Friday, January 13, 2012

ಮಾನವ ಕಾಳಜಿಯ ಕೈಗನ್ನಡಿ



ಕಾಲ೯ ಮಾಕ್ಸ೯ರಂಥವರು ನಿರೀಶ್ವರವಾದವನ್ನು ಎತ್ತಿ ಹಿಡಿದರು. ಮಾನವರೇ ತಮ್ಮ ವ್ಯಕ್ತಿತ್ವವಿಕಸನದ ಮೂಲಕ ದೇವರಾಗುತ್ತಾರೆ ಎಂಬುದನ್ನು ಮಹಾವೀರರು ತಿಳಿಸಿದರು. ದೇವರ ಕುರಿತು ಅಜ್ಞೇಯವಾದಿ ನಿಲುವನ್ನು ಗೌತಮ ಬುದ್ಧ ತಾಳಿದ. ಏಸು, ಪೈಗಂಬರ್, ಬಸವಣ್ಣ ಮುಂತಾದವರು ಒಬ್ಬನೇ ದೇವರು, ಒಂದೇ ವಿಶ್ವ ಮತ್ತು ಒಂದೇ ಮಾನವಕುಲ ಎಂಬುದರಲ್ಲಿ ಅಚಲವಾದ ನಂಬಿಕೆ ಇಟ್ಟವರು ಎನ್ನುತ್ತಾರೆ ವಚನ ಅಧ್ಯಯನ ಕೇಂದ್ರದ ನಿದರ್ೇಶಕರಾದ ರಂಜಾನ ದಗಾ೯

ಉಪನಿಷತ್ ಋಷಿಗಳು, ಮಹಾವೀರ, ಗೌತಮ ಬುದ್ಧ, ಸಾಕ್ರೆಟಿಸ್, ಝರತುಷ್ಟ್ರ ಏಸುಕ್ರಿಸ್ತ, ಮುಹಮ್ಮದ್ ಪೈಗಂಬರ್, ಗುರುನಾನಕ, ಬಸವಾದಿ ಶರಣರು, ಸೂಫಿಗಳು, ಸಂತರು, ದಾಸರು, ಚಾವರ್ಾಕರು, ಕಾಲರ್್ ಮಾಕ್ಸರ್್ ಮುಂತಾದ ವಿವಿಧ ಚಿಂತನಾ ಮಾರ್ಗಗಳ ದಾರ್ಶನಿಕರು ಲೌಕಿಕರಿಗೆ ಜೀವನದರ್ಶನ ಮಾಡಿಸುವ ಉದ್ದೇಶದಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟವರಾಗಿದ್ದಾರೆ. ಇವರ ಧರ್ಮದರ್ಶನ ಮತ್ತು ಚಿಂತನಾ ಕ್ರಮಗಳಲ್ಲಿ ವೈವಿಧ್ಯವಿರಬಹುದು. ಆದರೆ ಜನ ನೆಮ್ಮದಿಯ ಬದುಕು ಸಾಗಿಸುತ್ತ ವಿಶ್ವದ ರಹಸ್ಯವನ್ನು ಅರಿತುಕೊಳ್ಳಲಿ ಎಂಬುದೇ ಅವರ ಆಶಯವಾಗಿತ್ತು.

ಈ ರಹಸ್ಯವನ್ನು ಅರಿತುಕೊಳ್ಳುವಲ್ಲಿ ಮುಖ್ಯವಾಗಿ ನಾಲ್ಕು ವಿಧಾನಗಳನ್ನು ಅನುಸರಿಸಲಾಗಿದೆ. ಕಾಲರ್್ ಮಾಕ್ಸರ್್ರಂಥವರು ನಿರೀಶ್ವರವಾದವನ್ನು ಎತ್ತಿ ಹಿಡಿದರು. ಮಾನವರೇ ತಮ್ಮ ವ್ಯಕ್ತಿತ್ವವಿಕಸನದ ಮೂಲಕ ದೇವರಾಗುತ್ತಾರೆ ಎಂಬುದನ್ನು ಮಹಾವೀರರು ತಿಳಿಸಿದರು. ದೇವರ ಕುರಿತು ಅಜ್ಞೇಯವಾದಿ ನಿಲುವನ್ನು ಗೌತಮ ಬುದ್ಧ ತಾಳಿದ. ದೇವರು ಮತ್ತು ಆತ್ಮ ಇದ್ದಾವೆ ಅಥವಾ ಇಲ್ಲ ಎಂಬುದರ ಗೊಡವೆ ನಮಗೇಕೆ? ಲೋಕದ ಜನರನ್ನು ದುಃಖದಿಂದ ಪಾರು ಪಾಡುವುದೇ ತುತರ್ಾಗಿ ಆಗಬೇಕಾದ ಕಾರ್ಯ ಎಂಬುದು ಬೌದ್ಧ ದರ್ಶನದ ತಿರುಳು. ಏಸು, ಪೈಗಂಬರ್, ಬಸವಣ್ಣ ಮುಂತಾದವರು ಒಬ್ಬನೇ ದೇವರು, ಒಂದೇ ವಿಶ್ವ ಮತ್ತು ಒಂದೇ ಮಾನವಕುಲ ಎಂಬುದರಲ್ಲಿ ಅಚಲವಾದ ನಂಬಿಕೆ ಇಟ್ಟವರು. ದೇವರು ನಿಗರ್ುಣ ನಿರಾಕಾರ ಎಂಬುದರ ಪ್ರತಿಪಾದಕರಿವರು. ಇಂಥವರ ಮಧ್ಯೆ ಬಹುದೇವತೆಗಳ ಮೂತರ್ಿಗಳನ್ನು ಪೂಜಿಸುವ ಮತ್ತು ಆ ಮೂತರ್ಿಗಳಿಗೆ ದೇವಾಲಯಗಳನ್ನು ನಿಮರ್ಿಸುವ ಹಿಂದೂಧರ್ಮದ ಪಂಡಿತರೂ ಇದ್ದಾರೆ.

ಎಲ್ಲ ಏಕದೇವೋಪಾಸಕರು, ತಮ್ಮಲ್ಲೇ ದೇವರನ್ನು ಕಾಣುವವರು ಮತ್ತು ದೇವರ ಗೊಡವೆಗೆ ಹೋಗದವರು ಮತ್ತು ದೇವರು ಇಲ್ಲವೆಂದು ವಾದಿಸುವವರ ಮಧ್ಯೆ ಒಂದು ಒಮ್ಮತವಿದೆ ಅದೆಂದರೆ ಖಾಸಗಿ ಆಸ್ತಿ ರಾಕ್ಷಸೀ ಸಮಾಜವನ್ನು ಸೃಷ್ಟಿಸುತ್ತದೆ ಮತ್ತು ಸಾಮೂಹಿಕ ಆಸ್ತಿ ಮಾನವೀಯ ಸಮಾಜವನ್ನು ಸೃಷ್ಟಿಸುತ್ತದೆ ಎಂಬುದು. ಮಾನವೀಯ ಸಮಾಜ ನಿಮರ್ಾಣಕ್ಕಾಗಿ ಇವರೆಲ್ಲ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಇಂಥ ಮಾನವೀಯ ಸಮಾಜ ನಿಮರ್ಾಣ ಮಾಡಲು ಬೇಕಾದ ಮನಸ್ಸುಗಳನ್ನು ಸೃಷ್ಟಿಸುವುದೇ ಅಕ್ಕ ಅನ್ನಪೂರ್ಣತಾಯಿ ಅವರ ಈ ಜೀವನದರ್ಶನ ಕೃತಿಯಲ್ಲಿನ ಆಶಯವಾಗಿದೆ. ಅದಕ್ಕಾಗಿ ಅವರು ವಿಶ್ವದ ಅನೇಕ ದಾರ್ಶನಿಕರ ಮತ್ತು ಮಾನವತಾವಾದಿಗಳ ವಿಚಾರಗಳ ಮೂಲಕ ಕಳೆದ ಶ್ರಾವಣ ಮಾಸದಲ್ಲಿ ಬೀದರಿನ ಶರಣ ನಗರದ ಶರಣ ಉದ್ಯಾನದಲ್ಲಿ ಒಂದು ತಿಂಗಳ ಪರ್ಯಂತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಸರ್ವಸಮತ್ವದ ಬದುಕಿನ ಪ್ರತಿಪಾದನೆ ಮಾಡಿದ್ದನ್ನು ಶರಣ ರಮೇಶ ಮಠಪತಿ ಅವರು ಸಮರ್ಥವಾಗಿ ಸಂಗ್ರಹಿಸಿ, ಸಂಪಾದಿಸಿ ಜೀವನದರ್ಶನ ಕೃತಿ ಸಿದ್ಧಪಡಿಸಿದ್ದು ಅಭಿನಂದನಾರ್ಹ ವಾಗಿದೆ.

ಏಕದೇವ, ಆ ದೇವರ ಸೃಷ್ಟಿಯಾದ ಏಕ ವಿಶ್ವ ಮತ್ತು ಆ ವಿಶ್ವದಲ್ಲಿ ಸಕಲ ಚರಾಚರದಿಂದ ಕೂಡಿದ ಜೀವಜಾಲದೊಳಗೆ ಒಂದಾಗಿ ಇರುವ ಮಾನವಕುಲದ ಅರಿವಿನೊಂದಿಗೆ ಅಕ್ಕ ಅನ್ನಪೂರ್ಣತಾಯಿ ಅವರು ಈ ವಚನಶ್ರಾವಣ ಪ್ರವಚನ ಕಾರ್ಯಕ್ರಮವನ್ನು ತಪಸ್ಸಿನ ಹಾಗೆ ನೆರವೇರಿಸಿದ್ದಾರೆ. ವಿವಿಧ ದಾರ್ಶನಿಕರ ಉದಾಹರಣೆಗಳನ್ನು ಅವರು ತಮ್ಮ ಪ್ರವಚನಗಳಲ್ಲಿ ಬಳಸಿಕೊಂಡರೂ ಬಸವದರ್ಶನ ಅವರ ಚಿಂತನೆಯ ಸ್ಥಾಯಿಭಾವವಾಗಿದೆ. ಬಸವದರ್ಶನಕ್ಕೆ ವಿಶ್ವವ್ಯಾಪಕತ್ವ ಇದೆ ಎಂಬುದನ್ನು ಸೂಚಿಸುವುದೇ ಅವರು ವಿವಿಧ ದಾರ್ಶನಿಕರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವಾಗಿದೆ.

ಬಸವಣ್ಣನವರು 12ನೇ ಶತಮಾನದಲ್ಲೇ ಸಮೂಹಶಕ್ತಿಯ ಸಮಾಜವೊಂದರ ನಿಮರ್ಾಣ ಮಾಡಿದರು. ಆ ಸಮಾಜಕ್ಕೆ ಶರಣಸಂಕುಲ ಎಂದು ಕರೆದರು. ಸೃಷ್ಟಿಕರ್ತ, ಸೃಷ್ಟಿ ಮತ್ತು ಮಾನವಕುಲದ ಮಧ್ಯೆ ಏಕತೆಯನ್ನು ಸಾಧಿಸುವ ಮೂಲಕ ಈ ಶರಣಸಂಕುಲ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವ ಸರ್ವಸಮತ್ವದ ಸಮಾಜವಾಗಿತ್ತು.

ಬಸವಣ್ಣನವರ ಈ ಶರಣಸಂಕುಲ ಸಮಾಜ ಮನುವಾದಿಗಳ ಸಮಾಜಕ್ಕೆ ತದ್ವಿರುದ್ಧವಾಗಿತ್ತು. ವರ್ಗಭೇದ, ವರ್ಣಭೇದ, ಜಾತಿಭೇದ, ಲಿಂಗಭೇದ, ಕಾಯಕ ಭೇದ, ಪ್ರಾದೇಶಿಕ ಭೇದ, ಅಸ್ಪೃಶ್ಯತೆ, ಪುಣ್ಯ, ಪಾಪ, ಸ್ವರ್ಗ, ನರಕ ಮತ್ತು ಮೋಕ್ಷದ ಭ್ರಮೆಗಳನ್ನು ಸೃಷ್ಟಿಸುವ ಕರ್ಮಸಿದ್ಧಾಂತದಿಂದ ಮುಕ್ತವಾಗಿತ್ತು. ಜೀವಕಾರುಣ್ಯವನ್ನು ಸೃಷ್ಟಿಸುವ ಕಾಯಕ ಸಿದ್ಧಾಂತದಿಂದ ಪ್ರಫುಲ್ಲವಾಗಿತ್ತು.

ಶರಣಸಂಕುಲದ ಶರಣರು ಎಲ್ಲ ಭೇದಗಳನ್ನು ಮೀರಿ ಬೆಳೆದವರಾಗಿದ್ದರು. ಕೈಲಾಸವೆಂಬುದನ್ನು ಅವರು ಹಾಳುಭೂಮಿ ಎಂದು ಪರಿಗಣಿಸಿದ್ದರು. ತಾವು ಬದುಕುತ್ತಿರುವ ತಾಣವೇ ಅವರಿಗೆ ಕತರ್ಾರನ ಕಮ್ಮಟವಾಗಿತ್ತು. ಕಾಯಕದ ಮೂಲಕ ಅಂತಃಕರಣದಿಂದ ಬದುಕು ಸಾಗಿಸುವವರಿಗೆ ಪುಣ್ಯದ ಮೂಲಕ ಸ್ವರ್ಗ ತಲಪುತ್ತೇವೆ ಎಂಬ ಭ್ರಮೆ ಇರುವುದಿಲ್ಲ. ದಯಾಮಯರಾಗಿ ಬದುಕುವ ಕಾರಣ ಪಾಪ ಮತ್ತು ನರಕದ ಭಯ ಇರುವುದಿಲ್ಲ. ಕಾಯಕದ ಮೂಲಕ ಬರುವ ಅನುಭವ, ಅನುಭವ ಮಂಟಪದಲ್ಲಿ ಸಮೂಹ ಜ್ಞಾನದಿಂದ ಸಿಗುವ ಅನುಭಾವ ಮತ್ತು ಲಿಂಗಾಂಗ ಸಾಮರಸ್ಯದ ಮೂಲಕ ನತ್ಯ ಲಿಂಗಕ್ಯರಾಗೇ ಇರುವ ಕಾರಣ ಮೋಕ್ಷದ ಬಯಕೆಯೂ ಇರುವುದಿಲ್ಲ. ಹೀಗೆ ಅವರು ಅನುಭಾವಿಗಳಾಗಿದ್ದರಿಂದ ಯಾವ ಭೇದಭಾವಗಳೂ ಅವರ ಬಳಿ ಸುಳಿಯಲಿಲ್ಲ. ಹೀಗಿದ್ದರು ನಮ್ಮ ಶರಣರು.

ಬಸವಣ್ಣನವರು ಇಂಥ ಒಂದು ಸುಂದರ ಸಮಾಜವನ್ನು ನಿಮರ್ಿಸಿದರು. ಈ ಸಮಾಜದಲ್ಲಿ ಸ್ಥಾವರಲಿಂಗ ಮುಂತಾದ ಮೂತರ್ಿಗಳಾಗಲೀ, ಮಂದಿರಗಳಾಗಲೀ, ಅರ್ಚಕರಾಗಲಿ, ಕಾವಿಬಟ್ಟೆಯ ಸ್ವಾಮಿ ಸನ್ಯಾಸಿಗಳಾಗಲೀ, ವಿವಿಧ ರೀತಿಯ ಪರಾವಲಂಬಿಗಳಾಗಲೀ ಇರಲಿಲ್ಲ. ಇಲ್ಲಿ ವಿರಕ್ತರು ಮತ್ತು ಸಾಂಸಾರಿಗರ ಮಧ್ಯೆ ವ್ಯತ್ಯಾಸವಿರಲಿಲ್ಲ. ಯಾರೇ ಆಗಿರಬಹುದು ಅವರು ನಿಜಮಾನವರಾಗಿರಬೇಕು ಎಂಬುದೇ ಶರಣಸಂಕುಲದ ನಿಧರ್ಾರವಾಗಿತ್ತು. ಶರಣರೆಂದರೆ ನಿಜಮಾನವರು. ಈ ನಿಜಮಾನವರೇ ಕರ್ಮಸಿದ್ಧಾಂತ ಮುಂತಾದ ಎಲ್ಲ ಮಾನವನಿಮರ್ಿತ ಮೇಲುಕೀಳಿನ ಸಂಕೋಲೆಗಳನ್ನು ಹಾಗೂ ಮೂಢನಂಬಿಕೆಗಳನ್ನು ಕಳಚಿಕೊಂಡು ಸ್ವತಂತ್ರಧೀರರಾದ ನವಮಾನವರು.

ಬಸವಣ್ಣನವರು ಇಂಥ ನವಜನಾಂಗದ ಸೃಷ್ಟಿಮಾಡಿದಾಗ ಶರಣಸಂಕುಲ ಎಂಬ ಸಮಾಜ ರೂಪುತಾಳಿ ಲೋಕಕ್ಕೆ ಮಾದರಿಯಾಯಿತು. ಮನುವಾದಿ ಸಮಾಜಕ್ಕೆ ದೊಡ್ಡ ಸವಾಲಾಗುವುದರ ಮೂಲಕ ಪಟ್ಟಭದ್ರ ಹಿತಾಸಕ್ತಿಗಳಾದ ರಾಜಶಾಹಿ ಮತ್ತು ಪುರೋಹಿತಶಾಹಿಗಳಿಗೆ ನಡುಕ ಹುಟ್ಟಿಸಿತು. ಇಂಥವರ ಅವಶ್ಯಕತೆ ಇಲ್ಲದಂಥ ಶರಣ ಸಮಾಜವನ್ನು ಬಸವಣ್ಣನವರು ನಿಮರ್ಾಣ ಮಾಡಿದ್ದರು. ದೇವರ ಹಂಗೂ ಇಲ್ಲದ ಸಮಾಜ ಇದಾಗಿತ್ತು. ಅಂತಃಸಾಕ್ಷಿಯನ್ನೇ ದೇವರಾಗಿಸಿಕೊಂಡು ಸತ್ಯಶುದ್ಧ ಕಾಯಕ ಮಾಡುತ್ತ, ಬಂದುದನ್ನು ದೇವರ ಪ್ರಸಾದವೆಂದು ಸ್ವೀಕರಿಸುವುದರ ಮೂಲಕ ಸರಳ ಬದುಕನ್ನು ಸಾಗಿಸುತ್ತ, ಇಂದಿಂಗೆ ನಾಳಿಂಗೆ ಎಂದು ಸ್ವಂತಕ್ಕಾಗಿ ಸಂಗ್ರಹ ಮಾಡದೆ ದಾಸೋಹಂ ಭಾವದ ಮೂಲಕ ಶರಣ ಸಂಕುಲದ ಶಿವನಿಧಿಗೆ ಅಪರ್ಿಸುತ್ತಿದ್ದರು. ಹೀಗೆ ಬಸವಣ್ಣನವರು ಆ ಕಾಲದಲ್ಲೇ ಸಾಮೂಹಿಕ ಭವಿಷ್ಯನಿಧಿಯನ್ನು ಸ್ಥಾಪಿಸುವುದರ ಮೂಲಕ ಮಾನವೀಯತೆಗೆ ವಿರುದ್ಧವಾದ ಖಾಸಗಿ ಆಸ್ತಿಗೆ ಕಡಿವಾಣ ಹಾಕಿದ್ದರು.

ಖಾಸಗಿ ಆಸ್ತಿ ಎಂಬುದು ಹಿಂಸೆ, ಸುಲಿಗೆ, ವಂಚನೆ, ಭ್ರಷ್ಟಾಚಾರ, ಕ್ರೌರ್ಯ ಮತ್ತು ಸರ್ವರೀತಿಯ ಭೇದಭಾವಗಳಿಂದ ಕೂಡಿದ ಸಮಾಜವನ್ನು ಸೃಷ್ಟಿಸುವುದು. ಮಾನವರು ಆಧ್ಯಾತ್ಮಿಕ ಆನಂದದಿಂದ ವಂಚಿತರಾಗುವುದರ ಮೂಲಕ ಐಹಿಕ ಸುಖಕ್ಕೇ ಮೋಹಿತರಾಗುವಂತೆ ಮಾಡುವುದು. ಸ್ವಾರ್ಥಕ್ಕಾಗಿ ಪ್ರಾಣಿ, ಪಕ್ಷಿ ಮತ್ತು ಸಸ್ಯಸಂಕುಲ ಮೊದಲು ಮಾಡಿ ಸಕಲ ಚರಾಚರ ವಸ್ತುಗಳನ್ನು ವಿನಾಶದ ಅಂಚಿಗೆ ಒಯ್ಯುವುದು. ಆಗ ಧರ್ಮಗಳು, ದರ್ಶನಗಳು, ಉದಾತ್ತ ಚಿಂತನೆಗಳು, ಸಾಮಾಜಿಕ ಕಾಳಜಿಗಳು, ಆದರ್ಶಗಳು ಒಟ್ಟಾರೆ ಮಹೋನ್ನತ ಮಾನವೀಯ ಗುಣಗಳು ನಿರುಪಯುಕ್ತವೆನಿಸುವವು. ಹಣವೇ ದೇವರ ಕೊನೆಯ ಅವತಾರ ಎಂದು ಜಗತ್ತು ಭಾವಿಸುವಂತಾಗುವುದು. ಹಣ ಗಳಿಸುವುದು ಮಾತ್ರ ಜ್ಞಾನವೆನಿಸಿ ಮಾನವನ ಎಲ್ಲ ಸೂಕ್ಷ್ಮತೆಗಳು ಹೇಳಹೆಸರಿಲ್ಲದಂತಾಗುವವು. ಇಂಥ ದುರಂತವನ್ನು ತಪ್ಪಿಸುವುದೇ ಬಸವಣ್ಣನವರ ಗುರಿಯಾಗಿತ್ತು. ಆ ಕಾರಣದಿಂದಲೇ ಅವರು ಇಷ್ಟಲಿಂಗವನ್ನು ದಯಪಾಲಿಸಿದರು. ಶೋಷಕರ ಕೈಗೊಂಬೆಗಳಂತಿರುವ ಕಣ್ಣಿಗೆ ಕಾಣುವ ಡುಪ್ಲಿಕೇಟ್ ದೇವರುಗಳನ್ನು ಇಷ್ಟಲಿಂಗವು ಶರಣರಾದ ಕಾಯಕಜೀವಿಗಳ ಬದುಕಿನಿಂದ ದೂರ ಸರಿಸಿತು. ಕಾಯಕಜೀವಿಗಳು ಗುಡಿಗುಂಡಾರಗಳಿಗೆ ಸಲ್ಲಿಸುವ ಬಿಟ್ಟಿಕೂಲಿ ನಿಂತಿತು. ಹರಕೆ, ಮುಡಿ, ದಾನ ಮುಂತಾದವುಗಳ ಮೂಲಕ ರಾಜವ್ಯವಸ್ಥೆಯನ್ನೂ ಹಿಡಿತದಲ್ಲಿಟ್ಟುಕೊಂಡಿದ್ದ ಗುಡಿವ್ಯವಸ್ಥೆಯಿಂದ ಕಾಯಕಜೀವಿಗಳ ಸುಲಿಗೆ ಮಾಡುವುದು ತಪ್ಪಿತು.

ಶರಣ ಸಂಕುಲದ ಸದಸ್ಯರು ಜಾತಿಸಂಕರಗೊಂಡ ನವಸಮಾಜದಲ್ಲಿ ಅರಿವನ್ನೇ ಗುರುವಾಗಿಸಿಕೊಂಡು ಹಿಂದೆಂದೂ ಕಾಣದಂಥ ಹೊಸಬದುಕಿನ ಅನುಭವ ಪಡೆದರು. ಮನುಧರ್ಮದಿಂದ ಸೃಷ್ಟಿಯಾಗಿದ್ದ ಕೆಳಜಾತಿ, ಕೆಳವರ್ಗಗಳ ವಿವಿಧ ಕಾಯಕಜೀವಿಗಳು ಭೂತಕಾಲದಲ್ಲಿನ ಕೀಳರಿಮೆಯಿಂದ ವಿಮುಕ್ತರಾದರು. ಅತಂತ್ರ ಭವಿಷ್ಯದ ಭಯದಿಂದ ಹೊರಬಂದರು. ವರ್ತಮಾನದಲ್ಲಿನ ಶರಣಸಂಕುಲದಲ್ಲಿ ಸತ್ಯಶುದ್ಧ ಕಾಯಕದೊಂದಿಗೆ ನೆಮ್ಮದಿಯಿಂದ ಬದುಕಿದರು.

ಇದೊಂದು ಪರಿಪೂರ್ಣ ಸಮಾಜವಾಗಿತ್ತು. ಸತ್ಯಶುದ್ಧ ಕಾಯಕದ ಮೂಲಕ ಮಾನವಕುಲ ಮತ್ತು ಜೀವಸಂಕುಲಕ್ಕೆ ಒಳಿತಾಗುವಂಥ ವಸ್ತುಗಳನ್ನೇ ಉತ್ಪಾದಿಸುವ ಕ್ರಮ, ಹಾಗೆ ಉತ್ಪಾದಿಸಿದ ವಸ್ತುಗಳಿಂದ ಬಂದುದನ್ನು ದೇವರ ಕಾಣಿಕೆ ಎಂಬ ಪ್ರಸಾದ ಪ್ರಜ್ಞೆಯೊಂದಿಗೆ ಸದ್ಬಳಕೆ ಮಾಡುವ ಮನಸ್ಥಿತಿ, ಹಿತಮಿತವಾಗಿ ಬಳಸುವುದರ ಮೂಲಕ ಸಂಗ್ರಹವಾಗುವ ಸಂಪತ್ತನ್ನು ಸಮಾಜರೂಪಿ ದೇವರಿಗೆ ಹಿಂದಿರುಗಿಸುವ ರೀತಿಯಲ್ಲಿ ಸಾಮೂಹಿಕ ನಿಧಿಗೆ ದಾಸೋಹ ರೂಪದಲ್ಲಿ ಕೊಡುವುದರ ಮೂಲಕ ಸಾಮಾಜಿಕ ವಿತರಣಾ ವ್ಯವಸ್ಥೆ, ಅನುಭವ ಮಂಟಪದ ಮೂಲಕ ದೊರೆಯುವ ಅನುಭಾವ, ಮಹಾಮನೆಯ ಮೂಲಕ ದೊರೆಯುವ ವಿಶ್ವಕುಟುಂಬ ಭಾವ, ಅರಿವಿನ ಮನೆಯ ಮೂಲಕ ದೊರೆಯುವ ಲಿಂಗಾಂಗ ಸಾಮರಸ್ಯದ ಅರಿವು. ವಚನ ಸಾಹಿತ್ಯದ ಮೂಲಕ ಲಭ್ಯವಾದ ಸೃಜನಶೀಲತೆ ಹೀಗೆ ಎಲ್ಲ ರೀತಿಯಿಂದಲೂ ಶರಣಸಂಕುಲ ಲೋಕಮಾನ್ಯವಾದ ಸಮಾಜವಾಗಿತ್ತು.

ಇಂಥ ಶರಣಸಮಾಜ ಈ ಭೂಮಿಯ ಮೇಲೆ ಮತ್ತೆ ವಿಜೃಂಭಿಸುವುದರ ಮೂಲಕ ಎಲ್ಲ ರೀತಿಯ ಶೋಷಣೆ, ಹಿಂಸೆ ಮತ್ತು ಭೇದಭಾವಗಳು ನಾಶವಾಗಬೇಕು ಎಂಬ ಮಹೋನ್ನತವಾದ ಆಶಯಗಳೊಂದಿಗೆ ಅಕ್ಕ ಅನ್ನಪೂರ್ಣತಾಯಿ ಅವರು ಜೀವನದರ್ಶನ ಮಾಡುವಂಥ ಈ ಪ್ರವಚನಗಳ ಮೂಲಕ ಏಕಕಾಲಕ್ಕೆ ದೇವರ ಸೇವೆಯನ್ನೂ ಸಮಾಜ ಸೇವೆಯನ್ನೂ ಮಾಡಿದ್ದಾರೆ. ಇಡೀ ಜಗತ್ತೇ ಬಂದವರ ಓಣಿ ಎಂಬ ಸತ್ಯವನ್ನು ಸಾರಿದ್ದಾರೆ. ಈ ಭೂಮಿಯ ಮೇಲೆ ಅತಿಥಿಗಳಂತೆ ಬದುಕಿ ಹೋಗುವ ಕ್ರಮವನ್ನು ಅರುಹಿದ್ದಾರೆ. ಸ್ಪಧರ್ಾತ್ಮಕವಾದ ಸುಲಿಗೆಯ ಮೇಲೆಯೆ ನಮರ್ಾಣವಾದ ಆಧುನಕ ಸಮಾಜ ಖಿನ್ನತೆಯನ್ನು ಸೃಷ್ಟಿಸುವ ಕೇಂದ್ರವಾಗಿದೆ. ಅದು ಸೃಷ್ಟಿಸುವ ಯಾವ ವಸ್ತು ಕೂಡ ದೀಘರ್ಾವಧಿಯ ನೆಮ್ಮದಿ ಕೊಡುವಂಥ ಸಾಮಥ್ರ್ಯ ಹೊಂದಿಲ್ಲ. ಈ ಸಮಾಜ ಸಾವನ್ನು ಮರೆಸಿದೆ. ಆದರೆ ನಡೆದಾಡುವ ಮತ್ತು ಮಾತನಾಡುವ ಹೆಣಗಳನ್ನು ಸೃಷ್ಟಿಸಿದೆ. ಆ ಮೂಲಕ ಸಾವು ಮತ್ತು ಬದುಕಿನ ಮಧ್ಯೆ ವ್ಯತ್ಯಾಸವಿಲ್ಲದಂತೆ ಮಾಡಿದೆ ಎಂಬುದರ ಬಗ್ಗೆ ಅಕ್ಕನವರು ತುಂಬ ನೊಂದುಕೊಂಡು ತಿಳಿಸಿದ್ದಾರೆ. ಹೊಸ ಪೀಳಿಗೆ ಬದುಕಿನ ಸೂಕ್ಷ್ಮತೆಗಳನ್ನು ಅರಿಯದೆ ಹೋಗುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.

ಐಹಿಕ ಅಭ್ಯುದಯ ಎಂಬುದು ಮನುಷ್ಯತ್ವವನ್ನು ಕಾಲಕಸದಂತೆ ನೋಡುವಂಥ ವಾತಾವರಣ ಸೃಷ್ಟಿಸಿದಾಗ ನೆಮ್ಮದಿ ಎಂಬುದು ಬರಿ ಕನಸಾಗಿ ಉಳಿಯುತ್ತದೆ. ಈಗ ನಡೆಯುತ್ತಿರುವುದು ಉನ್ನತಿಯ ಲಕ್ಷಣವಲ್ಲ ಅಧೋನ್ನತಿಯ ಪರಿಣಾಮ. ಮಾನವರ ಸಾಮಾಜಿಕ ವ್ಯಕ್ತಿತ್ವವನ್ನೇ ನಾಶ ಮಾಡುತ್ತ ವ್ಯಕ್ತಿತ್ವ ವಿಕಸನದ ಬಗ್ಗೆ ಚಿಂತಿಸುವ ಈ ದಿನಗಳಲ್ಲಿ ಮತ್ತೆ ಮಾನವನನ್ನು ಮೌಲ್ಯಭರಿತ ಸಾಮಾಜಿಕನನ್ನಾಗಿಸುವ ಕ್ರಮವನ್ನು ಈ ಪ್ರವಚನದ ಪಾಠಗಳು ಸೂಚಿಸಿವೆ.

ಅಹಂಕಾರ, ಮೂಲಶಕ್ತಿಯ ಬಗ್ಗೆ ಇರುವ ಅಸಡ್ಡೆ, ಸಂಪತ್ತಿನ ದಾಹ, ಸಮಾಜದಲ್ಲಿದ್ದೂ ಧನಬಲದಿಂದಾಗಿ ಒಂಟಿತನಕ್ಕೆ ಒಗ್ಗುವ ಅರ್ಥಹೀನ ಬದುಕು, ವಸ್ತುಮೋಹ ಮತ್ತು ಇಂದ್ರಿಯಗಳ ದಾಸರಾಗುವುದರ ಮೂಲಕ ಉಂಟಾಗುವ ಚಿತ್ತಕ್ಷೊಭೆ, ತಿರಸ್ಕಾರ ಭಾವ, ದ್ವೇಷಸಾಧನೆ, ಯಯಾತಿಯಾಗುವ ಹುಚ್ಚು, ಋಜುಮಾರ್ಗದಿಂದ ದೂರಾದ ನಿಷ್ಕ್ರಿಯ ಜೀವನ ಮತ್ತು ಮಾನವಸಂಬಂಧಗಳ ಬಗೆಗಿನ ಅಸಡ್ಡೆಯಿಂದಾಗಿ ಹೀನ ಸಮಾಜದ ನಮರ್ಾಣದಲ್ಲಿ ಬಹುಪಾಲು ಜನ ತಲ್ಲೀನರಾಗಿರುವಾಗ ಮಾನವೀಯ ಮೌಲ್ಯಗಳಿಂದ ಕೂಡಿದ ಈ ಜೀವನದರ್ಶನ ಗ್ರಂಥ ಸಹೃದಯರ ಹೃದಯದಲ್ಲಿ ಮಾನವೀಯ ಅಲೆಗಳನ್ನು ಎಬ್ಬಿಸಿ ಬದುಕನ್ನು ಸಾರ್ಥಕಗೊಳಿಸುವುದರ ಕಡೆ ಸಾಗುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಮಧುರ ಭಾಷೆ ಮತ್ತು ಮನಸೂರೆಗೊಳ್ಳುವ ದೃಷ್ಟಾಂತಗ ಳಿಂದಾಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತಲೇ ಆಳವಾದ ಚಿಂತನೆಗೆ ಹಚ್ಚುವುದು ಈ ಗ್ರಂಥದ ವೈಶಿಷ್ಟ್ಯ ವಾಗಿದೆ. ಮಾನವೀಯ ಸ್ಪಂದನದಿಂದಾಗಿ ರಂಜಕತೆ ಯಿಂದ ಕೂಡಿದ ಈ ಗ್ರಂಥ ಬೇಗನೆ ಕಾಲೇಜು ವಿದ್ಯಾ ಥರ್ಿಗಳಿಗೆ ಪಠ್ಯವಾಗಿ, ಅವರು ಶಿಕ್ಷಣದ ಮೂಲಕ ತಮ್ಮ ಚಾರಿತ್ರ್ಯ ರೂಪಿಸಿಕೊಳ್ಳುವಂತಾಗಲಿ.

ರಂಜಾನ ದಗಾ೯  

No comments:

Post a Comment

Thanku