Friday, May 11, 2012

ಬೂದಿಮುಚ್ಚಿದ ಕೆಂಡ 'ಒಳಮೀಸಲಾತಿ'


ಆಂಧ್ರಪ್ರದೇಶದಲ್ಲಿ ಮಾದಿಗರ ಒಳಮೀಸಲಾತಿ ಹೋರಾಟಕ್ಕೆ ಪ್ರಗತಿಪರ ಮೂಲಸಮುದಾಯದ ಗದ್ದರ್ ಮುಂತಾದವರು ಬೆಂಬಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕನರ್ಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಒಂದು ಗುಂಪು ಅಂದರೆ, ಶ್ರೀಧರ ಕಲಿವೀರ, ಜಯಣ್ಣ ಮುಂತಾದವರು ಒಳಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದ್ದು ಅಪರೂಪದ ಘಟನೆ. ಆದರೆ, ಕನರ್ಾಟಕದ ಪ್ರಸಿದ್ದ ದಲಿತ ಲೇಖಕರು, ಚಿಂತಕರು, ವಿಚಾರವಂತರು ಇದರ ಬಗ್ಗೆ ಮೌನ ವಹಿಸಿದ್ದು ಇಲ್ಲವೇ ದಾರಿತಪ್ಪಿಸುವ ಹೇಳಿಕೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಎನ್ನುತ್ತಾರೆ ಮಾಜಿ ವಿಧಾನ ಪರಿಷತ್ ಸದ್ಯಸರಾದ ಡಾ.ಎಲ್.ಹನುಮಂತಯ್ಯ.

ಕಳೆದ ಮೂರು ದಶಕಗಳಿಂದ ತೀವ್ರ ಚಚರ್ೆಗೆ ಒಳಗಾಗಿರುವ ಗಂಭೀರ ವಿಚಾರ ಒಳಮೀಸಲಾತಿ. ಹಿಂದುಳಿದ ವರ್ಗಗಳಲ್ಲಿ ಒಳಮೀಸಲಾತಿ ಅಸ್ತಿತ್ವಕ್ಕೆ ಬಂದಾಗಿನಂದಲೂ ಜಾರಿಯಲ್ಲಿದೆ. ಅದು ಹಿಂದುಳಿದ ವರ್ಗಗಳಲ್ಲಿ ಚಚರ್ೆಯ ವಿಷಯವಲ್ಲ; ಒಪ್ಪಿತ ಮೌಲ್ಯ. ನೂರಾರು ಜಾತಿಗಳಿರುವ ಹಿಂದುಳಿದ ವರ್ಗ, ಹಿಂದುಳಿದ, ಅತಿಹಿಂದುಳಿದ ಎಂಬ ಶ್ರೇಣಿಗಳಿರುವದರಿಂದ ಈ ರೀತಿಯ ಶ್ರೇಣಿಕರಣ ಮೀಸಲಾತಿ ನಡಿಕೆಯಲ್ಲೂ ಜಾರಿಗೆ ಬಂದು ವೈಜ್ಞಾನಕ ಪ್ರತಿಪಾದಿತವಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಲ್ಲಿ ಒಳ ಮೀಸಲಾತಿ ಜಾರಿಗೆ ಬರಬೇಕೆಂದು ಕೂಗು ಕೇಳಿದ ದಿನದಿಂದಲೂ ವಿವಾದಕ್ಕೆ ಒಳಗಾಗಿದೆ. ಇದೊಂದು ಆಶ್ಚರ್ಯ ಮತ್ತು ಆಘಾತಕಾರಿ ಸಂಗತಿಯೂ ಹೌದು.
ಕನರ್ಾಟಕದ ಪರಿಶಿಷ್ಟ ಜಾತಿಯಲ್ಲಿ ಸುಮಾರು 101 ಜಾತಿಗಳಿವೆ. ಈ ಜಾತಿಗಳಲ್ಲಿ ಮುಖ್ಯವಾಗಿ 4 ಗುಂಪುಗಳಿವೆ. 1976ರಲ್ಲಿ ನೇಮಕವಾದ ಹಾವನೂರು ಆಯೋಗದಲ್ಲಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದೆ.
1. ಮಾದಿಗ ಮತ್ತು ಸಂಬಂಧಿತ ಜಾತಿಗಳು 2. ಮಾಲ/ಹೊಲೆಯ ಮತ್ತು ಸಂಬಂಧಿತ ಜಾತಿಗಳು 3. ಲಮಾಣಿ, ಬಂಜಾರ 4. ಕೊರಮ, ಕೊರಚ ಇತ್ಯಾದಿ.
ಮೇಲಿನ ಮೊದಲೆರಡು ಗುಂಪುಗಳು ಅಸ್ಪೃಶ್ಯ ಸಮುದಾಯಗಳಾದರೆ, ಕೆಳಗಿನ ಎರಡು ಸಮುದಾಯಗಳು ಸ್ಪೃಶ್ಯ ಸಮುದಾಯಗಳು. ಅಂಬೇಡ್ಕರ್ ಅವರು ಪ್ರತಿಪಾದಿಸುವಂತೆ ಮೀಸಲಾತಿಯ ಪ್ರಮುಖ ಆಧಾರ ಅಸ್ಪೃಶ್ಯತೆ. ಅಸ್ಪೃಶ್ಯತೆಯ ಜೊತೆ, ಅಷ್ಟೇ ಸಮಾನವಾದ ಸಾಮಾಜಿಕ ಪಿಡುಗುಗಳಿಗೆ ಸಿಕ್ಕಿಕೊಂಡಿರುವ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳ ಗುಂಪಿನಲ್ಲಿ ಸೇರಿಸಲಾಯಿತು. ಆರಂಭದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮಾದಿಗ, ಹೊಲೆಯ, ಕೊರಮ, ಕೊರಚ ಮತ್ತು ಕೆಲವು ಅಲೆಮಾರಿ ಜಾತಿಗಳನ್ನು ಮಾತ್ರ ಸೇರಿಸಲಾಗಿತ್ತು. ಕಾಲಾಂತರದಲ್ಲಿ ಸ್ಪಶ್ಯ ಜಾತಿಯಿಂದ ಭೋವಿ ಮತ್ತು ಅಲೆಮಾರಿ ಸಮುದಾಯವಾದ ಭೋವಿ ಮತ್ತು ಅಲೆಮಾರಿ ಸಮುದಾಯವಾದ ಲಮಾಣಿ-ಬಂಜಾರವನ್ನು ಸೇರಿಸಲಾಯಿತು. ಕನರ್ಾಟಕವನ್ನು ಹೊರತುಪಡಿಸಿದರೆ, ಭೋವಿ ಮತ್ತು ಲಂಬಾಣಿ ಜಾತಿಗಳು ಬೇರ್ಯಾವ ರಾಜ್ಯದಲ್ಲೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಲ್ಲ. ಅಸ್ಪೃಶ್ಯರಷ್ಟೇ ಆಥರ್ಿಕವಾಗಿ ಹಿಂದುಳಿದಿದ್ದರೂ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಅಸ್ಪೃಶ್ಯ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ದೂರು ಬಹಳ ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಸದ್ಯ ರಾಜಕೀಯ ಕಾರಣಗಳಿಂದ ಈ ಪಟ್ಟಿಯನ್ನು ಪರಿಸ್ಕರಿಸುವ ಧೈರ್ಯವನ್ನು ಯಾವ ಸಕರ್ಾರವೂ ಮಾಡಲಾಗದ ಸ್ಥಿತಿ ಇದೆ. ಕನರ್ಾಟಕದಲ್ಲಿ ಮೊದಲಿಗೆ ಮೀಸಲಾತಿ ವಗರ್ೀಕರಣ ಮಾಡಬೇಕೆಂದು ಕೇಳಲಾರಂಭಿಸಿದ್ದು ಮಾದಿಗ ಸಮುದಾಯ. ಇದನ್ನು ಕೇಳಲು ಅವರಿಗಿದ್ದ ಸಮರ್ಥನೆ ಈ ಕೆಳಗಿನಂತಿದೆ.
ಮಾದಿಗ ಸಮುದಾಯ, ಪರಿಶಿಷ್ಟ ಜಾತಿಗಳ ಜನಸಂಖ್ಯೆಯಲ್ಲಿ ಶೇ.57.28ರಷ್ಟಿದೆ ಎಂಬ ವಾದವಿದೆ. ನಮ್ಮ ಜನಸಂಖ್ಯೆ ಪ್ರಮಾಣಕ್ಕೆ ಸರಿಯಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪಾಲು ದೊರೆತಿಲ್ಲ. ಆದ್ದರಿಂದ ಈಗಿರುವ ಸ್ಥಿತಿಯಲ್ಲೇ ಮುಂದುವರೆದರೆ, ನಮ್ಮ ಆಥರ್ಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ. ಆದ್ದರಿಂದ ಒಳ ಮೀಸಲಾತಿ ಜಾರಿಗೊಳಿಸಿ ಎಂದು ಅದು ಪ್ರತಿಪಾದಿಸಿದೆ. ಪರಿಶಿಷ್ಟ ಜಾತಿಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಕ್ಕೆ ಈ ವರೆಗೂ ಸಿಕ್ಕಿರುವ ಮೀಸಲಾತಿಯಲ್ಲಿ ಶೇ15ರಲ್ಲಿ ಸುಮಾರು 8ರಷ್ಟು ಪಾಲು ಸಿಗಬೇಕಾಗಿತ್ತು. ಆದರೆ, ಶೇ.2ರಷ್ಟು ಸಿಕ್ಕಿಲ್ಲವಾದ ಕಾರಣ ನಮ್ಮ ಸಂವಿಧಾನಾತ್ಮಕ ಪಾಲು ದೊರೆತಿಲ್ಲ. ಅದಕ್ಕಾಗಿ ಒಳಮೀಸಲಾತಿ ಜಾರಿಗೊಳಿಸಿ ಎಂದು ಈ ಸಮುದಾಯ ಒತ್ತಾಯಿಸುತ್ತಿದೆ.
ಶೈಕ್ಷಣಿಕವಾಗಿ ಕೂಡ ಗಣನಯ ಪ್ರಮಾಣದ ಅಕ್ಷರಸ್ಥರಿಲ್ಲ ಮತ್ತು ತೀವ್ರ ಶೈಕ್ಷಣಿಕ ಪ್ರಗತಿ ಸಾಧಿಸಿರುವ ಸಮುದಾಯಗಳ ಜೊತೆ ಸ್ಪಧರ್ಿಸಿ ವೃತ್ತಿಪರ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಸಮಾನತೆ ಸಾಧಿಸಲು ಒಳಮೀಸಲಾತಿಯೇ ಸದ್ಯದ ಪರಿಹಾರವೆಂದು ಈ ಸಮುದಾಯದ ಪರವಾಗಿ ವಾದಿಸಲಾಗುತ್ತಿದೆ.
ಮಾದಿಗ ಸಮುದಾಯದವರು ವ್ಯವಸಾಯದ ಜೊತೆ ಚರ್ಮದ ಕೆಲಸ ಮತ್ತು ಪೌರಕಾಮರ್ಿಕ ಕೆಲಸ ಮಾಡುತ್ತಿದ್ದಾರೆ. ಶ್ರಮಜೀವಿಗಳೂ, ಅನಕ್ಷರಸ್ಥರೂ ಆಗಿರುವ ಇವರು ಪರಿಶಿಷ್ಟ ಜಾತಿಯ ಉಳಿದ ಸಮುದಾಯಗಳ ಜೊತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಪಧರ್ಿಸುವುದು ಸಾಧ್ಯವಿಲ್ಲವೆಂದು ಪ್ರತಿಪಾದಿಸಿ ಪಾರಂಪರಿಕ ಕಾರಣಗಳನ್ನೂ ನೀಡಲಾಗಿದೆ.
ಸಂವಿಧಾನದ ಆಶಯದಲ್ಲಿ ಶೇ.15ರ ಪ್ರಮಾಣದಲ್ಲಿ ಮೀಸಲಾತಿ ನಿಗದಿ ಮಾಡಿರುವುದು ಜನಸಂಖ್ಯೆ ಪ್ರಮಾಣದಲ್ಲಿ. ಆದ್ದರಿಂದ ಅದೇ ಅನುಪಾತದಲ್ಲಿ ಜನಸಂಖ್ಯಾಧಾರಿತ ಒಳಮೀಸಲಾತಿ ಜಾರಿಗೊಳಿಸಿದರೆ, ಯಾರಿಗೂ ಅನ್ಯಾಯವಾಗುವುದಿಲ್ಲ ಎಂಬ ವಾದ ಬಲವಾಗಿದೆ. ಒಳ ಮೀಸಲಾತಿಯನ್ನು ವಿರೋಧಿಸುವ ಗುಂಪು ಇದನ್ನು ಮಾನವೀಯ ಅಂತಕರಣದಿಂದ ನೋಡದೆ, ತಾಂತ್ರಿಕ ಕಾರಣಗಳನ್ನು ನಡಿ ವಿರೋಧಿಸುತ್ತಿದೆ. ಕೆಲವರು ಇದನ್ನು ದಲಿತ ಒಗ್ಗಟ್ಟನ್ನು ಕೆಡಿಸುವ ರಾಜಕೀಯ ಕ್ರಮ ಎನ್ನುತ್ತಾರೆ. ಹಲವರು ಈ ಸಮುದಾಯಗಳ ಮಧ್ಯೆ ಹೇಳಿಕೊಳ್ಳುವಷ್ಟು ಅಂತರ ಇಲ್ಲವೆಂತಲೂ, ಇದನ್ನು ಕೆಲವು ಸ್ವಾರ್ಥ ರಾಜಕಾರಣಿಗಳು ಹುಟ್ಟುಹಾಕಿರುವ ತಂತ್ರವೆಂದೂ ಅಲ್ಲಗೆಳೆಯುತ್ತಿದ್ದಾರೆ.
ಕನರ್ಾಟಕದಲ್ಲಿ 1975ರಿಂದ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ, ಸ್ವಲ್ಪಮಟ್ಟಿಗೆ ಅಸ್ಪೃಶ್ಯ ಸಮುದಾಯಗಳ ಮಧ್ಯೆ ತೋರಿಕೆಯ ಒಗ್ಗಟ್ಟನ್ನು ಸಾಧಿಸಲು ಯಶಸ್ವಿಯಾಗಿತ್ತು. ದಲಿತರೆಂದು ಕರೆಯುವ ಮೂಲಕ ಅಸ್ಪೃಶ್ಯರು ಮತ್ತು ಇತರೆ ಪರಿಶಿಷ್ಟ ಜಾತಿಗಳೆಲ್ಲರಿಗೂ ದಲಿತರೆಂಬ ವಿಶಾಲ ಅರ್ಥದ ಪದವನ್ನು ಬಳಸುವ ಮೂಲಕ ಒಳಗುದಿಯನ್ನು ಅದುಮಿ ಇಡಲಾಗಿತ್ತು.
ವಿದ್ಯಾವಂತ ಅಸ್ಪೃಶ್ಯರು ತಮ್ಮ ಸವಲತ್ತು, ಬಡ್ತಿಗಾಗಿ ಒಂದಾಗಿ ಹೋರಾಡುತ್ತಿದ್ದರೂ, ಅನಕ್ಷರಸ್ಥ ಅಸ್ಪೃಶ್ಯರ ನಡುವಿನ ಜಾತಿಗಳ ಪ್ರತ್ಯೇಕತೆ ನರಂತರವಾಗಿ ಮುಂದುವರೆದಿತ್ತು. ಹೊಲೆಯ ಮತ್ತು ಮಾದಿಗ ಸಮುದಾಯಗಳ ನಡುವೆ ವಿವಾಹ ಸಂಬಂಧಗಳೇರ್ಪಡಲಿಲ್ಲ. ಒಟ್ಟಿಗೆ ಬಾಳುವ ಯಾವುದೇ ಸಂಬಂಧಗಳಿಲ್ಲದಿದ್ದರೂ, ಅವು ಎರಡು ಪ್ರತ್ಯೇಕ ಜಾತಿಗಳಾಗಿದ್ದಾಗಲೂ ಒಂದೇ ಎಂಬ ಹುಸಿ ಭಾವನೆಯನ್ನು ಬಿತ್ತಲಾಗಿತ್ತು.
ದಲಿತ ಸಂಘರ್ಷ ಸಮಿತಿಯು ಜಾತಿ, ವ್ಯಕ್ತಿಪ್ರತಿಷ್ಟೆ, ಸ್ವಾರ್ಥದಿಂದ ಅನೇಕ ಗುಂಪುಗಳಾಗಿದ್ದಾಗಲೂ ಏಕತೆಯನ್ನು ಸಾಧಿಸಲಾಗದಿದ್ದರೂ, ಒಳಮೀಸಲಾತಿ ಪ್ರಶ್ನೆ ಬಂದಾಗ ಅಸ್ಪೃಶ್ಯ ಜಾತಿಗಳು ಒಂದು ಎಂಬ ಅಭಿಪ್ರಾಯವನ್ನು ಬಿತ್ತನೆ ಮಾಡಲಾಯಿತು. ಅಸ್ಪೃಶ್ಯರ ಒಗ್ಗಟ್ಟನ್ನು ಕಾಪಾಡಲು ಅವರಿಗೆ ಸಮಪಾಲು ನಡುವುದೇ ಪರಿಹಾರ ಎಂಬ ವಾದವನ್ನು ಎಲ್ಲ ಪ್ರಗತಿಪರರೂ ಒಪ್ಪುತ್ತಾರೆ. ಆಂಧ್ರಪ್ರದೇಶದಲ್ಲಿ ಮಾದಿಗರ ಒಳಮೀಸಲಾತಿ ಹೋರಾಟಕ್ಕೆ ಪ್ರಗತಿಪರ ಮೂಲಸಮುದಾಯದ ಗದ್ದರ್ ಮುಂತಾದವರು ಬೆಂಬಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕನರ್ಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಒಂದು ಗುಂಪು ಅಂದರೆ, ಶ್ರೀಧರ ಕಲಿವೀರ, ಜಯಣ್ಣ ಮುಂತಾದವರು ಒಳಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದ್ದು ಅಪರೂಪದ ಘಟನೆ. ಆದರೆ, ಕನರ್ಾಟಕದ ಪ್ರಸಿದ್ದ ದಲಿತ ಲೇಖಕರು, ಚಿಂತಕರು, ವಿಚಾರವಂತರು ಇದರ ಬಗ್ಗೆ ಮೌನ ವಹಿಸಿದ್ದು ಇಲ್ಲವೇ ದಾರಿತಪ್ಪಿಸುವ ಹೇಳಿಕೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಈ ಸವಲತ್ತುಗಳನ್ನು ಪಡೆದಿರುವವರ, ನಾವು ಹೆಚ್ಚು ಅಂಕ ಪಡೆದು ಉದ್ಯೋಗ ಪಡೆದಿದ್ದೇವೆ ಎಂಬ ವಾದವಂತೂ ಹಿಂದೂಗಳ ಜಾತಿ ಪರವಾದ ವಾದದಂತೆಯೇ ಕೇಳಿಸುತ್ತದೆ. ಕೆಲವರು ಜಾಗತೀಕರಣದಿಂದ ಮೀಸಲಾತಿಯೇ ಅಪ್ರಸ್ತುತವಾಗಿರುವಾಗ ಒಳಮೀಸಲಾತಿಗೆ ಅರ್ಥವಿದೆಯೇ ಎಂಬ ಮೊಂಡುವಾದ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ ಜಾರಿಯಲ್ಲಿದ್ದ ಅವಧಿಯಲ್ಲಿ ಒಂದು ಉದ್ಯೋಗ ಸಿಗದಿದ್ದ ಅಲ್ಪಸಂಖ್ಯಾತ ದಲಿತ ಸಮುದಾಯಗಳಿಗೆ ಉದ್ಯೋಗ ಮತ್ತು ಎಂಜಿನಯರಿಂಗ್, ಮೆಡಿಕಲ್ ಸೀಟುಗಳು ಸಿಗಲಾರಂಭಿಸಿದವು. ಈ ಸತ್ಯವನ್ನು ತಿಳಿದಿರುವ ಮಾದಿಗ ಮತ್ತಿತರ ಸಮುದಾಯಗಳು ಒಳಮೀಸಲಾತಿಯನ್ನು ಜಾರಿಗೊಳಿಸದೆ ಸಮಾನ ಬೆಳವಣಿಗೆ, ಸಾಮಾಜಿಕ ನ್ಯಾಯ ಸಾಧ್ಯವಿಲ್ಲವೆಂಬ ಅಭಿಪ್ರಾಯಕ್ಕೆ ಬಂದಿವೆ. ಇದರಿಂದ ಪರಸ್ಪರ ಅನುಮಾನ, ದ್ವೇಷ ಹುತ್ತಗಟ್ಟುತ್ತಿದೆ. ಇದನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ಪರಿಶಿಷ್ಟ ಜಾತಿಯಲ್ಲಿರುವ ಜಾತಿಗಳನ್ನು ವಿಭಜಿಸುವ ಮೂಲಕ ಅಧಿಕಾರಕ್ಕೆ ಬರುವ ತಂತ್ರವನ್ನು ಕೋಮುವಾದಿ ಪಕ್ಷಗಳು ಬಳಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಜಾತ್ಯಾತೀತ ಪಕ್ಷಗಳು ಸತ್ಯಕ್ಕೆ ಕಣ್ಣುಮುಚ್ಚುವ ಮೂಲಕ ಪರಿಶಿಷ್ಟ ಜಾತಿಗಳ ಒಗ್ಗಟ್ಟು ಮತ್ತು ಸಾಮಾಜಿಕ ನ್ಯಾಯವನ್ನು ಏಕಕಾಲಕ್ಕೆ ತಿರಸ್ಕರಿಸುತ್ತಿವೆ.
ಜಾತ್ಯಾತೀತ ರಾಜಕಾರಣದ ಕನಸು ಕಾಣಲು ಯಾರಾದರೂ ಸರಿ, ಪರಿಶಿಷ್ಟ ಜಾತಿಗಳ ಸಮಸ್ಯೆಗಳ ಚಚರ್ೆಯನ್ನು ಹಲವು ಕೋನಗಳಲ್ಲಿ ಗಮನಸಬೇಕು. ಎಲ್ಲ ರಾಜಕೀಯ ಪಕ್ಷಗಳೂ ಜಾತಿ ಪ್ರಶ್ನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾದದ್ದು. ಅವರು ಸಂತರಲ್ಲ. ಸಂತರೇ ಜಾತಿ ರಾಜಕಾರಣದ ದಾಳಗಳಾಗಿರುವ ಈ ಸಂದರ್ಭದಲ್ಲಿ ರಾಜಕೀಯ ಚಿಂತಕರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲವಾದರೆ, ಕೋಮುವಾದಿಗಳು ಮತ್ತೇ ಅಧಿಕಾರ ಹಿಡಿಯಲು, ಮುಂದುವರಿಯಲು ಜಾತ್ಯಾತೀತರೇ ಕಾರಣರಾಗುತ್ತಾರೆ. ಇದು ಈವತ್ತಿನ ಸತ್ಯ.
(ಕೃಪೆ : ಪ್ರಜಾವಾಣಿ ದಲಿತ ವಿಶೇಷ ಸಂಚಿಕೆ.) 

No comments:

Post a Comment

Thanku