Friday, February 15, 2013
Prajasamara 17th Edition 15-02-2013
Friday, February 1, 2013
ಹಟ್ಟಿ ಚಿನ್ನದ ಗಣಿ ಕಂಪೆನಿ ಅಕ್ರಮ ನೇಮಕಾತಿ Part 2
ಇತ್ತೀಚೆಗೆ ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿ 150 ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವದನ್ನು ಪತ್ರಿಕೆ ಬಯಲಿಗೆಳೆದಿತ್ತು. ಅಕ್ರಮ ನೇಮಕಾತಿ ಕೂಟದ ಕುರಿತು ಪ್ರಜಾಸಮರ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನೌಕರಿಗಳು ಮಾರಾಟಕ್ಕಿವೆ ಎಂಬ ಶಿಷರ್ಿಕೆಯಡಿ, ಕಂಪೆನಿ ನೇಮಕಾತಿ ಪಟ್ಟಿ ಪ್ರಕಟಿಸುವದಕ್ಕಿಂತ ಮೊದಲೇ ವಿಸೃತವಾಗಿ ವಿವರಿಸಿತ್ತು.ರಾಜಕೀಯ ವ್ಯಕ್ತಿಗಳು, ಪ್ರಭಾವಿಗಳು ಹಟ್ಟಿ ಕಂಪೆನಿಯ ವ್ಯವಸ್ಥಾಪಕ ನಿದರ್ೇಶಕ ಎ.ಕೆ ಮೊನ್ನಪ್ಪ, ಅಧ್ಯಕ್ಷ ಜಗಳೂರು ರಾಮಚಂದ್ರರ ಜೊತೆ ಸೇರಿಕೊಂಡು ಅಕ್ರಮ ನೇಮಕಾತಿ ಮಾಡಿದ್ದರು. ನಂತರ ಅಕ್ರಮ ನೇಮಕಾತಿಯಲ್ಲಿ ಎಲ್ಲರ ಕೈವಾಡವಿರುವುದು ಬಯಲಿಗೆ ಬಂತಾದರೂ, ಕಂಪನಿ ಮಾತ್ರ ಪಾರದರ್ಶಕ ನೇಮಕಾತಿ ಎಂದೇ ಹೇಳಿತು.
ಒಟ್ಟಾರೆಯಾಗಿ 150 ಹುದ್ದೆಗಳಿಗೆ ನಡೆದ ನೇಮಕಾತಿ ಕಂಪೆನಿ ಹೊರಡಿಸಿದ ಅಧಿಸೂಚನೆಗೆ ವಿರುದ್ಧವಾಗಿ ನಡೆಯಿತು. ಇದನ್ನು ಕಂಪನಿಯವರು ವ್ಯವಸ್ಥಿತವಾಗಿ ಖಾಸಗಿ ಏಜೆನ್ಸಿಯವರಿಗೆ ನೀಡಿ, ತಮಗೂ, ನೇಮಕಾತಿಗೂ ಸಂಬಂಧವಿಲ್ಲ ಎಂಬುವಂತೆ ನಡೆದುಕೊಂಡರು.
ಇದರಲ್ಲಿ ಯಾರ ಕೈವಾಡ, ಪಾತ್ರವಿಲ್ಲವೆಂದು ಕಂಪೆನಿ ಎಷ್ಟೇ ಸಮಜಾಯಿಷಿ ನೀಡಿದರೂ, ಮೇಲ್ನೋಟಕ್ಕೆ ಅದೊಂದು ಅಕ್ರಮ ನೇಮಕಾತಿ ಎಂಬುದು ಎಲ್ಲರಿಗೆ ಮನದಟ್ಟಾಗುವಂತಿತ್ತು.
ಹಟ್ಟಿಯ ವಿವಿಧ ಸಂಘ-ಸಂಸ್ಥೆಗಳು ಅಕ್ರಮ ನೇಮಕಾತಿ ವಿರೋಧಿಸಿ ಹೋರಾಟ, ಬಂದ್, ಪ್ರತಿಭಟನೆ ತದಿತ್ಯಾದಿಗಳನ್ನು ಮಾಡಿದವು. ಆ ಎಲ್ಲಾ ಹೋರಾಟಗಳ ಫಲವಾಗಿ ಆಡಳಿತವರ್ಗವು ನೇಮಕಾತಿ ರದ್ದು ಮಾಡುವದಾಗಿ ಲಿಖಿತ ಪತ್ರದಲ್ಲಿ ಭರವಸೆ ನೀಡಿತು.
ಆದರೆ, ಕಂಪೆನಿ ಲಿಖಿತ ಪತ್ರ ನೀಡಿದ ಕೆಲವೇ ದಿನಗಳಲ್ಲಿ 150 ಸ್ಥಾನಗಳಿಗೆ ಆಯ್ಕೆಗೊಂಡಿದ್ದ ಮತ್ತದೆ, ಅಭ್ಯಥರ್ಿಗಳನ್ನು ಅವಸರವಸರದಲ್ಲಿ ಆದೇಶ ಪತ್ರ ನೀಡಿ ಕೆಲಸಕ್ಕೆ ಕರೆಸಿಕೊಂಡಿತು.
ಒಂದು ನೌಕರಿ ನೀಡುವಾಗ ಕಾನೂನು ನಿಯಮದಂತೆ ವೈಧ್ಯಕೀಯ ಪರೀಕ್ಷೆ, ಪೊಲೀಸ್ ವಿಚಾರಣೆ ಮಾಡುವದು ರೂಡಿಗತವಿದೆ. ಆದರೆ, ಹಟ್ಟಿ ಕಂಪೆನಿ ಅಧಿಕಾರಿಗಳು ಇದ್ಯಾವದನ್ನು ಮಾಡದೆ, ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ರಾತ್ರೋರಾತ್ರಿ ಕೆಲಸಕ್ಕೆ ಸೇರಿಸಿಕೊಂಡದ್ದು ನೋಡಿದರೆ, ನೇಮಕಾತಿಯಲ್ಲಿ ಅಕ್ರಮ ನಡೆದಿರುವದು ಸ್ಪಷ್ಟವಾಗಿ ತಿಳಿಯುತ್ತದೆ.
ನೇಮಕಾತಿಯನ್ನು ರದ್ದು ಮಾಡುತ್ತೇವೆಂದು ಹೇಳಿ ದೀಡೀರ್ ಆದೇಶ ಪತ್ರ ನೀಡಿದ, ಆಡಳಿತ ಮಂಡಳಿಯ ಧೋರಣಿಯನ್ನು ಖಂಡಿಸಿ ದಿನಗೂಲಿ ನೌಕರರು ಮತ್ತದೇ ಪ್ರತಿಭಟನೆಗಳನ್ನು ಮಾಡಿದರು. ಹೋರಾಟಕ್ಕೆ ಕಂಪೆನಿ ಮಣಿಯುವದಿಲ್ಲವೆಂದು ತಿಳಿಯುತ್ತಿದ್ದಂತೆ, ಕೆಲವರು ಒಕ್ಕೂಟಗಳನ್ನು ಮಾಡಿಕೊಂಡು, ಗುಲಬಗರ್ಾ ಹೈಕೋಟರ್್ನ ವಿಭಾಗೀಯ ಪೀಠದ ಮೆಟ್ಟಿಲು ಹತ್ತಿದರು. ಇಂದು ವಿಭಾಗೀಯ ಪೀಠ ಅಕ್ರಮ ನೇಮಕಾತಿಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣಿಗೆ ಎಂ.ಡಿಯವರು ಹಾಜರಿರಬೇಕೆಂದು ಆದೇಶಿಸಿದೆ.
ಅಕ್ರಮ ನೇಮಕಾತಿಗೆ ಸಂಬಂಧಿಸಿ ಹಲವರು ಮಾಹಿತಿ ಹಕ್ಕುಕಾಯ್ದೆ ಅನ್ವಯ ಮಾಹಿತಿ ನೀಡುವಂತೆ ಕಂಪೆನಿಯನ್ನು ಕೇಳಿಕೊಂಡರೂ, ಕಂಪೆನಿ ಅಧಿಕಾರಿಗಳು ಮಾತ್ರ ಪ್ರಕರಣ ಕೋಟರ್ಿನಲ್ಲಿ ಇರುವದರಿಂದ ಮಾಹಿತಿ ನೀಡಲು ಬರುವುದಿಲ್ಲವೆಂದು, ಕಾನೂನು ಸಬೂಬುಗಳನ್ನು ಹೇಳುತ್ತಾ, ನುಣುಚಿಕೊಂಡರು.
ಸುಮ್ಮನೆ ಕಾಲಹರಣ ಮಾಡುವದನ್ನೇ ರೂಢಿ ಮಾಡಿಕೊಂಡಿರುವ ಕಂಪನಿ ಅಧಿಕಾರಿಗಳು ಕಾಮರ್ಿಕರ ಯಾವೊಂದು ಕೆಲಸಗಳಿಗೂ ಸರಿಯಾಗಿ ಸ್ಪಂದಿಸುವುದಿಲ್ಲ. ಒಬ್ಬ ಕಾಮರ್ಿಕ ತನ್ನ ಯಾವುದೇ ಕೆಲಸವನ್ನು ಮಾಡಿಕೊಳ್ಳಬೇಕಾದರೆ, ಅವನು ಮೂರನೇ ವ್ಯಕ್ತಿಯ ಸಹಾಯ ಪಡೆಯಲೆಬೇಕಾಗಿದೆ. ಅಂತದೊಂದು ವಾತಾವರಣವನ್ನು ಕಂಪನಿಯ ಅಧಿಕಾರಿಗಳು ಸೃಷ್ಟಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಕ್ರಮ ನೇಮಕಾತಿ ಪ್ರಕರಣ ಕೋಟರ್ಿಗೆ ಹೋದ ನಂತರ ಕಂಪೆನಿಯವರು ಹೇಳಿದ್ದು, ಮಾಡಿದ್ದೆಲ್ಲ ಬರೀ ಡ್ರಾಮಾ!
ನೇಮಕಾತಿಗೆ ಮಾನದಂಡಗಳೇ ಇಲ್ಲ
ಸಕರ್ಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಯಾವುದೇ ನೇಮಕಾತಿ ಮಾಡಬೇಕಾದರೆ, ಕೆಲವು ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಅದು ಕಡ್ಡಾಯ ನಿಯಮವು ಕೂಡ ಹೌದು.
ಆದರೆ, ಕಂಪೆನಿಯಲ್ಲಿ ನಡೆಯುವ ಸಾಕಷ್ಟು ನೇಮಕಾತಿಗಳಲ್ಲಿ ಮಾನದಂಡವೇ ಕಣ್ಣಿಗೆ ಕಾಣುವುದಿಲ್ಲ ಮತ್ತು ಶಿಷ್ಟಾಚಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ನೇಮಕಾತಿ ಮಾಡಲಾಗುತ್ತದೆ!
ಈ ಹಿಂದೆ ಕಂಪೆನಿಯ ಅಧ್ಯಕ್ಷ ತನ್ನ ಸಂಬಂಧಿಯೊಬ್ಬರಿಗೆ ನೌಕರಿ ಕೊಡಿಸಬೇಕು. ಅವನಿಗೆ ತನ್ನ ಸಂಬಂಧಿಯ ಮಗಳನ್ನೇ ಕೊಟ್ಟು, ಮದುವೆ ಮಾಡಬೇಕೆಂಬ ಒಂದೇ ಕಾರಣಕ್ಕೆ ಅವಶ್ಯಕತೆ ಇಲ್ಲದ ಒಂದು ಹುದ್ದೆಯನ್ನು ಸೃಷ್ಟಿಸಿ, ತನ್ನ ಸಂಬಂಧಿಯನ್ನೇ ಆ ಹುದ್ದೆಗೆ ಭತರ್ಿ ಮಾಡಿಸಿದ್ದ. ಆಗ ಚೇರ್ಮನ್ ಮಾಡಿದ ನೇಮಕಾತಿಯನ್ನು ಹಲವರು ವಿರೋಧಿಸಿದದರೂ, ಮೊನಚಾದ ಮೊನ್ನಪ್ಪ ಮಾತ್ರ ಅದು ಪಾರದರ್ಶಕ ನೇಮಕಾತಿಯೆಂದು ಸಮಥರ್ಿಸಿಕೊಂಡರು.
ಮೊನ್ನೆ ನಡೆದ 150 ನೇಮಕಾತಿಗಳಲ್ಲಿ ಒಬ್ಬಾಕೆ ತನ್ನ ಗೆಣೆಯ (ಮಿಂಡ) ನ ಕಡೆಯಿಂದ ಅರ್ಹತೆ, ಅನುಭವ ಹೊಂದಿರದ 3 ಹುಡುಗರನ್ನು ನೇಮಕಾತಿ ಮಾಡಿಸುತ್ತಾಳೆ! ಆಕೆಯಂತೆಯೇ ಕೆಲವು ಚೇಲಾಮಂದಿಗಳು 150 ನೇಮಕಾತಿಯಲ್ಲಿ ಪಾಲುದಾರರಾಗುತ್ತಾರೆ. ಮತ್ತು ಫಲಾನುಭವಿಗಳು ಆಗುತ್ತಾರೆ.
ಹಟ್ಟಿ ಕಂಪೆನಿಗೆ ಸಂಬಂಧವೇ ಇಲ್ಲದ ಮಂದಿ ಇಲ್ಲಿಗೆ ಬಂದು ಅಕ್ರಮವಾಗಿ ನೇಮಕಾತಿ ಮಾಡಿಸುತ್ತಾರೆಂದರೆ, ಇಲ್ಲಿನ ಆಡಳಿತ ಎಷ್ಟರ ಮಟ್ಟಿಗೆ ಕುಸಿದಿರಬೇಕು. ಅಂದರೆ, ಮೊನ್ನಪ್ಪ & ರಾಮಚಂದ್ರ ಹಟ್ಟಿ ಕಂಪೆನಿಯ ಮಾನ-ಮಯರ್ಾದೆಯನ್ನು ಎಲ್ಲಿಗೆ ತಂದು ನಿಲ್ಲಿಸಿರಬೇಕು ನೋಡಿ. ಹೀಗಾಗಿ ಇದು ಬಂಗಾರದ ಕಂಪೆನಿಯೋ ಅಥವಾ ತೊಗಲಿನ ಕಂಪೆನಿಯೋ ಎಂಬ ಅನುಮಾನ ಎಲ್ಲರನ್ನು ಕಾಡತೊಡಗಿದೆ!
ಒಬ್ಬ ವೇಶ್ಯೆಯೇ ಬಂಗಾರದ ಕಂಪನಿಯಲ್ಲಿ ನೌಕರಿ ಕೊಡಿಸುವಾಗ, ವೈಶ್ಯೆಯಲ್ಲದವರು, ಇನ್ನೆಷ್ಟು ಹುಡುಗರಿಗೆ ಉಂಡೇ ನಾಮ ಹಾಕಿರಬಹುದು ನೀವೆ ಊಹಿಸಿ. ಇಂತಹ ನೇಮಕಾತಿಯನ್ನು ಮಾನ್ಯ ಮೊನ್ನಪ್ಪನವರು ಪಾರದರ್ಶಕ ನೇಮಕಾತಿ ಎನ್ನುತ್ತಾರೆಂದರೆ ಅವರಿಗೆ ಏನೆನ್ನಬೇಕು.
ಶಿವನಗೌಡ, ಜಗಳೂರು ರಾಮಚಂದ್ರ ಪಕ್ಕಾ ರಾಜಕಾರಣಿಗಳು. ಅವರ ಅಧಿಕಾರ 5ವರ್ಷ. ಸಹಜವಾಗಿ ಇಂತಹ ರಾಜಕಾರಣಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಾರೆ. ಅಧಿಕಾರವಧಿಯೊಳಗೆ ಏನಾದರೂ ಮಾಡಬೇಕೆಂಬ ಹಠಕ್ಕೆ ಬಿದ್ದು ಅಧಿಕಾರಿಗಳನ್ನು ಬೆದರಿಸಿ, ಅಕ್ರಮವನ್ನು ಮಾಡಿಸುತ್ತಾರೆ.
ಒಂದು ವೇಳೆ ಅಧಿಕಾರಿಗಳು ರಾಜಕಾರಣಿಗಳು ಹೇಳಿದಂತೆ ನಡೆದುಕೊಂಡರೆ, ಜೈಲಿಗೆ ಹೋಗಬೇಕಾಗುತ್ತದೆ. ಇಲ್ಲಿ ಮೊನ್ನಪ್ಪನವರು ಕೂಡ ರಾಜಕಾರಣಿಗಳ ಮಾತುಗಳನ್ನು ಕೇಳಿಕೊಂಡು, ತಮ್ಮ ಸವರ್ಿಸ್ ಮುಗಿಯುವವರೆಗೆ ಹಟ್ಟಿ ಕಂಪೆನಿಯಲ್ಲಿಯೇ ಠಿಕಾಣಿ ಹೂಡಬೇಕೆಂದು ಜಗಳೂರು ರಾಮಚಂದ್ರ, ಶಿವನಗೌಡ ಹೇಳಿದ ಎಲ್ಲಾ ಕೆಲಸಗಳಿಗೆ ತಥಾಸ್ತು ಎಂದಿದ್ದಾರೆ.
ಅಕ್ರಮ ನೇಮಕಾತಿಯಲ್ಲಿ ರಾಜಕಾರಣಿಗಳದ್ದು ಹತ್ತು ಅಭ್ಯಥರ್ಿಗಳಿದ್ದರೆ, ಮೊನ್ನಪ್ಪನವರದು ಐದು ಅಭ್ಯಥರ್ಿಗಳಿವೆ!
ಶಾಶ್ವತವಾಗಿ ಚೇಲಾಗಿರಿ ಮಾಡಿಕೊಂಡು ತಿರುಗುವ ಅನೇಕರು 150 ಹುದ್ದೆಗಳಲ್ಲಿ ಹೆಚ್ಚು ಕಡಿಮೆ 75 ಪ್ರತಿಶತ ಹುದ್ದೆಗಳಿಗೆ ಹಣತಿಂದು ನೇರವಾಗಿ ನೌಕರಿ ಕೊಡಿಸಿದ್ದಾರೆ.
ಒಟ್ಟಾರೆ ಅಕ್ರಮ ನೇಮಕಾತಿಯ ನೇರ ಫಲಾನುಭವಿಗಳು ಮೊನ್ನಪ್ಪ, ಜಗಳೂರು ರಾಮ ಚಂದ್ರರಾದರೆ, ಅನಾಯಾಸವಾಗಿ ಬಲಿಪಶು ಆಗಿರು ವುದು ಕಿಶೋರಕುಮಾರ ಎಂಬ ಅಧಿಕಾರಿ ಮಾತ್ರ!
ಕಡುಭ್ರಷ್ಟ ಐಎಎಸ್ ಅಧಿಕಾರಿ ಎ.ಕೆ ಮೊನ್ನಪ್ಪ!
24 ಡಿಸೆಂಬರ್ 1999ರಂದು ಐಎಎಸ್ ಹುದ್ದೆಗೆ ಬಡ್ತಿ ಹೊಂದಿದ ಪ್ರಮೋಟೆಡ್ ಐಎಎಸ್ ಅಧಿಕಾರಿ ಎ.ಕೆ ಮೊನ್ನಪ್ಪನವರದ್ದು ಅಕ್ರಮ ನೇಮಕಾತಿ ಪ್ರಕ್ರಿಯೆ ಮಾಡುವಲ್ಲಿ ಎತ್ತಿದ ಕೈ ಹಾಗು ಗಪ್ಚುಪ್ ನೌಕರಿ ಕೊಡಿಸುವಲ್ಲಿ ಇವರು ನಂ.1 ಕೂಡ ಹೌದು!
ಈ ಹಿಂದೆ ಕನರ್ಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ದಲ್ಲಿದ್ದಾಗ ಅಕ್ರಮ ನೇಮಕಾತಿ ಮಾಡಿ ಸಿಕ್ಕಿಹಾಕಿಕೊಂಡಿದ್ದರು. ಕೆಪಿಎಸ್ಸಿ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎ.ಕೆ ಮೊನ್ನಪ್ಪನವರು ಆರೋಪಿಗಳೆಂದು ಮೇಲ್ನೋಟಕ್ಕೆ ಗೊತ್ತಾಗಿದೆ! ಅವರು ಜೈಲು ಸೇರುವ ದಿನಗಳು ಕೂಡ ಬಹಳ ದೂರವಿಲ್ಲ!
ಕನರ್ಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ದಂತಹ ಸಮುದ್ರದಲ್ಲಿ ಈಜಿರುವ ಮೊನ್ನಪ್ಪನವರಿಗೆ ಸಣ್ಣ ಹಳ್ಳದಂತಿರುವ ಬಂಗಾರದ ಕಂಪೆನಿ ಲೆಕ್ಕಕ್ಕಿಲ್ಲ. ಬಹುಶಃ ಹಟ್ಟಿ ಕಂಪನಿಗೆ ಬಂದು ಹೋಗಿರುವ ಯಾವ ಎಂ.ಡಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿರಲಿಲ್ಲ.
ಆದರೆ, ಈ ಮೊನಚಾದ ಮೊನ್ನಪ್ಪನವರು ರಾಜ್ಯದಲ್ಲಿ ಬಿಜೆಪಿ ಸಕರ್ಾರ ಮಾಡಿದಂತೆ, ಎಲ್ಲವನ್ನು ದಾಖಲೆಯಾಗಿ ಯೇ ಮಾಡಿ ಮುಗಿಸಿದರು. ಸಕರ್ಾರದ ಪವಿತ್ರ ಅಧಿಕಾರವನ್ನು ಅಪವಿತ್ರವಾಗಿ ಹೇಗೆ ನಿರ್ವಹಣೆ ಮಾಡಬೇ ಕೆಂಬುವದರಲ್ಲಿ ನಿಸ್ಸೀಮರಾಗಿದ್ದರೆಂಬುದು ಈ ಅಕ್ರಮ ನೇಮಕಾತಿ ಪ್ರಕರಣದಲ್ಲಿ ನೂರು ಪ್ರತಿಶತ ಸಾಬೀತುಪಡಿಸಿ ತೋರಿಸಿದ್ದಾರೆ. ಕಡುಭ್ರಷ್ಟ ಅಧಿಕಾರಿಯ ಕೈಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಸಿಕ್ಕಿರುವುದು ದುರಂತವೇ ಸರಿ.
ಕೆ.ಜೆ ಬೋಪಯ್ಯನವರ ದೂರದ ಸಂಬಂಧಿ ಎಂದು ಹೇಳಿಕೊಳ್ಳುವ ಇವರು, ಸಕರ್ಾರದ 3 ಉದ್ಯಮಗಳಿಗೆ ವ್ಯವಸ್ಥಾಪಕ ನಿದರ್ೇಶಕರು. ಇನ್ನುಳಿದ ಎರಡು ಉದ್ಯಮ ಗಳಿಗಿಂತ ಸಾಹೇಬರಿಗೆ ಹಟ್ಟಿ ಕಂಪೆನಿ ಎಂದರೆ, ಬಲು ಇಷ್ಟವಂತೆ. ನಿವೃತ್ತಿಯಾಗುವ ತನಕ ಇಲ್ಲಿಯೇ ಇರುತ್ತೇ ನೆಂದು ತಮ್ಮ ಸಿಬ್ಬಂದಿಗಳಿಗೆ ಆಗಾಗ ಹೇಳುತ್ತಿರುತ್ತಾರಂತೆ!
ಯಾಕೆಂದರೆ, ಹಟ್ಟಿ ಕಂಪನಿಯಲ್ಲಿ ಎಂ.ಡಿ ಎಂದರೆ, ಆತ ಸುಪ್ರೀಂ. ಎಲ್ಲ ಅಧಿಕಾರ ಆ ಹುದ್ದೆಯ ಬಳಿ ಕೇಂದ್ರಿಕರಿಸಿರುತ್ತೆ. ಸಕರ್ಾರದ ವಿವಿಧ ಉದ್ಯಮಗಳ ಎಂ.ಡಿ ಹುದ್ದೆಗಳಿಗೂ, ಹಟ್ಟಿ ಕಂಪೆನಿಯ ಎಂ.ಡಿ ಹುದ್ದೆಗೂ ಸಾಕಷ್ಟು ವ್ಯತ್ಯಾಸವಿದೆ. ಸಾಕಷ್ಟು ಭ್ರಷ್ಟ ಅಧಿಕಾರಿಗಳು ಇಲ್ಲಿಗೆ ಬಯಸಿ ಬರುತ್ತಾರೆ.
ಸಧ್ಯ ಅತಿಹೆಚ್ಚು ಲಾಭ ಹೊಂದಿ, ತಿಂಗಳಿಗೆ 250ಕೆಜಿಗೂ ಹೆಚ್ಚು ಚಿನ್ನ ಉತ್ಪಾದಿಸುತ್ತಿರುವ ಹಟ್ಟಿ ಕಂಪೆನಿ ದೇಶದ ಶ್ರೀಮಂತಿಕೆಯ ಸಂಕೇತವಾಗಿದೆ.
ಆದರೆ, ಮೊನ್ನಪ್ಪ ಇಲ್ಲಿಗೆ ಬಂದಾಗಿನಿಂದ ಕಂಪನಿ ಮಾನ ಹಾಡುಹಗಲು ಹರಾಜಾಗುತ್ತಿದೆ. ಎ.ಕೆ ಮೊನ್ನಪ್ಪ ಹಟ್ಟಿಯ ಉತ್ಪಾದನಾ ಕೇಂದ್ರಕ್ಕೆ ಬಂದರೆ, ಗುಂಡು-ತುಂಡು ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡುವುದು ಸ್ಥಳೀಯ ಅಧಿಕಾರಿಗಳ ಆದ್ಯ ಕರ್ತವ್ಯ. ಕೆಲವು ಅಧಿಕಾರಿಗಳು ಇದನ್ನು ತಮ್ಮ ಸೇವೆಯೆಂದು ಕರೆದುಕೊಳ್ಳುತ್ತಾರೆ.
ಇನ್ನೂ ರಾಜಧಾನಿಯ ಕೇಂದ್ರಕಚೇರಿಯಲ್ಲಿ ಇದ್ದರಂತೂ ಸುಖವೇ ಸುಖ. ಇಳಿಸಂಜೆಯ ಹೊತ್ತಿಗೆ ಕಂಪೆನಿ ಕಚೇರಿಗೆ ಬರುವ ಇವರು ಮಾಡುವದೆಲ್ಲ ಅನಾಚಾರವೇ ಆಗಿರುತ್ತದೆ!
ಬೆಂಗಳೂರಿನಲ್ಲಿರುವ ಕಂಪನಿಯ ನೊಂದಾಯಿತ ಕಚೇರಿಯಲ್ಲಿ ಯಾವಾಗ ನೋಡಿದರೂ ಮೊನ್ನಪ್ಪನ ಸಂಬಂಧಿಗಳೇ ತುಂಬಿರುತ್ತಾರೆ. ಒಂದು ಅಂದಾಜಿನಂತೆ ಮೊನ್ನಪ್ಪನ ಸಂಬಂಧಿಗಳು ಸಂಜೆ ವೇಳೆಗೆ ಕಚೇರಿಗೆ ಬಂದರೆ, ಮೊನ್ನಪ್ಪ ಎಷ್ಟು ಹೊತ್ತಾದರೂ ಆಫೀಸಿಗೆ ಬರುತ್ತಾರೆಂದೆ ಅರ್ಥ.
ಆದರೆ, ಎಂ.ಡಿ ಬರುವವರಗೆ ಇರಬೇಕಾದದು ಅಲ್ಲಿನ ಸಿಬ್ಬಂದಿಗಳ ಕರ್ತವ್ಯ. ಹೀಗಾಗಿ ಸಿಬ್ಬಂದಿಗಳಿಗೆ ಮೊನ್ನಪ್ಪ ಕಚೇರಿಗೆ ಬರುವದೆೆಂದರೆ ಪೀಕಲಾಟವೇ ಸರಿ.
ಬಂಗಾರದ ಕಂಪೆನಿ ಈ ಹಿಂದೆ ಅನೇಕ ಎಂ.ಡಿ, ಸಿ.ಎಂ.ಡಿಗಳನ್ನು ಕಂಡಿದೆ. ಆದರೆ, ಎ.ಕೆ ಮೊನ್ನಪ್ಪನಂತಹ ಕಡುಭ್ರಷ್ಟ ಅಧಿಕಾರಿಯನ್ನು ಎಂದೆಂದೂ ಕಂಡಿರಲಿಲ್ಲ.
ಮೊದಲು ಹಟ್ಟಿ ಕಂಪೆನಿಯ ಎಂ.ಡಿ ಉತ್ಪಾದನಾ ಸ್ಥಳಕ್ಕೆ ಬರುತ್ತಾರೆಂದರೆ, ಎಲ್ಲಾ ಅಧಿಕಾರಿಗಳಿಗೆ ಬಂದಿಷ್ಟು ಭಯವಿರುತ್ತಿತ್ತು. ಯಾವೊಬ್ಬ ಅಧಿಕಾರಿಯೂ ಎಂ.ಡಿ ಬಂದಾಗ ಉತ್ಪಾದನಾ ಸ್ಥಳವನ್ನು ಬಿಟ್ಟು ಹೋಗುತ್ತಿರಲಿಲ್ಲ.
ಆದರೆ, ಮೊನ್ನಪ್ಪ ಹಟ್ಟಿಯಲ್ಲಿ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾನೆ. ಅಂಡರ್ಗ್ರೌಂಡ್ ಅಧಿಕಾರಿಗ ಳಂತೂ, ಬಹಳ ಕೆಟ್ಟ ಶಬ್ಧಗಳಲ್ಲಿ ಈತನನ್ನು ನಿಂದಿಸುತ್ತಾರೆ!
ಹಟ್ಟಿ ಕಂಪೆನಿಗೆ ಬಂದ ಪ್ರಾಮಾಣಿಕ ಐಎಎಸ್ ಅಧಿಕಾರಿಗಳಾದ ರಾಖೇಶಸಿಂಗ್, ವಿ.ಮಂಜುಳಾ ಸೇರಿದಂತೆ ಅನೇಕರು ತಮ್ಮ ಹುದ್ದೆಯ ಗೌರವಕ್ಕೆ ದಕ್ಕೆ ಬಾರದಂತೆ ಆಡಳಿತ ನಡೆಸಿ ಹೋಗಿದ್ದಾರೆ. ಇಂತಹ ನಿಷ್ಠಾವಂತ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಎಂದೂ ಚ್ಯುತಿ ಬಾರದಂತೆ ಆಡಳಿತವನ್ನು ನಡೆಸಿದರು.
ದುರದೃಷ್ಟಾವಶತ್ ಅಲ್ಪಾವಧಿಯಲ್ಲಿಯೇ ಈ ನಿಷ್ಟಾವಂತ ಅಧಿಕಾರಿಗಳು ವಗರ್ಾವಣೆಗೊಂಡದ್ದು ಕಾಮರ್ಿಕರ ದೌಭಾರ್ಗವ್ಯೇ ಸರಿ. ಈಗಲೂ ಸಾಕಷ್ಟು ಕಾಮರ್ಿಕರು ಪ್ರತಿನಿತ್ಯ ರಾಖೇಶಸಿಂಗ್ರಂತಹ ಅಧಿಕಾರಿ ಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ, ಸದಾ ರಾಜಕಾರಣಿ ಯಂತೆ ಪೋಸು ಕೊಡುವ ಮೊನ್ನಪ್ಪ ಎಷ್ಟು ಬೇಗ ತೊಲಗುತ್ತಾನೆಂದು ಸ್ಥಳೀಯರು ಕಾಯುತ್ತಿದ್ದಾರೆ. ಟೋಟ ಲಿ, ಮೊಸ್ಟ್ ಬ್ಯಾಡ್ ಐಎಎಸ್ ಆಫಿಸರ್ ಎ.ಕೆ ಮೊನ್ನಪ್ಪ!
ಐಎಎಸ್ ಹಿರಿಯ ಮತ್ತು ಕಿರಿಯ ಶ್ರೇಣಿಯ ಸಾಕಷ್ಟು ಅಧಿಕಾರಿಗಳನ್ನು ಪ್ರಜಾಸಮರ ಪತ್ರಿಕೆ ನೋಡಿದೆ. ಅದರಲ್ಲಿ ಕೆಲವು ಅಧಿಕಾರಿಗಳು ಈಗಲೂ ಪತ್ರಿಕೆಯ ಬರವಣಿಗೆ & ನಿಲುವಿಗೆ ಬೆಂಬಲ ನೀಡುತ್ತಾರೆ. ಅದಕ್ಕೆ ಕಾರಣ ಪತ್ರಿಕೆಯ ವಿಶ್ವಾಸಾರ್ಹತೆ.
ಮೊನ್ನಪ್ಪನವರು ಹಟ್ಟಿ ಕಂಪನಿಯಲ್ಲದೆ, ಈ ಹಿಂದೆ ಕಾರ್ಯನಿರ್ವಹಿಸಿದ ಹಲವು ಇಲಾಖೆಗಳಲ್ಲಿಯೂ ತಮ್ಮ ಹೆಸರನ್ನು ಕೆಡಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಸಮರ ಕಂಡ ಅತ್ಯಂತ ಕಡುಭ್ರಷ್ಟ ಅಧಿಕಾರಿ ಯಾರಾದರೂ ಇದ್ದರೆ, ಅದು ಮಿಸ್ಟರ್ ಎ.ಕೆ ಮೊನ್ನಪ್ಪ ಮಾತ್ರ!
ತಿಂಗಳಿಗೆ ಎರಡು ಬಾರಿ ಕಂಪೆನಿಯ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡುವ ಮೊನಚಾದ ಮೊನ್ನಪ್ಪನವರಿಗೆ ಇ-3 ದಜರ್ೆ ಹೊಂದಿದ ಅಧಿಕಾರಿಗಳೊಂದಿಗೆ ಪಾನಗೋಷ್ಟಿ ಮಾಡುವುದು & ಇಸ್ಪೀಟ್ ಆಡುವುದೆಂದರೆ ಬಲು ಇಷ್ಟವಂತೆ! ಅರ್ಧ ನಷೆಯಲ್ಲಿ ಈತನ ಸಾಕಷ್ಟು ವಗೈರೆಗಳನ್ನು ಕಿರಿಯ ಅಧಿಕಾರಿಗಳು ಕಂಡು ಬೆರಗಾಗಿದ್ದಾರೆ.
ಕಂಪೆನಿಯ ಇಂಟಲಿಜೆನ್ಸಿ, ವಿಚಕ್ಷಣ ದಳ, ಆಳು-ಮೂಳುಗಳ ಮೇಲೆ ಮೊನ್ನಪ್ಪನಿಗೆ ನಂಬಿಕೆಯಿಲ್ಲ. ಬಸವ ರಾಜ ದೊಡ್ಡಮನಿ ಎಂಬ ಅಧಿಕಾರಿಗೆ `ಜಾತಿವಾದಿ ದೊಡ್ಡ ಮನಿ' ಎಂದು ಸಂಭೋಧಿಸುವ ಈತ ತನ್ನ ಹಗಲು ದರೋಡೆಗಾಗಿ ಖಾಸಗಿ ಗುಪ್ತಚರ ಹುಡುಗರನ್ನು ಇಟ್ಟು ಕೊಂಡಿದ್ದಾನೆ. ಅವರುಗಳು ಹೇಳಿದ್ದೇ ಈತನಿಗೆ ವೇದವಾಕ್ಯ.
ಹೀಗಾಗಿ ಮೊನ್ನೆ ಹಂಗಾಮಿ ಕಾಮರ್ಿಕನೋರ್ವ ನಿಧನ ಹೊಂದಿದಾಗ ಮೊನ್ನಪ್ಪ ಕಂಪನಿ ವಿಜಿಲೆನ್ಸ್ಗಿಂತ ಹೊರಗಿನವರನ್ನೇ ಅವಲಂಭಿಸಿದ್ದು, ಅಂದಿನ ಬೆಳವಣಿಗೆ ನೋಡಿದವರಿಗೆ ಗೊತ್ತಾಗುವಂತಿತ್ತು. ಒಟ್ಟಾರೆಯಾಗಿ ಈತ ಕಂಪನಿ ಎಂ.ಡಿ ಎಂಬ ಒಂದೇ ಕಾರಣಕ್ಕೆ ಯಾರೂ ಈತನ ಅವ್ಯವಹಾರವನ್ನು ಪ್ರಶ್ನಿಸುತ್ತಿಲ್ಲ.
27 ಡಿಸೆಂಬರ್ 1955 ಕೊಡಗಿನ ವೀರ, ಮೊನ ಚಾದ ಮೊನ್ನಪ್ಪ ಭೂಮಿಗೆ ಬಂದ ದಿನ. ಪ್ರತಿ ವರ್ಷ ಡಿಸೆಂಬರ್ 27ಕ್ಕೆ ಬತರ್್ಡೇಪಾಟರ್ಿಯನ್ನು ವಿಜೃಂಭಣಿ ಯಿಂದ ಆಚರಿಸಿಕೊಳ್ಳುತ್ತಾನೆ.
ಮೊನ್ನೆಯ ಡಿಸೆಂಬರ್ 27 ಬಂದಾಗ ಇವರು ಹಟ್ಟಿ ಕಂಪನಿಯ ಎಂ.ಡಿ ಆಗಿದ್ದರು. ಈ ಬಾರಿಯ ಬತರ್್ಡೇಪಾಟರ್ಿ ಹಟ್ಟಿಯಲ್ಲಿ ಆಯೋಜಿಸಲು ತೀಮರ್ಾನಿಸಿತ್ತಾದರೂ, ಕೊನೆ ಕ್ಷಣದ ಬದಲಾ ವಣಿಯಲ್ಲಿ ಅದು ಬೆಂಗಳೂರಿಗೆ ವರ್ಗವಾಯಿತು.
ಬತರ್್ಡೇ ಪಾಟರ್ಿ ಅಂಗವಾಗಿ ಬೆಂಗಳೂರಿನ ಐಷಾರಾಮಿ ಹೋಟೆಲ್ನ್ನು ಬುಕ್ ಮಾಡುವ ವಿಚಾರ ಮೊನ್ನಪ್ಪನವರಿಗೆ ಹೊಳೆದಿತ್ತಾದರೂ, ಕೊನೆಗೆ ಯಾವುದೇ ಹೋಟೆಲ್ನ್ನು ಬುಕ್ ಮಾಡದೇ, ಕೇಂದ್ರ ಕಚೇರಿಯಲ್ಲಿ ಆಚರಿಸಿದರು. ಅಮೀರ ಅಲಿ ಹೊರತು ಪಡಿಸಿ, ಕಾಮರ್ಿಕ ಸಂಘದ ಅನೇಕ ಕಾಮ್ರೇಡ್ಸ್, ಮೊನ್ನಪ್ಪ ನವರ ಫಲಾನುಭವಿಗಳು ಖಾಸಗಿ ವಾಹನಗಳನ್ನು ಮಾಡಿ ಕೊಂಡು ಬೆಂಗಳೂರಿಗೆ ಹೋಗಿದ್ದರು.
ಒಂದು ಮಾಹಿತಿಯಂತೆ ಹಟ್ಟಿ ಕಾಮರ್ಿಕ ಸಂಘದ ನಾಯಕರು ಮೊನ್ನಪ್ಪನವರಿಗೆ ಬತರ್್ಡೇ ಕಾಣಿಕೆಯಾಗಿ 28,000 ರೂಪಾಯಿ ಮೌಲ್ಯದ ಕಂದು ಬಣ್ಣದ ಗೌನು ಮತ್ತು ದೇವರ ವಿಗ್ರಹ ನೀಡಿದರೆ, ಹೊಸ ಯೋಜನೆ ಕಾಮರ್ಿಕ ಸಂಘದವರು 38,000 ಬೆಲೆಯ ಅತ್ಯಾಧುನಿಕ ತಂತ್ರಜ್ಞಾನದ ಲ್ಯಾಪ್ಟ್ಯಾಪ್ನ್ನು ನೀಡಿದರಂತೆ!
ಸಾಕಷ್ಟು ಮುಜುಗರದಿಂದ ಉಡುಗೊರೆ ಸ್ವೀಕರಿಸಿದ ಮೊನ್ನಪ್ಪ ಅದಕ್ಕೆ ಪ್ರತಿಯಾಗಿ ಕಾಮರ್ಿಕ ಸಂಘದ ಖಾಯಂ ವಸತಿ ಗೃಹ ಅಣ್ಣಮ್ಮನ ದೇವಸ್ಥಾನದ ಬಳಿಯಿರುವ ಅರುಣಾನಂದದಲ್ಲಿ ಪಾಟರ್ಿ ಟ್ರೀಟ್ ಕೊಟ್ಟರಂತೆ!
ಮೊನ್ನಪ್ಪನಿಗೆ ಶುಭಕೋರಲು ಬೆಂಗಳೂರಿಗೆ ಹೋದ ಕಾಮ್ರೇಡ್ಸ್ ಅಲ್ಲಿನ ಖಚರ್ುವೆಚ್ಚದ ಬಿಲ್ನ್ನು ಕಾಮರ್ಿಕ ಸಂಘದ ಖಾತೆಗೆ ಹಚ್ಚಿದ್ದಾರೆಂಬ ಸುದ್ದಿಯಿದೆ!
ಒಟ್ಟಾರೆಯಾಗಿ ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಅರ್ಧರಾತ್ರಿ ಕೊಡೆ ಹಿಡಿದ ಎಂದಂತೆ, ಕಾಮರ್ಿಕ ಸಂಘದವರಿಗೆ ಮೊನಚಾದ ಮೊನ್ನಪ್ಪ ಸಿಕ್ಕಿರುವುದು ಸುಗ್ಗಿಯಾಗಿದೆ.
ತಾನೊಬ್ಬ ಜವಾಬ್ದಾರಿ ಐಎಎಸ್ ಅಧಿಕಾರಿ ಎಂಬುದನ್ನೇ ಮೈಮರೆತಿರುವ ಮೊನ್ನಪ್ಪ ಆದಷ್ಟು ಬೇಗನೇ ಹಟ್ಟಿ ಕಂಪನಿಯಿಂದ ತೊಲಗಲಿ ಎಂಬುದೇ ಹಟ್ಟಿಯ ಪ್ರಜ್ಞಾವಂತರ ಆಶಯ.
ಹೊಸ ಶಾಫ್ಟ್ ಆರಂಭ ಹಗಲುದರೋಡೆ
ಗಣಿ ಆಧುನಿಕರಣದ ಹೆಸರಿನಲ್ಲಿ 250 ಕೋಟಿ ವ್ಯಯಿಸಿ ನೂತನ ಶಾಫ್ಟ್ ಅನ್ನು ಮಾಡಲಾಗುತ್ತಿದೆ. ನೂತನ ಶಾಫ್ಟ್ ಸ್ಥಾಪನೆಗೆ ಸಕರ್ಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ, ಮತ್ತೊಂದು ಪಡೆಯಲು ಈಗ್ಗೆ 5 ವರ್ಷಗಳಿಂದ ಪ್ರಯತ್ನ ನಡೆಯುತ್ತಿವೆ. ಡಿ.ವೈ ವೆಂಕಟೇಶ್ ಕಂಪನಿಯ ಕಾರ್ಯನಿವರ್ಾಹಕ ನಿದರ್ೇಶಕರಾಗಿದ್ದಾಗ ನೂತನ ಶಾಫ್ಟ್ ಆರಂಭಕ್ಕೆ ಸಕರ್ಾರದಿಂದ ಅನುಮತಿ ಸಿಕ್ಕಿತ್ತಾದರೂ, ಕಾರಣಾಂತರಗಳಿಂದ ಈ ಯೋಜನೆ ಮತ್ತಷ್ಟು ದಿನ ನೆನೆಗುದಿಗೆ ಬಿದ್ದಿತ್ತು.
ಆದರೆ, ಅಶೋಕ ವಾಲ್ಮೀಕಿಯವರು ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಕುಳಿತ ತಕ್ಷಣದಿಂದ ಹೆಚ್ಚು ಒತ್ತು ನೀಡಿದ್ದು, ಈ ಒಂದು ಯೋಜನೆಯ ಆರಂಭಕ್ಕಾಗಿ. ಜಾಗತಿಕ ಟೆಂಡರ್ ಮುಖಾಂತರ ತಮಿಳುನಾಡು ಮೂಲದ ಗಣಿ ಕಂಪನಿಯೊಂದಕ್ಕೆ ಈ ಯೋಜನೆಯನ್ನು ನೀಡಲಾಗಿದೆ. ಆ ಶಾಫ್ಟ್ ಆರಂಭದ ಸಾಧಕ-ಭಾದಕಗಳು ಗಣಿಯನ್ನು ನೋಡಿಕೊಳ್ಳುತ್ತಿರುವ ಏಜೆಂಟ್ ಪ್ರಕಾಶ್ ಬಹದ್ದೂರ್ಗೆ ಬಿಟ್ಟರೆ, ಉಳಿದವರ್ಯಾರಿಗೂ ಗೊತ್ತಿಲ್ಲ.
ಇದು ಗಣಿಯಾಧಾರಿತ ಕೈಗಾರಿಕೆ ಆಗಿರುವದರಿಂದ ಇಲ್ಲಿಗೆ ಬರುವ ಅಧಿಕಾರಿಗಳು ಕನಿಷ್ಟವೆಂದರೂ, ಗಣಿ ಕುರಿತು ಮಾಹಿತಿ ತಿಳಿದಿರಬೇಕು. ಇಲ್ಲವೆಂದರೆ, ಅಧಿಕಾರಿಗಳು ಹೇಳಿದ ಮಾತಿಗೆ ತಲೆಯಾಡಿಸಿಕೊಂಡು, ಪಾಲಿಗೆ ಬಂದಂತಹ ಕಮೀಷನ್ ಪಡೆದು, ಸುಮ್ಮನಿರಬೇಕಾಗುತ್ತದೆ.
ಹಟ್ಟಿ ಕಂಪನಿಗೆ ಬಂದು ಹೋಗಿರುವ ಹಿಂದಿನ ಅನೇಕ ಎಂ.ಡಿ, ಸಿ.ಎಂ.ಡಿಗಳು ಗಣಿಯ ಕುರಿತು ಒಂದಿಷ್ಟು ಮಾಹಿತಿ ಹೊಂದಿರುತ್ತಿದ್ದರು. ಗೊತ್ತಿಲ್ಲವೆಂದರೂ, ಗಣಿಯ ಅಧಿಕಾರಿಗಳನ್ನು ಕೂರಿಸಿಕೊಂಡು ಆ ಕುರಿತು ಮಾಹಿತಿ ಪಡೆಯುತ್ತಿದ್ದರು. ಆದರೆ, ಮೊನ್ನಪ್ಪ ಮಾತ್ರ ಒಂದು ದಿನವೂ ಗಣಿಯ ಆಳ-ಅಗಲ, ಮುಂದಿನ ಭವಿಷ್ಯ ಕುರಿತು ಯೋಚನೆಯೇ ಮಾಡಲಿಲ್ಲ. ಜೊತೆಯಲ್ಲಿ ಗಣಿ ಕುರಿತು ಯಾರಾದರೂ, ಪತ್ರಕರ್ತರು ಕೇಳಿದರೆ ನಾನೇನು ಅಂಡರ್ಗ್ರೌಂಡ್ ಆಫೀಸರೇನು ಅಂತಹ ಉದ್ಧಟತನದಿಂದ ಮಾತನಾಡುತ್ತಿದ್ದರು.
ಯಾವತ್ತೂ ಎ.ಕೆ ಮೊನ್ನಪ್ಪ & ಜಗಳೂರು ರಾಮಚಂದ್ರ ಹಟ್ಟಿ ಕಂಪನಿಗೆ ಬಂದು ವಕ್ಕರಿಸಿದರೋ, ಅಲ್ಲಿಗೆ ಕಂಪನಿಯ ದೂರದೃಷ್ಟಿಯ ಕುರಿತು ಆಲೋಚಿಸುವವರ ಆಲೋಚನೆಗಳು ಕಮರ ತೊಡಗಿದವು. ಕಂಪನಿಯ ಭವಿಷ್ಯವು ಕುಸಿಯತೊಡಗಿತು. ಇಂದಿನ ಪರಿಸ್ಥಿತಿಯಲ್ಲಿ ಒಂದು ವೇಳೆ ಬಂಗಾರದ ಬೆಲೆ ಗಗನದಲ್ಲಿ ಇರದೇ ಹೋಗಿದ್ದರೆ, ರಾಮಚಂದ್ರ & ಮೊನ್ನಪ್ಪ ಕಂಪನಿಗೆ ಭೀಗ ಹಾಕುತ್ತಿದ್ದರು ಎಂಬ ಮಾತನ್ನು ಹೆಸರೇಳಲಿಚ್ಚಿಸಿದ ಅಧಿಕಾರಿಗಳು ಹೇಳುತ್ತಾರೆ.
ಪ್ರತಿಯೊಂದರಲ್ಲಿ ಕಮೀಷನ್ ಕೇಳುವ ರಾಮಚಂದ್ರ, ತನ್ನ ಹಿಂಬಾಲಕರಿಗೆ ಈ ಟೆಂಡರ್ ಸಿಗಲೇಬೇಕು ಇಲ್ಲವಾದರೆ, ಅದನ್ನು ರದ್ದು ಮಾಡಿ ಎಂದು ಅಧಿಕಾರಿಗಳಿಗೆ ಆವಾಜ್ ಹಾಕುತ್ತಾನೆಂದರೆ ಏನರ್ಥ. ಖರೀದಿ ವಿಭಾಗ ಮುಖ್ಯಸ್ಥ ಮಂಜುನಾಥ ಕಡ್ಲೇರ್ ಎಂಬ ಅಧಿಕಾರಿ ಟೆಂಡರ್ಗಳಲ್ಲಿ ಚೇರ್ಮನ್ ಮಂದಿ ಇದ್ದಾರೆಂದರೆ, ಒಂದು ಕ್ಷಣ ಭಯಭೀತರಾಗುತ್ತಾರಂತೆ! ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿನ ಸಿಬ್ಬಂದಿಗಳಂತೂ, ರಾಮಚಂದ್ರ ಮತ್ತು ಆತನ ಹಿಂಬಾಲಕರ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ. ಇಂತಹ ಅಧ್ಯಕ್ಷ & ಎಂ.ಡಿಯನ್ನು ಕಂಪನಿ ಎಂದೆಂದೂ ನೋಡಿರಲಿಲ್ಲ.
ಪತ್ರಿಕೆಗಿರುವ ಮಾಹಿತಿಯಂತೆ ನೂತನ ಶಾಫ್ಟ್ನ ಟೆಂಡರ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿಲ್ಲ! ಆದರೂ, ಸಕರ್ಾರವೆಲ್ಲಿ ಬಿದ್ದು ಹೋಗುತ್ತೆ, ನಮಗೆ ಬರಬೇಕಾದ ಕಮೀಷನ್ ಎಲ್ಲಿ ತಪ್ಪಿ ಹೋಗುತ್ತೇ ಎಂಬ ಆತಂಕದಲ್ಲಿ ಮೊನ್ನಪ್ಪ & ರಾಮಚಂದ್ರ ಎಡಬಿಡಂಗಿಗಳಂತೆ, ಅವಸರವಸರದಲ್ಲಿ ಜನೆವರಿ 25 ರಂದು ನೂತನ ಶಾಫ್ಟ್ ಯೋಜನೆಗೆ ಶಂಕು ಸ್ಥಾಪನೆ ನೇರವೇರಿಸಿದ್ದಾರೆ.
ಅವಸರದಲ್ಲಿ ಆರಂಭಗೊಳ್ಳುತ್ತಿರುವ ಈ ಯೋಜನೆ ಮುಂದಿನ ದಿನ ಸಾಕಷ್ಟು ವಿವಾದಗಳನ್ನು ಸೃಷ್ಟಿಸುವದರಲ್ಲಿ ಅನುಮಾನವಿಲ್ಲ. ಈಗ ಹಾಕಿರುವ ಬಜೆಟ್ಗಿಂತ ಹೆಚ್ಚಿನ ಹಣವನ್ನು ಕಂಪನಿ ವ್ಯಯಿಸಬೇಕಾಗಿ ಬರುತ್ತದೆ.
ಯಾಕೆಂದರೆ, ಈ ಹಿಂದೆ ಕಂಪನಿಯಲ್ಲಿ ನಿಮರ್ಿಸಿರುವ ರಾಕ್ಷಸ ಯಂತ್ರ (ಸ್ಯಾಗ್ ಮಿಲ್) ಕಾರ್ಯ ಮತ್ತು ಯೋಜನೆಗಿಂತ ದುಪ್ಪಟ್ಟು ಸಮಯವನ್ನು ತಿಂದು ಹಾಕಿದೆ. ಇವತ್ತಿಗೂ ಸ್ಯಾಗ್ ಮಿಲ್ ಯೋಜನೆಯ ಕುರಿತು ಸಂಪೂರ್ಣ ವಿವರಣಿ ಇಲ್ಲ! ಒಟ್ಟಾರೆ ನೂತನ ಶಾಫ್ಟ್ ಶಂಕುಸ್ಥಾಪನೆ ಕಾರ್ಯಕ್ರಮ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವದಂತೂ ಕಟುಸತ್ಯ.
ಮಾರನೇ ದಿನ 26 ಜನವರಿ ಸಂಭ್ರಮದ ಗಣರಾಜ್ಯೋತ್ಸವ. ಪ್ರತಿ ಆಗಸ್ಟ್ 15 ಮತ್ತು ಜನವರಿ 26ರ ಕಾರ್ಯಕ್ರಮಗಳಿಗೆ ಹೆಚ್ಚು ಕಡಿಮೆ ಕಂಪನಿಗೆ ಬಂದಿರುವ ಎಲ್ಲಾ ಎಂ.ಡಿಗಳು ಹಾಜರಿರುತ್ತಾ ಬಂದಿದ್ದಾರೆ.
ಆದರೆ, ಮೊನ್ನಪ್ಪ & ರಾಮಚಂದ್ರ ತುತರ್ು ಕೆಲಸದ ನೆಪವೇಳಿ ಓಡಿ ಹೋಗಿರುವುದು ದೇಶ ಮತ್ತು ನಾಡಿಗೆ ಮಾಡಿದ ಅಪಮಾನವಾಗಿದೆ.
ನೂತನ ಶಾಫ್ಟ್ ಯೋಜನೆಯನ್ನು ಪಡೆದಿರುವ ಕಂಪೆನಿ ಮಾಲೀಕರೊಂದಿಗೆ ಮೊನ್ನಪ್ಪ & ರಾಮಚಂದ್ರ ಕಮೀಷನ್ ಫಿಕ್ಸ್ ಮಾಡಿಕೊಂಡೇ, ಅದರ ಶಂಕುಸ್ಥಾಪನೆ ನೇರವೇರಿಸಿದ್ದಾರೆಂಬ ಸುದ್ದಿ ಊರೆಲ್ಲ ಹರಡಿದೆ.
ಹೀಗಾಗಿ "ನೂತನ ಶಾಫ್ಟ್" ಯೋಜನೆ ಹಗಲು ದರೋಡೆಯಲ್ಲದೇ ಮತ್ತೇನಾಗಲು ಸಾಧ್ಯವಿಲ್ಲ.
ಜನರ ಬಾಯಿಗೆ ಆಹಾರವಾದ ಕಿಶೋರಕುಮಾರ!
ಹಟ್ಟಿ ಕಂಪನಿಯ ಸರ್ವ ರಂಧ್ರಗಳನ್ನು ಅರಿತಿರಿ ರುವ ಏಕೈಕ ಅಧಿಕಾರಿ ಕೆ.ಎಸ್ ಕಿಶೋರಕುಮಾರ್. 2 ದಶಕಗಳ ಕಾಲ ಹಟ್ಟಿಯಲ್ಲಿ ಈತ ಅನುಭವಿಸಿರು ವಷ್ಟು ಕಷ್ಟ-ನಷ್ಟ ಬಹುಶಃ ಮೊನಚಾದ ಮೊನ್ನಪ್ಪ ತಮ್ಮ ಜೀವಮಾನದಲ್ಲಿ ಅನುಭವಿಸಿರಲಿಕ್ಕಿಲ್ಲ!
ಹನುಮಂತರೆಡ್ಡಿ, ಪೈ, ನಾರಾಯಣ ಅವಧಿಯಲ್ಲಿ ಕಾಮರ್ಿಕ ಸಂಘದ ಆಡಳಿತ ಜೋರಾಗಿತ್ತು. ಯೂನಿಯನ್ಗಳಿಗೆ ಒಂದಿಷ್ಟು ಕಿಮ್ಮತ್ತು ಇತ್ತು. (ಇವತ್ತಿನ ಯೂನಿಯನ್ಗಳ ಸ್ಥಿತಿ ತಮಗೆಲ್ಲ ತಿಳಿದಿದೆ) ಅದರಂತೆ ಕಂಪನಿಯ ಆಡಳಿತದ ಮುಖ್ಯಸ್ಥರು, ಗಣಿ ಏಜೆಂಟ್ರು ಕೂಡ ಪ್ರಾಮಾಣಿಕವಾಗಿ ಕಾಮರ್ಿಕರ ಜೊತೆ ನಡೆದುಕೊಳ್ಳುತ್ತಿದ್ದರು.
ಆವತ್ತಿನ ಕಾಲಘಟ್ಟದಿಂದ ಈವರೆಗೆ ಮಾನವ ಸಂಪನ್ಮೂಲ (ಹೆಚ್.ಆರ್) ವಿಭಾಗದಲ್ಲಿ ಅಧಿಕಾರಿಯಾಗಿರುವ ಕಿಶೋರಕುಮಾರ್ ಕಂಪನಿ ಯಿಂದ ಪಡೆದುಕೊಂಡದ್ದು.. ಮೊನ್ನೆ, ಮೊನ್ನೆ ಡಿಜಿಎಂ ಹುದ್ದೆ ಮಾತ್ರ. ಹೆಚ್.ಆರ್ ಹುದ್ದೆಯಲ್ಲಿ ಅರ್ಧ ಸವರ್ಿಸ್ನ್ನು ಕಳೆದ ಕಿಶೋರಕುಮಾರ್, ಡಿಜಿಎಂ ಹುದ್ದೆಗೂ ಯಾವುದೇ ಲಾಬಿಯನ್ನು ಮಾಡಲಿಲ್ಲ.
ಕಂಪೆನಿಯಲ್ಲಿ ಒಬ್ಬ ಲಿಂಗಾಯತ ಗುಮಾಸ್ತನಿಗೆ ಬರಬೇಕಾದ ಗ್ರೇಡ್ ಬಂದಿಲ್ಲವೆಂದರೆ, ಆತ ವಿಧಾನಸೌಧದಿಂದ ಸಂಬಂಧಪಟ್ಟವರಿಗೆ ನೇರವಾಗಿ ಪೋನ್ ಮಾಡಿಸುತ್ತಾನೆ. ಆದರೆ, ಕಿಶೋರಕುಮಾರ್ ತನಗೆ ದಜರ್ೆ, ಸ್ಥಾನಮಾನ, ಸವಲತ್ತುಗಳು ಕಾಲಾನುಕ್ರಮೇಣ ಬರದಿದ್ದಾಗ ಯಾರತ್ತಿರವು ಹೇಳಲಿಲ್ಲ ಮತ್ತು ಯಾರೊಬ್ಬರಿಂದ ಶಿಫಾರಸ್ಸು ಮಾಡಿಸಲಿಲ್ಲ.
ಕಿಶೋರ ಕುಮಾರ ಮನಸ್ಸು ಮಾಡಿದ್ದರೆ, ಸಕರ್ಾರದ ಮಟ್ಟದಲ್ಲಿ ತನಗಿರುವ ಪ್ರಭಾವವನ್ನು ಬಳಸಿಕೊಂಡು, ಇರಲಾರದ ಹುದ್ದೆಯನ್ನು ಸೃಷ್ಟಿಸಿ, ಆಡಳಿತ ಮಾಡಬಹುದಿತ್ತು. ಆದರೆ, ಅದ್ಯಾವದನ್ನು ಮಾಡದ ಈತ ಜನಸಾಮಾನ್ಯರ ಬಾಯಿಗೆ ಆಹಾರವಾಗಿರುವುದು ಮಾತ್ರ ವಿಪಯರ್ಾಸ.
ಜೊತೆಯಲ್ಲಿ ಯಾವತ್ತಿಗೂ, ತಾನು & ತನ್ನ ವೈಯಕ್ತಿಕ ಕುಟುಂಬಕ್ಕಾಗಿ ಹಟ್ಟಿ ಕಂಪನಿಯ ಒಂದು ಪೈಸೆಯನ್ನು ಬಳಕೆ ಮಾಡಿಕೊಳ್ಳಲಿಲ್ಲ. ಆದರೆ, ಈ ಹಿಂದೆ ಒಬ್ಬ ಅಧಿಕಾರಿ ತನ್ನ ಮಗಳ ಮದುವೆಯನ್ನೇ ಕಂಪನಿಯ ಸಲವತ್ತಿನಲ್ಲಿ ಮಾಡಿ ಮುಗಿಸಿದ.
ಕಿಶೋರಕುಮಾರ ಹಟ್ಟಿ ಕಂಪನಿ ನೌಕರಿಗೆ ಸೇರಿದಾಗ, ಆತನ ಮುಂದೆಯೇ ಶಾಲೆ ಓದುತ್ತಿದ್ದ ಹುಡುಗರು, ಇಂದು ಕಂಪನಿಯಲ್ಲಿ ಈತನಿಗಿಂತ ಹೆಚ್ಚಿನ ದಜರ್ೆ ಹೊಂದಿದರು. ಇದೆನ್ನೆಲ್ಲ ಯಾಕಾಗಿ ಹೇಳಬೇಕಾಗಿದೆಯೆಂದರೆ, ಕಿಶೋರಕುಮಾರ್ ಕುರಿತು ಸಮುದಾಯದಲ್ಲಿ ಸಾಕಷ್ಟು ಗೊಂದಲವಿದೆ. ಮೊನ್ನೆಯ ಅಕ್ರಮ ನೇಮಕಾತಿಯಲ್ಲಿ ಈತನದೇ ಪ್ರಮುಖ ಪಾತ್ರವೆಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಆದರೆ, ವಾಸ್ತವವಾಗಿ ಈತನ ಪಾತ್ರ ಎಂತಹದು ಇಲ್ಲ. ಕೋತಿ ತಾನು ತಿಂದು ಮೇಕೆಯ ಬಾಯಿಗೆ ಸವರಿದಂತೆ, ಮೊನ್ನಪ್ಪ & ರಾಮಚಂದ್ರ ಅಕ್ರಮ ನೇಮಕಾತಿಯಲ್ಲಿ ಮಾಡುವುದೆಲ್ಲ ಮಾಡಿ, ಕಿಶೋರ ಕುಮಾರನನ್ನು ಬಲಿಪಶು ಮಾಡಿದ್ದಾರಷ್ಟೇ..
ಮೇಲಾಧಿಕಾರಿಗಳ ಮಾತು ಕೇಳಬೇಕಾದದ್ದು ಆದ್ಯಕರ್ತವ್ಯ. ಯಾಕೆಂದರೆ, ಮೊನ್ನಪ್ಪ ಎಂ.ಡಿ. ಹೀಗಾಗಿ ನೇಮಕಾತಿ ಆದೇಶದ ಪತ್ರಗಳಿಗೆ ಕಿಶೋರಕುಮಾರ ಸಹಿ ಹಾಕಿದ್ದು ಮೊನ್ನಪ್ಪನ ಒತ್ತಡಕ್ಕೆ ವಿನಃ ಮತ್ತೊಂದಕ್ಕಲ್ಲ.
Subscribe to:
Comments (Atom)












