Tuesday, November 30, 2010

ಉಜಿರೆಯಲ್ಲಿ ಹೀಗೊಂದು ವಿಚಾರಸಂಕಿರಣ






ಉಜಿರೆಯಲ್ಲಿ ಹೀಗೊಂದು ವಿಚಾರಸಂಕಿರಣ



ಮಾಧ್ಯಮ ಕ್ಷೇತ್ರವು ಇಂದು ಉದ್ದಿಮೆಯಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಅದನ್ನು ಪೋಷಿಸುವವರಿಗಿಂತ ದೂಷಿಸುವವರ ಸಂಖ್ಯೆಯೇ ವ್ಯವಸ್ಥೆಯಲ್ಲಿ ಅಧಿಕವಿದೆ. ಅಂತಹ ಈ ಸಂದರ್ಭದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನ ಆಡಳಿತ ಮಂಡಳಿ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಆಯೋಜಿಸುವದರೊಂದಿಗೆ ಪತ್ರಿಕೋದ್ಯಮಕ್ಕೆ ಕಾಲಿಡುವ ನವವಿಧ್ಯಾಥರ್ಿಗಳಿಗೆ ಹೊಸದೊಂದು ಚೈತನ್ಯವನ್ನು ತುಂಬಿತು.
ಇಲ್ಲಿಯ ಕಾಲೇಜಿನಲ್ಲಿ ಪತ್ರಿಕೋದ್ಯಮ ಮುಗಿಸಿದ ಪ್ರತಾಪಸಿಂಹ ಇಂದು ವಿ.ಕ ಪತ್ರಿಕೆಯಲ್ಲಿ ಅಂಕಣಕಾರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಸುವರ್ಣನ್ಯೂಸ್ ಎಂಬ ಚಾನೆಲ್ನಲ್ಲಿ ನಿರೂಪಕರಾಗಿರುವ ದಿವ್ಯಶ್ರೀ ಕೂಡ ಇದೇ ಉಜಿರೆಯ ಕಾಲೇಜಿನಲ್ಲಿ ಕಲಿತವರು. ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವು ಪ್ರತಿಭೆಗಳನ್ನು ನೀಡಿದ ಉಜಿರೆಯ ಶಿಕ್ಷಣ ಸಂಸ್ಥೆ ಮೊನ್ನೆಯೊಂದು ಮೇಲೆ ಹೇಳಿದಂಥೆ ಜಾಗತಿಕ ಮಟ್ಟದ ರಾಜಕಾರಣದಲ್ಲಿ ಮಾದ್ಯಮದ ಪ್ರಭಾವ ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಹಮ್ಮಿಕೊಂಡಿತ್ತು. ಅಲ್ಲಿಗೆ ನೂರಾರು ಪ್ರಾದ್ಯಾಪಕರು, ಬುದ್ಧಿಜೀವಿಗಳು, ಸಾಹಿತಿಗಳು ಬಂದಿದ್ದರು. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯಗಳಾದರೆ, ಕೊನೆಗೆ ಎಲ್ಲರದೂ ಒಂದೇ ನಿಲುವು ಆಗಿತ್ತು.ಮಾಧ್ಯಮಗಳು ಕೇವಲ ಸುಧ್ಧಿ, ಮಾಹಿತಿ, ಮನರಂಜನೆಗೆ ಸೀಮಿತವಾಗಿರದೆ ಸಾರ್ವಜನಿಕರ ಮಧ್ಯೆ ವಾಸ್ತವಿಕ ನೆಲೆಗಟ್ಟಿನ ಅಭಿಪ್ರಾಯಗಳನ್ನು ಸಂಗ್ರಹಿಸುವಂತಾಗಬೇಕು ಮತ್ತು ಸಮಾಜದ ಸ್ವಾಸ್ಥ್ಯವನ್ನು ಎತ್ತಿಹಿಡಿಯುವ ಸಾರ್ವಜನಿಕರ ಸಲಹೆ ಅಭಿಪ್ರಾಯಗಳಿಗೆ ಆಧ್ಯತೆ ನೀಡಬೇಕೆಂದು ಶಿವಮೊಗ್ಗದ ಸಾಂಸ್ಕ್ರತಿಕ ಮತ್ತು ಮಾಧ್ಯಮ ಪ್ರತಿಷ್ಠಾನದ ಅಧ್ಯಕ್ಷ ಪ್ರೊ; ವಿಘ್ನೇಶ್ ಎನ್ .ಭಟ್ .ಹೇಳಿದರು.ಇತ್ತೀಚಿಗೆ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಮಂಗಳೂರಿನ ಪ್ರೆಸ್ಕ್ಲಬ್ ಹಾಗೂ ಯುಜಿಸಿ ಪ್ರಾಯೋಜಿತ ನಡೆದ ವಿಚಾರಸಂಕಿರಣದಲ್ಲಿ ಜಾಗತಿಕ ಮಟ್ಟದ ರಾಜಕೀಯದಲ್ಲಿ ಮಾಧ್ಯಮಗಳ ಪಾತ್ರ ವಿಷಯದ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸಕರ್ಾರ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯಾಗಿ ವಿಚಾರ ವಿನಿಮಯದೊಂದಿಗೆ ಮಾಧ್ಯಮಗಳು ಪ್ರಬಲ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಬೇಕು. ಸಮೂಹ ಮಾಧ್ಯಮಗಳು ರಾಜಕೀಯ ಅರಿವು ಮತ್ತು ಜಾಗೃತಿ ಮೂಡಿಸಿದಾಗ ಮಾತ್ರ ಪಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಮಾಮರ್ಿಕವಾಗಿ ನುಡಿದರು.ಅಧ್ಯಕ್ಷತೆ ವಹಿಸಿದ್ದ ಅಸ್ಸಾಂ ವಿ.ವಿ. ಯ. ಸಮೂಹ ಮಾಧ್ಯಮ ಕೇಂದ್ರದ ಮುಖ್ಯಸ್ಥ ,ಡಾ. ಕೆ.ವಿ. ನಾಗರಾಜ್ರವರು, ಪತ್ರಕರ್ತರಾದವರು ಅವಕಾಶವಾದಿಗಳಾಗದೆ ಆದರ್ಶವಾದಿ ಗಳಾಗಬೇಕೆಂದು ವಿಧ್ಯಾಥರ್ಿಗಳಿಗೆ ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಮಾತನಾಡಿ ಸಮೂಹ ಮಾಧ್ಯಮಗಳು ಓದುಗರನ್ನು ಚಿಂತನಶೀಲರನ್ನಾಗಿ ಮಾಡಬೇಕು. ಆಥರ್ಿಕ ಹಾಗೂ ಸಾಮಾಜಿಕ ಏಳಿಗೆಗೆ ಪ್ರೋತ್ಸಾಹ ನೀಡಬೇಕು ಆ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದರು.ಡಾ ಬಿಕೆ.ರವಿ, ಶೈಲೇಶ್ರಾಜ್ ಅರಸ್ ಸೇರಿದಂತೆ ಹಲವು ಯುನಿವಸರ್ಿಟಿಗಳ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರುಗಳು ಭಾಗವಹಿಸಿ ತಮ್ಮ ವಿಷಯಗಳನ್ನು ಮಂಡಿಸಿದರು.ಇಂತಹದೊಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ವಿವಿಧ ಭಾಗಗಳಿಂದ 40ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಹಾಗೂ ನೂರಾರು ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಪ್ರತಿನಿಧಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಸಂಬದ್ಧ ಉತ್ತರಗಳನ್ನು ವಿಚಾರ ಸಂಕಿರಣದ ಅತಿಥಿಗಳು ನೀಡುತ್ತಿದ್ದರು.ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಖ್ಯಾತ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಅವರ ಅಪೂರ್ವ ಸಂಗ್ರಹದ ಛಾಯಾಚಿತ್ರ ಪ್ರದರ್ಶನ ವಿಶೇಷ ಜನಾಕರ್ಷಣೆಯ ಕೇಂದ್ರವಾಗಿತ್ತು. ಹಾಗೂ ಸಂಜೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವಂತಹ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಕಾಲೇಜಿನ ಸಾಂಸ್ಕ್ರತಿಕ ತಂಡದ ವಿಧ್ಯಾಥರ್ಿಗಳು ನಡೆಸಿಕೊಟ್ಟರು.ಮಾರನೇಯ ದಿನ ಮಾಧ್ಯಮದವರು ಹಾಗೂ ಅಕಾಡೆಮಿಯನ್ಸ್ ನಡುವೆ ನಡೆದ ಚಚರ್ಾಗೋಷ್ಟಿಯಲ್ಲಿ ಟೈಮ್ಸ್ ಆಫ್ ಇಂಡಿಯಾದ ನಂದಗೋಪಾಲ್, ಡೆಕ್ಕನ್ ಹೆರಾಲ್ಡ್ನ ಬ್ಯೂರೋ ಚೀಫ್ ರೋನಾಲ್ಡ್, ಎಸ್.ಡಿ.ಎಂ ಕಾಲೇಜು ಉಜಿರೆಯ ರೆಜಿಸ್ಟ್ರಾರ್ ಉದಯಚಂದ್ರ, ಧಾರವಾಡ ಕನರ್ಾಟಕ ಯುನಿವಸರ್ಿಟಿಯ ಪ್ರೋ.ಬಾಲಸುಬ್ರಹ್ಮಣ್ಯ, ಮಂಗಳೂರು ಯುನಿವಸರ್ಿಟಿಯ ಪ್ರೋ. ಶಿವರಾಮ್, ಮೈಸೂರು ಯುನಿವಸರ್ಿಟಿಯ ಡಾ. ನಿರಂಜನ ವಾನಳ್ಳಿ ಪಾಲ್ಗೊಂಡರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಧಾ.ಕ.ವಿ.ವಿ.ಯ ಪ್ರೋ. ಎ ಎಸ್ ಬಾಲಸುಬ್ರಹ್ಮಣ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂ.ವಿ ವಿ.ಯ ಜಿ.ಪಿ ಶಿವರಾಮ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೋ.ಭಾಸ್ಕರ ಹೆಗ್ಡೆ ಸ್ವಾಗತಿಸಿ, ಉಪನ್ಯಾಸಕ ಪರಶುರಾಮ ಕಾಮತ್ ವಂದಿಸಿದರು. ವಿಧ್ಯಾಥರ್ಿಗಳಾದ ಸುದರ್ಶನ್, ಜಯಲಕ್ಮಿ ಕಾರ್ಯಕ್ರಮ ನಿರೂಪಿಸಿದರು.ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ : ಶಿವಮೊಗ್ಗ ನಂದನರವರ ಅತ್ಯುತ್ತಮ ಛಾಯಾಚಿತ್ರ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಅವರುಗಳು ಬಾಲ್ಯದಿಂದ ಇಲ್ಲಿಯವರೆಗೆ ಸ್ವತಃ ತಾವೇ ತೆಗೆದಿದ್ದ ಹಲವಾರು ನೈಸಗರ್ಿಕ ತೃಪ್ತಿಯನ್ನಿಡುವಂತಹ ಛಾಯಾಚಿತ್ರಗಳು ಎಲ್ಲರನ್ನು ತಮ್ಮತ್ತಿರಕ್ಕೆ ಆಹ್ವಾನಿಸಿಕೊಳ್ಳುತ್ತಿದ್ದವು.ನೈಸಿರ್ಗಕ ವಿಕೋಪ, ಹತ್ತು ಹಲವು ಜಾತಿಯ ಹಾವುಗಳು, ಹಕ್ಕಿಗಳ ಪ್ರಬೇದಗಳು, ಮಾನವ ಸಂಕುಲವನ್ನು ಬೆಚ್ಚಿಬೀಳಿಸುವಂತಹ ಘಟನೆಗಳ ಚಿತ್ರಗಳು ಎಲ್ಲರನ್ನು ಬೆರಗಾಗಿ ನೋಡುವಂತೆ ಮಾಡಿದ್ದವು.



ಹಂಪೇಶ್, ಮಮತಾ, ಶಶಾಂಕ್

No comments:

Post a Comment

Thanku