Tuesday, February 22, 2011

ದೇವದುರ್ಗ ಮರಳು ಮಾಫಿಯಾ!



ದೇವದುರ್ಗ ಮರಳು ಮಾಫಿಯಾ!ಹಗಲಿರುಳು ನೈಸಗರ್ಿಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರ ಮೇಲೆ ಜಿಲ್ಲಾಡಳಿತ ನಿಗಾ ಇಡಬೇಕು. ಅಕ್ರಮ ಮರಳುಗಳ್ಳರಿಂದ ಬರಿದಾಗುತಿರುವ ಕೃಷ್ಣೆಯ ಒಡಲನ್ನು ರಕ್ಷಿಸಬೇಕು. ತಾಲೂಕಿನಲ್ಲಿನ ನೈಸಗರ್ಿಕ ಸಂಪನ್ಮೂಲದ ಬಳಕೆಗೆ ಅಗತ್ಯ ಕ್ರಮಗಳನ್ನು ಜಾರಿ ಮಾಡಿ ತಪ್ಪಿತಸ್ಥರನ್ನು ಈ ನೆಲದ ಕಾನೂನಿನಡಿ ಶಿಕ್ಷಿಸಬೇಕೆಂದು ನಮ್ಮ ಪ್ರತಿನಿಧಿ ಅಲಿಮೌಲಾನ ಒತ್ತಾಯಿಸುತ್ತಾರೆ.ದೇಶದ ಅಪಾರ ನೈಸಗರ್ಿಕ ಸಂಪತ್ತನ್ನು ರಾಷ್ಟ್ರಮಟ್ಟದಲ್ಲಿ ಅಂಬಾನಿಗಳು ಲೂಟಿ ಹೊಡೆಯುತ್ತಿದ್ದರೆ, ರಾಜ್ಯದಲ್ಲಿ ಕಳ್ಳರೆಡ್ಡಿಗಳು ಅಕ್ರಮವಾಗಿ ಇದ್ದಬಿದ್ದ ಖನಿಜ ಸಂಪತ್ತನ್ನೆಲ್ಲ ಖಾಲಿ ಮಾಡುತ್ತಿದ್ದಾರೆ. ದೇಶದ ನೈಸಗರ್ಿಕ ಸಂಪತ್ತು ಬೇನಾಮಿಯಾಗಿ ಲೂಟಿಯಾಗುತ್ತಿರುವಾಗ ನಾವೇಕೆ ಸುಮ್ಮನೆ ಕುಳಿತುಕೊಳ್ಳಬೇಕೆಂದು ತಿಳಿದು ದೇವದುರ್ಗ ತಾಲೂಕಿನ ಕೆಲವು ಅಡ್ಡಕಸಬಿಗಳು ಅಕ್ರಮವಾಗಿ ಮರಳನ್ನು ಸಾಗಿಸುವ ದಂಧೆಗೆ ಕಂಕಣಬದ್ದವಾಗಿ ನಿಂತಿದ್ದಾರೆ.ಜಿಲ್ಲೆಯಲ್ಲಿಯೇ ಅತಿಹೆಚ್ಚು ನೈಸಗರ್ಿಕ ಸಂಪನ್ಮೂಲಗಳನ್ನು ಹೊಂದಿರುವ ದೇವದುರ್ಗ ಕೃಷ್ಣಾ ನದಿ ದಂಡೆಯ ಮೇಲಿನ ಒಂದು ಶಾಪಗ್ರಸ್ಥ ತಾಲೂಕು. ಇಲ್ಲಿನ ಜನರು ಕೃಷಿಯನ್ನು ಅವಲಂಭಿಸಿದ್ದರೂ ರಾಜಕೀಯದಲ್ಲಿ ಮಾತ್ರ ಬಹುಚಾಣಾಕ್ಷರು. ಎಲ್ಲಿ ಚಾಣಾಕ್ಷತೆ, ಆಧುನಿಕತೆ ಬೆಳೆದಿರುತ್ತದೆಯೋ ಅಂತಲ್ಲಿ ಅಷ್ಟೇ ವೇಗವಾಗಿ ಅನೈತಿಕತೆ, ಅಕ್ರಮ, ಅನಕ್ಷರತೆ ಬೆಳೆದು ನಿಂತಿರುತ್ತದೆ. ದೇವದುರ್ಗ ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರವೆಂಬ ಭೂತಗಳು ಜನಸಾಮಾನ್ಯರಿಂದಿಡಿದು ಎಲ್ಲರನ್ನು ಆವರಿಸಿವೆ. ಅಂತೆಯೇ ಈ ಬಾರಿ ನಾವುಗಳು ದೇವದುರ್ಗ ತಾಲೂಕಿನ ನದಿದಂಡೆಯ ಬಳಿ ನಡೆಯುವ ಅಕ್ರಮ ಮರಳುಗಾರಿಕೆಯ ಅಕ್ರಮವನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದೇವೆ. ಕೃಷ್ಣಾನದಿಯ ದಂಡೆಯ ಗ್ರಾಮಗಳಲ್ಲಿ ಕೆಲವರು ಸಕರ್ಾರದಿಂದ ಅನುಮತಿಯನ್ನು ಪಡೆದು ಮರಳನ್ನು ಸಾಗಿಸುತ್ತಿದ್ದಾರೆ. (ಕಾನೂನಾತ್ಮಕವಾಗಿ ಮರಳು ಹರಾಜು ಪಡೆದವರ ಮೇಲೆ ನಮ್ಮದೇನು ತಕರಾರು ಇಲ್ಲ.) ಆದರೆ, ಅಧಿಕೃತವಾಗಿ ಪರವಾನಿಗೆಯನ್ನು ಪಡೆದುಕೊಂಡವರ ಹೆಸರುಗಳನ್ನು ಬಳಸಿಕೊಂಡು 1ಅನುಮತಿಗೆ 10ಜನರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರಲ್ಲ ಆ ಕುರಿತು ನಮ್ಮದೊಂದು ಆಕ್ಷೇಪಣಿ ಇದೆ.ನಾವು ಮೊನ್ನೆ ದೇವದುರ್ಗದ ಕೃಷ್ಣಾನದಿ ದಂಡೆಯ ಹೂವಿನಹೆಡಗಿ, ಜೋಳದಹೆಡಗಿ, ಕೊಪ್ಪರ, ಮೆದರ್ಗೋಳ, ಕೊಣಚಪ್ಪಳ, ಗೂಗಲ್ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದೇವು.ನದಿ ದಂಡೆಯ ಸುತ್ತ ನಾವು ಎತ್ತ ದೃಷ್ಟಿ ಹಾಯಿಸಿದರೂ ಲಾರಿ, ಟ್ರಾಕ್ಟರ್, ಜೀಪ್ಗಳು. (ಅಲ್ಲೊಂದು ಸಣ್ಣಕೈಗಾರಿಕೆಯೇ ಆರಂಭವಾಗಿರಬೇಕು ಎಂಬಂಥೆ ಬಾಸವಾಗುತ್ತದೆ) ಇನ್ನೊಂದೆಜ್ಜೆ ಮುಂದೊದರೆ ಅಲ್ಲೆಲ್ಲ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮರಳು ಸಾಗಿಸುವವರ ಹತ್ತಾರು ಜಾಲಗಳು ಕಣ್ಣಿಗಳು ಬೀಳುತ್ತವೆ. ಅಲ್ಲಿ ಒಂದೊಂದು ಗುಂಪಿನಲ್ಲಿ ಹತ್ತಾರು ಕೆಲಸದಾಳುಗಳು, ಅವರನ್ನು ನೋಡಿಕೊಳ್ಳಲು ಇಬ್ಬರು ಬಾಡಿಗೆದಾರರು. ಬಾಡಿಗೆದಾರನ ಮೇಲೆ ಅಕ್ರಮವಾಗಿ ಮರಳು ಸಾಗಿಸುವ ಮಾಲೀಕನಿರುತ್ತಾನೆ. ಯಾರಾದರೂ ಹೋಗಿ ಏನ್..ಸಾರ್.. ನೀವೆನು ಮಾಡುತ್ತಿದ್ದೀರಿ.. ಇಲ್ಲಿ ಯಾಕೆ.. ಇಷ್ಟು ಆಳದಲ್ಲಿ ಮರಳನ್ನು ತೆಗೆಯುತ್ತಿದ್ದೀರಿ ಎಂದು ಪ್ರಶ್ನಿಸಿದರೆ, ನೀವೇನು ಪ್ರೇಸ್ನವರಾ..? ಯಾರು ನಿಮ್ಮ ಸಂಪಾದಕ..? ಯಾವುದು ನಿಮ್ಮ ಪೇಪರ್ ಅಂತ ಕೇಳುತ್ತಾ ಡೀಲ್ಗೆ ಇಳಿಯುತ್ತಾರೆ.ದುರಂತ ನೋಡಿ. ಒಬ್ಬ ಸಾಮಾನ್ಯ ಮನುಷ್ಯ ಪ್ರಶ್ನೆ ಮಾಡಿದರೂ ಅಕ್ರಮವಾಗಿ ಮರಳು ಸಾಗಿಸುವವರು ನೀವು ಪ್ರೇಸ್ನವರಾ ಅಂತ ಕೇಳುತ್ತಿದ್ದಾರೆನದಿ ದಂಡೆಯ ಮರಳನ್ನು ಅಕ್ರಮವಾಗಿ ಬೇರೆಡೆ ಸಾಗಿಸಲು ಪೊಲೀಸ್ ಇಲಾಖೆ ಜೊತೆ ಸಂಬಂಧಪಟ್ಟ ಇಲಾಖೆಗಳು ಅಸ್ತು ಎಂದಿವೆ. ಮೊನ್ನೆ ಮಸರಕಲ್ ಜಿ.ಪಂನಿಂದ ಆಯ್ಕೆಯಾದ ದೊಂಡಂಬಳಿಯ ಶರಣಬಸವ ನಾಯಕ ಎಂಬಾತ ಒಂದು ಮಾಹಿತಿಯಂತೆ ನದಿ ದಂಡೆಯ ಎಲ್ಲ ಅಕ್ರಮ ಮರಳುಗಾರಿಕೆಯನ್ನು ನೋಡಿಕೊಳ್ಳುತ್ತಾನೆಂಬ ಗುಮಾನಿ ಇದೆ. (ಕಾರಣ ಈತ ಶಿವನಗೌಡನ ಸಂಬಂಧಿಯಂತೆ) ಈ ಮೊದಲು ಪಂಚಾಯತಿಯೊಂದರ ಅಧ್ಯಕ್ಷನಾಗಿದ್ದ ಶರಣಬಸವ ಹತ್ತಾರು ಅವ್ಯವಹಾರ, ಭ್ರಷ್ಟಾಚಾರಗಳನ್ನು ಮಾಡುತ್ತಲೇ ಬಂದಿದ್ದಾನೆ. ಆಗ ಶಿವನಗೌಡರು ಮಂತ್ರಿಯಿದ್ದಾಗ ಶರಣಬಸವ ತಾಲೂಕಿನಲ್ಲಿ 'ಮರಿಮಂತ್ರಿ'ಯಾಗಿ ದಬರ್ಾರ್ ನಡೆಸಿದ್ದಾನೆ.ಸಧ್ಯ ದೇವದುರ್ಗದಲ್ಲಿ ನಡೆಯುವ ಹತ್ತಾರು ಅಕ್ರಮ ದಂಧೆಗಳಲ್ಲಿ ಶರಣಬಸವನ ಹೆಸರು ಪ್ರಥಮ ಸ್ಥಾನದಲ್ಲಿದೆ. 30ಅರಿಯದ ಹುಡುಗನೊಬ್ಬ (ಶಿವನಗೌಡನ ಸಂಬಂಧಿಯೆಂದು) ತಾಲೂಕಿನಲ್ಲಿ ಮನಬಂದಂತೆ ಕುಣಿಯುತ್ತಾನೆಂದರೆ ಪೊಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತಿದೆ.ಇನ್ನೊರ್ವ ಸಿ.ಎಸ್ ಪಾಟೀಲ್ ಎಂಬ ಇಸ್ಪೀಟ ರಾಜ ಸಧ್ಯ ದೇವದುರ್ಗ ಕಮಲ ಪಕ್ಷದ ನಾಯಕ. ಶಿವನಗೌಡ ಹಿಂದೆ ಮಂತ್ರಿ ಇದ್ದಾಗ ಆತನ ಕೆಂಪುಗೂಟದ ಕಾರಿನಿಂದ ತಿರುಗಾಡುತ್ತಿದ್ದ. ಶಿವನಗೌಡನಿಗೆ ಮಂತ್ರಿಗಿರಿ ಕೊಡುವಾಗ ಸಿ.ಎಸ್ ಪಾಟೀಲ್ನೇ ಸ್ವತಃ 100ವಾಹನಗಳನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಆದರೆ, ಇಂದು ಸಿ.ಎಸ್ ಪಾಟೀಲ್ ಮತ್ತು ಶಿವನಗೌಡ ಪಕ್ಷದಿಂದ ತಾತ್ವಿಕವಾಗಿ ದೂರವಿದ್ದರೂ ವ್ಯವಹಾರಗಳಲ್ಲಿ ಮಾತ್ರ ಪಕ್ಕಾ ದೋಸ್ತಿಗಳೆ. ನದಿ ದಂಡೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಲ್ಲಿ ಸಿ.ಎಸ್ ಪಾಟೀಲ್ನ ಸಹೋದರರು ತೊಡಗಿಕೊಂಡಿದ್ದಾರೆ.ರಾಜ್ಯ ಸಕರ್ಾರ ಮತ್ತು ಹೈಕೋಟರ್್ಗಳ ಆದೇಶವನ್ನು ಉಲ್ಲಂಘಿಸಿ ಆಳದಲ್ಲಿ ಮರಳನ್ನು ತೆಗೆಯುತ್ತಿದ್ದಾರೆ. ಇಲ್ಲಿ ತೆಗೆದ ಮರಳನ್ನು ಅನುಮತಿಯಿಲ್ಲದೇ ಬರೀ ಲಂಚದಿಂದಲೇ ಪಕ್ಕದ ಆಂಧ್ರ, ಮಹಾರಾಷ್ಟ್ರಗಳಿಗೆ ರವಾನೆ ಮಾಡುತ್ತಿದ್ದಾರೆ.ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದರೂ ತುಟಿಪಿಟಕೆನ್ನದೇ ಮೌನಕ್ಕೆ ಜಾರಿದ್ದಾರೆ. ಬಳ್ಳಾರಿಯಲ್ಲಿ ವಿಭಾಗೀಯ ಕಛೇರಿಯನ್ನು ಹೊಂದಿರುವ ಅಧಿಕಾರಿಗಳು ಒಮ್ಮೆಯಾದರೂ ನದಿ ದಂಡೆಯ ವೀಕ್ಷಣಿಗೆ ಬಂದಿಲ್ಲ! ಕಾರಣ ಇದ್ದಲ್ಲಿಗೆ ಇಲ್ಲಿನ ಅಕ್ರಮ ಮರಳುದಾರರು ಮಾಮೂಲನ್ನು ಕಳುಹಿಸುತ್ತಾರೆ. ಎಂಜಲು ಬಳ್ಳಾರಿಗೆ ಬಂದ ಮೇಲೆ ಅಧಿಕಾರಿಗಳಾದರೂ ಯಾಕೆ ಬರುತ್ತಾರೆ?ಪೊಲೀಸರು ಹಾಗೂ ಚೆಕ್ಪೋಸ್ಟ್ನವರಿಗೆ 10ಕೊಡುವಲ್ಲಿ 50ಕೊಟ್ಟರೆ ಸಾಕು ಲಾರಿಗೆ ದಾಖಲೆಗಳಿವೆಯೋ, ಡ್ರೈವರ್ಗೆ ಲೈಸನ್ಸ್ ಇದೆಯೋ, ಇಲ್ಲವೋ ಯಾವುದನ್ನು ಪರಿಶೀಲನೆ ಮಾಡುವುದಿಲ್ಲ.ಹೀಗಾಗಿ ದೇವದುರ್ಗದ ಬಲಿತ ಅಕ್ರಮ ಮರಳುದಾರರು ಹೊಡಿಮಗಾಹೊಡಿಮಗಾ ಅಂತ ಮರಳು ಸಾಗಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಸಾಗಿಸುವವರ ಕೈಗೆ ಸಿಕ್ಕು ನದಿ ದಂಡೆ ಬರಿದಾಗುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ಇದೊಂದು ಜಾಲ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ.ಪ್ರತಿಯೊಬ್ಬನಿಗೂ ಮರಳಿನ ಅವಶ್ಯಕತೆ ಇದೆ. ಕಾರಣ ವಾಸಿಸಲು ಮನೆಯಿಂದಿಡಿದು ಪ್ರತಿಯೊಂದನ್ನು ನಿಮರ್ಿಸಿಕೊಳ್ಳಲು ಮರಳಿನ ಮೊರೆ ಹೋಗಬೇಕಾಗಿದೆ.ಯಾರಿಗೆ ಯಾವುದು ಅನಿವಾರ್ಯವಿದೆಯೋ, ಅದನ್ನೇ ಬಂಡವಾಳ ಮತ್ತು ಅವಕಾಶವೆಂದು ತಿಳಿದು ಶರಣಬಸವನಾಯಕನಂತಹ ಅನೇಕ ಅಡ್ಡಕಸಬಿಗಳು ಮರಳು ಮಾಫಿಯಾಕ್ಕೆ ಕೈಹಾಕಿದ್ದಾರೆ.ಹಲವಾರು ಅಕ್ರಮ, ಅವ್ಯವಹಾರಗಳ ಸರದಾರನಾದ ಶರಣಬಸವನಾಯಕ ಸಧ್ಯ ಮಸರಕಲ್ ಜಿ.ಪಂನ ಜೆ.ಡಿ.ಎಸ್ ಸದಸ್ಯ. ಈತ ತನ್ನ ವ್ಯವಹಾರಗಳಿಗೆ ಅಡ್ಡಿಯಾಗಬಾರದೆಂದು ಪೊಲೀಸ್, ಪುಡಾರಿ ಪೊಲಿಟಿಷಿಯನ್, ಪ್ರೇಸ್, ಸಂಘಸಂಸ್ಥೆಯವರಿಗೆಲ್ಲ ಮಾಮೂಲಿ ನೀಡುತ್ತಾನಂತೆ.ಈತನ ಅಕ್ರಮ ದಂಧೆಗೆ ಪೊಲೀಸರು ಅಡ್ಡಗಾಲಾಗಬಾರದೆಂಬ ಕಾರಣಕ್ಕೆ ಸದಾ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕವನ್ನು ಬೆಳೆಸಿಕೊಂಡಿರುತ್ತಾನೆ.ಸಂದಭರ್ಾನುಸಾರವಾಗಿ ಈತನ ಪರವಾಗಿ ಜೈ..ಜೈ ಎನ್ನಬೇಕೆನ್ನುವ ಸಲುವಾಗಿ ಪುಡಾರಿ ಪೊಲಿಟಿಷಿಯನ್ಗಳಿಗೆ ಆಗಾಗ ಎಂಜಲು,ವ್ಯವಹಾರದಲ್ಲಿ ಏನಾದರೂ ಹೆಚ್ಚು ಕಡಿಮೆಯಾದಾಗ ಅದು ಪ್ರೇಸ್ನ ತನಕ ಹೋಗಬಾರದೆಂದು ಅಳಿದುಳಿದ ನಿರಾಶ್ರಿತ ಪತ್ರಕರ್ತರಿಗೂ ಆಗಾಗ ಪ್ರಸಾದವನ್ನು ನೀಡುತ್ತಾನೆ.ಕೆಲವು ದಿನಗಳ ಹಿಂದೆ ಮರಿಮಂತ್ರಿ ಎಂದು ಖ್ಯಾತಿಯಾಗಿದ್ದ ಶರಣಬಸವ ದೇವರಿಗೆ ಬಿಟ್ಟ ಗೂಳಿಯಂತೆ ಕಂಡಕಂಡವರಿಗೆ ಇರಿದುಕೊಂಡು ತಿರುಗುತ್ತಿದ್ದಾನೆ. ಬೆಳೆಯುವ ಸಿರಿಗೆ ಇದು ಸರಿಯಾದ ಬೆಳವಣಿಗೆ ಅಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೆಂದೆವನು ನಿಣರ್ಾಮ ಆಗಿದ್ದಾನೆ. ನಾವೆಂದವರು ಪ್ರತಿಮೆಯಾಗಿ ನಿಂತಿದ್ದಾರೆ. ಶಿವನಗೌಡನ ತನ್ನ ಸಂಬಂಧಿಯೆಂದು ತಿಳಿದು ಗೌಡನ ರೀತಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ, ಗೌಡನಿಗಾದ ಗತಿ ಶರಣಬಸವ ನಿನಗೂ ಬರಬಹುದು. ಸಧ್ಯ ಜಿ.ಪಂನಲ್ಲಿ ನಿನೊಬ್ಬ ಸದಸ್ಯ. ಸ್ವಲ್ಪ ಎಚ್ಚರಿಕೆಯಿಂದ ನಿನ್ನ ಜಿ.ಪಂ ವ್ಯಾಪ್ತಿಯನ್ನು ಅಭಿವೃದ್ಧಿ ಮಾಡಿಕೊ, ಆ ಅಭಿವೃದ್ಧಿ ಕೆಲಸ ನಿನ್ನನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತವೆ. ಅದನ್ನು ಬಿಟ್ಟು ಗೂಳಿಯಂತೆ ಎಲ್ಲರಿಗೆ ಇರಿದುಕೊಂಡು ತಿರುಗಿದರೆ, ಸುಣ್ಣದ ನೀರು ಕುಡಿಸುವುದು ಖಚಿತ. ಅದರೊಳಗೆ ಎಚ್ಚರಗೊಂಡರೆ ಒಳಿತು.ಅಲಿಮೌಲಾನ ದೇವದುರ್ಗ

No comments:

Post a Comment

Thanku