Tuesday, October 26, 2010

"HISTORICAL RECORD OF HUTTI CRICKET CLUB"




ಡಿ.ವೈ ವೆಂಕಟೇಶ, ಕಾರ್ಯನಿವರ್ಾಹಕ ನಿದರ್ೇಶಕರು,
ತಂಡದ ಒಟ್ಟಾರೆ ಪ್ರದರ್ಶನದ ಬಗ್ಗೆ ಅತೀವ ಸಂತಸವಿದೆ. ಪ್ರತಿವರ್ಷ ಕಂಪನಿಯ ವತಿಯಿಂದ ಕ್ರೀಡೆಗಳನ್ನು ಆಯೋಜಿಸಲು ಎಲ್ಲ ರೀತಿಯಿಂದ ಸಹಕಾರ ನೀಡಲಾಗುತ್ತಿದೆ. ಅದರ ಒಂದು ಭಾಗವಾಗಿ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ (ಣ ಆತಠಟಿ) ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದರೊಂದಿಗೆ ಹಟ್ಟಿಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಟ್ಟಿ ಕಂಪನಿಯ ಕಾರ್ಯನಿವರ್ಾಹಕ ನಿದರ್ೇಶಕ ಡಿ.ವೈ ವೆಂಕಟೇಶ ನಮ್ಮ ಪತ್ರಿಕೆ ಪ್ರತಿನಿಧಿಯ ಮುಂದೆ ಹರ್ಷ ವ್ಯಕ್ತಪಡಿಸಿದರು.
ಮೊದಲಿನಿಂದಲೂ ಹಟ್ಟಿ ಚಿನ್ನದ ಗಣಿ ಪ್ರತಿಯೊಂದು ಕ್ಷೇತ್ರಗಳಲ್ಲಿ ತನ್ನದಾದ ಛಾಪನ್ನು ಮೂಡಿಸುತ್ತಾ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ.
ಕ್ರಿಕೆಟ್ನಂತೆ ಪುಟ್ಬಾಲ್, ವಾಲಿಬಾಲ್, ಹಾಕಿಯಂತಹ ಆಟಗಳನ್ನು ಆಡಲು ನಮ್ಮ ಕಾಮರ್ಿಕರು ಮತ್ತು ಅವರು ಮಕ್ಕಳು ಮುಂದೆ ಬರಬೇಕು. ಅವರಿಗೆ ಎಲ್ಲ ರೀತಿಯ ತರಬೇತಿಗಳನ್ನು ನೀಡುವದರೊಂದಿಗೆ ನಾವುಗಳು ಕಂಪನಿಯ ವತಿಯಿಂದ ಸಾಧ್ಯವಾದ ಸೌಲಭ್ಯಗಳನ್ನು ಕೊಡುತ್ತೇವೆ. ಕಾರಣ ರಾಷ್ಟ್ರೀಯ ಕ್ರೀಡೆಗಳಲ್ಲಿ ಉತ್ಸುಕತೆಯಿಂದ ಯುವಕರು ಪಾಲ್ಗೊಳ್ಳಬೇಕೆಂದರು.
ಮುಂದಿನ ವರ್ಷ ಪ್ರಥಮ ಡಿವಿಜನ್ನಲ್ಲಿ ನಮ್ಮ ತಂಡವು ದಿಟ್ಟ ಆಟವನ್ನು ಪ್ರದಶರ್ಿಸಿ ಜಯಿಸುತ್ತದೆ ಎಂಬ ಭರವಸೆ ನಮಗಿದೆ. ಅದೇ ನಿಟ್ಟಿನಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರಿ ಹಟ್ಟಿಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಬೇಕಾದ ಮಹತ್ತರ ಜವಾಬ್ದಾರಿ ತಂಡದ ಮೇಲಿದೆ. ಎಂದು ಹೇಳಿದರು..

ಸಫೀವುಲ್ಲಖಾನ್, ಗೌರವ ಕಾರ್ಯದಶರ್ಿಗಳು.
ಹಟ್ಟಿ ಚಿನ್ನದ ಗಣಿ ಕಂಪನಿಯೂ ನಮ್ಮ ಮಂಡಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದರಿಂದ ನಾವುಗಳು ಇಂದು ಪ್ರಥಮ ಡಿವಿಜನ್ನ ಹಂತಕ್ಕೆ ಹೋಗಲು ಸಾಧ್ಯವಾಗಿದೆ. ಎಲ್ಲ ಹಂತಗಳಲ್ಲಿ ಕಂಪನಿಯ ಆಡಳಿತ ಮಂಡಳಿಯು ನಮ್ಮ ತಂಡದ ಆಟಗಾರರನ್ನು ಪ್ರೋತ್ಸಾಹಿಸಿದ್ದಲ್ಲದೇ, ನಮಗೆ ಬೆನ್ನೆಲುಬಾಗಿ ನಿಂತಿದೆ.
ಇದರ ಜೊತೆಯಲ್ಲಿ ನಮ್ಮ ಆಯ್ಕೆ ಸಮಿತಿಯೂ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದರಿಂದ ನಾವುಗಳು ಎಲ್ಲ ಪ್ರತಿಷ್ಟಿತ ತಂಡಗಳನ್ನು ಸೋಲಿಸಿ ಪ್ರಥಮ ಡಿವಿಜನ್ಗೆ ಹೋಗಲು ಸಾಧ್ಯವಾಗಿದೆ.
ತಂಡದ ಯಶಸ್ಸು ಮತ್ತು ಬೆಳವಣಿಗೆಗೆ ಕಂಪನಿಯೇ ಮೂಲ ಕಾರಣಿಭೂತವಾಗಿದೆ.
ಕಂಪನಿಯ ಈ ಬಾರಿಯೂ ಅವಕಾಶವೊಂದನ್ನು ಮಾಡಿಕೊಟ್ಟರೆ, ಕಳೆದ ವರ್ಷದಂತೆ ಈ ಬಾರಿಯೂ ಮುಂದಿನ ತಿಂಗಳು ಹಟ್ಟಿ ಗೋಲ್ಡ್ ಕಪ್ ಅಂತರರಾಜ್ಯ ಟೂನರ್ಿಮೆಂಟ್ನ್ನು ನಡೆಸುವ ಉದ್ದೇಶ ನಮ್ಮದಾಗಿದೆ ಎಂದು ಪತ್ರಿಕೆಯ ಪ್ರತಿನಿಧಿ ಜೊತೆ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ನ ಗೌರವ ಕಾರ್ಯದಶರ್ಿ ಸಫೀವುಲ್ಲಖಾನ್ ಅನಿಸಿಕೆ ಹಂಚಿಕೊಂಡರು.

ಕನರ್ಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಯಾವುದೆಂದು ಯಾರನ್ನಾದರೂ ಪ್ರಶ್ನಿಸಿದರೆ, ತಕ್ಷಣವೆ ಬರುವ ಉತ್ತರ ರಾಯಚೂರು ಜಿಲ್ಲೆ... ಇಂತಹ ಜಿಲ್ಲೆಯಲ್ಲಿರುವ ಹಟ್ಟಿ ಚಿನ್ನದ ಗಣಿ ಬಂಗಾರವನ್ನು ಉತ್ಪಾದಿಸುವದರ ಜೊತೆಗೆ ಬಂಗಾರದಂತಹ ಹಲವಾರು ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದೆ.
ಹಟ್ಟಿ ಚಿನ್ನದ ಗಣಿಯು ಹಲವಾರು ಪ್ರತಿಭಾನ್ವಿತ ಶಿಕ್ಷಣ ಪ್ರೇಮಿಗಳು, ಸಾಹಸಿಗಳು, ಹಿರಿಯ ಅಧಿಕಾರಿಗಳು, ಕ್ರೀಡಾಪ್ರೇಮಿಗಳನ್ನು ಪೋಷಿಸಿ ಬೆಳೆಸುತ್ತಿದೆ. ಹೀಗಾಗಿ ನಿಜಕ್ಕೂ ಒಂದಿಲ್ಲೊಂದು ಕ್ಷೇತ್ರದಲ್ಲಿ ತನ್ನದಾದ ಛಾಪನ್ನು ರಾಜ್ಯಮತ್ತು ರಾಷ್ಟ್ರಮಟ್ಟದಲ್ಲಿ ಮೂಡಿಸುತ್ತಾ ಬಂದಿದೆ ಎಂದರೆ ತಪ್ಪಾಗಲಾರದು. ಇವೆಲ್ಲವುಗಳು ಒಂದು ಭಾಗವಾಗಿ ಇತ್ತೀಚಿಗೆ ಹಟ್ಟಿ ಕ್ರಿಕೆಟ್ ತಂಡವು 3ದಶಕಗಳ ನಂತರ ಣ ಆತಠಟಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವದರೊಂದಿಗೆ ಹೊಸ ದಾಖಲೆಯನ್ನು ರಾಜ್ಯಮಟ್ಟದಲ್ಲಿ ನಿಮರ್ಿಸಿದೆ.
ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ ನಡೆದು ಬಂದ ದಾರಿ.
ಪ್ರಪ್ರಥಮ ಬಾರಿಗೆ 1948ರಲ್ಲಿ ಕ್ರೀಡಾಮನೋಭಾವವನ್ನು ಬೆಳೆಸುವ ಸದುದ್ದೇಶದಿಂದ ಬ್ರೀಟಿಷ್ ಅಧಿಕಾರಿಗಳು ಇಲ್ಲಿ ಕ್ರಿಕೆಟ್ನ್ನು ಪರಿಚಯಿಸಿದರು. ತದನಂತರ 1952ರಲ್ಲಿ ಈ ನಮ್ಮ ಕ್ರಿಕೆಟ್ ಕ್ಲಬ್ ಕೆ.ಎಸ್.ಸಿ.ಎ ನ ಸದಸ್ಯತ್ವವನ್ನು ಪಡೆಯುವದರೊಂದಿಗೆ ತನ್ನ ಕ್ರೀಡೆಯ ಅಚಲವಾದ ಧ್ಯೇಯವನ್ನು ಮುಂದುವರೆಸುತ್ತಾ ಸಾಗಿತು.
ಫೆಬ್ರುವರಿ 2007ರಂದು ಸಫೀವುಲ್ಲಖಾನ್ರ ಕಾರ್ಯದಶರ್ಿತ್ವದಲ್ಲಿ ಕ್ರಿಕೆಟ್ ತಂಡದ ಹೊಸ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಅಜಿತ್ಪಾಶ, ಬಿ.ಕೆ ವಾಸುಕಿ, ಆಂಜಿನೇಯ ಮತ್ತು ಕಂಪನಿಯ ವಿಭಾಗದ 10ಸದಸ್ಯರನ್ನು ಪ್ರತಿವಿಭಾಗದಂತೆ ಆಯ್ಕೆ ಮಾಡಲಾಯಿತು.
2007ರಲ್ಲಿ 2ನೇ ವಿಭಾಗದ ಹಾಗೂ 8ನೇ ಶ್ರೇಣಿಯಲ್ಲಿದ್ದ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ತಂಡವು 2008ರಲ್ಲಿ 6ನೇ ಕ್ರಮಾಂಕ ಹಾಗೂ 2009ರಲ್ಲಿ 4ನೇ ಕ್ರಮಾಂಕಕ್ಕೇರಿತು. ಇಷ್ಟಕ್ಕೆ ತೃಪ್ತಿಪಡದೇ ಪ್ರಗತಿಯ ಪಥದಲ್ಲಿ ಮುಂದುವರಿದ ತಂಡವು 2ನೇ ವಿಭಾಗದ ಫೈನಲ್ನ್ನು ತಲುಪಿತ್ತು. ಈ 2ನೇ ವಿಭಾಗದಲ್ಲಿ 32ಪ್ರತಿಭಾನ್ವಿತ ತಂಡಗಳಿದ್ದವು. ಈ 2ನೇ ವಿಭಾಗದಲ್ಲಿರುವ ಅತ್ಯುತ್ತಮ 2 ತಂಡಗಳನ್ನು (ಣ ಆತಠಟಿ)ಗೆ ಬಡ್ತಿ ನೀಡಲಾಗುತ್ತದೆ.
ಇಲ್ಲಿ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ ಫೈನಲ್ ಪ್ರವೇಶಿಸುವದರೊಂದಿಗೆ ಣ ಆತಠಟಿ ನ ಅರ್ಹತೆಯನ್ನು ಪಡೆದು ಉತ್ತರಕನರ್ಾಟಕದಲ್ಲಿಯೇ 3ದಶಕಗಳ ನಂತರ ಮೊದಲ ಬಾರಿಗೆ ವೇಲು ನಾಯಕತ್ವದೊಂದಿಗೆ ಬ್ಯಾಟ್ಸ್ಮನ್ ಕರಿಯಪ್ಪ, ಅಪ್ಸರಪಾಶ, ನವೀನ ಬೌಲರ್ಗಳಾದ ಮೆಹಬೂಬಪಾಶ, ಚಂದ್ರಶೇಖರರವರ ಅತ್ಯುತ್ತಮ ಆಟ ಹಾಗೂ ಒಟ್ಟು ತಂಡದ ಸದಸ್ಯರ ಪ್ರದರ್ಶನದೊಂದಿಗೆ ಸಾಧನೆಗೈದ ಏಕೈಕ ತಂಡವಾಗಿ ಹೊರಹೊಮ್ಮಿತು.
ಣ ಆತಠಟಿ ನಲ್ಲಿರುವ 8ತಂಡಗಳಲ್ಲಿ ಮುಂಬರುವ ವರ್ಷ ತಾನು 7ತಂಡಗಳ ಜೊತೆ ಸೆಣಸಲಿದೆ. ಊಉಒಅಅ ಯು ಉತ್ತಮ ಪ್ರದರ್ಶನ ನೀಡುವದರ ಮೂಲಕ ಮೊದಲನೇ ವಿಭಾಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಪ್ರಸ್ತುತ ತಂಡದ ಈ ಸಾಧನೆಯ ಹಿಂದೆ ಕಂಪೆನಿಯ ಕಾರ್ಯನಿವರ್ಾಹಕ ನಿದರ್ೇಶಕ ಡಿ.ವೈ ವೆಂಕಟೇಶರವರ ನಿರಂತರ ಪ್ರೋತ್ಸಾಹ ಮತ್ತು ಕ್ರೀಡೆಯ ಬಗ್ಗೆ ಅವರಿಗಿರುವ ಆಸಕ್ತಿಯೇ ಮುಖ್ಯ ಕಾರಣವೆಂದು ಸಫೀವುಲ್ಲಾಖಾನ್ ಹೇಳುತ್ತಾರೆ.
ಇದರಲ್ಲಿ ಪ್ರತಿಯೊಂದು ಇಲಾಖೆಗಳ ಮುಖ್ಯಸ್ಥರ ನಿರಂತರ ಪ್ರೋತ್ಸಾಹವು ಕಾರಣವಾಗಿದೆ. ಅದೇ ರೀತಿ ತಂಡದ ಉತ್ತಮ ಪ್ರದರ್ಶನಕ್ಕೆ ಬಹುಮುಖ್ಯವಾಗಿರುವುದು ಆಟಗಾರರ ಆಯ್ಕೆ. ಉತ್ತಮ ತಂಡವನ್ನು ರಚಿಸಲು ಆಯ್ಕೆ ಸಮಿತಿಯನ್ನು ರಚಿಸಲಾಗಿರುತ್ತದೆ. ಅದು ಮುಕ್ತ ಹಾಗೂ ಪಾರದರ್ಶಕವಾಗಿ ತಂಡವನ್ನು ರಚಿಸಿದ್ದರಿಂದ ಈ ಒಂದು ಸಾಧನೆ ಮಾಡಲು ಸಾಧ್ಯವಾಗಿದೆ.
ಆಯ್ಕೆ ಸಮಿತಿಯು ನಾಕೌಟ್ ಪಂದ್ಯಗಳನ್ನು ಪ್ರತಿ ರವಿವಾರದಂತೆ ವರ್ಷಪೂತರ್ಿ ಆಡಿಸುವ ತೀಮರ್ಾನವನ್ನು ಕೈಗೊಂಡಿದ್ದು, ಇದರಿಂದ ಉತ್ತಮ ಆಟಗಾರರನ್ನು ಗುರುತಿಸಲು ಸಹಕಾರಿಯಾಗಿದೆ.
ಡಿಸೆಂಬರ್ 2009ರಲ್ಲಿ ಹಟ್ಟಿ ಗೋಲ್ಡ್ಕಪ್ ಕ್ರಿಕೆಟ್ ಟೂನರ್ಿಮೆಂಟ್ನ್ನು ನಡೆಸಲಾಯಿತು. ಈ ಟೂನರ್ಿಮೆಂಟ್ನಲ್ಲಿ ದಕ್ಷಿಣ ಭಾರತದ 20ಪ್ರತಿಷ್ಟಿತ ತಂಡಗಳು ಭಾಗವಹಿಸಿದ್ದವು. ಇದು ಯಾವುದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗಿ ನಡೆಯಿತು. ಟೂನರ್ಿಯ ಕುರಿತು ಎಲ್ಲ ತಂಡಗಳು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದವು.
60 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಹಿರಿಯ ಆಟಗಾರರಾದ ಜಯಾನ್ಜೀವಿ, ಎಂ.ಡಿ ಪಾಶ, ತಂಗವೇಲು, ಸೈಯದ್ ಜಿಲಾನಿ, ರಾಮಜೀ ಹಾಗೂ ಪೀಲಿಫ್ಸ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕ್ರಿಕೆಟ್ ಕ್ಲಬ್ ರವಿವಾರದ ಆಟಗಳನ್ನು ಏರ್ಪಡಿಸುವದಲ್ಲದೆ ಚಿಣ್ಣರಿಗಾಗಿ 1ತಿಂಗಳ ಬೇಸಿಗೆಯ ಕ್ರಿಕೆಟ್ ತರಬೇತಿಯನ್ನು ನೀಡುವುದು ಸಮಿತಿಯ ಮುಖ್ಯಧ್ಯೇಯವಾಗಿದೆ.
ಕಳೆದ 3ವರ್ಷಗಳಲ್ಲಿ 15, 17, 19 ಹಾಗೂ 22ರೊಳಗಿನ ಪ್ರತಿಭಾನ್ವಿತ ಯುವ ಆಟಗಾರರನ್ನು ಪ್ರೋತ್ಸಾಹಿಸಿ ಜಿಲ್ಲಾ ಹಾಗೂ ವಿಭಾಗಮಟ್ಟಕ್ಕೆ ಕಳುಹಿಸಲಾಗಿದೆ. ಪ್ರತಿವರ್ಷ ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಟೂನರ್ಿಮೆಂಟ್ನ್ನು ಹಟ್ಟಿಯ ಸಮಸ್ತ ಶಾಲೆಗಳನ್ನು ಒಳಗೊಂಡು ನಡೆಸಲಾಗುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಮಕ್ಕಳಲ್ಲಿ ಕ್ರೀಡೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.
ಊಉಒಅಅ ಯು ಕೈಗೊಂಡಂತಹ ಕಾರ್ಯಗಳು ಆಟಗಾರರು ಮಾತ್ರವಲ್ಲದೇ ಸಾರ್ವಜನಿಕರು ಹಾಗೂ ಕೆ.ಎಸ್.ಸಿ.ಎ ಬೆಂಗಳೂರು ಇವರಿಂದಲೂ ಪ್ರಶಂಸೆಗೆ ಪಾತ್ರವಾಗಿವೆ.
ವಿಜಯ

No comments:

Post a Comment

Thanku