Wednesday, January 5, 2011

ದೇವದುರ್ಗ : ಅಜರ್ುನದಗರ್ೆಯನ್ನು ಮೀರಿಸುತ್ತಿರುವ ಹನುಮಂತಪ್ಪ!



ದೇವದುರ್ಗ : ಅಜರ್ುನದಗರ್ೆಯನ್ನು ಮೀರಿಸುತ್ತಿರುವ ಹನುಮಂತಪ್ಪ!ದೇವದುರ್ಗ ತಾಲೂಕಿನ ಅರಣ್ಯ ಇಲಾಖೆಯ ಹಗಲುಲೂಟಿಯ ಕುರಿತು ಈ ಹಿಂದೆ ನಮ್ಮ ಪತ್ರಿಕೆ ಸವಿಸ್ತಾರವಾದ ವರದಿಯೊಂದನ್ನು ಮಾಡಿತ್ತು. ಅಂದಿನ ಅರಣ್ಯಧಿಕಾರಿ ಅಜರ್ುನದಗರ್ೆಯ ಹಲವು ದಂಧೆಗಳ ವಿವರಣಿಯನ್ನು ನೀಡಲಾಗಿತ್ತು. ಪತ್ರಿಕೆಯ ವರದಿ ನಂತರ ಎಚ್ಚೆತ್ತ ಇಲಾಖೆ ಆತನನ್ನು ಅಲ್ಲಿಂದ ವರ್ಗ ಮಾಡಿತ್ತು.ನಂತರದ ದಿನಗಳಲ್ಲಿ ಅದೇ ಇಲಾಖೆಗೆ ದಕ್ಷ, ಪ್ರಾಮಾಣಿಕ ಅಧಿಕಾರಿಯೊಬ್ಬರು ಅಲ್ಲಿಗೆ ಬಂದಿದ್ದರೆ, ನಾವಿಂದು 500ಶಬ್ದಗಳ ಸುದ್ದಿಯನ್ನು ಬರೆಯುವ ಅವಶ್ಯಕತೆ ಇದ್ದಿಲ್ಲ. ಆದರೆ, ಅಜರ್ುನ ದಗರ್ೆಯ ಜಾಗಕ್ಕೆ ಆತನಿಗಿಂತ ಖದೀಮನೊಬ್ಬ ಹನುಮಂತಪ್ಪನೆಂಬ ಅಧಿಕಾರಿ ಬಂದು ಕುಳಿತಿದ್ದಾನೆ.ಎಲ್ಲದರಲ್ಲಿಯೂ ದಗರ್ೆಯವರನ್ನು ಮೀರಿಸುತ್ತಿರುವ ಹನುಮಂತಪ್ಪ ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಕಂಕಣಬದ್ದವಾಗಿ ಶೆಟೆದು ನಿಂತಿದ್ದಾನೆ. ಅರಣ್ಯ ಇಲಾಖೆಯ ಕಾರ್ಯವೈಖರಿ, ಆಡಳಿತ, ಮತ್ಯಾವದನ್ನು ಸರಿಯಾಗಿ ಗ್ರಹಿಸಿಕೊಂಡಿರದ ಹನುಮಂತಪ್ಪ ಅರಣ್ಯ ಇಲಾಖೆಯನ್ನು ವ್ಯವಸ್ಥಿತವಾಗಿ ವಿನಾಶದಂಚಿಗೆ ದೂಡುತ್ತಿದ್ದಾನೆ.ದೇವದುರ್ಗ ತಾಲೂಕಿನ ಫಲವತ್ತಾದ ಅರಣ್ಯಭೂಮಿಯನ್ನು ರಕ್ಷಣಿ ಮಾಡುವುದು ನನ್ನ ಕರ್ತವ್ಯ ಎಂದು ಮೊದಲಿಗೆ ಬಂದಾಗ ಇದೇ ಹನುಮಂತಪ್ಪನವರು ಹೇಳಿದ್ದರು. ಆದರೆ, ಇಂದು ಅದೆಲ್ಲವನ್ನು ಮರೆತಿರುವ ಹನುಮಂತಪ್ಪ ಅರಣ್ಯ ಹಾಳುಮಾಡುವುದು ಕೂಡ ನನ್ನ ಆಧ್ಯ ಕರ್ತವ್ಯ ಎನ್ನುತ್ತಿದ್ದಾನೆ.!ಕಲ್ಲು, ಮಣ್ಣು, ಮರದ ತುಂಡುಗಳಿಗೆ ಸರಿಯಾಗಿ ರೇಟ್ನ್ನು ಫೀಕ್ಸ್ಮಾಡಿಕೊಂಡು ದಲ್ಲಾಳಿಗಳ ಮುಖಾಂತರ ಸ್ಥಳೀಯ ಸಾಮಿಲ್ಗಳಿಗೆ ಮಾರಾಟ ಮಾಡುತ್ತಿದ್ದಾನೆ. 1000ಕ್ಕೆ 1ಟ್ರಿಪ್ ಕಲ್ಲುಗಳು ಹೊರಗಡೆ ಸಿಗುತ್ತಿದ್ದರೆ, ಹನುಮಂತಪ್ಪನವರು ಕೇವಲ 500ಗಳಿಗೆ ಟ್ರಿಪ್ಗಳಿಗೆ ಮಾರುತ್ತಿದ್ದಾನೆ. ಈತನನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ತಮಗೆ ಗೊತ್ತಿದ್ದರೂ ಮೂಕಪ್ರೇಕ್ಷಕರಾಗಿ ಕುಳಿತಿದ್ದಾರೆ.ಹನುಮಂತಪ್ಪನವರು ಪ್ರತಿನಿತ್ಯ ಪ್ರಾಮಾಣಿಕವಾಗಿ ಗಸ್ತು ತಿರುಗುವದನ್ನು ನೋಡಿದರೆ, ಕೆಲವರಿಗೆ ಆಶ್ಚರ್ಯವಾಗುತ್ತದೆ. ಆದರೆ ಸಾಹೇಬರು ತಿರುಗುವುದು ರಕ್ಷಣಿಗಲ್ಲ. ಯಾವ್ಯಾವ ಮರ, ಕಲ್ಲು, ಮಣ್ಣನ್ನು ಎಷ್ಟೆಷ್ಟಕ್ಕೆ ಮಾರಬೇಕೆಂಬುದಕ್ಕೆ. ಕಾನೂನು ಬದ್ದವಾಗಿ ಕೆಲಸ ಮಾಡಿದಂತೆ ಕಾನೂನು ಬಾಹಿರವಾಗಿ ದೇವದುರ್ಗದಲ್ಲಿ ಕೆಲವೊಬ್ಬರು ಮರ, ಗಿಡಗಳನ್ನು ಕಡಿದುಳಿಸುತ್ತಾರೆ. ಹನುಮಂತಪ್ಪನವರು ಪುಡಿ ಕಾಸಿಗಾಗಿ ಇತಿಹಾಸ ಹೇಳುವ ಕಲ್ಲುಬಂಡೆಗಳನ್ನು ಮಾರುತ್ತಿದ್ದಾರೆ. ಪರಿಸರ, ಅರಣ್ಯದ ಉಳಿವಿಗಾಗಿ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಸಕರ್ಾರ ಅರಣ್ಯವನ್ನು ಬೆಳೆಸಲು, ಉಳಿಸಲು ಕೋಟಿಗಟ್ಟಲೇ ಹಣವನ್ನು ಖಚರ್ುಮಾಡುತ್ತಿದೆ. ಆದರೆ, ಹಗಲುಲೂಟಿಗೆ ನಿಂತಿರುವ ಹನುಮಂತಪ್ಪನಂತವರು ಯಾವುದನ್ನು ಲೆಕ್ಕಿಸದೇ ಬರೀ ದುಡ್ಡು ಮಾಡುವಲ್ಲಿಯೇ ಬ್ಯುಸಿಯಾಗಿದ್ದಾರೆ. ಇಂತವರಿಂದ ನಮ್ಮ ಅರಣ್ಯ ಸಂಪತ್ತು ನಾಶವಾಗುತ್ತಿದೆ,ಹೋಗೆ ಪಿಶಾಚಿ ಎಂದರೆ ಬಂದೆ ಗವಾಕ್ಷಿ ಎಂಬಂತೆ ಹನುಮಂತಪ್ಪ ಅಜರ್ುನದಗರ್ೆಯ ಇನ್ನೊಂದು ಮುಖವಾಗಿ ಬಂದಿದ್ದಾನೆ. ಈತನ ಕಛೇರಿಯ ಸಿಬ್ಬಂದಿಗಳು ಹೇಳುವ ಪ್ರಕಾರ ಸಾಹೇಬರು ಸಕ್ರಮಕ್ಕಿಂತ ಅಕ್ರಮ ಕೆಲಸಗಳನ್ನೇ ಜಾಸ್ತಿ ಮಾಡಿಕೊಡುತ್ತಾರಂತೆ. ಒಂದರ್ಥದಲ್ಲಿ ಹನುಮಂತಪ್ಪನ ಕೆಲಸ ಸರಿ ಎನಿಸುತ್ತದೆ. ಯಾಕೆಂದರೆ, ಸಕ್ರಮ ಕೆಲಸಗಳನ್ನು ಮಾಡಿದರೆ, ಮಾಮೂಲಿ ಬರುವುದಿಲ್ಲ. ಆದಾಯ ಸಿಗುವುದಿಲ್ಲ. ಬರೀ ಸಂಬಳ ಮಾತ್ರ ಸಿಗುತ್ತದೆ. ಆದರೆ, ಅಕ್ರಮ ಕೆಲಸಗಳನ್ನು ಮಾಡುತ್ತಾ ಹೋದರೆ, ಸಂಬಳ, ಗಿಂಬಳ, ಎರಡು ಸಿಗುತ್ತದೆ. ಆ ಕಾರಣಕ್ಕಾಗಿ ಸಾಹೇಬರು ಅಕ್ರಮಗಳಿಗೆ ಹೆಚ್ಚು ಒತ್ತು ಕೊಡುತ್ತಿರಬೇಕು.ಹನುಮಂತಪ್ಪ ಅರಣ್ಯಕ್ಕೆ ಹಾಜರ್, ಕಛೇರಿಗೆ ಚಕ್ಕರ್!ಸಾಹೇಬರು ಯಾವಾಗ ನೋಡಿದರೂ ರಜೆ, ಕರ್ತವ್ಯದ ಮೇಲೆ ತೆರಳಿರುತ್ತಾರೆ. ಇಲಾಖೆಯ ಕುರಿತು ನಾವೇನಾದರೂ ಮಾಹಿತಿ ಕೇಳಲು ಹೋದರೆ ಯೊರೊಬ್ಬರು ಕಛೇರಿಯಲ್ಲಿಯೇ ಇರುವುದಿಲ್ಲ. ಸಿಬ್ಬಂದಿಗಳನ್ನು ಕೇಳಿದರೆ ಸಾಹೇಬರು ಅರಣ್ಯದಲ್ಲಿರುತ್ತಾರೆ. ಕಛೇರಿಗೆ 5ರನಂತರ ಬರುತ್ತಾರೆ ಹೇಳುತ್ತಾರೆ. ಒಂದೊಮ್ಮೆ ಹನುಮಂತಪ್ಪ ಕಛೇರಿಯಲ್ಲಿ ಸಿಕ್ಕರೂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಕಾರಣ ತಮ್ಮ ಬಂಡವಾಳ ಎಲ್ಲಿಗೆ ಬಯಲಿಗೆ ಬರುತ್ತಿದೆಂದು ಜಾಸ್ತಿ ಏನನ್ನಾದರೂ ಕೇಳಲು ಹೋದರೆ, ನಿಮ್ಮನ್ನು ಇಲ್ಲಿಗೆ ಬರಲು ಯಾರು ಹೇಳಿದ್ದರು? ಅರಣ್ಯ ರಕ್ಷಣಿಯ ಕುರಿತು ಮಾತನಾಡಲು ನಿಮಗ್ಯಾವ ನೈತಿಕತೆ ಇದೆ? ಅರಣ್ಯ ಕಾಯಲು ಸಕರ್ಾರ ನನ್ನನ್ನು ಬಿಟ್ಟಿದೆ. ನನಗೆ ಇಲಾಖೆಯನ್ನು ಹೇಗೆ ಮೆಂಟೆನ್ ಮಾಡಬೇಕೆಂದು ಗೊತ್ತಿದೆ. ನನ್ನ ಮೇಲೆ ನಮ್ಮ ಮೇಲಾಧಿಕಾರಿಗಳಿಗೆ ನಂಬಿಕೆ ಇದೆ. ನೀವ್ಯಾರು ಉಪದೇಶ ಮಾಡುವುದಕ್ಕೆ ಬರಬೇಡಿ...ಹೋಗಿ ಎಂದು ಅವಾಜ್ ಹಾಕುತ್ತಾನೆ.ಇಂತಹ ಹನುಮಂತಪ್ಪನೆಂಬ ಅರಣ್ಯಾಧಿಕಾರಿ ಇನ್ನು ಸ್ವಲ್ಪ ದಿನ ದೇವದುರ್ಗದಲ್ಲಿದ್ದರೆ, ತಾಲೂಕಿನ ಯಾವೊಂದು ಬೆಟ್ಟ, ಅರಣ್ಯಪ್ರದೇಶಗಳು ಉಳಿಯುವುದಿಲ್ಲ.ತಾಲೂಕಿನ ಪರಿಸರ ಪ್ರೇಮಿಗಳು, ಪ್ರಗತಿಪರ ಸಂಘಟನೆಗಳು ಈತನ ಲೂಟಿಕೋರತನದ ವಿರುದ್ದ ಹೋರಾಡಬೇಕಾದದ್ದು ಅನಿವಾರ್ಯ. ಇಲ್ಲವೆಂದರೆ, ಅರಣ್ಯ ಸಂಪತ್ತಿಗೆ ಆಪತ್ತು ಕಾದಿದೆ ಎಂದೇ ಅರ್ಥ

No comments:

Post a Comment

Thanku