾವ ಪ್ರಗತಿಪರ ಚಿಂತನೆಯಾಗಲಿ, ಚಳವಳಿಯಾಗಲಿ ಕಡೇನಂದಿಹಳ್ಳಿಯನ್ನು ಪ್ರಭಾವಿಸಲಿಲ್ಲವಾದ್ದರಿಂದ ಇದು ಒಂದು ರೀತಿಯಲ್ಲಿ ಜಗತ್ತಿಗೆ ಇನ್ನೂ ಅಷ್ಟಾಗಿ ತೆರೆದುಕೊಳ್ಳದೇ ಇರುವ ಕುಗ್ರಾಮ ಎಂದರೂ ತಪ್ಪಾಗಲಿಕ್ಕಿಲ್ಲ.
ಇಂತಹ ಒಂದು ಹಳ್ಳಿಯಲ್ಲಿ ಕಳೆದ ವಾರ ಒಂದು ಅಪರೂಪದ ಘಟನೆ ನಡೆಯಿತು. ಅದು ನಮ್ಮ ಕುಮಾರ್ ಬುರಡಿಕಟ್ಟಿ ಮತ್ತು ಗೀತಾ ಸಿ.ಎನ್. ಮಾಡಿಕೊಂಡ ಸರಳ ಮದುವೆ. ಈಗ ಕಡೇನಂದಿಹಳ್ಳಿಯಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಈ ಮದುವೆಯದ್ದೇ ಸುದ್ದಿ!
ಕುಮಾರ್ ಬುರಡಿಕಟ್ಟಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ. (ಈಗ ದ ಸಂಡೇ ಇಂಡಿಯನ್ ಎಂಬ ಪಾಕ್ಷಿಕದಲ್ಲಿ ಅಸೋಸಿಯೇಟ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾನೆ) ನಮ್ಮಂತೆಯೇ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ, ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಯುವಕ. ನಗು ಮುಖದ, ತಮಾಷೆಯ ಕುಮಾರ್ ಕಂಡರೆ ನನಗೆಷ್ಟು ಪ್ರೀತಿ ಅಂದರೆ ನಾನು ಅವನನ್ನು ಕೂಸೆ ಎಂದು ಕರೆದರೆ ಆತ ನನ್ನನ್ನು ಟಠಟ ಎಂದು ಕರೆಯುತ್ತಾನೆ.
ಇಂತಹ ಕುಮಾರ್ಗೆ ಮದುವೆ ಮಾಡಲು ಅವನ ಸಹೋದರರು ನಿರ್ಧರಿಸಿದರು. ಆಗ ಕುಮಾರ್ ಹಾಕಿದ ಷರತ್ತುಗಳು ಹುಡುಗಿಯ ಮನೆಯವರು ವರದಕ್ಷಿಣೆ ಕೊಡಬಾರದು ಮತ್ತು ಸರಳ ಮದುವೆಗೆ ಒಪ್ಪಬೇಕು ಎಂಬುದು.
ಈಗ ನಮ್ಮ ಸಮಾಜದಲ್ಲಿ ಈ ವರದಕ್ಷಿಣೆ ಎಂಬ ಪಿಡುಗು ಯಾವ ಮಟ್ಟಕ್ಕೆ ಹಬ್ಬಿದೆ ಎಂದರೆ ಪ್ರಗತಿಪರ ಯುವಕನೊಬ್ಬ ತನಗೆ ವರದಕ್ಷಿಣೆ ಬೇಡವೆಂದರೆ ಆತನಲ್ಲಿ ಏನೋ ಐಬಿದೆ ಎಂದೇ ಹುಡುಗಿಯ ಮನೆಯವರು ಭಾವಿಸಿ ಮದುವೆ ಮಾತುಕತೆಯನ್ನೇ ನಿಲ್ಲಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ವರದಕ್ಷಿಣೆ ಮಾತ್ರವಲ್ಲ, ಹೆಚ್ಚಿನ ಜನ ಒಪ್ಪದೇ ಇರುವ, ಸಾಂಪ್ರದಾಯಿಕ ಮದುವೆಗಳಿಗೆ ಸಿಗುವಷ್ಟು ಸಾಮಾಜಿಕ ಮನ್ನಣೆ ಸಿಗದಿರುವ ಈ ಸರಳ ಮದುವೆ ಆಗಬೇಕೆನ್ನುವ ಹುಡುಗನಿಗೆ ಯಾರು ತಾನೆ ತಮ್ಮ ಮಗಳನ್ನು ಕೊಡಲು ಒಪ್ಪುತ್ತಾರೆ?
ಕುಮಾರನ ಆಶೆಗಳಿಗೆ ಮೊದಲು ಸ್ಪಂದಿಸಿದವರು ಆತನ ಮೂವರು ಸಹೋದರರು. ಹಿರಿಯ ಸಹೋದರ ಬಿ.ಎಚ್. ಬುರಡಿಕಟ್ಟಿ ರಾಣೇಬೆನ್ನೂರಿನಲ್ಲಿ ವಕೀಲರಾಗಿದ್ದು ಪ್ರಗತಿಪರ ಚಿಂತನೆಗಳನ್ನು ಹೊಂದಿರುವವರು. ಎರಡನೆ ಅಣ್ಣ ಕಲ್ಲಪ್ಪ ಕೃಷಿಕರಾಗಿದ್ದರೂ ತಮ್ಮ ಸಹೋದರರು ಸರಿಯಾದದ್ದನ್ನೇ ಮಾಡುತ್ತಾರೆಂಬ ನಂಬಿಕೆ ಇಟ್ಟುಕೊಂಡಿರುವವರು. ಮೂರನೆ ಅಣ್ಣ ರಾಜೇಂದ್ರ. ತೀರ್ಥಹಳ್ಳಿಯಲ್ಲಿ ಶಾಲಾ ಮಾಸ್ಟರ್ ಆಗಿದ್ದು, ಸೂಕ್ಷ್ಮ ಸಂವೇದನೆಯ ಕವಿಯೂ ಆಗಿದ್ದಾರೆ. ಈಗ ತೀರ್ಥಹಳ್ಳಿಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ರಾಜೇಂದ್ರ ಸ್ವತಃ ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದವರು. ಇನ್ನು ಕುಮಾರನ ವಿಧವಾ ತಾಯಿ ವೀರಮ್ಮನವರು ಪುತ್ರರ ಜನಪರ ಚಿಂತನೆಗಳಿಗೆ ಸ್ಪಂದಿಸುವವರು.
ಇಂತಹ ಬುರಡಿಕಟ್ಟಿ ಸಹೋದರರಿಗೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಚೆನ್ನಬಸಪ್ಪ ಮತ್ತು ಲಲಿತಾ ಅವರ ಮಗಳು ಗೀತಾ ಬಗ್ಗೆ ಕುಮಾರ್ ಅವರ ಸಂಬಂಧಿಯೇ ಆಗಿರುವ ಮುದೇನೂರ್ ಮಂಜು ಎಂಬುವವರು ಹೇಳಿದರು. ಅದು ಸಣ್ಣ ಹಿಡುವಳಿ ಹೊಂದಿರುವ ಸಾಮಾನ್ಯ ರೈತ ಕುಟುಂಬ. ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ತಮ್ಮ ಕೈಲಾದಷ್ಟು ವಿದ್ಯೆ ಕೊಡಿಸಿರುವವರು. ಆದರೆ ಸರಳ ಮದುವೆ, ಪ್ರಗತಿ ಪರತೆ, ಇತ್ಯಾದಿಗಳ ಬಗ್ಗೆ ಕಂಡುಕೇಳರಿಯದವರು.
ಚೆನ್ನಬಸಪ್ಪ ದಂಪತಿಗಳಿಗೆ ಮತ್ತು ಅವರ ಪುತ್ರಿ ಗೀತಾಳಿಗೆ ಕುಮಾರ್ ಒಪ್ಪಿಗೆಯಾದ. ಆದರೆ ಕಷ್ಟದ ಕೆಲಸ ಎದುರಾಗಿದ್ದೇ ಆನಂತರ. ರಾಜೇಂದ್ರ ಮತ್ತು ಇತರ ಸಹೋದರರು ಚೆನ್ನಬಸಪ್ಪನವರ ಕುಟುಂಬದವರಿಗೆ ಪುರೋಹಿತಶಾಹಿಗಳು ಇರದಂತಹ, ಮಹೂರ್ತ-ಗಳಿಗೆಗಳನ್ನು ಗಮನಕ್ಕೆ ತೆಗೆದುಕೊಳ್ಳದಂತಹ ಮಂತ್ರ ಮಾಂಗಲ್ಯ ಎಂಬ ಸರಳ ಮದುವೆ ಬಗ್ಗೆ ವಿವರಿಸಿದರು. ಅದಕ್ಕೆ ಒಪ್ಪಿಸಲು ತಿಣುಕಾಡಿದರು. ಬಹಳ ಶ್ರಮ ವಹಿಸಿದ ನಂತರ ಚೆನ್ನಬಸಪ್ಪ ಮತ್ತು ಅವರ ಮಡದಿ ಲಲಿತಮ್ಮ ಒಪ್ಪಿಕೊಂಡರು. ಆದರೆ ಅವರ ಪುತ್ರಿ ಗೀತಾ ತಕರಾರೆತ್ತಿದಳು. ಇದೆಂತಹ ಮದುವೆ? ನನಗೆ ಸರಿಯಾಗಿ ಮದುವೆ ಮಾಡಿಸಿಕೊಡಿ ಎಂದಳು. ಆದರೆ ಚೆನ್ನಬಸಪ್ಪನವರು ಬುರಡಿಕಟ್ಟಿ ಸಹೋದರರು ಹೇಳಿದಂತೆಯೇ ಮದುವೆ ನಡೆಯಲಿ ಎಂದರು.
ಅಷ್ಟು ಸಾಕಾಯಿತು, ಗೀತಾಳ ಊರಲ್ಲಿ ಜನ ಗುಸುಗುಸು ಮಾತನಾಡಿಕೊಳ್ಳಲು. ಹುಡುಗ ವರದಕ್ಷಿಣೆ ಬೇಡ ಅಂದನಂತೆ. ಅವನಲ್ಲಿ ಏನೋ ಐಬು ಇರಬೇಕು. ಮದುವೆಯಲ್ಲಿ ಅಯ್ಯನೋರು ಇರಲ್ಲವಂತೆ. ಅದೇನೋ ಭಾಷಣ ಮಾಡುತ್ತಾರಂತೆ ಎಂದೆಲ್ಲ ಮಾತನಾಡಿಕೊಂಡರು. ಕುಮಾರನ ಹಳ್ಳಿಯಲ್ಲೂ ಅಂತಹದ್ದೇ ಪರಿಸ್ಥಿತಿ. ಆ ದಿನ ಯಾವುದೇ ಮದುವೆ ಮಹೂರ್ತಗಳಿಲ್ಲ. ಯಾವ ಮದುವೆಯೂ ನಡೆಯುತ್ತಿಲ್ಲ. ನೀವು ಹೇಗೆ ಮದುವೆ ಮಾಡುತ್ತಿದ್ದೀರಿ. ಇದೇನು ಲಗ್ನ ಪತ್ರಿಕೆ ಲಗ್ನ ಪತ್ರಿಕೆ ತರ ಇಲ್ಲ? ಇದಕ್ಕೆ ಅರಿಷಿಣ ಹಚ್ಚಿಲ್ಲ? ಸೊಸೈಟಿ ಮೀಟಿಂಗ್ ಆಹ್ವಾನವಿದ್ದಂತಿದೆ. ಮುಹೂರ್ತದ ಬದಲು ಮಾತುಗಾರರ ಹೆಸರುಗಳಿವೆ ಎಂದೆಲ್ಲ ಪ್ರಶ್ನಿಸಲಾರಂಭಿಸಿದರು. ಮದುವೆ ಸಾಂಪ್ರಾದಾಯಿಕ ಮದುವೆಗಳಲ್ಲಾದರೆ ಮೂರು ದಿನ ಮುಂಚಿತವಾಗಿಯೇ ಮದುಮಗನಿಗೆ ಅರಿಷಿಣ ಹಚ್ಚಿ ಹೊರ ಹೋಗದಂತೆ ಕೂರಿಸಿ ಬಿಟ್ಟಿರುತ್ತಾರೆ. ಆದರೆ, ಕುಮಾರ್ ಹಿಂದಿನ ದಿನ ಮಧ್ಯರಾತ್ರಿಯ ತನಕವೂ ಸ್ನೇಹಿತರೊಡಗೂಡಿ ಹೊರಗಡೆ ಸುತ್ತಾಡಿಕೊಂಡು ಕೆಲಸ ಮಾಡುತ್ತಿದ್ದದನ್ನು ಕಂಡು ಜನರಿಗೂ ಮತ್ತೂ ಆಶ್ಚರ್ಯ. ಮದುವೆಯ ಬೆಳಗ್ಗೆಯೂ ಯಾರೋ ಒಬ್ಬರು ಕುಮಾರ, ಇಷ್ಟುಹೊತ್ತಾದರೂ ಓಲಗದವರು ಬಂದಿಲ್ಲವಲ್ಲಾ? ಎಂದು ಕೇಳಿದರು. ಕರೆದಿದ್ದರ ತಾನೆ ಅವರು ಬರೋದು ಎಂದು ಕುಮಾರ್ ಉತ್ತರಿಸಿದಾಗ ಪ್ರಶ್ನೆ ಕೇಳಿದವನಿಗೆ ಇದೆಂತಹ ಮದುವೆ ಎಂದು ಅಚ್ಚರಿ. ಮದುವೆಗಾಗಿ ಊಟ ತಯಾರಿಸುವವರ ಹತ್ತಿರ ಹೋದಾಗಲೂ ಇದೇ ಸಮಸ್ಯೆ. ಮದುವೆಯ ಹಿಂದಿನ ದಿನ ರಾತ್ರಿ ಎಷ್ಟು ಜನರಿಗೆ ಊಟ ರೆಡಿ ಮಾಡಬೇಕು ಎಂಬ ಅವರ ಪ್ರಶ್ನೆಗೆ ಯಾರಿಗೂ ಬೇಡ ಎಂದು ಕುಮಾರ್ ಹೇಳಿದ್ದ. ಅದಕ್ಕೆ ಅವರು ದಿಗ್ಭ್ರಮೆ ಗೊಂಡು ಇದು ಮದುವೆ ಸಮಾರಂಭ ತಾನೆ ಅಂತ ಪ್ರಶ್ನಿಸಿದ್ದರು.
ವಿಧಿ ಇಲ್ಲದೆ ಇಂತಹ ಮದುವೆ ಸಮಾರಂಭಕ್ಕೆ ಒಪ್ಪಿದ್ದ ಗೀತಾ ಕೂಡ ಅದೇನೋ ಮಾಡಕ್ಕೆ ಹೊರಟಿದ್ದೀರಿ. ಇದು ನನಗೆ ಸರಿ ಕಾಣಿಸಲಿಲ್ಲ ಅಂದರೆ ನಾನು ಬೇರೆಯವರಿಗೆ ಇಂತಹ ಮದುವೆ ಸಮಾರಂಭಕ್ಕೆ ಒಪ್ಪಬೇಡಿ ಅಂತ ಹೇಳ್ತೀನಿ ಎಂದು ಪದೇ ಪದೇ ಕುಮಾರನಿಗೆ ಎಚ್ಚರಿಕೆ ನೀಡುತ್ತಿದ್ದಳು.
ಇದೆಲ್ಲದರಿಂದಾಗಿ ಇಡೀ ಕಡೇನಂದಿಹಳ್ಳಿಯಲ್ಲಿ ಕುಮಾರನ ಮದುವೆ ಸಮಾರಂಭ ಕುತೂಹಲವನ್ನು ಕೆರಳಿಸಿತ್ತು. ಹಳ್ಳಿಯಲ್ಲಿ ಒಂದು ಪುಟ್ಟ ಸಮುದಾಯ ಭವನವಿದ್ದರೂ ಬುರಡಿಕಟ್ಟಿ ಕುಟುಂಬದ ಮನೆಯ ಮುಂದೆಯೇ ರಸ್ತೆಗೆ ಬಣ್ಣಬಣ್ಣದ ಶಾಮಿಯಾನ ಹಾಕಿಸಲಾಗಿತ್ತು. ಒಂದು ಕಡೆ ಚಿಕ್ಕ ವೇದಿಕೆ ಇದ್ದರೆ ಇನ್ನೊಂದು ಕಡೆ ಕುಚರ್ಿಗಳನ್ನು ಹಾಕಲಾಗಿತ್ತು. ಹಿಂದಿನ ದಿನವೇ ಮಳೆ ಬಿದ್ದಿದ್ದರಿಂದ ಬಹಳಷ್ಟು ರೈತರಿಗೆ ಬಿತ್ತನೆ ಕೆಲಸ ಕಾದಿತ್ತು. ಆದರೂ ಅವರೆಲ್ಲ ಬೆಳಗ್ಗೆಯೂ ಹೋಗಿ ಹೊಲದಲ್ಲಿ ಆದಷ್ಟು ಕೆಲಸ ಮುಗಿಸಿ ಮದುವೆ ನೋಡಲು ಬಂದಿದ್ದರು. ಮಹಿಳೆಯರಂತೂ ತಮ್ಮ ಕುಚರ್ಿಗಳಲ್ಲಿ, ಮನೆ ಜಗುಲಿಯ ಮೇಲೆ ಕಿಕ್ಕಿರಿದಿದ್ದರು.
ರಾಜೇಂದ್ರ ಬುರಡಿಕಟ್ಟಿ ಈ ಸರಳ ಮದುವೆಯ ಬಗ್ಗೆ ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದರು. ಈ ಸಮಾರಂಭಕ್ಕೆಂದು ಬಂದಿದ್ದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪನವರು ಚಾಲನೆ ನೀಡಿದರು. ಮೂವತ್ತು ವರ್ಷಗಳ ಹಿಂದೆ ತಾವು ಉದ್ದೇಶಪೂರ್ವಕವಾಗಿಯೇ ರಾಹುಕಾಲದಲ್ಲಿ ಸರಳ ಮದುವೆ ಆದಾಗ ಪುರೋಹಿತರು ತಮಗೆ ಮಕ್ಕಳಾಗುವುದಿಲ್ಲ ಎಂದು ಹೆದರಿಸಲು ಪ್ರಯತ್ನಿಸಿದರು ಎಂದೂ, ಆದರೂ ತಾವೀಗ ಮೂವರು ಅದ್ಭುತ ಮಕ್ಕಳಿಗೆ ತಂದೆಯೆಂದೂ, ಮಡದಿ-ಮಕ್ಕಳೊಂದಿಗೆ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂದು ಹೇಳುವ ಮೂಲಕ ವೀರಭದ್ರಪ್ಪನವರು ಮುಹೂರ್ತ, ಒಳ್ಳೆ ಗಳಿಗೆ ಎಂಬಂತಹ ಮೂಢ ನಂಬಿಕೆಗಳ ವಿರುದ್ಧ ಎಚ್ಚರಿಕೆ ಮೂಡಿಸಿದರು. ಶಿವಸುಂದರ್, ಡಾ.ವಿ.ಎಸ್.ಶ್ರೀಧರ, ಪಾರ್ವತೀಶ ಮತ್ತು ನಾನು ಎಲ್ಲರೂ ಸರಳ ಮದುವೆಗಳ ಅವಶ್ಯಕತೆ, ಇತ್ಯಾದಿಗಳ ಬಗ್ಗೆ ಮಾತನಾಡಿದೆವು. ಇಂತಹ ಸಮಾರಂಭಕ್ಕೆ ಒಪ್ಪಿದ ಚೆನ್ನಬಸಪ್ಪ, ಅವರ ಪತ್ನಿ ಲಲಿತಮ್ಮ ಮತ್ತು ಮಗಳು ಗೀತಾಳಿಗೆ ನಮ್ಮ ಅಭಿನಂದನೆಗಳನ್ನು ಹೇಳುವುದನ್ನು ಮರೆಯಲಿಲ್ಲ.
ಕುಮಾರ್ ಮತ್ತು ಗೀತಾ ಮಂತ್ರ ಮಾಂಗಲ್ಯವನ್ನು ಓದುವ ಮೂಲಕ ದಾಂಪತ್ಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಪರಸ್ಪರ ಹಾರಗಳನ್ನು ಹಾಕಿಕೊಂಡ ನಂತರ ಗೀತಾಳ ಕೊರಳಿಗೆ ಕುಮಾರ ತಾಳಿ ಕಟ್ಟಿದ. ಕುಮಾರನ ಕೈಬೆರಳಿಗೆ ಗೀತಾ ಉಂಗುರ ತೊಡಿಸಿದಳು. ಅಲ್ಲಿದ್ದ ಜನರೆಲ್ಲ ಚಪ್ಪಾಳೆ ತಟ್ಟುವ ಮೂಲಕ ನವ ದಂಪತಿಗಳಿಗೆ ಆಶೀವರ್ಾದ ಮಾಡಿದರು. ಎಲ್ಲರ ಭಾಷಣಗಳನ್ನು, ಸರಳ ಮದುವೆಯ ಕ್ರಿಯೆಗಳನ್ನು ಅಲ್ಲಿದ್ದ ಜನರೆಲ್ಲ ತದೇಕ ಚಿತ್ತರಾಗಿ ಕೇಳಿಸಿಕೊಳ್ಳುತ್ತಿದ್ದರು, ನೋಡುತ್ತಿದ್ದರು. ಜನ ಎಷ್ಟು ಆಸಕ್ತಿಯಿಂದ ಕೇಳುತ್ತಿದ್ದರೆಂದರೆ ಜನರ ಮಧ್ಯೆ ಎಲ್ಲೋ ಒಂದು ಮಗು ಅಳುವುದಕ್ಕೆ ಶುರು ಮಾಡಿದಾಗ ಹತ್ತಿರಲ್ಲಿದ್ದ ಒಬ್ಬರು ಏ, ಅದನ್ನು ಆ ಕಡಿ ಕರಕೊಂಡು ಹೋಗು. ನನಗೆ ಕೇಳಿಸ್ತಿಲ್ಲ ಎಂದು ಕಿಡಿಕಾರಿದರು.
ಮದುವೆ ಸಮಾರಂಭ ಮುಗಿದ ನಂತರ ರಾಜೇಂದ್ರ ಅವರು ಈಗ ನಿಮಗೆಲ್ಲ ಒಂದು ಚೀಟಿಯನ್ನು ಹಂಚುತ್ತೇವೆ. ಅದರಲ್ಲಿ ನಿಮಗೆ ಈ ಸಮಾರಂಭದ ಬಗ್ಗೆ ಏನನ್ನಿಸಿತು ಎಂದು ಬರೆದುಕೊಡಿ. ಮೆಚ್ಚಿಗೆ ಇದ್ದರೆ ಅದನ್ನೇ ಹೇಳಿ, ಬೈಯುವುದಿದ್ದರೆ ಅದನ್ನೂ ಬರೆಯಿರಿ ಎಂದರು. ಎಲ್ಲರೂ ಆ ಚೀಟಿಗಳನ್ನು ಪಡೆದು ಬರೆಯಲು ಉತ್ಸುಕರಾದರು. ಅಲ್ಲಿದ್ದ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು ಬರೆಯುವ ತವಕ ಆದರೆ, ಹೆಚ್ಚಿನ ಜನರ ಬಳಿ ಪೆನ್ಗಳು ಇರಲಿಲ್ಲವಾದ್ದರಿಂದ ಪೆನ್ಗಳಿಗೆ ಬೇಡಿಕೆಯೋ ಬೇಡಿಕೆ! ವಿವಿಧ ವಯೋಮಾನದವರಾದ 77 ಜನ ತಮ್ಮ ಅಭಿಪ್ರಾಯಗಳನ್ನು ಬರೆದು ಕೊಟ್ಟರು. ಅವುಗಳನ್ನು ಮೊನ್ನೆ ಕುಮಾರ ನನಗೆ ತಂದು ಕೊಟ್ಟ. ಅವುಗಳನ್ನು ಓದಿದಾಗ ನಮ್ಮೆಲ್ಲರಿಗೂ ತುಂಬಾ ಖುಷಿಯಾಯಿತು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ನೀಡಿದ್ದೇನೆ.
* ಸರಸ್ವತಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ: ನಮ್ಮ ಸಂಘದ 20 ಸದಸ್ಯೆಯರು ಈ ಮದುವೆಗೆ ಶುಭ ಹಾರೈಸಿದ್ದೇವೆ. ಈ ರೀತಿ ಎಲ್ಲರೂ ಸರಳವಾಗಿ ಮದುವೆ ಆಗಬೇಕೆಂಬ ನಮ್ಮ ಅಭಿಪ್ರಾಯವನ್ನು ಎಲ್ಲರಿಗೂ ತಿಳಿಸುತ್ತೇವೆ.
* ಬಸವರಾಜು, 25: ಇಂತಹ ಮದುವೆ ಹೊಸ ಪೀಳಿಗೆಗೆ ಹೊಸ ದಾರಿಯನ್ನು ತೋರುತ್ತದೆ. ಕಡೇನಂದಿಹಳ್ಳಿಯಲ್ಲಿ ಇದು ನಡೆದದ್ದು ಸಂತೋಷ ತಂದಿದೆ.
* ಮಲ್ಲಿಕಾಜರ್ುನ, 24: ನಮ್ಮೂರ ಮಟ್ಟಿಗೆ ಇದು ಹೊಸತು. ಆದರೆ ತುಂಬಾ ಚೆನ್ನಾಗಿತ್ತು. ನಮ್ಮ ಗೆಳೆಯರೆಲ್ಲಾ ಹೀಗೆ ಮದುವೆ ಆಗಬೇಕೆಂದು ತಿಳಿಸುತ್ತೇನೆ.
* ಶಾರದಾ ಎ.ಎಸ್., 24: ಇದರಿಂದ ತಂದೆಯ ಹೊರೆ ತಪ್ಪಿ ಎಲ್ಲರೂ ಸಂತೋಷದಿಂದ ಬಾಳಲು ಅನುಕೂಲವಾಗುತ್ತದೆ.
* ಸರಳಾ ಬಿ.ಸಿ, 40: ಈ ಸರಳ ಮದುವೆ ತುಂಬಾ ಚೆನ್ನಾಗಿತ್ತು. ನನ್ನ ಮಕ್ಕಳಿಗೆ ಈ ರೀತಿ ಮದುವೆ ಮಾಡಲು ಪ್ರಯತ್ನಿಸುವೆ.
* ನೇತ್ರಾವತಿ ಚಂದ್ರಶೇಖರ್, 28: ಈ ಮದುವೆ ತುಂಬಾ ಚೆನ್ನಾಗಿತ್ತು. ನಮ್ಮ ಸಾಂಪ್ರದಾಯಿಕ ಮದುವೆಗಳಲ್ಲಿ ಬದಲಾವಣೆ ಆಗಬೇಕು ಅಂತಾ ನಾನು ಅಂದುಕೊಂಡಿದ್ದೆ. ಆದರೆ ಹಳ್ಳಿಗಾಡಿನಲ್ಲಿ ಅದೆಲ್ಲ ನಡೆಯುವುದಿಲ್ಲ ಎಂದು ಅಂದುಕೊಂಡಿದ್ದೆ. ಇಲ್ಲಿ ಇಂತಹ ಮದುವೆ ನಡೆದದ್ದು ಸಂತೋಷ ತಂದಿದೆ.
* ವಿ. ಕಲ್ಲಪ್ಪ, 80: ಇದು ಹೊಸ ಪದ್ಧತಿ. ನಮ್ಮ ಮನಸ್ಸಿಗೆ ಸಂತೋಷ ತಂದಿದೆ.
* ಏ. ಬಸವರಾಜಪ್ಪ ಮಲ್ಲಾಪುರ, 65: ಈ ಸರಳ ಮದುವೆ ನಮಗೆ ಬಹಳ ಸಂತೋಷ ತಂದಿದೆ. ಆಡಂಬರದ ಮದುವೆಗಿಂತ ಈ ಮದುವೆ ಇಷ್ಟವಾಯಿತು. ಇದನ್ನು ಒಪ್ಪುತ್ತೇವೆ.
* ಗದಿಗೆಪ್ಪ, 42: ಈ ಸರಳ ಮದುವೆಗೆ ಶಾಮಿಯಾನ ಬೇಕಿತ್ತಾ? ಯಾವುದೋ ಒಂದು ಮರದ ಅಡಿ ಅಥವಾ ಗುಡಿಯಲ್ಲಿ ಮಾಡಬಹುದಿತ್ತು.
* ಗಜೇಂದ್ರ, 45: ಆಡಂಬರದ ಮದುವೆ ಮಾಡಿ ಸಾಲದ ಸುಳಿಯಲ್ಲಿ ಸಿಲುಕುತ್ತಿರುವಂತಹ ಕುಟುಂಬಗಳಿಗೆ ಇದು ಮಾದರಿಯಾಗಿದೆ. ಇಂತಹ ಸರಳ ಮದುವೆ ನಡೆಯುವುದರಿಂದ ನಮ್ಮ ಸಮಾಜದ ಹೆಚ್ಚಿನ ಸಮಸ್ಯೆಗಳು ಬಗೆಹರಿಯುತ್ತವೆ.
* ಶಿಲ್ಪಾ ಬಿ.ಜಿ. 21: ಸಂಪ್ರದಾಯದ ಕಟ್ಟುಪಾಡುಗಳಿಲ್ಲದ ಈ ಮದುವೆ ನನಗೆ ಇಷ್ಟವಾಯಿತು.
* ಚನ್ನಯ್ಯ ಬಿ. ಮಾರವಳ್ಳಿ, 37: ಎಲ್ಲಾ ಮದುವೆಗಳೂ ಹೀಗೆಯೇ ನಡೆಯಬೇಕು.
* ಅನ್ಸರ್ ದಿವಾನಖಾನ, 39: ಮುಂದಿನ ಜನ್ಮ ಎಂಬುದಿದ್ದರೆ ನಾನು ಹೀಗೆ ಮದುವೆ ಆಗುತ್ತೇನೆ.
* ಸಾವಿತ್ರಿ ಸಂ, 23: ನಾನು ಇದೇ ಮೊದಲನೆಯ ಬಾರಿ ಇಂತಹ ಮದುವೆಯನ್ನು ನೋಡಿದ್ದು. ಮೊದಲು ನನಗೆ ಇದೆಂತಹ ಮದುವೆ ಅನ್ನಿಸಿತು. ಈ ಸರಳ ಮದುವೆ ಸಮಾರಂಭವನ್ನು ನೋಡಿದ ಮೇಲೆ ನನಗೆ ಇದಕ್ಕಿಂತಲೂ ಸರಳವಾಗಿ ಮದುವೆ ಆಗಬೇಕು ಅನ್ನಿಸಿತು.
* ರಾಘವೇಂದ್ರ ಟಿ.ಎಂ. 20: ನಾನು ಕಂಡ ಅತ್ಯಂತ ಸರಳ ಮತ್ತು ಅದ್ಭುತ ಮದುವೆ ಇದು.
* ಹೂವಪ್ಪ ಶಿರಗಂಬಿ, 53: ಈ ತರಹದ ಹೊಸ ರೀತಿಯ ಮದುವೆ ನಮಗೆ ಅಚ್ಚರಿ ಆಯಿತು. ಆದರೆ ಭಾಷಣಕಾರರು ಇದರ ಬಗ್ಗೆ ವಿವರ ಮಾಹಿತಿ ನೀಡಿದ ನಂತರ ನಮಗೆ ತುಂಬಾ ಇಷ್ಟವಾಯಿತು.
* ಕೆ.ಬಿ.ಶಿವಕುಮಾರ್, 20: ಸರಳ ಮತ್ತು ಸೂಪರ್ ಮದುವೆ ಸಾರ್!
ಇವರೆಲ್ಲರಿಗಿಂತ ಇವತ್ತು ಹೆಚ್ಚು ಸಂತೋಷ ಪಡುತ್ತಿರುವುದು ಮದುಮಗಳು ಗೀತಾ ಮತ್ತು ಆಕೆಯ ಹೆತ್ತವರು. ಗೀತಾಳ ಸ್ನೇಹಿತರೂ ಆಕೆಯಂತೆ ಮದುವೆಯಾಗಬೇಕು ಎಂದು ಆಕೆಗೆ ಹೇಳಿದ್ದಾರೆ.
ಹಾಗೆ ನೋಡಿದರೆ ಇದು ಅಂತರಜಾತಿ ಮದುವೆಯಲ್ಲ, ತೀರಾ ಸರಳವಾದ ಮದುವೆಯೂ ಅಲ್ಲ. ಕ್ರಾಂತಿಕಾರಕ ಮದುವೆಯಂತೂ ಅಲ್ಲವೇ ಅಲ್ಲ. ಆದರೆ ಕುಮಾರ್ ಮತ್ತು ಆತನ ಸಹೋದರರ ಉದ್ದೇಶ ಸಂಪ್ರದಾಯಿಕ ಶಾಸ್ತ್ರಗಳು ಇರದಂತಹ, ಆದಷ್ಟು ಸಿಂಪಲ್ ಆದ ಮದುವೆ ಸಮಾರಂಭವನ್ನು ತಮ್ಮ ಕುಗ್ರಾಮವಾದ ಕಡೇನಂದಿಹಳ್ಳಿಯಲ್ಲಿ ಮಾಡಬೇಕೆನ್ನುವುದೇ ಆಗಿತ್ತು. ಮತ್ತು ಆ ಮೂಲಕ ಹಲವರಾದರೂ ಸ್ಫೂತರ್ಿ ಪಡೆದು ತಮ್ಮ ಮಕ್ಕಳಿಗೆ ಇಂತಹ ಮದುವೆ ಮಾಡಿದರೆ ಅದೇ ತಾವು ತಮ್ಮ ಹಳ್ಳಿಗೆ ಪರಿಚಯಿಸಿದ ಪ್ರಗತಿಪರ ದೃಷ್ಟಿ ಎಂಬುದಾಗಿತ್ತು.
ಅದರಲ್ಲಿ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚ ಯಶಸ್ಸನ್ನು ಕಂಡಿದ್ದಾರೆ ಎನ್ನಬಹುದು.


ಕುಮಾರ್ ಬುರಡಿಕಟ್ಟಿಯವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಡೆನಂದಿಹಳ್ಳಿಯವರು. ಎಪ್ರಿಲ್ 07, 1978ರಂದು ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ರಮವಾಗಿ ಕಡೇನಂದಿಹಳ್ಳಿ ಮತ್ತು ಹಿರೇಕೇರೂರಿನಲ್ಲಿ. ಶಿವಮೊಗ್ಗೆಯಯಲ್ಲಿ ಕಾಲೇಜು ಶಿಕ್ಷಣ.
ವಿದ್ಯಾಥರ್ಿ ದೆಸೆಯಿಂದ ಆರಂಭಿಸಿ ಸತತ ಒಂದು ದಶಕ ಕಾಲ ಸಾಮಾಜಿಕ ಚಳವಳಿಗಳಲ್ಲಿ ಭಾಗವಹಿಸುತ್ತಾ ಬಂದ ಕುಮಾರ್ ಬುರಡಿಕಟ್ಟಿ ಸಾಮಾಜಿಕ ಚಳವಳಿಗಳ ಭಾಗವಾಗಿ ದೆಹಲಿ, ಮುಂಬೈಗಳಲ್ಲಿಯೂ ಐದಾರು ವರ್ಷಗಳ ಕಾಲ ನೆಲೆಸಿದ್ದರು. 2002ರ ಗುಜರಾತ್ ನರಮೇಧ, ಹರ್ಯಾಣದ ಜಝಾರ್ನಲ್ಲಿ ನಡೆದ ದಲಿತರ ಮಾರಣಹೋಮ ಮುಂತಾದ ಹಲವಾರು ಘಟನೆಗಳ ಬಗ್ಗೆ ವಸ್ತುನಷ್ಠ ವರದಿಗಳನ್ನು ಹೊರತರಲು ರಚಿಸಲಾದ ಅನೇಕ ರಾಷ್ಟ್ರ ಮಟ್ಟದ ಸತ್ಯಶೋಧನಾ ಸಮಿತಿಗಳ ಸದಸ್ಯರಾಗಿ ಕಾರ್ಯನರ್ವಹಿಸಿದ್ದಾರೆ. 2004ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ಚುನಾವಣಾ ವಿಚಕ್ಷಣಾ ಸಮಿತಿಯ ಸದಸ್ಯರಾಗಿ ಭಾಗವಹಿಸಿದ್ದರು. 
ಕಳೆದ ಕೆಲವಾರು ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನರ್ವಹಿಸುತ್ತಿರುವ ಅವರು ಮೂರು ವರ್ಷಗಳ ಕಾಲ ಗೌರಿ ಲಂಕೇಶರ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿ ಈಗ ಅರಿಂಧಮ್ ಚೌಧುರಿಯವರ ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಅಸೋಸಿಯೇಟ್ ಎಡಿಟರ್ ಮತ್ತು ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪ್ರಕಟಿತ ಕೃತಿಗಳು
* ಓ ಈಳಂ: ಎಲ್ಟಿಟಿಈ - ವೀರೋಚಿತ ಕದನ ಮತ್ತು ರಕ್ತಸಿಕ್ತ ಕಥನ (ಲಂಕೇಶ್ ಪ್ರಕಾಶನ - 2009): ಶ್ರೀಲಂಕಾದ ತಮಿಳು ರಾಷ್ಟ್ರೀಯತೆಯ ಪ್ರಶ್ನೆ ಹಾಗೂ ವೆಲುಪಿಳ್ಳೈ ಪ್ರಭಾಕರನ್ ನಾಯಕತ್ವದಲ್ಲಿ ತಮಿಳು ಹುಲಿಗಳು ಮೂರು ದಶಕಗಳ ಕಾಲ ನಡೆಸಿದ ಪ್ರತ್ಯೇಕವಾದಿ ರಕ್ತಸಿಕ್ತ ಹೋರಾಟ ಕುರಿತು ಕನ್ನಡದಲ್ಲಿ ಲಭ್ಯವಿರುವ ಏಕೈಕ ಕೃತಿ ಇದು.
* ಆಚರಣೆ ಹಾಗೂ ವೈರುಧ್ಯ: ಮಾವೋ ತ್ಸೆ ತುಂಗರ ಆಯ್ದ ತತ್ವಶಾಸ್ತ್ರೀಯ ಬರಹಗಳ ಅನುವಾದ (ಸೃಜನ ಪ್ರಕಾಶನ)
* ಕಾಶ್ಮೀರ: ರಣರಂಗವಾಗಿರುವ ಬೀದಿಗಳು- ಕೆಂಪಾಗುತ್ತಿರುವ ಝೇಲಂ - ಕಾಶ್ಮೀರ ವಿವಾದದ ಚಾರಿತ್ರಿಕ ಹಿನ್ನೆಲೆಯನ್ನು ವಿವರಿಸಿ ವಿಶ್ಲೇಷಿಸುವ ಕಿರು ಹೊತ್ತಿಗೆ
* ಜಂಗಲ್ನಾಮಾ: ಮಾವೋವಾದಿ ಗೆರಿಲ್ಲಾ ವಲಯದೊಳಗೆ - ಸತ್ನಾಮ್ ಅವರ ಪ್ರವಾಸ ಕಥನದ ಅನುವಾದ. ಛತ್ತೀಸ್ಗಢದ ಬಸ್ತರ್ ದುರ್ಗಮ ಅರಣ್ಯದಲ್ಲಿನ ಆದಿವಾಸಿಗಳ ಬದುಕು-ಬವಣೆಗಳನ್ನು ಹಾಗೂ ಅವರು ಮಾವೋವಾದಿ ನಕ್ಸಲೀಯರೊಂದಿಗೆ ಜೊತೆಗೂಡಿ ನಡೆಸುತ್ತಿರುವ ಪ್ರಭುತ್ವ ವಿರೋಧಿ ಬಂಡಾಯದದ ಕಥನ.

ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಶೇಖರಗೌಡ


ಬ್ಯಾಂಕಿಂಗ್ ಮತ್ತು ಸಾಹಿತ್ಯಕ್ಕೆ ಅಜಗಜಾಂತರ ವ್ಯತ್ಯಾಸ. ಬರೀ ಅಂಕಿಸಂಖ್ಯೆಗಳಿಂದ ಕೂಡಿರುವ ಬ್ಯಾಂಕಿಂಗ್ಗೂ, ಅಕ್ಷರ ಜೋಡಣಿಗಳಿಂದ ಹೊರಬರುವ ಸಾಹಿತ್ಯಕ್ಕೂ ಎಲ್ಲಿಯೂ ನಂಟಿಲ್ಲ. ಅಂತಹ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಕ್ಷರ ಪ್ರೇಮವನ್ನು ಮರೆಯದೇ ನೂರಾರು ಕಥೆಗಳನ್ನು ಗ್ರಾಮೀಣ ಸಾಹಿತ್ಯಿಕ ಭಾಷೆಯಲ್ಲಿ ಶೇಖರಗೌಡರು ಕಟ್ಟಿಕೊಟ್ಟಿದ್ದಾರೆ. ಅಂತವರ ಪರಿಚಯ ಸಾಹಿತ್ಯ ಜಗತ್ತಿಗೆ ಅತ್ಯವಶ್ಯವಾದದ್ದು ಎನ್ನುತ್ತಾರೆ ಪ್ರಹ್ಲಾದ್ ಗುಡಿ.

ಸದಾ ರಷ್, ಡೆಬಿಟ್, ಕ್ರೆಡಿಟ್, ಬ್ಯಾಲೆನ್ಸ್ ಶೀಟ್, ಟ್ಯಾಲಿ, ಅನುತ್ಪಾದಕ ಸಾಲಗಳ ವಸೂಲಿ, ವ್ಯವಹಾರ ಅಭಿವೃದ್ಧಿ ಎನ್ನುವ ಪರಸ್ಥಿತಿಯಲ್ಲಿರುವ ಬ್ಯಾಂಕಿಂಗ್ ಉದ್ಯೋಗಿಗಳು ಕಥಾ ಸಾಹಿತ್ಯದಲ್ಲಿ ತೊಡಗಿಕೊಳ್ಳುವುದು ತೀರಾ ಅಪರೂಪ. ಆದರೆ ಬ್ಯಾಂಕಿನ ಕೆಲಸಗಳ ಒತ್ತಡದ ಮಧ್ಯೆಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ, ತಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರಗಳ ಮೂಲಕ ಜೀವ ನೀಡುತ್ತಾ ಕಥೆ ಹೆಣೆಯುವ ಕೆಲಸ ಸಾಮಾನ್ಯವಾದುದಲ್ಲ. ನಮ್ಮ ಮಧ್ಯೆದಲ್ಲಿಯೇ ಇದ್ದು ಗುಪ್ತವಾಗಿ ಬರವಣಿಗೆಯನ್ನು ರೂಢಿಸಿಕೊಂಡಿರುವ ಶೇಖರಗೌಡ ವೀರನಗೌಡ ಸರನಾಡಗೌಡರ್ ಸದ್ದಿಲ್ಲದಂತೆ ಕೇವಲ ಎರಡು ವರ್ಷಗಳಲ್ಲಿ ಸುಮಾರು 75ಕ್ಕೂ ಹೆಚ್ಚು ಕಥೆಗಳನ್ನು ಬರೆಯುವ ಮೂಲಕ ಒಬ್ಬ ಭರವಸೆಯ ಕಥೆಗಾರರಾಗಿ ಹೊರಹೊಮ್ಮಿರುವುದು ಹೆಮ್ಮೆ ಪಡುವ ಸಂಗತಿ.
ಶೇಖರಗೌಡರು ಮೂಲತಃ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದವರು. ಕಿತ್ತು ತಿನ್ನುವ ಬಡತನದಲ್ಲಿ ಬೆಳೆದು ಬಂದ ಇವರು ತಮ್ಮ ಕುಟುಂಬ ವರ್ಗದವರೊಂದಿಗೆ ಹೊಲ, ಮನೆಗಳಲ್ಲಿ ಕೆಲಸ ಮಾಡುತ್ತಾ, ಶಾಲೆ ಕಲಿತರು. ಧೈರ್ಯ, ಆತ್ಮಾಭಿಮಾನ, ಕಠಿಣ ಪರಿಶ್ರಮ ಇದ್ದರೆ ಬಡತನದಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಶೇಖರಗೌಡರೇ ಸಾಕ್ಷಿಯಾಗಿದ್ದಾರೆ.
ವೀರನಗೌಡ ಮತ್ತು ಲಕ್ಷ್ಮಮ್ಮ ಎಂಬ ಸಾಧಾರಣ ಕೃಷಿಕ ದಂಪತಿಗಳ ಮಗನಾಗಿ 01-06-1955ರಲ್ಲಿ ಜನಿಸಿದ ಇವರು ಸ್ವಗ್ರಾಮದಲ್ಲಿಯೇ ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ ಮಾಡಿ, ಎಸ್.ಎಸ್.ಎಲ್.ಸಿ. ಯಲ್ಲಿ ಆ ಶಾಲೆಗೆ ಮೊದಲ ಸ್ಥಾನ ಪಡೆದು ಶಾಲೆಗೆ ಮತ್ತು ಕಲಿಸಿದ ಗುರುಗಳಿಗೆ ಕೀತರ್ಿ ತಂದರು.
ಇಲಕಲ್ನಲ್ಲಿ ಪ್ರಥಮ ಪಿ.ಯು.ಸಿ. ಶಿಕ್ಷಣವನ್ನು ಪೂರೈಸಿದರೆ, ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಮುಗಿಸಿ, ಧಾರವಾಡದ ಕೃಷಿ ಕಾಲೇಜಿನಲ್ಲಿ ಬಿ.ಎಸ್ಸಿ.ಕೃಷಿ ಪದವಿಯನ್ನು ಪಡೆದು ಕೊಂಡರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶೇಖರಗೌಡರು ತಾವರಗೇರಿಯ ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಿಯೇ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾಥರ್ಿ ಎಂಬ ಹೆಸರು ಪಡೆದುಕೊಂಡಿದ್ದರು. ಪದವಿ ಪರೀಕ್ಷೆಯವರೆಗೂ ಅವರು ಉನ್ನತ ದಜರ್ೆಯಲ್ಲಿಯೇ ಉತ್ತೀರ್ಣರಾದರು.
ಪದವಿ ಓದುತ್ತಿರುವಾಗಲೇ ಕಥೆ ಬರೆಯುವ ಗೀಳನ್ನು ಹಚ್ಚಿಕೊಂಡಿದ್ದ ಅವರು ಬದುಕಿಗಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ಆಯ್ದುಕೊಂಡರು. ಕೃಷಿ ಪದವಿ ಮುಗಿಯುತ್ತಿದ್ದಂತೆ ಧಾರವಾಡಕ್ಕೆ ಹತ್ತಿರಕ್ಕಿರುವ ಮುಗದ ಕೃಷಿ ಕೇಂದ್ರದಲ್ಲಿ ಸಂಶೋಧನಾ ಸಹಾಯಕ ಎಂದು ಒಂದು ವರ್ಷದವರೆಗೆ ಕೆಲಸ ಮಾಡಿದರು. ನಂತರ ತುಂಗಭದ್ರಾ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿ ಎಂದು ಸೇರಿ ನಾಲ್ಕು ವರ್ಷಗಳವರೆಗೆ ಹಿರೇಹಡಗಲಿ ಮತ್ತು ಹಚ್ಚೊಳ್ಳಿಯಲ್ಲಿ ಕೆಲಸ ಮಾಡಿದರು. ಹಚ್ಚೊಳ್ಳಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ತಮ್ಮ ಕಠಿಣ ಪರಿಶ್ರಮದಿಂದ ಸ್ಟೇಟ್ ಬ್ಯಾಂಕಿನ ಸ್ಪಧರ್ಾತ್ಮಕ ಪರೀಕ್ಷೆ ಬರೆದು ಪಾಸಾಗಿ ಈಗಿನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿನಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ಎಸ್.ಬಿ.ಎಚ್.ದ ಕೃಷಿ ಅಭಿವೃದ್ಧಿ ಶಾಖೆ ಮಾನ್ವಿ ಅವರ ಮೊದಲ ಶಾಖೆ. ತಮ್ಮ ಪ್ರಾಮಾಣಿಕ, ದಕ್ಷ ಕಾರ್ಯ ತತ್ಪರತೆಯಿಂದ ಉದ್ಯೋಗದಲ್ಲಿ ಮೇಲೇರುತ್ತಾ ಅವರು ಈಗ ಮುಖ್ಯ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಬ್ಯಾಂಕಿನ ಕೆಲಸದ ಒತ್ತಡದಲ್ಲಿ ಅವರ ಕಥಾ ಸಾಹಿತ್ಯ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಸಿಂಧನೂರಿನ ಕೃಷಿ ಅಭಿವೃದ್ಧಿ ಶಾಖೆಯಿಂದ ಲಿಂಗಸೂಗೂರಿನ ಆರ್.ಸಿ.ಪಿ.ಸಿ., ಆಫೀಸಿಗೆ ಮುಖ್ಯ ವ್ಯವಸ್ಥಾಪಕರು ಎಂದು ವಗರ್ಾವಣೆಯಾಗಿ ಹೋದ ನಂತರ ಶೇಖರಗೌಡರು ಹಿಂತಿರುಗಿ ನೋಡದೇ ಸುಮಾರು 75ಕ್ಕೂ ಹೆಚ್ಚು ಕಥೆಗಳನ್ನು ಬರೆದದ್ದು ಆಶ್ಚರ್ಯವಾದರೂ ಸತ್ಯ.
ಸರಳತೆ, ದಕ್ಷತೆ, ಪ್ರಾಮಾಣಿಕತೆಗಳನ್ನು ರೂಢಿಸಿಕೊಂಡಿರುವ ಇವರು ತಮ್ಮ ಬ್ಯಾಂಕಿಂಗ್ ವೃತ್ತಿಯ ಜೊತೆಗೆ ಸಾಹಿತ್ಯದ ಸೇವೆಯಲ್ಲಿಯೂ ತೊಡಗಿರುವುದು ವಿಶೇಷವಾಗಿದೆ.
ಶೇಖರಗೌಡರು ಆಸರೆ ಎಂಬ ತಮ್ಮ ಪ್ರಥಮ ಕಥೆಯನ್ನು 1995-96ರಲ್ಲಿ ಬರೆದಿದ್ದರು. ಮಂದಾರ ಎಂಬ ಎರಡನೇ ಕಥೆಯನ್ನು ಆವಾಗಲೇ ಅರ್ಧ ಬರೆದು ಹಾಗೇ ಇಟ್ಟಿದ್ದರು. ಸಿಂಧನೂರಿನಿಂದ ಲಿಂಗಸೂಗೂರಿಗೆ ಹೋಗುವಾಗ ಸಿಂಧನೂರಿನ ಅವರ ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ  ಆತ್ಮೀಯ ಗೆಳೆಯ ಹಾಗೂ ಹವ್ಯಾಸಿ ಪತ್ರಕರ್ತ ಶ್ರೀನಿವಾಸ ಗಟ್ಟು ಅವರಿಗೆ ಕಥೆಗಳನ್ನು ಕೊಟ್ಟು ಹೋಗಿದ್ದರು. ಅವುಗಳನ್ನು ಓದಿದ ಗಟ್ಟು ಅವರು ಶೇಖರಗೌಡರಿಗೆ ದೂರವಾಣಿ ಮೂಲಕ ಮಾತನಾಡಿ, ನಿಮ್ಮಲ್ಲಿ ಒಬ್ಬ ಉತ್ತಮ ಕಥೆಗಾರನಿದ್ದಾನೆ. ಆತನನ್ನು ಸಮರ್ಥವಾಗಿ ಬಳಸಿಕೊಳ್ಳಿ. ಮುಂದೆ ನೀವು ಉತ್ತಮ ಕಥೆಗಾರರಾಗಿ ಹೊರಹೊಮ್ಮುತ್ತೀರಿ ಎಂದು ಪ್ರೋತ್ಸಾಹ ಮತ್ತು ಧೈರ್ಯ ತುಂಬಿದರು. ಅವರ ಮಾತುಗಳೇ ಶೇಖರಗೌಡರಿಗೆ ಪ್ರೇರಕ ಶಕ್ತಿಯಾದವು. ಅಪೂರ್ಣಗೊಂಡಿದ್ದ ಮಂದಾರ ಕಥೆಯನ್ನು ಪೂರ್ಣಗೊಳಿಸಿ ಮತ್ತೇ ಶ್ರೀನಿವಾಸ ಗಟ್ಟು ಅವರಿಗೆ ಕಳುಹಿಸಿದರು. ರಾಯಚೂರು ವಾಣಿಯ ಸಾಪ್ತಾಹಿಕ ಪುರವಣಿಯನ್ನು ನೋಡಿಕೊಳ್ಳುತ್ತಿರುವ ಗಟ್ಟು ಅವರು ಭಾನುವಾರದ ಸಾಪ್ತಾಹಿಕದಲ್ಲಿ ಮಂದಾರ ಕಥೆಯನ್ನು ದಿನಾಂಕ 17-09-2010ರಂದು ಪ್ರಕಟಿಸಿದರು. ಅಲ್ಲಿಂದ ಅವರ ಕಥಾ ಪ್ರಪಂಚ ವಿಸ್ತಾರವಾಗುತ್ತಾ ಸಾಗಿತು.
ಮಂದಾರ ಎಂಬ ಹೆಸರಿನ 22 ಕಥೆಗಳುಳ್ಳ ಮೊದಲ ಕಥಾ ಸಂಕಲನವನ್ನು ಲಿಂಗಸೂಗೂರಿನಲ್ಲಿ ದಿನಾಂಕ 11-03-2012ರಂದು ಶೇಖರಗೌಡರು ಅವರ ಪ್ರೌಢ ಶಾಲೆಯ ವಿದ್ಯಾ ಗುರುಗಳಾದ ಪರಮೇಶಪ್ಪ ವೈ ದಂಡಿನ್ ಅವರ ಅಮೃತ ಹಸ್ತದಿಂದ ಬಿಡುಗಡೆ ಮಾಡಿಸಿದರು. ದಂಡಿನ್ ಅವರೇ ಆ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ಗೌಡರನ್ನು ಹರಸಿದ್ದಾರೆ.
ಆ ಕಾರ್ಯಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಅಯ್ಯಪ್ಪ ತುಕ್ಕಾಯಿ, ಬೆನ್ನುಡಿ ಬರೆದ ಉಪನ್ಯಾಸಕರಾದ ಡಾ. ಅಮರೇಶ್ ಯತಗಲ್, ಲಿಂಗಸೂಗೂರಿನ ಕಸಾಪ ಅಧ್ಯಕ್ಷರಾದ ಮಂಜುನಾಥ ಕಾಮಿನ್, ಹಟ್ಟಿಯ ಪ್ರಜಾ ಸಮರ ಪತ್ರಿಕೆ ಸಂಪಾದಕ ಎಂ.ಲಿಂಗರಾಜು, ಎಸ್.ಬಿ.ಎಚ್.ದ ಕಾನೂನು ಸಲಹೆಗಾರರಾದ ಬಸವರಾಜ್ ಮಾಲೀಪಾಟೀಲ್, ಪತ್ರಕರ್ತ ಡಿ.ಎಚ್.ಕಂಬಳಿ, ಅನೇಕ ಸಾಹಿತಿಗಳು, ಪತ್ರಕರ್ತರು ಸಾಕ್ಷಿಯಾಗಿದ್ದರು.
ಪ್ರೀತಿ, ಕರುಣೆ, ಸೌಂದರ್ಯ, ಬದುಕಿನ ಸಮಸ್ಯೆಗಳು-ಪರಿಹಾರ, ಮಾನವೀಯ ಮೌಲ್ಯಗಳು, ಸಾಮಾಜಿಕ ಮೌಢ್ಯಗಳು, ದಕ್ಷತೆ, ಪ್ರಾಮಾಣಿಕತೆ, ಕಾರ್ಯತತ್ಪರತೆ, ಸೇವಾ ಮನೋಭಾವನೆಯಂಥಹ ಗುಣಗಳ ಮೇಳೈಸುವಿಕೆಯ ತಂತ್ರಗಾರಿಕೆಯ ಮುಖೇನ ಶೇಖರಗೌಡರು ಓದುಗರಲ್ಲಿ ಭರವಸೆಯ ಸಾಫಲ್ಯತೆಯನ್ನು ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು. ವಿಧವಾ, ಮರುವಿವಾಹದಂಥಹ ಸುಧಾರಣೆಗಳನ್ನು ಇವರ ಕಥೆಗಳು ಒಳಗೊಂಡು, ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿವೆ.
ವರ್ಗ, ಜಾತಿ, ಧರ್ಮದ ಸಂಕೋಲೆಗಳನ್ನು ಕಿತ್ತೆಸೆದು ಬಾಂಧವ್ಯ ಬೆಸೆಯುತ್ತಾ ಸಮಾಜಕ್ಕೆ ಮಾರ್ಗದಶರ್ಿಯಾಗಿವೆ ಅವರ ಕಥೆಗಳು. ಇವರ ಆಕರ್ಷಕ ಶೈಲಿ, ಕುತೂಹಲಕಾರಿಯಾದ ಕಥಾವಸ್ತುವಿನ ವೈವಿಧ್ಯತೆಗಳು ಶೇಖರಗೌಡರನ್ನು ಉತ್ತಮ ಕಥೆಗಾರೆಂದು ಸಾಬೀತುಪಡಿಸಿವೆ.
ಜೂನ್ 2010ರಿಂದ ಶೇಖರಗೌಡರ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಿದೆ. ಕೆಲಸಗಳ ಒತ್ತಡದಲ್ಲಿಯೂ ಸಿಗುವ ಸಮಯವನ್ನೇ ಸದ್ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷ್ಸಿ ಎಂಬಂತೆ ಇವರ ಮೂರು ಕಥಾ ಸಂಕಲನಗಳು ಅಚ್ಚಿನಲ್ಲಿವೆ. ಬೆಂಗಳೂರಿನ ಅಕ್ಕ ಪ್ರಕಾಶನದವರು ಹುಚ್ಚು ಮನಸೇ ನೀ ಹಿಂಗ್ಯಾಕ ಎಂಬ 20 ಕಥೆಗಳುಳ್ಳ ಸಂಕಲನವನ್ನು ಹೊರತರುತ್ತಿದ್ದಾರೆ. ಗದುಗಿನ ಪಿ.ಸಿ.ಶಾಬಾದಿಮಠ ಪ್ರಕಾಶನದವರು ಒಲವೇ ಜೀವನ ಸಾಕ್ಷಾತ್ಕಾರ, ಹೊಸ ಬೆಳಕು ಎಂಬ ಎರಡು ತಲಾ 15 ಕಥೆಗಳುಳ್ಳ ಸಂಕಲನಗಳನ್ನು ಹೊರತರುತ್ತಿದ್ದಾರೆ. ಹಾಗೇ ಅವರೇ ಪ್ರೀತಿಯೆಂಬ ಆಯಸ್ಕಾಂತ ಎಂಬ ಕಾದಂಬರಿ ಕೂಡ ಸಧ್ಯದಲ್ಲಿ ಹೊರತರುತ್ತಿದ್ದಾರೆ.
ಸ್ಟೇಟ್ ಬ್ಯಾಂಕ್ ಹೈದರಾಬಾದಿನ ಮುಖ್ಯ ಕಚೇರಿಯವರು ಏರ್ಪಡಿಸಿದ್ದ ಎಸ್.ಬಿ.ಎಚ್.ರಚನಾ-2012 ಸಾಹಿತ್ಯಿಕ ಸ್ಪಧರ್ೆಯಲ್ಲಿ ಕನ್ನಡ ಕಥಾ ವಿಭಾಗದಲ್ಲಿ ಶೇಖರಗೌಡರ ಇಂಚರ-ಸದ್ಭವ್-ಅಂಕಿತಾ ಎಂಬ ಕಥೆ ಪ್ರಥಮ ಬಹುಮಾನ ಪಡೆದುಕೊಂಡಿದೆ. ದಿನಾಂಕ 05-05-2012 ರಂದು ಹೈದರಾಬಾದಿನ ರವೀಂದ್ರ ಭಾರತಿ ಕಲಾ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿದರ್ೇಶಕರಾದ ಎಂ.ಭಗವಂತರಾವ್ ಅವರು ಶೇಖರಗೌಡ ದಂಪತಿಗಳನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ, ಫಲಕ ಮತ್ತು ಐದು ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಬೆಂಗಳೂರಿನ ಶೈಲಜಾ ಸುರೇಶ್ ಎನ್ನುವವರು ಏರ್ಪಡಿಸಿದ್ದ ಲೇಖಿಕಾ ಕಥಾ ಸ್ಪಧರ್ೆಯಲ್ಲಿ ಶೇಖರಗೌಡರ ದೀಪಾವಳಿ ಎಂಬ ಕಥೆಗೆ ತೃತೀಯ ಬಹುಮಾನ ಲಭಿಸಿದೆ.
ರಾಯಚೂರು ವಾಣಿ ಸಾಪ್ತಾಹಿಕದಲ್ಲಿ ಹದಿನೈದಕ್ಕೂ ಹೆಚ್ಚು ಕಥೆಗಳು, ಕರ್ಮವೀರ ವಾರಪತ್ರಿಕೆಯಲ್ಲಿ ಮೂರು ಕಥೆಗಳು ಮತ್ತು ತಮ್ಮ ಪ್ರಜಾಸಮರದಲ್ಲಿಯೂ ಐದಾರು ಕಥೆಗಳು ಪ್ರಕಟಗೊಂಡಿವೆ. ಬಸವ ಮಾರ್ಗ, ಹೊಸದಿಗಂತ ಪತ್ರಿಕೆಗಳಲ್ಲೂ ಆದ್ಯಾತ್ಮಿಕ ಲೇಖನಗಳು, ಪ್ರತಿಕ್ರಿಯೆಗಳು ಪ್ರಕಟವಾಗಿವೆ.
ತಮ್ಮ ಕಥೆಗಳ ನೇಯುವಿಕೆಗೆ ಅನೇಕ ಹಿರಿಯ ಸಾಹಿತಿಗಳು, ಸ್ನೇಹಿತರು, ವಕೀಲ ಮಿತ್ರರು, ಬ್ಯಾಂಕಿನ ಸಿಬ್ಬಂದಿವರ್ಗದವರು ಬೆಂಬಲಿಸಿದ್ದಾರೆ ಎಂದು ವಿನಯದಿಂದಲೇ ಹೇಳುವ ಇವರು ರಾಯಚೂರು ವಾಣಿ ಪತ್ರಿಕೆ ತಮ್ಮ ಮಂದಾರ ಕಥೆಯನ್ನು ಪ್ರಕಟಿಸುವ ಮೂಲಕ ತಮಗೆ ಮತ್ತೇ ಮತ್ತೇ ಬರೆಯಲು ಪ್ರೇರೇಪಿಸಿತು ಎಂದು ನೆನಪಿಸಿಕೊಳ್ಳುತ್ತಾ ಪತ್ರಿಕೆಯ ಆಡಳಿತ ಮಂಡಳಿಗೆ ಕೃತಜ್ಞತೆ ಅಪರ್ಿಸುತ್ತಾರೆ.
ತಮ್ಮ ಧರ್ಮಪತ್ನಿ ಅಕ್ಕಮಹಾದೇವಿ ತಮ್ಮ ಬರವಣಿಗೆಗೆ ಮತ್ತೊಂದು ಸ್ಫೂತರ್ಿ ಎನ್ನುವ ಇವರು ಕಿರಣ್, ಸಂತೋಷ್ ಮತ್ತು ಅನುಪಮಾ ಎಂಬ ಮಕ್ಕಳನ್ನು ಹೊಂದಿದ್ದಾರೆ. ಎಂ.ಬಿ.ಎ. ಪಡೆದಿರುವ ಕಿರಣ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಸಂತೋಷ್ ಎಂ.ಬಿ.ಎ. ಸ್ನಾತಕೋತ್ತರ ಪದವೀಧರನಾದರೂ ತೋಟಗಾರಿಕೆ ಮಾಡುತ್ತಿದ್ದಾರೆ. ಮಗಳು ಅನುಪಮಾ ಇದೇ ವರ್ಷ ಎಂ.ಟೆಕ್.(ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್) ದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರಾಂಕ್ ಪಡೆದು ಬಂಗಾರದ ಪದಕ ಪಡೆದಿರುವರು. ದಿನಾಂಕ 08-04-2012ರಂದು ಜರುಗಿದ ಘಟಿಕೋತ್ಸವದಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸದಾನಂದ ಗೌಡರಿಂದ ಪ್ರಶಸ್ತಿ ಪತ್ರ ಮತ್ತು ಬಂಗಾರದ ಪದಕ ಪಡೆದರು.
ಬಡತನದಲ್ಲಿ ಬೆಳೆದು ಬಂದ ಇವರು ತಮ್ಮ ವೃತ್ತಿ ಜೀವನದಲ್ಲಿಯೇ ಸಂತುಷ್ಟರಾಗಿ ಸಂತೋಷದ ದಿನಗಳನ್ನು ಕಳೆಯಬಹುದಾಗಿತ್ತು. ಆದರೆ ಕಥಾ ಸಾಹಿತ್ಯದಲ್ಲಿಯೇ ಸಂತೋಷವನ್ನು ಕಾಣುತ್ತಿರುವ ಇವರು ರಾಯಚೂರು ಜಿಲ್ಲೆಯಲ್ಲಿ ಒಬ್ಬ ಉತ್ತಮ ಭರವಸೆಯ ಕಥೆಗಾರರಾಗಿ ಹೊರಹೊಮ್ಮುತ್ತಿರುವುದು ಒಳ್ಳೆಯ ಬೆಳವಣಿಗೆ.

ಈ ನೋವು ನನಗಿರಲಿ


ಪಟ ಪಟ ಎಂದು ಶುರುವಾಗಿ ಧೋ ಎಂದು ಸುರಿಯುತ್ತಿರುವ ಮಳೆ,  ಮೊದಲು ಒಂದು ಬಕೆಟ್ ತುಂಬಿತು ನಂತರ ಇನ್ನೊಂದು ಬೋಗಣಿ ಮತ್ತೆ ಇನ್ನೊಂದು ಹಂಡೆ ಮನೆಯಲ್ಲಿರುವ ಪಾತ್ರೆ ,ಪಗಡಗಳು ತುಂಬುತ್ತಲೇ ಹೋದವು ಸೋರುತ್ತಿರುವ  ಛತ್ತಿನಿಂದ ಮಳೆನೀರು ಬರುವುದು ಸಾಗಿಯೇ ಇತ್ತು. ಮನೆಯೆಲ್ಲಾ ಕಚಿಪಿಚಿ ಅಮ್ಮ  ಮೊದ ಮೊದಲು  ಸೋರುತ್ತಿರುವ ಜಾಗದೆಲ್ಲೆಡೆ ಪಾತ್ರೆ ಪಗಡಗಳನ್ನು ಇಡುತ್ತಾ ಹೋದವಳು ಈಗ ಅಸಹಾಯಕಳಾಗಿ ಸುಮ್ಮನೆ ನೋಡುತ್ತ ನಿಂತಳು. ಮಣ್ಣಿನ ಮಾಡಿ ಮನೆ ಮಳೆಗಾಲಕ್ಕೆ ಪ್ರತಿ ಸಲ ಈ ಕೆಲಸ ಹಚ್ಚಿಯೇ ತೀರುತ್ತದೆ. ಕೆಳಗೆ ನೆಲಕ್ಕೆ ಹಾಸಿದ್ದ ತಟ್ಟಿನ ಚೀಲಗಳು ಇನ್ನೂ ನೀರು ಹಿಂಗಿಸಲಾರೆ ಎಂದು ಸೋತವು. ಮಾಡಿಗೆ ಕಟ್ಟಿದ್ದ ಪ್ಲಾಸ್ಟಿಕ್ ಚೀಲಗಳು ಸೋರುತ್ತಿದ್ದ ಮಣ್ಣಿನ ಜೊತೆ ಬೀಳುತ್ತಿದ್ದ ಮಣ್ಣಿನ ಭಾರ ತಡೆಯಲಾರದೇ ತಾವೂ ಜೋತಾಡುತ್ತಿದ್ದವು.
ಒಲೆಯ ಮೇಲೆ ನೀರು ಬೀಳಬಾರದೆಂದು ಅಮ್ಮ ರೊಟ್ಟಿ ಹಂಚನ್ನು ಉಲ್ಟಾ ಹಾಕಿದ್ದಳು. ತೊಟ್ಟಿಲಲ್ಲಿ  ಮಲಗಿದ್ದ ತಂಗಿ ದಡಲ್ ಎಂದು ಸದ್ದು ಮಾಡಿದ ಸಿಡಿಲಿಗೆ ಬೆಚ್ಚಿ ಬಿದ್ದು ಅಳತೊಡಗಿದಳು. ಅಮ್ಮನ ಕಂಕುಳಲ್ಲಿದ್ದ ತಮ್ಮ, ತಂಗಿ ಅಳುವುದನ್ನು ಕಂಡು ತಾನೂ ಶುರುಮಾಡಿದ. ನಾನು ತಟ್ಟನೆ ತೊಟ್ಟಿಲ ಕಡೆ ಜಿಗಿದು ತಂಗಿಯ ತೂಗಹತ್ತಿದೆ. ಆದರೂ ಶಬ್ಬೂ ಅಳುವುದನ್ನು ನಿಲ್ಲಿಸಲಿಲ್ಲ.
ಜೋರಾಗಿ ತೂಗೋ ಶಬ್ಬೂ ಅಳೋದು ಕೆಳ್ಸೋದಿಲ್ಲೇನು? ಅಮ್ಮ ನನಗೆ ಹೇಳಿದವಳೇ ತಮ್ಮನ್ನ ನನ್ನ ತೊಡೆ ಮೇಲೆ ಮಲಗಿಸಿ  ಮನೆ ಸ್ವಚ್ಚ  ಮಾಡುತ್ತ  ಕುಳಿತಳು.
***
ನಮ್ಮ ಮನೇಲಿ ನಮ್ಮ ಅಬ್ಬಾ, ಅಮ್ಮಿಗೆ  ನಾವು ಮೂವರು ಮಕ್ಕಳು. ನಾನೇ ದೊಡ್ಡವನು.  ಅಬ್ಬಾನಿಗೆ ನಾನು ಪ್ರೀತಿಯ ರಾಜಕುಮಾರ ಹಂಗಾಗೇ ನನಗೆ ಶಹಜಹಾನ್ ಎಂದೆಸರಿಟ್ಟಿದ್ದ . ನಮ್ಮ ಪುಟ್ಟ ರಾಜ್ಯಕ್ಕೆ ನಾನೇ ರಾಜಕುಮಾರ. ನಾನು ಹುಟ್ಟಿದಾಗ ಹುಲಕೋಟಿ ಮಿಲ್ಲಿಗೆ ಕೆಲಸಕ್ಕೆ ಹೋಗುತ್ತಿದ್ದ ಅಬ್ಬಾ ರಂಜಾನ್, ಬಕ್ರೀದ್  ಹಬ್ಬದೂಟಕ್ಕೆ ಮನೆಗೆ ಬರುತ್ತಿದ್ದ. ಅಬ್ಬಾನ ಗೆಳೆಯರು ವರ್ಷವೆಲ್ಲಾ ಸುರ್ಕುಂಬಾದ ಬಗ್ಗೆ ಹೊಗಳುತ್ತಿದ್ದರು.
ನನ್ನ ನೆನಪಿನ ಮೊದಲ ರಂಜಾನ್ ಅದು ಮನೆಯ ತುಂಬೆಲ್ಲಾ ಸಡಗರ. ಅಬ್ಬಾ ಹಚ್ಚಿದ್ದ ಅತ್ತರಿನ ಸುವಾಸನೆ ಮನೆಯ ತುಂಬೆಲ್ಲಾ ಹರಡಿಕೊಂಡಿತ್ತು. ಅಮ್ಮಿ  ರಾತ್ರಿಯೆಲ್ಲಾ ಕುಳಿತು ನನ್ನ ಕೈಗೆ ಮೆಹಂದಿ ಹಚ್ಚಿ ತಾನೂ ಚೆಂದದ ಚಿತ್ತಾರವನ್ನು ಬಿಡಿಸಿಕೊಂಡಿದ್ದಳು. ಅಮ್ಮಿ  ಮಿರ ಮಿರನೆ ಮಿಂಚುವ ಕೆಂಪು ಸೀರೆ ಉಟ್ಟುಕೊಂಡಿದ್ದಳು. ಅಮ್ಮಿಯ ಕೈಬಳೆಯ ಸದ್ದು ಮನೆಯ ತುಂಬೆಲ್ಲಾ ತುಂಬಿತ್ತು. ಅಮ್ಮಿ ಆಗಾಗ ನಮ್ಮ ಷಹಜಾನ ಹುಡುಗಿಯಾಗಿದ್ರೆ ಚೆಂದಿತ್ತು. ಅವಾಗ ಚೆಂದದ ಬಟ್ಟೆ ಹಾಕಿ ಕೈತುಂಬಾ ಬಳೆ ಹಾಕಿ ಆಭರಣಗಳನ್ನು ಹಾಕಿ ನನ್ನ ಮಗಳನ್ನು ಸಿಂಗರಿಸುತ್ತಿದ್ದೆ ಎನ್ನುತ್ತಿದ್ದಳು. ಹಾಗೆಲ್ಲ ಅಂದಾಗ ನಾನು ಸಿಟ್ಟಾಗಿ  ದೂರ ಸರಿಯುತ್ತಿದ್ದರೆ ನಾಚ್ಕೋಂತಾನೇ ನನ್ನ ಷಾಜು ಅನ್ನುತ್ತಾ  ಮುದ್ದುಮಾಡುತ್ತಿದ್ದಳು.
ಅಬ್ಬಾ ಮತ್ತು ನಾನು ನಮಾಜಿಗೆ  ಈದ್ಗಾಕ್ಕೆ ಆಟೋದಲ್ಲಿ ಹೋಗುತ್ತಿದ್ದರೆ ನಮ್ಮ ಪಕ್ಕದ ಮನೆಯ ಅಬ್ಬಾಸ್ ತನ್ನಪ್ಪನ ಜೊತೆ ಸೈಕಲ್ನಲ್ಲಿ ಹೋಗುತ್ತಿದ್ದ. ಈದ್ಗಾದಲ್ಲಿ ಬಣ್ಣ ಬಣ್ಣದ ಬಲೂನ್ಗಳನ್ನು  ಮಾರ್ತಾ ಇದ್ರು, ನಮಾಜ್ ಮುಗಿಸಿದ ನಂತರ ಅಬ್ಬಾನಿಗೆ  ಹೇಳಿದೆ.
ಅಬ್ಬಾ ನನ್ನ  ಮೊಣಕಾಲು ಬಹಳ ನೋಯ್ತಾ ಇದೆ.
ಹೌದಾ ಏನಾಯ್ತು ? ಅಬ್ಬಾ ಕೇಳಿದ.
ನನಗೊತ್ತಿಲ್ಲ..
ಆಯ್ತು  ಇವತ್ತೇ ಡಾಕ್ಟರ್ ಗೆ ತೋರಿಸೋಣ.
ಮನೆಗೆ ಬಂದ ಮೇಲೆ ಹಬ್ಬದ ಸಡಗರದಲ್ಲಿ ನೋವು ಮರೆತೋಯ್ತು.
ಮುಂದಿನ ರಮಜಾನ್ ಹೊತ್ತಿಗೆ  ನನ್ನ ತಮ್ಮ ಸಮೀರ್ ಹುಟ್ಟಿದ್ದ. ಆದರೆ ಈ ಸಲದ ರಮಜಾನ್ ನಲ್ಲಿ ಅಬ್ಬಾನ ಗೆಳೆಯರು ಯಾರೂ ಬರಲಿಲ್ಲ. ಮಿಲ್ ನ ಮುಚ್ತಾರಂತೆ ಅಂತ ಅಬ್ಬಾ ಅಮ್ಮಿಯ ಮುಂದೆ ಹೇಳೋದು ಕೇಳಿಸುತ್ತಿತ್ತು. ಅದ್ಯಾಕೆ ಮುಚ್ತಾರೆ ನನಗಂತೂ ಗೊತ್ತಾಗಲಿಲ್ಲ. ಅಮ್ಮಿ ಅಬ್ಬಾಗೆ ಸಮಾಧಾನ ಮಾಡ್ತಾನೇ ಇದ್ದಳು. ಅಲ್ಲಾ ನಮ್ಮ ಕೈ ಬಿಡೋದಿಲ್ಲ. ಯಾಕ ಚಿಂತಿ ಮಾಡ್ತೀರಿ? ಬಂದಿದ್ದನ್ನ ಎದುರಿಸೋಣ ಅಂದಳು. ಆದರೂ, ಅಪ್ಪ ಗೊಣಗಾಡ್ತಲೇ ಇದ್ದ. ಇನ್ನೊಂದು ದಿನ ನಾನು ಅಮ್ಮಿ, ಅಬ್ಬಾ ಸಿನಿಮಾ ನೋಡೋದಿಕ್ಕೆ ಹೋಗ್ತಾ ಇದ್ವಿ. ಆಟೋ ಸಿಗಲಿಲ್ಲ ಅಂತಾ ಅಬ್ಬಾ ಟಾಂಗಾದಲ್ಲಿ ಕರೆದುಕೊಂಡು ಹೊಂಟಿದ್ದರು. ಅವತ್ತೂ ಹೇಳಿದೆ ಅಬ್ಬಾ ನನ್ನ  ಮೊಣಕಾಲು ನೋಯ್ತಾ ಇದೆ. ಅಬ್ಬಾ ಹೇಳಿದ ಮರತೇ ಹೋಗಿತ್ತು ಇನ್ನೊಂದು ದಿನ ಡಾಕ್ಟರ್ಗೆ ತೋರಿಸಿ  ಎಕ್ಸ್ರೇ ತೆಗೆಸೋಣ ಎಂದ.
ಮುಂದೊಂದು ದಿನ ಸಂಜೆ ಅಬ್ಬಾ ಬೇಗನೆ ಮನೆಗೆ ಬಂದ. ಅಮ್ಮ ಅಡಿಗೆ ಮಾಡ್ತಾ ಇದ್ಲು. ಏನ್ ಮಾಡ್ತಾ ಇದಿಯಾ? ಬಾ ಇಲ್ಲಿ  ಎಂದು ಅಮ್ಮಿನ ಕರೆದ.  ಅಡಿಗೆ ಮನೇಲಿ ಇದ್ದ ಅಮ್ಮಿಗೆ ಅದು ಕೇಳಿಸಲಿಲ್ಲ. ಸಿಟ್ಟಿಗೆದ್ದ  ಅಬ್ಬಾ ಜೋರಾಗಿ ಕೂಗಿ ಕರೆದ. ನಮ್ಮ ಮನೇಲಿ ಅಷ್ಟು ಜೋರಾಗಿ ಯಾರೂ ಮಾತನಾಡಿರಲಿಲ್ಲ. ಅಮ್ಮಿ ದ್ವನಿ ಕೇಳಿದವಳೇ  ಓಡಿ ಬಂದಳು. ಯಾಕ?  ಏನಾಯ್ತು? ಅಮ್ಮನ ಪ್ರಶ್ನೆಗೆ ಮಿಲ್ ಬಂದಾಯ್ತು ಎಂದ ಅಬ್ಬಾ.
***
ಶಾಲೇಲಿ ಪುಟ್ಬಾಲ್ ಆಡ್ತಾ ಇದ್ರು. ನಾನೂ ಹೋದೆ ಆದರೆ ನನ್ನ ಅವರು ಸೇರಿಸಿಕೊಳ್ಳಲಿಲ್ಲ. ನನಗೂ ಆಡುವ ಆಸೆ ಇತ್ತು. ಅದು ಅವರೇ ತಂದ  ಪುಟ್ಬಾಲ್   ಆಗಿತ್ತು. ಅವರಿಗಿಷ್ಟ ಬಂದವರಷ್ಟೇ ಸೇರಿಕೊಂಡು ಆಡ್ತಾ ಇದ್ರು. ನಾನಂದುಕೊಂಡೆ ನಾನೂ ಒಂದು ಪುಟ್ಬಾಲ್ ತರ್ತೀನಿ ಆಗ ನೀವೂ ನನ್ನ  ಜೊತೆ ಆಡೋಕೆ ಬಂದೇ ಬರ್ತೀರಿ ಅಂತ.
ಮನೆಗೆ ಬಂದ ಮೇಲೆ ಅಮ್ಮಿಗೆ ಪುಟ್ಬಾಲ್ ಕೊಡಿಸು ಅಂತ ಗಂಟು ಬಿದ್ದೆ. ನೋಡೋಣ ಶಾಜು, ಅಬ್ಬಾ ಬಂದ ಮೇಲೆ ಕೊಡಿಸ್ತಾರೆ. ಶಾಣ್ಯಾ ಹುಡುಗಾ, ಓದ್ತಾ ಕೂಡು ಅಬ್ಬಾ ಬಂದ ಮೇಲೆ ತರೋವಂತಿ ಅದ್ಲು ಅಮ್ಮಿ. ಪುಸ್ತಕ ಹಿಡಿದು ಕುಂತರೂ ದೃಷ್ಟಿಯೆಲ್ಲಾ ಬಾಗಿಲಕಡೆಗೆ ಇತ್ತು. ಅಬ್ಬಾ ಬಂದ ಮೇಲೆ ಪುಟ್ಬಾಲ್ ತರೋದು ಅನ್ನೋ ಖುಷಿಯಲ್ಲಿ ಅಬ್ಬಾನ ದಾರಿ ಕಾಯುತಾ ಕುಳಿತಿದ್ದೆ.
ಅಬ್ಬಾ ಬಂದರು. ಅಬ್ಬಾ. ಎಂದೇ, ಎನೋ? ಎಂದಿದ್ದಕ್ಕೆ, ನನಗೆ ಪುಟಬಾಲ್ ಕೊಡಿಸು ನಮ್ಮ ಶಾಲೇಲಿ ಹುಡುಗರು ತಮ್ಮ ಬಾಲ್ನಲ್ಲಿ ಆಡ್ತಾರೆ ನನಗೆ ಕರೆದುಕೊಳ್ಳಲ್ಲ ಅಂದೆ. ಆಯ್ತು ಮುಂದೆ ಕೊಡಿಸ್ತೀನಿ ಅಂದರು. ಅವತ್ತೇ ಬೇಕಿದ್ದರಿಂದ ಗಂಟು ಬಿದ್ದೆ. ಅಬ್ಬಾ ಸಿಟ್ಟಿನಿಂದ ಬೈದವರೇ ಬೆನ್ನಿಗೆ ಒಂದೇಟು ಹಾಕಿದರು. ಅವತ್ತು ರಾತ್ರಿ ಬಹಳ ಹೊತ್ತಿನ ತನಕ ಅಳುತ್ತಿದ್ದೆ. ಮೊಣಕಾಲಿನ ನೋವು ಜಾಸ್ತಿಯಾಗಿತ್ತು.  
***
ಮಿಲ್ ಬಂದಾದ ನಂತರ ಅಬ್ಬಾ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡ್ತಾ ಇದ್ರು. ಆದರೂ ಎಲ್ಲಿಯೂ ಕೆಲಸ ಸಿಗಲಿಲ್ಲ. ಮನೆಯಲ್ಲಿ ದಿನನಿತ್ಯವೂ ಅಬ್ಬಾ ಅಮ್ಮಿಯ ಜಗಳ ಶುರುವಾಗುತ್ತಿತ್ತು. ಸಣ್ಣ ಸಣ್ಣ ಮಾತಿಗೂ ಅಬ್ಬಾ ಸಿಟ್ಟಿಗೇಳುತ್ತಿದ್ದ ಅಮ್ಮಿಯ ಜೊತೆ ಜಗಳಕ್ಕೆ ನಿಲ್ಲುತ್ತಿದ್ದ. ಈ ಸಲದ ರಮಜಾನ್ಗೆ ನಮಗಿಬ್ಬರಿಗೂ ಹೊಸ ಬಟ್ಟೆ ತಂದಿದ್ದ ಅಬ್ಬಾ, ತನ್ನ ಹಳೆಯ ಬಟ್ಟೆಗಳನ್ನೇ ಇಸ್ತ್ರೀ ಮಾಡಿಸಿಕೊಂಡು ಹಾಕಿಕೊಂಡಿದ್ದ. ಅಮ್ಮಿಗೂ ಸಹ ಹೊಸ ಸೀರೆ ತಂದಿರಲಿಲ್ಲ್ಲ. ಅಬ್ಬಾ ನನ್ನ ಮತ್ತು ಸಮೀರನ್ನ ಸೈಕಲ್ನಲ್ಲಿ ಕೂಡಿಸಿಕೊಂಡು ಈದ್ಗಾಕ್ಕೆ ಕರೆದೊಯ್ದ.
ಬಣ್ಣದ ಬಲೂನ್ಗಳತ್ತ ನಮ್ಮ ದೃಷ್ಟಿ.
ಅಬ್ಬಾ ಹೇಳಿದ ನನ್ನ ಹತ್ತಿರ ಇವತ್ತು ದುಡ್ಡಿಲ್ಲ, ಏನೂ ಕೇಳಬೇಡಿ ನಾಳೆ ಕೊಡಿಸ್ತಿನಿ ಅಂದ.
ನಾವು ಹೂಂ ಅಂದೆವು..
ಅವತ್ತಿನ ನಮ್ಮ ರಮಜಾನ್ ಹಬ್ಬದೂಟದಲ್ಲಿ ಬಿರಿಯಾನಿ ಇರಲಿಲ್ಲ. ಅಮ್ಮ ಅನ್ನದ ಜೊತೆ ಮಜ್ಜಿಗೆ ಬಡಿಸಿದಳು. ಅವಳ ಕೈಗೆ ಮೆಹಂದಿ ಇರಲಿಲ್ಲ. ಅವಳ ಕಣ್ಣಲ್ಲಿ ನೀರಿತ್ತು. ಅಬ್ಬಾ ಮೂಲೆಯಲ್ಲಿ ಶೂನ್ಯದತ್ತ ದೃಷ್ಟಿಇಟ್ಟು ಕುಳಿತಿದ್ದ. ಸ್ವಲ್ಪ ಹೊತ್ತಿನ ನಂತರ ಈದ್ ಮುಬಾರಕ್ ಹೇಳಲು ಬರುವವರಿಗೆ  ಶುಭಾಶಯ  ಕೋರಲು ಮನೆಯ ಹೊರಗೆ ಹೋಗಿ ನಿಂತ.
ಅವರಿವರ ವಶೀಲಿಯಿಂದಾಗಿ ಊರಿನಲ್ಲಿಯೇ  ಶುರುವಾಗಿದ್ದ ಪ್ಯಾಕ್ಟರಿಗೆ ಕೆಲಸ ಸಿಕ್ಕಿತು. ಆದರೂ ಅಲ್ಲಿ ಇಲ್ಲಿ ಮಾಡಿದ್ದ ಸಾಲಕ್ಕೆ ಮನೆ ಮಾರಬೇಕಾಯಿತು. ಸೋರುವ ಮನೆಯನ್ನು ವತ್ತಿ ಹಾಕಿಕೊಂಡು ಈ ಮನೆಗೆ ಬಂದೆವು.
***
ಕಚಿಪಿಚಿ ಎನ್ನುತ್ತಿರುವ ಮನೆ ಸಾರಿಸುವುದರಲ್ಲಿ ಅಮ್ಮನಿಗೆ ಸಾಕುಸಾಕಾಯಿತು. ದೊಡ್ಡವನಾದ ಮೇಲೆ ನಾನು ಮಾಡಬೇಕೆಂದಿರುವ ಕೆಲಸಗಳಲ್ಲಿ ಒಂದು ಎಂದರೆ  ಮಳೆಗಾಲದಲ್ಲಿ ಮನೆ ಸೋರುವುದನ್ನು ತಡೆಗಟ್ಟುವುದು. ಈ ಮನೆಗೆ ಬಂದ ಮೇಲೆಯೇ ಶಬ್ಬೂ ಹುಟ್ಟಿದ್ದು. ಅಮ್ಮಿಯ ಆಸೆಯಂತೆ ಅವಳಿಗೆ ಹೆಣ್ಣು ಮಗಳು ಹುಟ್ಟಿದಳು. ಆದರೂ ಅವಳ ಕನಸಿನಂತೆ ಸಿಂಗರಿಸಿ ಉಡಿಸಿ ತೊಡಿಸಲು, ಸಂಭ್ರಮಿಸಲು ಅಮ್ಮಿಯ ಕೈಲಾಗುತ್ತಿಲ್ಲ. ಬರಡಾಗಿರುವ  ಕೊರಳು, ಕೈಗಳು, ಓಲೆ ಕಳೆದುಕೊಂಡ ಕಿವಿಗಳು ಅವಳನ್ನು ಅಣಕಿಸುತ್ತಿದ್ದವು. ಆದರೂ ಅಮ್ಮಿಯ ಕಣ್ಣುಗಳಲ್ಲಿ ನಾಳೆಯ ದಿನದ ಕನಸುಗಳು ಎಂದಿಗೂ ಹಾಗೇ ಇದ್ದವು. ಮುಂದೆ ದೊಡ್ಡವನಾದ ಮೇಲೆ ನಮ್ಮ ಶಾಜು ನನಗೆ ಎಲ್ಲ ಕೊಡಿಸ್ತಾನೆ ಅಂತಾ ಇರ್ತಾಳೆ.
ರಮಜಾನ್, ಮೊಹರಂ, ಬಕ್ರೀದಗಳು  ಬಂದು ಹೋಗುತ್ತಲೇ ಇದ್ದವು. ಬಂಧುಗಳು, ಅಪ್ಪನ ಮಿತ್ರರು ಈಗ ಹಬ್ಬಕ್ಕೆ ಬರುತ್ತಿಲ್ಲ.ಈಗ ನಾನೂ ಗ್ಯಾರೇಜ್ ಕೆಲಸಕ್ಕೆ ಹೋಗುತ್ತಿದ್ದೆ. ಮುಂದೊಂದು ರಮಜಾನ್ನ ತಿಂಗಳ ಮೊದಲ ರೋಜಾ ದಿನದಂದು  ಅಬ್ಬಾ ಇಹಲೋಕ ತ್ಯಜಿಸಿದರು.
***
ಕಾಲಚಕ್ರದ ಪ್ರವಾಹದಲ್ಲಿ ಯಾವುದು ನಿಂತಿದೆ. ಎಲ್ಲವನ್ನೂ ತನ್ನೊಂದಿಗೆ ಕೊಚ್ಚಿಕೊಂಡು ಹೋಗುತ್ತಲೇ ಇರುತ್ತದೆ. ಮುಂದೊಂದು ದಿನ ನನಗೂ ಮದುವೆಯಾಯಿತು. ಮಗ ಹುಟ್ಟಿದ. ಕಾಲಾನುಕ್ರಮದಲ್ಲಿ ತಮ್ಮ, ತಂಗಿಗೆ ಮದುವೆಯಾಯಿತು. ತಮ್ಮ ತಮ್ಮ ಬದುಕನ್ನು ಹುಡುಕಿಕೊಂಡು ಹೋದರು. ನನ್ನ ಮಗನಿಗೆ ಮದುವೆಯಾಯಿತು. ಮಗ ಹುಟ್ಟಿದ. ಮರಿ ಮೊಮ್ಮಗನನ್ನು ಕಂಡ ಅಮ್ಮಿ ಮುಂದೊಂದು ದಿನ ಕಣ್ಮುಚ್ಚಿದಳು.
ಶಾಲೆಗೆ ಹೋಗುತ್ತಿದ್ದ ನನ್ನ ಮೊಮ್ಮಗ ಒಂದು ದಿನ ಬಂದವನೇ ನನಗೆ ಕೇಳಿದ.
ದಾದಾಜಿ ನನಗೂ ಪುಟ್ಬಾಲ್ ಕೊಡಿಸು. ನನ್ನ ಕಣ್ಣಲ್ಲಿ ನೀರು.
ಯಾಕೆ ದಾದಾಜಿ ಕಣ್ಣಲ್ಲಿ ನೀರು ಕೇಳಿದ ಅವನು. ಪುಟ್ಬಾಲ್ ಬೇಡ ಬಿಡು ಅಂದ.
ಏನೂ ಇಲ್ಲಪ್ಪ  ಪುಟ್ಬಾಲ್ ತಾನೇ ಕೊಡಿಸ್ತೀನಿ ಎಂದೆ.
ಮತ್ಯಾಕೆ ಅಳ್ತಿದಿಯಾ ಅಂದ ನಾನಂದೆ ನನ್ನ ಮೊಣಕಾಲು ನೋವು ಕೊಡ್ತಾ ಇತ್ತಲ್ಲಾ ಅದಕ್ಕೆ ತಟ್ಟನೆ ಅವನೇಳಿದ. ಹೌದಾ ಡಾಕ್ಟರ್ ಹತ್ತಿರ ಹೋಗಿ ಎಕ್ಸರೇ ತೆಗಿಸು.
ಹಳೆಯ ನೋವನ್ನು ಕೆದಕಿದ್ದ ಮೊಮ್ಮಗನಿಗೆ ಪುಟ್ಬಾಲ್ ಕೊಡಿಸಿದೆ. ಅವನು ಆಡುತ್ತಾ  ಇರೋದನ್ನ ನೋಡುತ್ತಾ ಕುಳಿತೆ,
ಹೌದು ಎಕ್ಸರೇ ತೆಗಿಸಬೇಕು ಅಂದುಕೊಂಡೆ. ಮೊಣಕಾಲು ನೋವು ಕಡಿಮೆಯಾಗ್ತಾ ಇದೆ ಅಂತಾ ಅನಿಸಿತು.

ಧೈರ್ಯಂ ಸರ್ವತ್ರ ಸಾಧನಂ




ಎದ್ದೇನಬೇ ಎಮ್ಮಾ?
ಎದ್ನೆವ ಹನ್ಮವ್ವಾ. ನೀ ಎದ್ದೇನ್ಬೇ?
ನಾ ಈಗ ಎದ್ನೋಡಬೇ ಎಮ್ಮಾ.
ನಿದ್ದಿ ಬೇಸಿ ಆತಿಲ್ಲವಾ?
ನಿನಗ ಗೊತ್ತ ಐತೆಲ್ಲ ಎಮ್ಮಾ.
ಅದಕ ಕೇಳಕತ್ತೀನವಾ ಹನ್ಮವ್ವ, ನಿದ್ದಿ ಹೆಂಗಾತು ಅಂತ? ನಿನ ಗಂಡ ಕುಡ್ದು ಬಂದು, ನಿನಗ ಹೊಡ್ಯಾದು, ಬಡ್ಯಾದು ಮಾಡದು ನನಗ ಗೊತ್ತಿಲ್ಲೇನು? ನಿನ್ನಿ ರಾತ್ರೀನೂ ಗಲಾಟಿ ಮಾಡಿದ್ನೇನು ನಿನ ಗಂಡ?
ನನ್ನ ಜೀವ ಇರೋಮಟ ಅವ ಹೊಡ್ಯಾದು, ಬಡ್ಯಾದು ಇದ್ದಿದ್ದಬೇ. ಜೀವ ಇರೋಮಟ ಅವ ಹಂಗ ಮಾಡದ ಖರೇನ ಐತಿ. ಜೀವ ಹೋದಮ್ಯಾಲ ಅಂಗ ಮಾಡಾಕಾಗಂಗಿಲ್ಲಲ ಅದಕ ಮಾಡಾಕತ್ಯಾನ. ಅವನ ಕಡೀಂದ ಹೊಡ್ಸಿಕೊಳ್ಳಾಕ ನನ ಜೀವ ಗಟ್ಯಾಗಿಬಿಟೈತಿ. ಹಿಂದಿನ ಜಲ್ಮದಾಗ ನಾ ಏನ ಪಾಪ ಮಾಡಿದ್ನೋ ಏನೋ? ಹಣ್ಯಾಗ ಬರ್ದಿದ್ದು ಅನುಭೋಗಿಸ್ಬೇಕಲ್ಲ? ಸೆಟಿಗೆವ್ವ ಬರ್ದದ್ದು ತಪ್ಪಂಗಿಲ್ಲಲ್ಬೇ. ನನಗಂತೂ ಈ ವಯಸ್ಸಿಗೇನೇ ಜೀವ ಬ್ಯಾಸರಾಗಿ ಹೋಗೇತೆ. ನಿನ್ನಿ ರಾತ್ರಿನೂ ಅವ ಜೊರಾಗೇ ಹೊಡ್ದಾನ. ಇಕ ಈಟ ಎದಿ ಮ್ಯಾಲಿನ ಸೆರಗ ಸರ್ಸತೀನಿ, ನೋಡ ಮತ್ತ. ಕುಡ್ದ ನಿಶಾದಾಗ ಅವ ಹೆಂಗ ಎದಿ ಕಡ್ದಾನ ನೋಡು. ಆ ಬ್ಯಾನಿಗೆ ನಾ ಕುಬುಸನ ಹಾಕ್ಕೊಂಡಿಲ್ಲ. ನೀನ ನೋಡಬೇ ಮುದೇಕಿ. ಸೀರಿ ಸೆರ್ಗ ತೆಗಿಲಾ ಹೆಂಗ?
ಎವ್ವಾ, ಆ ಬಾಡ್ಯಾಗ ಅದೇನ ಬಂದಿತ್ತ? ಅದೆಂಗ ಕಡ್ದಾನಲ್ಲಬೇ ಕೋಡಿ? ಜಿಟ್ಯಾ, ಊರ ಜಿಟ್ಯಾ. ಅವನ ಕೈ ಸೇದೋಗ. ಕುಡ್ಡ ನಿಶಾದಾಗ ಕಡೀಬೇಕಂದ್ರ ಅವಗ ಅದೆಂತ ಕೆಟಬ್ಯಾನಿ ಬಂದಿತ್ತೇನಬೇ? ಸೆರಗ ಹಾಕ್ಕೊಳ್ಳವಾ. ತಟಗ ಅರಿಷಿಣ ಗಿರಿಷಣ ಪುಡಿ ಹಚಿಗೊಳ್ಳಬೇ, ನಂಜು ಗಿಂಜು ಆದೀತು. ಇಲ್ಲಂದ್ರ ದಾಗದಾರ ತಾಕ ಹೋಗಿ ತೋರ್ಸಿಕೊಂಡು ಬಂದ್ಬಿಡು. ಈಗಿನ ಕಾಲ ಬಾಳ ಸೂಕ್ಷ್ಮ ಅದಾವಬೇ. ಅವ್ನ ದುರುಗವ್ವ ನುಂಗಲಿ, ಸುಡುಗಾಡ್ಯಾಗ ಇಕ್ಕಿ ಸುಣ್ಣ ಬಡೀಲಿ. ಅಲ್ಲಬೇ, ಇದ ಹೆಂಗಾತು?
ನಿನ್ನಿ ರಾತ್ರಿ ಅವ ಮನಿಗೆ ಬರೋ ವ್ಯಾಳ್ಯಾ ನನಗ ನಿದ್ದಿ ಮಬ್ಬು ಬಾಳ ಇತ್ತು. ಅವ ರೊಕ್ಕ ಬೇಡ್ದ. ಮುಂಜಾನಿ ಕೊಡ್ತೀನಂತ ಹೇಳಿದ್ದಕ್ಕ ಅವ ಸಿಟ್ಟಿಗಿ ಬಂದ. ಸಿಟಿನ್ಯಾಗ ನನ ಮೊಲಿ ಕಡ್ದ. ಅದಕ್ಕ, ನಾ ಹೇಳಿದ್ದಬೇ, ನನ್ನ ನಸೀಬ ಸರಿ ಇಲ್ಲಂತ.
ಏ ಹನ್ಮವ್ವಾ, ನೀ ತೆಪ್ಪ ತಿಳ್ಕೋಣಾಂಗಿಲ್ಲ ಅಂದ್ರ ನಾ ಒಂದ ಮಾತ ಹೇಳ್ತೀನಿ. ಕೇಳಂಗದೀಯೇನು?
ಎಮ್ಮಾ, ನೀ ಹೇಳಿದ್ದು ನಾ ಯಾವ್ದು ಕೇಳಿಲ್ಲ, ಯಾವತ್ತ ಕೇಳಿಲ್ಲ, ಹೇಳ ಮತ್ತೆ? ಈಗ ಹೇಳದನೂ ಕೇಳ್ತೀನಬೇ. ನನಗಾರ ಯಾರ ದಿಕ್ಕದರ ಇಲ್ಲಿ ನಿನಬಿಟ್ಟು? ನೀ ಹೇಳಿದ್ದು ತಪ್ಪದ ಕೇಳ್ತೀನಿ. ಹೇಳ ಮತ್ತ?
ಹನ್ಮವ್ವಾ, ನೀ ಗಟ್ಯಾಗಬೇಕ್ಬೇ. ಇಲ್ಲಂದ್ರ ನಡೆಂಗಿಲ್ಲ. ನೀ ಅಂಜಿಕೆಂತ ನಿನ ಗಂಡಗ ಸೆರಗ ಹಾಸೀದಿ ಅಂದ್ರ, ಅವ ನಿನ ಮ್ಯಾಲ ಬರತಾನ. ಅವ ಮನಿಷರ ಪೈಕಿನೇ ಇಲ್ಬೇ. ಅವ ಸಣ್ಣಾವ ಇದ್ದಾಗಿಂದ ನಾ ಅವ್ನ ನೋಡಿಲ್ಲೇನು? ಹದಿನಾರಕ್ಕ ನಿನ ಗಂಡ ರಾಮ್ಯಾಗ ಹೆಂಗ್ಸರ ಚಟ ಇತ್ತಂತ. ನಿನಗರ ಏಟ ವಯಸ್ಸಾಗೇತಿ? ಬಾಳ ಅಂದ್ರ ಇಪ್ಪತ್ರ ಮ್ಯಾಲ ಐದ ಇರ್ಬೇಕಲ್ಲ? ಮೂರು ಮಕ್ಕಳನ್ನ ಹಡ್ದು ಬಿಟ್ಟೀದಿ. ಆಗಲೇ ಜೀವ್ನ ಬ್ಯಾಸರ ಆಗೈತಿ ಅಂದ್ರ ಹೆಂಗ?
ಮೈ ನೆರ್ತು ಎಡ್ಡ ವರ್ಷದಾಗ ಮದುವ್ಯಾತು ನಿಂದು. ನಿನ ಗಂಡಗ ಆಗ ಹದಿನೆಂಟೋ, ಹತ್ತೊಂಭತ್ತೋ ಅಟ. ತುಡುಗ ದನದಂಗ ಅವರಿವರ ಹೊಲ ಮೇಯ್ಕೊಂಡು ತಿರಗ್ತಿದ್ದ ಅವಗ ಮದುವ್ಯಾದ ಮ್ಯಾಲೆ ಒಳ್ಳೇ ಗಮಿಂಡ ಭೂಮಿ ಸಿಕ್ಕಾಂಗಾತು. ನಿನ್ಕುಡನೂ ಮಜಾ ಮಾಡ್ತನ, ಅಲ್ಲದ ಬ್ಯಾರೆ ತುಡುಗ ದನಗೋಳ ಕೂಡಾನೂ ಮಜಾ ಮಾಡ್ಕೆಂತ ತಿರಗಕತ್ಯಾನ. ನೀ ಹೆಂಗೂ ಅವರಿವರ ಮನ್ಯಾಗ ಕಸ ಮುಸುರಿ ಮಾಡಿ, ನಾಕ ದುಡ್ಡ ಗಳಸ್ತಿ. ಮಕ್ಕಳನ್ನ ಸಾಕಾಕತ್ತೀದಿ. ಅಲ್ಲದ, ಅವಂಗೂ ಕೂಳು ಕುಚ್ಚಿ ಹಾಕ್ತಿ. ನಿನ ಗಂಡ ದುಡಿದದ್ದ ಬರೀ ಅವಗ ಸೆರೆ ಕುಡೀಲಕ್ಕ ಮತ್ತು ಸೂಳ್ಯಾರ ಮಾಡ್ಲಿಕ್ಕ ಆಗ್ತಾದ. ಅದಕ್ಕ, ನೀ ಗಟ್ಟಿ ಮನಸ ಮಾಡ್ಬೇಕಬೇ ಅಂತ ನಾ ಹೇಳಿದ್ದು.
ಅಲ್ಲಬೇ ಎಮ್ಮಾ, ನೀ ಏನ್ ಹೇಳ್ಬೇಕಂತಿದೀ, ಅದನ್ನರ ಹೇಳು.
ಹಂಗಾರ ನಾ ಹೇಳೋದ್ನ ಚೆಂದಾಗಿ ಕೇಳ್ಸೋಕೋ. ಬೇ ಹನ್ಮವ್ವಾ, ಈ ಗಂಡ್ಸರು ಹೆಂಗ್ಸರ ಮೊಲಿ, ಇನ್ನೊಂದು ಅಂದ್ರ ಬಾಯಿ ಬಾಯಿ ಬಿಡ್ತಾವ. ಇದಕ್ಕ ನಿನ ಗಂಡ ರಾಮ್ಯಾನೂ ಕೂಡ ಬ್ಯಾರೆ ಏನೂ ಅಲ್ಲ. ಹತ್ರೊಳಗ ಹನ್ನೊಂದ್ರಂಗ ಅವನೂ ಯಾವಾಗ್ಲೂ ಜೊಲ್ಲ ಸುರಿಸ್ತಿರತಾನ. ಅದಕ್ಕ, ನಾವು ಹೆಣ್ಮಕ್ಳು ತಟಗ ಬಿಗೀಲೇ ಇರ್ಬೇಕು. ಅವ್ರು ಕೇಳಿ ಕೇಳ್ದಂದ ನಾವು ಕುಣೀಬಾರ್ದು. ನಿನ ಸಂಸಾರನ್ನ ನಾ ಬಾಳ ವರ್ಷದಿಂದ ನೋಡ್ಲಿಕತ್ತೀನಿ. ನೀ ದುಡ್ದ ರೊಕ್ಕದಿಂದ ನಿಮ್ಮ ಮನಿ ನಡಿಲಿಕ್ಕತ್ಯಾದ. ರಾಮ್ಯಾ ದುಡಿದದ್ದ ಅವ್ನ ಚಟಗಳ್ಗೇ ಸಾಕಾಂಗಿಲ್ಲ. ಅವ ಕೇಳಿ ಕೇಳ್ದಂಗ ನಿ ರೊಕ್ಕಾನೂ ಕೊಡ್ತಿ, ನಿನ ಮೈನೂ ಒಪ್ಪಿಸ್ತಿ. ಹಿಂಗಾಗಿ ಅವಗ ಜೀವನ ಮಾಡಾದು ಬಾಳ ಹಗುರಾಗಿ ಬಿಟೈತಿ. ಅವ ದುಡೆಂಗಿಲ್ಲ, ದುಃಖ ಬಡೆಂಗಿಲ್ಲ.
ರಾಮ್ಯಾ ರಾತ್ರಿ ಕುಡ್ದ ಬಂದಾಗ ಅವನ ನಾಲ್ಗೀಗಿ ಹೆದ್ರಿ ನೀ ಸುಮ್ಮನ ಇರ್ತಿ, ರೊಕ್ಕಾನೂ ಕೊಡ್ತಿ, ಮೈನೂ ತೆರಕೊಳ್ತಿ. ನೀ ದುಡ್ದ ರೊಕ್ಕ ಎಲ್ಲಾ ಅವನ ಶೋಕಿಗೆ ಹೋಗ್ತದ, ಇನ್ನೂ ತಟಗ ಹೆಚ್ಚಿಗೆ ಕುಡಿತಾನ, ಅವ್ನ ಸೂಳೇರಿಗೆ ಹರ್ದ ಹಂಚಿ ಹೋಗ್ತದ. ನೀ ಅವ್ನಿಗೆ ರೊಕ್ಕ ಕೊಡೋದ ಮೊದ್ಲು ನಿಲ್ಸು. ಅವ ಒದರ್ಯಾಡಕ, ನಿನಗ ಬಡ್ಯಾಕ ಚಾಲೂ ಮಾಡಿದ್ರ, ನೀ ಅವ ಹೇಳ್ದಂಗ ಕೇಳದ ಬಿಟ್ಟು ಹೇರಗಚ್ಚಿ ಹಾಕಿ ನಿಲ್ಲು. ರಾಣಿ ಚೆನ್ನಮ್ಮನಂಗಾಗು. ತಾನ ದಾರೀಗಿ ಬರ್ತಾನ. ಅವಗ ಕೊಡ ದುಡ್ಡನ್ನ ನಿನ್ನ ಮಕ್ಳ ಸಾಲಿ ಕಚರ್ಿಗಿ ಕೊಡು. ಹುಡುಗರನ್ನ ಶಾಣ್ಯಾರಾಗಿ ಮಾಡು. ದುಡಿದದ್ದೆಲ್ಲಾ ಆ ಕುಡುಕಗ ಕೊಟ್ಟು ನಿನ್ನ ಜೀವನ ಹಾಳ ಮಾಡ್ಕೋಳದಲ್ಲದ ಮಕ್ಕಳ ಬಾಯಾಗ ಮಣ್ಣ ಹಾಕಾಕತ್ತೀದಿ. ನೀ ಅವ್ನ ಎದ್ರಿಗೆ ಸೆಟದ ನಿಂತೀ ಅಂದ್ರ ಅವ ತಾನ ತಣ್ಣಗಾಕಾನ. ಎರ್ಡ ದಿವ್ಸ ಅವ ಹೆಗರ್ಯಾಡ್ತ್ಯಾನ. ಆಮ್ಯಾಕ ತಾನ ದಾರೀಗಿ ಬರ್ತಾನ.
ಬೇ ಹನ್ಮವ್ವಾ, ನೀ ಅಂಜಿಕ್ಯಾ ಬ್ಯಾಡ. ನಿನ್ನ ಹೆಸ್ರ ಹನ್ಮವ್ವ, ಅಂದ್ರ ಹಣಮಂತ ದೇವ್ರು ಅಂತ. ಆ ಹಣಮಂತ ಲಂಕಿ ಸುಟ್ಟಂಗ, ನೀ ಆ ರಾಮ್ಯಾನ ದುಷ್ಟ ಬುದ್ದಿ ಸುಡು. ಮೊದಲ ನೀ ಹಣಮಂತನ ಅವತಾರ ತಾಳು. ನಿನ್ನ ಜೊತಿಗೇ ನಾ ಅದೀನಿ. ತಟಗ ಗಟ್ಟಿ ಮನಸ ಮಾಡಬೇ. ನಿಂದು ಜೀವನ ಇನ್ನೂ ಬಾಳ ಐತೆವ. ದೇವ್ರ ಮ್ಯಾಲೆ ಭಾರ ಹಾಕವಾ. ಎಲ್ಲಾ ವೈನಾಗಿ ನಡೀತೈತೆ.
ಆತಬೇಎಮ್ಮಾ, ನಿ ಹೇಳ್ದಂಗ ನಾ ಕೇಳ್ತೀನಿ. ಇವತ್ನಿಂದನ ನಿನ ಮಾತ ಪಾಲಿಸ್ತೀನಿ. ನೀನ ನನಗ ದೇವ್ರು, ತಾಯಿ, ತಂದೆಬೇ ಎಮ್ಮಾ.
ನಡೀಬೇ ಹೊತ್ತಾಗೈತೆ. ನಿನ ಗಂಡ ಮತ್ತ ಒದರ್ಯಾಡ್ಯಾಕ ಸುರು ಮಾಡ್ತನ. ಹುಡುಗ್ರಿಗೆ ಸಾಲಿಗೆ ಕಳ್ಸಾಕ ತಯಾರ ಮಾಡ್ಬೇಕಲ್ಲ. ನಡಿ, ನಡಿ.
ಹೀಂಗ ಮುಂಜಾನೆ ಮುಂಜಾನೆ ಮಾತು ನಡೆದಿದ್ದು ಊರಿನ ಆಶ್ರಯ ಕಾಲೋನಿಯಲ್ಲಿ ವಾಸವಾಗಿರುವ, ಅಕ್ಕ ಪಕ್ಕದ ಮನೆಯವರಾದ ಭೀಮವ್ವಜ್ಜಿ ಮತ್ತು ಹನ್ಮವ್ವನ ನಡುವೆ. ಅರವತ್ತೈದರ ಆಜು ಬಾಜುವಿನ ವಯಸ್ಸು ಭೀಮವ್ವ ಅಜ್ಜಿದು. ಭೀಮವ್ವಜ್ಜಿ ಗಂಡ ತೀರಿಕೊಂಡು ಆಗಲೇ ಹದಿನೈದು ವರ್ಷ ಆಗಿದ್ದವು. ಇಲ್ಲಿ ಹಿರೇ ಮಗಳ ಮನೆಯಲ್ಲಿ ಹತ್ತು ವರ್ಷಗಳಿಂದ ಇದ್ದಾಳೆ. ಗಂಡ ಸತ್ತ ಮೇಲೆ ಐದು ವರ್ಷ ಹಂಗೂ, ಹಿಂಗೂ ಗಂಡು ಮಕ್ಕಳ ಮನೆಯಲ್ಲಿ ಇರುವುದಕ್ಕೆ ಪ್ರಯತ್ನಿಸಿದ್ದಳು. ಈಕೆಗೂ ಸೊಸೆಯಂದಿರಿಗೂ ಹೊಂದಾಣಿಕೆ ಆಗದ್ದರಿಂದ ಈಗ ಮಗಳ ಮನೆಯಲ್ಲಿ ಠಿಕಾಣಿ ಹೂಡಿದ್ದಾಳೆ. ಜೀವನದಲ್ಲಿ ಎಲ್ಲಾ ತರಹದ ನೋವು-ನಲಿವು ಉಂಡಾಳ. ಹಂಗಾಮದ ಹುಡುಗಿ ಹನ್ಮವ್ವ ಕಟಿ ಪಿಟಿ ಬಿಡೋದನ್ನು ನೋಡುತ್ತಿದ್ದ ಭೀಮವ್ವನ ಕರುಳು ಚುರುಕ್ಕೆನ್ನುತ್ತಿತ್ತು.
ಹನುಮವ್ವಗೆ ಮದುವೆ ಆದಾಗ ಆಕೆಗೆ ಹದಿನೈದು ತುಂಬಿ ಹದಿನಾರು ನಡೆಯುತ್ತಿತ್ತು. ರಾಮಪ್ಪ ಆಕೆಯ ತಾಯಿಯ ತಮ್ಮ. ಕಳ್ಳು, ಬಳ್ಳಿ ಹಚ್ಚಿಕೊಳ್ಳಬೇಕೆಂದು ತಮ್ಮಗೇ ಮಗಳನ್ನು ಕೊಟ್ಟಿದ್ದಳು ಕಲ್ಲಮ್ಮ. ರಾಮಪ್ಪನೂ ಕೂಲಿ ನಾಲಿ, ಹಮಾಲಿ ಕೆಲಸ, ಅದೂ, ಇದೂ ಅಂತ ಮಾಡುತ್ತಿದ್ದ. ಮದುವೆ ಆದ ಮೇಲೆ ಹನುಮವ್ವನೂ ನಾಲ್ಕೈದು ನೌಕರದಾರರ ಮನೆಗಳ ಕಸ, ಮುಸುರೆ ಕೆಲಸ ಹಿಡಿದು, ತಾನೂ ಗಂಡನ ಜೊತೆ ಸಂಪಾದಿಸುವುದಕ್ಕೆ ಶುರು ಮಾಡಿದ್ದಳು. ಮೊದ ಮೊದಲು ರಾಮಪ್ಪಗೆ ಯಾವ ಚಟಗಳೂ ಇರಲಿಲ್ಲ. ಹನುಮವ್ವ ಮೊದಲನೇ ಬಾಣಂತನಕ್ಕೆ ತವರು ಮನೆಗೆ ಹೋಗಿದ್ದಾಗ, ಒಂದೊಂದೇ ಚಟಗಳನ್ನು ಕಲಿತ ರಾಮಪ್ಪ. ಮೊದಲು ಸಣ್ಣಾಗಿ ಕುಡಿಯುವುದನ್ನು ಕಲಿತ. ನಂತರ ಹೆಂಗಸರ ಸಹವಾಸವನ್ನೂ ಹಚ್ಚಿಕೊಂಡ. ಎಷ್ಟಾದರೂ ಅವನದು ಉಪ್ಪು, ಹುಳಿ ಉಂಡ ದೇಹ ಅಲ್ಲವೇ?
ಹೀಗೇ ಚಟಗಳನ್ನು ಹಚ್ಚಿಕೊಂಡಿದ್ದ ರಾಮಪ್ಪ ಮುಂದೆ ಆವಾಗಾಗ ಹೆಂಡತಿ ಹನುಮವ್ವಗೆ ಹೊಡೆಯುವುದು, ಬಡಿಯುವುದು ಶುರು ಮಾಡಿದ. ತನ್ನ ಚಟಗಳ ಸಲುವಾಗಿ ಮೇಲಿಂದ ಮೇಲೆ ಹಣಕ್ಕಾಗಿ ಹೆಂಡತಿಯನ್ನು ಪೀಡಿಸತೊಡಗಿದ. ತಾನು ದುಡಿದದ್ದು ಸಾಕಾಗದಾದಾಗ ಆಕೆಯ ದುಡಿತದ ಹಣಕ್ಕಾಗಿ ಕಾಡಿಸತೊಡಗಿದ. ಮನೆಯ ಯಾವ ಮೂಲೆಯಲ್ಲಿ ಹನುಮವ್ವ ದುಡ್ಡನ್ನು ಬಚ್ಚಿಟ್ಟಿದ್ದರೂ ಅವ ಹುಡುಕಿ, ಹುಡುಕಿ ತೆಗೆದುಕೊಂಡು ಹೋಗುತ್ತಿದ್ದ.
ಹನುಮವ್ವಗೆ ರಾಮಪ್ಪನ ದಬ್ಬಾಳಿಕೆ, ದೌರ್ಜನ್ಯ, ಬಲಾತ್ಕಾರ, ಹೊಡೆತ, ಬಡಿತ ಜಾಸ್ತಿಯಾಗಿದ್ದುದರಿಂದ ಆಕೆಗೆ ಜೀವನವೇ ರೋಷಿ ಹೋದಂತಾಗಿತ್ತು. ಮನೆಯ ಒಳಗಿನ ಕಲಹ ಹೊರಗೆ ತೋರಿಸಬಾರದೆಂದು ಮಯರ್ಾದೆಗೆ ಅಂಜಿ ಗಂಡನ ಘನಕಾರ್ಯಗಳನ್ನು ಮೌನವಾಗಿ ಸಹಿಸಿಕೊಂಡು ಜೀವನ ಸವೆಸುತ್ತಿದ್ದಳು. ಆಕೆಗೂ ತಗ್ಗಿ ಬಗ್ಗಿ ನಡೆದು ಸಾಕಾಗಿ ಹೋಗಿತ್ತು. ಇಂದು ಭೀಮವ್ವಜ್ಜಿ ಧೈರ್ಯ ತುಂಬಿದ್ದರಿಂದ ಆಕೆ ಪರಸ್ಥಿತಿಯನ್ನು ಎದುರಿಸಲು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕತೊಡಗಿದಳು. ಗಂಡನ ಅಟ್ಟಹಾಸವನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬ ವಿಚಾರದಲ್ಲಯೇ ಇದ್ದಳು ಇಡೀ ದಿನ.
ಎಂದಿನಂತೆ ಅಂದೂ ಸೂರ್ಯ ದೇವ ತನ್ನ ಕಾಯಕ ಮುಗಿಸಿ, ಪಶ್ಚಿಮ ದಿಗಂತದಲ್ಲಿ ಮರೆಯಾದ. ಸೂರ್ಯ ಮುಳುಗುವಾಗ ಎಲ್ಲೆಡೆ ಪಸರಿಸಿದ್ದ ಹೊಂಬಣ್ಣವನ್ನು ಕಂಡ ಹನುಮವ್ವ, ತನ್ನ ಬಾಳಲ್ಲಿಯೂ ಒಂದು ಹೊಸ ಬೆಳಕು ಮೂಡಬಹುದೇ ಎಂದು ಅಂದುಕೊಂಡಳು ಮನದಲ್ಲಿ ಅಂದು. ಎಂದಿನಂತೆ ರಾಮಪ್ಪ ತೂರಾಡುತ್ತಾ ಮನೆಗೆ ಬಂದಾಗ ಆಗಲೇ ರಾತ್ರಿ ಒಂಭತ್ತು ಗಂಟೆ ದಾಟಿತ್ತು. ಇಡೀ ದಿನ ಕೆಲಸ ಮಾಡಿದ್ದ ಹನುಮವ್ವಗೆ ಹಾಸಿಗೆ ಕೈ ಬೀಸಿ ಕರೆಯುತ್ತಿದ್ದರೂ, ಗಂಡಗಾಗಿ ದಾರಿ ಕಾಯುತ್ತಿದ್ದಳು ತೂಕಡಿಸುತ್ತಾ. ಗಂಡ ಬರುತ್ತಲೇ ತಡಬಡಿಸಿ ಎದ್ದು ಊಟಕ್ಕೆ ಇಟ್ಟಳು. ಮಕ್ಕಳೆಲ್ಲಾ ಮಲಗಿ ಆಗಲೇ ಬಹಳ ಹೊತ್ತಾಗಿತ್ತು. ಊಟ ಮುಗಿಯುತ್ತಿದ್ದಂತೆ ರಾಮಪ್ಪ, ಹನುಮವ್ವನನ್ನು ತೆಕ್ಕೆಗೆ ಹಾಕಿಕೊಳ್ಳಬೇಕೆಂದು ಅವಸರ ಮಾಡಿದ.
ಏಯ್, ಇವತ್ತು ನನ್ಕೈಲಿ ಆಗೋಲ್ಲ, ನಿನ್ನೆ ನಿ ಎದಿ ಮ್ಯಾಲೆ ಮಾಡಿದ ಗಾಯ ಬಾಳ ಬ್ಯಾನಿ ಆಗಲಕ್ಕತ್ಯದ. ಸುಮ್ಮನ ನೀ ದೂರ ಮಲ್ಗು. ನನ್ನ ತಂಟೆಗೆ ಬರಬ್ಯಾಡ. ಹನ್ಮವ್ವ ತುಸು ಮೆತ್ತಗ ಮಾತ ಚಾಲೂ ಮಾಡಿದ್ಳು.
ಇರ್ಲಿ ಬಾರೇ, ನೋಡಿದ್ದೀನಿ. ತಡಮಾಡಬ್ಯಾಡ. ನನಗ ತಡ್ಕೊಳಕ್ಕಾಗಲ್ಲ. ಅದೇನ ದೊಡ್ಡ ಗಾಯ ಆಗೈತೆ ಅಂತ ಬಡ್ಕೋಳ್ಳಕತ್ತೀದಿ. ತೋರ್ಸು ನಿನ್ನ ಎದಿ ತೋರ್ಸು. ನಾನೂ ತಟಗ ನೋಡ್ತೀನಿ ಎಂದ ರಾಮಪ್ಪ ಅವಳ್ನ ಪುಸಲಾಯಿಸ್ಲಕ್ಕ.
ಎಂದೂ ನೋಡ್ಲಾರ್ದವಂಗ ಹೇಳ್ಲಿಕತ್ತಿಯಲ್ಲ? ಅದ ನೆವದಾಗ ನನ ಮೈ ನೋಡ್ಬೇಕಂತ ಆಸಿ ನಿನಗ ಅಲ್ಲಾ? ಏನೂ ತೋರ್ಸಂಗಿಲ್ಲ. ನೀ ಹೀಂಗ ಕುಡ್ದು ಬಂದ್ರ ಇನ್ನ  ಮುಂದ ನಾ ನಿನ್ನ ಜೊತಿ ಮಲಗಂಗಿಲ್ಲ. ನಿನ್ನ ಬಾಯಿಯಿಂದ ಬರೋ ಗಬ್ಬು ನಾತ ನನ್ಕೈಲಿ ತಡಕೊಳ್ಳಾಕಾಗಲ್ಲ. ವಾಂತಿ ಬಂದಂಗಾಗ್ತದ. ಅಲ್ದ ನೀ ಯಾರ್ಯಾರೋ ಸೂಳ್ಯಾರ ತಾಕ ಸರ್ಗ್ಯಾಡಿ ಬರ್ತಿ. ಇದ್ರಿಂದ ಅದೇನೋ ದೊಡ್ಡ ರೋಗ, ಏಡ್ಸೋ ಏನೋ ಬರ್ತದಂತ ಅಂತ ಓಣ್ಯಾಗಿನ ಹೆಣ್ಮಕ್ಕಳು ಮಾತಾಡ್ತಿರತಾರ. ಅದಕ್ಕ, ಇವತ್ತ ನಾ ಒಂದ ವಿಚಾರ ಮಾಡೀನಿ. ಇನ್ನ ಮುಂದ ನೀ ಕುಡ್ದು ಬಂದ್ರ, ಅವರಿವರ ತಾಕ ಹೋಗಿ ಬಂದ್ರ, ನಾ ನಿನ್ನ ಹತ್ರ ಕರ್ಕೊಳಲ್ಲ. ತಿಳಿತಿಲ್ಲ? ನನ್ನ ನೀ ಮುಟ್ಟಬ್ಯಾಡ, ಹುಷಾರ್. ಹನ್ಮವ್ವ ಧೈರ್ಯ ಮಾಡಿ ಹೇಳ್ಬಿಟ್ಳು.
ಏನೇ ಭೋಸುಡಿ, ಬಾಳ ಮಾತಾಡ್ಲಕ್ಕತ್ತೀಯಲ್ಲ? ಮೈಯಾಗ ಸೊಕ್ಕ ಜಾಸ್ತಿ ಆಗೆತೇನು? ಹಂಗ ಚೆಂದಾಗಿ ಕರದ್ರ ನೀ ಬರಂಗಿಲ್ಲ ಅಂತ ಕಾಣ್ತದ. ಯಾವ್ದ ದ್ಯಾವ್ರಿಗೆ ಯಾವ್ದ ಪೂಜಿ ಮಾಡ್ಬೇಕಂತಲ್ಲ? ನಿನ್ಗೂ ಅದ ಪೂಜಿ ಮಾಡ್ಲೇನಲೇ ಹಡಬಿ? ಈಗ ಸುಮ್ಮನ ಬರ್ತೀಯೋ ಇಲ್ಲಲೇ ಸೂಳಿ. ರಾಮಪ್ಪ ಹಲ್ಕಟ್ಟ ಮಾತಿನ್ಯಾಗ ಹನ್ಮವ್ವಗ ಬೈಲಿಕ್ಕ ಸುರು ಮಾಡ್ದ.
ನೀ ಮೊದ್ಲು ಒದರ್ಯಾಡ್ಯಾದು ನಿಲ್ಸು. ನೀ ಏನ್ ಮಾಡಿದ್ರೂ ನಾ ನಿನ್ನ ತಾಕ ಬರಂಗಿಲ್ಲ.
ನೀ ಬರಂಗಿಲ್ಲ ಅಂದ್ರ ನಾ ಬಿಡ್ತಿನೇನಲೇ? ಬಾರಲೇ ಭೋಸುಡಿ? ನನ್ಹತ್ರ ಬರಂಗಿಲ್ಲಂದ್ರ ಯಾವನಾರ ಮಿಂಡಗಾರ್ನ ನೋಡ್ಕೊಂಡಿಯೇನು? ಸುಮ್ಮನ ಬರ್ತೀಯ, ಇಲ್ಲಾ ಹುಲಿ ಜಿಂಕಿ ಮ್ಯಾಲ ಎಗರಿ ಹಿಡೆಂಗ ಹಿಡಿಲ್ಯಾ? ಅಂತ ಅನಕೋತ ರಾಮಪ್ಪ ಹನ್ಮವ್ವನ ಎಳದಾಡತೊಡ್ಗಿದ.
ಲೇ ಪಿಕನಾಸಿ, ಹಳೇ ಪಿಕನಾಸಿ, ನಾ ನಿನ್ನಂಗ ಕಂಡ ಕಂಡವ್ರ ತಾಕ ಹಾದರ ಮಾಡಂಗಿಲ್ಲಲೇ. ನೀ ಎಷ್ಟ ಹೆಂಗ್ಸರ ತಾಕ ಸಾವಾಸ ಮಾಡತೀ ಅಂತ ನನಗ ಸರ್ಯಾಗಿ ಗೊತ್ತೈತಿ. ಇನ್ನೊಂದ ಸಲ ಹಂಗ ಮಿಂಡಗಾರ, ಗಿಂಡಗಾರ ಅಂತ ಅಂದ್ರ ನಾ ಸುಮ್ಕೆ ಇರೋಳಲ್ಲ. ನಿನ್ನ ಒಂದ ಕೈ ನೋಡೇ ಬಿಡ್ತೀನಿ ಮತ್ತ ಅನ್ಕೋಂತ ಹೇರಗಚ್ಚಿ ಹಾಕಿದ್ಳು ಹನ್ಮವ್ವ. ರಾಮಪ್ಪಗ ಒಂಚೂರು ಗಾಬ್ರಿ ಆಗಿ, ಅವನ ಎದ್ಯಾಗ ನಡುಕ ಸುರುವಾಗಿತ್ತಾದ್ರೂ ತನ್ನ ಪೌರುಷ ತೋರ್ಸಬೇಕಂತ, ನಾ ಅಂತೀನಿ ನೋಡ್ಲೇ, ನೀ ಯಾವನ್ನೋ ಮಿಂಡಗಾರ್ನ ಕೂಡ್ಕೊಂಡಿರ್ತೀ. ಅದಕ್ಕಾ, ನೀ ಹಿಂಗ ಹ್ಯಾರ್ಯಾಡಲಿಕ್ಕ ಅತ್ತೀದಿ. ಅದಕ್ಕ, ನನ್ನ ತಾಕ ಬರಕ ಒಲ್ಲೆ ಅಂತೀದಿ, ಕಳ್ಳ ಸೂಳಿ ಅನ್ನಕೋತ ರಾಮಪ್ಪ ಅವ್ಳ ಕೂದ್ಲಿಗೆ ಕೈ ಹಾಕಿ ತನ್ನ ಕಡಿಗೆ ಎಳ್ಕೋಬೇಕೆಂದು ಕೈ ಹಚ್ಚಿದ.
ಮೊದ್ಲ ಅವ್ನಿಗೆ ನಶಾ ಏರ್ಲಿಕ್ಕತ್ತಿತ್ತು. ಹನ್ಮವ್ವಗೂ ಸಿಟ್ಟ ಬಂದಿತ್ತು. ಅವ್ನಿಂದ ಕೊಸರಿಕೊಂಡು ಅವ್ನ ಜೋರಾಗಿ ದಬ್ಬಿದ್ಳು. ರಾಮಪ್ಪ ಮಾರುದ್ದ ದೂರ್ಹೋಗಿ ಬಿದ್ದ. ಅವಗ್ಯಾಕೋ ತನ್ನ ಜೀವ್ನದಾಗ ಮೊದಲ್ನೇ ಸಲ ದಣಿವಾದಂಗನಿಸ್ತು. ಯಾಕೋ ಇವತ್ತ ನನ್ನ ಟೇಮು ಸರಿ ಇಲ್ಲಂತ ಕಾಣ್ತದ. ಸುಮ್ಮನಿದ್ಬಿಟ್ರಾತು ಎಂದು ಮನಸಿನ್ಯಾಗನ ಅಂದ್ಕೊಂಡು ಅವ ಅಲ್ಲೇ ತೆಪ್ಪಗ ಮಲ್ಗಿದ. ಹನ್ಮವ್ವಗ ಮೊದಲ ಜಯ ಸಿಕ್ಕಿತ್ತು. ಭೀಮವ್ವಜ್ಜಿನ ಮನದಾಗ ನೆನ್ಸಿಕೊಂಡ್ಳು.
ಅವತ್ತ ಹನ್ಮವ್ವ ಇಡೀ ರಾತ್ರಿ ಕಣ್ಣಿಗೆ ಕಣ್ಣ ಹಚ್ಲಿಲ್ಲ. ಈ ತುಡುಗ ನಾಯಿ ಯಾವಾಗರ ತನ್ನ ಮೈ ಮ್ಯಾಲೆ ಬೀಳ್ಬಹುದು ಅಂತ ಟಕ ಟಕಿ ಇತ್ತು ಆಕೀಗಿ. ಹನ್ಮವ್ವ ಅಂದ್ಕೊಂಡಂಗ ರಾಮಪ್ಪ ರಾತ್ರಿ ಒಂದ ಹೊತ್ತಿನ್ಯಾಗ ಮೆಲ್ಲಗ ಕಳ್ಳ ಹೆಜ್ಜಿ ಇಡ್ತ ಆಕಿ ಮ್ಯಾಲ ಸವಾರಿ ಮಾಡ್ಲಿಕ್ಕ ಹೋದ. ಎಚ್ಚರದಾಗನ ಇದ್ದ ಹನ್ಮವ್ವ ಅವ್ನ ಕೊಡ್ವಿ ದೂರ ತಳ್ಳಿದ್ಳು.
ಈಟಾದ್ರೂ ನಿನ್ನ ಜೀವಕ್ಕ ನಾಚಿಗಿ ಅನ್ನೋದ ಇಲ್ಲೇನು? ನಿನ್ನ ಜೀವಕ್ಕಿಟ್ಟು ಬೆಂಕಿ ಹಾಕ. ಥೂ, ನಿ ಮನುಷರ ಪೈಕೀನೇ ಇಲ್ಲ ಅಂತ ಅನಸತೈತೆ. ನೀ ಮನುಷ ಆಗಿದ್ರೆ ನಿನ್ನೆ ನೀ ಮಾಡಿದ ಗಾಯಕ್ಕ ತಟಗರ ಕಳಕಳಿ ತೋರ್ಸುತ್ತಿದ್ದಿ. ನಿನಗೆ ಬರೀ ನಿನ್ನ ಚಟ ತೀರಿದ್ರ ಸಾಕ ಅಲ್ಲಾ? ರಾಮಪ್ಪ ಇಂಗುತಿಂದ ಮಂಗನಂತೆ ಮೂಲ್ಯಾಗ ಗಪ್ಪನ ಬಿದ್ಕೊಂಡ.
ಮುಂಜಾನೆದ್ದು ಹನ್ಮವ್ವ ಕಸಗಿಸ ಹೊಡ್ದು, ಬಾಗಿಲಿ ಪೂಜಿ ಮಾಡಿ, ನೀರೊಲಿಗೆ ಬೆಂಕಿ ಹಾಕಿ, ಬೆಂಕಿ ನೋಡ್ಕೊತ ಕಟಗಿ ಇಟಗೊಂತ ಕುಂತಿದ್ಳು. ಅಷ್ಟರಾಗ ರಾಮಪ್ಪ ಎದ್ದ ಬಂದಿದ್ದ. ಬಂದವನೇ, ಯಾವ ದೊಡ್ಡ ಮನುಷಾರು ನಿನ್ನ ತಲಿಗೆ ಈ ಇಚಾರ ತುಂಬ್ಯಾರ. ಮೊದ್ಲೆಂದೂ ನೀ ಹೀಂಗ ಮಾಡಿದ್ದಿಲ್ಲ. ಯಾರ ನಿನಗ ಏನ ಹೇಳ್ಲಿಕತ್ಯಾರ ಅಂತ ದೊಡ್ಡ ಬಾಯಿ ಮಾಡ್ತ ಹನ್ಮವ್ವನ ಬೆನ್ನಿಗೆ ಇಕ್ಕತೊಡ್ಗಿದ. ಉರಿತಿದ್ದ ಒಲಿ ನೋಡ್ಕೋತ ಕುಳ್ತಿದ್ದ ಹನ್ಮವ್ವ ಗಂಡ ಹಿಂಗ ಮಾಡ್ತಾನಂತ ಅನ್ಕೊಂಡಿರ್ಲಿಲ್ಲ. ಆಕಿಗೆ ಏನನ್ನಸಿತೋ ಏನೋ, ಸರಕ್ಕನ ಒಲ್ಯಾಗಿನ ಒಂದ ಕೊಳ್ಳಿ ತೊಗೊಂಡು ಅವನ್ಗೆ ಎದ್ರು ನಿಂತ್ಳು. ಒಂದ ಹೆಜ್ಜಿ ಮುಂದಾರ ಬಾರ ನೋಡಾನ ಎಂದ ಹನ್ಮವ್ವ ಚಂಡಿ ಚಾಮುಂಡಿಯಂತಾದ್ಳು. ಬಾಲ ಮುದ್ರಿಕೊಂಡು ಹೋಗೋ ನಾಯಿ ಹಂಗ ರಾಮಪ್ಪ ಮುಕುಳಿ, ಬಾಯಿ ಮುಚ್ಕೊಂಡು ಸುಮ್ಮನ ಹೊರಗ ನಡೆದ.
ಹನ್ಮವ್ವ ಅವತ್ತು ಭೀಮವ್ವಜ್ಜಿಗೆ ಎಲ್ಲಾ ವರದಿ ಒಪ್ಪಿಸಿದ್ಳು. ಎಲ್ಲಾ ಕೇಳ್ಸಿಕೊಂಡ ಭೀಮವ್ವಜ್ಜಿ, ಬಾಳ ಚೋಲೋ ಮಾಡಿದಿ ನೋಡು. ಶಾಬ್ಬಾಸ ಹುಡುಗಿ. ನೀ ಧೈರ್ಯ ಬಿಡಬ್ಯಾಡ. ಎಲ್ಲಾ ಸರಿ ಹೋಗ್ತದ ಅಂತ ಹನ್ಮವ್ವನ ಕೆಲ್ಸ ಮೆಚ್ಚಿ ಧೈರ್ಯ ತುಂಬಿದ್ಳು. ಅದೇನೋ ಅಂತಾರಲ್ಲವ್ವ, ಅದು ನಂಗೆ ಸರ್ಯಾಗಿ ಹೇಳಾಕ ಬರಂಗಿಲ್ಲ. ಆದ್ರೂ ಹೇಳ್ತೀನಿ. ಧೈರ್ಯಂ ಸರ್ವತ್ರ ಸಾಧನಂ ಅನ್ನೋದು ನೆಪ್ಪ ಇಟಗ.
ಅಂದು ರಾತ್ರಿ ಕೂಡಾ ರಾಮಪ್ಪ ಇನ್ನೂ ಜೋರ ಮಾಡ್ದ. ಹನ್ಮವ್ವಗ ಅವ ಹೊಡ್ದ, ಬಡ್ದ, ಒದ್ದ, ಕೂದಲ ಹಿಡ್ದು ಎಳ್ದ, ಕುಬುಸ ಹರ್ದ. ಎದಿಗೆ ಕೈ ಹಾಕಾಕ ನೋಡ್ದ. ಅಲ್ಲೀ ಮಟ ಸುಮ್ಮಕ ಇದ್ದ ಆಕಿ ಕೆರಳಿದ ದುಗರ್ಿಯಂತಾದ್ಳು. ನೀ ನನ ಗಂಡ ಅದೀ ಅಂತ ನಾ ಇಲ್ಲೀ ಮಟ ತಡ್ಕೊಂಡು ಸುಮ್ಮನ ಅದೀನಿ. ನೀ ಇಲ್ಗೇ ಸುಮ್ಮಕ್ಯಾದಿ ಅಂದ್ರ ಸರಿ, ಇಲ್ಲಂದ್ರ ನಾ ಮುಂದ ಹಂಗ ಸುಮ್ಮಕ ಕೂಡೋಕಿ ಅಲ್ಲ. ನಾ ಒಂದ ಏಟಿನ್ಯಾಗ ನಿನ್ನ, ಗಂಡಸ್ತನನ ಮೆತ್ತಗ ಮಾಡಿ ಬಿಡ್ತೀನಿ ನೋಡ ಮತ್ತ ಅಂತ ಕೆಕ್ಕರ್ಸಿ ನೋಡ್ತಾ ಗಂಡಗ ದಬಾಯಿಸಿದ್ಳು. ರಾಮಪ್ಪ ಆಕಿ ಮಾತಿಗೆ ತಟಗ ಮೆತ್ತಗಾದ. ಬಾಳ ಹೊತ್ತಿನ ಮಟ ಇಬ್ರ ನಡ್ವೆ ಜಟಾಪಟಿ ನಡೀತು. ಜಪ್ಪಯ್ಯಂದ್ರೂ ಹನ್ಮವ್ವ ತನ್ನ ತೆರ್ಕೊಳ್ಲಿಲ್ಲ ರಾಮಪ್ಪಗ. ಭೀಮವ್ವಜ್ಜಿ ಹೇಳ್ದ ಮಾತು ನೆಪ್ಪಿನ್ಯಾಗ ಇತ್ತ ಆಕಿಗೆ. ನೀ ಮಾತ್ರ ರಾಮ್ಯಾನ ಮುಂದ ಬೋಳೇತನ ತೋರ್ಸಬ್ಯಾಡ. ಸಡ್ಲ ಆಗಬ್ಯಾಡ. ಕತ್ತಿಗೆ ಲತ್ತಿ ಪೆಟ್ಟ ಸರಿ ಅಂತಾರ ಅಂತ ಅಂದಿದ್ಳು ಮುದೇಕಿ ಹನ್ಮವ್ವಗ.
ಮುಂದ ಮೂರ್ನಾಲ್ಕು ದಿನ ರಾತ್ರಿ ರಾಮಪ್ಪ ಮನಗೆ ಬರ್ಲಿಲ್ಲ. ಹನ್ಮವ್ವಗ ಹೆದ್ರಿಕಿ ಆಗ್ಲಿಕ್ಕತ್ತಿತು. ಭೀಮವ್ವಜ್ಜಿ ಜೊತಿಗೆ ಸಂಕಟ ಹಂಚಿಕೊಂಡ್ಳು. ಅದಕ್ಕ ಅಜ್ಜಿ, ಹನ್ಮವ್ವಾ, ನೀನೇನೂ ಹೆದ್ರೋಕ ಬ್ಯಾಡ. ಅವ ಎಲ್ಲೂ ಹೋಗಂಗಿಲ್ಲ. ರಾತ್ರಿ ಯಾವಾಕೀತಾಕಾರ ಹೋಗಿರ್ಬೇಕು. ಅದಕ್ಕ ಮನಿಗೆ ಬರ್ತಿರಲಿಕ್ಕಿಲ್ಲ. ನಿ ಮಾತ್ರ ಅವಗ ಒಂದ ಪೈಸೆನೂ ಕೊಡಬ್ಯಾಡ. ತನಗ ಕುಡ್ಯಾಕ, ಸೂಳ್ಯಾರ್ಗೆ ಕೊಡ್ಯಾಕ ಬೇಕಾದಷ್ಟ ಅವ ಎಲ್ಲಿ ದುಡಿತಾನ? ರೊಕ್ಕ ಬೀಸಾಕದಿದ್ರ ಯಾವಾಕೀನೂ ಹತ್ರ ಬರಗೊಡಂಗಿಲ್ಲ. ಎಷ್ಟ ದಿನ ಅಂತ ಉದ್ರಿ ಹೇಳ್ತಾನ ಇವ? ಇವ್ನ ಉದ್ರಿ ಮಾತ ಯಾರೂ ಕೇಳಾಂಗಿಲ್ಲ ಬಿಡು. ಹಸ್ದ ನಾಯಿಯಂತಾಗಿ ಅವ ನಿಂತಾವನೇ ಬರ್ತಾನ. ನೀ ಚಿಂತಿ ಮಾಡಬ್ಯಾಡ ಹನ್ಮವ್ವ. ಅಜ್ಜಿ ಮಾತಿಂದ ಆಕಿಗೆ ತಟಗ ಸಮಾಧಾನ ಆದಂಗಾತು.
ಒಂದು ವಾರ ಆದ್ರೂ ರಾಮಪ್ಪ, ರಾತ್ರಿ ಮನಿಗೆ ಮಲಗಲಿಕ್ಕ ಬರ್ಲಿಲ್ಲ. ಹಗಲೊತ್ತು ಊಟಕ್ಕ ಬರ್ತಿದ್ರೂ, ಹನ್ಮವ್ವನ ಜೊತಿಗೆ ಆಟಕ್ಕಾಟ ಮಾತಾಡ್ತಿದ್ದ. ಮಕ್ಳ ಜೊತಿಗಿನೂ ಆಟ. ಇದ್ರಿಂದ ಹನ್ಮವ್ವನ ಎದಿಯಾಗ ತಳಮಳ ಬಾಳ ಆತು. ಭೀಮವ್ವಜ್ಜಿನ ಕೇಳಿದ್ರ, ನೀ ಚಿಂತಿ ಮಾಡಬ್ಯಾಡಬೇ ಅಂತ ಧೈರ್ಯ ತುಂಬ್ತಿದ್ಳು.
ಕೊನಿಗೇ ಎರ್ಡು ವಾರ ಆದ್ಮೇಲೆ ರಾಮಪ್ಪ ಒಂದ ದಿನ ರಾತ್ರಿ ಮನಿಗೆ ಬಂದ. ಕುಡಿದಿದ್ರೂ, ತುಸಾನಾ ಕುಡ್ದಾನಂತ ಅನಸ್ತಿತ್ತು ಅವ್ನ ನೋಡಿದ್ರ. ತನ್ನಟಕ ತಾನ ಒಂದ ಮೂಲ್ಯಾಗ ಹಾಸ್ಗಿ ಹಾಸ್ಕೊಂಡು ಮಲಕ್ಕೊಳಕ್ಕತ್ತಿದ್ದ. ಹನ್ಮವ್ವ ಊಟಕ್ಕ ಕರದ್ರೂ ಅವ ಒಲ್ಲೆ ಅಂದ. ಹನ್ಮವ್ವಗ ಮುಖಕ್ಕ ಮುಖ ಕೊಟ್ಟು ಮಾತಾಡೋ ತಾಕತ್ತ ಅವನ್ಗಿದ್ದಂಗಿದ್ದಿಲ್ಲ.
ಯಾಕ, ಯಾವ ಭೋಸುಡಿನೂ ನಿನ್ನ ಮಗ್ಗಲಕ ಕರ್ಕೊಳ್ಲಿಲ್ಲೇನು? ಅದಕ್ಕ ಬಂದಿಯೇನು ಬಿಕನಾಸಿ ಅಂಗ ಇಲ್ಲಿಗೆ? ಹನ್ಮವ್ವ ಅವ್ನ ತರಾಟೆಗೆ ತೆಗೆದ್ಕೊಂಡ್ಳು.
ನೀ ಹೇಳಾದು ಸರಿ ಹನುಮಿ. ಕಾಸಿಲ್ದ ಯಾರ ನನ್ನ ಹತ್ರಕ್ಕ ಕರ್ಕೊಂತಾರ? ನೀ ಬರೋಬ್ಬರಿ ಹೇಳ್ದಿ ಅಂತ ಅಂದ ರಾಮಪ್ಪ.
ಮತ್ಯಾಕ ಕುಡ್ದ ಬಂದೀ ಈಗ? ಅದಕ್ಕ ರೊಕ್ಕ ಎಲ್ಲಿಂದ ಬಂತು?
ಹನುಮೀ, ಖರೇ ಹೇಳ್ಬೇಕಂದ್ರ ಒಂದ ವಾರ್ದಿಂದ ನಾ ಯಾ ಹೆಂಗ್ಸಿನ ತಾಕ ಹೋಗಿಲ್ಲ. ಹಂಗ ಅವತ್ನಿಂದ ನಾ ಕುಡ್ಯಾದೂ ಕಡಿಮಿ ಮಾಡೀನಿ. ನೀ ಹೇಳಿದ ಮಾತೆಲ್ಲಾ ಖರೇ ಅಂತ ನನಗನಿಸಕತ್ತಿದ್ವು. ಕುಡೇ ಚಟ ಇದ್ದವ್ರು ಒಂದ ಸಲಕ ಕುಡೇದು ನಿಲ್ಸಾಕಾಗಂಗಿಲ್ಲ ಅಂತ ಯಾರೋ ಹೇಳಿದ್ದ ನನಗ ನೆಪ್ಪ ಐತಿ. ಕುಡ್ದು, ಕುಡ್ದು ಹೆಂಗ್ಸರ ಚಟಕ್ಕ ನಾ ಹುಚ್ಚನಂಗಾಗಿದ್ದೆ. ಈ ಎರ್ಡ ವಾರ್ದಾಗ, ಕುಡಿಲಾರ್ದ ವ್ಯಾಳ್ಯಾದಾಗ ನಾ ನೀನಾಡಿದ ಮಾತುಗಳ್ನ ಮೆಲಕ ಹಾಕ್ತಿದ್ದೆ. ನಾ ಮಾಡಿದ್ದೆಲ್ಲಾ ತೆಪ್ಪು ಅಂತ ಅನಿಸ್ತು. ನಿನಗ ನಾ ಬಾಳ ತ್ರಾಸ ಕೊಟ್ಟೇನಿ. ನನ್ನ ಕ್ಷಮ್ಸಿ ಬಿಡು ಹನಿಮೀ. ನಿನ್ನ ಧೈಯರ್ಾನ ನಾ ಬಾಳ ಮೆಚ್ಕೋಂಡೀನಿ. ಇದಕ್ಕ ಮೊದ್ಲ ನೀ ಧೈರ್ಯ ಮಾಡ್ಬೇಕಾಗಿತ್ತು ಅಂತ ನನಗನಿಸ್ತೈತಿ.
ಇನ್ನೊಂದೆರ್ಡು ವಾರ್ದಾಗ ನಾ ಪೂರಾ ಕುಡೇದ ಬಿಟ್ಟಬಿಡ್ತೀನಿ. ಹಂಗ ಹೋದ ವಾರ್ದಾಗ ನಾ ಡಾಕ್ಟರರ ತಾಕ ನನ್ನ ರಕ್ತ ಪರೀಕ್ಷಾ ಕೂಡ ಮಾಡ್ಸೀನಿ. ಅವತ್ತ ನೀ ಅದೇನೋ ಏಡ್ಸು, ಗೀಡ್ಸು ಅಂತ ಹೇಳ್ದೆಲ್ಲಾ, ಅದಕ್ಕ, ನಾ ಪರೀಕ್ಷಾ ಮಾಡ್ಸಿದೆ. ಎಲ್ಲಾ ಸರಿ ಐತೆ ಅಂತ ಡಾಕ್ಟರು ಹೇಳ್ಯಾರ. ಈಗರ ನೀ ನನ್ನ ಕ್ಷಮಿಸ್ತೀ ಅಲ್ಲಾ ಹನುಮಿ? ಎಂದ ರಾಮಪ್ಪ ದೀನನಾಗಿ ಹನ್ಮವ್ವನ ನೋಡ್ತಾ. ಹನ್ಮವ್ವಗ ಗಂಡನ ಮಾತ ಕೇಳಿ ಬಾಳ ಖುಷಿ ಆಗ್ಲಿಕ್ಕತ್ತಿತ್ತು.
ಎಲ್ಲಾ ಕ್ಷಮಿಸೀನಿ ಬಾರೋ ಅಂತ ಹೇಳ್ತಾ ಹನ್ಮವ್ವ ಗಂಡನ ಮುಖಾನ ತನ್ನ ಎದಿಗೊತ್ಕೊಳ್ಳಕತ್ತಿದ್ಳು.
ಬ್ಯಾಡ, ಬ್ಯಾಡ ಹನಿಮಿ, ಮೊದಲ ನಿನ್ನ ಎದಿ ಬ್ಯಾನ್ಯಾಗದ ನಾ ಮಾಡಿದ ಗಾಯದಿಂದ ಅಂತ ಹೇಳ್ತಾ ರಾಮಪ್ಪ ದೂರ ಸರೀಲಕ್ಕ ಪ್ರಯತ್ನ ಮಾಡ್ದ.
ಎದಿ ಒಳಗಿನ ಬ್ಯಾನೀನ ಇಲ್ದಂಗಾದ ಮ್ಯಾಲೆ, ಎದಿ ಮ್ಯಾಲಿನ ಗಾಯ ಅದ್ಯಾವ ಲೆಕ್ಕ? ಅನಕೋತ ಹನ್ಮವ್ವ ಗಂಡನ್ನ ಮುಖ ತನ್ನ ಎದಿಗೆ ಒತ್ತಿ ಹಿಡ್ಕೊಳ್ತಾ, ಸಂಭ್ರಮಿಸತೊಡ್ಗಿದ್ಳು. ಧೈರ್ಯಂ ಸರ್ವತ್ರ ಸಾಧನಂ ಅಂತ ಹೇಳಿದ್ದ ಭೀಮವ್ವಜ್ಜಿ ಮಾತು ಆಕಿ ಎದಿಯೊಳಗೆ ಚಿಲಿಪಿಲಿಗುಟ್ತಿತ್ತು.