Wednesday, January 5, 2011

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಡಾ. ಬಾಬು ಜಗಜೀವನರಾಮ್ರವರು ಸ್ಥಾಪಿಸಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ತನ್ನ 26ನೇ ರಾಷ್ಟ್ರೀಯ ದಲಿತ ಬರಹಗಾರರ ಸಮ್ಮೇಳನವನ್ನು ಡಿಸೆಂಬರ್ 11-12ರಂದು ನವದೆಹಲಿಯ ಜೋರ್ಡಾ ಪಂಚಶೀಲಾ ಆಶ್ರಮದಲ್ಲಿ ನಡೆಸಿತು.ಶ್ರೀ ಮಹಾರಾಜ್ ಶಿರೋಹಿ ರಘುವೀರ್ಸಿಂಗ್ ದೇವುಡಾರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ಅಂಬೇಡ್ಕ್ರವರು ಹಿಂದುಕೋಡ್ ಬಿಲ್ ಪ್ರಕರಣದಲ್ಲಿ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ರಘುವೀರ್ಸಿಂಗ್ರವರ ತಂದೆಯವರಾದ ಶ್ರೀ ಮಹಾರಾಜ್ ಶಿರೋಹಿಯವರು ತಮ್ಮ ಬಂಗಲೆಯನ್ನು ಅಂಬೇಡ್ಕರವರಿಗೆ ಉಚಿತವಾಗಿ ನೀಡಿ ಮಾನವೀಯತೆ ಮೆರೆದಿದ್ದರು. ಆ ಬಂಗಲೆಯೇ ಇಂದು ನವದೆಹಲಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ರವರ ರಾಷ್ಟ್ರೀಯ ಸ್ಮಾರಕ ಭವನವಾಗಿ ಉಳಿದುಕೊಂಡಿದೆ. ಸಮ್ಮೇಳನದಲ್ಲಿ ಜಾರ್ಖಂಡ್ನ ಉಪಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಚಿವರನೇಕರು ಭಾಗವಹಿಸಿದ್ದರು.ಸಮ್ಮೇಳನದ ಮೊದಲ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಅಂಬೇಡ್ಕರ್ ಅಂತರಾಷ್ಟ್ರೀಯ ಪ್ರಶಸ್ತಿ ಅಂಬೇಡ್ಕರ ರಾಷ್ಟೀಯ ಪ್ರಶಸ್ತಿ ಅಂಬೇಡ್ಕರ್ ವಿಶಿಷ್ಟಸೇವಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅಂಬೇಡ್ಕರ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಮಾರೀಷ್ನ ಡಾ.ಶ್ರೀಮತಿ ಸರಿತಾ ಬುದ್ರಾ ಮತ್ತು ನೇಪಾಳ ರಾಜ್ಯದ ಟೆಕ್ಬಹದ್ದೂರ್ ರಾಯಿಕಾ ಅವರಿಗೆ ನೀಡಲಾಯಿತು. ಜೊತೆಯಲ್ಲಿ ಕನರ್ಾಟಕ ರಾಜ್ಯದಿಂದ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಸಿಲ್ಕ್ಬೋಡರ್್ನ ಅಧ್ಯಕ್ಷ ಮತ್ತು ಅಖಿಲಭಾರತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷರಾದ ಹೆಚ್ ಹನುಮಂತಪ್ಪನವರಿಗೆ ನೀಡಲಾಯಿತು (ಅವರ ಅನುಪಸ್ಥಿತಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರಾದ ರಾಮಣ್ಣ ಆರ್.ಜೆರವರು ಸ್ವೀಕರಿಸಿದರು).ಸಮ್ಮೇಳನದಲ್ಲಿ ದೇಶದ ಎಲ್ಲಾ ರಾಜ್ಯಗಳ ಗಣ್ಯವ್ಯಕ್ತಿಗಳಿಗೆ ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತ್ತಿ, ಮಹಾತ್ಮ ಜೋತಿಬಾ ಫುಲೆ ಪ್ರಶಸ್ತಿ, ಮಹಿಳೆಯರಿಗೆ ಸಾವಿತ್ರಿಬಾಯಿ ಫೆಲೋಶಿಪ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ದಕ್ಷಿಣ ಭಾರತದಿಂದ ಸುಮಾರು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.ಸಮ್ಮೇಳನದ 2ನೇ ದಿನ ದೇಶದ ಎಲ್ಲ ರಾಜ್ಯ ಘಟಕಗಳ ರಾಜ್ಯಧ್ಯಕ್ಷರು ಮತ್ತು ಪಧಾಧಿಕಾರಿಗಳು ದೇಶದಲ್ಲಿ ದಲಿತರ ಮೇಲೆ ಜರುಗುವ ದೌರ್ಜನ್ಯ ಮತ್ತು ದಲಿತರಿಗಿರುವ ಜ್ವಲಂತ ಸಮಸ್ಯೆಗಳು, ಮೀಸಲಾತಿ, ಅಸ್ಪೃಶ್ಯತೆ, ಕುರಿತೆಲ್ಲ ಸುಧೀರ್ಘವಾಗಿ ಚಚರ್ಿಸಿ ಇವುಗಳನ್ನು ತಡೆಯಲು ದಲಿತ ಸಾಹಿತ್ಯ ಅಕಾಡೆಮಿ ಯಾವ ರೀತಿಯ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತೀಮರ್ಾನಿಸಲಾಯಿತು.ಕೊನೆಗೆ ಚಚರ್ೆಯಲ್ಲಿ ಮುಂಬರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು 2011ರ ಎಪ್ರೀಲ್ ತಿಂಗಳಿನಲ್ಲಿ ಕನರ್ಾಟಕದಲ್ಲಿ ನಡೆಸಲು ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಸೋಹನ್ಪಾಲ್ ಸುಮಾನಕ್ಷರವರು ಒಪ್ಪಿಗೆ ಸೂಚಿಸಿದರು. 2ದಿನಗಳ ವರೆಗೆ ಈ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಈಗಿನಿಂದಲೇ ಕಾರ್ಯಚಟುವಟಿಕೆಗಳನ್ನು ಮಾಡಬೇಕೆಂದು ನಿರ್ಣಯಿಸಲಾಯಿತು.ರಾಮಣ್ಣ ಆರ್.ಹೆಚ್.ಜೆ ರಾಜ್ಯಾಧ್ಯಕ್ಷರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕನರ್ಾಟಕ ಘಟಕ.

No comments:

Post a Comment

Thanku