Tuesday, February 22, 2011

ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು



ದಕ್ಷಿಣ ಕನ್ನಡದಲ್ಲಿ ಅರಾಜಕತೆ ನಿಮರ್ಾಣವಾಗಲು ಕಾಂಗೈ-ಬಿಜೆಪಿಗಳೇ ನೇರ ಕಾರಣ. ಇಲ್ಲಿಯವರೆಗೆ ಇವೆರಡು ಪಕ್ಷಗಳು ಕರಾವಳಿ ಭಾಗವನ್ನು ಹೊಡೆದಾಳಿವೆ. ಅದೆಲ್ಲದರ ಫಲವಾಗಿ ದಕ್ಷಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶ ಇಂದು ಸದಾ ಕೋಮುಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಎಂದು ವ್ಯಾಖ್ಯಾನಿಸುತ್ತಾರೆ ಪ್ರಜಾವಾಣಿಯ 'ಅನಾವರಣ' ದ ಹೆಸರಾಂತ ಅಂಕಣಕಾರ ದಿನೇಶ ಅಮೀನ್ಮಟ್ಟು.ಕೂಡಿ ಕಟ್ಟಿದ್ದನ್ನು ಒಡೆದು ಮುರಿದರುದೇಶ ನೊಡು, ಕೋಶ ಓದು ಎನ್ನುತ್ತಾರೆ ಹಿರಿಯರು, ವಿಶಾಲದೃಷ್ಟಿಕೋನ ಬೆಳೆಸಿಕೊಳ್ಳಲು. ಕನರ್ಾಟಕದಲ್ಲಿಯೇ ಯಾಕೆ, ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ದೇಶ ನೋಡಿದ ಮಂದಿಯ ಜಿಲ್ಲೆಯೊಂದಿದ್ದರೆ ಅದು ವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಸಾಕ್ಷರತಾ ಪ್ರಮಾಣದ ಲೆಕ್ಕದಲ್ಲಿ ಕೋಶ ಓದಿದವರ ಸಂಖ್ಯೆಯಲ್ಲಿಯೂ ಆ ಜಿಲ್ಲೆಯೇ ಪ್ರಥಮ ಎನ್ನಬಹುದು. ಬುದ್ದಿವಂತರು, ಸಾಹಸಿಗಳು, ಉದ್ಯಮಶೀಲ ಪ್ರವೃತ್ತಿಯವರು ಎಂಬಿತ್ಯಾದಿ ಖ್ಯಾತಿಗಳ ಜತೆ ದಕ್ಷಿಣ ಕನ್ನಡಿಗರಿಗೆ ಮೊದಲಿನಂದಲೂ ಅಂಟಿಕೊಂಡ ಒಂದಷ್ಟು ಕುಖ್ಯಾತಿಗಳೆಂದರೆ ಬಲು ಲೆಕ್ಕಾಚಾರದ ಮಂದಿ, ಶೋಮ್ಯಾನ್ಗಳು, ಸಾಮಾಜಿಕ ಸ್ಪಂದನ ಇಲ್ಲದ ಬೂಜ್ವರ್ಾಗಳು ಎನ್ನುವುದು ಮಾತ್ರ. ಆದರೆ ದ.ಕ ಮಂದಿಯನ್ನು ಎಂದೂ, ಯಾರೂ, ತಪ್ಪಿಯೂ ಕೂಪ ಮಂಡೂಕಗಳು ಎಂದೋ ಆಧುನಕತೆಯ ವಿರೋಧಿಗಲು ಎಂದೋ ಟೀಕಿಸಿದ್ದಿಲ್ಲ. ಆದರೆ ವಿಪಯರ್ಾಸ ಎಂಬಂತೆ ಇಂದು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುದ್ದಿಯಾಗಿರುವುದು ಆಧುನಕತೆಯನ್ನು ವಿರೋಧಿಸುತ್ತಿರುವ ತಾಲಿಬಾನ್ ಮನೋಸ್ಥಿತಿ ಯಿಂದಾಗಿ.ಅನ್ಯರು ಅಸೂಯೆಪಡುವಂತೆ ಬೆಳೆದು ನಂತ ಮನಯಾರ್ಡರ್ ಆಥರ್ಿಕತೆಯ ಆಧುನಕ ದಕ್ಷಿಣ ಕನ್ನಡವನ್ನು ಹಿಂದೂ, ಕ್ರೈಸ್ತರು ಮತ್ತು ಮುಸ್ಲಿಂರು ಕೂಡಿಯೇ ಕಟ್ಟಿದ್ದಾರೆ. ಅದರಲ್ಲಿ ಸಕರ್ಾರದ ಪಾತ್ರ ಗೌಣ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಕೊಡುಗೆ ಜನಜನತ. ಬ್ಯಾರಿಗಳೆಂದೇ ಕರೆಯಲಾಗುವ ಅಲ್ಲಿನ ಮುಸ್ಲೀಮರು ಹುಟ್ಟು ವ್ಯಾಪಾರಿಗಳು, ಉಳಿದೆಡೆಯ ಬಡಮುಸ್ಲಿಂ ಎನ್ನುವ ಹಣಿಪಟ್ಟಿ ಅವರಿಗಿಲ್ಲ. ಈ ಎರಡು ಧರ್ಮಗಳ ಯುವಕರು ಕೊಲ್ಲಿ ದೇಶಗಳಿಗೆ ಹೋಗಿ ದುಡ್ಡು ಸಂಪಾದಿಸಿ ದ.ಕ.ದ ಆಥರ್ಿಕ ಕ್ಷೇತ್ರವನ್ನು ಬೆಳೆಸಿದರೆ, ಹಿಂದೂಗಳಲ್ಲಿನ ಬ್ರಾಹ್ಮಣ, ಬಂಟ, ಬಿಲ್ಲವರು ಹೊರರಾಜ್ಯಗಳಿಗೆ ಹೋಗಿ ಹೋಟೆಲ್ ಉದ್ಯಮದ ಮೂಲಕ ದುಡ್ಡು ಗಳಿಸಿ ತಂದು ಊರಲ್ಲಿ ಸುರಿಯುತ್ತಿದ್ದಾರೆ. ಆಥರ್ಿಕವಾಗಿ ಈ ಮೂರು ಜಾತಿಗಳ ಕುಟುಂಬಗಳು ಒಬ್ಬರಿಗಿಂತ ಇನ್ನೊಬ್ಬರು ಕಡಿಮೆಯೇನಲ್ಲ.ವ್ಯಾಪಾರ-ದಕ್ಷಿಣ ಕನ್ನಡದ ಸಂಕೇತ. ಸಾಂಪ್ರಾದಾಯಿಕವಾದ ಪ್ರತಿಯೊಂದು ವೃತ್ತಿ ವ್ಯಾಪಾರದಲ್ಲಿಯೂ ಜಾತಿ-ಧರ್ಮಗಳು ಅಲ್ಲಿ ಹಾಸುಹೊಕ್ಕಾಗಿದೆ. ಕಡಲಿನಂದ ಮೀನು ಹಿಡಿದು ತರುವವರು ಮೊಗವೀರ ಗಂಡಸರು, ಅದರ ಸಗಟು ಖರೀದಿ ಮಾಡುವವರು ಬ್ಯಾರಿಗಳು, ಬ್ಯಾರಿಗಳಿಂದ ಅದನ್ನು ಖರೀದಿಸಿ ಮನೆ ಮನೆಗೆ ಮಾರುವವರು ಮೊಗವೀರ ಮಹಿಳೆಯರು (ಯಾಂತ್ರಿಕರಣದ ನಂತರ ಈ ವ್ಯವಸ್ಥೆ ಬದಲಾಗಿದೆ.) ಮಂಗಳೂರಿಗೆ ಕಂಪು ನಡುತ್ತಾ ಬಂದ ಮಲ್ಲಿಗೆಯನ್ನು ಬೆಳೆಯುವವರು ಕ್ರಿಶ್ಚಿಯನ್ನರು, ಮಾರುವವರು ಬ್ಯಾರಿಗಳು, ಬೀಡಿ ಕಟ್ಟುವವರು ಹಿಂದೂಗಳು, ಬೀಡಿ ಕಟ್ಟಿಸುವ ಗುತ್ತಿಗೆದಾರರು ಬ್ಯಾರಿಗಳು, ತೆಂಗಿನಕಾಯಿ-ಮಾವು-ಹುಣಸೆಹುಳಿಗಳನ್ನು ಬೆಳೆಯುವವರು ಹಿಂದೂಗಳು, ಅದರ ವ್ಯಾಪಾರ ನಡೆಸುವವರು ಬ್ಯಾರಿಗಳು, ತರಕಾರಿ ಬೆಳೆಯುತ್ತಿರುವವರು ಕ್ರಿಶ್ಚಿಯನರು (ಇದರ ಸಿರಿ ದೈವ ಅವರಿಗೆ ಕೊಟ್ಟ ಅಭಯ) ಬಳಕೆದಾರರು ಹಿಂದೂಗಳು.ವ್ಯಾಪಾರ ಎನ್ನುವುದು ಶಕ್ತಿ ಹೇಗೋ, ಅದು ದ.ಕ ಮಂದಿಯ ದೌರ್ಬಲ್ಯ ಕೂಡಾ ಹೌದು. ಈ ಸತ್ಯವನ್ನು ಮೊದಲು ಅರಿತುಕೊಂಡವರು ಸಂಘಪರಿವಾರದ ನಾಯಕರು. ಒಬ್ಬ ಮುಸ್ಲಿಂ ವ್ಯಾಪಾರಿಯ ದಮನವನ್ನು ಒಬ್ಬ ಹಿಂದೂ ವ್ಯಾಪಾರಿ ಕೇವಲ ಧರ್ಮರಕ್ಷಣಿಯ ದೃಷ್ಟಿಯಿಂದಲ್ಲ, ವ್ಯಾಪಾರದ ಲಾಭದ ದೃಷ್ಟಿಯಿಂದಲೂ ನೋಡುತ್ತಾನೆ ಎನ್ನುವುದು ಅವರಿಗೆ ತಿಳಿದಿತ್ತು. ಪ್ರಾರಂಭದಿಂದಲೂ ದಕ್ಷಿಣ ಕನ್ನಡ ಆರ್.ಎಸ್.ಎಸ್ನ ಚಿಂತಕರ ಚಾವಡಿ. ವ್ಯಾಪಾರದ ಮೂಲಕ ಸಮೃದ್ಧಿಯನ್ನು ಕಂಡ ಕೊಂಕಣಿಗಳು (ಗೌಡಸಾರಸ್ವತ ಬ್ರಾಹ್ಮಣರು) ನಡುತ್ತಿದ್ದ ದೇಣಿಗೆಯಿಂದಾಗಿ ರಾಜ್ಯ ಸಂಘಟನೆಯ ರಿಮೋಟ್ ಕಂಟ್ರೋಲ್ ಕೂಡಾ ದ.ಕ ದಲ್ಲಿಯೇ ಇತ್ತು. ಆದರೆ ಕೊಂಕಣಿ - ಬ್ರಾಹ್ಮಣರಿಂದಾಚೆ ಬೆಳೆಯಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ.ಆದರೆ, ಅಂತಹ ಕಾಲವೊಂದು 70ರ ದಶಕದ ಕೊನೆಯ ಭಾಗದಲ್ಲಿ ಕೂಡಿಬಂತು. ಅದು ದಕ್ಷಿಣ ಕನ್ನಡ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮಗ್ಗಲು ಬದಲಾಯಿಸುತ್ತಿದ್ದ ತುತರ್ುಪರಿಸ್ಥಿತಿಯ ನಂತರದ ಕಾಲ. ಭೂಸುಧಾರಣಿ ಕಾಯಿದೆಯಿಂದಾಗಿ ಅಲ್ಲಿನ ಸಾಮಾಜಿಕ ಸಂಬಂಧಗಳಲ್ಲಿ ಪಲ್ಲಟ ಪ್ರಾರಂಭವಾಗಿತ್ತು. ಅಲ್ಲಿ ಭೂಮಾಲೀಕರಾಗಿದ್ದವರು ಬಂಟರು. ಜೈನರು ಮತ್ತು ಬ್ರಾಹ್ಮಣರು. ಗೇಣಿದಾರರಾಗಿದ್ದವರು ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಯವರು. ಭೂ ಒಡೆತನದ ಜತೆಯಲ್ಲಿಯೇ ದೇವರಾಜ ಅರಸು ಅವರ ರಾಜಕೀಯ ಕ್ಷೇತ್ರದ ಸೋಷಿಯಲ್ ಎಂಜಿನಯರಿಂಗ್ನಂದಾಗಿ ಜಿಲ್ಲೆಯಲ್ಲಿ ಬಂಟರು ಮತ್ತು ಬ್ರಾಹ್ಮಣರ ಕೈಯಲ್ಲಿದ್ದ ರಾಜಕೀಯ ಅಧಿಕಾರ ಕುಡ ಹಿಂದುಳಿದ ಜಾತಿಯ ಬಿಲ್ಲವರು ಮತ್ತು ಅಲ್ಪಸಂಖ್ಯಾತ ಕೋಮುಗಳ ಕಡೆ ಸರಿದುಹೋಗತೊಡಗಿತು.ದಕ್ಷಿಣ ಕನ್ನಡ ಜಿಲ್ಲೆಯನ್ನು ಹಿಂದುತ್ವದ ಪ್ರಯೋಗ ಶಾಲೆ ಮಾಡುವ ಪ್ರಯತ್ನಕ್ಕೆ ಅಡಿಗಲ್ಲು ಬಿದ್ದದ್ದು ಅದೇ ಕಾಲದಲ್ಲಿ. ಆ ಪ್ರಯೋಗಕ್ಕೆ ಹೊರಟವರಿಗೆ ಮೊದಲು ಕಂಡದ್ದು ಮೊಗವೀರ ಸಮಾಜ. ಮೀನು ಹಿಡಿಯುವವರು ಮೊಗವೀರರಾದರೂ ಅದರ ವ್ಯಾಪಾರದಲ್ಲಿ ನಣರ್ಾಯಕ ಪಾತ್ರ ವಹಿಸುತ್ತಿದ್ದವರು ಬ್ಯಾರಿಗಳು. ಆಗಾಗ ಹಣಕಾಸು, ಗಂಡು-ಹೆಣ್ಣಿನ ವಿಷಯದಲ್ಲಿ ಬ್ಯಾರಿಗಳು ಮತ್ತು ಮೊಗವೀರರ ನಡುವೆ ಘರ್ಷಣಿಗಳಾಗುತ್ತಲೇ ಇತ್ತು. ಆದ್ದರಿಂದ ಮುಸ್ಲಿಂರ ವಿರುದ್ಧ ಮೊಗವೀರ ಸಮುದಾಯವನ್ನು ಎತ್ತಿಕಟ್ಟುವುದು ಬಹಳ ಸುಲಭದ ಕೆಲಸವಾಗಿತ್ತು. ರಾಜಕೀಯವಾಗಿ ಮುಸ್ಲಿಂರು ಕಾಂಗ್ರೇಸ್ ಜತೆಯಿದ್ದ ಕಾರಣ ಮೊಗವೀರರು ಬಿಜೆಪಿ ಕಡೆ ವಾಲಿದ್ದು ಸಹಜವಾಗಿಯೇ ಇತ್ತು. ಇದರಿಂದ ಸಂಘ ಪರಿವಾರಕ್ಕೆ ಬಹುದೊಡ್ಡ ಯೋಧರ ಪಡೆ ಸಿಕ್ಕಿಬಿಟ್ಟಿತು.ಈ ರೀತಿ ಕಾಂಗ್ರೇಸ್ ಓಟ್ಬ್ಯಾಂಕ್ನಲ್ಲಿದ್ದ ಎರಡು ಸಂಘಟಿತ ಜಾತಿಗಳಾದ ಬಂಟರು ಮತ್ತು ಮೊಗವೀರರು ಬೇರೆಬೇರೆ ಕಾರಣಗಳಿಂದಾಗಿ ಹೊರ ಕಾಲಿಡತೊಡಗಿದ್ದರು. ಈ ವಲಸೆ ತಡೆಯುವ ಪ್ರಯತ್ನ ಕಾಂಗ್ರೇಸ್ನಲ್ಲಿ ನಡೆಯಲಿಲ್ಲ. ಅರಸು ಅವರ ಅವಸರದ ರಾಜಕೀಯ ಕ್ರಾಂತಿಯಿಂದಾಗಿ ಜಿಲ್ಲೆಯಲ್ಲಿ ವೀರಪ್ಪ ಮೊಯ್ಲಿ ಮತ್ತು ಜನಾರ್ಧನ ಪೂಜಾರಿ ಎಂಬ ಇಬ್ಬರು ನಾಯಕರು ಹುಟ್ಟಿಕೊಂಡರು. ಕೆಲಕಾಲದ ನಂತರ ಟಿ.ಎ.ಪೈ ಅವರನ್ನು ಸೋಲಿಸಿ ಆಸ್ಕರ್ ಪನರ್ಾಂಡಿಸ್ ಪ್ರವೇಶ ಮಾಡಿದರು. ಹೆಚ್ಚು ಕಡಿಮೆ ಕಳೆದ ಮೂವತ್ತು ವರ್ಷಗಳಿಂದ ಈ ಮೂವರು ನಾಯಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೇಸ್ ಪಕ್ಷವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡಿದ್ದರು. ಪಕ್ಷ ಸೋತು ನೆಲ ಹಿಡಿದರೂ ಈ ತ್ರಿಮೂತರ್ಿಗಳು ಮುಷ್ಟಿ ಸಡಿಲಿಸುತ್ತಿರಲಿಲ್ಲ.ಕಾಂಗ್ರೇಸ್ ಹೈಕಮಾಂಡ್ನ ಸಖ್ಯದಿಂದಾಗಿ ಮೂವರು ಎತ್ತರಕ್ಕೆ ಬೆಳೆದರೆ ಹೊರತು ಆಳ-ಅಗಲಕ್ಕೆ ಬೇರು ಬಿಟ್ಟು ಜನನಾಯಕರಾಗಲಿಲ್ಲ. ಬೆಳೆಸಿದ್ದು ಕೂಡ ಒಂದಷ್ಟು ಚೇಲಾಗಳನ್ನಷ್ಟೇ ಹೊರತು ನಾಯಕರನ್ನಲ್ಲ. ಇವರು ಪರಸ್ಪರ ಕಾದಾಟದಲ್ಲಿ ತಮ್ಮ ಶಕ್ತಿ ಪೋಲು ಮಾಡುತ್ತಿದ್ದರೆ ಅತ್ತಕಡೆ ಖಾಲಿ ಇದ್ದ ಜಾಗದಲ್ಲಿ ಬಿಜೆಪಿ ಸೊಂಪಾಗಿ ಬೇರು ಬಿಡತೊಡಗಿತ್ತು. ಪೂಜಾರಿ ಮತ್ತು ಮೊಯಿಲಿ ಮೂರು ಲೋಕಸಭಾ ಚುನಾವಣಿಗಳಲ್ಲಿ ಸೋತಿದ್ದಾರೆ. (ಸಧ್ಯ ದೊಡ್ಡಬಳ್ಳಾಪುರದಿಂದ ಗೆದ್ದಿರುವ ಮೊಯ್ಲಿ ಕೇಂದ್ರದ ಕಾನೂನು ಮಂತ್ರಿ) ನಾಲ್ಕು ಬಾರಿ ಗೆದ್ದ ಆಸ್ಕರ್ ಒಂದೇ ಒಂದು ಸೋಲಿನಂದ ಕಂಗೆಟ್ಟು ದೆಹಲಿಗೆ ಓಡಿಹೋದವರು ಮತ್ತೇ ನೇರ ಚುನಾವಣಿ ಎದುರಿಸುವ ಧೈರ್ಯ ಮಾಡಿಲ್ಲ. ದೊಡ್ಡ ಜಾತಿಯ ಹೊರೆ ಇಲ್ಲದ ಮೊಯ್ಲಿ ಅವರಿಗೆ ಅರಸು ಅವರಂತೆ ಕನಷ್ಟ ಜಿಲ್ಲೆಯಲ್ಲಾದರೂ ಎಲ್ಲ ಹಿಂದುಳಿದ ಜಾತಿಗಳಿಗೂ ಸಲ್ಲುವ ನಾಯಕನಾಗಿ ಬೆಳೆಯುವ ಅವಕಾಶ ಮತ್ತು ಅರ್ಹತೆಗಳೆರಡೂ ಇತ್ತು. ಪೂಜಾರಿಯ ಜತೆಯಲ್ಲಿನ ಕೋಳಿಜಗಳದಲ್ಲಿಯೇ ಅದನ್ನು ಅವರು ಕಳೆದುಕೊಂಡರು. ದೈತ್ಯ ಸಂಹಾರಿಯಾಗಿ ರಾಜಕೀಯ ಪ್ರವೇಶ ಮಾಡಿದ ಆಸ್ಕರ್ ಹೋರಾಟದ ಕೆಚ್ಚನ್ನೇ ಕಳೆದುಕೊಂಡು ಪಾದ್ರಿ ಆಗಿದ್ದಾರೆ.ಇಂದಿನ ಜಾತಿ ಆಧಾರಿತ ರಾಜಕೀಯದಲ್ಲಿ ಜನನಾಯಕನಾಗಿ ಬೆಳೆಯಲು ಬಿಲ್ಲವ ಜಾತಿಗೆ ಸೇರಿದ ಜನಾರ್ಧನ ಪೂಜಾರಿಗೆ ಉಳಿದವರಿಗಿಂತ ಹೆಚ್ಚು ಅವಕಾಶಗಳಿದ್ದವು. ಇದಕ್ಕೆ ಜಿಲ್ಲೆಯ ರಾಜಕೀಯದಲ್ಲಿ ನಣರ್ಾಯಕ ಪಾತ್ರ ವಹಿಸುವಷ್ಟು ಸಂಖ್ಯೆಯಲ್ಲಿ ಅವರ ಜಾತಿಜನರಿರುವುದೂ ಕಾರಣ. ವೈಯಕ್ತಿಕ ಮಟ್ಟದಲ್ಲಿ ಪ್ರಾಮಾಣಿಕ, ಸರಳಜೀವಿ ಮತ್ತು ಕಠಿಣ ದುಡಿಮೆಗಾರ. ಆದರೆ ಕೈ-ಮೈ ಶುದ್ಧ ಇಟ್ಟುಕೊಂಡಿರುವ ಪೂಜಾರಿಗೆ ಅವರ ನಾಲಿಗೆಯೇ ಮೊದಲ ಶತ್ರು. ಹಳೆ ತಲೆಮಾರಿನ ರಾಜಕಾರಣದಲ್ಲಿ ಪಳಗಿದ ಅವರಿಗೆ ಸಮಕಾಲಿನ ರಾಜಕೀಯ-ಸಾಮಾಜಿಕ ಬದಲಾವಣಿಯನ್ನು ಗ್ರಹಿಸಲಾಗಿಲ್ಲ, ಅದನ್ನು ಗ್ರಹಿಸವು ಶಕ್ತಿಯೂ ಇಲ್ಲ, ನವೃತ್ತಿಯಾಗುವ ಮನಸ್ಸೂ ಇಲ್ಲ.ರಾಮಮಂದಿರ ನಮರ್ಾಣದ ದೀಕ್ಷೆಯೊಂದಿಗೆ ಪಕ್ಷ ಬೆಳೆಸಲು ಹೊರಟ ಬಿಜೆಪಿಯನ್ನು ಮಂಗಳೂರಿನಲ್ಲಿ ಎದುರಿಸಲು ಪೂಜಾರಿ ಕೈಗೆತ್ತಿಕೊಂಡದ್ದು ಕುದ್ರೋಳಿ ದೇವಸ್ಥಾನದ ನವೀಕರಣವನ್ನು. ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇಲ್ಲದ ಬಿಲ್ಲವರ ಕೂಗಿಗೆ ಓಗೊಟ್ಟು ಬಂದು ಆ ದೇವಸ್ಥಾನವನ್ನು ಸ್ಥಾಪಿಸಿದವರು ನಾರಾಯಣ ಗುರು. ಲಿಂಗ, ಶಿಲಾಫಕ, ಕನ್ನಡಿ ಪ್ರತಿಷ್ಠಾಪನೆ ಮೂಲಕ ವೈದಿಕ ಪರಂಪರೆಗೆ ವಿರುದ್ಧವಾಗಿ ಕೇರಳದಲ್ಲಿ ಸರಳ ದೇವಸ್ಥಾನಗಳನ್ನು ಜನಪ್ರಿಯಗೊಳಿಸಿದವರು ನಾರಾಯಣ ಗುರುಗಳು. ದೇವಸ್ಥಾನ ಎನ್ನುವುದು ಅವರಿಗೆ ಸಾಮಾಜಿಕ ಚಳುವಳಿಯ ಸಾಧನವಾಗಿತ್ತು.ಆದರೆ, ವಣರ್ಾಶ್ರಮಯದ ವಿರುದ್ಧದ ಬಂಡಾಯದ ರೂಪದಲ್ಲಿ ನಾರಾಯಣ ಗುರು ಸ್ಥಾಪಿಸಿದ್ದ ಕುದ್ರೋಳಿಯ ಸರಳಗುಡಿಯನ್ನು ನವೀಕರಣದ ಹೆಸರಲ್ಲಿ ಪೂಜಾರಿ ಶಿಲ್ಪಕಲಾವೈಭವದ ದೇವಸ್ಥಾನವನ್ನಾಗಿ ಪರಿವತರ್ಿಸಿದರು. ಕೊನೆಗೆ ಅದನ್ನು ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿಸಿಯೇ ಬಿಟ್ಟರು. ಯಾವುದೇ ವೈದಿಕ ಸಂಪ್ರದಾಯದ ದೇವಸ್ಥಾನವನ್ನು ಮೀರಿಸುವ ಹಾಗೆ ಅಲ್ಲಿ ನರಂತರವಾಗಿ ವೈಭವದ ಪೂಜೆ-ಮೆರವಣಿಗೆ-ಉತ್ಸವಗಳನ್ನು ಪ್ರಾರಂಭಿಸಿದರು. ಸಾಮಾಜಿಕ ಜಾಗೃತಿಗೆ ಕಾರಣವಾಗಬೇಕಿದ್ದ ಧಾಮರ್ಿಕ ಕ್ಷೇತ್ರವೊಂದು ಧಾಮರ್ಿಕ ಉನ್ಮಾದ ಸೃಷ್ಟಿಸುವ ಕೇಂದ್ರವಾಗಿ ಬೆಳೆಯುತ್ತಿದೆ.ಆದರೆ, ಆ ಉನ್ಮಾದಕ್ಕೊಳಗಾದ ಬಿಲ್ಲವ ಯುವಕರಿಗೆ ಅದರ ರಾಜಕೀಯ ಅಭಿವ್ಯಕ್ತಿಗೆ ಕಾಂಗ್ರೇಸ್ ಪಕ್ಷದಲ್ಲಿ ಅವಕಾಶ ಇಲ್ಲ. ಇದನ್ನು ಕಂಡ ಸಂಘಪರಿವಾರ ತೆರೆದ ಬಾಹುಗಳಿಂದ ಅವರನ್ನು ಅಪ್ಪಿಕೊಂಡಿದೆ. ಆಗಲೇ ಅಲ್ಲಿದ್ದ ಬಂಟ, ಮೊಗವೀರ ಯುವಕರ ಜತೆ ಬಿಲ್ಲವ ಯುವಕರೂ ಸೇರಿಕೊಂಡಿದ್ದಾರೆ. ಅಲ್ಲಿಗೆ ಕಾಂಗ್ರೇಸ್ ಸಮಾಧಿ ಪೂರ್ಣಗೊಂಡಂತಾಯಿತು. ಕುದ್ರೋಳಿ ದೇವಸ್ಥಾನದ ನವೀಕರಣದ ನಂತರ ಜನಾರ್ಧನ ಪೂಜಾರಿ ಸತತ 3ಲೋಕಸಭಾ ಚುನಾವಣಿಗಳಲ್ಲಿ ಸೋತರು. ಇಲ್ಲಿಯವರೆಗೂ ಗೆದ್ದಿಲ್ಲ ಎನ್ನುವುದು ಗಮನಾರ್ಹ.ಇಂದು ರಾಜಕೀಯ ವ್ಯವಸ್ಥೆಯೇ ಕುಸಿದು ಬಿದ್ದಂತಹ ಅರಾಜಕತೆಯೊಂದು ಅವಿಭಜಿತ ದಕ್ಷಿಣದಲ್ಲಿ ನಮರ್ಾಣವಾಗಿದ್ದರೆ ಅದಕ್ಕೆ ಈ ತ್ರಿಮೂತರ್ಿಗಳು ಕೂಡಾ ಹೊಣಿಗಾರರು.ದಿನೇಶ ಅಮೀನ್ಮಟ್ಟು..

No comments:

Post a Comment

Thanku