Tuesday, February 22, 2011

ಪಂಡಿತ ಭೀಮಸೇನ್ ಜೋಷಿ


ಪಂಡಿತ ಭೀಮಸೇನ್ ಜೋಷಿಯವರು ತಮ್ಮ ವಿಶಿಷ್ಟವಾದ ಗಾನಶೈಲಿಯಲ್ಲಿ ಗಾನದೇವತೆಯಾದಂತಹ ಶಾರದೆಯನ್ನೇ ಒಲಿಸಿಕೊಂಡಿದ್ದರು. ಸಂಗೀತಕ್ಕೆ ಯಾವುದೇ ಭೇದಬಾವವಿಲ್ಲವೆಂಬುದನ್ನು ತೋರಿಸಿದರಲ್ಲದೇ, ಮನುಕುಲದ ಒಗ್ಗೂಡುವಿಕೆಗಾಗಿ ಸಂಗೀತ ಲೋಕದಲ್ಲಿ ವಿರಮಿಸದೇ ಶ್ರಮಿಸಿದರು ಎಂದರೆ ತಪ್ಪಾಗಲಾರದು ಎನ್ನುತ್ತಾರೆ ನಮ್ಮ ಸ್ನೇಹಿತ ವಿಜಯ ಕುಮಾರ್ ಬಿ.ಹೆಚ್.ಭೀಮಸೇನ್ ಜೋಷಿ ಎಂಬ ಹೆಸರು ಕೇಳಿದರೆ ಸಾಕು ಸಂಗೀತಪ್ರಿಯರ ಮನಸ್ಸು ಪುಟಿದೇಳುತ್ತದೆ. ಅವರಲ್ಲಿ ಸಂಗೀತದ ಬಗ್ಗೆ ಇದ್ದ ಗೌರವ, ಭಕ್ತಿ, ಶೃದ್ಧೆ ಅವರನ್ನು ದೇಶದ ಅತ್ಯುನ್ನುತವಾದಂತಹ ಭಾರತರತ್ನ ಪ್ರಶಸ್ತಿಗೆ ಪಾತ್ರರನ್ನಾಗಿಸಿತು. ಗಾನಗಂಧರ್ವ ಕನ್ನಡದ ಕಣ್ಮಣಿಯಾದಂತಹ ಭೀಮಸೇನ್ ಜೋಷಿಯವರು ದೇಶ ವಿದೇಶಗಳ ಉದ್ದಗಲಕ್ಕೂ ಸಂಚರಿಸಿ ಕನರ್ಾಟಕದ ಕೀತರ್ಿ ಪತಾಕೆಯನ್ನು ಹಾರಿಸಿದ್ದಾರೆ. ಅವರ ಸುಮಧುರವಾದ ಕಂಚಿನ ಕಂಠದೊಂದಿಗೆ ಇಡೀ ಮನುಕುಲದ ಸಂಗೀತ ಪ್ರಿಯರನ್ನು ತಮ್ಮತ್ತ ಸೆಳೆದುಕೊಟ್ಟುವಳ್ಳಂತಹ ಒಂದು ಮಾಧುರ್ಯತೆ ಅವರ ಸಂಗೀತದ ಅವತರಣಿಕೆಲ್ಲಿತ್ತೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.ಹಿಂದೂಸ್ತಾನ ಸಂಗೀತ ಲೋಕದಲ್ಲಿ ಪ್ರಪ್ರಥಮವಾಗಿ ದೇಶದ ಅತ್ಯುನ್ನತ ಪ್ರಶಸ್ತಿಯಾದಂತಹ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡವರು ಎಂಬ ಹೆಮ್ಮ ಸಮಸ್ತ ಕನ್ನಡಿಗರಿಗಿದೆ. ಸಂಗೀತ ಲೋಕದ ಮಹಾನ್ ವ್ಯಕ್ತಿಗಳೊಂದಿಗೆ ಒಡನಾಟವನ್ನು ಹೊಂದಿದ್ದು ಎಲ್ಲರೊಂದಿಗೆ ಆತ್ಮೀಯ ಭಾವದೊಂದಿಗೆ, ಸಹೋದರತ್ವದೊಂದಿಗೆ ಇದ್ದರೆಂದು ಅವರ ನಕಟವತರ್ಿಗಳ ಸಂಗೀತ ಲೋಕದ ಮಹನಯರ ಮನದಂಗಳದ ಮಾತುಗಳಲ್ಲಿ ದೃಡಪಟ್ಟಿದೆ. ಹಿಂದೂಸ್ಥಾನ ಸಂಗೀತದ ಕಿರಾಣ-ಘರಾಣಾ ಶೈಲಿಯಲ್ಲಿ ತಮ್ಮ ಸಂಗೀತದ ಸಾಧನೆಯ ಛಾಪನ್ನು ಎಂದಿಗೂ ಮಾಸದಂತೆ ಮೂಡಿಸಿದ್ದಾರೆ. ಇಂತಹ ಒಬ್ಬ ಮೇರುವ್ಯಕ್ತಿತ್ವವುಳ್ಳ ಸಂಗೀತ ಸಾಮ್ರಾಟ್ ದಿನಾಂಕ 24/01/2011ರಂದು ಬೆಳಗಿನ ಜಾವ ಭಾರತದ ಸಮಸ್ಥ ಅಭಿಮಾನ ಬಳಗವನ್ನು ಬಿಟ್ಟು ವಿಧಿವಶರಾದರು. ಈ ಒಂದು ಘಟನೆಯಿಂದ ನಾಡಿನ ಸಮಸ್ಥ ಜನತೆಗೆ ತುಂಬಲಾರದ ನಷ್ಟವಾದಂತಾಗಿದೆ. ಅದರಲ್ಲೂ ಸಂಗೀತ ಪ್ರೀಯರಿಗೆ ಇಡೀ ಸ್ವರಲೋಕವನ್ನೇ ಅಲುಗಾಡಿಸಿದಂತಾಗಿದೆ. ಇಂತಹ ಸಂಗೀತ ದಿಗ್ಗಜರ ಬಗ್ಗೆ, ಅವರ ಜೀವನ ಶೈಲಿ, ಬೆಳೆದು ಬಂದಂತಹ ರೀತಿ, ನಡೆನುಡಿಗಳ ಬಗ್ಗೆ ಸ್ಮರಿಸಿಕೊಳ್ಳುವದರಿಂದ ಅವರಿಗೆ ಗೌರವ ಸೂಚಿಸಿದಂತಾಗುತ್ತದೆಂದು ನಾನು ಭಾವಿಸುತ್ತೇನೆ.04-02-1922ರಂದು ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಂಬಾಳದಲ್ಲಿ ಶ್ರೀ ಗುರುರಾಜ್ ಜೋಷಿ ಮತ್ತು ಶ್ರೀಮತಿ ರಮಾದೇವಿ ಎಂಬ ದಂಪತಿಗಳಿಗೆ ದೇಶದ ಮಾಣಿಕ್ಯದಂತಹ ಪಂಡಿತ ಭೀಮಸೇನ್ ಜೋಷಿಯವರಿಗೆ ಜನ್ಮವೆತ್ತರು. ಇವರ ಮನೆತನ ಧಾಮರ್ಿಕ ನಷ್ಠೆಯ ಮಾಧ್ವ ಬ್ರಾಹ್ಮಣರಾಗಿದ್ದರು. ಇವರು 1943ರಲ್ಲಿ ಶ್ರೀಮತಿ ಸುನಂಧಾ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಪಾದಾರ್ಪಣಿ ಮಾಡಿದರು. ಮತ್ತು ಕೆಲವು ವರ್ಷಗಳ ನಂತರ 1951ರಲ್ಲಿ ಶ್ರೀಮತಿ ವತ್ಸಲಾ ಎಂಬವವರ ಜೊತೆಯಲ್ಲಿ 2ನೇ ವಿವಾಹವಾಯಿತು.ಬಾಲ್ಯದಲ್ಲಿಯೇ ಸಂಗೀತಾಸಕ್ತಿಯಲ್ಲಿ ತೊಡಗಿಸಿಕೊಂಡಿದ್ದ ಭೀಮಸೇನ್ ಜೋಷಿ2ನೇ ವಯಸ್ಸಿನಲ್ಲಿಯೇ ಸಂಗೀತದ ಬಗ್ಗೆ ಭೀಮಸೇನ್ರಿಗೆ ಆಸಕ್ತಿ. ಗದಗದ ಕಿಲ್ಲಾ ಓಣಿಯ ಹತ್ತಿರದಲ್ಲಿಯೇ ಒಂದು ಮಸೀದಿ ಇತ್ತು. ಪ್ರಾರ್ಥನೆ ಸದ್ದು ಕೇಳಿದೊಡನೆ ಜೋಷಿಯವರು ಸಹ ಕಿವಿಯಲ್ಲಿ ಬೆರಳಿಟ್ಟು ಗೊಣಗುತ್ತಿದ್ದರು. ಮತ್ತು ಊರಿನಲ್ಲಿ ಭಜಂತ್ರಿಯ ನಾದ ಕೇಳಿತೆಂದರೆ ಸಾಕು 2ದಂಟುಗಳನ್ನು ತೆಗೆದುಕೊಂಡು ಅವರಂತೆಯೇ ಅನುಕರಣಿ ಮಾಡುತ್ತಿದ್ದರು. 7ನೇ ವಯಸ್ಸಿನಲ್ಲಿ ಅವರ ಅಜ್ಜ ಭೀಮಾಚಾರ್ಯರರು ಮೂಲೆಯಲ್ಲಿಟ್ಟಿದ್ದ ತಂಬೂರಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ತಂತಿ ಮೀಟುತ್ತಿದ್ದರಂಥೆ. ಕೆಲವೊಮ್ಮೆ ಕುಪಿತಗೊಂಡು ಮನೆಬಿಟ್ಟಾಗಲೆಲ್ಲ ರೈಲು ಹತ್ತಿ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿಯೇ ತಮ್ಮ ಕಂಚಿನ ಕಂಠದಿಂದ ಸ್ವರವೆತ್ತಿ ಹಾಡುತ್ತ ಪ್ರಯಾಣಿಕರು ನಡುವ ಹಣದಿಂದಲೇ ತಮ್ಮ ಊಟೋಪಚಾರಗಳನ್ನು ಪೂರೈಸುತ್ತಿದ್ದರು. ಅವರ ಸಂಗೀತವನ್ನು ಆಲಿಸಿದಂತಹ ಆ ರೈಲಿನಲ್ಲಿದ್ದ ಪ್ರಯಾಣಿಕರು ಮುಂದೊಂದು ದಿನ ಈ ಬಾಲಕ ಭಾರತ ರತ್ನವೆಂಬ ಶ್ರೇಷ್ಟ ಪ್ರಶಸ್ತಿಗೆ ಭಾಜನರಾಗುತ್ತಾರೆಂದು ಯಾರು ಊಹಿಸಲು ಸಾಧ್ಯವಾಗಿರಲಿಕ್ಕಿಲ್ಲ.ಶಿಕ್ಷಣಕ್ಕಾಗಿ ಭಾರತದ ಹಲವೆಡೆ ಪಯಣ.ವಿಜಾಪುರ, ಮುಂಬಯಿ, ಇಂಧೊರ್, ಜಲಂಧರ್, ಗ್ವಾಲಿಯಾರ್ ಅಲೆದಾಡಿ ಕೊಲ್ಕತ್ತಾದ ಪಹಾಡಿ ಸನ್ಯಾಲ್ರವರ ಬಳಿ ಇದ್ದು ಜಲಂಧರ್ಗೆ ಬಂದರು. ಅಲ್ಲಿ ಮಂಗತರಾವ್ ಆರ್ಯ ಸಂಗೀತ ವಿದ್ಯಾಲಯಕ್ಕೆ ಸೇರ್ಪಡೆಯಾದರು. ಒಮ್ಮೆ ಹರಿವಲ್ಲಭ ಸಮ್ಮೇಳನದಲ್ಲಿ ವಿನಾಯಕ ಪಟುವರ್ಧರನ್ನು ಭೇಟಿಯಾದರು. ಇವರು ಕುಂದುಗೋಳದ ಸವಾಯಿ ಗಂಧರ್ವರಲ್ಲಿ ಶಿಕ್ಷಣ ಪಡೆಯುವಂತೆ ಜೋಷಿಯವರಿಗೆ ಸಲಹೆಯನ್ನು ನಡಿದರು. ಆಗ ಜೋಷಿಯವರು ಗದಗಿನತ್ತ ಪಯಣ ಬೆಳೆಸಿದರು.1938ರಲ್ಲಿ ಕನರ್ಾಟಕದ ನಮ್ಮವರೇ ಆದ ರಾಮಬಾಹು ಕುಂದುಗೋಳಕರ್ (ಸವಾಯಿ ಗಂಧರ್ವ) ಅವರಲ್ಲಿ ಶಿಷ್ಯತ್ವವನ್ನು ಪಡೆದರು. ಇವರೊಂದಿಗೆ ಗಾನವಿಧೂಷಿಯಾದಂತಹ ಗಂಗೂಭಾಯಿ ಹಾನಗಲ್ರವರು ಕೂಡ ಇದೇ ಶಿಷ್ಯರ ಪರಂಪರೆಯಲ್ಲಿ ಬೆಳೆದು ಬಂದವರಾಗಿದ್ದಾರೆ. ಜೋಷಿಯವರು ಇಲ್ಲಿಯೇ ಕಲಿತು ಖ್ಯಾಲ್ ಗಾಯನದಲ್ಲಿ ಕಿರಾಣ-ಘರಾಣದ ಶ್ರೇಷ್ಟ ಪ್ರತಿನಧಿ ಎಂಬ ಖ್ಯಾತಿ ಗಳಿಸಿದರು.ಭೀಮಸೇನ್ ಜೋಷಿಯವರು ಮೊಟ್ಟಮೊದಲ ಬಾರಿಗೆ ಸಂಗೀತ ಕಾರ್ಯಕ್ರಮವನ್ನು ನಡಿದಾಗ ಅವರಿಗೆ ಕೇವಲ 19ವರ್ಷ ವಯಸ್ಸು. ನಂತರ ಒಂದೇ ವರ್ಷದಲ್ಲಿ ಅದ್ಬುತವೆಂಬಂತೆ ಹಿಂದಿ, ಕನ್ನಡ ಭಕ್ತಿಗೀತೆಗಳನ್ನೊಳಗೊಂಡ ಅವರ ಅಲ್ಬಮ್ ಪ್ರಕಟಗೊಂಡಿತು. ನಂತರದ ದಿನಗಳಲ್ಲಿ ಗ್ವಾಲಿಯಾರ್ನಲ್ಲಿ ಉಸ್ತಾದ್ ಅಬ್ದುಲ್ ಕರೀಂಖಾನ್ರನ್ನು ಗುರುವಾಗಿ ಪಡೆದದ್ದು ಜೋಷಿಯವರ ಸಂಗೀತ ಸಾಧನೆಗೆ ಸಾಣಿಹಿಡಿದಂತಾಯಿತು. ಕಿರಾಣ-ಘರಾಣಕ್ಕೆ ಜೋಷಿಯವರು ಪಾದಾರ್ಪಣಿ ಮಾಡಿದ್ದು ಈ ರೀತಿಯಲ್ಲಿ. ಈ ಸಂಗೀತ ಪರಂಪರೆಯಲ್ಲಿ ಹೆಸರಾದರು ಅವರ ಗಾಯನ ಶೈಲಿಯಲ್ಲಿ ದೇಶದ ಸಂಗೀತ ವೈವಿಧ್ಯವಿತ್ತು. ನಂತರ ಪ್ರಸಿದ್ದ ಶಹನಾಯಿ ವಿಧ್ವಾಂಸ ಬಿಸ್ಮಿಲ್ಲಖಾನ್ ಜೊತೆಗೂಡಿ ಸಂಗೀತದ ರಾಗಗಳ ಹೊಸ ಹುಡುಕಾಟದಲ್ಲಿ ಈ ರತ್ನಗಳು ವಿಲೀನವಾಗುತ್ತಿದ್ದರು. ಜೋಷಿಯವರು 1954ರಲ್ಲಿ ಪ್ರಪ್ರಥಮವಾಗಿ ಆಕಾಶವಾಣಿ ಪ್ರಥಮ ರಾಷ್ಟ್ರೀಯ ಕಾರ್ಯಕ್ರಮ ನಡಿದರು. ಸಂಗೀತಕ್ಕೆ ಗಡಿ-ಭಾಷೆಗಳ ಭೇದವಿಲ್ಲವೆಂದು ಸಂಗೀತದ ಮೂಲಕ ಸ್ಪಷ್ಟಪಡಿಸಿದ್ದರು. ಗದಗ ಮೂಲದ ಜೋಷಿಯವರು ಪುಣಿಯಲ್ಲಿ ಕಲಾಶ್ರೀ ಎಂಬ ಬಂಗಲೆಯಲ್ಲಿ ನೆಲೆಸಿದ್ದರಿಂದ ಮಹಾರಾಷ್ಟ್ರದವರು (ನಮ್ಮವರು) ಕನರ್ಾಟಕದವರು (ನಮ್ಮವರು) ಎಂಬ ಹಗ್ಗಜಗ್ಗಾಟದ ತರ್ಕವಿದೆ. ಆದರೆ, ಸಂಗೀತ ಲೋಕದ ಈ ಸಾಮ್ರಾಟನಗೆ ಗಡಿ-ಭಾಷೆಗಳ ಭೇದವಿಲ್ಲದೇ ದೇಶವಿದೇಶಗಳಲ್ಲಿ ಸಂಚರಿಸಿ ಭಾರತದ ಕೀತರ್ಿ ಪತಾಕೆಯನ್ನು ಹಾರಿಸಿದ್ದಾರೆ. ಹಾಗಾಗಿ ಭಾರತ ರತ್ನವೆಂಬಂತೆ ನಮ್ಮೆಲ್ಲರ ಕಣ್ಮಣಿಯಾಗಿರುವುದು ನಮ್ಮೆಲ್ಲರ ದೈವ. ಇವರ ಸತತ ಪರಿಶ್ರಮ, ಅಚಲವಾದಂತಹ ಗುರುಭಕ್ತಿ ನತ್ಯ ಹಲವಾರು ಘಂಟೆಗಳವರೆಗೆ ಸಂಗೀತದೊಂದಿಗೆ ವಿಶಿಷ್ಟವಾದಂತಹ ರಾಗಸಂಯೋಜನೆಗಳನ್ನು ಹುಡುಕುತ್ತಾ ಕಲಿಯುತ್ತಾ ಒಟ್ಟಿನಲ್ಲಿ ಸಂಗೀತ ಲೋಕದಲ್ಲಿ ವಿರಮಿಸದ ಒಂದು ದೈವಶಕ್ತಿಯೆಂದು ಹೇಳಬಹುದು.ಕನರ್ಾಟಕದ ದಾಸರ ಪದಗಳಿಗೆ ಅಷ್ಟೊಂದು ಭಾವಪೂರ್ಣವಾಗಿ ಹಾಡುವವರಲ್ಲಿ ಅದರಲ್ಲೂ ಹಿಂದೂಸ್ಥಾನ ಸಂಗೀತದ ಶೈಲಿಯೊಂದಿಗೆ ಹಾಡುವುದು ಅಸಾಧ್ಯ. ಅಂತಹ ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರು ನಮ್ಮ ಜೋಷಿಯವರು. ಇದರಿಂದ ಸಂಗೀತ ಪ್ರಿಯರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಹಾಗೆಯೇ ಜೋಷಿಯವರ ಕಾರ್ಯಕ್ಷೇತ್ರ ಪುಣಿಯಾಗಿದ್ದರಿಂದ ಮರಾಠಿಯ ಪ್ರಸಿದ್ದ ಸಂತರಾಗಿದ್ದ ಸಂತ ತುಕಾರಾಂ, ಸಂತ ಜ್ಞಾನದೇವ ಮತ್ತಿತರರ ಆಭಂಗಗಳನ್ನು ಹಾಡಿ ಜನಮಾನಸದಲ್ಲಿ ಆಳವಾಗಿ ಪ್ರಭಾವ ಬೀರಿದ್ದಾರೆ. ಭಕ್ತಿ ಮತ್ತು ಶಕ್ತಿ ಜೋಷಿಯವರ ಅವಿಭಾಜ್ಯ ಅಂಗಗಳೆಂಬಂತೆ ಗೋಚರಿಸುತ್ತದೆ. ಇವರ ಗಾಯನದ ಇನ್ನೊಂದು ವಿಶೇಷತೆಯೆಂದರೆ ಆಯಾ ಪ್ರಾದೇಶಿಕ ಭಾಷೆಗಳಿಗೆ ಅನುಗುಣವಾಗಿ ಹಾಡುವಂತಹ ಕೌಶಲ್ಯ ರೂಡಿಸಿಕೊಂಡವರು. ಹಿಂದೂಸ್ಥಾನ ಸಂಗೀತದಲ್ಲಿ ಇವರೇ ಮೊದಲಿಗರು. ಇವರೇ ಹಿಂದೂಸ್ಥಾನ ಸಂಗೀತದಲ್ಲಿ ಕೊನೆಯವರಿರಬಹುದು! ಸಂಗೀತ ಕಛೇರಿಯನ್ನು ನಡೆಸಿಕೊಡುವಾಗ ಬಹಳ ಭಾವಪೂರ್ಣವಾಗಿ ಹಾಡುತ್ತಿದ್ದರು. ಸಂಗೀತವನ್ನು ಆಲಿಸುತ್ತಿದ್ದ ಸಮಸ್ಥ ಜನಸ್ಥೋಮವನ್ನು ತಮ್ಮದೇ ಆದ ಸ್ವರಲೋಕಕ್ಕೆ ಕೊಂಡೊಯ್ಯುವಂತಹ ಶಕ್ತಿ ಪಂಡಿತ ಭೀಮಸೇನ್ ಜೋಷಯವರಲ್ಲಿ ಇತ್ತೇಂದು ಹೇಳಬಹುದು.ಸಪ್ತಸಾಗರದಾಚೆ ಮೂಡಿಬಂದ ಜೋಷಿಯವರ ಗಾನ ಸುಧೆ.ಪಂಡಿತ ಭೀಮಸೇನ್ ಜೋಷಿಯವರು ಮೊಟ್ಟಮೊದಲ ಬಾರಿಗೆ ವಿದೇಶದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡಿದ್ದು 1964ರಂದು ಅಪಘಾನಸ್ತಾನದಲ್ಲಿ ಈ ಪ್ರಥಮ ವಿದೇಶಿ ಕಾರ್ಯಕ್ರಮದ ಹಿಂದೆ ಒಂದು ರೋಚಕ ಹಿನ್ನೆಲೆಯಿದೆ. ಒಮ್ಮೆ ಅಪಘಾನಸ್ತಾನದ ದೊರೆ ಝಹೀರ್ಷಾಹನ ಮಗಳು ಇಂಗ್ಲೇಂಡಿನಲ್ಲಿ ವಿದ್ಯಾಬ್ಯಾಸವನ್ನು ಮಾಡುತ್ತಿದ್ದಾಗ ಕ್ಯಾಸೆಟ್ ಮಳಿಗೆಯೊಂದರಲ್ಲಿ ಜೋಷಿಯವರ ಶುದ್ದ ಕಲ್ಯಾಣ ಮತ್ತು ಲಲಿತ ರಾಗಗಳ ಕ್ಯಾಸೆಟ್ಗಳನ್ನು ಕೇಳಿ ಆನಂದಿಸಿ ಪುಳಕಿತರಾಗಿದ್ದರಂತೆ. ಪಂಡಿತ ಜೋಷಿಯವರ ರಾಗಗಳ ಶೈಲಿಯಲ್ಲಿ ಏನೋ ಆಹ್ಲಾದಕರ ಭಾವನೆಯನ್ನು ದೊರೆಯ ಮಗಳ ಮನದಲ್ಲಿ ಮೂಡಿತ್ತು. ಇದಾದ ಕೆಲವು ತಿಂಗಳುಗಳ ತರುವಾಯ ಸಂಸ್ಕೃತಿಕ ವಿನಮಯದ ಕಾರ್ಯಕ್ರಮದ ಅಂಗವಾಗಿ 15ದಿನಗಳ ಮಟ್ಟಿಗೆ ಕಾಬೂಲ್ಗೆ ಕಳುಹಿಸಲ್ಪಟ್ಟ ಭಾರತದ ನಯೋಗದಲ್ಲಿ ಪಂಡಿತ ಜೋಷಿಯವರ ಹೆಸರನ್ನು ಸೂಚಿಸಿಲಾಗಿತ್ತು. ವಿಪಯರ್ಾಸವೆಂದರೆ ಅಪಘಾನಸ್ಥಾನದ ದೊರೆ ಝಹೀರ್ಷಾಹನ ಮಗಳ ಒತ್ತಾಯದ ಮೇರೆಗೆ ಪಂಡಿತ ಜೋಷಿಯವರ ಹೆಸರನ್ನು ಸೇರಿಸಲಾಗಿತ್ತು. ಇಷ್ಟೊಂದು ಉತ್ಸುಕವಾಗಿ ದೊರೆಯ ಮಗಳು ಜೋಷಿಯವರ ಸಂಗೀತವನ್ನು ಕೇಳಲು ಕಾರಣವೆಂದರೆ ಅವರು ಇಂಗ್ಲೇಂಡಿನಲ್ಲಿಯೇ ಅವರ ಅಭಿಮಾನಯಾಗಿದ್ದರು. ಅದಾದ ನಂತರ ಯುರೋಪ ಖಂಡದ ಹಲವು ರಾಷ್ಟ್ರಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.ಈ ಒಂದು ರೋಚಕ ಹಿನ್ನಲೆಯನ್ನು ಅವಲೋಕಿಸಿದಾಗ ಜೋಷಿಯವರ ಗಾಯನದಲ್ಲಿ ಎಂತಹ ಶಕ್ತಿ ಇತ್ತೆಂದು ತಿಳಿದುಬರುತ್ತದೆ. ಹೀಗೆ ದೇಶವಿದೇಶಗಳಲ್ಲಿ ಭಾರತದ ಹೆಸರು ಉತ್ತುಂಗಕ್ಕೆ ಕೊಂಡೊಯ್ಯದ ಕೀತರ್ಿ ಜೋಷಿಯವರಿಗೆ ಸಲ್ಲುತ್ತದೆ.ಸಂಗೀತ ಲೋಕದಲ್ಲಿ ಸಾಧನೆಗೈದಂತಹ ಜೋಷಿಯವರ ನಧನ ಭರಿಸಲಾಗದ ನಷ್ಟ. ಈ ಘಟನೆ ಕೇವಲ ಸಂಗೀತ ಪ್ರಿಯರಿಗೆ ಮಾತ್ರವಲ್ಲದೇ ಭಾರತದ ಸಮಸ್ಥ ನಾಗರೀಕರಿಗೆ ಅರಗಿಸಿಕೊಳ್ಳಲಾಗದ ಶೋಕವಾಗಿದೆ.ಭೀಮಸೇನ್ ಜೋಷಿಯವರು ಮತ್ತೊಮ್ಮೆ ಹುಟ್ಟಿ ಬರಲೆಂದು ನಾವೆಲ್ಲರೂ ಹಾರೈಸೋಣ....ವಿಜಯ ಹಟ್ಟಿ.

No comments:

Post a Comment

Thanku