Thursday, August 19, 2010

ಶಿವಪುತ್ರ ಭೇರಿ ನೆನಪು ಮಾತ್ರಹುಲ್ಲಾಗು


ಶಿವಪುತ್ರ ಭೇರಿ ನೆನಪು ಮಾತ್ರಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗುಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿವೇಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ,ಎಲ್ಲರೊಳಗೊಂದಾಗು ನೀ ಮಂಕು ತಿಮ್ಮ ಡಿ.ವಿ.ಜಿಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವ ತಾತ್ವಿಕ ಮತ್ತು ತಾಕರ್ಿಕ ಸತ್ಯ ಮಿಥ್ಯೆಗಳ ಮಧ್ಯೆ ಕೆಲ ಸಾವುಗಳು ಸಾಮಾಜಿಕ ಹೋರಾಟ ಮತ್ತು ಕ್ಷೇತ್ರಕ್ಕೆ ಆಘಾತವನ್ನು ನೀಡುತ್ತವೆ. 09 ಜೂನ್ 2010ರಂದು ನಿಧನರಾದ ಶಿವಪುತ್ರಪ್ಪ ಭೇರಿಯವರ ಆಕಸ್ಮಿಕ ನಿಧನದಿಂದಾಗಿ ರಾಯಚೂರು ಜಿಲ್ಲೆಯ ಒಬ್ಬ ವಿಚಾರವಾದಿ, ಎಡಪಂಥೀಯ ಹೋರಾಟಗಾರ, ಸಮನ್ವಯ ಸಾಹಿತ್ಯದ ಚಿಂತಕ, ಖ್ಯಾತ ಹೋರಾಟಗಾರ, ಪ್ರಗತಿಪರ ಚಿಂತಕನನ್ನು ಕಳೆದುಕೊಂಡಂತಾಗಿದೆ.ಐವತ್ತೆಂಟರ ಹೊಸ್ತಿಲಿನಲ್ಲಿ ಕಾಲಿರಿಸಿದ್ದ ಶಿವಪುತ್ರಪ್ಪ ಭೇರಿ ಸಕರ್ಾರಿ ಹುದ್ದೆಯಲ್ಲಿದ್ದರೂ ಇತರರಿಗಿಂತ ತೀರಾ ಭಿನ್ನ. ಸಾಮಾನ್ಯವಾಗಿ ಸಕರ್ಾರಿ ನೌಕರರು ತಮ್ಮ ಕಛೇರಿಯ ಕಾಯರ್ಾವಧಿಯ ಹೆಚ್ಚಿನ ಸಮಯವನ್ನು ವೇತನ ತುಟ್ಟಿಭತ್ಯೆ, ಪ್ರವಾಸಭತ್ಯೆಯ ಲೆಕ್ಕಚಾರದಲ್ಲಿ ತೊಡಗುತ್ತಾರೆ. ಯಾವುದೋ ಆಯೋಗದ ಶಿಫಾರಸ್ಸಿನ ಮೇರೆಗೆ ವೇತನ ಪರಿಷ್ಕರಣೆಯಾದಾಗ ಪ್ರತಿಯೊಬ್ಬ ಸಕರ್ಾರಿ ಹಾಗೂ ಅನುದಾನಿತ ಸಂಸ್ಥೆಗಳ ಉದ್ಯೋಗಿಗಳು ವೈಯಕ್ತಿಕ ಲಾಭದ ಗರಿಷ್ಠ ಪ್ರಯೋಜನ ಕುರಿತು ದಿನವಿಡೀ ಚಚರ್ಿಸುವ ಸಂದರ್ಭ ಸಾಮಾನ್ಯ. ಆದರೆ, ಈ ನೀತಿ ಸಕಲ ಸಕರ್ಾರಿ ನೌಕರರಿಗೆ ಅನ್ವಯವಾಗುವುದಿಲ್ಲ. ಕರ್ತವ್ಯಪರ, ನ್ಯಾಯನಿಷ್ಠುರ, ಕಾಯಕ ಪ್ರಜ್ಞೆ, ಪ್ರಾಮಾಣೆಕತೆಯನ್ನೇ ಮೈಗೂಡಿಸಿಕೊಂಡಿರುವ ಸಕರ್ಾರಿ ನೌಕರರು ತಮ್ಮ ಸಂಬಳದ ಪ್ರಮಾಣಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸುವ ಮುಖಾಂತರ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕಂದಾಯ ಇಲಾಖೆಯ ಮುಖಾಂತರ ಸಕರ್ಾರಿ ನೌಕರಿಗೆ ಸೇರಿದ ಶಿವಪುತ್ರಪ್ಪ ಭೇರಿ, ನೌಕರರ ನೈಜಹಕ್ಕುಗಳನ್ನು ದೊರಕಿಸಿ ಕೊಡುವಲ್ಲಿ ಸಕಲರ ನೀರಿಕ್ಷೆಗಳನ್ನು ಮೀರಿ ಹೋರಾಟಗಳನ್ನು ರೂಪಿಸುತ್ತಿದ್ದರು. ಸಾಮಾನ್ಯವಾಗಿ ಸಕರ್ಾರಿ ನೌಕರರು ಜನಪರ ಹೋರಾಟಗಳನ್ನು ಕೈಗೊಂಡಾಗ ಸಕರ್ಾರದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸಕರ್ಾರದ ಕೆಂಗಣ್ಣಿನೊಂದಿಗೆ ಮೇಲಾಧಿಕಾರಿಗಳ ದೈನಂದಿನ ಕಿರಿಕಿರಿಗಳನ್ನು ಅನುಭವಿಸುವುದು ಅನಿವಾರ್ಯ.ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಂಘದ ನಾಯಕ ತಾಳ್ಮೆ ಕಳೆದುಕೊಳ್ಳುವುದು ಸಾಮಾನ್ಯ ಮತ್ತು ಸ್ವಾಭಾವಿಕ. ಆದರೆ, ಎಂತಹದೇ ವೈಫರಿತ್ಯಗಳು ನೌಕರರಲ್ಲಿ ಸಂಭವಿಸಿದಾಗ ತಮ್ಮ ಸಂಯಮವನ್ನು ಕಳೆದುಕೊಳ್ಳದೇ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯನ್ನು ಹತ್ತು ವರ್ಷಗಳವರೆಗೆ ಮುಂದುವರೆಸಿದರು. ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯ 3ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡವರು. ಭೇರಿಯವರ ಸಂಘಟನಾ ಸಾಮಥ್ರ್ಯದ ಪ್ರತೀಕವೆಂದೇ ಪರಿಗಣಿಸಬೇಕು.ರಾಯಚೂರು ಜಿಲ್ಲೆಯ ದಲಿತ ಪರಿವಾರದ ರಾಮಣ್ಣ ಹನುಮಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಶಿವಪುತ್ರಪ್ಪ ಭೇರಿ, ತಮ್ಮ ಪ್ರೌಢ ಶಿಕ್ಷಣವನ್ನು ನಗರದ ಸಕರ್ಾರಿ ಬಾಲಕರ ಪ್ರೌಢಶಾಲೆಯಲ್ಲಿ ಪೂರೈಸಿದವರು. ನಿರಂತರ ಅಧ್ಯಯನ ಶೀಲತೆಯ ಪ್ರಭಾವದಿಂದಾಗಿ ಶಿವಪುತ್ರಪ್ಪನವರು ಶಾಲೆಯಲ್ಲಿಗಿಂತ ಸಮಾಜದಲ್ಲೇ ಕಲಿತ್ದೇ ಹೆಚ್ಚು. ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತಗೊಳ್ಳದೇ ಪರಿವರ್ತನಾಶೀಲ ಸಾಮಾಜಿಕ ವೇದನೆಗಳಿಗೆ ನಿರಂತರ ಸ್ಪಂದಿಸುವದರ ಮುಖಾಂತರ ಹೋರಾಟಮಯ ಬದುಕಿನ ಮುಂಚೂಣಿ ನಾಯಕನಾಗಿ ರೊಪಗೊಂಡವರು. ರಾಯಚೂರು ಜಿಲ್ಲೆಯ ಬಂಡಾಯ ಸಾಹಿತ್ಯ, ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಳ್ಳುವದರ ಜೊತೆಗೆ ಬಂಡಾಯದ ಗೆಳೆಯರಾದ ಬಾಬು ಬಂಡಾರಿಗಲ್, ಸಮುದಾಯದ ಗೆಳೆಯರಾದ ಕರಿಯಪ್ಪ ಮಾಸ್ತಾರ್ ಮತ್ತು ಅನೇಕ ಜಿಲ್ಲೆಯ ಸಾಹಿತಿಗಳೊಂದಿಗೆ ವೈಚಾರಿಕತೆಯ ಚಚರ್ೆಗಳನ್ನು ಮಾಡುತ್ತಿದ್ದರು. ತಮ್ಮ 58ರ ಸಾರ್ಥಕ ಬದುಕಿನ ಏರಿಳಿತಗಳಲ್ಲಿ ಎದುರಾದ ನೋವು-ಸಂಕಟಗಳಿಗೆ ಮುಖಾಮುಖಿಯಾಗುವದರ ಮುಖಾಂತರ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡವರು. ದಲಿತ ಬಂಡಾಯ, ಸಮತಾವಾದ, ಮಾಕ್ಸರ್ಿಸಂ, ಲೆನಿನ್ಸಂ ಮುಂತಾದ ಹೋರಾಟಗಾರರ ಬದುಕಿನ ಮೌಲ್ಯಗಳನ್ನು ತನ್ನಂತರಂಗದಲ್ಲಿ ರೂಡಿಸಿಕೊಂಡವರು. ಸಮಾಜದ ಸಾಮಾಜಿಕ ವಿಜ್ಞಾನಿಯಾಗಿ ವೈಚಾರಿಕ ಬದುಕಿನ ಚಲನೆಶೀಲತೆಯನ್ನು ಮೈಗೂಡಿಸಿಕೊಂಡವರು.ನೆರೆರಾಜ್ಯ ಆಂದ್ರಪ್ರದೇಶದ ಮಾದರಿಯಲ್ಲಿ ಮಾದಿಗರ ಮೀಸಲಾತಿ ಹೋರಾಟ ಸಮಿತಿಯನ್ನು ಸಂಘಟಿಸುವದರ ಮುಖಾಂತರ ಬೆಂದವರ ಬದುಕಿಗೆ ನೋವು ನಿವಾರಣೆಯ ಮಲಾಮ್ನ್ನು ಸವರಿದವರು. ಯಾವುದೇ ಸಂದರ್ಭದಲ್ಲಿ ಎದೆಗುಂದದೆ, ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸದೇ ಶಿವಪುತ್ರಪ್ಪ ಭೇರಿ ಜನಪರ ಹೋರಾಟಗಳಿಗೆ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದರು. ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಂಘಟಿಸುವ ಹಲವಾರು ಹೋರಾಟಗಳಿಗೆ ಏಕಪಕ್ಷೀಯ ನಿಧರ್ಾರ ತೆಗೆದುಕೊಳ್ಳದೇ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಗೆ ಅನುಗುಣವಾಗಿ ಸಂಗಾತಿಗಳೊಂದಿಗೆ ಮುಕ್ತವಾಗಿ ಚಚರ್ಿಸಿ ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೋಡಿಕರಿಸುವ ಮೂಲಕ ಹೋರಾಟಗಳಲ್ಲಿ ಹೋರಾಟಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಸ್ವರೂಪವನ್ನು ಕಣ್ಣಾರೆ ಕಂಡ ರಾಜ್ಯ ಸಮಿತಿಯ ಪಧಾದಿಕಾರಿಗಳು ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಸಕರ್ಾರಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಹಿಂದೆ ಒಂದು ಸಕರ್ಾರ ಜಾಣ ಕುರುಡತನವನ್ನು ಪ್ರದಶರ್ಿಸಿದಾಗ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಪಧಾಧಿಕಾರಿಗಳು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ನಿಧರ್ಾರ ಕೈಗೊಂಡರು. ಅಂದಿನ ಹೋರಾಟದಲ್ಲಿ ಶಿವಪುತ್ರಪ್ಪ ಭೇರಿಯವರ ಕೆಚ್ಚೆದೆಯ ಪಾತ್ರ ಪ್ರಮುಖವಾಗಿತ್ತು. ಇದು ರಾಜ್ಯ ನಾಯಕರ ಮೆಚ್ಚುಗೆಗೂ ಪಾತ್ರವಾಯಿತು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಶೈಲಿ ರಾಜ್ಯದ ಇತರ ಜಿಲ್ಲೆಗಳಿಗೂ ಶ್ರೇಷ್ಠ ಮಾದರಿಯಾಗಿತ್ತು. ಕೆಲವೊಂದು ಸಂದರ್ಭಗಳಲ್ಲಿ ರಾಜ್ಯ ಮಟ್ಟದ ನಾಯಕರು ಭೇರಿಯವರ ಸಲಹೆ ಸೂಚನೆಗಳನ್ನು ಪಡೆದು ಹೋರಾಟದ ಯೋಜನೆಗಳನ್ನು ರೂಪಿಸುತ್ತಿದ್ದರು ಎನ್ನುವುದು ಆಶ್ಚರ್ಯವಾದರೂ ಸತ್ಯ ಸಂಗತಿ. ತಮ್ಮ ಹೋರಾಟದ ಮನೋಭಾವದಿಂದಾಗಿ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲೆಯ ಸಂಘಟನೆಯ ಗೌರವವನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸುವುದು ಜಿಲ್ಲೆಯ ಜನಪರ ಚಳುವಳಿಯ ಚರಿತ್ರೆಯ ಹೆಗ್ಗಳಿಕೆ. ಶಿವಪುತ್ರಪ್ಪ ಭೇರಿಯವರು ಜಿಲ್ಲಾ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡದ್ದು ಚರಿತ್ರೆಯ ಒಂದು ಪರ್ವಕಾಲ. ಪಿವಿ ನರಸಿಂಹರಾವ್ ಪ್ರಧಾನಮಂತ್ರಿಯಾಗಿ ಆಡಳಿತ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವರು ಮತ್ತು ಇಂದಿನ ಪ್ರಧಾನಿಯಾಗಿರುವ ಡಾ. ಮನಮೋಹನ್ಸಿಂಗ್ರು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದರು. ಇದೇ ಸಂದರ್ಭದಲ್ಲಿ ಆಥರ್ಿಕ ಪ್ರಗತಿಯ ಧೋರಣೆಗೆ ಅನುಗುಣವಾಗಿ ಎಲ್.ಪಿ.ಜಿ ಜಾರಿಗೆ ಬಂದಿತು. ಎಲ್.ಪಿ.ಜಿಯ ನೆಪದಲ್ಲಿ ತೃತೀಯ ಹಾಗೂ ಅಭಿವೃದ್ದಿ ಶೀಲ ರಾಷ್ಟ್ರಗಳ ಕುತಂತ್ರಗಳಿಗೆ ಬಲಿಯಾಗಬೇಕಾಯಿತು. ಇವೆಲ್ಲವುಗಳ ಪ್ರಭಾವ ನೇರವಾಗಿ ಸಕರ್ಾರಿ ನೌಕರರ ಮೇಲೆ ಕಂಡು ಬಂತು. ನೌಕರಿ ಮಾಡುತ್ತೇವೆ ಎನ್ನುವವರಿಗೆ ಕಡ್ಡಾಯದ ರಜೆ ನಿಯಮ ಜಾರಿಗೆ ಬಂದಿತು. ಇಂತಹ ಕ್ಲಿಷ್ಠ ಪರಿಸ್ಥಿತಿಯಲ್ಲಿ ಮೂಕಪ್ರೇಕ್ಷಕನಾಗದ ಭೇರಿ ಜನಾಭಿಪ್ರಾಯವನ್ನು ರೂಪಿಸುವದರ ಮುಖಾಂತರ ಹಲವಾರು ಹೋರಾಟಗಳಿಗೆ ಸೈದ್ದಾಂತಿಕ ನೆಲೆಗಟ್ಟನ್ನು ರೂಪಿಸಿದರು. ಹಂತಹಂತವಾಗಿ ರಾಯಚೂರು ಜಿಲ್ಲೆಯ ಒಬ್ಬ ಚಿಂತಕನಾಗಿ ಸೂಫಿ ಸಾಹಿತ್ಯದ ಪ್ರತಿಪಾಧಕನಾಗಿ, ಧೀಮಂತ ಹೋರಾಟಗಾರನಾಗಿ ಶೋಷಿತ ದಲಿತರ ಬದುಕಿನ ಹೊಸ ಭರವಸೆಗಳ ಸಂಘಟನೆಯ ನೇತಾರನಾಗಿ ಇನ್ನೂ ಎತ್ತೆರೆತ್ತರಕ್ಕೆ ಬೆಳೆಯಬಲ್ಲ, ಸಕಲರ ನಿರೀಕ್ಷೆಗಳನ್ನು ಪೂರೈಸಬಲ್ಲ ಶಿವಪುತ್ರಪ್ಪ ಭೇರಿಯವರ ಕೌಟುಂಬಿಕ ಬದುಕಿನ ಒಂದು ಅನಿರೀಕ್ಷಿತ ಶಾಕ್ ಅವರಿಗೆ ಹೆಚ್ಚಿನ ಆಘಾತವನ್ನು ನೀಡಿತು. ಭವಿಷ್ಯದಲ್ಲಿ ಕುಟುಂಬದವರ ಕನಸುಗಳನ್ನೆಲ್ಲ ಸಾಕಾರಗೊಳಿಸ ಬೇಕಾಗಿದ್ದ, ಜೀವನದ ಸಂಧ್ಯಾಕಾಲದಲ್ಲಿ ಊರುಗೋಲು ಆಗಬೇಕಾಗಿದ್ದ ಮಗ ಅಪಘಾತದಲ್ಲಿ ತೀರಿಕೊಂಡಾಗ ಭೇರಿ ಅಂತಮರ್ುಖಿಯಾದರು. ಬದುಕಿನ ವೈರುಧ್ಯಗಳಿಗೆ ಸಾಂತ್ವಾನ ನೀಡುವ ಸೂಫಿ ಸಾಹಿತ್ಯದ ಅಂತರಂಗದ ಮೌಲ್ಯಗಳಲ್ಲಿ ಹೊಸ ಬೆಳಕನ್ನು ಕಂಡುಕೊಂಡರು. ಹೊಸ ಬೆಳಕಿನ ಹುಡುಕಾಟದಲ್ಲಿ ಸಮಗ್ರವಾಗಿ ಅಪರ್ಿಸಿಕೊಂಡಿದ್ದ ಶಿವಪುತ್ರ ಭೇರಿಯ ಆಕಸ್ಮಿಕ ಸಾವು ನೈಜಜನಪರ ಹೋರಾಟಗಳಿಗೆ ಮತ್ತು ಹೋರಾಟಗಾರರಿಗೆ ಆದ ಬಹುದೊಡ್ಡ ನಷ್ಟವಾಗಿದೆ.ಅಭೌತಿಕ ಸಂಸ್ಕೃತಿಯಿಂದ ಭೌತಿಕ ಸಂಸ್ಕೃತಿಯ ಆಸೆ-ಆಮಿಷಗಳಿಗೆ ಬಲಿಯಾಗಿ ಪ್ರತಿಯೊಬ್ಬರು ಹಣದ ದಾಹಕ್ಕಾಗಿ ತಮ್ಮನ್ನು ತಾವೇ ಮಾರಾಟದ ವಸ್ತುಗಳನ್ನಾಗಿ ರೂಪಿಸಿಕೊಳ್ಳುತ್ತಿರುವ ಸಂಕಷ್ಟ ಪರಿಸ್ಥಿತಿಯಲ್ಲಿ ಶಿವಪುತ್ರಪ್ಪ ಭೇರಿಯವರಂತಹ ನಾಯಕರು ಮೇಲಿಂದ ಮೇಲೆ ಕೇವಲ ನೆನಪು ಮಾತ್ರ ಆಗದೇ ಅನಿವಾರ್ಯವೂ ಆಗುತ್ತಾರೆ. ಶಿವಪುತ್ರಪ್ಪ ಭೇರಿಯವರ ನಿಧನದಿಂದ ರಾಯಚೂರು ಜಿಲ್ಲೆಯ ಹೋರಾಟದ ಒಂದು ಯುಗ ಅಂತ್ಯಗೊಂಡಿದೆ ಎನ್ನುವುದು ಜಿಲ್ಲೆಯ ಪ್ರತಿಯೊಬ್ಬ ಚಿಂತನಶೀಲರ ಮನದಾಳದಲ್ಲಿ ಕಂಡು ಬರುವ ಸಾಮಾನ್ಯ ಸಂಗತಿ. ಸಾವು ಎಲ್ಲರಿಗೂ ಬರುತ್ತದೆ. ಆದರೆ, ಎಷ್ಟು ಜನ ಸಾವಿಗಿಂತ ಮುಂಚಿನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ. ಸಾರ್ಥಕತೆಯನ್ನೇ ಬದುಕಿನ ಮೌಲ್ಯವಾಗಿಸಿಕೊಂಡಿದ್ದ ಶಿವಪುತ್ರಪ್ಪ ಭೇರಿ ಭೌತಿಕ ಲೋಕದಿಂದ ಕಣ್ಮರೆಯಾದರೂ ಅವರ ಅಭಿಮಾನ ಬಳಗದ ಮನದಾಳದಲ್ಲಿ ಮಾತ್ರ ಶಾಶ್ವತವಾಗಿ ನೆಲೆಸಿದ್ದಾರೆ.
ಅಯ್ಯಪ್ಪ ತುಕ್ಕಾಯಿ

1 comment:

  1. thanks for writing about Beri i seen him and i am a relative of him, he was really not a common man i cant find a person like him again in my life i am sad that he is not with as. he was god!

    ReplyDelete

Thanku