Tuesday, October 26, 2010

ತನ್ನ ಘೋರಿ ತಾನೇ ತೋಡಿಕೊಂಡ ಮಾಜಿ ಸಚಿವ.


ತನ್ನ ಘೋರಿ ತಾನೇ ತೋಡಿಕೊಂಡ ಮಾಜಿ ಸಚಿವ.
ಅಂತ್ಯ ಆರಂಭ ಎಂಬ ಸುದ್ದಿಯನ್ನು ಬರೆದ ನಾಲ್ಕೇ ದಿನದಲ್ಲಿ ವಜಾಗೊಂಡ ಶಿವನಗೌಡ, ಮಾರನೇ ದಿನ ಶಾಸಕ ಸ್ಥಾನಕ್ಕೆ ರಾಜೀನಾಮೆ, ಇನ್ನೊಂದು ದಿನ ಶ್ರೀರಾಮುಲುನಿಂದಲೇ ನಾನು ಮಂತ್ರಿಯಾಗಿದ್ದೇ. ಮಗದೊಂದು ದಿನ ಜೆ.ಡಿ.ಎಸ್ನಿಂದು ಚುನಾವಣೆಗೆ ನಿಲ್ಲುತ್ತೇನೆ. ಇನ್ನು ಸ್ವಲ್ಪ ಹೊತ್ತು ಬಿಟ್ಟು ಕಾಂಗ್ರೇಸ್ನ ಟಿಕೇಟ್ ತರುತ್ತೇನೆಂಬ ಹೇಳಿಕೆಗಳನ್ನು ಮಾನಸಿಕ ಅಸ್ವಸ್ಥನಂತೆ ಘಂಟೆಗಳಿಗೊಮ್ಮೆ ನೀಡುತ್ತಿದ್ದಾನೆ. ಈ ಕುರಿತು ಒಂದು ವಿಶ್ಲೇಷಣಿ.
ವಜಾಗೊಂಡ ಮಾಜಿ ಸಚಿವ ಶಿವನಗೌಡನ ಕುರಿತು ಕಳೆದ ಸಂಚಿಕೆಯಲ್ಲಿ ಶಿವನಗೌಡನ ಅಂತ್ಯ ಆರಂಭ, ಹೊತ್ತಿ ಉರಿದ ದೀಪ ಆರುತ್ತಿದೆ ಎಂಬ ತಲೆಬರಹದಡಿ ಲೇಖನವೊಂದನ್ನು ಬರೆಯಲಾಗಿತ್ತು. ಅದು ಪ್ರಕಟಗೊಂಡು ನಾಲ್ಕೇ ದಿನಗಳಲ್ಲಿ ಗೌಡನ ಮಂತ್ರಿಗಿರಿ ವಜಾಗೊಂಡು ಹೊತ್ತಿ ಉರಿದಿದ್ದ ದೀಪ ಆರಿ ಹೋಯಿತು!
ಕೆಲವೇ ತಿಂಗಳಲ್ಲಿ ಎರಡು ಬಾರಿ ಶಾಸಕನಾಗಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೌಡನ ಪೌರುಷವೇ ಬೇರೆಇತ್ತು. ಸಕರ್ಾರದ ಅಧಿಕಾರಿಗಳನ್ನೇಂದರೆ, ತನ್ನ ಮನೆಯ ಜೀತದಾಳುವಿನಂತೆ ನೋಡುತ್ತಿದ್ದ. ಸಣ್ಣಪುಟ್ಟ ಸಕರ್ಾರಿ ನೌಕರಸ್ಥರ ಕಥೆಯಂತೂ ಹೇಳತೀರದು. ಸಗಣಿಯಲ್ಲಿ 1 ಸಾವಿರದ ನೋಟು ಬಿದ್ದಿದೆಯೆಂದರೆ, ತನ್ನ ಪಿಎನ ಕೈಯಿಂದ ನೋಟಿಗೆ ಅತ್ತಿದ್ದ ಸಗಣೆಯನ್ನು ತೊಳಿಸಿ ಕಿಸೆಯಲ್ಲಿ ಇಟ್ಟುಕೊಳ್ಳುತ್ತಿದ್ದ, ಆ ಮಟ್ಟಿಗೆ ಹಣಕ್ಕಾಗಿ ಹಪಹಪಿಸುತ್ತಾ, ದುರಂಹಕಾರದಿಂದ ಮಾಧ್ಯಮದವರೊಂದಿಗೆ ವತರ್ಿಸುತ್ತಿದ್ದ ಗೌಡ ತನ್ನ ಅಹಂಕಾರ, ಗರ್ವದಿಂದ ತಾನೇ ಸರ್ವಪತನ ಕಂಡ. ಈಗಂತೂ ತಾಲೂಕಿನಲ್ಲಿ ಈತನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆ.ಡಿ.ಎಸ್ನಿಂದ ಗುರುತಿಸಿಕೊಂಡು ಮತ್ತೊಮ್ಮೆ ಮಂತ್ರಿಯಾಗಬೇಕೆಂಬ ಹಗಲುಗನಿಸಿಗೆ ಈಗ ತಣ್ಣೀರೆರಚಿದಂತಾಗಿದೆ!
ಒಂದು ಗೂಟದ ಕಾರು, ಇಬ್ಬರು ಪಿ.ಎ, ನಾಲ್ವರು ಪೊಲೀಸ್ ಅಧಿಕಾರಿಗಳು, ಮೂರು ಕಛೇರಿಗಳು, ಹೋದಲೆಲ್ಲ-ಬಂದಲ್ಲೆಲ್ಲ ಎಸ್ಕಾಟರ್್, ಗೂಟದಕಾರಿನಿಂದ ಬೆಂಬಲಿಗರು, ಡಿಸಿ ಕಛೇರಿಗೆ ಹೋದರೆ, ವಿಶೇಷ ಗೌರವ ಸೇರಿದಂತೆ ಸಕರ್ಾರದ ಹತ್ತಾರು ಸವಲತ್ತುಗಳನ್ನು ಹೊಂದಿದ್ದ ಶಿವನಗೌಡನಿಂದ ಎಲ್ಲವನ್ನು ಏಕಾಏಕಿ ಕಸಿದು ಕೊಂಡಾಗ ನೀರಿನಿಂದ ಹೊರಬಿದ್ದ ಮೀನಿನ ಪರಿಸ್ಥಿತಿ ಈತನದ್ದಾಗಿತ್ತು.
ಮೊದಲಿಗೆ ಹೇಳಿದಂಥೆ ಬದಲಾದ ರಾಜಕೀಯದಲ್ಲಿ ತನ್ನ ಅಂತ್ಯವನ್ನು ಅರಿತಿರುವ ಶಿವನಗೌಡ ಕುಮಾರಸ್ವಾಮಿಯ ಕಾಲಿಗೆ ಬಿದ್ದು ಜೆ.ಡಿ.ಎಸ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾನೆ. ವಜಾಗೊಂಡು ನಾಲ್ಕು ದಿನಗಳವರೆಗೆ ಗೌಡನ ಮನೆಯ ಹತ್ತಿರ ಸತ್ತ ಹೆಣದ ಮುಂದೆ ಹೇಗೆ ಜನ ಕುಳಿತಿರುತ್ತಾರೋ ಅದರಂತೆ ಎಲ್ಲರೂ ತುಟಿಪಿಟಕೆನ್ನದೇ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿದ್ದವು.
ವಿದೇಶಕ್ಕೆ ಹೋಗಿ ಬರುವಷ್ಟರಲ್ಲಿಯೇ ಸಚಿವ ಸ್ಥಾನ ವಜಾಗೊಳ್ಳುವ ಎಲ್ಲ ಲಕ್ಷಣಗಳು ಗೌಡನಿಗೆ ಗೊತ್ತಾಗಿದ್ದವು. ಅಂದು ಯಡಿಯೂರಪ್ಪ ವಜಾಗೊಂಡ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ರವಾನೆ ಮಾಡುತ್ತಿದ್ದಂತೆ ರಾಯಚೂರು, ದೇವದುರ್ಗದ ಕೆಲವು ಅಧಿಕಾರಿ ವರ್ಗದವರು, ಜನಸಾಮಾನ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಕರ್ಾರದಿಂದ ಯಡಿಯೂರಪ್ಪ ಮೂವರು ಸಚಿವರನ್ನು ವಜಾಗೊಳಿಸಿದಾಗ ಅರವಿಂದ, ಗೂಳಿಹಟ್ಟಿ ಶೇಖರನ ಬೆಂಬಲಿಗರು ಅಲ್ಲಲ್ಲಿ ಕಿತಾಪತಿಗಳನ್ನು ಮಾಡುತ್ತಾ, ತಮ್ಮ ನಾಯಕರನ್ನು ಸಚಿವ ಸಂಪುಟದಿಂದ ಕೈಬಿಡಬಾರದು, ಅವರನ್ನು ಸಚಿವರಾಗಿ ಮುಂದುವರೆಸಬೇಕೆಂದು ಓರಾಟಗಳನ್ನು ಮಾಡಿದ್ದರು. ಅದನ್ನು ಮಾಧ್ಯಮಗಳು ಎಡಬಿಡದೇ ಪ್ರಸಾರ ಮಾಡಿದವು.
ಆದರೆ,
ಒಬ್ಬನೇ ಒಬ್ಬ ವ್ಯಕ್ತಿ ಶಿವನಗೌಡನನ್ನು ಸಚಿವಸಂಪುಟದಿಂದ ಕೈ ಬಿಡಬಾರದು ಎಂದು ರಾಯಚೂರು ಜಿಲ್ಲೆ, ಸ್ವತಃ ತವರು ದೇವದುರ್ಗ ತಾಲೂಕಿನಲ್ಲಿಯೇ ಒತ್ತಾಯಿಸಲಿಲ್ಲ. ಕೊನೆಯ ಪಕ್ಷ ಜಿಲ್ಲೆಯ ಬಿಜೆಪಿಯ ಯಾವೊಬ್ಬನು ಈತನ ಪರವಾಗಿ ಹೇಳಿಕೆಯನ್ನು ನೀಡಲಿಲ್ಲ. (ಆದರೆ, ಶಿವನಗೌಡ ಮಾತ್ರ ನನ್ನಿಂದ ರಾಮುಲು, ರೆಡ್ಡಿಗಳು ಇದ್ದಾರೆ. ಅವರೇ ನನ್ನನ್ನು ಉಳಿಸಿಕೊಳ್ಳುತ್ತಾರೆಂದು ಆಗಾಗ ಟಿವಿಗಳಲ್ಲಿ ಹೇಳಿಕೊಳ್ಳುತ್ತಿದ್ದ) ಅಂದರೆ, ಶಿವನಗೌಡನ ಕೆಲವು ದಿನಗಳ ಅಧಿಕಾರದಿಂದ ಎಷ್ಟು ಅಧಿಕಾರಿಗಳು, ಸಾಮಾನ್ಯ ಜನರು ಬೇಸತ್ತಿರಬೇಕು.
ಯಾರೊಬ್ಬರು ಈತನ ಪರವಾಗಿ ಪ್ರತಿಭಟನೆ, ಮನವಿಗಳನ್ನು ಕೊಡದಿದ್ದಾಗ, ಕೊನೆಗೆ ನಿವರ್ಿಲ್ಲ ಎಂಬಂತೆ ತಾನೇ ಸ್ವತಃ ಅರಕೇರಾಕ್ಕೆ ಪೋನ್ ಮಾಡಿ ತನ್ನ ಹಿಂಬಾಲಕರಿಂದ ಬಸ್ಗೆ ಬೆಂಕಿ ಹಚ್ಚಿಸಿ, ಇದು ವಿರೋಧ ಪಕ್ಷಗಳ ಕಿತಾಪತಿ ಎಂದು ಸುದ್ದಿ ಮಾಡಿಸಿದ್ದ. ಈತನ ಹಿಂಬಾಲಕರು ಬಸ್ಗೆ ಬೆಂಕಿ ಹಚ್ಚುತ್ತಿದ್ದರೂ ಅಲ್ಲಿಯೇ ಮುಕ್ಕಾಂ ಹೂಡಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳು ಮಾತ್ರ ಮೂಕಪ್ರೇಕ್ಷಕರಾಗಿ ಶಿವನಗೌಡನ ಹಿಂಬಾಲಕರನ್ನು ಬೆಂಬಲಿಸುತ್ತಿದ್ದರು. ಕೊನೆಗೆ ಅಮಾಯಕರನ್ನೇಲ್ಲ ಬಸ್ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಎಳೆ ತಂದು ಜೈಲಿಗೆ ಹಾಕಲಾಗಿದೆ. ನಂತರ ಮೊಸಳೆ ಕಣ್ಣೀರು ಸುರಿಸಲು ಶಿವನಗೌಡನೇ ಅವರೆಲ್ಲರನ್ನು ಜಾಮೀನಿನ ಮೇಲೆ ಬಿಡಿಸಿರಬೇಕು!
ಅರಕೇರಾದಲ್ಲಿನ ರಾಜಕೀಯವನ್ನು ಬೆಂಗಳೂರಲ್ಲಿ ಮಾಡಲು ಹೋಗಿ ಯಡಿಯೂರಪ್ಪಗೆ ಅಧಿಕಾರ ಚಲಾಯಿಸಲು ಬರುವುದಿಲ್ಲ ಎಂದು ರೆಡ್ಡಿಗಳ ಜೊತೆ ಗುರುತಿಸಿಕೊಂಡು ಹೇಳಿಕೆ ನೀಡಿ ಯಡ್ಡಿಯ ಕೆಂಗಣ್ಣಿಗೆ ಗುರಿಯಾದ. ಸಮಯಕ್ಕಾಗಿ ಕಾಯುತ್ತಿದ್ದ ಯಡ್ಡಿ ಮೊದಲಿಗೆ ಶಿವನಗೌಡನನ್ನೇ ಸಂಪುಟದಿಂದ ಕೈಬಿಡಲು ತೀಮರ್ಾನಿಸಿದ. ಆ ಕುರಿತು ಹಿಂದೆ ರಾಯಚೂರಿಗೆ ಬಂದಾಗ ಯಡಿಯೂರಪ್ಪ ಪತ್ರಿಕಾ ಹೇಳಿಕೆಯನ್ನು ನೀಡಿದ್ದ. ನಂತರ ರೆಡ್ಡಿಗಳೆಲ್ಲ ಶಿವನಗೌಡನ ಪರ ಹೋಗಿ ಸಿ.ಎಂ ಸಾಹೇಬರೇ, ಶಿವನಗೌಡ ನಮ್ಮನ್ನು ನಂಬಿ ಜೆ.ಡಿ.ಎಸ್ನಿಂದ ಬಂದಿದ್ದ. ಅವನಿಗೆ ಮಂತ್ರಿ ಇಲ್ಲವೆಂದರೂ ಪರವಾಗಿಲ್ಲ. ಕೊನೆ ಪಕ್ಷ ನಿಗಮ ಮಂಡಳಿಯಲ್ಲಾದರೂ ಸ್ಥಾನ ಕೊಡಿ ಎಂದು ಅಂಗಲಾಚಿದರೂ ಯಡ್ಡಿ ಮಾತ್ರ ಕ್ಯಾರೇ ಎನ್ನಲಿಲ್ಲ.
ಅಷ್ಟರಲ್ಲಿಯೇ ಶಿವನಗೌಡ ಇನ್ನುಮುಂದೆ ಬಿಜೆಪಿಯಲ್ಲಿದ್ದರೆ, ನನಗೆ ಭವಿಷ್ಯವಿಲ್ಲ. ಯಡಿಯೂರಪ್ಪನಿಗೆ ನನ್ನ ಮೇಲೆ ಸಿಟ್ಟಿದೆ. ಮುಂದೊಂದು ದಿನ ಪಕ್ಷದಲ್ಲಿ ಟಿಕೇಟ್ನ್ನು ಸಹ ಕೊಡಲಿಕ್ಕಿಲ್ಲ. ಅದಕ್ಕಾಗಿ ಪಕ್ಷ ಬದಲಿಸುವುದೇ ಲೇಸು ಎಂದು ತಿಳಿದು ಭಿನ್ನಮತೀಯರಾಗಿದ್ದ ಜಾರಕಿಹೊಳಿ, ಅಸ್ನೋಟಿಕರ್, ಬೇಳೂರು ಜೊತೆಯಲ್ಲಿ ಸೇರಿಕೊಂಡು ಕುಮಾರಸ್ವಾಮಿಯ ಹಿಂದಿದೆ ಹೋಗಲು ತೀಮರ್ಾನಿಸಿದ.
ಆ ಮೇಲೆ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಜೆ.ಡಿ.ಎಸ್ಗೆ ಮರಳಿ ಬರುತ್ತೇನೆ. ನನ್ನಿಂದ ತಪ್ಪಾಗಿದೆ. ಅಣ್ಣಾವ್ರುಗಳಾದ ನೀವುಗಳು ಕ್ಷಮಿಸಬೇಕೆಂದು ಕಾಲಿಗೆ ಬಿದ್ದಿದ್ದಾನೆ! ಅಷ್ಟೋತ್ತಿಗೆ ಕುಮಾರಸ್ವಾಮಿ ಸಕರ್ಾರ ಕೆಡವಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದ. ಕಾಗೆ ಕೂಡುವದಕ್ಕೆ ಕೊಲ್ಲೆ ಮುರಿಯುವದಕ್ಕೆ ಎಂಬ ಗಾದೆಯಂತೆ ಶಿವನಗೌಡನಂತಹ ಹಲವಾರು ಶಾಸಕರು ಸಕರ್ಾರದ ವಿರುದ್ಧ ಬಂಡಾಯವೆದ್ದು ಓಡೋಡಿ ಬರಲು ಪ್ರಾರಂಭಿಸಿದರು.
ಕುಮಾರಸ್ವಾಮಿ ಗ್ರೀನ್ಸಿಗ್ನಲ್ ನೀಡುತ್ತಿದ್ದಂತೆ ಹೊರಬಿದ್ದ ಮೀನು ಮರಳಿ ನೀರಿಗೆ ಬಿದ್ದಂತೆ ಶಿವನಗೌಡನ ಗೆಟಪ್, ಹೇಳಿಕೆಗಳೇ ಚೇಂಜ್ ಆದವು. ಕೂಡಲೇ ಜೆ.ಡಿ.ಎಸ್ನ್ನು ಸೇರಲು ತನ್ನ ಬೆಂಬಲಿಗರು, ಸ್ವಾಮಿಗಳನ್ನು ಭೇಟಿ ಮಾಡಲು ಪ್ರಾರಂಭಿಸಿದನು..
ಈತನ ಎಲ್ಲಾ ಕಾರ್ಯಕ್ಕೂ ಸೊಪ್ಪು ಹಾಕುತ್ತಿದ್ದ ಕಾರ್ಯಕರ್ತರು ಮತ್ತು ಸ್ವಾಮೀಜಿಗಳು ಈಬಾರಿ ಪಕ್ಷ ಬದಲಿಸಬೇಡಿ ಎಂದು ಸೂಚಿಸಿದರಂತೆೆ!
ಮೊನ್ನೆ ತಾನೇ ಚುನಾವಣೆ ಮುಗಿದಿದೆ. ಮತ್ತೇ ಜನರನ್ನು ಮತ ಕೇಳಲು ಹೋದರೆ, ಕ್ಯಾಕರಿಸಿ ಉಗಿಯುತ್ತಾರೆ. ಯಾವ ಮುಖವನ್ನು ಇಟ್ಟುಕೊಂಡು ಜನರತ್ತ ಮತಕೇಳುವುದು. ಅದಕ್ಕಾಗಿ ಸುಮ್ಮನೇ ಬಿಜೆಪಿಯಲ್ಲಿಯೇ ಇರ್ರೀ ಎಂದು ತಾಕೀತು ಮಾಡಿದ್ದಾರಂಥೆ!
ಇದ್ಯಾವದಕ್ಕೂ ತಲೆಕೆಡಿಸಿಕೊಳ್ಳದ ಗೌಡ ಜೆ.ಡಿ.ಎಸ್ ಸೇರಿದರೆ ಮುಂದೆ ಅವಕಾಶಗಳು ಸಿಗಬಹದು. ಒಂದು ವೇಳೆ ಕಾಂಗ್ರೇಸ್ ಜನತಾದಳದ ಸಮ್ಮಿಶ್ರಸಕರ್ಾರ ಅಸ್ತಿತ್ವಕ್ಕೆ ಬಂದರೆ, ಮಂತ್ರಿಯೂ ಆಗಬಹುದು ಎಂದು ಪೂವರ್ಾಗ್ರಹ ಪೀಡಿತನಾಗಿ ತಾಸಿಗೊಂದು ತೀಮರ್ಾನಗಳನ್ನು ತೆಗೆದುಕೊಳ್ಳುತ್ತಿದ್ದಾನೆ.

ಉರಿ ಬಿಸಿಲಲ್ಲಿ ಬಾಲಕಾಮರ್ಿಕರ ಪರದಾಟ
ವಜಾಗೊಂಡ ಮಂತ್ರಿಯ ತವರಲ್ಲಿ ಬಾಲ ಕಾಮರ್ಿಕರ ಕಾನೂನುಗಳೇ ಇಲ್ಲ, ಬಾಲಕಾಮರ್ಿಕ ಪದ್ದತಿಯನ್ನು ತೊಲಗಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೆಸರಿಗೆ ಮಾತ್ರ ಇಲಾಖೆಯಿದ್ದು, ಅದರ ಕಾರ್ಯವೈಖರಿ ಮಾತ್ರ ಶೂನ್ಯವಾಗಿದೆ.
ಆಂದ್ರ ಮೂಲದ ಭೂ ಮಾಲೀಕರೆಲ್ಲ ಇಲ್ಲಿ ಹೆಚ್ಚು ಕಡಿಮೆ ಬಾಲಕಾಮರ್ಿಕರನ್ನೇ ತಮ್ಮ ಹೊಲಗಳಲ್ಲಿ ದುಡಿಸಿಕೊಳ್ಳುತ್ತಾರೆ. ಇವರನ್ನು ಯಾರು ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಇಲ್ಲಿನ ಕೆಲವೊಂದು ಭಾಗಗಳಿಗೆ ನಾರಾಯಣಪುರ ಬಲದಂಡೆ ಕಾಲುವೆ ನೀರು ಸಮರ್ಪಕವಾಗಿ ತಲುಪುವುದಿಲ್ಲವಾದರೂ, ಆಂದ್ರ ಮೂಲದ ಭೂ ಮಾಲೀಕರು ಇರುವ ಕಡೆ ಮಾತ್ರ ಸರಿಯಾದ ನೀರಿನ ಸೌಲಭ್ಯವಿದೆ. ಇದರಿಂದ ತಾವುಗಳು ಲೀಜ್ಗೆ ಪಡೆದಿರುವ ಭೂಮಿಗಳಲ್ಲಿ ಅತಿಹೆಚ್ಚಿನ ಲಾಭವನ್ನು ಗಳಿಸಲು ಕಡಿಮೆ ಕೂಲಿಗೆ ಶಾಲೆಗೆ ಹೋಗಬೇಕಾದ ಚಿಕ್ಕಚಿಕ್ಕ ಮಕ್ಕಳನ್ನು ಕರೆತಂದು ದುಡಿಸಿಕೊಳ್ಳುತ್ತಾರೆ.
ಮೂಲತಃ ಚಿಕ್ಕಮಕ್ಕಳ ತಂದೆ ತಾಯಿಗಳು ಅವಿಧ್ಯಾವಂತರಾಗಿದ್ದರಿಂದ ತಮ್ಮ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸುವುದರಲ್ಲಿ ವಿಫಲರಾಗಿರುತ್ತಾರೆ.
ಇವರಿಗಿರುವ ಅನಿವಾರ್ಯತೆಯನ್ನು ಆಂದ್ರ ಭೂಮಾಲೀಕರು ಬಳಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಬಾಲಕಾಮರ್ಿಕರ ತಂದೆತಾಯಿಗಳನ್ನು ಅಧಿಕಾರಿಗಳು, ಮಾಧ್ಯಮದವರು ವಿಚಾರಿಸಲು ಹೋದರೆ, ಅವರುಗಳು ಹೇಳುವ ಮಾತು ಹೀಗಿವೆ ; ನಮಗೆ ಕೆಲಸವಿಲ್ಲ, ಮನೆಯಲ್ಲಿ ನಾಲ್ಕೈದು ಮಕ್ಕಳು, ದಿನದ ಒಂದೊತ್ತಿನ ಊಟಕ್ಕಾದರೂ ದುಡಿಯಬೇಕಲ್ಲವೇ, ನಮಗಂತೂ ನಾವೇ ಬೆಳೆದುಕೊಳ್ಳಲು ಭೂಮಿಯಿಲ್ಲ. ಹಾಗಾಗಿ ಬೇರೆಯವರ ಹೊಲ-ಗದ್ದೆಗಳಿಗೆ ಕೂಲಿ ಹೋಗುತ್ತೇವೆ. ನಮ್ಮ ಕೂಲಿ ಹಣದಲ್ಲಿ ಜೀವನ ಸಾಗಿಸುವುದೇ ದೊಡ್ಡ ಮಾತು. ಅಂತಹದರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ನಮಗೇನು ಲಾಭ? ಮಕ್ಕಳು ಕೆಲಸ ಮಾಡಿದರೆ ಒಂದಿಷ್ಟು ಹಣವಾದರೂ ಸಿಗುತ್ತದೆ. ಅದಕ್ಕಾಗಿ ನಾವೇ ನಮ್ಮ ಮಕ್ಕಳನ್ನು ಜೊತೆಗೆ ಕೆಲಸಕ್ಕೆ ಕರೆದುಕೊಂಡು ಹೋಗುತ್ತೇವೆ. ಇದು ನಮ್ಮ ಬದುಕೆಂದು ಅಳಲನ್ನು ತೋಡಿಕೊಳ್ಳುತ್ತಾರೆ.
ಉರಿಬಿಸಿಲಿನಲ್ಲಿ ಆಟೋ, ಟಾಟಾ ಎ.ಸಿ ಯಂತಹ ಸಣ್ಣಪುಟ್ಟಗಾಡಿಗಳ ಮೇಲೆ ಕುಳಿತುಕೊಂಡು ವಿದ್ಯಾಥರ್ಿ ಜೀವನದ ಹಂಗನ್ನು ತೊರೆದು ಮಕ್ಕಳು ದಿನಾಲು ಕೆಲಸಕ್ಕೆ ಹೋಗುತ್ತವೆ. ಗಾಡಿಗಳ ಚಾಲಕರು ನಾಲ್ಕು ದುಡ್ಡಿನ ಆಸೆಗಾಗಿ ಮೇಲೆ ಕೆಳೆಗೆ ತುಂಬಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಒಂದು ವೇಳೆ ದುರದೃಷ್ಟಕ್ಕೆ ಅಪಘಾತಗಳು ಸಂಭವಿಸಿದರೆ, ಮೊದಲಿಗೆ ದುರ್ಮರಣಕ್ಕೀಡಾಗುವುದು ಮುದ್ದು ಮಕ್ಕಳೇ. ಇಲ್ಲಿ ಪ್ರಮುಖವಾಗಿ ವಾಹನಗಳ ಮೇಲೆ ನಿಯಂತ್ರಣ ಇಡಬೇಕಾಗಿರುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಅಂತಹದೊಂದು ಇಲಾಖೆ ಲಂಚದ ಹಾವಳಿಯಲ್ಲಿ ಸಿಕ್ಕಿಹಾಕಿಕೊಂಡು ವಿಫಲವಾಗಿರುವದರ ಪರಿಣಾಮ ಇಂತಹ ದುರ್ಘಟನೆಗಳು ನಡೆಯುತ್ತಿರುತ್ತವೆ.
ಆದರೆ, ಸಕರ್ಾರಗಳು ಮಾತ್ರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು, ಮಕ್ಕಳನ್ನು ಶಾಲೆಗೆ ಕರೆತರಲು ಹತ್ತಾರು ಯೋಜನೆಗಳ ಮುಖಾಂತರ ಕೋಟಿಗಟ್ಟಲೇ ಹಣವನ್ನು ವ್ಯಯಿಸುತ್ತಿದೆ. ಆ ಹಣ ಸರಿಯಾಗಿ ಖಚರ್ಾಗಿದ್ದರೆ, ಇಂತಹ ಪರಿಸ್ಥಿತಿ ಎಲ್ಲಿಯೂ ಉದ್ಭವಿಸುತ್ತಿದ್ದಿಲ್ಲ.
ಇನ್ನು ಗ್ಯಾರೇಜ್, ಮಧ್ಯದಂಗಡಿ, ಹೋಟೆಲ್ಗಳಲ್ಲಿಯಂತೂ ಬಾಲಕಾಮರ್ಿಕರೇ, ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ. ಎಲ್ಲ ಅಂಗಡಿಗಳ ಮುಂದೆ ಬಾಲಕಾಮರ್ಿಕರ ನಿಷೇದ.. ಅದನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ, ಜೊತೆಯಲ್ಲಿ ದಂಡ ಎಂದು ನಾಮಫಲಕವನ್ನು ಹಾಕಿರುತ್ತಾರೆ. ಆದರೆ, ದಿನಾಲು ಅದೇ ನಾಮಫಲಕವನ್ನು ಬಾಲಕಾಮರ್ಿಕನೇ ವರಸುತ್ತಾನೆ.
ಅಧಿಕಾರಿಗಳು ಮಾತ್ರ ಈ ಶೋಚನೀಯ ಸ್ಥಿತಿ ದೇಶದೆಲ್ಲೆಡೆ ಇದೆ. ನಮ್ಮ ದೇವದುರ್ಗದಲ್ಲಿ ಹೊಸದೇನಲ್ಲ ಎಂದು ಬೇಜವಾಬ್ದಾರಿಯ ಮಾತನಾಡುತ್ತಾರೆ.

No comments:

Post a Comment

Thanku