Sunday, May 23, 2010

Gulbarga in hands of dictators




ಸವರ್ಾಧಿಕಾರಿಗಳ ಕೈಯಲ್ಲಿ ಗುಲ್ಬಗರ್ಾವಿವೇಚನೆ ಎಂಬುದೇ ಇಲ್ಲದ ರಾಜಕಾರಣಿಗಳನ್ನು ಅಧಿಕಾರಶಾಹಿ ಹೇಗೆ ದಿಕ್ಕು ತಪ್ಪಿಸುತ್ತದೆ ಎಂಬುದಕ್ಕೆ ಕಲಬುಗರ್ಿಯ ಪೌರ ಕಾಮರ್ಿಕರ ಹೋರಾಟವೆ ಒಂದು ಉದಾಹರಣೆಯಾಗಿದೆ. ಡಾ. ಆರ್. ವಿಶಾಲ ಎಂಬ ಜಿಲ್ಲಾಧಿಕಾರಿ, ಸವರ್ಾಧಿಕಾರಿ ಮನೋಭಾವನೆಯ ಪೋಲಿಸ್ ವರಿಷ್ಠಾಧಿಕಾರಿ ಪದ್ಮನಯನ ಇವರ ಜುಗಲಬಂದಿ ಇಡೀ ಕಲಬುಗರ್ಿ ಜಿಲ್ಲೆಲ್ಲಿ ಆಡಳಿತ ಎಕ್ಕುಟ್ಟಿ ಹೋಗಲು ಕಾರಣವಾಗಿದೆ. ಕಲಬುಗರ್ಿಯ ಎಚ್ಚೆತ್ತ ಜನಗಳ ಸಂಕೇತ ಎಂದೆ ಬಿಂಬಿತವಾಗಿರುವ ಮಾಜಿಮಂತ್ರಿ ಎಸ್. ಕೆ.ಕಾಂತಾ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮಗ್ಗಲು ಮುಳ್ಳಾಗಿದ್ದಾರೆ.ಜನಪರ ಕಾರ್ಯವನ್ನು ಯಾವತ್ತೂ ಹಾದರ್ಿಕವಾಗಿ ಸ್ವಾಗತಿಸುವ ಆದರೆ ಜನಪರವಲ್ಲದ ಸರಕಾರದ ಧೋರಣೆಗಳನ್ನು ಎಂದಿಗೂ ತನ್ನ ಹೋರಾಟಗಳ ಮೂಲಕ ವಿರೋಧಿಸುತ್ತ ಬಂದಿರುವ ಎಸ್.ಕೆ.ಕಾಂತಾ ಸಹಜವಾಗಿ ಎಂದಿನಂತೆ ಸರಕಾರದ ಕೆಲವು ತಪ್ಪು ನಧರ್ಾರಗಳನ್ನು ವಿರೋಧಿಸುತ್ತಿರುವುದೆ ಇವರೀರ್ವರಿಗೆ ನುಂಗಲಾಗದ ತುತ್ತಾಗಿದೆ. ಸರಕಾರ ನದಿ ಸಿನ್ನೂರ, ಫರಹತಾಬಾದ್ಗಳಲ್ಲಿ ಸ್ಥಾಪಿಸಬೇಕೆಂದು ಉದ್ದೇಶಿಸಿರುವ ವಿದ್ಯುತ್ ಸ್ಥಾವರ ಘಟಕಕ್ಕೆ 1516 ಎಕರೆ ಭೂಮಿಯನ್ನು ಕಬಳಿಸಬೇಕೆಂದು ಹೊಂಚು ಹಾಕಿತ್ತು. ಸ್ಥಳೀಯ ರೈತರ ಅರಿವಿಗೆ ಬಾರದಂತೆ ಭೂಸ್ವಾಧೀನ ಕಾಯ್ದೆ 17(1) ಮತ್ತು 17(4) ತುತರ್ು ಕಾಯ್ದೆಯ ಅಡಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ತುದಿಗಾಲಲ್ಲಿ ನಂತಿತ್ತು. ಸರಕಾರದ ಈ ದುಷ್ಟ ನತಿಯನ್ನು ಪ್ರಜ್ಞೆ ಇರುವ ಯಾರಾದರೂ ಖಂಡಿಸಬೇಕಾದುದೆ.ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ಎಸ್.ಕೆ.ಕಾಂತಾ ಎಂದಿನ ತನ್ನ ದೃಢ ನಲುವುಗಳೊಂದಿಗೆ ಹೋರಾಟಕ್ಕೆ ನಂತಿರುವುದೆ ಜಿಲ್ಲಾಡಳಿತಕ್ಕೆ ಇರಿಸುಮುರಿಸು ತಂದಿಟ್ಟಿದೆ. ಸದರಿ ರೈತರ ಒಪ್ಪಿಗೆ ಇಲ್ಲದೆ, ಗ್ರಾಮ ಪಂಚಾಯತಿಗಳ ಒಪ್ಪಿಗೆ ಪಡೆಯದೆ, ಅತ್ಯಂತ ಫಲವತ್ತಾದ ಭೂಮಿಯನ್ನು (ವರ್ಷಕ್ಕೆ ಸುಮಾರು 90 ಕೋಟಿ ರೂಪಾಯಿ ದವಸ ದಾನ್ಯ ಬೆಳೆಯುವ) ಕೊಡುವುದು ಸಾಧ್ಯವೆ ಇಲ್ಲ ಎಂದು ರೈತರೆಲ್ಲ ಒಕ್ಕೂರಲಿನಲ್ಲಿ ಕೂಗುವಂತೆ ಕಾಂತಾ ಅವರೆಲ್ಲರನ್ನು ಹುರಿದುಂಬಿಸಿದರು. ಅಲ್ಲದೆ ಜಿಲ್ಲಾಧಿಕಾರಿಯೊಂದಿಗೆ ಈ ಕುರಿತು ಹಲವು ಸುತ್ತಿನ ಮಾತುಕತೆಗಳ ಮೂಲಕ ಜಮೀನು ಬಿಟ್ಟು ಕೊಡುವುದು ಸಾಧ್ಯವೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಜೊತೆಗೆ ಹಿಂದಿನ ಜಿಲ್ಲಾಧಿಕಾರಿ ಸತ್ಯಮೂತರ್ಿ ಈ ಕುರಿತು ಸರಕಾರಕ್ಕೆ ನದಿಸಿನ್ನೂರ ಹಾಗೂ ಫರತಾಬಾದನಲ್ಲಿ ವಿದ್ಯುತ್ ಘಟಕ ಸ್ಥಾಪಿಸಬೇಕೆಂದು ಉದ್ದೇಶಿಸಿರುವ ಭೂಮಿ ಅತ್ಯಂತ ಫಲವತ್ತಾಗಿದ್ದು, ಸದರಿ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದು ಒಳಿತು ಎಂಬ ಒಕ್ಕಣಿಯನ್ನು ಇಂದಿನ ಜಿಲ್ಲಾಧಿಕಾರಿಗಳ ಕಣ್ಣ ಮುಂದೆ ಇಟ್ಟರು. ಜಿಲ್ಲಾ ಉಸ್ತುವಾರಿ ಅಧಿಕಾರಿ ಸಚಿವ ಲಕ್ಷ್ಮಣ ಸೌದಿ ಕೂಡ ರೈತರ ಫಲವತ್ತಾದ ಭೂಮಿ ಕಸಿಯುವುದು ಬೇಡ ಎಂಬ ಹೇಳಿಕೆಯನ್ನೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದೆಲ್ಲದರಿಂದ ಜಿಲ್ಲಾಧಿಕಾರಿಗೆ ಅಂಡಿನಲ್ಲಿ ಮೆಣಸಿನ ಕಾಯಿ ಇಟ್ಟಂತಾಯಿತು.ಗುಲಬಗರ್ಾ ರೈಲು ನಿಲ್ದಾಣದ ಪಕ್ಕದಲ್ಲಿಯೆ ಇರುವ ತಾರಫೈಲ್ ಬಡಾವಣೆ ಎಲ್ಲರೂ ಬಲ್ಲಂತೆ ಸಮಾಜದ ಅತ್ಯಂತ ಕೆಳ ಸ್ಥರದಲ್ಲಿ ಇರುವ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ವಾಸವಾಗಿರುವ ಕಾಲೋನ. ಈ ಬಡಾವಣೆಗೆ ಸರಕಾರದ ಸಂರಕ್ಷಣೆ ಬೇಕು. ಆದರೆ ತನ್ನ ಜೀಪಿನ ಮೇಲೆ ಯಾವುದೋ ಅವಿವೇಕಿ ಕಲ್ಲು ತೂರಿದ ಎಂಬುದನ್ನೆ ಮುಂದೆ ನೆಪ ಇಟ್ಟುಕೊಂಡು ತಾರ್ಫೈಲ್ ದಲಿತರ ಮೇಲೆ ಎಸ್ಪಿ ಪದ್ಮನಯನ ನಡೆಸಿದ ಗೂಂಡಾಗಿರಿ ಖಂಡನಯವಾದುದು. ತನ್ನ ನೇತೃತ್ವದಲ್ಲಿ ಪೋಲಿಸ್ ದಂಡು ತಕ್ಕೊಂಡು ಹೋಗಿ ದಲಿತರೆಲ್ಲರ ಮನೆ ಬಾಗಿಲು- ಕಿಟಕಿಗಳನ್ನು ಮುರಿದು ಅವರ ಅಡುಗೆಯ ಪಾತ್ರೆ ಪಗಡೆಗಳನ್ನು ಹೊರಗೆ ಬಿಸಾಕಿ, ಮಕ್ಕಳು ಮುದುಕರು, ಹೆಣ್ಣುಮಕ್ಕಳೆನ್ನದೆ ಪೋಲಿಸ್ ಲಾಠಿ ಬೀಸಿದ್ದಾರೆ. ಅವರೆಲ್ಲರನ್ನೂ ವಿನಾಕಾರಣ ಬೆಳಗಾಂವಿಯ ಜೇಲಿಗೆ ಕಳಿಸಿ ಪೋಲಿಸರು ತಮ್ಮ ದೌರ್ಜನ್ಯ ಮೆರೆದಿದ್ದಾರೆ.ಇದಲ್ಲದೆ ಈ ಹಿಂದೆ ಹಲವಾರು ಸಲ ಗುಲಬಗರ್ಾದಲ್ಲಿ ರಾತ್ರಿಯಾಗುವುದೆ ತಡ ಹಲವಾರು ಅಂಗಡಿ ಮುಂಗಟ್ಟುಗಳ ಕೀಲಿ ಮುರಿದು ಧರೋಡೆಗಳು ನಡೆದು ಹೋಗಿವೆ. ಹೆಣ್ಣು ಮಕ್ಕಳ ಕತ್ತಿನಲ್ಲಿನ ಸರ, ಮಾಂಗಲ್ಯಗಳು ನಂತ ನಂತಲೆ ಮಟಾಮಾಯವಾಗುತ್ತಿವೆ. ಕೊಲೆಗಡುಕರಂತೂ ನಭರ್ೀತಿಯಿಂದ ತಿರುಗುತ್ತಿದ್ದಾರೆ. ವಿಚಿತ್ರವೆಂದರೆ ಪೋಲಿಸರೆ ಅಂಗಡಿ ಅಂಗಡಿಗೆ ಹೋಗಿ ಹಪ್ತಾ ವಸೂಲಿಗೆ ಇಳಿದಿರುವ ದೃಶ್ಯ ಸಾಮಾನ್ಯ. ದೊಂಬಿ, ರಾಬರಿ ಮಾಡುವ ಹುಡುಗರೆಲ್ಲ ಪೋಲಿಸರ ನೆಂಟರಂತೆ ನತ್ಯವೂ ಪೋಲಿಸರ ಜೊತೆ ತಿರುಗಾಡುತ್ತಿದ್ದಾರೆ.ಇದನ್ನೆಲ್ಲ ಗಮನಸುತ್ತಿದ್ದ ಯಾರಿಗಾದರೂ ಸರಕಾರದ ಅಧಿಕಾರಿಗಳ ಬಗೆಗೆ ರೋಷ ಉಕ್ಕದೆ ಇರುತ್ತದೆಯೆ ? ಸಹಜವಾಗಿಯೆ ಎಸ್.ಕೆ. ಕಾಂತಾ ಈ ಎಲ್ಲ ಅಸಂಗತ ಸಂಗತಿಗಳ ಕುರಿತು ಮಾಧ್ಯಮದ ಮೂಲಕ ಸರಕಾರದ ಗಮನಕ್ಕೆ ತಂದಿದ್ದಾರೆ. ಪೋಲಿಸರ ಗೂಂಡಾಗಿರಿಯ ಮೂಲಕ ಎಂಥ ಅನಾಹುತಗಳಾಗುತ್ತಿವೆ ಎಂಬುದನ್ನು ಕಾಂತಾ ಸರಕಾರದ ಮುಖ್ಯಸ್ಥರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಗೃಹ ಮಂತ್ರಿಯನ್ನು ಈ ಸಂಬಂಧ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿಯನ್ನು ಜರಿದರು. ಇದರಲ್ಲಿ ತಪ್ಪೇನು ಇದೆ ? ಆದರೆ ಕಂಡದ್ದು ಕಂಡಂತೆ ಆಡಿದರೆ ಕೆಲವರಿಗೆ ಕೆಂಡದಂಥ ಕೋಪ ಎಂಬಂತೆ ಪದ್ಮನಯನ ತಾನು ಕುಳಿತ ಖುಚರ್ಿಯಲ್ಲಿಯೆ ಕುದ್ದು ಹೋಗುತ್ತಿದ್ದಾನೆ.ಎಸ್.ಕೆ.ಕಾಂತಾ ಅವರ ನ್ಯಾಯಯುತವಾದ, ಜನಪರವಾದ ಹೋರಾಟಗಳನ್ನು ತಪ್ಪಾಗಿ ಅಥರ್ೈಸಿಕೊಂಡಿರುವ ಅಧಿಕಾರಿದ್ವಯರಿಬ್ಬರೂ ಕಾಂತಾ ಅವರನ್ನು ಹೇಗಾದರೂ ಸೈ ಹಣಿಯಬೇಕೆಂದು ತೀಮರ್ಾನಸಿಕೊಂಡವರಂತೆ ಒಂದೊಂದೆ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಎಸ್.ಕೆ. ಕಾಂತಾ ಅವರ ಶಕ್ತಿ ಇರುವುದೆ ದಲಿತರ- ಅಲ್ಪಸಂಖ್ಯಾತರ ಅಥವಾ ತುಳಿತಕ್ಕೆ ಒಳಗಾದವರ ಜೊತೆಗೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಂಡ ಈ ನಾಮರ್ಧರಿಬ್ಬರು ವಿನಾಕಾರಣ ಅಧಿಕಾರ ದುರುಪಯೋಗ ಮಾಡಿಕೊಂಡು ದೌರ್ಜನ್ಯವೆಸಗುತ್ತಿದ್ದಾರೆ.ನದಿಸಿನ್ನೂರು ಹಾಗೂ ಫರತಾಬಾದ ರೈತರ ಮೇಲೆ ಪೋಲಿಸರನ್ನು ಛೂಬಿಟ್ಟು ಹಣಿಯಲು ಯತ್ನಿಸಿದರು. ಜೈಲಿಗೆ ಹಾಕಿದರು. ಇದೂ ಸಾಲದೆಂಬಂತೆ ಅವರನ್ನು ಕೈಕೊಳಹಾಕಿ ಅವರ ಮನೋಸ್ಥೈರ್ಯವನ್ನು ಕುಸಿಯುವಂತೆ ನೋಡಿಕೊಂಡರು. ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ನಡೆಸಿದ ಚಳುವಳಿಯನ್ನು ಹತ್ತಿಕ್ಕಲು ನಾನಾ ರೀತಿಯ ಪ್ರಯತ್ನಗಳನ್ನು ಜಿಲ್ಲಾಡಳಿತ ಇಂದಿಗೂ ಮುಂದುವರೆಸಿಕೊಂಡು ನಡೆದಿದೆ. ಕನರ್ಾಟಕ ರಕ್ಷಣಾ ವೇದಿಕೆಯ ಅರುಣಕುಮಾರ ಪಾಟೀಲ, ಸುಲಫಲ ಮಠದ ಮಹಾಂತ ಶಿವಾಚಾರ್ಯ, ಅಲ್ಲಮಪ್ರಭು ಪಾಟೀಲ ಮುಂತಾದವರ ಮೇಲೆ ಕೇಸುಗಳನ್ನು ಜಡಿದು ಜೈಲಿಗೆ ತಳ್ಳುವ ಯತ್ನ ಆರಂಭಿಸಿದೆ.ಪೌರಕಾಮರ್ಿಕರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ನಗರಪಾಲಿಕೆ ಕಛೇರಿಯ ಮುಂದೆ ಶಾಂತಿಯುತ ಧರಣಿ ನಡೆಸುತ್ತಿದ್ದಾರೆ. ಸಹಜವಾಗಿ ಸರಕಾರದ ಮಂತ್ರಿಗಳು ನಗರಕ್ಕೆ ಬಂದಾಗ ಅವರೆಲ್ಲರ ಗಮನ ಸೆಳೆಯಬೇಕೆಂದು ಚಳುವಳಿ ರೂಪಿಸಿದರೆ ಅದನ್ನು ವಿಫಲಗೊಳಿಸಲು ಮುದ್ದಾಂ ಜಿಲ್ಲಾಡಳಿತವು ಒಂದು ದಿನ ಮುಂಚೆಯೆ ಈ ಸತ್ಯಾಗ್ರಹಿಗಳನ್ನು ಹಿಡಿದು ಜೈಲಿಗೆ ಕಳಿಸುತ್ತದೆ. ಸಾರ್ವಜನಕ ಆಸ್ತಿ ಪಾಸ್ತಿಯನ್ನು ತಾನೇ ನಾಶಗೊಳಿಸಿ, ಬಸ್ಗಳಿಗೆ ಬೆಂಕಿ ಹಚ್ಚಿ ಸತ್ಯಾಗ್ರಹಿಗಳೆ ಇದನ್ನೆಲ್ಲ ಮಾಡಿದ್ದಾರೆ ಎಂಬಂತೆ ವ್ಯವಸ್ಥಿತ ಪಿತೂರಿ ನಡೆಸಿದೆ.!ಗುಲಬಗರ್ಾ ಅಧಿಕಾರಿಗಳಿಬ್ಬರ ದುಷ್ಟ ಬುದ್ಧಿಯನ್ನು ಅರಿತ ಕಾಂತಾ ಅವರು ಸಹಜವಾಗಿ ಅತ್ಯಂತ ಹುಷಾರಿಯಿಂದ ತಾವೇ ಆಮರಣ ಉಪವಾಸ ಆರಂಭಿಸಿದ್ಧಾರೆ. ಹೇಗಾದರೂ ಸೈ ಕಾಂತಾ ಅವರನ್ನು ಆ ಮೂಲಕ ಇಲ್ಲಿನ ಜನತೆಯನ್ನು ಬಗ್ಗು ಬಡಿಯಲೆ ಬೇಕೆಂದು ನಂತಿರುವ ಸರಕಾರದ ಅಧಿಕಾರಿಗಳಿಬ್ಬರೂ ತಮ್ಮ ಕರ್ತವ್ಯಗಳನ್ನು ಮೀರಿ ಅನಾಚಾರಿಗಳಂತೆ ವತರ್ಿಸುತ್ತಿದ್ದಾರೆ. ಮಹಾನಗರ ಪಾಲಿಕೆಯ ಮುಂದೆ ಆಮರಣ ಸತ್ಯಾಗ್ರಹ ಆರಂಭಿಸಿದ ಕಾಂತಾ ಅವರು ಹಾಗೂ ಅವರು ಆರಂಭಿಸಿದ ಚಳುವಳಿಯ ವಿಷಯ ಕುರಿತು ಸರಕಾರಕ್ಕೆ ತಪ್ಪು ತಪ್ಪಾದ ಮಾಹಿತಿಗಳನ್ನು ನಡುತ್ತ ದಿಕ್ಕು ತಪ್ಪಿಸುತ್ತಿದ್ದಾರೆ.ಆಮರಣ ಉಪವಾಸದಿಂದ ಎಸ್.ಕೆ. ಕಾಂತಾ ಅವರ ಆರೋಗ್ಯ ದಿನೆ ದಿನೆ ಹದಗೆಡುತ್ತದೆ ಎಂಬ ಸಬೂಬು ನಡುತ್ತ ಯಾರಿಗೂ ಹೇಳದೆ ಕೇಳದೆ ಜಿಲ್ಲಾಡಳಿತ ಸತ್ಯಾಗ್ರಹ ಸ್ಥಳದಿಂದ ಬಲವಂತವಾಗಿ ಹೊರಗಡೆ ಹಾಕಿಬಿಟ್ಟಿದೆ. ಇದನ್ನು ತಡೆಯಲು ಬಂದ ಪೌರ ಕಾಮರ್ಿಕರ ಮೇಲೆ ಲಾಠಿ ಚಾರ್ಜ ಮಾಡಿ ಗೂಂಡಾಗಿರಿ ನಡೆಸಿದೆ. ಪೋಲಿಸರ ದಬ್ಬಾಳಿಕೆ ನತಿಯನ್ನು ಖಂಡಿಸಿ ಹೋರಾಟಕ್ಕೆ ದುಮುಕಿದ ಸುಲಫಲ ಮಠದ ಮಹಾಂತ ಶಿವಾಚಾರ್ಯರ ಮೇಲೆ ಇಲ್ಲ ಸಲ್ಲದ ಕೇಸ್ಗಳನ್ನು ಹೆಟ್ಟಿ ಗಪ್- ಚುಪ್ ಕುಳಿತುಕೊಳ್ಳುವಂತೆ ಹೆದರಿಸುತ್ತಿದೆ.ಪ್ರಜಾಪ್ರಭುತ್ವ ವಿರೋಧಿಯಾದ, ಸವರ್ಾಧಿಕಾರಿ ಧೋರಣೆಯ ಜಿಲ್ಲೆಯ ಇಬ್ಬರು ಅಧಿಕಾರಿಗಳು ಇಲ್ಲಿಂದ ಎತ್ತಂಗಡೆ ಮಾಡದೆ ಹೋದರೆ ಯಡಿಯೂರಪ್ಪ ಸರಕಾರದ ಮಾನ ಗುಲಬಗರ್ಾದ ಬೀದಿ ಬೀದಿಗಳಲ್ಲಿ ಹರಾಜಾಗುವ ಕಾಲ ದೂರವಿಲ್ಲವೆನಸುತ್ತದೆ.ಅವಿವೇಕಿ ಅಧಿಕಾರಿಯ ಮಾತುಕೇಳಿ ಮೊಂಡು ಹಠಕ್ಕೆ ಬಿದ್ದಿರುವ ಸರಕಾರರಾಜ್ಯಪೌರ ಕಾಮರ್ಿಕ ಸಚಿವ ಸುರೇಶ ಕುಮಾರ ಹಾಗೂ ಗುಲಬಗರ್ಾ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣಸೌದಿ ಇಬ್ಬರೂ ಕೂಡಿಯೇ ಯಾವುದೊ ಸರಕಾರಿ ಬಂಗ್ಲೆಯಲ್ಲಿ ಗಡದ್ದಾಗಿ ನದ್ದೆ ಮಾಡುತ್ತಿರಬೇಕೆನೆಸುತ್ತದೆ. ಏಕೆಂದರೆ ಸತತ ಮೂರು ವರ್ಷಗಳಿಂದ ಗುಲಬಗರ್ಾ ಮಹಾನಗರ ಪಾಲಿಕೆಯ ಕಾಮರ್ಿಕ ನೌಕರರು ಒಂದೆ ಸಮನೇ ಬೊಬ್ಬೆ ಹೊಡೆಯುತ್ತಿದ್ದರೂ ಅದಕ್ಕೆ ಸ್ಪಂದಿಸಿಲ್ಲ. ಸುಮಾರು 477 ಜನ ಪೌರ ಕಾಮರ್ಿಕರು 34 ತಿಂಗಳುಗಳಿಂದಲೂ ಸಂಬಳವಿಲ್ಲದೆ ಕೆಲಸ ಮಾಡಿ ಹೈರಾಣಾಗಿ ಹೋಗಿದ್ದಾರೆ. ತಮ್ಮ ಹಸಿದ ಹೊಟ್ಟೆಯ ನೋವನ್ನು ಸರಕಾರಕ್ಕೆ ನ್ಯಾಯಯುತವಾಗಿ ತಿಳಿಸಬೇಕು ಎಂದುಕೊಂಡು ಚಳುವಳಿ ನಡೆಸಿದರು, ರಸ್ತಾರೋಖೋ ಏರ್ಪಡಿಸಿದರು, ಕೊನೆಗೆ ಆಮರಣ ಉಪವಾಸ ಕುಳಿತರೂ ಮೊಂಡು ವಾದಕ್ಕೆ ಬಿದ್ದ ಸರಕಾರದ ಪ್ರತಿನಧಿಗಳು ಇತ್ತ ಸುಳಿಯದೆ ಗದರ್ಿಗಮ್ಮತ್ತು ನಡೆಸಿದ್ದಾರೆ.ಈ ನಡುವೆ ಜಿಲ್ಲೆಗೆ ಹತ್ತಾರು ಬಾರಿ ಮುಖ್ಯ ಮಂತ್ರಿ ಯಡಿಯೂರಪ್ಪ ಭೇಟಿ ನಡಿದಾಗಲಾದರೂ ತಮ್ಮ ಪ್ರತಿಭಟನೆಯನ್ನು ತೋರಿಸಬೇಕೆಂದಿದ್ದ ಕಾಮರ್ಿಕರನ್ನು ಬೆಳಗಾಂವಿಯ ಹಿಂಡಲಗಾ ಜೇಲಿಗೆ ಕಳಿಸಿದೆ. ಸಾರ್ವಜನಕ ನೆಮ್ಮದಿಯನ್ನು ಕೆಡಿಸುವ ಕೇಸು ಜಡಿದು ಎಸ್. ಕೆ. ಕಾಂತಾ ಎಂಬ ಮಾಜಿ ಮಂತ್ರಿಗಳನ್ನೂ ಅದು ನಧರ್ಾಕ್ಷಿಣ್ಯವಾಗಿ ಜೇಲಿನಲ್ಲಿ ಬಂಧಿಸಿ ಇಟ್ಟು ತನ್ನ ಮಾನವನ್ನು ಹರಾಜು ಹಾಕಿಕೊಂಡಿದೆ.ಈ ಕುರಿತು ಉಪಕಾಮರ್ಿಕ ಆಯುಕ್ತರ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದು, ಯಾರನ್ನೂ ಕೆಲಸದಿಂದ ತೆಗೆದು ಹಾಕುವಂತ್ತಿಲ್ಲ ಎಂದು ಅದು ಸ್ಪಷ್ಟವಾಗಿ ತೀಪರ್ು ನಡಿದೆ. ಅಲ್ಲದೆ 2007 ರ ಜೂನ್ ತಿಂಗಳಲ್ಲಿ 477 ಜನ ಕಾಮರ್ಿಕರ ಗುತ್ತಿಗೆ ಅವಧಿ ಮುಗಿದಿದ್ದರೂ ಇಂದಿನವರೆಗೆ ಅವರಿಂದ ಪಾಲಿಕೆ ಕೆಲಸವನ್ನು ಮಾಡಿಸಿಕೊಳ್ಳುತ್ತಿದೆ. ಸಹಜವಾಗಿಯೆ ಕಾಂತಾ ಯಾರು ಪಾಲಿಕೆ ನೌಕರರಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತೀರೋ ಅವರು ಸಂಬಳ ನಡಿ ಎಂದು ಹೇಳುತ್ತಾರೆ. ಇಲ್ಲ ಮೊದಲೆ ಅವರಿಗೆಲ್ಲ ಯಾವುದೋ ಕಾಂಟ್ರ್ಯಾಕ್ಟರ್ ಮೂಲಕ ಪಗಾರ ಕೊಡುತ್ತಿದ್ದೇವು ಎಂದರೆ ಆ ಕಂಟ್ರ್ಯಾಕ್ಟದಾರರ ವಿಳಾಸ, ಲೈಸನ್ಸ್ ನಂಬರ ಕೊಡಿರಿ ಎಂದು ಕೇಳುತ್ತಾರೆ. ಮೂರು ವರ್ಷದ ಪೌರಕಾಮರ್ಿಕರ ಬಾಕಿ ಸಂಬಳ ಪಡೆದ ನಂತರ ನವು ಸ್ವಸಹಾಯ ಗುಂಪುಗಳ ಮೂಲಕ ಕೆಲಸಕ್ಕೆ ಬನ್ನ ಎಂದು ಆರ್ಡರ ಮಾಡಿದರೆ ಕಾಮರ್ಿಕರು ತಮಗೆ ಅನುಕೂಲವಾದರೆ ಕೆಲಸಕ್ಕೆ ಬರುತ್ತಾರೆ ಇಲ್ಲದಿದ್ದರೆ ಇಲ್ಲ. ಇಷ್ಟು ಸರಳ ಸಂಗತಿ ದನಾ ಕಾಯುವ ಹುಡುಗನಗೂ ಗೊತ್ತಾಗುತ್ತದೆ ಆದರೆ ಸರಕಾರದ ಖದೀಮ ಅಧಿಕಾರಿಗಳಿಗೆ ಆ ಮೂಲಕ ಆಡಳಿತಾರೂಢ ಮಂತ್ರಿಗಳಿಗೆ ಅರ್ಥವಾಗದೆ ಇರುವುದು ಸೂಜಿಗ ಎಂದು ಕಾಂತಾ ನುಡಿಯುತ್ತಾರೆ.ಜಟ್ಟಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ ಎಂಬ ವಾದ ಸರಕಾರ ಮಾತ್ರ ಈ ನೌಕರರ ಕಡೆ ದಿವ್ಯ ನರ್ಲಕ್ಷ್ಯ ವಹಿಸಿದೆ ಮಾತ್ರವಲ್ಲ, ಅದು ತನ್ನ ಕಳ್ಳಾಟವನ್ನೂ ಪೌರ ನೌಕರರೊಂದಿಗೆ ನಡೆಸಿದೆ. ಪೌರ ಕಾಮರ್ಿಕರ ಬಾಕಿ ಇರುವ 9.26 ಕೋಟಿ ರೂಪಾಯಿ ವೇತನವನ್ನು ಅದು ಸ್ವ ಸಹಾಯ ಸಂಘಗಳ ಮೂಲಕ ಪಾವತಿ ಮಾಡುವುದಾಗಿ ಸರಕಾರ ಲಿಖಿತ ಭರವಸೆ ನಡುತ್ತ, ಪೌರ ಕಾಮರ್ಿಕರನ್ನು ಕಾಯಂಗೊಳಿಸದೆ ಇರುವ ಹುನ್ನಾರದಲ್ಲಿ ತೊಡಗಿದೆ.ಸರಕಾರದ ದುರುದ್ದೇಶವನ್ನು ಸಂಪೂರ್ಣವಾಗಿ ಬಲ್ಲ ಮಾಜಿ ಮಂತ್ರಿ ಎಸ್.ಕೆ. ಕಾಂತಾ ಪ್ರತಿಭಟಿಸಿ ದಿನಾಂಕ 3-5-2010 ರಂದು ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಗುಲಬಗರ್ಾದ ಸಂಪೂರ್ಣ ಸಂಘಟನೆಗಳು, ಮಠಾಧೀಶರು ಇದರಿಂದ ರೊಚ್ಚಿಗೆದ್ದ ಮಠಾಧೀಶರು ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ವಸ್ತು ಸ್ಥಿತಿಯನ್ನು ಸರಕಾರಕ್ಕೆ ತಿಳಿಸಬೇಕಾದ ಅಧಿಕಾರಿಗಳು ತಮ್ಮ ದುಷ್ಟ ನತಿಗಳಿಂದ ಕಾಂತಾ ಅವರನ್ನು ಜಿಲ್ಲೆಯಿಂದಲೆ ಪೋಲಿಸರ ಮೂಲಕ ಎತ್ತಂಗಡಿ ಮಾಡಿ ರಾಯಚೂರಿಗೆ ಗುಟ್ಟಾಗಿ ಕಳಿಸಿದೆ. ಎಸ್.ಕೆ. ಕಾಂತಾ ಬಹುತೇಕರು ಬಲ್ಲಂತೆ ಅನ್ಯಾಯವನ್ನು ಕಂಡಾಗ ಪ್ರತಿಭಟಿಸುವ ಒಂದು ಅಸ್ತ್ರ. ಪ್ರಾಮಾಣಿಕ, ನೇರ-ನಷ್ಠುರ ಗುಣಗಳಿಗೆ ಹೆಸರಾದವರು. ಇಂಥವರು ತಮ್ಮ ಎಪ್ಪತ್ತೆರಡರ ಇಳಿ ವಯಸ್ಸನ್ನೂ ಲೆಕ್ಕಿಸದೆ ಪೌರಕಾಮರ್ಿಕರ ಪರವಾಗಿ ಆಮರಣ ಕುಳಿತು, ಜೀವನದೊಂದಿಗೆ ಹೋರಾಟ ನಡೆಸಿದ್ದಾರೆ. ಇನ್ನಾದರೂ ಸರಕಾರ ತನ್ನ ಮೊಂಡು ಧೋರಣೆಯನ್ನು ಬದಿಗೆ ಸರಿಸಿ , ಕಾಮರ್ಿಕರ ಸಂಬಳವನ್ನು ಈ ಮೊದಲು ಕೊಟ್ಟಂತೆ ಪೌರ ಆಯುಕ್ತರ ಕಚೇರಿಯ ಮುಖಾಂತರವೆ ಬಿಡುಗಡೆ ಮಾಡಿಸಬೇಕು. ಆದರೆ ಜಾವೇದ ಅಖ್ತರ ಎಂಬ ಅವಿವೇಕಿ ಅಧಿಕಾರಿಯ ಮಾತು ಕೇಳಿ ತನ್ನ ಮಾನವನ್ನು ಹರಾಜು ಹಾಕಿಕೊಳ್ಳಬಾರದು.ಸರಕಾರದ ಹಠಮಾರಿ ಧೋರಣೆಯಿಂದ ಹೊತ್ತಿ ಉರಿಯಲಿರುವ ಗುಲಬಗರ್ಾಗುಲಬಗರ್ಾ ಪೌರಕಾಮರ್ಿಕ ಸಂಬಳದ ಸಮಸ್ಯೆ ಯಡ್ಡಿ ಸರಕಾರದ ಜಿದ್ದಿನಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ. ಚಳುವಳಿಗಾರರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೂಡಿ ಅವರಿಗೆ ಜೇಲಿಗೆ ಅಟ್ಟುವ ಜಿಲ್ಲಾಡಳಿತ ಕಾರ್ಯವೂ ಅಷ್ಟೆ ನಾಚಿಕೆಯಿಲ್ಲದೆ ನಡೆದುಹೋಗುತ್ತಿದೆ. 477 ಪೌರ ಕಾಮರ್ಿಕರಿಗೆ ಈ ಮೊದಲು ಗುಲಬಗರ್ಾ ಮಹಾನಗರ ಪಾಲಿಕೆ ತಾನೇ ಸಂಬಳ ವಿತರಿಸುತ್ತಿತ್ತು. ಆದರೆ ಅದೇನು ಕಾರಣವೋ ಒಮ್ಮಿದೊಮ್ಮೆ ಅಂದರೆ 35 ತಿಂಗಳ ಹಿಂದಿನಂದ ಸರಕಾರ ಅವರಿಗೆ ಸಂಬಳವೇ ನಡಲಿಲ್ಲ. ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಧರಣಿ, ರಸ್ತೆ ರೋಖೋ, ರೈಲ್ ರೋಖೋ ಹಾಗೂ ಸತ್ಯಾಗ್ರಹ ಕೊನೆಗೆ ಆಮರಣ ಉಪವಾಸ ಎಂದು ಕುಳಿತ ಮೇಲೆಯೆ ಸರಕಾರ ಅರೆಕಣ್ಣು ತೆರೆದಿದೆ. ಆದರೂ ಅದರೊಳಗೂ ತನ್ನ ಕಪಿಚೇಷ್ಟೆಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ.ಆಡಳಿತಾಧಿಕಾರಿಯ ಮಾತುಕೇಳಿ ಮೊಂಡು ಹಠಕ್ಕೆ ಬಿದ್ದಿರುವ ಸರಕಾರ ಕಾಂತಾ ಅವರ ಆಮರಣ ಉಪವಾಸವನ್ನು ಅವರ ಆರೋಗ್ಯದ ನೆಪವೊಡ್ಡಿ (ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಾ.ಆರ್. ವಿಶಾಲ್ ಎಂಬ ಜಿಲ್ಲಾಧಿಕಾರಿ ಕೂಡಿಕೊಂಡು) ಒತ್ತಾಯ ಪೂರ್ವಕವಾಗಿ ಸತ್ಯಾಗ್ರಹದ ಸ್ಥಳದಿಂದ ಎತ್ತುಕೊಂಡು ಒಯ್ದರು. ಆದರೆ ಅವರನ್ನು ಗುಲಬಗರ್ಾಕ್ಕಿಂತಲೂ ಅತ್ಯುತ್ತಮವಲ್ಲದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಾಖಲು ಮಾಡುವ ಮೂಲಕ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟರು. ಕಾಂತಾ ಅವರ ದೇಹದಲ್ಲಿ ಗ್ಲುಕೋಸ್ ಪ್ರಮಾಣ 50 ರಷ್ಟು ಆಗಿತ್ತು. ಇದು ನಜಕ್ಕೂ ಕಳವಳದ ಸಂಗತಿ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಪ್ರಮಾಣ 100 ರಷ್ಟು ಇರಬೇಕು. ಇದು ಹೀಗೆ ಮುಂದುವರೆದುದೆ ಆದರೆ ಕಾಂತಾ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿತ್ತು. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದರು. ಇಂಥ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಕಾಂತಾ ಅವರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅಲ್ಲಿ - ಇಲ್ಲಿ ಸುತ್ತಾಡಿಸಿ ರಾತ್ರಿ 12 ಗಂಟೆಗೆ ಆಸ್ಪತ್ರೆಯ ಮುಖ ತೋರಿಸಿದರೆಂದರೆ ಏನರ್ಥ? ಒಂದು ಕಡೆ ಕಾಂತಾ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು, ಎಂದು ಹೇಳುವ ಜಿಲ್ಲಾಡಳಿತವೇ ಅವರನ್ನು ಬೇಕಂತಲೆ ಹಗಲೆಲ್ಲ ಅಲ್ಲಲ್ಲಿ ಸುತ್ತಾಡಿಸಿದ್ದು ಏತಕ್ಕೆ ? !ಇದೆಲ್ಲಕ್ಕಿಂತ ಮುಖ್ಯವಾಗಿ ಗುಲಬಗರ್ಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಕೆ.ಕಾಂತಾ ಮಗ್ಗಲು ಮುಳ್ಳಾಗಿದ್ದಾರೆ. ಎಸ್.ಕೆ.ಕಾಂತಾ ಪ್ರತಿಯೊಂದನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕೆಂದು ಬಯಸುತ್ತಾರೆ. ಜನವಿರೋಧಿಯಾದ, ಸಂವಿಧಾನಕ ಶಕ್ತಿಯನ್ನು ಕಾಂತಾ ತಮ್ಮ ಎಂದಿನ ಹೋರಾಟದ ಮೂಲಕ ಬಗ್ಗು ಬಡಿಯುತ್ತಾರೆ. ಇದೆಲ್ಲ ಭ್ರಷ್ಟ ಅಧಿಕಾರಿಗಳಿಗೆ ನುಂಗಲಾಗದ ತುತ್ತಾಗಿದೆ. ಜೊತೆಗೆ ಯಡ್ಡಿಯ ಸರಕಾರಕ್ಕೂ ಕೂಡ ಕಾಂತಾ ನ್ಯಾಯಯುತವಾಗಿ, ಜನಪರ ಹೋರಾಟಗಳ ಮೂಲಕ ಬೆಳೆಯುವುದು ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ.ಹಾಗಾಗಿ ಬೇಕಿಲ್ಲದ ಗಂಡ ಮೊಸರಿನಲ್ಲಿಯೂ ಕಲ್ಲು ಹುಡುಕಿದಂತೆ ನೆವ ಮಾಡಿಕೊಂಡು ಪೌರ ಕಾಮರ್ಿಕರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ಹಿತ್ತಲಬಾಗಿಲ ಮೂಲಕ ಪರಿಹರಿಸಬೇಕೆಂದು ಸರಕಾರ ಹೊರಟಿದೆ. ಆದರೆ ಕಾಂತಾ ಮಾತ್ರ ಸರಕಾರ ನಲುವು ಏನೇ ಇದ್ದರೂ ಅದು ಪಾರದರ್ಶಕವಾಗಿ, ಸಂವಿಧಾನಕವಾಗಿ ಇರಲಿ. ಅಂದರೆ ಈ ಹಿಂದೆ ಪಾಲಿಕೆಯೇ ತನ್ನ ಕಾಮರ್ಿಕರಿಗೆ ನೇರ ಸಂಬಳ ನಡುತ್ತಿತ್ತು. ಈಗಲೂ ಅದು ನಡಲಿ. ಅಂದಿಲ್ಲದ ಸ್ವಸಹಾಯ ಸಂಘಗಳು ಈಗ ಏಕೆ ಬಂದವು. ಒಂದು ವೇಳೆ ಅಂದೆ ನವು ಯಾವುದೋ ಏಜೆನ್ಸ ಮೂಲಕ ನಮಗೆ ಸಂಬಳ ನಡುತ್ತಿದ್ದರೆ ಅವರ ಹೆಸರು ಲೈಸನ್ಸ್, ಹೆಸರು ತಿಳಿಸಿ ಎಂದು ಹೇಳಿದ್ದೆ ಸರಕಾರಕ್ಕೆ ಅಂಡಿನಲ್ಲಿ ಮೆಣಸಿನಕಾಯಿ ಇಟ್ಟಂತಾಗಿದೆ. ಇಲ್ಲವೆ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾಗಿ ಬರಹದ ಮೂಲಕ ತಿಳಿಸಿ ಎಂದು ಹೇಳಿದ್ದು ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.ಎಸ್.ಕೆ.ಕಾಂತಾ ಅವರನ್ನು ಓಪೆಕ್ ಆಸ್ಪತ್ರೆಯಿಂದ ಬಂದ ಮೇಲೆ ಸಮಸ್ಯೆ ಬಗೆಹರಿಸುತ್ತೇನೆ ಎಂದೆಳಿ ಕರೆಯಿಸಿಕೊಂಡ ಮುಖ್ಯ ಮಂತ್ರಿ ಮತ್ತದೆ ರಾಗ ಹಾಡಿ ವಾಪಾಸು ಕಳಿಸಿದ್ದಾರೆ. ಇದರಿಂದ ವ್ಯಗ್ರರಾದ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರು ಸಂಬಳ ಕೊಡಿ ಇಲ್ಲವೆ ವಿಷ ನಡಿ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಪಾಲಿಕೆ ಅಧಿಕಾರಿಗಳಿಗೆ ದಿಗ್ಭಂದನೆ ಚಳುವಳಿ ಶುರುಮಾಡಿದ್ದಾರೆ. ಆದರೆ ಸರಕಾರ ಮಾತ್ರ ಮೊಂಡು ಹಟಕ್ಕೆ ಬಿದ್ದು ಕಾಂತಾ ಮತ್ತವರ ಬೆಂಬಲಿಗರನ್ನು ಜೈಲಿಗೆ ತಳ್ಳುವ ಮೂಲಕ ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಇದು ಹೀಗೆ ಮುಂದುವರೆದುದೆ ಆದರೆ ಗುಲಬಗರ್ಾ ಹೊತ್ತಿ ಉರಿಯುವುದರಲ್ಲಿ ಯಾವುದೆ ಅನುಮಾನವಿಲ್ಲ.

No comments:

Post a Comment

Thanku