Saturday, April 10, 2010

ಸವೋತ್ತಮ ವೈಧ್ಯ ಪ್ರಸನ್ನ ಜಿ ನಾವದಗಿ


ಸವೋತ್ತಮ ವೈಧ್ಯ ಪ್ರಸನ್ನ ಜಿ ನಾವದಗಿಖ್ಯಾತ ನ್ಯಾಯಮೂತರ್ಿ ಕೂ।ಬ ನಾವದಗಿ ಅವರ ತಮ್ಮನ ಮಗನಾದ ಮುದ್ದೇಬಿಹಾಳ ತಾಲೂಕಿನ ಡಾ ಪ್ರಸನ್ನ ಜಿ ನಾವದಗಿಯವರು ಸಮಾಜ ಸೇವೆಯನ್ನು ಮಾಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ।ಅವರು ವೃತ್ತಿಯಲ್ಲಿ ವೈಧ್ಯರಿದ್ದು, ಬಡವರ ಏಳಿಗೆಗಾಗಿ, ವೈಧ್ಯಕೀಯ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಹಗಲಿರುಳು ಸುಮಾರು ಜನರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ। ಸಧ್ಯ ಹಟ್ಟಿ ಚಿನ್ನದ ಗಣಿಯ ಆಸ್ಪತ್ರೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಬಿಡುವಿನ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ ಬಡವರಿಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡುತ್ತಾ, ಜೊತೆಯಲ್ಲಿ ಭಯಾನಕ ರೋಗಗಳ ಕುರಿತು ಜಾಗೃತಿ ಮೂಡಿಸುತ್ತಾರೆ.ವಿವಾಹಿತರಾದ ವೈಧ್ಯರು ಮುದ್ದೇಬಿಹಾಳದ ಹತ್ತಿರದ ಒಂದು ಚಿಕ್ಕ ಗ್ರಾಮದಲ್ಲಿ ಜನಿಸಿ, ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದು ನಂತರ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಯಲ್ಲಿ ಉತ್ತಮ ಬಾಲಕ ಪ್ರಶಸ್ತಿಗೂ ಪಾತ್ರರಾಗಿದ್ದರು. 2000ದಲ್ಲಿ ಮಂಗಳೂರಿನ ಕಸ್ತೂರಿ ಬಾ ವೈಧ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಮುಗಿಸಿ, ಮಂಗಳೂರಿನ ಗಾಂಧಿನಗರದ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷ ಅವಧಿ, ಯಾವುದೇ ಗೌರವಧನ ಪಡೆಯದೇ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಇವರಿಗೆ ಇರುವ ಏಕೈಕ ಉದ್ದೇಶವೇ, ಅದು ಬಡವರ ಹಾಗೂ ಅನಾಥರ ಸೇವೆ ಮಾಡುವುದು. ಆನಂತರ 2003ರಲ್ಲಿ ಹಟ್ಟಿ ಚಿನ್ನದ ಗಣಿಯ ಆಸ್ಪತ್ರೆಗೆ ವೈದ್ಯಾಧಿಕಾರಿಗಳಾಗಿ ಬಂದು ಅಪಾರ ಜನಮನ್ನಣಿಯನ್ನು ಪಡೆದಿದ್ದಾರೆ. ಹಟ್ಟಿಯ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡುತ್ತಾ, ಏಡ್ಸ್, ಡಯಾಭಿಟಿಸ್, ಚಿಕನ್ಗುನ್ಯ ದಂತಹ ರೋಗಗಳನ್ನು ತಡೆಹಿಡಿಯುವ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಕೆಲವು ಅನಾಥಶ್ರಮಗಳಿಗೆ ತಮ್ಮ ಬಿಡುವಿನ ಸಮಯದಲ್ಲಿ ಭೇಟಿ ನೀಡಿ, ಅಂತಹ ಮಕ್ಕಳೊಂದಿಗೆ ಕೆಲವು ಸಮಯವನ್ನು ಕಳೆಯುತ್ತಾರೆ.ಇವರ ಸಮಾಜಸೇವೆಯನ್ನು ಗುರುತಿಸಿ ಈಗಾಗಲೇ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ.ಇನ್ನು ಮುಂದೆಯೂ ಸಹ ಇಂತವರನ್ನು ಮತ್ತಷ್ಟು ಪ್ರೋತ್ಸಾಹಿಸಿ, ಅವರ ಸೇವೆಯನ್ನು ಪ್ರಶಂಸಿಸಬೇಕಾಗಿದೆ.ಜೊತೆಯಲ್ಲಿ ಡಾ ಪ್ರಸನ್ನ ನಾವದಗಿಯವರು ನಮ್ಮ ಪತ್ರಿಕೆಯ ವೈಧ್ಯಕೀಯ ಅಂಕಣದಲ್ಲಿ ತಮ್ಮ ಲೇಖನಗಳನ್ನು ಬರೆಯುತ್ತಾರೆ. ಓದುಗರು ಪತ್ರಿಕೆಯಲ್ಲಿಯೂ ಸಹ ಇವರ ಅಂಕಣಗಳನ್ನು ವೀಕ್ಷಿಸಬಹುದಾಗಿದೆ.14-04-201

No comments:

Post a Comment

Thanku