Thursday, August 19, 2010

ಯಡಿಯೂರಪ್ಪನಿಗೆ ಕಾನೂನಿನ ಪೆಟ್ಟು!ಶಾಸಕ ನಂದೀಶರೆಡ್ಡಿಗೆ ಲತ್ತಿಪೆಟ್ಟು!!




ಯಡಿಯೂರಪ್ಪನಿಗೆ ಕಾನೂನಿನ ಪೆಟ್ಟು!ಶಾಸಕ ನಂದೀಶರೆಡ್ಡಿಗೆ ಲತ್ತಿಪೆಟ್ಟು!!ಅತೀ ಕಡಿಮೆ ಅಧಿಕಾರಾವಧಿಯಲ್ಲಿ ಅತೀ ಹೆಚ್ಚು ಅಡ್ನಾಡಿ ಕೆಲಸಗಳನ್ನು ಮಾಡಿದ ಮಹಾತ್ಸಾಧನೆಗೆ ಏನಾದರೂ ಒಂದು ಪ್ರಶಸ್ತಿ ಅಂತ ಇಟ್ಟಿದ್ದಿದ್ದರೆ ಪ್ರಾಯಶಃ ಅದು ಕನರ್ಾಟಕದ ಇಂದಿನ ಬಿಜೆಪಿ ಸಕರ್ಾರಕ್ಕೆ ಸಿಗುತ್ತಿತ್ತೇನೋ? ರಾಜ್ಯದಲ್ಲಿ ಬಿಜೆಪಿಗಳು ಮಾಡಿರುವ ಕೆಲಸಗಳೇ ಹಾಗಿವೆ. ಮೊದಲ ಬಾರಿಗೆ ಅವು ಅಧಿಕಾರಕ್ಕೇರಿವೆ. ಇನ್ನೊಂದ್ಸಾರಿ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಭರವಸೆ ಇದ್ದಿದ್ರೆ ಈಗ ಒಂದಿಷ್ಟು ಲೂಟಿ ಹೋಡಿಯೋಣ, ಮುಂದೆ ಮತ್ತೆ ಅಧಿಕಾರಕ್ಕೆ ಬಂದಾಗ ಇನ್ನೊಂದಿಷ್ಟು ಲೂಟಿ ಹೊಡೆಯೋಣ ಅಂತನಾದ್ರೂ ಯೋಚಿಸುತ್ತಿದ್ದವು. ಆದರೆ ಮತ್ತೆ ಅಧಿಕಾರಕ್ಕೇರುತ್ತೇವೆ ಅನ್ನೋ ಭರವಸೆಯೇ ಅವರಿಗೇ ಇಲ್ಲ. ತಾವು ಈ ಎರಡು ವರ್ಷಗಳಲ್ಲಿ ಮಾಡಿರುವ ಘನಂದಾರಿ ಕೆಲಸಗಳನ್ನು ನೋಡಿ ಜನ ಛೀ... ಥೂ... ಅಂತ ಹಾದಿಬೀದಿಯಲ್ಲಿ ಉಗಿಯುತ್ತಿರುವುದು ಅವರಿಗೂ ಗೊತ್ತಿದೆ. ಮುಂದೆಂದೂ ಮತ್ತೆ ತಮ್ಮನ್ನು ಜನ ಅಧಿಕಾರಕ್ಕೆ ತರುವುದಿಲ್ಲ ಎಂಬುದು ಅವರಿಗೆ ಖಾತ್ರಿಯಾಗಿಬಿಟ್ಟಿದೆ. ಹಾಗಾಗಿ, ಈಗ ಅಧಿಕಾರ ಇರುವಾಗಲೇ ಎಷ್ಟು ಸಾಧ್ಯವೋ ಅಷ್ಟು ರಾಜ್ಯದ ಸಂಪತ್ತನ್ನು ಲೂಟಿ ಹೊಡೆದುಕೊಂಡು ಹೋಗಬೇಕು ಎಂಬ ತೀಮರ್ಾನಕ್ಕೆ ಅವರು ಬಂದುಬಿಟ್ಟಿದ್ದಾರೆ. ಪರಿಣಾಮವಾಗಿಯೇ ಎಲ್ಲಿ ಕೈಯಿಟ್ಟರೂ ಒಂದೊಂದು ಹಗರಣಗಳು ಕೈಗೆಟುಕುತ್ತವೆ. ಬಿಜೆಪಿಯ ಯಾರ ಬಳಿ ಹೋದರೂ ಆತ ತಿನ್ನಬಾರದ್ದನ್ನೆಲ್ಲಾ ತಿಂದು ಮೈಕೈ ಹೊಲಸು ಮಾಡಿಕೊಂಡು ಗಬ್ಬು ವಾಸನೆ ಹೊಡೆಯುತ್ತಿರುತ್ತಾನೆ. ಇವರ ಆಟಾಟೋಪಗಳಿಗೆ ಅಡೆತಡೆಯೊಡ್ಡುವ, ಇವರೆಲ್ಲಾ ಲೂಟಿಗಳಿಗೆ ಅಡ್ಡಲಾಗಿ ನಿಲ್ಲುವ, ಇವರ ಆಜ್ಞೆಗಳನ್ನು ತಲೆಬಾಗಿ ಪಾಲನೆ ಮಾಡದ ಅಧಿಕಾರಿಗಳನ್ನು ಪುಟ್ಬಾಲಿನಂತೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಗರ್ಾವಣೆ ಮಾಡುತ್ತಲೇ ಹೋಗುತ್ತಾರೆ. ಅವರ ಜಾಗಕ್ಕೆ ತಮಗೆ ನಾಯಿಯಂತೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ತಂದು ಕೂರಿಸಿಕೊಳ್ಳುತ್ತಾರೆ (ಬಳ್ಳಾರಿಯ ಜಿಲ್ಲಾಧಿಕಾರಿ ಶಿವಪ್ಪನಂತವರು).ಇತ್ತೀಚೆಗೆ ಬೆಂಗಳೂರಿನ ಕೆ.ಆರ್.ಪುರ ವ್ಯಾಪ್ತಿಯಲ್ಲಿರುವ ಕ್ಯಾಲಸನಹಳ್ಳಿಯಲ್ಲಿ ಬಿಜೆಪಿಯ ಭೂಗಳ್ಳ ಶಾಸಕ ನಂದೀಶ್ ರೆಡ್ಡಿ ಸ್ವಾತಂತ್ರ್ಯ ಯೋಧರಿಗೆ ಮೀಸಲಿಟ್ಟ ಜಮೀನನ್ನು ನುಂಗಿ ನೀರು ಕುಡಿಯಲು ಹವಣಿಸಿದ್ದು ಹಾಗೂ ಅದಕ್ಕೆ ಪ್ರತಿರೋಧ ಒಡ್ಡಿದ ಅಲ್ಲಿನ ತಹಶೀಲ್ದಾರ್ ಆಶಾ ಪವರ್ೀನ್ಗೆ ಕೊಡಬಾರದಷ್ಟು ಕಿರುಕುಳ ಕೊಟ್ಟಿದ್ದು, ಕೊನೆಗೆ ಆಕೆಯನ್ನು ವಗರ್ಾವಣೆ ಮಾಡಿ ಕೋಟರ್ಿನಿಂದ, ಜನರಿಂದ ಕ್ಯಾಕರಿಸಿ ಉಗಿಸಿಕೊಂಡಿದ್ದು ಇದೆಲ್ಲಾ ಬಿಜೆಪಿಗಳು ಎರಡು ವರ್ಷಗಳಿಂದ ಚಾಚೂ ತಪ್ಪದೇ ಮಾಡಿಕೊಂಡು ಬಂದಿರುವ ಅಡ್ನಾಡಿ ಕೆಲಸಗಳ ಸಾಲಿಗೆ ಮೊತ್ತೊಂದು ಸೇರ್ಪಡೆಯಷ್ಟೆ. ಅದು ಅವರ ಘನಂದಾರಿ ಕೆಲಸದ ಆರಂಭವೂ ಅಲ್ಲ, ಅಂತ್ಯವೂ ಅಲ್ಲ.ಅದು ಪ್ರಾರಂಭವಾಗಿದ್ದು ಹೀಗೆ...ಬೆಂಗಳೂರಿನ ಕೆ.ಆರ್.ಪುರಂನ ಕ್ಯಾಲಸನಹಳ್ಳಿಯ ಸವರ್ೇ ನಂಬರ್ 11ರಲ್ಲಿ 12 ಎಕರೆ ಸಕರ್ಾರಿ ಜಮೀನಿದೆ. ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಅದರ ಈವೊತ್ತಿನ ಮಾಕರ್ೆಟ್ ಬೆಲೆ ಏನಿಲ್ಲವೆಂದರೂ ಎಪ್ಪತ್ತು ಕೋಟಿ. ಅಸಲಿಗೆ ಆ ಜಮೀನನ್ನು ಕೆಲವು ಸ್ವಾತಂತ್ರ್ಯ ಯೋಧರಿಗೆ ಹಂಚಿಕೆ ಮಾಡಿ ರಾಜ್ಯ ಸಕರ್ಾರ 1966ರಲ್ಲಿಯೇ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಉತ್ತರಕನ್ನಡ ಜಿಲ್ಲೆಯ ಕಡೆಯವರಾದ ವಿಠಲ್ರಾವ್, ವೆಂಕಟಾಚಲಮ್ಮ, ಸಿದ್ದಣ್ಣ, ಸುಬ್ಬರಾವ್, ಕೃಷ್ಣಮೂತರ್ಿ, ಲಕ್ಷ್ಮೀ ಎಂಬುವವರು ಈಗಾಗಲೇ ಕ್ಯಾಲಸನಹಳ್ಳಿಯ ಸಕರ್ಾರಿ ಗೋಮಾಳ ಭೂಮಿಗೆ ಹಣವನ್ನು ಪಾವತಿಸಿ ಮಾಲೀಕರಾಗಿದ್ದರೆ ಇನ್ನುಳಿದಂತೆ ರಾಮಕೃಷ್ಣಹೆಗಡೆಯ ಸಂಬಂಧಿ ಜಿ.ಎಸ್ ಹೆಗಡೆ ಅಂಕೋಲಕರ್, ಗೋವಿಂದ್, ಎಸ್.ಎಸ್ ಹೆಗಡೆ ಎಂಬುವವರಿಗೆ ತಲಾ 4 ಎಕರೆಯಂತೆ ಮಂಜೂರಾಗಿದ್ದರೂ ಅವರ್ಯಾರೂ ಇತ್ತ ಹೆಜ್ಜೆ ಹಾಕಿರಲಿಲ್ಲ. ಇದು ಹೆಚ್ಚೂ ಕಡಿಮೆ ನಲ್ವತ್ತೈದು ವರ್ಷಗಳ ಹಿಂದಿನ ಕತೆ. ಆಗ ಬೆಂಗಳೂರು ಈಗಿನಂತಿರಲಿಲ್ಲ. ಕೆ.ಆರ್.ಪುರದ ಈ ಜಾಗವೂ ಒಂದು ರೀತಿಯಲ್ಲಿ ಕಾಡಿನಂತಿತ್ತು. ಹಾಗಾಗಿ, ಫಲಾನುಭವಿ ಸ್ವಾತಂತ್ರ್ಯ ಯೋಧರು ಈ ನಲ್ವತ್ತು ವರ್ಷ ಅತ್ತ ಹೆಜ್ಜೆಯನ್ನೂ ಹಾಕಿರಲಿಲ್ಲ. ಈಗ ಬೆಂಗಳೂರು ಅಗಾಧವಾಗಿ ಬೆಳೆದು ನಿಂತಿದೆ. ಅಡಿ ಅಡಿ ನೆಲಕ್ಕೆ ಚಿನ್ನದ ಬೆಲೆ ಬಂದುಬಿಟ್ಟಿದೆ. ರಿಯಲ್ ಎಸ್ಟೇಟ್ ಬಿಸಿನೆಸ್ ಅತ್ಯಂತ ಲಾಭದಾಯಕ ವ್ಯವಹಾರವಾಗಿ ಮಾರ್ಪಟ್ಟಿದೆ. ಅದೇ ವೇಳೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಕರ್ಾರಿ ಜಮೀನನ್ನು ನುಂಗಿ ನೀರು ಕುಡಿದು ಕೋಟ್ಯಾಧಿಪತಿಗಳಾಗಿರುವ ದೊಡ್ಡ ಭೂಗಳ್ಳರ ಹಿಂಡೂ ಹುಟ್ಟಿಕೊಂಡಿದೆ. ಯಾವಾಗಲೂ ಹಡಬಿ ದುಡ್ಡು ತಿನ್ನುವುದಕ್ಕೇ ಹೊಂಚುಹಾಕುವ ಇಂತಹ ಖದೀಮರಿಗೆ ಸಕರ್ಾರಿ ಜಾಗೆಗಳು ಎಲ್ಲೆಲ್ಲಿವೆ ಅಂತ ಚೆನ್ನಾಗಿ ಗೊತ್ತಿರುತ್ತೆ. ಅದು ತಮಗೆ ಸೇರಿದ್ದು ಅಂತ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿಕೊಳ್ಳುವುದು, ಒಂದೇ ಸಲ ಗುಳುಂ ಮಾಡುವುದು ಅವರ ಕಾಯಕವಾಗಿ ಬಿಟ್ಟಿದೆ. ಅಂಥವರಲ್ಲಿ ಇಂದಿನ ಕೆ.ಆರ್.ಪುರಂನ ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಕೂಡ ಒಬ್ಬ. ತನ್ನ ಏರಿಯಾದಲ್ಲೇ ಕ್ಯಾಲಸನಹಳ್ಳಿಯ ಸವರ್ೇ ನಂಬರ್ 11ರಲ್ಲಿ ಎಪ್ಪತ್ತು ಕೋಟಿ ಬೆಲೆ ಬಾಳುವ 12 ಎಕರೆ ಸಕರ್ಾರಿ ಜಮೀನು ಸಹಜವಾಗಿಯೇ ಅವನ ಕಣ್ಣು ಕುಕ್ಕಿಸುತ್ತಿತ್ತು. ಅದನ್ನು ಹೇಗಾದರೂ ಮಾಡಿ ಗುಳುಂ ಮಾಡುವುದಕ್ಕೆ ಆತ ಹೊಂಚು ಹಾಕಿ ಕುಳಿತಿದ್ದ. ಈ ಮಹಾತ್ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಭಂಟ ಬಾಬುರೆಡ್ಡಿಗೆ ವಹಿಸಿಕೊಟ್ಟಿದ್ದ. ಬೆಂಗಳೂರು ಬೆಳೆದ ಮೇಲಾದರೂ ಆ ಸ್ವಾತಂತ್ರ್ಯಯೋಧರ ಕುಟುಂಬಗಳನ್ನು ಹುಡುಕಿ ಅವರಿಗೆ ಭೂಮಿ ಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿತ್ತು. ಆದರೆ ಇಷ್ಟು ವರ್ಷಗಳಲ್ಲಿ ಅಂತಹ ಕೆಲಸವನ್ನು ಇಲ್ಲಿಗೆ ಬಂದ ಯಾವೊಬ್ಬ ತಹಶೀಲ್ದಾರನೂ ಮಾಡಲಿಲ್ಲ. ಅಂತಹ ಕೆಲಸಕ್ಕೆ ಕೈಹಾಕಿದ್ದು ಈಗಿನ ತಹಶೀಲ್ದಾರ್ ಆಶಾ ಪವರ್ಿನ್. ಪ್ರಾಯಶಃ ನಂದೀಶ ರೆಡ್ಡಿ ಈ ಭೂಮಿ ಸ್ವಾಹ ಕಾರ್ಯಕ್ರಮಕ್ಕೆ ಮಹೂರ್ತ ಫಿಕ್ಸ್ ಮಾಡುತ್ತಿದ್ದುದು ಆಕೆಯ ಗಮನಕ್ಕೆ ಬಂದಿರಬೇಕು. ಹಾಗಾಗಿ ಕೂಡಲೇ ಕಾರ್ಯಪ್ರವೃತ್ತಳಾದ ಆಕೆ ಈ ಭೂಮಿ ಮಂಜೂರಾದ ಸ್ವಾತಂತ್ರ್ಯ ಯೋಧರ ಕುಟುಂಬಗಳನ್ನು ಹುಡುಕಿ ಭೂಮಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿಬಿಟ್ಟಳು. ಆಶಾಳನ್ನು ಮನೆಗೆ ಕರೆಸಿಕೊಂಡು ಒದೆ ತಿಂದ ನಂದೀಶರೆಡ್ಡಿ!ವಾಸ್ತವದಲ್ಲಿ ಆಶಾ ಪವರ್ೀನ್ ಇಟ್ಟ ಹೆಜ್ಜೆ ನಂದೀಶ ರೆಡ್ಡಿಗೆ ತಳಮಳವನ್ನುಂಟು ಮಾಡಿದೆ. ತನ್ನ ಜೇಬು ಸೇರಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಹಡಬಿ ಆಸ್ತಿಯನ್ನು ಪವರ್ೀನ್ ಹೀಗೆ ಕೈಗೆ ಬಂದದ್ದನ್ನು ಬಾಯಿಗೆ ಬಾರದಂತೆ ತಪ್ಪಿಸುತ್ತಿರುವುದನ್ನು ಕಂಡು ನಂದೀಶರೆಡ್ಡಿಗೆ ಎಲ್ಲಿಲ್ಲದ ಸಿಟ್ಟುಬಂದಿದೆ. ಕೂಡಲೆ ಆಕೆಯನ್ನು ಸಂಬಂಧಪಟ್ಟ ಕಡತಗಳ ಸಮೇತ ತನ್ನ ಮನೆಗೆ ಬರುವಂತೆ ಹೇಳಿ ಕಳಿಸಿದ್ದಾನೆ. ಮೊದಲೇ ಆಶಾ ದಿಟ್ಟ ಮಹಿಳೆ. ತಹಶೀಲ್ದಾರಾಗುವ ಮೊದಲು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದಾಕೆ. ಆಗಲೇ ಇಂತ ಪುಂಡ ಪೋಕರಿಗಳನ್ನು ಅಟ್ಟಾಡಿಸಿಕೊಂಡು ಬಡಿದಾಕೆ. ಸಖತ್ ಹೈಟ್, ಪರ್ಸನಾಲಿಟಿ ಹೊಂದಿರುವ ಆಶಾಳಿಗೆ ತನ್ನದೇ ಆದ ಬೆಂಬಲಿಗ ಪಡೆ ಕೂಡ ಇದೆ! ಈಗ ಯಾಕೆ ನಂದೀಶ ಕರೆಯುತ್ತಿದ್ದಾನೆಂದು ಗೊತ್ತಿದ್ದೂ ಗೊತ್ತಿದ್ದೂ ಧೈರ್ಯದಿಂದ ಕಡತ ತೆಗೆದುಕೊಂಡು ಅವನ ಮನೆಗೆ ಹೋಗಿದ್ದಳು. ಇದೇ ಜೂನ್ 16ರಂದು ಆಕೆ ನೇರವಾಗಿ ಸಂಬಂಧಪಟ್ಟ ಕಡತಗಳ ಸಮೇತ ನಂದೀಶ ರೆಡ್ಡಿಯ ಮನೆಯಲ್ಲಿ ಪ್ರತ್ಯಕ್ಷಳಾದಾಗ ಸಣ್ಣದಂದು ಫೈಟಿಂಗ್ಗೆ ಅಖಾಡ ರೆಡಿಯಾಗಿತ್ತು. ಅವಳ ಕೈಯಲ್ಲಿದ್ದ ಕಡತವನ್ನು ಕೊಡುವಂತೆ ನಂದೀಶ್ ರೆಡ್ಡಿ ಕೇಳಿದಾಗ ಆಕೆ ಒಪ್ಪಿಲ್ಲ. ಆದರೂ ಹಠ ಬಿಡದ ಆತ ಆಕೆಯನ್ನು ಎಳೆದಾಡಿ ಕಡತ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. (ಒಬ್ಬ ಮಹಿಳಾ ಅಧಿಕಾರಿಯೊಂದಿಗೇನೇ ಈ ಬಿಜೆಪಿ ಎಮ್ಮೆಲ್ಲೆಗಳು ಈ ರೀತಿ ಗುಂಡಾಗಳಂತೆ ವತರ್ಿಸುತ್ತಾರೆಂದರೆ ಇನ್ನು ಸಾಮಾನ್ಯ ಜನರ ಪಾಡೇನು?) ಆಕೆ ಅದನ್ನು ವಾಪಾಸ್ಸು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ ಅದನ್ನಾತ ತನ್ನ ಹಿಂಬಾಲಕನಿಗೆ ಕೊಟ್ಟ. ತಕ್ಷಣವೇ ಆ ಹಿಂಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಮತ್ತೆ ಆಶಾ ಅವನನ್ನು ಬೆನ್ನು ಹತ್ತಿ ಓಡತೊಡಗಿದರೆ ಇದೇ ನಂದೀಶ ಆಕೆಗೆ ಅಡ್ಡ ಬಂದಿದ್ದಾನೆ. ಸಿಟ್ಟಿಗೆದ್ದ ಆಶಾ ತನ್ನ ಹಳೆಯ ಪೊಲೀಸ್ ವರಸೆಯನ್ನು ಬಳಸಿ ನಂದೀಶನಿಗೊಂದು ಲಾತ ಕೊಟ್ಟು ಅವನು ಕೆಡವಿ ಅಲ್ಲಿಂದ ಓಡಿದ್ದಾಳೆ. ಕೊನೆಗೆ ಮೂಲೆಯಲ್ಲಿ ಕಡತದೊಂದಿಗೆ ಅವಿತು ಕುಳಿತಿದ್ದ ಹಿಂಬಾಲಕನನ್ನೂ ಹಿಡಿದು ಅವನಿಗೂ ನಾಲ್ಕು ಬಾರಿಸಿ ಕಡತ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಹೀಗೆ, ನಂದೀಶ, ಆತನ ಹಿಂಬಾಲಕರು ಮತ್ತು ಸೆಕ್ಯೂರಿಟಿ ಗಾಡರ್್ಗಳ ಕೋಟೆಯನ್ನು ಬೇಧಿಸಿ ಸಕರ್ಾರಿ ಕಡತವನ್ನು ವಾಪಸ್ಸು ತರುವಲ್ಲಿ ಕೊನೆಗೂ ಆಕೆ ಯಶಸ್ವಿಯಾಗಿದ್ದಾಳೆ. ಸೇಡು ತೀರಿಸಿಕೊಳ್ಳಲು ಸಸ್ಪೆಂಡ್, ಟ್ರಾನ್ಸ್ಫರ್ತ್ಈಗ ನಂದೀಶ ರೆಡ್ಡಿ ಅಕ್ಷರಶಃ ಇಂಗು ತಿಂದ ಮಂಗನಾಗಿದ್ದಾನೆ. ಒಂದೆಡೆ ಆಶಾ ಪವರ್ೀನ್ ಎಂಬ ಮಹಿಳೆಯಿಂದ ದೈಹಿಕವಾಗಿ ಒದೆ ತಿಂದಿದ್ದ, ಇನ್ನೊಂದೆಡೆ ಅದೇ ಮಹಿಳಾ ಅಧಿಕಾರಿ ಇವನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ ಮಾನಸಿಕವಾಗಿಯೂ ಒದ್ದಿದ್ದಳು. ಈಗದನ್ನು ನಂದೀಶ ಹೇಗಾದರೂ ಮಾಡಿ ತೀರಿಸಿಕೊಳ್ಳಬೇಕಿತ್ತು. ಇಲ್ಲದಿದ್ದರೆ ಅವನ ಹಿಂಬಾಲಕರ ಮುಂದೆ ನಾಚಿಕೆಯಿಂದ ತಲೆತಗ್ಗಿಸಬೇಕಾದ ಹೀನಾಯ ಪರಿಸ್ಥಿತಿ ಎದುರಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಎಪ್ಪತ್ತು ಕೋಟಿ ಬೆಲೆಬಾಳುವ ಆಸ್ತಿಯೊಂದು ಕೈತಪ್ಪಿ ಕಂಡವರ ಪಾಲಾಗಿ ಬಿಡುತ್ತಿತ್ತು. ಎಲ್ಲಿಯ ತನಕ ಆಶಾ ಪವರ್ೀನ್ ಇಲ್ಲಿ ತಹಶೀಲ್ದಾರಾಗಿರುತ್ತಾಳೋ ಅಲ್ಲಿಯ ತನಕ ಅದು ತನ್ನ ಕೈವಶವಾಗುವುದು ಸಾಧ್ಯವಿಲ್ಲ ಎಂಬ ಅಸಲೀಯತ್ತೂ ಆತನಿಗೆ ಗೊತ್ತಿತ್ತು. ಇದೆಲ್ಲದಕ್ಕೆ ಪರಿಹಾರ ಎಂದರೆ ಆಶಾಳನ್ನು ಕೆಲಸದಿಂದ ಸಸ್ಪೆಂಡ್ ಮಾಡಬೇಕು ಇಲ್ಲವೇ ಕನಿಷ್ಠ ಅಲ್ಲಿಂದ ಎತ್ತಂಗಡಿ ಮಾಡಬೇಕು ಎಂದು ಒಳಗೊಳಗೇ ಆತ ಲೆಕ್ಕ ಹಾಕಿದ.ಅಂತೂ ಆಕೆಯಿಂದ ಒದೆ ತಿಂದು ಮಾನಸಿಕವಾಗಿ ನುಜ್ಜುಗುಜ್ಜಾಗಿದ್ದ ನಂದೀಶ ಮುಖ್ಯಮಂತ್ರಿ ಯಡ್ಡಿಯ ಕಿವಿ ತಿಕ್ಕಿದ್ದಾನೆ. ಮೊದಲೇ ನಮ್ಮ ಮುಖ್ಯಮಂತ್ರಿ ಕಂಡವರ ಚಾಡಿ ಮಾತು ಕೇಳಿ ಗುಂಡಿಗೆ ಬೀಳೋದರಲ್ಲಿ ಎತ್ತಿದ ಕೈ. ಈಗ ನಂದೀಶ ಬಂದು ಕಿವಿ ತಿಕ್ಕಿದ ತಕ್ಷಣವೇ ಒಂದು ಕ್ಷಣ ಯೋಚನೆ ಮಾಡದೆ ಆಶಾಳನ್ನು ಸಸ್ಪೆಂಡ್ ಮಾಡುವ ಆದೇಶ ಘಟನೆ ನಡೆದ ಮಾರನೇ ದಿನವೇ ಹೊರಡಿಸಿಬಿಟ್ಟ!ಅಂತೂ ಕೊನೆಗೆ ಸೇಡು ತೀರಿಸಿಕೊಂಡೆ ಎಂದು ನಂದೀಶ ಬೀಗುವ ಹೊತ್ತಿಗೆ ಆಶಾ ಅದಕ್ಕೂ ಪರಿಹಾರ ರೆಡಿ ಮಾಡಿಕೊಂಡಿದ್ದಳು. ಪ್ರಾಯಶಃ ನಂದೀಶ ಇಂಥ ಕೆಲಸ ಮಾಡುತ್ತಾನೆ ಎಂದು ಆಕೆ ಮೊದಲೇ ನಿರೀಕ್ಷಿಸಿದ್ದಳೋ ಏನೋ ಅಂತೂ ಸಸ್ಪೆಂಡ್ ಆದೇಶ ಕೈ ತಲುಪುತ್ತಿದ್ದಂತೆಯೇ ಆಕೆ ಕನರ್ಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಹೋಗಿ ಈ ಸಸ್ಪೆಂಡ್ ಆದೇಶಕ್ಕೆ ತಡೆಯಾಜ್ಞೆ ತಂದುಬಿಟ್ಟಳು. ಸಕರ್ಾರಿ ಅಧಿಕಾರಿಗಳನ್ನು ವಗರ್ಾವಣೆ ಮಾಡುವಾಗ ಅನುಸರಿಸಬೇಕಾದ ಕನಷ್ಠ ನೀತಿ, ನಿಯಮ, ನಡಾವಳಿಗಳ್ಯಾವನ್ನೂ ಈ ಪ್ರಕರಣದಲ್ಲಿ ಅನುಸರಿಸಲಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ನ್ಯಾಯಮಂಡಳಿ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಲ್ಲದೇ ಮುಖ್ಯಮಂತ್ರಿಯ ಮುಖಕ್ಕೆ ಮಂಗಳಾರತಿಯನ್ನೂ ಮಾಡಿತು. ಈಗ ನಂದೀಶ ನಿಜಕ್ಕೂ ಹುಚ್ಚು ನಾಯಿ ಕಡಿತಕ್ಕೆ ಸಿಕ್ಕವನಂತೆ ಪೆಚ್ಚಾಗಿ ಕುಳಿತಿದ್ದ. ಸಸ್ಪೆಂಡ್ ಮಾಡುವುದಕ್ಕಂತೂ ಆಗಲಿಲ್ಲ. ಕನಿಷ್ಠ ಟ್ರಾನ್ಸ್ಫರ್ ಆದ್ರೂ ಮಾಡಿಸಿ ಮುಖ ಉಳಿಸಿಕೊಳ್ಳಬೇಕೆಂಬ ಅನಿವಾರ್ಯತೆ ಅವನಿಗೆ. ಅಂತು ಮತ್ತೆ ಯಡ್ಡಿ ಕಿವಿಯಲ್ಲಿ ಬಿಸಿಗಾಳಿ ಊದಿ ವಗರ್ಾವಣೆ ಆದೇಶವನ್ನೂ ಹೊರಡಿಸುವಲ್ಲಿ ಯಶಸ್ವಿಯಾದ. ಆಕೆಯನ್ನು ಕೆ.ಆರ್ ಪುರಂನ ತಹಶೀಲ್ದಾರ ಕಚೇರಿಯಿಂದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ವಗರ್ಾವಣೆ ಮಾಡಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಶಿವಕುಮಾರ ಎಂಬ ಅಧಿಕಾರಿಯನ್ನು ತಹಶೀಲ್ದಾರರನ್ನಾಗಿ ಮಾಡಿ ಕೂರಿಸಿದ. ಆದರೆ ಆಶಾ ಬಹಳ ಚಾಣಾಕ್ಷೆ. ಈ ವಗರ್ಾವಣೆ ಆದೇಶ ಕೈಸೇರುತ್ತಿದ್ದಂತೆಯೇ ಅದಕ್ಕೂ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದುಬಿಟ್ಟಳು! ತಡೆಯಾಜ್ಞೆಯ ಪ್ರತಿಯನ್ನು ಕೈಯಲ್ಲಿ ಹಿಡಿದು ಆಶಾ ಆಫೀಸಿಗೆ ಬಂದರೆ ತಾಲ್ಲೂಕು ಆಫೀಸಿಗೆ ಬೀಗ ಜಡಿಯಲಾಗಿತ್ತು! ಅಸಲೀಯತ್ತೇನೆಂದರೆ ವಗರ್ಾವಣೆಗೆ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದ್ದು ಗೊತ್ತಾದ ತಕ್ಷಣ ನಂದೀಶ ಹತಾಷೆಯಿಂದ ತನ್ನ ಬಾಡಿಗೆ ಗೂಂಡಾಗಳನ್ನು ಕಳಿಸಿ ಕೆ.ಆರ್.ಪುರಂ ತಹಶೀಲ್ದಾರ್ ಕಚೇರಿಗೆ ಬೀಗ ಜಡಿಸಿದ್ದ! ಕೈಲಾಗದವರು ಮೈ ಪರಚಿಕೊಂಡಿದ್ದರಂತಲ್ಲಾ ಹಾಗೆ. ಇದು ನಂದೀಶನದ್ದೇ ಕೆಲಸ ಎಂಬ ಬಗ್ಗೆ ಆಫೀಸಿನಲ್ಲಿದ್ದವರಿಗಾಗಲೀ, ಆಶಾಗಾಗಲೀ ಯಾವುದೇ ಅನುಮಾನ ಇರಲಿಲ್ಲ. ಹಿಂದು ಮುಂದು ನೋಡದೇ ಬೀಗ ಒಡೆಸಿ ಒಳ ನಡೆದುಬಿಟ್ಟಳು. ಅಲ್ಲಿಗೆ ನಂದೀಶನಿಗೆ ಅಘಾತದ ಮೇಲೆ ಮತ್ತೊಂದು ಅಘಾತವಾಯಿತು. ಈಗ ಮಾನ ಮಯರ್ಾದೆ ಉಳಿಸಿಕೊಳ್ಳೋದೇ ಆತನಿಗೆ ಕಷ್ಟವಾಯಿತು. ಕೂಡಲೇ ಆಶಾಳ ಕೋಣೆಯ ಎದುರು ಇನ್ನೊಂದು ಕುಚರ್ಿ ತರಿಸಿ ಹಾಕಿ ಅದರ ಮೇಲೆ ಶಿವಕುಮಾರ್ನನ್ನು ಕೂರಿಸಿದ. ಅಲ್ಲಿಗೆ ಒಂದೇ ತಾಲ್ಲೂಕು ಆಫೀಸಿಗೆ ಇಬ್ಬರು ತಹಶೀಲ್ದಾರರಾದಂತಾಯಿತು. ನಂದೀಶನಿಗೆ ಏನೂ ಕಿತ್ತುಕೊಳ್ಳಲಾಗಲಿಲ್ಲ. ಒಬ್ಬ ಹೆಣ್ಣು ಅಧಿಕಾರಿಯಿಂದ ಒದೆಯ ಮೇಲೆ ಒದೆ ತಿಂದು ಸುಸ್ತಾಗಿದ್ದ ಆತ ಕೊಟ್ಟ ಕೊನೆಯ ಆಯ್ಕೆಯಾಗಿ ಆಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಇನ್ನೊಂದಿಷ್ಟು ಮೈ ಪರಚಿಕೊಂಡ. ಆಶಾ ಪವರ್ೀನ್ ಏನು ಕಡಿಮೆ ಗಿರಾಕಿಯೇ? ಆಕೆಯೂ ಒಂದು ಕಂಪ್ಲೇಂಟ್ ಲಾಡ್ಜ್ ಮಾಡಿದ್ದಾಳೆ. ಅಲ್ಲಿಗೆ ಒಂದು ಹಂತದ ಜಟಾಪಟಿ ಮುಗಿದಂತಾಗಿದೆ. ಸಧ್ಯಕ್ಕೆ ನಂದೀಶ ರೆಡ್ಡಿ ನೆಲಕ್ಕೆ ಬಿದ್ದು ಮಣ್ಣು ತಿಂದಿದ್ದಾನೆ. ಆದ್ರೂ ಮೀಸೆ ಮಣ್ಣಾಗಿಲ್ಲ ಅಂತ ಅಲ್ಲಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾನೆ! ಬಿಜೆಪಿ ಎಮ್ಮೆಲ್ಲೆಗಳು, ಮಂತ್ರಿ ಮಹೋದಯರು ಸಕರ್ಾರಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಾರೆ, ತಮ್ಮ ಲೂಟಿಗೆ ಅಡ್ಡ ಬಂದವರನ್ನು ಹೇಗೆ ಹಿಂಸಿಸುತ್ತಾರೆ ಎನ್ನೋದಕ್ಕೆ ಇದೊಂದು ಉದಾಹರಣೆಯಷ್ಟೆ. ಈ ಬಿಜೆಪಿಗಳು ಬಾಯ್ತೆರೆದರೆ ದೇಶಭಕ್ತಿ, ರಾಮರಾಜ್ಯ, ಪ್ರಾಮಾಣಿಕತೆ ಎಂತೆಲ್ಲಾ ಅಣಿಮುತ್ತುಗಳನ್ನು ಸುರಿಸುತ್ತವೆ. ಇವರ ಭಾಷಣಗಳನ್ನು ಕೇಳಿದರೆ ಆಹಾ ಇವರೆಂಥ ಮಹಾನ್ ದೇಶಭಕ್ತರು. ಇಂಥ ಮಹಾನುಭಾವರು ಇನ್ನೂ ಇದ್ದಾರಲ್ಲ ಅನ್ನಿಸುತ್ತೆ. ಆದರೆ ಒಂಚೂರು ಒಳಹೊಕ್ಕು ನೋಡಿದರೆ ಅಸಲಿ ಕಣ್ಣಿಗೆ ರಾಚುತ್ತದೆ. ಈ ಒಬ್ಬೊಬ್ಬ ಪುಢಾರಿಯೂ ನೂರಾರು, ಸಾವಿರಾರು ಕೋಟಿ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ ಎಂದರೆ ಅವರ ದೇಶಭಕ್ತಿ, ದೇಶಪ್ರೇಮ, ಪ್ರಾಮಾಣಿಕತೆ, ರಾಮರಾಜ್ಯ ಎಂತಹದ್ದು ಎಂಬುದು ಅರ್ಥವಾಗಿಬಿಡುತ್ತದೆ. ಎಲ್ಲಾ ಅಧಿಕಾರಿಗಳೂ ಆಶಾ ಪವರ್ೀನ್ ಥರ ಇರೋದಿಲ್ಲ. ಇವರ ಕಾಟ ತಾಳಲಾರದೇ ಬಹುತೇಕ ಅಧಿಕಾರಿಗಳು ಹೆದರಿ ಎಮ್ಮೆಲ್ಲೆಗಳು, ಎಂಪಿಗಳು, ಮಂತ್ರಿಮಹೋದಯರು ಹೇಳಿದಂತೆ ಕೆಲಸ ಮಾಡಿ ಬಿಡುತ್ತಾರೆ. ಆ ಮೂಲಕ ಸಕರ್ಾರಿ ಸಂಪತ್ತು ಕಳ್ಳರ ಪಾಲಾಗುವುದಕ್ಕೆ ತಾವೇ ಸಹಕಾರ ಕೊಟ್ಟು ಬಿಡುತ್ತಾರೆ.(ಬಳ್ಳಾರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ರೆಡ್ಡಿಗಳಿಗೆ ಹೆದರಿ ಸಕರ್ಾರದ ಸಂಪತ್ತನ್ನು ಲೂಟಿ ಮಾಡಲು ಸಹಕರಿಸುತ್ತಿದ್ದಾರೆ) ನಮ್ಮಲ್ಲಿ ಅಲ್ಲೋ ಇಲ್ಲೋ ಒಬ್ಬೊಬ್ಬರು ಆಶಾ ಪವರ್ೀನ್ ಥರ ಅಧಿಕಾರಿಗಳು ಇರ್ತಾರೆ. ಅಂಥವರು ಮಾತ್ರ ನಂದೀಶರೆಡ್ಡಿಯಂತಹ ನೆಲಗಳ್ಳರಿಗೆ ದಂಡಂದಶಗುಣಂ ಎಂದು ಪಾಠ ಕಲಿಸುತ್ತಾರೆ.ಒಟ್ಟಾರೆ ಈ ವ್ಯವಸ್ಥೆಯ ಸುಧಾರಣೆಗೆ ಆಶಾಪವರ್ಿನ್ರಂತೆ ಇನ್ನುಳಿದ ಅಧಿಕಾರಿಗಳು ದಿಟ್ಟತನದಿಂದ ಕೆಲಸ ಮಾಡಬೇಕು.
ಆಶಾ ಎಂಬ ಅಪರಂಜಿ.ಆಶಾ ಪವರ್ೀನಳ ಜಾಯಮಾನವೇ ಅಂತದು. ತಾನಂತೂ ಎಂದು ಭ್ರಷ್ಟಾಚಾರ ಮಾಡುವವಳಲ್ಲ, ತನ್ನ ಮೂಲಕ ಇತರರೂ ಮಾಡುವುದಕ್ಕೆ ಬಿಡುವವಳಲ್ಲ. ಸಾರ್ವಜನಕ ಸಂಪತ್ತನ್ನು ಮೋಸ, ವಂಚನೆಯ ಮೂಲಕ ಗುಳುಂ ಮಾಡುವದಕ್ಕೆ ಯಾರಾದರೂ ಕೈಹಾಕಿದರೆ, ಹಿಂದೆ-ಮುಂದೆ ನೋಡದೇ ಉಗಿದು ಕಳುಹಿಸುತ್ತಾಳೆ.ಅದು ನಂದೀಶರೆಡ್ಡಿಯಾಗಿರಲಿ, ಅಥವಾ ಅವರ ಅಪ್ಪನಾಗಿರಲಿ ಯಾರನ್ನು ಬಿಡುವುದಿಲ್ಲ.ಆಶಾಪವರ್ಿನ್ರಲ್ಲಿ ಈ ರೀತಿಯ ಕೆಚ್ಚು ಬರುವದಕ್ಕೆ ಪ್ರಾಯಶಃ ಅವರ ಅಪ್ಪನೇ ಕಾರಣವಿರಬೇಕು. ಮೂಲತಃ ಕೆ.ಆರ್ ಪೇಟೆಯವರಾದ ಅವರ ತಂದೆ ಹಿರಿಯ ಎಡಪಂಥೀಯ ಚಿಂತಕ ಎಸ್.ಕೆ ಕರೀಂಖಾನ್ ಅವರ ಪ್ರಭಾವಕ್ಕೆ ಒಳಗಾಗಿದ್ದವರು. ಜನಪರ ಮತ್ತು ಪ್ರಗತಿಪರ ಮೌಲ್ಯಗಳನ್ನು ಮೈಗೂಡಿಸಿಕೊಂಡು ನಂಬಿದ ಮೌಲ್ಯಗಳಿಗೆ ಚ್ಯುತಿ ಬಾರದಂತೆ, ಆದರ್ಶಪ್ರಾಯವಾಗಿ ಬದುಕಿದವರು. ದೊಡ್ಡ-ದೊಡ್ಡ ಹುದ್ದೆಗಳನ್ನು ಅಲಂಕರಿಸುವದಕ್ಕೆ ಶ್ರೀಮಂತನಾಗಿ ಬೆಳೆಯುವದಕ್ಕೆ ಎಷ್ಟೇ ಅವಕಾಶಗಳಿದ್ದರೂ ಅದ್ಯಾವ ವ್ಯಾಮೋಹಕ್ಕೂ ಬಲಿಯಾಗದೇ ಶಿಕ್ಷಕರಾಗಿಯೇ ಮುಂದುವರೆದವರು. ಅದೇ ರೀತಿಯಲ್ಲಿ ಆಶಾಪವರ್ಿನ್ರನ್ನು ಬೆಳೆಸಿದ್ದರು.ಹೀಗೆ ತಂದೆಯ ಪ್ರಗತಿಪರ ಚಿಂತನೆಗಳನ್ನು ಅಂತರ್ಗತ ಮಾಡಿಕೊಂಡ ಆಶಾಪವರ್ಿನ್ ತಮ್ಮ ಬದುಕಿನಲ್ಲಿಯೂ ಅವುಗಳನ್ನು ಅಳವಡಿಸಿಕೊಂಡರು. ಮುಂದೆ ಓದಿ ಪೊಲೀಸ್ ಇಲಾಖೆಯಲ್ಲಿ ಸೇರಿದ್ದಾಗಲೂ ಆ ಮೌಲ್ಯಗಳನ್ನು ಕಾಪಾಡಿಕೊಂಡು ಬಂದರು. ಸಾಮಾನ್ಯವಾಗಿ ಪೊಲೀಸ್ ಇಲಾಖೆ ಹೇಗಿರುತ್ತದೆಂದರೆ, ಒಮ್ಮೆ ಅದರೊಳಗೆ ಹೋದರೆ ಸಾಕು ಪ್ರಾಮಾಣಿಕರು ಒಂದು ರಾತ್ರಿ ಕಳೆಯುವದರೊಳಗಾಗಿ ಭ್ರಷ್ಟರಾಗಿ ಬಿಡುತ್ತಾರೆ. ಆದರೆ, ಆಶಾಪವರ್ಿನ್ ಅದಕ್ಕೆ ಅಪವಾದವಾಗಿದ್ದರು. 2001-03ರತನಕ ಸೆಂಟ್ರಲ್ ಕ್ರೈಂ ಬ್ರ್ಯಾಂಚಿನಲ್ಲಿದ್ದಾಗಲಿ ನಂತರ ಕಮಷರ್ಿಯಲ್ ಸ್ಟ್ರೀಟ್ ಪೊಲೀಸ್ ಸ್ಟೇಷನ್ನಲ್ಲಾಗಲಿ ಅಥವಾ ಆರ್.ಟಿ ನಗರ ಟ್ರಾಫಿಕ್ ಪೊಲೀಸ್ ಠಾಣಿಯಲ್ಲಾಗಲಿ, ಬಂದಾಗ ಒಂದೇ ಒಂದು ಭ್ರಷ್ಟಾಚಾರವನ್ನು ಮಾಡಲಿಲ್ಲ. ಭ್ರಷ್ಟರ ಮಧ್ಯೆದಲ್ಲಿಯೇ ಇದ್ದು ಕೊಂಡು ಪರಿಶುದ್ದರಾಗಿ ಉಳಿಯುವುದು ಬಹಳ ಕಷ್ಟ. ಆದರೆ, ಪವರ್ಿನ್ರವರು ಅದನ್ನು ಸಾಧಿಸಿ ತೋರಿಸಿದ್ದರು.ಈ ಕಾರಣಕ್ಕಾಗಿಯೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ತುತ್ತಾಗಿ ಹಲವು ಬಾರಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎತ್ತಂಗಡಿಯೂ ಆಗಬೇಕಾಯಿತು. ಆದರೂ, ಅವರು ಎಂದೆಂದಿಗೂ ಎದೆಗುಂದಲಿಲ್ಲ. ಅನೇಕ ಅಡ್ಡಿ-ಆತಂಕಗಳನ್ನು ಯಶಸ್ವಿಯಾಗಿ ಎದುರಿಸಿ ಜನರಿಂದ ಸೈ ಎನಿಸಿಕೊಂಡಿದ್ದಾರೆ.ನಂದೀಶರೆಡ್ಡಿ ಅದ್ಯಾವ ಗಳಿಗೆಯಲ್ಲಿ ಇವರನ್ನು ತೊಡವಿದನೋ ಅಥವಾ ಆತನ ಗ್ರಹಾಚಾರ ನೆಟ್ಟಗಿರಲಿಲ್ಲವೋ ಏನೋ ಅಂತೂ ಆಶಾಪವರ್ಿನ್ ಕೈಯಲ್ಲಿ ಸಿಕ್ಕು ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿದ್ದಾನೆ. ತಾನು ತಿನ್ನುವುದಲ್ಲದೇ ಕೋಟರ್ಿನಿಂದ ಯಡ್ಡಿಗೂ ತಿನ್ನಿಸುತ್ತಿದ್ದಾನೆ.
ಮಾದ್ಯಮಗಳ ದಿವಾಳಿಕೋರತನಕೆ.ಆರ್.ಪುರಂ ಶಾಸಕ ನಂದೀಶರೆಡ್ಡಿಯ ಹಿಡಿತದಲ್ಲಿ ಕೆಲವೊಂದು ಟಿವಿ ಚಾನೆಲ್ಗಳ ವರದಿಗಾರರು ಕೆಲಸ ಮಾಡುತ್ತಿದ್ದಾರೆೆ! ಅವರಿಗೆ ತಿಂಗಳಿಗೆ ಇಂತಿಷ್ಟು ಎಂದು ಮಾಮೂಲಿಯನ್ನು ನಂದೀಶರೆಡ್ಡಿ ನೀಡುತ್ತಾನೆ! ಈ ಕಾರಣವಾಗಿ ರಾಜ್ಯದ ಯಾವೊಂದು ಚಾನೆಲ್ಗಳು ಪವರ್ಿನ್ರ ಪ್ರಕರಣದ ಕುರಿತು ವಾಸ್ತವ ವರದಿಯನ್ನು ಪ್ರಸಾರ ಮಾಡಿಲ್ಲ. ಅಮೇರಿಕಾದಲ್ಲಿ ಶೋಭಕ್ಕ ನೈಟ್ಪ್ಯಾಂಟ್ ಹಾಕಿದರೆ, ಪೊಲೀಸ್ ಜೀಪಿನ ಮೇಲೆರಿ ಸಿದ್ದರಾಮಯ್ಯ ಲುಂಗಿಮೇಲೆ ಕಟ್ಟಿದರೆ, ಅರ್ಧಗಂಟೆ ವಿಶೇಷ ಕಾರ್ಯಕ್ರಮ ಮಾಡುವ ಚಾನೆಲ್ಗಳು ಒಬ್ಬ ಹಿರಿಯ ಕೆ.ಎ.ಎಸ್ ಅಧಿಕಾರಿಗೆ ಆಗಿರುವ ಅನ್ಯಾಯವನ್ನು ವಾಸ್ತವಿಕವಾಗಿ ತಿಳಿದಿದ್ದರೂ ಏನು ಮಾಹಿತಿ ಇಲ್ಲದಂತೆ ವತರ್ಿಸುತ್ತಿವೆ.ಭ್ರಷ್ಟಾಚಾರದ ವಿರುದ್ಧ ಧ್ವನಯೆತ್ತ ಬೇಕಾದ ಚಾನೆಲ್ಗಳು ಭ್ರಷ್ಟರ ಎಂಜಲು ತಿಂದು ಅವರ ಪರವಾಗಿ ಕೆಲಸ ಮಾಡುತ್ತಿವೆ. ಸಮಾಜದಲ್ಲಿ ಸತ್ಯ, ನಿಷ್ಟೆ, ಕಾನೂನನ್ನು ಕಾಪಾಡಬೇಕಾದ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ಜನಸಾಮಾನ್ಯರು ಮಾಧ್ಯಮಗಳ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಬಗೆಯುತ್ತಿವೆ. ಸಮಾಜವನ್ನು ಸರಿದಾರಿಯಲ್ಲಿ ನಡೆಸಬೇಕಾದ ಮಾಧ್ಯಮ ತಾನೇ ತಪ್ಪುದಾರಿಯಲ್ಲಿ ನಡೆದರೆ ಸಮಾಜದ ಗತಿ ಏನಾಗಬಹುದು? ಪರಿಸ್ಥಿತಿ ಹೀಗೆ ಮುಂದುವರೆದರೆ ಮಾಧ್ಯಮಗಳು ಸಂಪೂರ್ಣವಾಗಿ ಜನಸಾಮಾನ್ಯರ ನಂಬಿಕೆಯನ್ನು ಕಳೆದುಕೊಂಡು ವಿನಾಶದ ಅಂಚಿಗೆ ತಲುಪುವದರಲ್ಲಿ ಸಂದೇಹವಿಲ್ಲ. ಅದರಂತೆ ಆಶಾಪವರ್ಿನ್ರ ಪ್ರಕರಣದಲ್ಲಿ ಮಾಧ್ಯಮಗಳು ಇದನ್ನೇ ಮಾಡಿವೆ!ಮಾದ್ಯಮಗಳ ಮಾತು ಒತ್ತಟ್ಟಿಗಿರಲಿ. ಒಬ್ಬ ಮಹಿಳಾ ಅಧಿಕಾರಿಗೆ ಹೀಗೆ ಜನಪ್ರತಿನಧಿಯೊಬ್ಬ ಈ ಪಾಟಿ ಕಿರುಕುಳ ಕೊಡುತ್ತಿದ್ದರೆ ಮಹಿಳಾ ಸಂಘಟನೆಗಳಾದರೂ ಮುಂದೆ ಬಂದು ಪ್ರತಿಭಟಿಸಬೇಡವೆ? ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾರವರನ್ನು ಹೊರತುಪಡಿಸಿದರೆ, ಮಹಿಳಾ ಮೀಸಲಾತಿಯ ಕುರಿತು ಗಂಟೆಗಟ್ಟಲೇ ಮಾತನಾಡುವ ಯಾವ ಮಹಿಳಾ ಸಂಘಟನೆಗಳೂ, ಯಾವ ಮಹಿಳಾಮಣಿಗಳು ಈ ಕಡೆ ಕಣ್ಣು ಹಾಯಿಸಲೇ ಇಲ್ಲ! ದುರಂತ ಎಂದರೆ ಇದೇ ಅಲ್ಲವೆ?
ಎಂ.ಲಿಂಗರಾಜು,

ತಕ್ಕಡಿ ಈಗ 3ತುಕ್ಕಡಿಹಟ್ಟಿ


ತಕ್ಕಡಿ ಈಗ 3ತುಕ್ಕಡಿಹಟ್ಟಿ ಚಿನ್ನದ ಗಣೆಯ ಸಿಬ್ಬಂದಿ ಹಾಗೂ ಕಾಮರ್ಿಕರನ್ನು ಪ್ರತಿನಿಧಿಸುವ ಯೂನಿಯನ್ ಒಂದಾದ (ಎ.ಐ.ಟಿ.ಯು.ಸಿ) ತಕ್ಕಡಿ ಸಂಘಟನೆಯೂ ಈಗ 3ತುಕ್ಕಡಿಯಾಗಿ ಹೋಗಿದೆ. ಎಲ್ಲ ವಿಷಯದಲ್ಲೂ ಸರಿಸಮಾನ ಆಗಿರಬೇಕಾದ ತಕ್ಕಡಿ ಈಗ ಬ್ಯಾಲೆನ್ಸ್ ಕಳೆದುಕೊಂಡಿದೆ. ತಕ್ಕಡಿಯನ್ನು ತೂಗುವವರು ಬಳ್ಳಾರಿಯಲ್ಲಿದ್ದರೆ, ಅವುಗಳ ತೂಕದ ಕಲ್ಲುಗಳು ಮಾತ್ರ ಹಟ್ಟಿಯಲ್ಲಿ ಉಳಿದಿವೆ. ಅದರಲ್ಲಿ ನಮ್ಮದು ಹೆಚ್ಚು ತೂಕ, ನಿಮ್ಮದು ಕಡಿಮೆ ತೂಕ ಎಂಬ ಕಿತ್ತಾಟ ಈಗ ಶುರುವಾಗಿದೆ. ಕಾಮರ್ಿಕರು ವಾಲೇಬಾಬನ ಆಡಳಿತ ಬೇಸತ್ತು ಅದಕ್ಕೆ ಪಯರ್ಾಯವಾಗಿ ಇವರನ್ನು ಆಯ್ಕೆ ಮಾಡಿದ್ದರು. ಆದರೆ, ಇವರುಗಳು ಕೂಡ ಆತನ ಆಡಳಿತದಿಂದ ಹೊರತಾಗಿಲ್ಲ. ಒಟ್ಟಿನಲ್ಲಿ ಕಾಮರ್ಿಕರಿಗೆ ಊದುವದನ್ನು ಬಿಟ್ಟು ಬಾರಿಸುವದನ್ನು ತೆಗೆಂದುಕೊಂಡಂತಾಗಿದೆ. ಎಲ್ಲ ವಿಷಯದಲ್ಲಿ ವಾಲೇಬಾಬುಗಿಂತ ನಾವೇನು ಕಡಿಮೆ ಎಂಬದನ್ನು ಸಾಭೀತುಮಾಡಿದ್ದಾರೆ ಈ ಕಾಮ್ರೇಡುಗಳು. ವಾಲೇಬಾಬು ತನ್ನ ಆಡಳಿತದಲ್ಲಿ ಬಿಟ್ಟಿ ಬಂದದ್ದೆಲ್ಲ ತಾನೊಬ್ಬನೇ ತಿಂದು ಮಿಕ್ಕಿ ಉಳಿದ ಅಷ್ಟಿಷ್ಟನ್ನು ತನ್ನ ಹಿಂಬಾಲಕರಿಗೆ ನೀಡುತ್ತಿದ್ದ. ಈಗ ಅದೇ ಪದ್ದತಿಯನ್ನು ಸ್ವಲ್ಪ ವಿಭಿನ್ನವಾಗಿ ಕಾಮ್ರೇಡ್ಗಳು ಮುಂದುವರೆಸಿದ್ದಾರೆ. (ವಾಲೇಬಾಬು ತನ್ನ ಹೆಂಡತಿಯ ಕೈಯಲ್ಲಿ ಕಂಪನಿ ಮನೆ ಕೀಲಿಗಳನ್ನು ಕೊಟ್ಟು ಹಣತೆಗೆದುಕೊಳ್ಳುತ್ತಿದ್ದರೆ, ಇವರು ನೇರವಾಗಿ ನಾಮನಿದರ್ೇಶಿತ ಸದಸ್ಯರ ಮುಖಾಂತರ ಆಫ್ಬಾಟಲ್ ಡ್ರಿಂಕ್ಸ್ ಅರ್ಧಕೆಜಿ ಕಾರಕ್ಕೆ ಮನೆ ಕೀಲಿಗಳನ್ನು ಕೊಡಿಸುತ್ತ್ತಿದ್ದಾರೆ.) ಇನ್ನೊಂದು ಈ ಕಾಮ್ರೇಡ್ಗಳ ಸಂಘಟನೆಯಲ್ಲಿ ನಾಮನಿದರ್ೇಶಿತ (ನಲ್ಲದ) ಸದಸ್ಯನಿಂದ ಹಿಡಿದು ಚುನಾಯಿತಿ ಪ್ರತಿನಿಧಿಗಳವರೆಗೆ ಹಣಕ್ಕಾಗಿ ಏನೆಲ್ಲ ಕೆಲಸ ಕಾರ್ಯಗಳನ್ನು ಮಾಡಲು ಹೊರಟಿದ್ದಾರೆ. ಯಾರಾದರೂ ಕಾಮರ್ಿಕರು ಇದನ್ನು ಪ್ರಶ್ನಿಸಿದರೆ, ಆಗ ಇದನ್ನೇ ವಾಲೇಬಾಬು ಮಾಡುತ್ತಿದ್ದ ಕೇಳುವವರು ಆವಾಗ ಎಲ್ಲಿಗೆ ಹೋಗಿದ್ದೀರಿ. ಅದನ್ನು ಬಿಟ್ಟು ನಮ್ಮನ್ನು ಕೇಳುವದಕ್ಕೆ ಬಂದಿರೇನು ಎಂದು ಗದರಿಸುತ್ತಾರೆ.? ಇಂತಹ ಎಷ್ಟೋ ಘಟನೆಗಳು ನಮ್ಮ ಪತ್ರಿಕೆಯ ಕಣ್ಮುಂದೆ ನಡೆದಿವೆ. (ಮೊನ್ನೆಯೇ ಆ ಸಂಘಟನೆ ಅಧ್ಯಕ್ಷರ ಒಂದು ಜಮೀನಿನ ಪ್ರಕರಣದಲ್ಲಿ ಹಣದ ಸಂಬಂಧ ದೊಡ್ಡ ವಾಗ್ವಾದವೇ ನಡೆದು ಹೋಗಿ ಕೊನೆಗೆ ಅಧ್ಯಕ್ಷರಿಗೆ ಮರಳಿ ಹಣ ನೀಡುವಂತಾಯಿತು.) ಇವರ ಎಲ್ಲಾ ಚಾಕ-ಚಕ್ಯತೆಯನ್ನು ಗೊತ್ತು ಮಾಡಿಕೊಂಡಿರುವ ಗಣಿ ಆಡಳಿತ ಮಂಡಳಿ ಇವರ ನಡುವೆ ಇರುವ ಕಂದಕವನ್ನು ಇನ್ನಷ್ಟು ಆಳವಾಗಿ ತೋಡಲು ಜೆ.ಸಿ.ಬಿಗಳನ್ನು ಬಳಸಿಕೊಳ್ಳುತ್ತಿದೆ. ಎ.ಐ.ಟಿ.ಯು.ಸಿ ಮುಖಂಡರು ಹಾಗೂ ಕಾಮರ್ಿಕ ಸಂಘದ ಅಧ್ಯಕ್ಷರು ಆದ ಯಂಗ್&ಎನಜರ್ಿಟಿಕ್ ಮ್ಯಾನ್ ಅರವಿಂದ ಮಳೆಬೆನ್ನೂರು ಸಂಘಟನೆಯಲ್ಲಿ ತಲೆದೋರಿರುವ ಭಿನ್ನಮತವನ್ನು ಸರಿಪಡಿಸಲು ಈಗಾಗಲೇ ಸುಮಾರು ಬಾರಿ ಎಲ್ಲ ಸದಸ್ಯರನ್ನು ಕರೆದು ಸಭೆಮಾಡಿದಾಗ್ಯೂ ಅವೆಲ್ಲವುಗಳು ವಿಫಲವಾಗಿ ಹೋಗಿವೆ. ಕಾಮರ್ಿಕರಿಗೆ ಮನೆ ವಿತರಿಸುವಲ್ಲಿ ಹಣ, ಕಾಮರ್ಿಕರಿಗೆ ಯಾವುದಾದರೂ ಒಂದು ಸೌಲಭ್ಯವನ್ನು ಕೊಡಿಸುವಲ್ಲಿ ಹಣ, ವಗರ್ಾವಣಿಗಳನ್ನೂ ಮಾಡುವಲ್ಲಿ ಹಣ ಒಟ್ಟಿನಲ್ಲಿ ಹಣ ಎಲ್ಲೇಲ್ಲಿ ಸಿಗುತ್ತದೆಯೋ ಅಲ್ಲಿ ಎಲ್ಲ ತಮ್ಮ ಕೈಚಳಕ ತೋರಿಸುತ್ತಾ ಕಾಮ್ರೇಡ್ಗಳು ಸನ್ಮಾನ್ಯ ಶ್ರೀ ವಾಲೇಬಾಬು ಅವರಿಗೆ ಮಾದರಿಯಾಗಿದ್ದಾರೆ. ಕಾಮರ್ಿಕ ಸಂಘಕ್ಕೆ ಒಂದೇ ಬಾರಿಗೆ 18 ಸದಸ್ಯರು ಆಯ್ಕೆಗೊಂಡಾಗ ಕಾಮರ್ಿಕರು ತಮ್ಮ ಸಮಸ್ಯೆಗಳೆಲ್ಲ ಇತ್ಯರ್ಥವಾಗಿ ಹೋಗುತ್ತವೆ, ತಕ್ಕಡಿ ಈ ಬಾರಿ ಎಲ್ಲರನ್ನು ಒಂದೇ ತೂಕದ ಮೇಲೆ ತೂಗಿ ನ್ಯಾಯ ಒದಗಿಸಿಕೊಡುತ್ತದೆ, ನಮ್ಮ ಮಕ್ಕಳಿಗೆ ನೌಕರಿ ಖಚಿತ, ವಿಶೇಷ ಸೌಲಭ್ಯಗಳು ನಮಗೆ ಸಿಗಬಹದು ಎಂಬಿತ್ಯಾದಿ ಹಗಲುಗನಸನ್ನು ಕಾಮರ್ಿಕ ವರ್ಗ ಕಂಡಿತ್ತು. ಆದರೆ, ದುರಂತಕ್ಕೆ ತಕ್ಕಡಿ ಹೇಳಿದ ಯಾವೊಂದು ಪ್ರಮುಖ ಭೇಡಿಕೆಗಳು ಈವರೆಗೆ ಈಡೇರಲಿಲ್ಲ. (ಅದಕ್ಕೆ ಬೇರೆ-ಬೇರೆ ಕಾರಣಗಳು ಇರಬಹುದು) ಪ್ರಮುಖವಾಗಿ ಕಾಮರ್ಿಕರ ಮಕ್ಕಳಿಗೆ ವಿ.ಆರ್.ಎಸ್.ನ ಅಡಿಯಲ್ಲಿ ಕೆಲಸವೊಂದನ್ನು ದೊರಕಿಸಿಕೊಟ್ಟರೆ, ಎಷ್ಟೋ ಜನರು ಇಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ದಿನೇ ದಿನೇ ಕಾಮರ್ಿಕರು ನಿವೃತ್ತಿಯ ಅಂಚಿಗೆ ತಲುಪುತ್ತಿದ್ದಾರೆ. ಅವರ ಮಕ್ಕಳು ವಯಸ್ಸುಗಳು ಮುಗಿಯುತ್ತಿವೆ. ಅವರಿಗೆ ಮುಂದೆ ಕುಟುಂಬ ನಿರ್ವಹಣೆ ತೊಂದರೆಯಾಗುತ್ತಿದೆ.ಇನ್ನು ದಿನಗೂಲಿ ನೌಕರರ ಪಾಡು ಕೇಳುವವರು ಇಲ್ಲವಂತಾಗಿದೆ. ವಾಲೇಬಾಬು ಚುನಾವಣಿಯಲ್ಲಿ ಗೆಲ್ಲುವ ಸಂದರ್ಭದಲ್ಲಿಯೂ ಇವರ ನೇಮಕಾತಿಯ ವಿಷಯವನ್ನು ಮಾತನಾಡಿ 3ವರ್ಷ7ತಿಂಗಳು ಕಾರ್ಯಭಾರ ಮಾಡಿದನು. ತದನಂತರ ಬಂದ ಕಾಮ್ರೇಡುಗಳು 30 ತಿಂಗಳು ತನಕ ಮಾಡಿದ್ದು ಅದನ್ನೇ. ವಿಧಿವಶ ಕಂಪನಿ ಮಾತ್ರ ಸಕರ್ಾರದ ಮಟ್ಟದಲ್ಲಿ ದಿನಗೂಲಿಗಳ ಫೈಲಿಗೆ ಸಹಿ ಬಿದ್ದರೆ ನಾವು ನೇಮಕ ಮಾಡಿಕೊಳ್ಳುತ್ತೇವೆ ಅಲ್ಲಿಯವರೆಗೆ ಅವರು ಗುತ್ತೇದಾರನ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳುತ್ತಿದೆ. ಇದರ ಮಧ್ಯೆ ದಿನಗೂಲಿಗಳು ಈಗ ಸಿಗುತ್ತಿರುವ ಫುಡ್ಕಿಟ್ನ ಆಸೆಗಾಗಿ ದುಡಿಯುತ್ತಲೇ ಸಾಗಿದ್ದಾರೆ. ಇನ್ನು ಹಟ್ಟಿಯ ಗಣಿಗಾರಿಕೆ ವಿಷಯಕ್ಕೆ ಬಂದರೆ, ಮೊದಲಿನ ಪರಿಸ್ಥಿತಿಗೂ ಮತ್ತೂ ಕಂಪನಿಯನ್ನು ಈಗಿನ ಪರಿಸ್ಥಿತಿಗೆ ಹೊಲಿಸಿದರೆ, ಸ್ವಲ್ಪಮಟ್ಟಿನ ಸುಧಾರಣೆಯಾಗಿರುವುದು ಕಂಡುಬರುತ್ತದೆ. ಯಾಕೆಂದರೆ ಅನುಭವಿಗಳ ಕೊರತೆಯನ್ನು ಕಂಪನಿ ಈ ಮೊದಲು ಅನುಭವಿಸುತ್ತಿತ್ತು. ಆದರೆ, ಈಗ ಪ್ರಕಾಶ, ಕಪಿಲವಾಸ್ತುನಂತಹ ಹಿರಿಯ ಅಧಿಕಾರಿಗಳು ಕಂಪನಿಗೆ ಮತ್ತೇ ಮರಳಿ ಪ್ರವೇಶಿಸಿರುವುದರಿಂದ ವೈಜ್ಞಾನಿಕ ತಳಹದಿಯ ಮೇಲೆ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಒಂದು ಕಡೆಯೂ ಕಂಪನಿಯೂ ಎಲ್ಲ ದೃಷ್ಟಿಕೋನದಿಂದ ಸುರಕ್ಷಿತವಾಗಿದೆ. ಇದೊಂದೇ ಕಾಮರ್ಿಕರಿಗೆ ಸಮಾಧಾನವಾಗಿರುವ ವಿಷಯ. ಕಂಪನಿಯಲ್ಲಿನ ಉತ್ಪಾದನೆ ಅಥವಾ ಬೆಳವಣಿಗೆಯೂ ಕುಂಠಿತವಾಗಿದ್ದರೆ ಅದಕ್ಕೆ ಹೊಣೆಗಾರರನ್ನಾಗಿ ಕಂಪನಿ ಕಾಮರ್ಿಕರನ್ನು ಮಾಡುತ್ತಿತ್ತು. ಆಗ ಕಾಮರ್ಿಕ ಸಂಘ ಅನಿವಾರ್ಯವಾಗಿ ಕಾಮರ್ಿಕರ ಮೇಲೆ ಇಲ್ಲಸಲ್ಲದ ಗೂಬೆಗಳನ್ನು ಕೂರಿಸುತ್ತಿತ್ತು. ಅಂತಹ ಯಾವ ಬೆಳವಣಿಗೆಗಳು ಇಲ್ಲಿಯವರೆಗೆ ನಡೆದಿಲ್ಲ. ಕಾಮರ್ಿಕ ಸಂಘವು ಮೇ1 ಮತ್ತು ಆಗಸ್ಟ್15, ಜನೆವರಿ26ರ ಭಾಷಣಗಳಿಗೆ ಮಾತ್ರ ಸೀಮಿತವಾಗಿ ಹೋಗಿವೆ. ಕೊನೆಯ ಮೇ ದಂದು ಇದೇ ತಕ್ಕಡಿ ಸಂಘಟನೆಯೂ ತೆಲುಗಿನ ಸಿನಿಮಾ ನಟ, ನಿದರ್ೇಶಕ, ನಿಮರ್ಾಫಕ ಮಾದಲ ರಂಗಾರಾವ್ರವರನ್ನು ಕರೆಸಿ ಬಹುದೊಡ್ಡ ಬಹಿರಂಗ ಸಭೆಯೊಂದನ್ನು ಏರ್ಪಡಿಸಿ ಈ ಮೊದಲು ತಾನು ಕೊಟ್ಟ ಭರವಸೆಗಳು ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಬೊಬ್ಬೆ ಇಟ್ಟಿತು. ಆದರೆ, ಅವ್ಯಾವುಗಳು ಇಲ್ಲಿಯವರೆಗೆ ಜಾರಿಗೆ ಬಂದಿರುವುದಿಲ್ಲ.ವೇತನ ಒಪ್ಪಂದದ ಮೇಲೆ ಎಲ್ಲರ ಕಣ್ಣು ಮುಂಬರುವ ಚುನಾವಣೆಯಲ್ಲಿ ಆಯ್ಕೆಯಾಗುವವರು ಕಾಮರ್ಿಕರ ವೇತನ ಒಪ್ಪಂದವನ್ನು ಮಾಡುತ್ತಾರೆ. ಇದರಲ್ಲಿ ಪ್ರಧಾನ ಕಾರ್ಯದಶರ್ಿಯ ಪಾತ್ರ ಮಹತ್ವದ್ದಾಗಿರುತ್ತದೆ. ಕಾರಣ ಎಲ್ಲರೂ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಹುದ್ದೆಯ ಅರ್ಹತೆ ಇಲ್ಲದವನು ಆ ಸ್ಥಾನಕ್ಕೆ ಆಯ್ಕೆಯಾದರೆ, ಕಾಮರ್ಿಕರ ಗತಿ ಅದೋಗತಿ. (ಇನ್ನೇನು ಊರುಬಿಡಬೇಕು ಎಂದು ಯೋಚಿಸುತ್ತಿದ್ದ ವಾಲೇಬಾಬುಗೆ ಈ ಹಿಂದೆ ಕಾಮರ್ಿಕರು ಜಿ.ಎಸ್ ಹುದ್ದೆಗೆ ಆಯ್ಕೆ ಮಾಡಿ 40 ತಿಂಗಳು ದೊಡ್ಡ ಯಾತನೆಯನ್ನು ಅನುಭವಿಸಿದ್ದಾರೆ.)ಕಾಮರ್ಿಕ ಏನೆನ್ನುತ್ತಾನೆ? ಕಾಮರ್ಿಕನಿಗೆ ಇಲ್ಲಿಯವರೆಗೆ ಕಾಮರ್ಿಕ ಸಂಘಗಳು ಏನು ಮಾಡಿವೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಲ್ಲಪ್ಪ ಶಾಪ್ಟಿನ ಹಲವಾರು ಹಿರಿಯ ಕಾಮರ್ಿಕರನ್ನು ಪತ್ರಿಕೆ ಸಂಪಕರ್ಿಸಿದಾಗ ; ನೋಡಿ ಸಾರ್ ನಾವು 35ವರ್ಷ ಕಂಪನಿಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿದ್ದೇವೆ. ನಾವು ಎಲ್ಲ ಯೂನಿಯನ್ಗಳನ್ನು ನೋಡಿದ್ದೇವೆ. ಎಲ್ಲ ಲೀಡರ್ಗಳನ್ನು ಕಂಡಿದ್ದೇವೆ. ಕಂಪನಿಯ ಆಡಳಿತ ವರ್ಗವು ನಮಗೆ ಚನ್ನಾಗಿ ಗೊತ್ತಿದೆ. ಆದರೆ ಇಂದು ಅಸಹಾಯಕರಾಗಿ ನಾವುಗಳು ನಮ್ಮ ಮುಂದಿನ ಜೀವನ ಲಹರಿಗಾಗಿ ನಮ್ಮ ಮಕ್ಕಳಿಗೆ ಕೆಲಸ ಕೊಡಿ ಎಂದು ಅಂಗಲಾಚಿಕೊಳ್ಳುತ್ತಿದ್ದೇವೆ. ಆದರೆ, ಪ್ರತಿಬಾರಿ ಆಯ್ಕೆಯಾಗುವ ಎಲ್ಲ ಯೂನಿಯನ್ ಮುಖಂಡರು ನಮಗಿರುವ ಅನಿವಾರ್ಯತೆಯನ್ನು ಬಳಸಿಕೊಂಡು ನಮ್ಮ ಕುಟುಂಬಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ. ನಮಗೆ ವಾಲೇಬಾಬು ಬಂದರೆನು? ಅಮೀರಅಲಿ ಬಂದರೇನು? ನಮ್ಮ ಮಕ್ಕಳಿಗೆ ಕೆಲಸ ಬೇಕು ಎಂಬುದೊಂದೇ ನಮಗೆ ಮುಖ್ಯ. ನಾವು ಈ ಕಂಪನಿಯ ಏಳಿಗೆಗಾಗಿ ಇಷ್ಟು ಇಷ್ಟು ಹಗಲಿರುಳು ದುಡಿದಿದ್ದೇವೆ. ಅಂತಹದರಲ್ಲಿ ಕಂಪನಿ ನಮ್ಮ ಮಕ್ಕಳಿಗೆ ಕರೆದು ಕೆಲಸ ಕೊಡಬೇಕಿತ್ತು. ಅದನ್ನು ಬಿಟ್ಟು ನಾವುಗಳು ರೊಕ್ಕ ತಗೊಂಡು ಆದ್ರೂ ಕೂಡ ನಮ್ಮ ಮಕ್ಕಳಿಗೆ ನೌಕರಿಗೆ ಕೊಡಸ್ರೀ ಎಂದು ಯೂನಿಯನ್ ಲೀಡರ್ಗಳ ಹತ್ತಿರ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗಿ ನಾವೇನು ಕಾಮರ್ಿಕ ಸಂಘದ ಬಗ್ಗೆ ಹೇಳಿದರೂ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಙಠಣಟಿರ & ಚಿಟಿರಡಿಥಿ ಟಚಿಟಿ ರಡಿಠಣಠಿತಕ್ಕಡಿಯಲ್ಲಿ ತುಕ್ಕಡಿಯಾದ ಯಂಗ್ ಅರವಿಂದ ಮಳೆಬೆನ್ನೂರು & ಆ್ಯಂಗ್ರೀ ಎಸ್.ಎಂ ಶಫಿಯವರದ್ದು ಒಂದು ಗುಂಪು ಈಗಾಗಲೇ ಕಾಮರ್ಿಕ ಸಂಘದ ಚುನಾವಣೆಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಶಫಿಯವರು ಇನ್ನೇನು ಕೆಲವು ತಿಂಗಳುಗಳಲ್ಲಿ ನಿವೃತ್ತಿಯಾಗುತ್ತಾರೆ. ಅವರು ಆಗಿ ಒಪ್ಪಿದರೆ, ಮತ್ತೊಂದು ಅವಧಿಗೆ ಪ್ರಧಾನಕಾರ್ಯದಶರ್ಿ ಸ್ಥಾನಕ್ಕೆ ಕಣಕ್ಕಿಳಿಸುವುದು. ಇಲ್ಲವಾದರೆ, ಬಳ್ಳಾರಿಯ ಭೂಪತಿಯನ್ನು ಕಣಕ್ಕಿಳಿಸಬೇಕೆಂಬುದು ಯಂಗ್ಮ್ಯಾನ್ನ ಒಳಾಲೋಚನೆ. ಇದಕ್ಕೆ ಶಫೀಯ ಸಮ್ಮತಿ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಲ್ಲಿ ಅಮೀರಅಲಿ ಆಗಲಿ, ಶಾಂತಪ್ಪ ಮಳ್ಳಿ ಆಗಲಿ ಜಿ.ಎಸ್ ಆಗುವುದು ಮಳೆಬೆನ್ನೂರು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಅರವಿಂದ ಮಳೆಬೆನ್ನೂರವರು ತಮ್ಮ ಯೋಜನೆಯ ಹಿನ್ನಲೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.ಅಮೀರ್ಅಲಿ ಅಲಿಯಾಸ್ ಸ್ಟೇಟ್ಪಾರ್ವಡರ್್ಅನಂತ ಸುಬ್ಬರಾವ್ನ ಅವಧಿಯಲ್ಲಿ ಪರೋಕ್ಷ ಜಿ.ಎಸ್ ಆಗಿ, ನಂತರ ತಾನೇ ಇನ್ನೊಂದು ಅವಧಿಯಲ್ಲಿ ಜಿ.ಎಸ್ ಆಗಿ ಕೆಲಸ ಮಾಡಿದ ಅಮೀರಅಲಿ ತಕ್ಕಡಿಯಲ್ಲಿ ನೇರವಾದ ಮಾತುಗಳನ್ನು (ಡಾಮಿನೇಟೆಡ್ ಪರ್ಸನ್) ಆಡುತ್ತಾ ಬೇರೆಯವರ ಕೆಂಗಣ್ಣಿಗೆ ಗುರಿಯಾಗಿರುವ ವ್ಯಕ್ತಿ. ಇವರು ಕಳೆದ ಚುನಾವಣೆಯಲ್ಲಿ ಜಿ.ಎಸ್ ಹುದ್ದೆಗೆ ಸ್ಪದರ್ೆ ಮಾಡಬೇಕೆಂದು ಬಯಸಿದಾಗ ಅವರ ಸ್ವಜಾತಿಯವರೇ, ಅಮೀರಲಿಗೆ ಜಿ.ಎಸ್ ಕೊಟ್ಟರೆ ನಾವ್ಯಾರು ತಕ್ಕಡಿಯ ಸಮೀಪಕ್ಕೆ ಬರುವುದಿಲ್ಲ ಎಂಬ ಸಂದೇಶವನ್ನು ಸಂಘಟನೆಯ ಹಿರಿಯರಿಗೆ ನೀಡಿದ್ದರು. ಆ ಕಾರಣ ಸಂಘಟನೆ ಕಳೆದ ಬಾರಿ ಅಮೀರಅಲಿಯನ್ನು ಬಿಟ್ಟು, ಸಂಘಟನೆ ತೊರೆದು ಹೋಗಿದ್ದ ಶಫಿಯವರಿಗೆ ಮಣೆ ಹಾಕಿತ್ತು.ಆದರೆ, ಅಮೀರಅಲಿ ಈ ಅವಧಿಯ 30ತಿಂಗಳು ಬೆಳಿಗ್ಗೆ 8ರಿಂದ ಸಂಜೆ 5ರವೆಗೆ ಕೆಲಸ ಮಾಡುತ್ತಾ ಅದರೊಳಗಡೆಯೇ ಕಾಮರ್ಿಕರ ಸಮಸ್ಯೆಗಳನ್ನು ಬಗೆಹರಿಸುತ್ತಾ ಬರುತ್ತಿದ್ದಾರೆ. ಕಾರಣ ಇದೇ ಮಾನದಂಡದನ್ವಯ ಅಮೀರಲಿಗೆ ಜಿ.ಎಸ್ ಸ್ಥಾನ ನೀಡಬೇಕೆಂಬುದು ಕೆಲವರ ಅಭಿಮತವಾಗಿದೆ. ಇನ್ನೊಂದೆಡೆ ಕಳೆದ ಚುನಾವಣೆಯಲ್ಲಿ ಅಮೀರಲಿಯನ್ನು ವಿರೋಧಿಸಿದ್ದ ಸ್ವಜಾತಿ ಗುಂಪೊಂದು ಇತ್ತೀಚಿಗೆ ಸಭೆ ಸೇರಿ ಶಫಿಯನ್ನು ಬೆಂಬಲಿಸದಂತೆ ತಿಮರ್ಾನ ತೆಗೆದುಕೊಂಡಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಇದರಲ್ಲಿ ಒಂದು ಸ್ಪಷ್ಟವಾಗಿ ಗಮನಸಿಬೇಕಾದದ್ದೆಂದರೆ, (ಅಮೀರಲಿ ಜಿ.ಎಸ್ ಆದರೆ ತನ್ನದೇ ಆಡಳಿತ ಶುರುಮಾಡುತ್ತಾನೆ, ಮತ್ತು ಈತ ಸಂಘಟನೆಯಲ್ಲಿ ಎಲ್ಲರನ್ನು ತುಳಿಯುತ್ತಾನೆ ಎಂಬ ಹೆದರಿಕೆಗೆ ಯಾರು ನೇರವಾಗಿ ಈತನ ಬೆಂಬಲಕ್ಕೆ ಕೆಲವೊಂದು ಬಾರಿ ಬರುವುದಿಲ್ಲ. ಇದು ಈಗಾಗಲೇ ಅಧ್ಯಕ್ಷರಿಗೆ ಗೊತ್ತಾಗಿದೆ.) ಆದರೆ, ಕಾಮರ್ಿಕರು ಮಾತ್ರ ಬಹಳ ಜಾಗರೂಕತೆಯಿಂದ ಈ ಬಾರಿ ಮತವನ್ನು ಚಲಾಯಿಸುತ್ತಾರೆ. ಯಾಕೆಂದರೆ, ಈ ಸಲ ಅಗ್ರೀಮೆಂಟ್ ಇದೆ. ತಕ್ಕಡಿಯಲ್ಲಿ ಅಮೀರಲಿ ಹಾಗೂ ಅಧ್ಯಕ್ಷರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೆರಿರುವದರಿಂದ ಅಮೀರಲಿ ಸಂಘಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಗುಮಾನಿ ಕೂಡ ಎಲ್ಲೆಡೆ ಹರಡಿದೆ!ಶಾಂತಪ್ಪ ಮಳ್ಳಿ ಅಲಿಯಾಸ್ ಸೂಪರ್ಫಾಸ್ಟ್.ಕಳೆದ ಬಾರಿ ಪ್ರಧಾನ ಕಾರ್ಯದಶರ್ಿ ಸ್ಥಾನದಿಂದ ವಂಚಿತರಾದ ಶಾಂತಪ್ಪ ಮಳ್ಳಿ ಈ ಬಾರಿ ಅನಿವಾರ್ಯವಾಗಿ ಸಂಘಟನೆ ನನಗೆ ಜಿ.ಎಸ್ ಸ್ಥಾನಕ್ಕೆ ಸ್ಪದರ್ೇ ಮಾಡಲು ಅವಕಾಶ ಮಾಡಿ ಕೊಡುತ್ತದೆ ಎಂದು ತಿಳಿದುಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೀರಅಲಿಗೆ ಎದುರಾಳಿಯಾಗಿರುವ ಎಲ್ಲ ಸದಸ್ಯರು ಮಳ್ಳಿಯ ಪರ ಬಹಿರಂಗವಾಗಿ ಕೆಲಸ ಮಾಡುತ್ತಾರೆ. ಯಾಕೆಂದರೆ ನಾಳೆ ಮಳ್ಳಿ ಜಿ.ಎಸ್ ಆದರೆ, ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎಂಬ ದುರಾಸೆ.ಆದರೆ, ಮಳ್ಳಿ ಜಿ.ಎಸ್ ಸ್ಥಾನಕ್ಕೆ ಅರ್ಹರಲ್ಲ ಎಂಬುದನ್ನು ಕೆಲವೊಬ್ಬರು ಈಗಾಗಲೇ ಕಾಮರ್ಿಕರ ಮಧ್ಯೆ ಹೇಳಿಕೊಂಡು ತಿರುಗುತ್ತಿದ್ದಾರೆ. ಮತ್ತು ಮಳ್ಳಿಗೆ ಜಿ.ಎಸ್ ಕುರಿತು ತಕ್ಕಡಿಯಲ್ಲಿಯೇ ಕೆಲವು ಸದಸ್ಯರಿಗೆ ಅಸಮಧಾನ ಮತ್ತು ಅಸಮಧಾನವಿದೆ.ಮುಂಬರುವ ಚುನಾವಣಿಯಲ್ಲಿ ಎಲ್ಲರೂ ಜಿ.ಎಸ್ ಹುದ್ದೆಗಾಗಿ ಕುಸ್ತ್ತಿ-ಮಸ್ತಿ ಮಾಡುತ್ತಿರುವುದರಿಂದ ಕಾಮರ್ಿಕರ ಮಧ್ಯೆ ಸಮಾನವಾಗಿರಬೇಕಾದ ತಕ್ಕಡಿ ಮೂರು ತುಕ್ಕಡಿಯಾಗಿ ಹೋಗಿದೆ. ಈ ಪರಿಸ್ಥಿತಿಯನ್ನು ವಾಲೇಬಾಬು ಅಗಲಿ ಅಥವಾ ಇನ್ನುಳಿದ ಬೇರೆ ಸಂಘಟನೆಯವರಾಗಲಿ ಬಳಸಿಕೊಂಡು ಮೊದಲಿನ ಪರಿಸ್ಥಿತಿ ನಿಮರ್ಾಣ ಮಾಡಿದರೆ, ಆಶ್ಚರ್ಯಪಡಬೇಕಾಗಿಲ್ಲ!
ಸತ್ಯ. ಆಗಸ್ಟ 15 2010

ಶಿವಪುತ್ರ ಭೇರಿ ನೆನಪು ಮಾತ್ರಹುಲ್ಲಾಗು


ಶಿವಪುತ್ರ ಭೇರಿ ನೆನಪು ಮಾತ್ರಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗುಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿವೇಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ,ಎಲ್ಲರೊಳಗೊಂದಾಗು ನೀ ಮಂಕು ತಿಮ್ಮ ಡಿ.ವಿ.ಜಿಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವ ತಾತ್ವಿಕ ಮತ್ತು ತಾಕರ್ಿಕ ಸತ್ಯ ಮಿಥ್ಯೆಗಳ ಮಧ್ಯೆ ಕೆಲ ಸಾವುಗಳು ಸಾಮಾಜಿಕ ಹೋರಾಟ ಮತ್ತು ಕ್ಷೇತ್ರಕ್ಕೆ ಆಘಾತವನ್ನು ನೀಡುತ್ತವೆ. 09 ಜೂನ್ 2010ರಂದು ನಿಧನರಾದ ಶಿವಪುತ್ರಪ್ಪ ಭೇರಿಯವರ ಆಕಸ್ಮಿಕ ನಿಧನದಿಂದಾಗಿ ರಾಯಚೂರು ಜಿಲ್ಲೆಯ ಒಬ್ಬ ವಿಚಾರವಾದಿ, ಎಡಪಂಥೀಯ ಹೋರಾಟಗಾರ, ಸಮನ್ವಯ ಸಾಹಿತ್ಯದ ಚಿಂತಕ, ಖ್ಯಾತ ಹೋರಾಟಗಾರ, ಪ್ರಗತಿಪರ ಚಿಂತಕನನ್ನು ಕಳೆದುಕೊಂಡಂತಾಗಿದೆ.ಐವತ್ತೆಂಟರ ಹೊಸ್ತಿಲಿನಲ್ಲಿ ಕಾಲಿರಿಸಿದ್ದ ಶಿವಪುತ್ರಪ್ಪ ಭೇರಿ ಸಕರ್ಾರಿ ಹುದ್ದೆಯಲ್ಲಿದ್ದರೂ ಇತರರಿಗಿಂತ ತೀರಾ ಭಿನ್ನ. ಸಾಮಾನ್ಯವಾಗಿ ಸಕರ್ಾರಿ ನೌಕರರು ತಮ್ಮ ಕಛೇರಿಯ ಕಾಯರ್ಾವಧಿಯ ಹೆಚ್ಚಿನ ಸಮಯವನ್ನು ವೇತನ ತುಟ್ಟಿಭತ್ಯೆ, ಪ್ರವಾಸಭತ್ಯೆಯ ಲೆಕ್ಕಚಾರದಲ್ಲಿ ತೊಡಗುತ್ತಾರೆ. ಯಾವುದೋ ಆಯೋಗದ ಶಿಫಾರಸ್ಸಿನ ಮೇರೆಗೆ ವೇತನ ಪರಿಷ್ಕರಣೆಯಾದಾಗ ಪ್ರತಿಯೊಬ್ಬ ಸಕರ್ಾರಿ ಹಾಗೂ ಅನುದಾನಿತ ಸಂಸ್ಥೆಗಳ ಉದ್ಯೋಗಿಗಳು ವೈಯಕ್ತಿಕ ಲಾಭದ ಗರಿಷ್ಠ ಪ್ರಯೋಜನ ಕುರಿತು ದಿನವಿಡೀ ಚಚರ್ಿಸುವ ಸಂದರ್ಭ ಸಾಮಾನ್ಯ. ಆದರೆ, ಈ ನೀತಿ ಸಕಲ ಸಕರ್ಾರಿ ನೌಕರರಿಗೆ ಅನ್ವಯವಾಗುವುದಿಲ್ಲ. ಕರ್ತವ್ಯಪರ, ನ್ಯಾಯನಿಷ್ಠುರ, ಕಾಯಕ ಪ್ರಜ್ಞೆ, ಪ್ರಾಮಾಣೆಕತೆಯನ್ನೇ ಮೈಗೂಡಿಸಿಕೊಂಡಿರುವ ಸಕರ್ಾರಿ ನೌಕರರು ತಮ್ಮ ಸಂಬಳದ ಪ್ರಮಾಣಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸುವ ಮುಖಾಂತರ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕಂದಾಯ ಇಲಾಖೆಯ ಮುಖಾಂತರ ಸಕರ್ಾರಿ ನೌಕರಿಗೆ ಸೇರಿದ ಶಿವಪುತ್ರಪ್ಪ ಭೇರಿ, ನೌಕರರ ನೈಜಹಕ್ಕುಗಳನ್ನು ದೊರಕಿಸಿ ಕೊಡುವಲ್ಲಿ ಸಕಲರ ನೀರಿಕ್ಷೆಗಳನ್ನು ಮೀರಿ ಹೋರಾಟಗಳನ್ನು ರೂಪಿಸುತ್ತಿದ್ದರು. ಸಾಮಾನ್ಯವಾಗಿ ಸಕರ್ಾರಿ ನೌಕರರು ಜನಪರ ಹೋರಾಟಗಳನ್ನು ಕೈಗೊಂಡಾಗ ಸಕರ್ಾರದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸಕರ್ಾರದ ಕೆಂಗಣ್ಣಿನೊಂದಿಗೆ ಮೇಲಾಧಿಕಾರಿಗಳ ದೈನಂದಿನ ಕಿರಿಕಿರಿಗಳನ್ನು ಅನುಭವಿಸುವುದು ಅನಿವಾರ್ಯ.ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಂಘದ ನಾಯಕ ತಾಳ್ಮೆ ಕಳೆದುಕೊಳ್ಳುವುದು ಸಾಮಾನ್ಯ ಮತ್ತು ಸ್ವಾಭಾವಿಕ. ಆದರೆ, ಎಂತಹದೇ ವೈಫರಿತ್ಯಗಳು ನೌಕರರಲ್ಲಿ ಸಂಭವಿಸಿದಾಗ ತಮ್ಮ ಸಂಯಮವನ್ನು ಕಳೆದುಕೊಳ್ಳದೇ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯನ್ನು ಹತ್ತು ವರ್ಷಗಳವರೆಗೆ ಮುಂದುವರೆಸಿದರು. ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯ 3ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡವರು. ಭೇರಿಯವರ ಸಂಘಟನಾ ಸಾಮಥ್ರ್ಯದ ಪ್ರತೀಕವೆಂದೇ ಪರಿಗಣಿಸಬೇಕು.ರಾಯಚೂರು ಜಿಲ್ಲೆಯ ದಲಿತ ಪರಿವಾರದ ರಾಮಣ್ಣ ಹನುಮಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಶಿವಪುತ್ರಪ್ಪ ಭೇರಿ, ತಮ್ಮ ಪ್ರೌಢ ಶಿಕ್ಷಣವನ್ನು ನಗರದ ಸಕರ್ಾರಿ ಬಾಲಕರ ಪ್ರೌಢಶಾಲೆಯಲ್ಲಿ ಪೂರೈಸಿದವರು. ನಿರಂತರ ಅಧ್ಯಯನ ಶೀಲತೆಯ ಪ್ರಭಾವದಿಂದಾಗಿ ಶಿವಪುತ್ರಪ್ಪನವರು ಶಾಲೆಯಲ್ಲಿಗಿಂತ ಸಮಾಜದಲ್ಲೇ ಕಲಿತ್ದೇ ಹೆಚ್ಚು. ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತಗೊಳ್ಳದೇ ಪರಿವರ್ತನಾಶೀಲ ಸಾಮಾಜಿಕ ವೇದನೆಗಳಿಗೆ ನಿರಂತರ ಸ್ಪಂದಿಸುವದರ ಮುಖಾಂತರ ಹೋರಾಟಮಯ ಬದುಕಿನ ಮುಂಚೂಣಿ ನಾಯಕನಾಗಿ ರೊಪಗೊಂಡವರು. ರಾಯಚೂರು ಜಿಲ್ಲೆಯ ಬಂಡಾಯ ಸಾಹಿತ್ಯ, ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಳ್ಳುವದರ ಜೊತೆಗೆ ಬಂಡಾಯದ ಗೆಳೆಯರಾದ ಬಾಬು ಬಂಡಾರಿಗಲ್, ಸಮುದಾಯದ ಗೆಳೆಯರಾದ ಕರಿಯಪ್ಪ ಮಾಸ್ತಾರ್ ಮತ್ತು ಅನೇಕ ಜಿಲ್ಲೆಯ ಸಾಹಿತಿಗಳೊಂದಿಗೆ ವೈಚಾರಿಕತೆಯ ಚಚರ್ೆಗಳನ್ನು ಮಾಡುತ್ತಿದ್ದರು. ತಮ್ಮ 58ರ ಸಾರ್ಥಕ ಬದುಕಿನ ಏರಿಳಿತಗಳಲ್ಲಿ ಎದುರಾದ ನೋವು-ಸಂಕಟಗಳಿಗೆ ಮುಖಾಮುಖಿಯಾಗುವದರ ಮುಖಾಂತರ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡವರು. ದಲಿತ ಬಂಡಾಯ, ಸಮತಾವಾದ, ಮಾಕ್ಸರ್ಿಸಂ, ಲೆನಿನ್ಸಂ ಮುಂತಾದ ಹೋರಾಟಗಾರರ ಬದುಕಿನ ಮೌಲ್ಯಗಳನ್ನು ತನ್ನಂತರಂಗದಲ್ಲಿ ರೂಡಿಸಿಕೊಂಡವರು. ಸಮಾಜದ ಸಾಮಾಜಿಕ ವಿಜ್ಞಾನಿಯಾಗಿ ವೈಚಾರಿಕ ಬದುಕಿನ ಚಲನೆಶೀಲತೆಯನ್ನು ಮೈಗೂಡಿಸಿಕೊಂಡವರು.ನೆರೆರಾಜ್ಯ ಆಂದ್ರಪ್ರದೇಶದ ಮಾದರಿಯಲ್ಲಿ ಮಾದಿಗರ ಮೀಸಲಾತಿ ಹೋರಾಟ ಸಮಿತಿಯನ್ನು ಸಂಘಟಿಸುವದರ ಮುಖಾಂತರ ಬೆಂದವರ ಬದುಕಿಗೆ ನೋವು ನಿವಾರಣೆಯ ಮಲಾಮ್ನ್ನು ಸವರಿದವರು. ಯಾವುದೇ ಸಂದರ್ಭದಲ್ಲಿ ಎದೆಗುಂದದೆ, ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸದೇ ಶಿವಪುತ್ರಪ್ಪ ಭೇರಿ ಜನಪರ ಹೋರಾಟಗಳಿಗೆ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದರು. ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಂಘಟಿಸುವ ಹಲವಾರು ಹೋರಾಟಗಳಿಗೆ ಏಕಪಕ್ಷೀಯ ನಿಧರ್ಾರ ತೆಗೆದುಕೊಳ್ಳದೇ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಗೆ ಅನುಗುಣವಾಗಿ ಸಂಗಾತಿಗಳೊಂದಿಗೆ ಮುಕ್ತವಾಗಿ ಚಚರ್ಿಸಿ ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೋಡಿಕರಿಸುವ ಮೂಲಕ ಹೋರಾಟಗಳಲ್ಲಿ ಹೋರಾಟಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಸ್ವರೂಪವನ್ನು ಕಣ್ಣಾರೆ ಕಂಡ ರಾಜ್ಯ ಸಮಿತಿಯ ಪಧಾದಿಕಾರಿಗಳು ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಸಕರ್ಾರಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಹಿಂದೆ ಒಂದು ಸಕರ್ಾರ ಜಾಣ ಕುರುಡತನವನ್ನು ಪ್ರದಶರ್ಿಸಿದಾಗ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಪಧಾಧಿಕಾರಿಗಳು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ನಿಧರ್ಾರ ಕೈಗೊಂಡರು. ಅಂದಿನ ಹೋರಾಟದಲ್ಲಿ ಶಿವಪುತ್ರಪ್ಪ ಭೇರಿಯವರ ಕೆಚ್ಚೆದೆಯ ಪಾತ್ರ ಪ್ರಮುಖವಾಗಿತ್ತು. ಇದು ರಾಜ್ಯ ನಾಯಕರ ಮೆಚ್ಚುಗೆಗೂ ಪಾತ್ರವಾಯಿತು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಶೈಲಿ ರಾಜ್ಯದ ಇತರ ಜಿಲ್ಲೆಗಳಿಗೂ ಶ್ರೇಷ್ಠ ಮಾದರಿಯಾಗಿತ್ತು. ಕೆಲವೊಂದು ಸಂದರ್ಭಗಳಲ್ಲಿ ರಾಜ್ಯ ಮಟ್ಟದ ನಾಯಕರು ಭೇರಿಯವರ ಸಲಹೆ ಸೂಚನೆಗಳನ್ನು ಪಡೆದು ಹೋರಾಟದ ಯೋಜನೆಗಳನ್ನು ರೂಪಿಸುತ್ತಿದ್ದರು ಎನ್ನುವುದು ಆಶ್ಚರ್ಯವಾದರೂ ಸತ್ಯ ಸಂಗತಿ. ತಮ್ಮ ಹೋರಾಟದ ಮನೋಭಾವದಿಂದಾಗಿ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲೆಯ ಸಂಘಟನೆಯ ಗೌರವವನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸುವುದು ಜಿಲ್ಲೆಯ ಜನಪರ ಚಳುವಳಿಯ ಚರಿತ್ರೆಯ ಹೆಗ್ಗಳಿಕೆ. ಶಿವಪುತ್ರಪ್ಪ ಭೇರಿಯವರು ಜಿಲ್ಲಾ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡದ್ದು ಚರಿತ್ರೆಯ ಒಂದು ಪರ್ವಕಾಲ. ಪಿವಿ ನರಸಿಂಹರಾವ್ ಪ್ರಧಾನಮಂತ್ರಿಯಾಗಿ ಆಡಳಿತ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವರು ಮತ್ತು ಇಂದಿನ ಪ್ರಧಾನಿಯಾಗಿರುವ ಡಾ. ಮನಮೋಹನ್ಸಿಂಗ್ರು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದರು. ಇದೇ ಸಂದರ್ಭದಲ್ಲಿ ಆಥರ್ಿಕ ಪ್ರಗತಿಯ ಧೋರಣೆಗೆ ಅನುಗುಣವಾಗಿ ಎಲ್.ಪಿ.ಜಿ ಜಾರಿಗೆ ಬಂದಿತು. ಎಲ್.ಪಿ.ಜಿಯ ನೆಪದಲ್ಲಿ ತೃತೀಯ ಹಾಗೂ ಅಭಿವೃದ್ದಿ ಶೀಲ ರಾಷ್ಟ್ರಗಳ ಕುತಂತ್ರಗಳಿಗೆ ಬಲಿಯಾಗಬೇಕಾಯಿತು. ಇವೆಲ್ಲವುಗಳ ಪ್ರಭಾವ ನೇರವಾಗಿ ಸಕರ್ಾರಿ ನೌಕರರ ಮೇಲೆ ಕಂಡು ಬಂತು. ನೌಕರಿ ಮಾಡುತ್ತೇವೆ ಎನ್ನುವವರಿಗೆ ಕಡ್ಡಾಯದ ರಜೆ ನಿಯಮ ಜಾರಿಗೆ ಬಂದಿತು. ಇಂತಹ ಕ್ಲಿಷ್ಠ ಪರಿಸ್ಥಿತಿಯಲ್ಲಿ ಮೂಕಪ್ರೇಕ್ಷಕನಾಗದ ಭೇರಿ ಜನಾಭಿಪ್ರಾಯವನ್ನು ರೂಪಿಸುವದರ ಮುಖಾಂತರ ಹಲವಾರು ಹೋರಾಟಗಳಿಗೆ ಸೈದ್ದಾಂತಿಕ ನೆಲೆಗಟ್ಟನ್ನು ರೂಪಿಸಿದರು. ಹಂತಹಂತವಾಗಿ ರಾಯಚೂರು ಜಿಲ್ಲೆಯ ಒಬ್ಬ ಚಿಂತಕನಾಗಿ ಸೂಫಿ ಸಾಹಿತ್ಯದ ಪ್ರತಿಪಾಧಕನಾಗಿ, ಧೀಮಂತ ಹೋರಾಟಗಾರನಾಗಿ ಶೋಷಿತ ದಲಿತರ ಬದುಕಿನ ಹೊಸ ಭರವಸೆಗಳ ಸಂಘಟನೆಯ ನೇತಾರನಾಗಿ ಇನ್ನೂ ಎತ್ತೆರೆತ್ತರಕ್ಕೆ ಬೆಳೆಯಬಲ್ಲ, ಸಕಲರ ನಿರೀಕ್ಷೆಗಳನ್ನು ಪೂರೈಸಬಲ್ಲ ಶಿವಪುತ್ರಪ್ಪ ಭೇರಿಯವರ ಕೌಟುಂಬಿಕ ಬದುಕಿನ ಒಂದು ಅನಿರೀಕ್ಷಿತ ಶಾಕ್ ಅವರಿಗೆ ಹೆಚ್ಚಿನ ಆಘಾತವನ್ನು ನೀಡಿತು. ಭವಿಷ್ಯದಲ್ಲಿ ಕುಟುಂಬದವರ ಕನಸುಗಳನ್ನೆಲ್ಲ ಸಾಕಾರಗೊಳಿಸ ಬೇಕಾಗಿದ್ದ, ಜೀವನದ ಸಂಧ್ಯಾಕಾಲದಲ್ಲಿ ಊರುಗೋಲು ಆಗಬೇಕಾಗಿದ್ದ ಮಗ ಅಪಘಾತದಲ್ಲಿ ತೀರಿಕೊಂಡಾಗ ಭೇರಿ ಅಂತಮರ್ುಖಿಯಾದರು. ಬದುಕಿನ ವೈರುಧ್ಯಗಳಿಗೆ ಸಾಂತ್ವಾನ ನೀಡುವ ಸೂಫಿ ಸಾಹಿತ್ಯದ ಅಂತರಂಗದ ಮೌಲ್ಯಗಳಲ್ಲಿ ಹೊಸ ಬೆಳಕನ್ನು ಕಂಡುಕೊಂಡರು. ಹೊಸ ಬೆಳಕಿನ ಹುಡುಕಾಟದಲ್ಲಿ ಸಮಗ್ರವಾಗಿ ಅಪರ್ಿಸಿಕೊಂಡಿದ್ದ ಶಿವಪುತ್ರ ಭೇರಿಯ ಆಕಸ್ಮಿಕ ಸಾವು ನೈಜಜನಪರ ಹೋರಾಟಗಳಿಗೆ ಮತ್ತು ಹೋರಾಟಗಾರರಿಗೆ ಆದ ಬಹುದೊಡ್ಡ ನಷ್ಟವಾಗಿದೆ.ಅಭೌತಿಕ ಸಂಸ್ಕೃತಿಯಿಂದ ಭೌತಿಕ ಸಂಸ್ಕೃತಿಯ ಆಸೆ-ಆಮಿಷಗಳಿಗೆ ಬಲಿಯಾಗಿ ಪ್ರತಿಯೊಬ್ಬರು ಹಣದ ದಾಹಕ್ಕಾಗಿ ತಮ್ಮನ್ನು ತಾವೇ ಮಾರಾಟದ ವಸ್ತುಗಳನ್ನಾಗಿ ರೂಪಿಸಿಕೊಳ್ಳುತ್ತಿರುವ ಸಂಕಷ್ಟ ಪರಿಸ್ಥಿತಿಯಲ್ಲಿ ಶಿವಪುತ್ರಪ್ಪ ಭೇರಿಯವರಂತಹ ನಾಯಕರು ಮೇಲಿಂದ ಮೇಲೆ ಕೇವಲ ನೆನಪು ಮಾತ್ರ ಆಗದೇ ಅನಿವಾರ್ಯವೂ ಆಗುತ್ತಾರೆ. ಶಿವಪುತ್ರಪ್ಪ ಭೇರಿಯವರ ನಿಧನದಿಂದ ರಾಯಚೂರು ಜಿಲ್ಲೆಯ ಹೋರಾಟದ ಒಂದು ಯುಗ ಅಂತ್ಯಗೊಂಡಿದೆ ಎನ್ನುವುದು ಜಿಲ್ಲೆಯ ಪ್ರತಿಯೊಬ್ಬ ಚಿಂತನಶೀಲರ ಮನದಾಳದಲ್ಲಿ ಕಂಡು ಬರುವ ಸಾಮಾನ್ಯ ಸಂಗತಿ. ಸಾವು ಎಲ್ಲರಿಗೂ ಬರುತ್ತದೆ. ಆದರೆ, ಎಷ್ಟು ಜನ ಸಾವಿಗಿಂತ ಮುಂಚಿನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ. ಸಾರ್ಥಕತೆಯನ್ನೇ ಬದುಕಿನ ಮೌಲ್ಯವಾಗಿಸಿಕೊಂಡಿದ್ದ ಶಿವಪುತ್ರಪ್ಪ ಭೇರಿ ಭೌತಿಕ ಲೋಕದಿಂದ ಕಣ್ಮರೆಯಾದರೂ ಅವರ ಅಭಿಮಾನ ಬಳಗದ ಮನದಾಳದಲ್ಲಿ ಮಾತ್ರ ಶಾಶ್ವತವಾಗಿ ನೆಲೆಸಿದ್ದಾರೆ.
ಅಯ್ಯಪ್ಪ ತುಕ್ಕಾಯಿ

ಬಳ್ಳಾರಿ ಜನಾರ್ದನರೆಡ್ಡಿ ಪಾಟರ್ಿ (ಬಿ.ಜೆ.ಪಿ)


ಬಳ್ಳಾರಿ ಜನಾರ್ದನರೆಡ್ಡಿ ಪಾಟರ್ಿ (ಬಿ.ಜೆ.ಪಿ)ರೆಡ್ಡಿಗಳ ಪಂಥಾಹ್ವಾನವನ್ನು ಸ್ವೀಕರಿಸಿ ಕಾಂಗ್ರೇಸ್ನವರು ಬಳ್ಳಾರಿಗೆ ಹೋಗುತ್ತಿರುವುದು,ಅದಿರು ರಪ್ತು ನಿಷೇದ,ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವುದು,ಶ್ರೀರಾಮುಲು ತನ್ನ ಬಳ್ಳಾರಿಗೆ ದೃಷ್ಟಿಯಾಗಬಾರದೆಂಬ ಕಾರಣಕ್ಕೆ ಪದೇ ಪದೇ ಬರುವ ತಲೆ ಕೂದಲನ್ನು ಬೊಳಿಸಿಕೊಂಡಿರುವುದು,ತಾಸಿನಿಂದ ತಾಸಿಗೆ ಉಲ್ಟಾಹೊಡೆಯುವ ಬ್ರಾಂಡಿ ಮಂತ್ರಿ ಬ್ರಾಂಡ್ನ ಶಾಸಕರು,ಇದೆಲ್ಲವನ್ನು ಮನರಂಜನೆಯಾಗಿ ಜನಸಾಮಾನ್ಯರಿಗೆ ಉಣಬಡಿಸುತ್ತಿರುವ ಮಾಧ್ಯಮಗಳು,ಒಟ್ಟಾರೆ ಈ ಎಲ್ಲಾ ಬೆಳವಣೆಗೆಗಳನ್ನು ಕನರ್ಾಟಕ ರಾಜ್ಯ ಎಂದೆಂದೂ ಕಂಡಿದ್ದಿಲ್ಲ.!ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅನಿವಾರ್ಯವಾಗಿ ಕಾಣಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವಾಸ್ತವಿಕ ನೆಲಗಟ್ಟಿನ ಮೇಲೆ ಪ್ರಸ್ತುತ ವಿಧ್ಯಮಾನಗಳತ್ತ ಒಂದು ಝಲಕ್..!ಎಲ್ಲಾ ರೀತಿಯ ಜನವಿರೋಧಿ ನೀತಿಗಳನ್ನು ಕಟಿಬದ್ದವಾಗಿ ಜಾರಿಗೆ ತರುವಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದರಿಂದ ದೇವೆಗೌಡರ ಜೆ.ಡಿ.ಎಸ್ ಪಕ್ಷವು ಹೊರತಾಗಿಲ್ಲ. ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಗಳು ಜಾತ್ಯಾತೀತ ವಿಚಾರಗಳನ್ನು ಹೇಳಿಕೊಂಡು ತಮ್ಮ ಆಚರಣೆಯಲ್ಲಿ ಅದೇ ಜಾತಿಯತೆಯನ್ನೇ ಮಾಡುತ್ತವೆ. ಆದರೆ, ಬಿಜೆಪಿಗಳಿಗೆ ಜಾತಿಯತೇ ಎನ್ನುವುದೇ ಒಂದು ಬಹಿರಂಗ ಅಜೆಂಡಾ. ಕೋಮು-ಜ್ವಾಲೆ-ದಳ್ಳುರಿಗಳನ್ನು ಹುಟ್ಟುಹಾಕುವ ಇತಿಹಾಸ ಬಿಜೆಪಿಗಳಿಗೆ ಇದ್ರೆ, ಅವೆಲ್ಲವುಗಳಿಗೆ ನೀರು ಗೊಬ್ಬರ ಹಾಕಿ ಬೆಳಿಸುವ ಕೀತರ್ಿ ಜೆ.ಡಿ.ಎಸ್ ಕಾಂಗ್ರೇಸ್ಗಳಿಗಿದೆ.ಅಂದ ಮೇಲೆ ಇವರ್ಯಾರು ಸಾಚಾಗಳಲ್ಲ, ಸಮಾಜದ ಉದ್ದಾರಕರಲ್ಲ ಎಂಬುದು ಜನರಿಗೆ ಗೊತ್ತು. ಆದ್ಯಾಗ್ಯೂ ಜನತೆಗೆ ಚುನಾವಣೆಯಲ್ಲಿ ಅನಿವಾರ್ಯತೆ ಇರುವದರಿಂದ ಈ ಎಲ್ಲರನ್ನು ಅವಲಂಭಿಸಿದ್ದಾರೆ. (ಚುನಾವಣೆಯ ಸಂದರ್ಭದಲ್ಲಿ ಹಣ, ಹೆಂಡಕ್ಕಾಗಿ ಮತಗಳನ್ನು ಮಾರಿಕೊಳ್ಳುವುದು ಸೇರಿದಂತೆ ಮುಂತಾದವುಗಳು)ಚೆಡ್ಡಿಗಳ ರಾಜಕೀಯ ಪಕ್ಷ ರೆಡ್ಡಿಗಳ ಪಾಟರ್ಿಯಾದದ್ದು ಹೀಗೆ...!ಬಿಜೆಪಿಯೂ ಸಕರ್ಾರವನ್ನು ರಚಿಸಲು ಪೂರ್ಣಪ್ರಮಾಣದ ಬಹುಮತವನ್ನು ಪಡೆಯದೇ ಹೋದಾಗ ಬಳ್ಳಾರಿಯ ರೆಡ್ಡಿಗಳು ಹಡಬೆ ದುಡ್ಡಲ್ಲಿ ಆಪರೇಷನ್ ಕಮಲ ಎಂಬ ಹೆಸರಿನಡಿ ಬೇರೆ ಪಕ್ಷಗಳ ಶಾಸಕರನ್ನು ಕೊಂಡುಕೊಂಡರು. ನಂತರ ಅವ್ರುಗಳಿಗೆ ಉಪ ಚುನಾವಣೆಯಲ್ಲಿ ಗೆಲ್ಲಲು ಕೋಟಿಗಟ್ಟಲೇ ಹಣವನ್ನು ನೀಡಿ ಕೊನೆಗೆ ಅವರು ಗೆಲ್ಲುವಂತೆಯೂ ನೋಡಿಕೊಂಡರು. ಅದೊಂದು ಸುವರ್ಣ ಸಮಯ ಬಿಜೆಪಿಯ ಎಲ್ಲಾ ಮುಖಂಡರಿಗೆ ಹರ್ಷವನ್ನು ತಂದುಕೊಟ್ಟಿತ್ತು.! ಯಾಕೆಂದರೆ, ಯಾವುದೇ ತತ್ವ-ಸಿದ್ದಾಂತಗಳಿಂದ ಬಂದಿರದ ರೆಡ್ಡಿಗಳು ಏಕಾಏಕಿ ಬೀಳುತ್ತಿರುವ ಸಕರ್ಾರವನ್ನು ಅಷ್ಟೊಂದು ಸಲೀಸಾಗಿ ಉಳಿಸಿದ್ದಾರೆಂದರೆ ಮಾಮೂಲಿಯಲ್ಲ ಎಂದು ತಿಳಿದ ಕೇಂದ್ರ ನಾಯಕರಿಗೆ ಅಚ್ಚರಿಯಾಯಿತು..!ಆಗಲೇ ರೆಡ್ಡಿಗಳು ಕನರ್ಾಟಕದಲ್ಲಿದ್ದ ಭಾರತೀಯ ಜನತಾ ಪಾಟರ್ಿಯನ್ನು ಬಳ್ಳಾರಿ ಜನಾರ್ಧನರೆಡ್ಡಿ ಪಾಟರ್ಿ ಎಂದು ಬಿಜೆಪಿಗೆ ಮರುನಾಮಕರಣ ಮಾಡಿಕೊಂಡರು. ಕ್ರಮೇಣ ಸಕರ್ಾರವೆಂದರೆ ನಾವು ನಾವಂದರೆ ಸಕರ್ಾರ ಎಂಬ ಅಹಂ ರೆಡ್ಡಿಗಳಿಗೆ ಬಂದು ಬೀಗತೊಡಗಿದರು. ಹಡಬೆ ದುಡ್ಡಿಗೆ ಹರಾಜಾಗಿದ್ದ ಶಾಸಕರೆಲ್ಲ ಇವರ ಬೆಂಗಾವಲಿಗೆ ನಿಂತರು. ನಂತರ ಆಡಳಿತದಲ್ಲಿ ಯಾವುದೇ ತೊಂದರೆಯಾಗದಂತೆ ತಮಗೆ ಬೇಕಾದ ಡಿಸಿ, ಎಸ್ಪಿಗಳನ್ನು ಹಾಕಿಸಿಕೊಂಡರು. ಅದರಂತೆ ಸಕರ್ಾರದಲ್ಲಿ ತಮಗೆ ಬೇಡವಾದ ಅಧಿಕಾರಿಗಳನ್ನು ವರ್ಗ ಮಾಡಿಸ ತೊಡಗಿದರು. ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡುವಂತೆ ಪಕ್ಷದ ಹಿರಿಯ ಮುಖಂಡರ ಮೇಲೆ ಒತ್ತಡವನ್ನು ಹಾಕಿ ಯಶಸ್ವಿಯಾದರು. ಇನ್ನೂ ವಿರೋಧಪಕ್ಷವಾದ ಕಾಂಗ್ರೇಸ್ ಹಾಗೂ ಜೆ.ಡಿ.ಎಸ್ ಪಕ್ಷಗಳನ್ನು ಒಂದೇ ಸಮನೆ ತೆಗಳುತ್ತಾ, ಸೇಡಿನ ರಾಜಕಾರಣ ಮಾಡುತ್ತ ಬಂದರು. ವೈ.ಎಸ್.ಆರ್ ಮಗನೊಂದಿಗೆ ಕೋಟಿಗಟ್ಟಲೇ ಬಜೆಟ್ನೊಂದಿಗೆ ಬ್ರಾಹ್ನೀಣಿ ಸ್ಟೀಲ್ ಕೈಗಾರಿಕೆಯೊಂದನ್ನು ಆರಂಭಿಸಲು ಯೋಜನೆಯೊಂದನ್ನು ಹಾಕಿದರು. ಅದಕ್ಕೆ ಪೂರಕವಾಗಿ ಮಂದಿಯ ಕೂದಲಿನ ದೇವರಾದ ತಿರುಪತಿ ತಿಮ್ಮಪ್ಪನಿಗೆ ವಜ್ರಭರಿತ ಕೀರಿಟವೊಂದನ್ನು ನೀಡಿದರು. ಹೀಗೆ ರೆಡ್ಡಿಗಳ ದರ್ಪ ಜಾಸ್ತಿಯಾಗುತ್ತಾ ಸಾಗಿದಂತೆ ಅವರಿಗೆ ಗಾಡಫಾದರ್ ಆಗಿದ್ದ ಆಗಿನ ಮುಖ್ಯಮಂತ್ರಿ ವೈ.ಎಸ್.ಆರ್ ರಾಜಶೇಖರ ರೆಡ್ಡಿ ಹೆಲಿಕ್ಯಾಪ್ಟರ್ ಪತನದಲ್ಲಿ ಸಾವನ್ನಪ್ಪಿದರು. ಅಲ್ಲಿಂದಲೇ ರೆಡ್ಡಿಗಳಿಗೆ ತಮ್ಮ ಅಂತ್ಯದ ಮುನ್ಸೂಚನೆಗಳು ಬರತೊಡಗಿದವು.ಇವರ ಈ ಎಲ್ಲಾ ದುರಾಡಳಿತವನ್ನು ದಿನನಿತ್ಯ ಕಾಣುತ್ತಿದ್ದ ವಿರೋಧಪಕ್ಷಗಳಿಗೆ ಹೊಟ್ಟೆಯಲ್ಲಿ ಮೆಣಸಿನಕಾರ ಕಲಸಿದಂತಾಗುತ್ತಿತ್ತು. ಆದರೂ ಕೂಡ ಅದನ್ನೆಲ್ಲ ಸಹಿಸಿಕೊಂಡು ಕಾಂಗ್ರೇಸ್ ಮತ್ತು ಜೆ.ಡಿ.ಎಸ್ನವರು ಸಮಯಕ್ಕಾಗಿ ಕಾದು ಕುಳಿತಿದ್ದರು. (ಬಿಜೆಪಿಯ ವಿರುದ್ದ ಸಮರಕ್ಕೆ ಬೀದರನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲು ಕುಮಾರಸ್ವಾಮಿ ಆಗಸ್ಟ್ ತಿಂಗಳಿನಲ್ಲಿ ದಿನಾಂಕವನ್ನು ನಿಗದಿ ಮಾಡಿದ್ದರು.)ಆದರೆ,ಮೊನ್ನೆ ಸದನದಲ್ಲಿ ಬಿಜೆಪಿ ಕೆಲವು ಎಂ.ಎಲ್.ಎಗಳು ತಾಕತ್ತಿದ್ರೆ, ನೀವು ಬಳ್ಳಾರಿಗೆ ಬರ್ರೀ.. ನಿಮ್ಮನ್ನು ನೋಡಿಕೊಳ್ಳುತ್ತೀವಿ ಎಂದು ಸಿದ್ರಾಮಯ್ಯನ ಪಡೆಗೆ ಸವಾಲು ಹಾಕಿದಾಗ, ಅವಕಾಶಕ್ಕಾಗಿ ಕಾದು ಕೂತಿದ್ದ (ಬಿಸಿಯಿದ್ದಾಗಲೇ ಕಬ್ಬಿಣವನ್ನು ಬಡಿದರೆ, ಬಗ್ಗುತ್ತದೆ ಎಂಬಂತೆ) ಕಾಂಗ್ರೇಸ್ನವರು ಒಳಗೊಳಗೆ ಸಭೆಗಳನ್ನು ಮಾಡಿ, ಹೈಕಮಾಂಡ್ನಿಂದ ಅನುಮತಿಯನ್ನು ಪಡೆದು ಬಳ್ಳಾರಿಗೆ ಪಾದಯಾತ್ರೆ ಮಾಡುವ ಕಾರ್ಯಕ್ರಮವನ್ನು ರೂಪಿಸಿಯೇ ಬಿಟ್ಟರು. ಕೋಮಾ ಸ್ಥಿತಿಯಲ್ಲಿದ್ದ ಕಾಂಗ್ರೇಸ್ಗೆ ಇದೊಂದು ಪಾದಯಾತ್ರೆಯೂ ಸ್ವಲ್ಪ ಆಸರೆಯಾಯಿತು. ರೆಡ್ಡಿಗಳು ಸಿದ್ದರಾಮ್ಯನನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಸವಾಲು ಹಾಕಿದ್ದರೆ, ಇದಕ್ಕೆ ಇಷ್ಟೊಂದು ಮಹತ್ವ ಬರುತ್ತಿರಲಿಲ್ಲವೇನೋ? ಯಾಕೆಂದರೆ ಸಿದ್ದರಾಮಯ್ಯ ಈಗ ಅನುಭವಿ ರಾಜಕಾರಣಿ ಮತ್ತು ರಾಜಕೀಯ ಮುತ್ಸದ್ಧಿ ದೇವೆಗೌಡರನ್ನೇ ಎದುರು ಹಾಕಿಕೊಂಡು ಚಳುವಳಿಗಳನ್ನು ಕಟ್ಟಿದ ಒಚಿ ಟಜಚಿಜಜಡಿ ಇದರ ಜೊತೆಯಲ್ಲಿ ಸಿದ್ದರಾಮಯ್ಯನಿಗೆ ಹೇಳಿಕೊಳ್ಳುವಷ್ಟು ಜನ ಬೆಂಬಲವಿದೆ. ಅದರಂತೆ ಎಲ್ಲ ಕುರುಬರ ಪಾಲಿಗೆ ಪರಮೋಚ್ಛ ನಾಯಕ ಸಿದ್ದರಾಮಯ್ಯ. (ಇಲ್ಲಿ ಈಶ್ವರಪ್ಪ, ಬಂಡೆಪ್ಪ ಕಾಶೆಂಪೂರನನ್ನು ಕುರುಬರು ತಮ್ಮ ನಾಯಕರೆಂದು ಎಂದು ಹೇಳಿಕೊಳ್ಳುವುದಿಲ್ಲ.) ಕಾರಣ ಇಷ್ಟೆಲ್ಲ ಹಿನ್ನಲೆಯಿರುವ ಸಿದ್ದರಾಮಯ್ಯನಿಗೆ ಸವಾಲು ಹಾಕಿರುವದರಿಂದ ಕಾಂಗ್ರೇಸ್ ಪ್ರತಿಷ್ಟೆಯ ಪ್ರಶ್ನೆಯಾಗಿ ಪಾದಯಾತ್ರೆಯನ್ನು ಕೈಗೆತ್ತಿಕೊಂಡಿತು.ಇನ್ನು ಪಾದಯಾತ್ರೆ ನಡೆಯುತ್ತಲೇ ಸಾಗಿದೆ. ಆದರೆ, ಬಳ್ಳಾರಿ ಜನಾರ್ಧನರೆಡ್ಡಿ ಪಕ್ಷದ ನಾಯಕರು ಜೈಲು, ರೌಡಿಸಂ, ಕೊಲೆ ಅಂತ ಏನೆಲ್ಲ ಪ್ರಕ್ರಿಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದೆಲ್ಲ ಸಾಲದೆಂಬಂತೆ ತಲೆಗಳನ್ನು ಬೊಳಿಸಿಕೊಂಡು ಬಳ್ಳಾರಿ ಜಿಲ್ಲೆಯಲ್ಲಿ ಪಾದಯಾತ್ರೆಗಳನ್ನು ಮಾಡಲು ಆರಂಭಿಸಿದ್ದಾರೆ. ಶ್ರೀರಾಮುಲು ತಲೆಬೊಳಿಸಿದ್ದನ್ನು ಕಂಡು ಆತನ ಅಭಿಮಾನಿಗಳು ತಲೆಬೊಳಿಸುತ್ತಿದ್ದರಿಂದ ನಮ್ಮ ಹಡಪದ ಅಪ್ಪಣ್ಣನವರಿಗೆ ಗಿರಾಕಿಗಳು ಜಾಸ್ತಿಯಾದಂತಾಗಿದೆ.ಚೆಡ್ಡಿಗಳಿಗೆ ರೆಡ್ಡಿಗಳು ನುಂಗಲಾರದ ತುತ್ತು!ಸಕರ್ಾರವನ್ನು ರಚಿಸುವ ಸಂದರ್ಭದಲ್ಲಿ ರೆಡ್ಡಿಗಳನ್ನು ಬೇಷ್ ಎಂದು ಒಪ್ಪಿಕೊಂಡಿದ್ದ ಸಂಘಪರಿವಾರಿಗಳಿಗೆ ಅದೇ ರೆಡ್ಡಿಗಳು ಇಂದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸಕರ್ಾರವನ್ನು ಯಶಸ್ವಿಯಾಗಿ 5ವರ್ಷ ಪೂರೈಸಿ ಇಲ್ಲಿಂದಲೇ ಭದ್ರಬುನಾದಿಯೊಂದನ್ನು ಹಾಕಬೇಕೆಂದಿದ್ದ ಸಂಘಪರಿವಾರಿಗಳ ಆಲೋಚನೆ ಮಣ್ಣುಮುಕ್ಕುತ್ತಿದೆ! ಈ ಅವಧಿಯೊಳಗಡೆ ತನ್ನ ಕಿಲಾಡಿ ಸಂಘಟನೆಗಳನ್ನು ಕಟ್ಟಿ ಹಿಂದುತ್ವದ ವಿಷಭೀಜವನ್ನು ಬಿತ್ತಲು ಚಿಂತನೆಯನ್ನು ಮಾಡಿತ್ತು.ಆದರೆ,ಕಾಂಗ್ರೇಸ್ಸಿಗರು ಮಾಡುತ್ತಿರುವ ಪಾದಯಾತ್ರೆ, ಪಕ್ಷದಲ್ಲಿನ ಭಿನ್ನಮತ, ರೆಡ್ಡಿಗಳ ಕುರಿತು ಜನತೆಗಿರುವ ಅಸಹ್ಯ ಅಸಮಧಾನ, ಕುಲಾಂತರಿ ಶಾಸಕರೆಲ್ಲ ವಾರಕ್ಕೊಮ್ಮೆ ರೆಸಾಟರ್್ಗಳಲ್ಲಿ ಸೇರುತ್ತಾ ಸಭೆಗಳನ್ನು ಮಾಡುತ್ತಿರುವುದು, ರೆಡ್ಡಿಗಳನ್ನು ಸಂಪುಟದಿಂದ ತೆಗೆದುಹಾಕಿದರೆ ತಮ್ಮ ಬುಡಕ್ಕೆಲ್ಲಿ ಪೆಟ್ಟು ಬೀಳುತ್ತದೆ ಎಂಬ ಭಯ, ಯಡಿಯೂರಪ್ಪ ರೆಡ್ಡಿಗಳನ್ನು ತೆಗೆದುಹಾಕುವಂತೆ ಮಾಡುತ್ತಿರುವ ಒತ್ತಡ, ಹಡಬೆ ದುಡ್ಡಿನ ಶಾಸಕರನ್ನೆಲ್ಲ ಕಂಡು ಸಂಘಪರಿವಾರಿಗಳ ನಿದ್ದೆಬಾರದಂತಾಗಿದೆ. ಏನಾದರೂ ಅವಸರದಿಂದ ಕ್ರಮಗಳನ್ನು ತೆಗೆದುಕೊಳ್ಳಲು ಸಕರ್ಾರದಲ್ಲಿ ಎಡವಟ್ಟಾಗುವುದೇ ಜಾಸ್ತಿಯಿದೆ.ಆದ್ದರಿಂದ ಸಂಘಪರಿವಾರಿಗಳ ದಿನಾಲು ಕೇಶವಕೃಪದಲ್ಲಿ ಕುಳಿತು ಬೈಠಕ್ಗಳ ಮೇಲೆ ಬೈಠಕ್ ಮಾಡುತ್ತಾ, ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಂಘಪರಿವಾರಕ್ಕೆ ರಾಷ್ಟ್ರಮಟ್ಟದಲ್ಲಿ ಬೇಕಾದ ಸುಷ್ಮಾಸ್ವರಾಜ್ಳೇ ಈ ರೆಡ್ಡಿಗಳಿಗೆ ಮಹಾತಾಯಿಯಾಗಿದ್ದಾಳೆ. ಇನ್ನು ತಾಯಿಯನ್ನು ಕರೆಸಿ ಮಕ್ಕಳಿಗೆ ಬುದ್ದಿ ಕಲಿಸಬೇಕೆಂಬ ಕಾರ್ಯವು ಸಮರ್ಪಕವಾಗಿ ಆಗುತ್ತಿಲ್ಲ. ಅದರಂತೆ ಇದರ ಇರಾದೆಯೂ ಯಾರೊಬ್ಬರಿಗಿಲ್ಲ.! ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಂಘಪರಿವಾರಿಗಳು ತಾವು ತೋಡಿದ ಹಳ್ಳಕ್ಕೆ ತಾವೇ ಬೀಳಬೇಕಾದ ಪರಿಸ್ಥಿತಿ ಎದುರಾಗಿರುವುದಂತು ಸತ್ಯ.