Friday, January 13, 2012

ಹೀಗೊಂದು ಕೊಲೆಯ ಆರೋಪ

ಮಧ್ಯಾಹ್ನ ಎರಡು ಗಂಟೆಯ ಸಮಯ. ರಾಜ್ಯದ ಪ್ರಸಿದ್ಧ ದೂರದರ್ಶನ ವಾಹಿನಿ ಟಿ.ವಿ.-7 ರ ಬ್ರೇಕಿಂಗ್ ನ್ಯೂಜ್ ತಲೆ ಬರಹದಡಿಯಲ್ಲಿ ಸುದ್ದಿಯೊಂದು ಬಿತ್ತರವಾಗುತ್ತಿತ್ತು. ರಾಜ್ಯದ ಹಿಂದುಳಿದ ಜಿಲ್ಲೆ ರಾಯ ಚೂರಿನ ಅತೀ ಹಿಂದುಳಿದ ತಾಲೂಕು ಕೇಂದ್ರವೊಂ ದರಲ್ಲಿ ಹಾಡು ಹಗಲೇ ಪ್ರಥಮ ದಜರ್ೆ ಗುತ್ತೇದಾರ ಲಂಕೆಪ್ಪನವರ ಬರ್ಬರ ಕೊಲೆ.

ಮಚ್ಚು ಮತ್ತು ಕೊಡಲಿಗಳಿಂದ ಹತ್ಯೆ. ಕೊಲೆಯ ಉದ್ದೇಶ ತಿಳಿದು ಬಂದಿಲ್ಲ. ಕೊಲೆಗೆ ಸಂಬಂಧಿಸಿದಂತೆ ತಾಲೂಕಿನ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಕಿರಿಯ ಇಂಜಿನಿಯರ್ ವೀರಾಂಜನೇಯರಾವ್ ಹಾಗೂ ಊರಿನ ಪ್ರಸಿದ್ಧ ಹಿರಿಯ ವ್ಯಕ್ತಿ ಚಂದ್ರಯ್ಯ ಸ್ವಾಮಿ ಎಂಬುವವರನ್ನು ಬಂಧಿಸಲಾಗಿದೆ. ಇಬ್ಬರೂ ಕೊಲೆ ನಡೆದ ಸಮಯದಲ್ಲಿ ಕೊಲೆಯಾದ ಊರಿನಲ್ಲಿ ಇರದಿದ್ದುದು ವಿಶೇಷವಾದರೂ ಕೊಲೆಗಾರನ ಹೆಂಡತಿ ನೀಡಿದ ದೂರಿನ ಅನ್ವಯ, ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಸ್ಥಳೀಯ ಪೋಲೀಸರು ಇಬ್ಬರನ್ನೂ ಬಂಧಿಸಿರುವರು. ಪೋಲೀಸ ಇಲಾಖೆ ಹೆಚ್ಚಿನ ತನಿಖೆಗಾಗಿ ಕ್ರಮ ಕೈಕೊಂಡಿದೆ.

ಪ್ರಥಮ ದಜರ್ೆ ಗುತ್ತೇದಾರ ಲಂಕೆಪ್ಪನ ಭೀಕರ ಕೊಲೆಯ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿ ತಾಲೂಕಿ ನೆಲ್ಲೆಡೆ ಜನರ ಮಾತಿಗೆ ಗ್ರಾಸವಾಗಿತ್ತು. ಲಂಕೆಪ್ಪನ ಕೊಲೆಯ ಸುದ್ದಿ ಜನರ ಬಾಯಿಯಲ್ಲಿ ಚಿತ್ರ ವಿಚಿತ್ರವಾಗಿ ಹೊರ ಹೊಮ್ಮುತ್ತಿತ್ತು. ಇತ್ತೀಚಿಗೆ ಈ ಲಂಕೆಪ್ಪನಿಗೂ ಸೊಕ್ಕು ನೆತ್ತಿಗೆ ಏರಿತ್ತು ಬಿಡಲೇ. ಅವನ್ನ ಹಿಡೇರ ಇದ್ದಿಲ್ಲ. ಮೊದಲು ಸಾಮಾನ್ಯ ಮನುಷ್ಯನಾಗಿದ್ದವ ಈ ಏಳೆಂಟು ವರ್ಷಗಳಲ್ಲಿ ಕಂಟ್ರ್ಯಾಕ್ಟ್ ಮಾಡಿ ದೊಡ್ಡ ಮನುಷ್ಯ ಆಗಿ ಬಿಟ್ಟಿದ್ದ. ಅದೆಷ್ಟು ಕಂತ್ರಾಟು ಮಾಡಿರುವನೋ ಏನೋ? ಅವಗೆ ಹಿರೇರು ಕಿರೇರು ಅನ್ನೋ ದಜರ್ು ಇರಲಿಲ್ಲ. ಅವಂದೂ ಉರುಣಿಗೆ ಜಾಸ್ತಿಯಾಗಿತ್ತು. ಕೈಯಲ್ಲಿ ನಾಲ್ಕು ಕಾಸು ಆಡಾಕತ್ತಿದ ಮ್ಯಾಲ ಬ್ಯಾರೆಯವರ ಖಬರ ಇದ್ದಿಲ್ಲ. ತಾನಾಯಿತು, ತನ್ನ ಪಟಾಲಂಗಳಾಯಿತು. ಅಲ್ಲಪಾ, ಈ ಗಿಡ್ಡನ ಮನುಷ್ಯ ಜ್ಯೂನಿಯರ್ ಇಂಜಿನಿಯರ್ ವೀರಾಂಜನೇ ಯರಾವ್ ಅದೇನು ತೆಪ್ಪು ಮಾಡಿದ್ದನಪಾ? ಆತನ್ನ ಪೋಲೀಸರು ಹಿಡಕಂಡಾರಂತ. ಆತಂದೇನೂ ತಪ್ಪು ಇರ್ಲಿಕ್ಕಿಲ್ಲಂತ ನಮಗನಿಸ್ತದ. ಆತ ಡ್ಯೂಟಿ ಮ್ಯಾಲ ರಾಯಚೂರಿನಾಗ ಇದ್ರೂ ಆತನ್ನ ಪೋಲೀಸ್ರು ಅರೆಸ್ಟ್ ಮಾಡ್ಯಾರಂದ್ರ ಏನೈತೇನಪಾ ನಮಗೊಂದೂ ಗೊತ್ತಾಗ್ತಿಲ್ಲ. ಆತನ್ನ ಯಾರೋ ಈ ಕೇಸಿನಾಗ ಬೇಕಂತ ಸಿಗ್ಹಾಕ್ಯಾರಂತ ಅನಸಕತೈತ. ಎಲ್ಲಾ ಕಲಿಗಾಲದ ಮಹಿಮೆ.

ಅಲ್ಲಪಾ, ನಮ್ಮ ಚಂದ್ರಯ್ಯ ಸ್ವಾಮಿ ಕೂಡ ಯಾವುದೋ ಫಂಕ್ಷನ್ಯಾಗ ಬ್ಯಾರೆ ಊರಾಗಿದ್ರೂ ಪೋಲೀಸರು ಅರೆಸ್ಟ್ ಮಾಡ್ಯಾರಂತ. ಲಂಕೆಪ್ಪನ ಹೆಂಡ್ತಿ ಪೋಲೀಸ್ರಿಗೆ ಅವ್ರ ಹೆರು ಬರಕೊಟ್ಟಾಳಂತ. ಲಂಕೆಪ್ಪನ ಕೊಲೆ ಮಾಡಿರುವವರು ಯಾರೋ? ಶಿಕ್ಷೆ ಅನುಭವಿಸು ವವರು ಯಾರೋ ಅಂತ ಅಂದಂಗಾತಲ್ಲ. ಒಂದೂ ತಿಳಿದಂಗಾಗೈತೆಲ್ಲ. ಲಂಕೆಪ್ಪಗ ಗುತ್ತೇದಾರಿಕ್ಯಾಗ ಸಡ್ಡು ಹೊಡ್ದು ನಿಲ್ತಿದ್ದ ಅವನ ಸಂಬಂಧಿಕರ ಕೈವಾಡ ಏನಾರ ಇರ್ಬಹುದೇನೋ? ಈ ರೀತಿಯಾಗಿ ಜನ ಇನ್ನೂ ಏನೇನೋ ಮಾತಾಡಿಕೊಳ್ತಿದ್ದರು.

ಜಿಲ್ಲಾ ಪಂಚಾಯತಿಯ ಕಿರಿಯ ಇಂಜಿನಿಯರ್ ವೀರಾಂಜನೇಯರಾವ್ ಅವರು ಕಾರ್ಯ ನಿಮಿತ್ಯ ರಾಯಚೂರಿನ ತಮ್ಮ ಜಿಲ್ಲಾ ಕೇಂದ್ರ ಕಚೇರಿಯಲ್ಲಿದ್ದರು ಲಂಕೆಪ್ಪನ ಕೊಲೆಯಾದ ಸಮಯದಲ್ಲಿ. ಚಂದ್ರಯ್ಯ ಸ್ವಾಮಿ ಊರಿನ ಪ್ರಮುಖ ವ್ಯಕ್ತಿ. ಅವರ ಹಿತ ವಚನ, ಮಧ್ಯಸ್ತಿಕೆ ಊರಿನ ಎಲ್ಲಾ ಜನರಿಗೆ, ರಾಜಕೀಯ ಪಕ್ಷದವರಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಬೇಕೇ ಬೇಕು. ಕೊಲೆಯಾದ ಸಮಯದಲ್ಲಿ ಅವರೂ ಸಹ ಪಕ್ಕದ ಊರಿನ ತಮ್ಮ ಸಮಾಜದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆದರೂ ಇಬ್ಬರ ಬಂಧನವಾಗಿತ್ತು.

ಮಧ್ಯಾಹ್ನ ಒಂದು ಗಂಟೆಯ ಸಮಯ. ಎಪ್ರಿಲ್ ತಿಂಗಳು. ಉತ್ತರ ಕನರ್ಾಟಕದ ರಣರಣ ಬಿಸಿಲು. ಊರಿನ ಬೀದಿಗಳಲ್ಲಿ ಯಾವ ನರಪಿಳ್ಳೆಯೂ ಕಾಣು ತ್ತಿಲ್ಲ. ಸೂರ್ಯ ದೇವನ ಬಿಸಿಲಿನ ತಾಪಕ್ಕಂಜಿದ ಜನಗಳು ತಮ್ಮ ತಮ್ಮ ಮನೆಗಳಲ್ಲಿ ಒಂದು ರೀತಿಯ ಗೃಹ ಬಂಧನದಲ್ಲಿದ್ದರು. ಗುತ್ತೇದಾರ ಲಂಕೆಪ್ಪ ಅದೇ ತಾನೇ ತನ್ನ ಗೆಳೆಯರೊಂದಿಗೆ ಪ್ರವಾಸಿ ಮಂದಿರದಲ್ಲಿ ಪುಷ್ಕಳ ಭೋಜನ ಹೊಡೆದು ತನ್ನ ಮನೆಯ ಕಡೆಗೆ ಬುಲೆಟ್ ಸೈಕಲ್ ಮೋಟರಿನಲ್ಲಿ ಹೊರಟಿದ್ದ. ಅವನ ಸೈಕಲ್ ಮೋಟರು ಕಿರಿಯ ಇಂಜಿನಿಯರ್ ವೀರಾಂಜನೇಯ ರಾವ್ ಅವರ ವಸತಿ ಗೃಹದ ಮುಂದಿನಿಂದ ವೇಗವಾಗಿ ಚಲಿಸುತ್ತಿತ್ತು. ಕೊಡಲಿ, ಮಚ್ಚುಗಳ ಸಮೇತ ನಾಲ್ಕು ಜನರು ಲಂಕೆಪ್ಪನ ಮೇಲೆ ಹಟಾತ್ ದಾಳಿ ಮಾಡಿದ್ದರು. ಹುಲಿಗಳ ಹಿಂಡಿನ ದಾಳಿಗೆ ಸಿಕ್ಕ ಜಿಂಕೆಯಂತಾಗಿತ್ತು ಲಂಕೆಪ್ಪನ ಪರಸ್ಥಿತಿ. ಕೊಡಲಿ, ಮಚ್ಚುಗಳ ಆಟೋಪ ಟೋಪದಲ್ಲಿ ಲಂಕೆಪ್ಪನ ಪ್ರಾಣ ಕ್ಷಣಾರ್ಧದಲ್ಲಿ ಆಕಾಶದಲ್ಲಿ ಲೀನವಾಗಿತ್ತು. ವಿಲ ವಿಲ ಒದ್ದಾಡಿದ ಲಂಕೆಪ್ಪನ ದೇಹ ತಣ್ಣಗಾಗಿತ್ತು. ಲೀಲಾ ಜಾಲವಾಗಿ ತಮ್ಮ ಕೆಲಸ ಮುಗಿಸಿದ ಕೊಲೆಗಡುಕರು ಪಕ್ಕದಲ್ಲಿಯೇ ಇದ್ದ ಕಿರಿಯ ಇಂಜಿನಿಯರ್ ವೀರಾಂಜನೇಯರಾವ್ ಅವರ ವಸತಿ ಗೃಹಕ್ಕೆ ನುಗ್ಗಿದವರು ತಮ್ಮ ಕೈಯಲ್ಲಿ ಆಯುಧಗಳನ್ನು ಎಲ್ಲಿ ಬೇಕೆಂದರಲ್ಲಿ ಎಸೆದು ಮಿಂಚಿನ ವೇಗದಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ಎಲ್ಲರ ಮುಖಗಳು ಕಪ್ಪು ಬಟ್ಟೆಯಿಂದ ಮುಚ್ಚಿದ್ದವು. ಎಲ್ಲರ ಕೈಗಳು ಗ್ಲೌಸುಗಳಲ್ಲಿ ಮರೆಯಾಗಿದ್ದವು. ತಮ್ಮ ಗುರುತು ಬೇರೆಯವರಿಗೆ ಸಿಗಬಾರದೆಂದು ವ್ಯಸ್ಥಿತವಾಗಿ ಹಾಕಿಕೊಂಡು ಬಂದಿದ್ದ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದರು.

ಮಕ್ಕಳ ವಿದ್ಯಾಭ್ಯಾಸದ ನಮಿತ್ಯ ರಾವ್ ಅವರು ತಮ್ಮ ಕುಟುಂಬದ ಸದಸ್ಯರಿಗೆ ರಾಯಚೂರಿನಲ್ಲಿ ಮನೆ ಮಾಡಿದ್ದರು. ತಾವು ಇಲ್ಲಿ ಸರಕಾರಿ ವಸತಿ ಗೃಹದಲ್ಲಿದ್ದುಕೊಂಡು ವಾರಕ್ಕೆ ಒಂದು ಸಾರೆ ಇಲ್ಲವೇ ಎರಡು ಸಾರೆ ರಾಯಚೂರಿಗೆ ಹೋಗಿ ಬರುತ್ತಿದ್ದರು. ಕೊಲೆಗಡುಕರ ಮಿಂಚಿನ ಕಾರ್ಯಾಚರಣೆ, ಅವರ ರಕ್ತ ಸಿಕ್ತ ಆಯುಧಗಳಿಂದ ರಾವ್ ಅವರ ವಸತಿ ಗೃಹ ಒಂದು ರೀತಿ ಭಯಾನಕವಾಗಿ ಕಾಣತೊಡಗಿತ್ತು. ಕೊಲೆಗಡುಕರು ನುಗ್ಗಿದ ಸಮಯ ಮಟ ಮಟ ಮಧ್ಯಾಹ್ನ ವಾಗಿತ್ತು. ಜೆ.ಇ. ಸಾಹೇಬರ ವಸತಿ ಗೃಹ ನೋಡಿಕೊ ಳ್ಳುತ್ತಿದ್ದ ಮಾಲಿ ಮನೆಯ ಕಂಪೌಂಡಿನ ಹಿಂದಿನ ಭಾಗದಲ್ಲಿ ಏನೋ ಕೆಲಸದಲ್ಲಿ ನಿರತನಾಗಿದ್ದುದರಿಂದ ಅವನಗೆ ಶರವೇಗದಲ್ಲಿ ಬಂದು ಹೋದ ಕೊಲೆಗಡುಕರ ಸಂಚು ತಿಳಿಯಲೇ ಇಲ್ಲ.

ವೀರಾಂಜನೇಯರಾವ್ ಅವರು ಈ ಊರಿನಲ್ಲಿ ಕಿರಿಯ ಅಭಿಯಂತರೆಂದು ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವರು. ಸಾಧ್ಯವಾದಷ್ಟು ಯಾವ ರಾಜಕಾರಣಿಯ ಮುಲಾಜು ಹಿಡಿಯದೇ ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುವ ವ್ಯಕ್ತಿ ಅವರು. ಹೀಗಾಗಿ ಸಾಕಷ್ಟು ಸ್ಥಳೀಯ ಜನ ನಾಯಕರ ಅವ ಕೃಪೆಗೆ ಒಳಗಾಗಿದ್ದರು. ಇವರನ್ನು ಎತ್ತಂಗಡಿ ಮಾಡಲು ಸರ್ವ ಪ್ರಯತ್ನಗಳು ನಡೆದಿದ್ದರೂ ಇವರ ಜಾಗಕ್ಕೆ ಬರುವವರು ಯಾರೂ ಇರದೇ ಇದ್ದುದರಿಂದ ರಾವ್ ಅವರೇ ಇಲ್ಲಿ ಮುಂದುವರೆದಿದ್ದರು.

ಊರಿನ ಪ್ರಮುಖ ವ್ಯಕ್ತಿ ಚಂದ್ರಯ್ಯ ಸ್ವಾಮಿದೂ ಒಂದು ವಿಶಿಷ್ಟ ವ್ಯಕ್ತಿತ್ವ. ಊರಿನ ಎಲ್ಲಾ ರಾಜಕೀಯ ಪಕ್ಷದ ಮುಖಂಡರಿಗೂ ಅವರು ಬೇಕು. ಊರಿನ ಒಳ್ಳೆಯದಕ್ಕೆ ಅವರು ಯಾವ ತ್ಯಾಗಕ್ಕೂ ಸರಿ. ಜ್ಯೂನಿಯರ್ ಇಂಜಿನಿಯರ್ ಅವರಂತೆ ಇವರೂ ನಿಷ್ಟುರವಾದಿ. ಇಬ್ಬರಿಗೂ ಹೇಗೋ ಗೆಳೆತನ ಬೆಳೆಯಿತು. ಸ್ವಾಮಿ, ರಾವ್ ಅವರಿಗಿಂತ ಐದಾರು ವರ್ಷ ದೊಡ್ಡವ ರಾದರೂ ಇಬ್ಬರಲ್ಲೂ ಒಂದು ರೀತಿಯ ಆತ್ಮೀಯತೆ ಬೆಳೆದು ಬಂದಿತ್ತು. ಪರಸ್ಪರರು ದಿನಾಲೂ ಭೆಟ್ಟಿಯಾ ಗುತ್ತಿದ್ದರು, ಮಾತನಾಡುತ್ತಿದ್ದರು, ಚಚರ್ಿಸುತ್ತಿದ್ದರು, ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ರಾವ್ ಹೇಗೂ ಒಬ್ಬರೇ ಇದ್ದುದರಿಂದ ಇಬ್ಬರ ಮಾತುಕತೆಗಳಿಗೆ ಹೆಚ್ಚಿನ ವೇಳೆ ಸಿಗುತ್ತಿತ್ತು. ಚಂದ್ರಯ್ಯ ಸ್ವಾಮಿಯವರನ್ನು ಹಿಡಿದರೆ ತಮ್ಮ ಕೆಲಸ ಸಲೀಸಾಗಿ ಆಗುತ್ತದೆಯೆಂದು ಸಾರ್ವಜನಕರಲ್ಲಿ ಒಂದು ರೀತಿಯ ಅಭಿಪ್ರಾಯ ಮೂಡಿತ್ತು. ಆದರೆ ಹಂಗೇನೂ ಇರಲಿಲ್ಲ. ನ್ಯಾಯಯುತ ವಾಗಿದ್ದರೆ ಯಾವುದೇ ಶಿಫಾರಿಷ್ ಇಲ್ಲದೇ ಕೆಲಸ ಮಾಡುತ್ತಿದ್ದರು ರಾವ್. ಸ್ವಾಮಿ ಸಹ ಯಾರಿಂದಲೂ ಏನನ್ನೂ ಅಪೇಕ್ಷಿಸಿದವರಲ್ಲ.

ಇದ್ದ ಜಾಗದಲ್ಲೇ ಇಬ್ಬರನ್ನೂ ಏಕಾಯೇಕಿ ಬಂಧಿಸಿದ್ದುದರಿಂದ ರಾವ್ ಮತ್ತು ಸ್ವಾಮಿ ಇಬ್ಬರೂ ತಲ್ಲಣಗೊಂಡಿದ್ದರು. ಇಂಥಹ ಸ್ಥಿತಿ ಬರುವುದ ಕ್ಕಿಂತಲೂ ಪ್ರಾಣವೇ ಹೋಗಿದ್ದರೆ ಚೆನ್ನಾಗಿತ್ತೇನೋ ಎಂಬ ಭಾವನೆ ಮೂಡಿತ್ತು ರಾವ್ಗೆ. ಮಯರ್ಾದೆಗೆ ತನ್ನ ಕುಳ್ಳು ದೇಹವನ್ನು ಹಿಡಿಯಾಗಿ ಮಾಡಿಕೊಳ್ಳುತ್ತಿದ್ದ ಮನುಷ್ಯ ಈ ಘಟನೆಯಿಂದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋದರು. ತನ್ನ ಮನೆ ದೇವರಾದ ಗಂಗನಾಳ ಹನುಮಂತ ದೇವರನ್ನು ಕ್ಷಣ ಕ್ಷಣಕ್ಕೂ ನೆನೆಯತೊಡಗಿದ್ದರು. ಚಂದ್ರಯ್ಯ ಸ್ವಾಮಿಯವರ ಸ್ಥಿತಿಯೂ ಸಹ ಇದಕ್ಕಿಂತ ಬೇರೆ ಆಗಿರಲಿಲ್ಲ. ಕೊಲೆ ನಡೆದ ಸಮಯದಲ್ಲಿ ತಾವು ಊರಲ್ಲಿಯೇ ಇರಲಿಲ್ಲ. ಯಾರೋ ದುಷ್ಕಮರ್ಿಗಳು ಲಂಕೆಪ್ಪನನ್ನು ಕೊಲೆ ಮಾಡಿ, ಕೊಲೆಗೆ ಬಳಸಿದ ಆಯುಧಗಳನ್ನು ರಾವ್ ಅವರ ಇಲಾಖೆಯ ವಸತಿ ಗೃಹದಲ್ಲಿ ಬೀಸಾಡಿ ಹೋಗಿ ದ್ದಾರೆ. ಈ ಕೊಲೆಗೂ, ತಮಗೂ ಯಾವ ಸಂಬಂಧವೂ ಇಲ್ಲವೆಂದು ಪ್ರತಿಪಾದಿಸಿದರೂ ಅವರ ಮನವಿ ಅರಣ್ಯರೋದನವಾಗಿತ್ತು. ಊರಿನ ಪೋಲೀಸ್ ಇಲಾಖೆಯ ಸಿ.ಪಿ.ಐ.,ಎಸ್.ಐ., ಎಲ್ಲಾ ಕಾನ್ಸ್ಟೇಬ ಲ್ಲುಗಳು ಇವರಿಗೆ ಹೊಸಬರೇನಲ್ಲ. ಎಲ್ಲರೂ ಪರಿಚಿತರೇ. ಇವರ ದೋಸ್ತರೇ. ಕರ್ತವ್ಯ ನಿಭಾಯಿ ಸುತ್ತಿದ್ದಾಗ ಪೋಲೀಸರು ಇಲಾಖೆಯ ಗತ್ತು, ಠೀವಿ, ಕ್ರೌರ್ಯ, ಅಮಾನವೀಯತೆ ಪ್ರದಶರ್ಿಸುತ್ತಿದ್ದರು. ಅವರಿಗೂ ಗೊತ್ತಿತ್ತು ತಾವು ಅಸಾಹಕರೆಂದು. ಮೇಲಾಧಿಕಾರಿಗಳ ಆದೇಶದ ಪಾಲನೆ ಮಾಡುತ್ತಿದ್ದರು ಅಷ್ಟೇ. ಲಂಕೆಪ್ಪನ ಮುಗ್ಧ ಹೆಂಡತಿ ಯಾರೋ ಕಿತಾಪತಿಗಳ ಪ್ರಚೋದನೆಯಿಂದ ಇವರ ಮೇಲೆ ಲಿಖಿತ ದೂರು ನೀಡಿದ್ದಾಳೆಂದು ಸ್ಥಳೀಯ ಪೋಲೀಸರಿಗೆ ಅನಿಸುತ್ತಿತ್ತು. ಆದರೂ ಅವರು ತಮ್ಮ ಕರ್ತವ್ಯ ನಿಭಾಯಿಸಬೇಕಾಗಿತ್ತು.

ವೀರಾಂಜನೇಯರಾವ್ ಅವರ ಚಡ್ಡಿ ದೋಸ್ತ ಮತ್ತು ಸಹದ್ಯೋಗಿ ಜೆ.ಇ. ಶಂಕರ್ ಪಾಟೀಲರು ಚಂದ್ರಯ್ಯ ಸ್ವಾಮಿಯವರಿಗೆ ಗೊತ್ತಿದ್ದ ಪ್ರಭಾವಿ ರಾಜಕಾರಣಿಗಳ ಸಲಹೆಯಂತೆ ಒಬ್ಬ ಪ್ರಸಿದ್ಧ ಕ್ರಿಮಿನಲ್ ಲಾಯರ್ಗೆ ಈ ಕೇಸನ್ನು ಒಪ್ಪಿಸಿದರು. ಇಬ್ಬರಿಗೂ ಬೇಲ್ ಸಿಗಲು ಒಂದು ವಾರವೇ ಬೇಕಾಯಿತು. ಬಿಡುಗಡೆಯಾಗಿ ಬರುವಷ್ಟರಲ್ಲಿ ಇಬ್ಬರೂ ಅರ್ಧ ಇಳಿದಿದ್ದರು. ಮಾನಸಿಕವಾಗಿ ಕುಗ್ಗಿದ್ದರು.

ವೀರಾಂಜನೇಯರಾವ್ ಕೊಲೆಯ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಇಲಾಖೆಯ ವತಿಯಿಂದ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಯಿತು. ಅವರನ್ನು ತತಕ್ಷಣ ಸೇವೆಯಿಂದ ಅಮಾನತ್ತಿನಲ್ಲಿಡಲಾಯಿತು ಹಾಗೂ ಇಲಾಖೆಯ ಆಂತರಿಕ ವಿಚಾರಣೆಯೂ ಶುರು ಮಾಡಲಾಯಿತು. ಇದರಿಂದ ಮುಂದಿನ ಎರಡು ತಿಂಗಳಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ಬಡ್ತಿ ಹೊಂದಬೇಕಾಗಿದ್ದ ರಾವ್ ಅವರ ಬಡ್ತಿಗೆ ತಾತ್ಕಾಲಿಕ ತಡೆ ಬಿದ್ದಿತ್ತು. ರಾವ್ ಸರಕಾರಿ ಕೆಲಸದಲ್ಲಿದ್ದುದರಿಂದ ಇನ್ನೂ ಹೆಚ್ಚಿನ ಕಿರಿ ಕಿರಿ ಅನುಭವಿಸಬೇಕಾಯಿತು.

ಪೋಲೀಸರ ವಿಚಾರಣೆ ಬಿಟ್ಟು ಇಂಥಹ ಕಿರಿ ಕಿರಿ ಚಂದ್ರಯ್ಯ ಸ್ವಾಮಿಯವರಿಗೆ ಇರಲಿಲ್ಲ. ಪೋಲೀಸ ಇಲಾಖೆ ಮತ್ತು ಅವರ ಇಲಾಖೆಯ ಮೇಲಾಧಿಕಾ ರಿಗಳ ಕಿರಿ ಕಿರಿ ಅತಿರೇಕಕ್ಕೆ ಹೋಯಿತು. ಮುಂದೆ ಕೊಲೆಯ ಕೇಸನ್ನು ಸಿ.ಓ.ಡಿ.ಗೆ ವಹಿಸಲಾಯಿತು. ಸಿ.ಓ.ಡಿ ಪೋಲೀಸರಿಂದಲೂ ವಿಚಾರಣೆ ಶುರುವಾ ಯಿತು. ವಿಚಾರಣೆ ಮುಗಿಯುಷ್ಟರಲ್ಲಿ ರಾವ್ಗೆ ಸಾಕು ಸಾಕಾಗಿ ಹೋಯಿತು. ಜೀವ ಕೈಗೆ ಬಂದಂತಾಗಿತ್ತು. ಇವೆಲ್ಲವುಗಳಿಂದ ಬೇಸತ್ತ ರಾವ್ ಒಂದು ದಿನ ಮನೆಯವರಿಗೂ ಹೇಳದೇ ಕೇಳದೇ ಕಣ್ಮರೆಯಾದರು. ಮೂರು ತಿಂಗಳುಗಳವರೆಗೆ ತಮಿಳುನಾಡಿನಲ್ಲಿ ಅಜ್ಞಾತವಾಸ ಅನುಭವಿಸಿದರು.

ಲಂಕೆಪ್ಪನ ಚಿಕ್ಕಪ್ಪನ ಮಕ್ಕಳಿಗೂ ಲಂಕೆಪ್ಪನಿಗೂ ಯಾವಾಗಲೂ ದಾಯಾದಿ ಕಲಹ ಇದ್ದದ್ದೇ. ಲಂಕೆಪ್ಪನ ಚಿಕ್ಕಪ್ಪನ ಮಕ್ಕಳೂ ಕಂಟ್ರ್ಯಾಕ್ಟ್ ಕೆಲಸ ಮಾಡುತ್ತಿದ್ದರು. ಗುತ್ತೇದಾರಿಕೆ ಪಡೆಯುವುದರಲ್ಲಿ ಇಬ್ಬರಿಗೂ ಪೈಪೋಟಿ ಇದ್ದದ್ದೇ. ಈ ಸಾರೆ ಎರಡು ಕೋಟಿಗಳ ಕಂಟ್ರ್ಯಾಕ್ಟ್ ಕೆಲಸ ಲಂಕೆಪ್ಪನ ಚಿಕ್ಕಪ್ಪನ ಮಕ್ಕಳಿಗೆ ದೊರೆತಿತ್ತು. ಇದರಲ್ಲಿ ವೀರಾಂಜನೇಯರಾವ್ ಮತ್ತು ಚಂದ್ರಯ್ಯ ಸ್ವಾಮಿಯವರ ಕುಮ್ಮಕ್ಕು ಇದೆಯೆಂದು ಲಂಕೆಪ್ಪನ ಅನಿಸಿಕೆಯಾಗಿತ್ತು.

ಊರಿನ ಸರಕಾರಿ ದವಾಖಾನೆಗೆ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ನರ್ಸ ಲಲನಾಮಣಿ ಡಯನಾ ತನ್ನ ರೂಪ, ಲಾವಣ್ಯ, ವಯ್ಯಾರಗಳಿಂದ ಲಂಕೆಪ್ಪನ ಚಿಕ್ಕಪ್ಪನ ಮಗನನ್ನು ಬುಟ್ಟಿಗೆ ಹಾಕಿಕೊಂಡಿದ್ದಳು. ಅವಳ ರೂಪಕ್ಕೆ ಮರುಳಾ ಗಿದ್ದ ಲಂಕೆಪ್ಪನೂ ಅವಳ ಸಂಗಕ್ಕೆ ಹಪಹಪಿಸುತ್ತಿದ್ದ. ಅವಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಸರ್ವ ಪ್ರಯತ್ನ ವನ್ನೂ ನಡೆಸಿದ್ದ. ಅದೇನಾಯಿತೋ ಏನೋ ಈಗ್ಗೆ ಆರು ತಿಂಗಳುಗಳಿಂದ ರೂಪಸಿ ಡಯಾನಾ ಲಂಕೆಪ್ಪನ ತೆಕ್ಕೆಗೆ ಬಂದಿದ್ದಳು. ಇದರಿಂದ ದಾಯಾದಿಗಳ ನಡುವೆ ದ್ವೇಷ ಇನ್ನೂ ಉಲ್ಬಣಗೊಂಡಿತ್ತು.

ತಮಿಳುನಾಡಿನಲ್ಲಿ ದೇವಸ್ಥಾನದಿಂದ ದೇವಸ್ಥಾನ ಗಳಿಗೆ ಅಜ್ಞಾತವಾಗಿ 3 ತಿಂಗಳುಗಳವರೆಗೆ ತಿರುಗಾಡಿದ ವೀರಾಂಜನೇಯರಾವ್ ಕೊನೆಗೆ, ನಾನಂತೂ ನಿದೋರ್ ಷಿ. ಲಂಕೆಪ್ಪನ ಹತ್ಯೆಯಲ್ಲಿ ನನ್ನದೇನು ಪಾತ್ರವಿಲ್ಲ. ಆತನೇನು ನನ್ನ ಸಂಬಂಧಿಕನೂ ಅಲ್ಲ. ದಾಯಾದಿಯೂ ಅಲ್ಲ. ಈ ರೀತಿ ನಾ ತಲೆ ಮರೆಸಿ ಕೊಂಡು ಅಡ್ಡಾಡಿದರೆ ನಾನು ತಪ್ಪಿತಸ್ಥನೆಂದು ಜನರಲ್ಲಿ ಭಾವನೆ ಮೂಡುತ್ತದೆ. ಈಗಾಗಲೇ ನಾ ನೀರಲ್ಲಿ ಮುಳುಗಿದ್ದೇನೆ. ನೀರಲ್ಲಿ ಮುಳುಗಿದವರಿಗೆ ಮಳೆಯೇನು, ಚಳಿಯೇನು? ನನ್ನ ಆರಾಧ್ಯ ದೈವ ಗಂಗನಾಳ ಮಾರುತಿ ದೇವರು ನನ್ನ ನ್ನಂತೂ ಕೈ ಬಿಡುವುದಿಲ್ಲವೆಂಬ ಭರವಸೆ ನನಗಿದೆ. ಊರಿಗೇ ಹೋಗಿ ಬಂದಿದ್ದನ್ನು ಧೈರ್ಯದಿಂದ ಎದುರಿಸಿ ದರಾಯಿತು ಎಂದುಕೊಂಡು ರಾವ್ 3 ತಿಂಗಳ ನಂತರ ಊರಿಗೆ ವಾಪಾಸು ಬಂದರು.

ಇಲಾಖೆಯ ವತಿಯಿಂದ ಕೈಕೊಂಡಿದ್ದ ತನಿಖೆ ಮುಗಿದು, ರಾವ್ ನಿದರ್ೋಷಿಯೆಂದು ವರದಿ ಹೊರ ಬಂದಾಗ ರಾವ್ಗೆ ಆದ ಖುಷಿ ಬಣ್ಣಿಸಲಸದಳ. ಅವರಿಗೆ ಅರ್ಧ ತಲೆ ಭಾರ ಕಡಿಮೆಯಾದಂತಾಯಿತು. ಪುನಃ ಕರ್ತವ್ಯಕ್ಕೆ ಹಾಜರಾದರು. ಹಾಗೇ ಹಿಂದಿನ ದಿನಾಂಕದಿಂದ ಬರಬೇಕಾಗಿದ್ದ ಬಡ್ತಿಯೂ ಸಿಕ್ಕು ಸಹಾಯಕ ಇಂಜಿನಿಯರ್ ಸಹ ಆದರು.

ನ್ಯಾಯಾಲಯದಲ್ಲಿದ್ದ ದಾವೆ ಹಾಗೇ ಮುಂದುವರೆ ದಿತ್ತು. ಅಂತೂ 3 ವರ್ಷಗಳ ನಂತರ ನ್ಯಾಯಾಲಯದ ತೀಪರ್ು ಹೊರ ಬಿತ್ತು. ಲಂಕೆಪ್ಪನ ಕೊಲೆಯಾದ ಸಮಯದಲ್ಲಿ ವೀರಾಂಜನೇಯರಾವ್ ಮತ್ತು ಚಂದ್ರಯ್ಯ ಸ್ವಾಮಿ ಇಬ್ಬರೂ ಆ ಜಾಗದಲ್ಲಿ ಇರದೇ ಇದ್ದುದರಿಂದ, ಇಬ್ಬರ ಬೆರಳ ಗುರುತುಗಳು ಕೊಲೆಗೆ ಉಪಯೋಗಿಸಿದ ಆಯುಧಗಳ ಮೇಲೆ ಇರದೇ ಇದ್ದುದರಿಂದ, ಲಂಕೆಪ್ಪ ನಿಗೂ ಇವರಿಗೂ ಯಾವುದೇ ರೀತಿಯ ವೈಷಮ್ಯತೆ ಇರದೇ ಇದ್ದುದರಿಂದ ಇಬ್ಬರನ್ನೂ ನಿದರ್ೋಷಿಗಳೆಂದು ನ್ಯಾಯಾಲಯ ತೀಮರ್ಾನಿಸಿ ಅವರ ಬಿಡುಗಡೆಗೆ ಆದೇಶ ಹೊರಡಿಸಿತು. ಹಾಗೇಯೇ ನಿಜವಾದ ಅಪರಾ ಧಿಗಳನ್ನು ತೀವ್ರ ಕಂಡು ಹಿಡಿಯಲು ಪೋಲೀಸು ಇಲಾ ಖೆಗೆ ಆದೇಶ ನೀಡಿತು.

ನ್ಯಾಯಾಲಯ ತೀಪರ್ು ಪ್ರಕಟಿಸಿದ ದಿನ ರಾವ್ ಮತ್ತು ಸ್ವಾಮಿ ಇಬ್ಬರೂ ವಿಜಯೋತ್ಸವ ಆಚರಿಸಿದರು. ರಾವ್ ಅವರ ಚಡ್ಡಿ ದೋಸ್ತ್ ಶಂಕರ್ ಪಾಟೀಲರ ಸಂತೋಷಕ್ಕೆ ಮೇರೆಯೇ ಇರಲಿಲ್ಲ. ಎಲ್ಲರ ಕುಟುಂಬದ ಸದಸ್ಯರು ನಿರಾಳವಾಗಿ ಉಸಿರು ಹಾಕಿದರು.

ನ್ಯಾಯಾಲಯದ ತೀಮರ್ಾನ ಬಂದ ಮೂರನೇ ದಿನ ಬೆಳಿಗ್ಗೆ ರಾವ್ ಮತ್ತು ಚಂದ್ರಯ್ಯ ಸ್ವಾಮಿ ಇಬ್ಬರೇ ರಾವ್ ಅವರ ವಸತಿ ಗೃಹದಲ್ಲಿ ಕುಳಿತು ಆಪ್ತ ಸಮಾ ಲೋಚನೆ ನಡೆಸಿದ್ದರು. ಅಷ್ಟರಲ್ಲಿ ರಾವ್ ಅವರ ಆಫೀ ಸಿನ ಜವಾನ ಬಂದು, ಸಾಹೇಬರೇ, ಲಂಕೆಪ್ಪನವರ ಹೆಂಡತಿಯವರು ನಿಮ್ಮನ್ನು ಕಾಣಬೇಕೆಂದು ಬಂದಿದ್ದಾರೆ. ಒಳಗೆ ಕಳುಹಿಸಲೇ? ಎನ್ನುತ್ತಾ ಅವರ ಮುಖ ನೋಡ ತೊಡಗಿದ. ರಾವ್ ಮತ್ತು ಸ್ವಾಮಿ ಇಬ್ಬರೂ ಕಣ್ಣುಬ್ಬು ಏರಿಸುತ್ತಾ ಪರಸ್ಪರ ಮುಖ ನೋಡಿಕೊಂಡರು. ಆಯ್ತು ಕಳುಹಿಸು ಎಂದರು ಸ್ವಾಮಿ.

35ರ ಆಜು ಬಾಜು ವಯಸ್ಸಿನ, ಮೈ ತುಂಬಾ ಸೆರಗು ಹೊದ್ದುಕೊಂಡ ಹೆಂಗಸು ಮೆಲ್ಲಗೆ ಹೆಜ್ಜೆ ಇಡುತ್ತಾ ಒಳಗೆ ನಡೆದು ಬರುತ್ತಿದ್ದುದನ್ನು ಇಬ್ಬರೂ ನೋಡುತ್ತಾ ಕುಳಿತಿದ್ದರು. ಭರ್ಜರಿ ಅಂಗ ಸೌಷ್ಠವದ ಹೆಂಗಸು ಲಂಕೆಪ್ಪನ ಹೆಂಡತಿ. ಒಳಗೆ ಬಂದ ಆಕೆ ನೇರವಾಗಿ ಮೊದಲು ಸ್ವಾಮಿಯ ಕಾಲಿಗೆ ಬಿದ್ದಳು. ನಂತರ ರಾವ್ ಅವರ ಕಾಲು ಹಿಡಿದುಕೊಂಡು ಕಣ್ಣೀರು ಹಾಕುತ್ತಾ, ಸ್ವಾಮೇರಾ ಮತ್ತು ಸಾಹೇಬರಾ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿರಿ. ನಮ್ಮ ಸಂಬಂಧಿಕರ ಮಾತು ಕೇಳಿ ನಿಮ್ಮ ಮೇಲೆ ನನ್ನ ಗಂಡನ ಕೊಲೆಯ ಆರೋಪ ಹೊರಿಸಿದೆ. ನನ್ನ ಬುದ್ಧಿಗೆ ನಿಜ ತಿಳಿಯುವಷ್ಟರಲ್ಲಿ ಕೇಸು ಬಹಳ ಮುಂದುವರೆದಿತ್ತು. ಕುತ್ಸಿತ ಬುದ್ಧಿಯ ನಮ್ಮ ಸಂಬಂಧಿಕರ ವಿಷ ವತರ್ುಲದ ಕಪಿ ಮುಷ್ಟಿಯಲ್ಲಿ ನಾ ಸಿಲುಕಿದ್ದೆ. ಅವರ ಕಪಿ ಮುಷ್ಟಿಯಿಂದ ಹೊರ ಬರುವುದು ದುಸ್ತರವಾಗಿತ್ತು.

ನನ್ನಿಂದ ನಿಮ್ಮ ಘನತೆ, ಗೌರವ, ಮಾನ, ಮಯರ್ಾದೆಗಳಿಗೆ ಸಾಕಷ್ಟು ಧಕ್ಕೆ ಆಗಿದೆ. ನಿಮಗೆ, ನಿಮ್ಮ ಕುಟುಂಬದವರಿಗೆ ಚಿತ್ರ ಹಿಂಸೆ ಕೊಟ್ಟಿದ್ದೇನೆ. ಮಾನಸಿಕವಾಗಿ ನೀವೆಲ್ಲಾ ಬಹಳಷ್ಟು ನೋವನ್ನು ಅನುಭವಿಸುವಂತೆ ನಾ ಮಾಡಿದ್ದೇನೆ. ನೀವೆಲ್ಲಾ ನಿದರ್ೋಷಿಗಳೆಂದು ನನಗೆ ಅನಿಸುತ್ತಿತ್ತು. ನಿಮ್ಮ ಮೇಲಿನ ಕೇಸನ್ನು ವಾಪಾಸು ಪಡೆಯಬೇಕೆಂಬ ನನ್ನ ಸಲಹೆಗೆ ಕವಡೆ ಕಾಸಿನ ಕಿಮ್ಮತ್ತೂ ಇರಲಿಲ್ಲ. ನಾ ಅಸಹಾಕಳಾಗಿದ್ದೆ. ಈಗಲೂ ನಮ್ಮವರು ಮೇಲಿನ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಒತ್ತಾಯಿಸುತ್ತಿದ್ದರೂ ನಾ ಅದಕ್ಕೆ ಒಪ್ಪಿಲ್ಲ. ಈ ಮಧ್ಯೆ ನಿಮ್ಮ ಒಂದು ಮಾತು ನನ್ನ ಕಿವಿಗೆ ಬಿದ್ದಿದೆ. ನೀವು ನನ್ನ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಬೇಕೆಂಬ ವಿಚಾರದಲ್ಲಿರುವಿರೆಂಬ ವಿಷಯ ನನಗೆ ತಿಳಿದು ಬಂದಿದೆ. ದಯವಿಟ್ಟು ಹಾಗೆ ಮಾಡಬೇಡಿರಿ. ನಾನೊಬ್ಬ ಹೆಂಗಸು. ನನ್ನ ಜೀವ, ಮಾನದ ಪ್ರಶ್ನೆ. ನಿಮ್ಮ ತಂಗಿಯೆಂದು ತಿಳಿದುಕೊಂಡು ನನ್ನನ್ನು ಕ್ಷಮಿಸಬೇಕಾಗಿ ವಿನಂತಿ. ಸಧ್ಯಕ್ಕಂತೂ ಸತ್ಯಕ್ಕೆ ಜಯ ಸಿಕ್ಕಿದೆಯೆಂದು ನನ್ನ ಅನಿಸಿಕೆ. ತನ್ನೆದೆಯಲ್ಲಿ ತುಡಿಯುತ್ತಿದ್ದುದನ್ನು ಹೊರ ಹಾಕಿದ್ದಳು ಲಂಕೆಪ್ಪನ ಹೆಂಡತಿ.

2 ದಿನಗಳಿಂದ ರಾವ್ ಮತ್ತು ಸ್ವಾಮಿ ಇಬ್ಬರೂ ಆಕೆಯ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುವ ವಿಚಾರದಲ್ಲೇ ಇದ್ದರು. ಈಗ ನೋಡಿದರೆ ಈಯಮ್ಮ ಹೀಗೆ ಬೇಡಿಕೊಳ್ಳುತ್ತಿದ್ದಾಳೆ. ಅವಳಿಗೆ ತನ್ನ ತಪ್ಪಿನ ಅರಿವಾಗಿದೆ. ಕ್ಷಮೆ ದೈವೀ ಗುಣ ಎನ್ನುತ್ತಾರೆ ಹಿರಿ ಯರು. ಆದದ್ದು ಆಗಿ ಹೋಗಿದೆ. ಕೆಟ್ಟ ಕನಸು ಎಂದು ಮರೆತು ಬಿಡೋಣ. ತಂಗಿಯೆಂದು ಬೇರೆ ಹೇಳುತ್ತಿ ದ್ದಾಳೆ. ಎಷ್ಟಾದರೂ ಹೆಂಗಸು. ಸತ್ಯ ಅಂತೂ ಎಲ್ಲರಿ ಗೂ ಗೊತ್ತಾಗಿದೆ. ಕ್ಷಮಿಸಿಬಿಟ್ಟರಾಯಿತೆಂದು ಇಬ್ಬರೂ ನಿಧರ್ಾರಕ್ಕೆ ಬಂದರು. ರಾವ್ ಮತ್ತು ಸ್ವಾಮಿ ಇಬ್ಬರೂ ಲಂಕೆಪ್ಪನ ಹೆಂಡತಿಗೆ, ಸರಿ ತಂಗೆಮ್ಮ ಎಂದರು. ಮೂವರ ವದನದಲ್ಲಿ ಸಂತಸದ ಛಾಯೆ ಎದ್ದು ಕಾಣುತ್ತಿತ್ತು.


ಎಸ್. ಶೇಖರಗೌಡ,


ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., ಲಿಂಗಸ್ಗೂರು
(9448989332)

No comments:

Post a Comment

Thanku