Friday, January 13, 2012

ಜನಪರ ಪತ್ರಿಕೋದ್ಯಮದ ಮುಂದಿನ ಸವಾಲುಗಳು..?

ಭಾರತದ ತುತರ್ುಪರಿಸ್ಥಿತಿ ಸಂದರ್ಭದಲ್ಲಿ ಪ್ರಭುತ್ವವು ಮಾಧ್ಯಮದ ಮೇಲೆ ಹೇರಿದ ಪ್ರತ್ಯಕ್ಷ ಅಂಕುಶದ ವಿರುದ್ಧ ಇಡಿ ಪತ್ರಿಕೋದ್ಯಮ ಸೆಟೆದು ನಿಂತು ತನ್ನ ವಾಚ್ಡಾಗ್ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಒಂದೇ ಬಗೆಯ ಸರಕುಗಳನ್ನು ಮಾರಾಟ ಮಾಡುವವರಲ್ಲಿ ಪೈಪೋಟಿ ಇರುವಂತೆ ಒಂದೇ ಬಗೆಯ ಸುದ್ದಿಯನ್ನು ಬಿತ್ತರಿಸಬೇಕಾದ ಮಾಧ್ಯಮಗಳ ನಡುವೆಯೂ ಕತ್ತು ಕೊಯ್ಯುವ ಸ್ಪಧರ್ೆ ಏರ್ಪಟ್ಟಿದೆ ಎಂದು ವಿಶ್ಲೇಷಿಸುತ್ತಾರೆ ಅಂಕಣಕಾರರಾದ ಶಿವಸುಂದರ್

ಪ್ರಾಯಶಃ ಪತ್ರಿಕೋದ್ಯಮದಲ್ಲಿ ಈ ರೀತಿ ಜನಪರ ಪತ್ರಿಕೋದ್ಯಮ ಎಂದು ವಿಭಾಗೀಕರಣ ಮಾಡಬೇಕಾಗಿ ಬಂದಿರುವುದೇ ಸಮಕಾಲೀನ ಪತ್ರಿಕೋದ್ಯಮದ ದುರಂತ ಹಾಗೂ ಪ್ರಮುಖ ಸವಾಲೂ ಆಗಿದೆ. ವಾಸ್ತವವಾಗಿ ಪತ್ರಿಕೋದ್ಯಮದ ಹುಟ್ಟಿನಲ್ಲೇ ಜನಪರವಾಗಿರಬೇಕಾದ ಆಶಯ ಅಡಕವಾಗಿದೆ. ತಮ್ಮ ಬದುಕು ಮತ್ತು ಭವಿಷ್ಯವನ್ನು ಪ್ರಭಾವಿಸುವ ಸಂಗತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾಯಕವೇ ತನ್ನಂತೆ ತಾನೇ ಒಂದು ಜನಪರ ಕೆಲಸ. ಜನಸಾಮಾನ್ಯರು ಪ್ರಮುಖವಾಗುವ ಪ್ರಜಾಪ್ರಭುತ್ವದ ಅಡಿಗಲ್ಲುಗಳಲ್ಲಿ ಮುಕ್ತಪತ್ರಿಕೋದ್ಯಮ ಪ್ರಮುಖವಾಗುವುದು ಈ ಕಾರಣದಿಂದಲೇ. ಆದ್ದರಿಂದಲೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಸ್ಥಿಭಾರವೆಂದು ಪರಿಗಣಿಸಲಾಗುತ್ತದೆ. ದೇಶದ ಆಗುಹೋಗುಗಳ ಬಗ್ಗೆ ಕಲ್ಲುಕೋಟೆಗಳ ಮುಚ್ಚಿದ ಬಾಗಿಲುಗಳ ಒಳಗೆ ನೀತಿಗಳು ರೂಪುಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದರ ಬಗ್ಗೆ ಮಾಹಿತಿಯನ್ನು ಮತ್ತು ಸಂದರ್ಭದ ವಿಶ್ಲೇಷಣೆಯನ್ನು ಒದಗಿಸುವುದು ಪತ್ರಿಕೋದ್ಯಮದ ಪ್ರಮುಖ ಕರ್ತವ್ಯ. ಆಗ ಮಾತ್ರ ಜನತೆಯು ನಿಜವಾದ ಅರ್ಥದಲ್ಲಿ ಪಾಲ್ಗೊಳ್ಳುವ ರಾಜಕೀಯ ವ್ಯವಸ್ಥೆ ಸಾಕಾರವಾಗಲು ಸಾಧ್ಯ.

ಆದ್ದರಿಂದಲೇ ಪ್ರಜಾತಂತ್ರವಿರದ ಊಳಿಗ ಮಾನ್ಯ ಪ್ರಭುತ್ವಗಳು, ರಾಜಸತ್ತೆಗಳು, ಸವರ್ಾಧಿಕಾರಿ ಆಡಳಿತ ವ್ಯವಸ್ಥೆಗಳು ಮತ್ತು ವಸಾಹತುಶಾಹಿ ಶೋಷಣೆಗೆ ಗುರಿಯಾಗಿದ್ದ ದೇಶಗಳ ಅಧಿಕಾರಸ್ಥರು ಮುಕ್ತ ಪತ್ರಿಕೋದ್ಯಮಕ್ಕೆ ಬದ್ಧ ವಿರೋಧಿಗಳಾಗಿದ್ದರು. ಇಲ್ಲಿ ಮುಕ್ತ ಪತ್ರಿಕೋದ್ಯಮವೆಂದರೆ ಪ್ರಭುತ್ವದ ಆಮಿಷ ಮತ್ತು ದಮನಗಳಿಗೆ ಜಗ್ಗದ ಪತ್ರಿಕೋದ್ಯಮ, ಸತ್ಯಕ್ಕೆ ನಿಷ್ಟವಾಗಿದ್ದ ಪತ್ರಿಕೋದ್ಯಮ ಎಂಬುದೆ ಆಗಿತ್ತು. ಆದರೆ ಇಂದು ವಸಾಹತು ಯುಗವು ಹೆಚ್ಚು ಕಡಿಮೆ ಮುಗಿದು ಜಗತ್ತಿನ ಬಹುತೇಕ ಕಡೆ ಪ್ರಜಾಪ್ರಭುತ್ವದ ಹೆಸರಿನ ಆಡಳಿತ ವ್ಯವಸ್ಥೆಗಳೇ ಅಸ್ತಿತ್ವದಲ್ಲಿವೆ.

ಈ ಎಲ್ಲ ರಾಷ್ಟ್ರಗಳು ತಮ್ಮ ತಮ್ಮ ಸಂವಿಧಾನಗಳಲ್ಲಿ ಮುಕ್ತ ಪತ್ರಿಕೋದ್ಯಮವನ್ನು ತಮ್ಮ ದೇಶದ ಪ್ರಜಾತಂತ್ರದ ಅಸ್ಥಿಭಾರಗಳಲ್ಲಿ ಒಂದೆಂದು ಘೋಷಿಸಿಕೊಂಡಿವೆ. ಆ ನಿಟ್ಟಿನಲ್ಲಿ ಪ್ರಭುತ್ವ ಮಧ್ಯ ಪ್ರವೇಶವಿರದ ಹಲವಾರು ಮಾಧ್ಯಮ ನೀತಿಗಳನ್ನು ಮತ್ತು ಕಾನೂನನ್ನು ಜಾರಿಗೊಳಿಸಿವೆ. ಇವೆಲ್ಲವೂ ನಿಜವೇ! ಆದರೂ ನಮ್ಮ ಪತ್ರಿಕೋದ್ಯಮ ನಿಜಕ್ಕೂ ಮುಕ್ತ ಪತ್ರಿಕೋದ್ಯಮವೇ? ಜನಪರವೇ? ಎಂಬ ಪ್ರಶ್ನೆಯಂತೂ ಬಗೆಹರಿದಿಲ್ಲ. ಪತ್ರಿಕೋದ್ಯಮಕ್ಕೆ ಪ್ರಮುಖವಾಗಿ ಎರಡು ಕರ್ತವ್ಯಗಳಿವೆ. ಒಂದು ಆಳುವ ವರ್ಗ ನಿಜಕ್ಕೂ ಸಂವಿಧಾನಬದ್ಧವಾಗಿ ಅಥರ್ಾತ್ ಪ್ರಜಾತಾಂತ್ರಿಕವಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಪ್ರಜಾತಂತ್ರದ ಕಾವಲು ನಾಯಿಗಳಂತೆ-ವಾಚ್ಡಾಗ್ಗಳಂತೆ ಕೆಲಸ ಮಾಡುವುದು.

ಎರಡನೆಯದು ಜನತೆಗೆ ಆಗು ಹೋಗುಗಳ ಬಗ್ಗೆ ಸುದ್ದಿ, ಸೂಕ್ಷ್ಮವಿಶ್ಲೇಷಣೆ, ನಿದರ್ಿಷ್ಟ ಬೆಳವಣಿಗೆಗೆ ಕಾರಣವಾದ ಸಂದರ್ಭ, ಮತ್ತು ಆ ಮಾಹಿತಿಗಳೆಲ್ಲದರ ಸಂಶ್ಲೇಷಣೆ. ಇವೆರಡು ಯಾವುದೇ ಜವಾಬ್ದಾರಿಯುತ ಪತ್ರಿಕೋದ್ಯಮದ ಜವಾಬ್ದಾರಿಯಾಗಿರುತ್ತದೆ. ಭಾರತದ ತುತರ್ುಪರಿಸ್ಥಿತಿ ಸಂದರ್ಭದಲ್ಲಿ ಪ್ರಭುತ್ವವು ಮಾಧ್ಯಮದ ಮೇಲೆ ಹೇರಿದ ಪ್ರತ್ಯಕ್ಷ ಅಂಕುಶದ ವಿರುದ್ಧ ಇಡಿ ಪತ್ರಿಕೋದ್ಯಮ ಸೆಟೆದು ನಿಂತು ತನ್ನ ವಾಚ್ಡಾಗ್ ಜವಾಬ್ದಾರಿಯನ್ನು ನಿರ್ವಹಿಸಿತ್ತು. ಅಷ್ಟು ಮಾತ್ರವಲ್ಲ, ತಮ್ಮದೇ ಆದ ಕಾರಣಗಳಿಗಾಗಿ ಜನತೆಯ ಒಂದು ವಿಭಾಗ ಭಾರತದ ಪ್ರಭುತ್ವದ ವಿರುದ್ಧ ಸಂವಿಧಾನ ಬಾಹಿರ ಚಳವಳಿಯಲ್ಲಿ ತೊಡಗಿರುವ ಕಾಶ್ಮೀರ, ಈಶಾನ್ಯ ಭಾರತ, ನಕ್ಸಲೈಟ್ ಚಳವಳಿ ಪ್ರಬಲವಾಗಿರುವ ಪ್ರದೇಶಗಳಲ್ಲೂ ಪ್ರಭುತ್ವ ಮತ್ತು ಆಡಳಿತಾರೂಢರು ವಿಧಿಸಿದ ಅಂಕುಶವನ್ನು ಮೀರಿ ಪತ್ರಿಕೋದ್ಯಮವು ತನ್ನ ಪ್ರಜಾತಾಂತ್ರಿಕ ಜವಾಬ್ದಾರಿಯನ್ನು ನಿರ್ವಹಿಸಲು ಉತ್ತಮ ಪ್ರಯತ್ನವನ್ನೇ ನಡೆಸಿದೆ ಎಂದೇ ಹೇಳಬೇಕು.

ಆದರೆ, ಇಂದು ಮುಕ್ತ ಪತ್ರಿಕೋದ್ಯಮ ಎದುರಿಸುತ್ತಿರುವ ಸವಾಲು ಬೇರೆ ಬಗೆಯದು. ಜಾಗತೀಕರಣದ ಈ ಕಾಲಘಟ್ಟದಲ್ಲಿ ಪ್ರಭುತ್ವ ಬಿಡಿಬಿಡಿಯಾಗಿ ಖಾಸಗೀಕರಣಗೊಳ್ಳುತ್ತಾ ಮುಕ್ತ ಮಾರುಕಟ್ಟೆಯ ಹೆಸರಲ್ಲಿ ಮಾರುಕಟ್ಟೆ ಶಕ್ತಿಗಳು ಎಲ್ಲ ಆಥರ್ಿಕ ಮತ್ತು ರಾಜಕೀಯ ವ್ಯವಹಾರಗಳನ್ನು ವಶಪಡಿಸಿಕೊಳ್ಳುತ್ತಿವೆ. ಮುಕ್ತ ಪತ್ರಿಕೋದ್ಯಮದ ಪ್ರಾರಂಭದ ದಿನಗಳಲ್ಲಿ ರಾಜಕೀಯ ಮತ್ತು ಆಥರ್ಿಕತೆಯ ಮೇಲೆ ಸಂಪೂರ್ಣ ಪರಮಾಧಿಕಾರ ಹೊಂದಿದ್ದ ಪ್ರಭುತ್ವವನ್ನು ವಿಮಶರ್ೆಗೆ ಗುರಿ ಮಾಡುತ್ತಾ ಜನತೆಯ ಪರವಾಗಿ ಶಾಶ್ವತ ವಿರೋಧ ಪಕ್ಷದ ಪಾತ್ರ ವಹಿಸುತ್ತಿದ್ದ ಮಾಧ್ಯಮಗಳು ಇಂದು ಪ್ರಭುತ್ವದ ಜಾಗವನ್ನು ಆಕ್ರಮಿಸಿರುವ ಮಾರುಕಟ್ಟೆ ಶಕ್ತಿಗಳ ಬಗ್ಗೆ ಇದೇ ಬಗೆಯ ವಿಮಶರ್ಾತ್ಮಕ ದೃಷ್ಟಿಕೋನ ಮತ್ತು ದೂರವನ್ನು ಹೊಂದಿವೆಯೇ?

ಮಾರುಕಟ್ಟೆ ಶಕ್ತಿಗಳ ಬಗ್ಗೆ ಜನತೆಯ ಪರವಾಗಿ ವಾಚ್ ಡಾಗ್ ಪಾತ್ರವನ್ನು ವಹಿಸುತ್ತಿದೆಯೇ? ಜನತೆಗೆ ಮಾರುಕಟ್ಟೆ ಶಕ್ತಿಗಳ ಬಗ್ಗೆ ಸುದ್ದಿ, ಸೂಕ್ಷ್ಮವಿಶ್ಲೇಷಣೆ, ಮತ್ತು ಸಂಶ್ಲೇಷಣೆಗಳನ್ನು ಒದಗಿಸುತ್ತಿವೆಯೇ? ಇತ್ತೀಚೆಗೆ ಯೂರೋಪಿನ ಸ್ಯಾಲಸ್ಬರಿ ಎಂಬಲ್ಲಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಮುಖ್ಯಸ್ಥರ ದೊಡ್ಡ ಸಮ್ಮೇಳನವೊಂದು ನಡೆಯಿತು. ಅದರಲ್ಲಿ ಪ್ರತಿಯೊಬ್ಬರೂ ವ್ಯಕ್ತ ಪಡಿಸಿದ ಸರ್ವಸಮ್ಮತ ಅಭಿಪ್ರಾಯವೆಂದರೆ ಲಾಭವನ್ನು ಅಧಿಕಗೊಳಿಸಬೇಕೆಂಬ ಆಶಯವು ಪತ್ರಿಕೋದ್ಯಮದ ಇತರ ಎಲ್ಲ ಧ್ಯೇಯಗಳನ್ನು ಬದಿಗೆ ತಳ್ಳಿದೆ ಎಂಬುದು.

ಮಾರುಕಟ್ಟೆ ಮತ್ತು ಲಾಭ ಪತ್ರಿಕೋದ್ಯಮವನ್ನು ಕಬಳಿಸಿದ ನಂತರ ಇಂದಿನ ಪತ್ರಿಕೋದ್ಯಮದ ಗುಣಲಕ್ಷಣಗಳು ಸಂಪೂರ್ಣವಾಗಿ ಬಂಡವಾಳಶಾಹಿ ಸ್ವರೂಪವನ್ನು ಪಡೆದುಕೊಂಡಿವೆ. ಮಾರುಕಟ್ಟೆ ನೀತಿ ಸಂಹಿತೆಯ ಪ್ರಕಾರ ಸುದ್ದಿ ಎಂಬುದು ಜನರಿಗೆ ಒದಗಿಸಬೇಕಾದ ಅತ್ಯಗತ್ಯ ಮಾಹಿತಿಯಲ್ಲ. ಬದಲಿಗೆ ಸುದ್ದಿಯೂ ಈಗೊಂದು ಮಾರಾಟವಾಗಬೇಕಾದ ಸರಕು. ಲಾಭವನ್ನು ಗಳಿಸಿಕೊಡಬೇಕಾದ ಸರಕು. ಬಂಡವಾಳಶಾಹಿ ಮಾರುಕಟ್ಟೆಯಲ್ಲಿ ಸರಕುಗಳ ಮಾರಾಟದ ನಿಯಮಗಳಿಗೆ ಯಾವ ಜನಪರತೆಯ ಲೇಪವೂ ಇರುವುದಿಲ್ಲ. ಒಂದೇ ಬಗೆಯ ಸರಕುಗಳನ್ನು ಮಾರಾಟ ಮಾಡುವವರಲ್ಲಿ ಪೈಪೋಟಿ ಇರುವಂತೆ ಒಂದೇ ಬಗೆಯ ಸುದ್ದಿಯನ್ನು ಬಿತ್ತರಿಸಬೇಕಾದ ಮಾಧ್ಯಮಗಳ ನಡುವೆಯೂ ಕತ್ತು ಕೊಯ್ಯುವ ಸ್ಪಧರ್ೆ ಏರ್ಪಟ್ಟಿದೆ.

ಹಲವು ಸ್ಪಧರ್ಿಗಳ ನಡುವೆ ಜನ ತಮ್ಮ ಸರಕನ್ನೇ ಕೊಳ್ಳುವಂತೆ ಮಾಡಲು ಬಂಡವಾಳಶಾಹಿಗಳು ಅನುಸರಿಸುವ ಮಾರ್ಗವನ್ನೇ ಈಗ ಮಾಧ್ಯಮ ಸಂಸ್ಥೆಗಳು ಅನುಸರಿಸುತ್ತಿವೆ. ಇಂದಿನ ಮಾರುಕಟ್ಟೆಯಲ್ಲಿ ಸರಕಿನ ಗುಣಮಟ್ಟಕ್ಕಿಂತ ಅದರ ಪ್ಯಾಕೇಜೇ ಮುಖ್ಯವಾಗುವಂತೆ ಸುದ್ದಿ ಏನು ಅನ್ನುವುದಕ್ಕಿಂತ ಎಷ್ಟು ರೋಚಕವಾಗಿ ಅದನ್ನು ಮುಂದಿಡಲಾಗುತ್ತದೆ ಎಂಬುದೇ ಆ ಸುದ್ದಿ ಸರಕಿನ ಮಾರಾಟವನ್ನು ನಿರ್ಧರಿಸುತ್ತದೆ. ಹೀಗಾಗಿ ಇಂದಿನ ಪತ್ರಿಕೋದ್ಯಮದಲ್ಲಿ ಯಾವುದು ಪ್ರಮುಖ ಸುದ್ದಿಯಾಗುತ್ತದೆ ಎಂಬುದು ತೀಮರ್ಾನಗೊಳ್ಳುವುದು ಅದು ಎಷ್ಟು ರೋಚಕತೆಯನ್ನು ಹೊಂದಿದೆ ಎಂಬುದರಿಂದಲೇ. ಮುಂಬೈ ಟೆರರ್ ದಾಳಿ 60 ಗಂಟೆ ಬ್ರೇಕ್ ಇಲ್ಲದೇ ಪ್ರಸಾರವಾಗುವುದು ಮತ್ತು ಅದೇ ಸಮಯದಲ್ಲಿ ದೇಶದ ಇತರ ಹಿಂದುಳಿದ ವರ್ಗಗಳ ಪರವಾದ ಕಾಳಜಿ ಇಟ್ಟುಕೊಂಡ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಸಾವು ಸುದ್ದಿಯೇ ಆಗದಿರುವುದು ಇದೇ ಕಾರಣದಿಂದಲೇ.

ಈ ರೀತಿಯಲ್ಲಿ ಮಾರುಕಟ್ಟೆಯು ಸುದ್ದಿಯ ಆಯ್ಕೆಯನ್ನು ನಿರ್ಧರಿಸುತ್ತಿದ್ದಂತೆ ಜನಸಾಮಾನ್ಯರ ಹಿತಾಸಕ್ತಿ ಸಹಜವಾಗಿಯೇ ಹಿಂದಕ್ಕೆ ಸರಿಯಲಾರಂಭಿಸುತ್ತದೆ. ತನ್ನ ಓದುಗ ವರ್ಗ ಅಥವಾ ನೋಡುವ ವರ್ಗ ಕೊಳ್ಳಬಲ್ಲ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ಎಂದು ನಿರ್ಧರಿಸಿಕೊಂಡಿರುವ ಈ ಮಾಧ್ಯಮ ಸಂಸ್ಥೆಗಳು ಆ ವರ್ಗದ ಅಭಿರುಚಿಯನ್ನು ತಾನು ಗ್ರಹಿಸಿಕೊಂಡಿರುವ ರೀತಿಯಲ್ಲಿ ಉತ್ತೇಜಿಸುತ್ತಿವೆ ಮತ್ತು ಪುನರ್ ರೂಪಿಸುತ್ತಿವೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಾರಂಭವಾದ ಇಂಗ್ಲಿಷ್ ದಿನಪತ್ರಿಕೆಯೊಂದು ತನ್ನ ಓದುಗ ವರ್ಗ ಬೆಂಗಳೂರಿನ ಜಾಲಿ ಗೋಯಿಂಗ್ ಮಧ್ಯಮ ವರ್ಗವಾಗಿರುವುದರಿಂದ ರೈತರ ಆತ್ಮಹತ್ಯೆ, ನಗರದ ಕೊಳೆಗೇರಿ ನಿವಾಸಿಗಳ ಗೋಳು ಇನ್ನಿತ್ಯಾದಿಗಳ ಬಗ್ಗೆ ಬರೆಯಬೇಡಿ ಎಂದು ಸ್ಪಷ್ಟವಾಗಿ ನಿದರ್ೇಶನ ಕೊಟ್ಟಿದೆಯಂತೆ. ಅದು ಕೇವಲ ಆ ದಿನಪತ್ರಿಕೆಯೊಂದರ ನೀತಿಯೇನಲ್ಲ. ಈ ಹಿಂದೆ ಎಲ್ಲ ಪತ್ರಿಕೆಗಳಲ್ಲೂ ರೈತರ, ಕಾಮರ್ಿಕರ, ಇನ್ನಿತರ ಜನವರ್ಗಗಳ ಆಗು ಹೋಗುಗಳನ್ನು ವರದಿ ಮಾಡಲೆಂದೇ ವಿಶೇಷ ವರದಿಗಾರರಿರುತ್ತಿದ್ದರು. ಇಂದು ಬಹುಪಾಲು ಪತ್ರಿಕೆಗಳಲ್ಲಿ ಆ ಬಗೆಯ ಬೀಟ್ಗಳನ್ನೇ ತೆಗೆದು ಹಾಕಲಾಗಿದೆ. ಪ್ರಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಹೇಳುವಂತೆ ಕೆಲವು ವರ್ಷಗಳ ಹಿಂದೆ ನಡೆದ ಲ್ಯಾಕ್ಮೆ ಫ್ಯಾಷನ್ ಶೋ ವರದಿ ಮಾಡಲು 400 ಕ್ಕೂ ಹೆಚ್ಚು ವರದಿಗಾರರು ಬೇರೆ ಬೇರೆ ಸಂಸ್ಥೆಗಳಿಂದ ನಿಯುಕ್ತಿಗೊಂಡಿದ್ದರು.

ಆದರೆ, ಅದೇ ಸಮಯದಲ್ಲಿ ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ರೈತರ ಪರಿಸ್ಥಿತಿಯನ್ನು ವರದಿ ಮಾಡಲು ಹತ್ತು ವರದಿಗಾರರೂ ಸಹ ನಿಯುಕ್ತಿಗೊಂಡಿರಲಿಲ್ಲ. ಕುಡಿಯುವ ನೀರಿನ ಖಾಸಗೀಕರಣದಿಂದಾಗಿ ಮತ್ತು ಆರೋಗ್ಯ ಸೇವೆಗಳ ಖಾಸಗೀಕರಣದಿಂದಾಗಿ ದೇಶಾದ್ಯಂತ ಮಲೇರಿಯಾ ಹಾಗೂ ಕಾಲರಾಗಳಿಂದ ಲಕ್ಷಾಂತರ ಭೇದಿ-ವಾಂತಿಗಳಿಂದ ಸಾಯುತ್ತಿದ್ದರೆ ಅದರ ಬಗ್ಗೆ ಒಂದೂ ಸಾಲು ವರದಿ ಮಾಡದ ಮಾಧ್ಯಮಗಳು ಅಮಿತಾಭ್ ಬಚ್ಚನ್ ಆಸ್ಪತ್ರೆಯಲ್ಲಿ ಬೆಳಗ್ಗೆ ಮಲವಿಸರ್ಜನೆ ಮಾಡಿದ್ದನ್ನು ಬ್ರೇಕಿಂಗ್ ನ್ಯೂಸ್ ಎಂಬಂತೆ ವರದಿ ಮಾಡುತ್ತಿರುವುದು ಸಹ ಸುದ್ದಿ ಮಾಧ್ಯಮಗಳ ನೀತಿ ಸಂಹಿತೆಯೇ ಬದಲಾಗುತ್ತಿರುವುದರ ಪರಿಣಾಮ. ಹೀಗೆ ಸುದ್ದಿ ಎಂದರೆ ಏನು ಮತ್ತು ಅದನ್ನು ಏಕೆ ಮತ್ತು ಹೇಗೆ ವರದಿ ಮಾಡಬೇಕು ಎಂಬುದರ ಬಗೆಗಿನ ಗ್ರಹಿಕೆಯನ್ನೇ ಲಾಭದ ಲಾಲಸೆ ಸಂಪೂರ್ಣವಾಗಿ ಬದಲು ಮಾಡಿದೆ. ಈ ಮಾರುಕಟ್ಟೆ ಸಂಹಿತೆಯು ಜನ ಯಾವುದನ್ನು ಬಯಸುತ್ತಾರೋ ಅದನ್ನು ಕೊಡುತ್ತೇವೆ ಎಂಬ ಆತ್ಮವಂಚಕ ತರ್ಕವನ್ನು ಮುಂದಿಡುತ್ತಿದರೂ ಅಸಲಿ ವಿಷಯವೆಂದರೆ ಇತರ ಉದ್ಯಮಗಳಲ್ಲಿ ಕೃತಕ ಬೇಡಿಕೆಯನ್ನು ಸೃಷ್ಟಿಸಿ ಮಾರುಕಟ್ಟೆಯನ್ನು ಗಿಟ್ಟಿಸಿಕೊಳ್ಳುವಂತೆ ಪತ್ರಿಕೋದ್ಯಮದಲ್ಲೂ ಸಹ ಕೃತಕ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತಿದೆ.

ಹಲವು ವರ್ಷಗಳ ಹಿಂದೆ ಕ್ರೈಂ ನ್ಯೂಸ್, ಕ್ರೈಂ ಸ್ಟೋರಿ, ಹೀಗೂ ಉಂಟೇ, ಅಗೋಚರ ಇನ್ನಿತರ ಕಾರ್ಯಕ್ರಮಗಳನ್ನು ನೋಡದೆಯೂ ಸಹ ಜನ ಮಲಗುತ್ತಿದ್ದರು. ಆದರೆ ಇವತ್ತು ಹಸಿ ಹಿಂಸೆ ಮತ್ತು ಮೌಢ್ಯಗಳನ್ನು ರೋಚಕವಾಗಿ ಬಿತ್ತರಿಸುವ ಮೂಲಕ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲಾಗಿದೆ. ಅಷ್ಟರ ಮಟ್ಟಿಗೆ ಜನರ ಅಭಿರುಚಿಗಳನ್ನೂ ಸಹ ಭ್ರಷ್ಟಗೊಳಿಸಲಾಗುತ್ತಿದೆ. ಅದೇ ರೀತಿ ದೃಶ್ಯ ಮಾಧ್ಯಮಗಳು ವಿಶೇಷವಾಗಿ ಹುಟ್ಟು ಹಾಕಿರುವ ಬ್ರೇಕಿಂಗ್ ನ್ಯೂಸ್ ಸಂಸ್ಕೃತಿ. ಇದು ಅನಗತ್ಯವಾದ, ಅಸಂಗತವಾದ ಸುದ್ದಿಗಳನ್ನು ಸಹ ದೇಶದ ಅತಿ ಪ್ರಮುಖ ವಿದ್ಯಮಾನವೆಂಬಂತೆ ತೋರಿಸುತ್ತವೆ. ಸುದ್ದಿಯನ್ನು ರೋಚಕ ರೂಪದಲ್ಲಿ ಮಾತ್ರ ಗ್ರಹಿಸುವಂತೆ ಮಾಡುವ ಈ ಹೊಸ ಸಂಸ್ಕೃತಿ ವಿಶ್ಲೇಷಣೆ ಮಾಡಿ ತಪ್ಪು ಸರಿಗಳನ್ನು ನಿರ್ಧರಿಸಬಲ್ಲ ಜ್ಞಾನವಂತ ಪ್ರಬುದ್ಧ ನಾಗರಿಕರನ್ನು ಸೃಷ್ಟಿ ಮಾಡುವ ಬದಲು ಪ್ರಶ್ನಿಸದೇ ಒಪ್ಪಿಕೊಳ್ಳುವ ಗ್ರಾಹಕನನ್ನಷ್ಟೇ ಸೃಷ್ಟಿಸುತ್ತಿದೆ.

ಹೀಗಾಗಿ ತಂತ್ರಜ್ಞಾನ ಇನ್ನಿತ್ಯಾದಿ ಕಾರಣದಿಂದ ಮಾಹಿತಿಯ ಪ್ರವಾಹವೇ ಹರಿದು ಬರುತ್ತಿದೆ. ಆದರೆ ಅದರಲ್ಲಿ ಶೇ.90ರಷ್ಟು ಸುದ್ದಿಗೆ ಅರ್ಹವಲ್ಲದ ಮಾಹಿತಿ ಎಂದು ವರದಿಗಳು ತಿಳಿಸುತ್ತದೆ. ಪ್ರತಿ ವರ್ಷವೂ ಮೂರು ಪಟ್ಟು ಮಾಹಿತಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇಂದಿನ ಪತ್ರಿಕೋದ್ಯಮದ ಬಹುದೊಡ್ಡ ಸವಾಲು ಮಾಹಿತಿಯಿಂದ ಜ್ಞಾನವನ್ನು ಹಿಂಡಿ ತೆಗೆಯುವುದೇ ಆಗಿದೆ. ಆದರೆ ಮಾಹಿತಿಯಿಂದ ಜ್ಞಾನವನ್ನು ಹಿಂಡಿ ತೆಗೆಯುವ ಸಾಹಸಕ್ಕೆ ಹೋಗದ ಇಂದಿನ ಪತ್ರಿಕೋದ್ಯಮ ಜೊಳ್ಳನ್ನೇ ಕಾಳೆಂದು ಉಣಬಡಿಸುತ್ತಿದೆ. ಇದು ಒಂದು ಪ್ರಬುದ್ಧ ಮತ್ತು ಜೀವಂತ ಪ್ರಜಾತಂತ್ರವನ್ನು ಬುಡದಿಂದಲೇ ನಾಶ ಮಾಡುವ ಮಾರುಕಟ್ಟೆಯ ಕುತಂತ್ರವಲ್ಲದೇ ಬೇರೇನಲ್ಲ.

ಇದರ ಅರ್ಥ ಮಾರುಕಟ್ಟೆ ಶಕ್ತಿಗಳ ಈ ಲಾಭಕೋರತೆಗೆ ಇತರ ಯಾವುದೇ ಸಿದ್ಧಾಂತಗಳ ಸೋಂಕಿರುವುದಿಲ್ಲ ಎಂದು ಭಾವಿಸಿದರೇ ತಪ್ಪಾದೀತು. ಲಾಭದಾಯಕತೆಯನ್ನು ಇತರ ಎಲ್ಲ ಮೌಲ್ಯಗಳಿಗಿಂತಲೂ ಪ್ರಧಾನವಾಗಿಸುವ ನೀತಿ ಸಂಹಿತೆ ಸಹಜವಾಗಿ ಸಮಾಜಮುಖಿ ಮೌಲ್ಯಗಳಿಗೂ ಮತ್ತು ಸಮಾಜವಾದಿ ಆಶಯಗಳಿಗೂ ವಿರುದ್ಧವಾಗಿರುತ್ತದೆ. ಅದರಲ್ಲೂ ಪತ್ರಿಕೋದ್ಯಮವು ಒಂದು ಬಂಡವಾಳಶಾಹಿ ಉದ್ಯಮವಾದ ಮೇಲೆ ಜಾಗತೀಕರಣದ ಈ ಸನ್ನಿವೇಶದಲ್ಲಿ ಇಡೀ ಪತ್ರಿಕೋದ್ಯಮವೂ ಸಹ ಕೆಲವೇ ಬಂಡವಾಳಶಾಹಿ ಸಂಸ್ಥೆಗಳ ಏಕಸ್ವಾಮ್ಯವಾಗುತ್ತಿದೆ.

ಸುದ್ದಿಯ ಮೂಲಕ ಬಂಡವಾಳಶಾಹಿ ಸಿದ್ಧಾಂತವೂ ಮತ್ತು ಅದಕ್ಕೆ ಅನುಕೂಲಕಾರಿಯಾದ ಇತರ ಮೌಲ್ಯಗಳನ್ನೂ ಅದೂ ವಾಸ್ತವತೆಯ ಹೆಸರಲ್ಲಿ ನಿರಂತರವಾಗಿ ಬಿತ್ತುತ್ತಿದೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವು ಪ್ರಾರಂಭವಾದಾಗ ಎಲ್ಲ ಸರಕಾರಿ ಸಂಸ್ಥೆಗಳನ್ನು ಸರಕಾರದ ಸಬ್ಸಿಡಿಯ ಮೇಲೆ ಬದುಕುವ ಬಿಳಿ ಆನೆಗಳೆಂದು ಹೀಯ್ಯಾಳಿಸಿದ ಮಾಧ್ಯಮಗಳು ಮುಕ್ತ ಮಾರುಕಟ್ಟೆಯ ಯುಗದಲ್ಲಿ ಸಕರ್ಾರ ತನ್ನ ಸಂಸ್ಥೆಗಳಿಗೆ ವಿಶೇಷ ರಿಯಾಯತಿ ಕೊಡುವುದು ಅಕ್ಷಮ್ಯ ಅಪರಾಧವೆಂದು ತಮ್ಮ ಮಾಲಕರ ವಾದವನ್ನು ರೋಚಕ ಪ್ಯಾಕೇಜುಗಳಲ್ಲಿ ಮುಂದಿಟ್ಟವು.

ಆದರೆ ಅದೇ ಸಮಯದಲ್ಲಿ ವಿದೇಶಿ ಬಂಡವಾಳಕ್ಕೆ ಮತ್ತು ಐಟಿ ಬಿಟಿಗಳಿಗೆ ಮತ್ತು ವಿಶೇಷ ಆಥರ್ಿಕ ವಲಯದಲ್ಲಿ ಖಾಸಗಿ ಉದ್ಯಮಗಳಿಗೆ ವಿಶೇಷ ರಿಯಾಯಿತಿಗಳನ್ನು ಕೊಡುತ್ತಿರುವುದೂ ಸಹ ಮುಕ್ತ ಮಾರುಕಟ್ಟೆ ಸಂಹಿತೆಗೆ ವಿರುದ್ಧವೆಂಬುದನ್ನು ಯಾವ ಮಾಧ್ಯಮಗಳೂ ಸಹ ಬಿತ್ತರಿಸಲಿಲ್ಲ. ಮಾರುಕಟ್ಟೆಯಲ್ಲಿ ಬಲವಿದ್ದವು ಬದುಕುತ್ತವೆ ಇಲ್ಲದವು ಸಾಯುತ್ತವೆ. ಅದೆ ಸಹಜ ನಯಮ ಎಂದು ಸರಕಾರಿ ಸಂಸ್ಥೆಗಳ ಸಾವಿಗೆ ಕಣ್ಣೀರಿಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿದ್ದ ಮಾಧ್ಯಮಗಳು ಇದೀಗ ತಮ್ಮದೇ ದುರಾಸೆಯಿಂದಾಗಿ ಸಾವು ತಂದುಕೊಂಡಿರುವ ಅಮೆರಿಕದ ಬ್ಯಾಂಕಿಂಗ್ ಸಂಸ್ಥೆಗಳ ಅವಸ್ಥೆಗೆ ಕಣ್ಣೀರಿಡುತ್ತಾ ಲಕ್ಷಾಂತರ ಕೋಟಿ ನಾಗರಿಕರ ಹಣವನ್ನು ಅವರನ್ನು ಉಳಿಸಲು ಸುರಿಯಿರಿ ಎಂದು ಪ್ರತಿಪಾದಿಸುತ್ತಿವೆ. ಒಟ್ಟಿನಲ್ಲಿ ಮಾರುಕಟ್ಟೆ ಶಕ್ತಿಗಳಿಂದ ಯಾವುದೇ ಬಗೆಯ ದೂರ ಅಥವಾ ಸ್ವಾತಂತ್ರ್ಯವನ್ನು ಉಳಿಸಿಕೊಂಡಿಲ್ಲ.

ಆದ್ದರಿಂದಲೇ ವಾಸ್ತವತೆಗಿಂತ ಬಂಡವಾಳಶಾಹಿ ಪರ ಪ್ರಚಾರವೇ ಇಂದಿನ ಮಾಧ್ಯಮಗಳಲ್ಲಿ ಸುದ್ದಿ ಎಂಬಂತೆ ಅಥವಾ ವಿಶ್ಲೇಷಣೆ ಎಂಬಂತೆ ರಾರಾಜಿಸುತ್ತಿದೆ. ಅದರ ಬಗೆಗಿನ ನೈಜ ವಿಶ್ಲೇಷಣೆಗಳನ್ನು ಅಥವಾ ಸಮಾಜವಾದಿ ಅಥವಾ ಸಮಾಜ ಮುಖಿ ವಿಶ್ಲೇಷಣೆಗಳನ್ನು ಪತ್ರಿಕೋದ್ಯಮ ಪ್ರಚಾರವಲ್ಲ ಎಂದು ನಿರಾಕರಿಸುವ ಈ ಮಾಧ್ಯಮಗಳು ಮಾತ್ರ ವಸ್ತುನಿಷ್ಠತೆಯ ಹೆಸರಲ್ಲಿ ಮಾಡುತ್ತಿರುವುದೆಲ್ಲಾ ಮಾರುಕಟ್ಟೆ ಶಕ್ತಿಗಳ ಪರವಾದ ಪ್ರಚಾರವೇ! ವಾಸ್ತವವಾಗಿ ಕಾಪರ್ೊರೇಟ್ ಉದ್ದಿಮೆಗಳೇ ನೇರವಾಗಿ ಪತ್ರಿಕೋದ್ಯಮವನ್ನು ನಿಯಂತ್ರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಎಡಿಟೊರಿಯಲ್ ಕಂಟೆಂಟ್ ಅನ್ನು ನಿಯಂತ್ರಿಸುವಲ್ಲೂ ಪರೋಕ್ಷವಾದ ಪದ್ಧತಿಗಳನ್ನು ಅನುಸರಿಸುತ್ತಿವೆ.

ಎಡಿಟೋರಿಯಲ್ ಎಂಬುದೇ ಜಾಹೀರಾತುಗಳ ನಡುವಿನ ಖಾಲಿ ಜಾಗವನ್ನು ಭತರ್ಿ ಮಾಡುವ ಲೇಖನ ಎಂದು ಹೆಮ್ಮೆಯಿಂದ ಪ್ರತಿಷ್ಠಿತ ಪತ್ರಿಕೆಗಳೇ ಹೇಳಿಕೊಳ್ಳುತ್ತಿವೆ! ಅಷ್ಟು ಮಾತ್ರವಲ್ಲದೆ ಎಡಿಟೋರಿಯಲ್ ವಿವಾದಗಳನ್ನು ಬಗೆಹರಿಸಲು ಹಲವಾರು ಮಾಧ್ಯಮ ಸಂಸ್ಥೆಗಳು ಕಾಪರ್ೊರೇಟ್ ಉದ್ಯಮಪತಿಗಳನ್ನೇ ನೇಮಕ ಮಾಡಿಕೊಂಡಿವೆ! ಹಲವರ ದಾರಿದ್ರ್ಯ ಹೆಚ್ಚು ಮಾಡುತ್ತಾ ಕೆಲವರ ಸಂಪತ್ತನ್ನು ಮಾತ್ರ ಹೆಚ್ಚು ಮಾಡುವ ಇಂದಿನ ಆಥರ್ಿಕತೆ ನಿದರ್ಿಷ್ಟ ಬಗೆಯ ಎಂದರೆ ತೋರಿಕೆಯಲ್ಲಿ ಪ್ರಜಾತಂತ್ರವಾಗಿರುವ ಆದರೆ ಬಡವರ ಪಾಲಿಗೆ ಸವರ್ಾಧಿಕಾರವೇ ಆಗಿರುವ ರಾಜಕೀಯವನ್ನು ಅನಿವಾರ್ಯಗೊಳಿಸುತ್ತದೆ. ಅದನ್ನು ಅನಿವಾರ್ಯ ಎಂಬಂತೆ ಮಾಡಲು ಹಲವು ಬಗೆಯ ಸೈದ್ಧಾಂತಿಕ ಸಮರ್ಥನೆಗಳು ಸಹ ಅಗತ್ಯವಾಗುತ್ತವೆ. ಒಂದು ಜನಪರ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮ ಈ ಹುನ್ನಾರಗಳನ್ನು ಬಯಲುಗೊಳಿಸಬೇಕು.

ಆದರೆ, ಇಂದು ಕಾಪರ್ೊರೇಟ್ ಉದ್ದಿಮೆಗಳ ಹಿಡಿತದಲ್ಲಿರುವ ಮಾಧ್ಯಮಗಳು ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿರುವ ಕೋಮುವಾದ, ಯುದ್ಧೋನ್ಮಾದ, ದ್ವೇಷದ ನೆಲೆಯ ಉನ್ಮಾದಯುಕ್ತ ದೇಶಪ್ರೇಮ ಇನ್ನಿತ್ಯಾದಿಗಳನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿವೆ. ಹಾಗೆ ನೋಡಿದರೆ ಚಿಂತಕರೊಬ್ಬರು ಹೇಳಿದಂತೆ ಈ ಬಗೆಯೆ ಚಿಂತನೆಗಳ ಪ್ರಚಾರವೇ ಇಂದು ಮಾಹಿತಿ ಮತ್ತು ಜ್ಞಾನ ಎಂಬಂತೆಯೂ ಪ್ರಚಾರದಲ್ಲಿದೆ. ಮುಂಬೈ ಟೆರರ್ ಬಗ್ಗೆ ಕೆಲವು ಮಾಧ್ಯಮಗಳು ಕೋಮುವಾದಿ ಪ್ರಚಾರಕ್ಕೆ ಮತ್ತು ಯುದ್ಧದ ಪ್ರಚೋದನೆಗೆ ಬಳಸಿಕೊಂಡ ರೀತಿ ಇದಕ್ಕೆ ಒಂದು ಇತ್ತೀಚಿನ ಉದಾಹರಣೆ.

ಇದು ಜನಪರ ಪತ್ರಿಕೋದ್ಯಮದ ಎದುರಿಸುತ್ತಿರುವ ಸವಾಲು. ಮಾರುಕಟ್ಟೆ ಶಕ್ತಿಗಳಿಗೆ ಮತ್ತು ಅವರ ಆಸಕ್ತಿಗಳಿಗೆ ಇಂದಿನ ಪತ್ರಿಕೋದ್ಯಮ ಅಧೀನವಾಗಿರುವುದನ್ನು ಗುರುತಿಸುವುದು. ಹೀಗಾಗಿ ಇಂದಿನ ಪತ್ರಿಕೋದ್ಯಮವೂ ಮುಕ್ತವಲ್ಲವೆಂಬುದನ್ನು ಮಾರುಕಟ್ಟೆ ಶಕ್ತಿಗಳ ಪರವಾಗಿರುವುದನ್ನು ಗ್ರಹಿಸುವುದು. ಹೀಗಾಗಿ ಇಂದು ಯಾವುದನ್ನು ವಸ್ತುನಿಷ್ಠ ಮೌಲ್ಯವೆಂದು ಮಾಧ್ಯಮಗಳು ಪ್ರಚಾರ ಮಾಡುತ್ತಿವೆಯೋ ಅದನ್ನು ಮತ್ತೊಮ್ಮೆ ಪ್ರಶ್ನಿಸುವುದು. ಜೋಳ್ಳಿನಿಂದ ಕಾಳನ್ನು ಬೇರ್ಪಡಿಸುವುದು. ವ್ಯಕ್ತಿನಿಷ್ಠತೆಯಿಂದ ವಸ್ತುನಿಷ್ಠತೆಯನ್ನು ಬೇರ್ಪಡಿಸುವುದು, ಅಭಿಪ್ರಾಯವನ್ನು ವಾಸ್ತವತೆಯಿಂದ ಬೇರ್ಪಡಿಸುವುದು, ಖಾಸಗಿ ಆಸಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಬೇರ್ಪಡಿಸುವುದು, ದುರುಪಯೋಗವನ್ನು ಪ್ರಭಾವದಿಂದ ಬೇರ್ಪಡಿಸುವುದನ್ನು ಮಾಡುವ ಮೂಲಕ ಪತ್ರಿಕೋದ್ಯಮವು ವ್ಯವಸ್ಥೆಯ ವಕ್ತಾರನಾಗದೆ ಪ್ರಚಾರಕನಾಗದೆ ಪ್ರಶ್ನಿಸುವ, ಸಂದೇಹದಿಂದ ನೋಡುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನರ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಮುಖ್ಯವೆಂದು ನೋಡುವ ಮೂಲ ಉದ್ದೇಶಕ್ಕೆ ಮರಳಬೇಕಿದೆ.

ಆದರೆ, ಒಟ್ಟಾರೆಯಾಗಿ ನೋಡಿದಾಗ ಮಾರುಕಟ್ಟೆ ಶಕ್ತಿಗಳ ಸವರ್ಾಧಿಕಾರ ನಡೆದಿರುವ ಈ ಹೊತ್ತಿನಲ್ಲಿ ಪತ್ರಿಕೋದ್ಯಮ ಕೇವಲ ಅದರ ಪ್ರಚಾರ ಸಾಧನವಾಗಿ ಬಿಡುವ ಅಪಾಯ ಎದುರಾಗಿದೆ. ಇದು ಕೇವಲ ಪತ್ರಿಕೋದ್ಯಮಕ್ಕೆ ಅಲ್ಲ ಪ್ರಜಾತಂತ್ರವೇ ಎದುರಿಸುತ್ತಿರುವ ಅಪಾಯವಾಗಿದೆ.

ಶಿವಸುಂದರ್

No comments:

Post a Comment

Thanku