Thursday, October 27, 2011

ವೆಂಕಟೇಶ ಬೇವಿನಬೆಂಚಿಯವರಿಗೆ, "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್"

ಬಡತನವು ನಮ್ಮನ್ನು ದುಖಿಃತರನ್ನಾಗಿ ಹಾಗೆಯೇ ಬುದ್ದಿವಂತರನ್ನಾಗಿ ಮಾಡುತ್ತದಂತೆ - ಬ್ರೈಕ್

ಬಡತನ ಮತ್ತು ಕಷ್ಟದ ದಿನಗಳನ್ನು ಸ್ಪೂತರ್ಿ ಯಾಗಿಸಿಕೊಂಡು ಹಲವಾರು ಸಾಧನೆಗಳನ್ನು ಮಾಡಿದ ವೆಂಕಟೇಶ ಬೆವಿನಬೆಂಚಿಯವರಿಗೆ 2011/12ರ ಸಾಲಿನ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ಲಭಿಸಿದೆ. ವೆಂಕಟೇಶ್ ಬೆವಿನಬೆಂಚಿಯವರು ದಿನಾಂಕ 01/06/1982ರಲ್ಲಿ ತಂದೆ ತಿಪ್ಪಯ್ಯ ನರಸಮ್ಮ ದಂಪತಿಗಳ ಮಗನಾಗಿ ಜನಿಸಿದರು. ಸದರಿ ಗ್ರಾಮವು ರಾಯಚೂ ರಿನಿಂದ ಸುಮಾರು 30 ಕಿ.ಮೀ ಅಂತರದಲ್ಲಿದೆ. ಈ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 63 ವರ್ಷಗಳು ಸಂದರೂ ಕುಡ ಇನ್ನೂ ಸಕರ್ಾರಿ ಬಸ್ಸಿನ ವ್ಯವಸ್ಥೆಯಿಲ್ಲ ಮತ್ತು ಕಳೆದ ಏಳೆಂಟು ವರ್ಷಗಳಿಚೆಗೆ ಈ ಗ್ರಾಮವು ವಿದ್ಯುತ್ನ್ನು ಕಂಡಿದೆ.

ಈ ಗ್ರಾಮದಲ್ಲಿ ಸಮರ್ಪಕವಾದ ಕುಡಿಯುವ ನೀರಿಲ್ಲ, ಆಳುದ್ದ ಗುಂಡಿ ಬಿದ್ದ ರಸ್ತೆಗಳು, ಒಟ್ಟಾರೆ ಈ ಊರು ಕುಗ್ರಾಮವಾಗಿ ಪರಿಣಮಿಸಿದೆ. ಇಂತಹ ಗ್ರಾಮದಲ್ಲಿ ಅರಳಿದ ಪ್ರತಿಭೆ ವೆಂಕಟೇಶ್ 11 ಡಿಸೆಂಬರ್ 2011ರಂದು ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಮ್ಮೇಳನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆಂದರೆ, ಸಾಮಾನ್ಯವಾದದ್ದೇನಲ್ಲ. ವೆಂಕಟೇಶ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸುಗ್ರಾಮದಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಜೇಗರಕಲ್ನಲ್ಲಿ ಪಡೆದರು. ಸಮಾಜಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟೇಲ್ನಲ್ಲಿ ಅಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವೆಂಕಟೇಶ ನಂತರ ರಾಯಚೂರಿನ ಠ್ಯಾಗೋರ್ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. ಬಿ.ಎ ಪದವಿ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಮುಂದುವರೆಸಿ, ಪದವಿಯಲ್ಲಿಯೂ ಪ್ರಥಮ ದಜರ್ೆಯಲ್ಲಿ ಉತ್ತೀರ್ಣರಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದರು.

ಇವರು ಓದುವ ರೀತಿಯನ್ನು ನೋಡಿ, ಊರಿನ ಜನ ತಮ್ಮ ಮಕ್ಕಳಿಗೆ ಇವರ ಉದಾಹರಣೆಯನ್ನು ನೀಡಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಹೇಳುತ್ತಿದ್ದರಂತೆ. ವೆಂಕಟೇಶ ಮುಂದೊಂದು ದಿನ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುತ್ತಾರೆಂದು ಊರಿನ ಜನತೆ ಅಂದಾಜಿಸಿದ್ದರು. ಇದೀಗ ವೆಂಕಟೇಶ ಅದನ್ನು ಸಾಬೀತು ಮಾಡಿದ್ದಾರೆ.

ಪದವಿ ಶಿಕ್ಷಣ ಮುಗಿಸಿದ ನಂತರ ಬಿ.ಇಡಿ ಶಿಕ್ಷಣ ಪಡೆದು ಶಿಕ್ಷಕರಾಗಿ ಮಕ್ಕಳಿಗೆ ತಮ್ಮ ಜ್ಞಾನವನ್ನು ಧಾರೆಯರೆಬೇಕೆಂದು ಅಂದುಕೊಂಡಾಗ ಬಿ.ಇಡಿ ಶಿಕ್ಷಣ ಪಡೆಯಲು ಸಕರ್ಾರಿ ಸೀಟು ಸಿಗಲೇ ಇಲ್ಲ. ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದು ಬಿ.ಇಡಿ ಮಾಡಲೂ ಆಗಲಿಲ್ಲ. ಯಾಕೆಂದರೆ, ಮೊದಲೇ ವೆಂಕಟೇಶ ದಲಿತ ಕುಟುಂಬದಿಂದ ಬಂದಂತವರು. ಕಿತ್ತು ತಿನ್ನುವ ಬಡತನ ಬೇರೆ. ಒಪ್ಪತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಅವರದ್ದಾಗಿತ್ತು. ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ ಹಾಗೂ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇವರ ಮೇಲಿದ್ದರಿಂದ ಶಿಕ್ಷಕರಾಗುವ ಕನಸು ಕನಸಾಗಿಯೇ ಉಳಿಯಿತು.

ಕುಟುಂಬ ನಿರ್ವಹಣೆ ಜೊತೆಯಲ್ಲಿ ಮುಂದಿನ ಶಿಕ್ಷಣಕ್ಕಾಗಿ ಬೇಕಾಗುವ ಹಣದ ವ್ಯವಸ್ಥೆಯನ್ನು ಮಾಡಿಕೊಳ್ಳಲು ವೆಂಕಟೇಶ ರಾಯಚೂರಿನ ಆಕಾಶ ವಾಣಿಯಲ್ಲಿ ಅರೆಕಾಲಿಕ ನೌಕರರಾಗಿ ಸೇರಿಕೊಂಡರು. ಹಾಗೆ ಒಂದು ವರ್ಷ ಬಹಳ ಚುರುಕಾಗಿ ಕಾರ್ಯ ನಿರ್ವಹಿಸಿ, ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಧ್ಯಮಗಳ ವಿಷಯವನ್ನು ಅರಿತು, ಪತ್ರಿಕೋದ್ಯಮದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು.

ಕೆಲವು ದಿನಗಳ ನಂತರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬೆಂಗಳೂರು ವಿವಿಗೆ ಅಜರ್ಿಯನ್ನು ಸಲ್ಲಿಸಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶದಲ್ಲಿ ಪಾಸಾಗಿದ್ದರೂ ಕೂಡ ದಲಿತ ಎಂಬ ಒಂದೇ ಕಾರಣಕ್ಕೆ ಪ್ರವೇಶಾತಿಗೆ ಅನುಮತಿ ನೀಡಲಿಲ್ಲ. ನಂತರ ಅದೇ ಪದವಿಗೆ ಮಂಗಳೂರು ವಿವಿಯಲ್ಲಿ ಪ್ರಯತ್ನಿಸಿದರೂ ಕೂಡ ಜಾತಿ ಕಾರಣಕ್ಕೆ ಪ್ರವೇಶ ಸಿಗಲಿಲ್ಲ. ಮತ್ತೇ ಬೆಂಗಳೂರು ವಿವಿಯಲ್ಲಿ ಒಂದು ವರ್ಷದ ನಂತರ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಗೆ ಪ್ರವೇಶದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಕ್ಕೆ ಎಂ.ಎಸ್.ಸಿ (ವಿದ್ಯುನ್ಮಾನ ಮಾಧ್ಯಮ) ಅಭ್ಯಾಸ ಮಾಡಲು ಪ್ರವೇಶಾತಿ ದೊರೆಯಿತು.

ಬೆಂಗಳೂರು ವಿವಿಯಲ್ಲಿ ಅಭ್ಯಾಸ ಮಾಡುವಾಗ ಬುಡ್ಗೆ ಜಂಗಮ (ದಲಿತರ) ಬಗ್ಗೆ ಒಂದು ಅದ್ಬುತ ಸಾಕ್ಷ್ಯ ಚಿತ್ರವನ್ನು ಮಾಡಿದ್ದಾರೆ.

ವೆಂಕಟೇಶರ ಹುಟ್ಟೂರಿನಲ್ಲಿ ಇದುವರೆಗೂ ಯಾರೊಬ್ಬರು ಸ್ನಾತಕೋತ್ತರ ಪದವಿಯನ್ನು ಪಡೆದಿಲ್ಲ! ಹೀಗಾಗಿ ಮೊಟ್ಟಮೊದಲಿಗೆ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ವೆಂಕಟೇಶ ಅವರಿಗೆ ಸಲ್ಲುತ್ತದೆ. ಪ್ರಾಥಮಿಕ ಶಿಕ್ಷಣದಿಂದಿಡಿದು ಪದವಿಯವರೆಗೆ ಹಾಸ್ಟೇಲ್ಗಳಲ್ಲಿಯೇ ವೆಂಕಟೇಶರು ತಮ್ಮ ವಿದ್ಯಾಬ್ಯಾಸವನ್ನು ಮುಗಿಸಿದರು.

ಬಡತನ ಹೆಚ್ಚಿದ್ದರಿಂದ ಅವರ ಸ್ನಾತಕೋತ್ತರ ಪದವಿ ಮುಗಿದ ತಕ್ಷಣವೇ 2006ರಲ್ಲಿ ಟಿವಿ 9 ಖಾಸಗಿ ಚಾನೆಲ್ನಲ್ಲಿ ಸುದ್ದಿ ಸಂಪಾದಕರಾಗಿ ಸೇರಿಕೊಂಡರು. ನಂತರ ಹಲವಾರು ಕಾರಣಗಳಿಂದ ಟಿವಿ 9 ಚಾನೆಲ್ ಬಿಟ್ಟು 2008 ರಿಂದ ಸುವರ್ಣ ಚಾನೆಲ್ನಲ್ಲಿ ಕಾರ್ಯನಿರ್ವಹಿಸಿದರು. ನಂತರ ಅದೇ ವರ್ಷ ಕೇಂದ್ರ ಸಕರ್ಾರದ ಒಡೆತನದಲ್ಲಿರುವ ರಾಯಚೂರು ಆಕಾಶವಾಣಿಯಲ್ಲಿ ಕಾರ್ಯನಿವರ್ಾಹಕರಾಗಿ ಕೇಂದ್ರಸಕರ್ಾರದ ಸೇವೆಗೆ ಸೇರಿಕೊಂಡರು. ಪ್ರಸ್ತುತ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಇಲಾಖೆ ನಡೆಸುವ ಹತ್ತಾರು ಶಿಬಿರಗಳಲ್ಲಿ ಭಾಗವಹಿಸುತ್ತಾ, ಸಾರ್ವಜನಿಕವಾಗಿ ಕೇಳುಗರು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು. ಜನಸಾಮಾನ್ಯರಿಗೆ ಸಮಾಜದ ಕುರಿತು ಎಂತಹ ತಿಳುವಳಿಕೆಗಳನ್ನು ಹೇಳಬೇಕೆಂಬುದನ್ನು ಈಗಾಗಲೇ ಕರಗತ ಮಾಡಿಕೊಂಡಿದ್ದಾರೆ.

ಪ್ರತಿವರ್ಷ ದೆಹಲಿ, ಪುನಾ, ಭುವನೇಶ್ವರಿ, ತ್ರಿವೇಂಡ್ರಂ ದೇಶದ ಇನ್ನಿತರ ರಾಜಧಾನಿಗಳಲ್ಲಿ ನಡೆಯುವ ವಿಚಾರ ಸಂಕಿರಣ, ಕಾರ್ಯಗಾರಗಳಲ್ಲಿ ಭಾಗವಹಿಸಿ ತಮ್ಮ ವೃತ್ತಿಪರತೆಯನ್ನು ಪ್ರದಶರ್ಿಸುತ್ತಿದ್ದಾರೆ.

ಯಾವ ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು ಬಡತನ ಮತ್ತು ಹಸಿವು ಕಲಿಸುತ್ತವೆ. ಹಾಗಾಗಿ ವೆಂಕಟೇಶರವರು ಬಡತನ ಮತ್ತು ಹಸಿವು ಕಲಿಸಿದ ಪಾಠಗಳಿಂದ ಪ್ರೇರಣಿಗೊಂಡು ಕೇಂದ್ರಸಕರ್ಾರದ ವೃತ್ತಿಯಲ್ಲಿದ್ದುಕೊಂಡೇ ಶೋಷಣೆಗೊಳಗಾದ ಸಮುದಾಯಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾಗುವಷ್ಟು ಸಹಕಾರವನ್ನು ಮಾಡುತ್ತಾ ಬಂದಿದ್ದಾರೆ.

ವೆಂಕಟೇಶರಿಗೆ ಸಂಘಟನೆಯಲ್ಲಿ ವರ್ಗಕಲ್ಪನೆ ಇತ್ತು. ಹಾಗಾಗಿ ಅವರು ಸಮಾಜದ ಹೋರಾಟಗಳಿಗಿಂತ ವರ್ಗಹೋರಾಟಗಳಿಗೆ ಹೆಚ್ಚು ಆಸಕ್ತಿ ನೀಡುತ್ತಿದ್ದರು. 2000ರಲ್ಲಿ ಕಂಬಾಲಪಲ್ಲಿಯಲ್ಲಿ ನಡೆದ ನರಮೇಧವನ್ನು ವಿರೋಧಿಸಿ ರಾಯಚೂರಿನಲ್ಲಿ ಪ್ರತಿಭಟನೆ ನಡೆದಾಗ ವಿದ್ಯಾಥರ್ಿ ಸಂಘಟನೆಯಿಂದ ವೆಂಕಟೇಶ ಬಹುಮುಖ್ಯ ಪಾತ್ರ ವಹಿಸಿದ್ದರು.

ಇಂದು ಜಾಗತೀಕರಣ ಪ್ರಭಾವದಿಂದ ದಲಿತ ಚಳುವಳಿಗಳು, ಪ್ರಗತಿಪರ ಹೋರಾಟಗಳು ಕುಂಠಿತಗೊಳ್ಳುತ್ತಿವೆ. ಆದರೆ, ವೆಂಕಟೇಶರವರು ಶೋಷಿತ ಸಮುದಾಯಗಳು ಅನುಭವಿಸುವ ನೋವನ್ನು ತಮ್ಮದೇ ದೃಷ್ಟಿಕೋನದಿಂದ ಅವಲೋಕಿಸಿ ಪರಿಹಾರಗಳನ್ನು ಹುಡುಕಿ ಕೊಡುತ್ತಾರೆ. ಜಿಲ್ಲೆಯಲ್ಲಿ ಅದೆಷ್ಟೋ ವಿದ್ಯಾಥರ್ಿಗಳು ಇವರ ನಾಯಕತ್ವದಲ್ಲಿ ಪಳಗಿ, ಇಂದು ನಾಯಕರಾಗಿದ್ದಾರೆ. ಇಡೀ ವ್ಯವಸ್ಥೆಯ ಬದಲಾವಣಿಗೆ ನಮ್ಮಿಂದಾದದ್ದನ್ನು ಕೊಡುಗೆ ನೀಡಲೇಬೇಕೆಂಬ ಮನೋಭಾವನೆ ಅವರಿಗಿದೆ.

ದಲಿತ ಸಮುದಾಯದ ಕಾಳಜಿ, ಅಭಿಮಾನ ಹಾಗೂ ಅವರ ಹೋರಾಟದ ಬದುಕನ್ನು ಪರಿಗಣಿಸಿ, ಈ ಬಾರಿ ನವದೆಹಲಿಯ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿ, 2011ನೇ ಸಾಲಿನ "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್" ನ್ನು ನೀಡಿ ಗೌರವಿಸುತ್ತಿದೆ.

ಡಿಸೆಂಬರ್ 11/12 ರಂದು ನವದೆಹಲಿಯಲ್ಲಿ ಲೋಕಸಭೆಯ ಸ್ಪೀಕರ್ ಮೀರಾಕುಮಾರಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವೆಂಕಟೇಶ ಇನ್ನು ಮುಂದಿನ ದಿನಗಳಲ್ಲಿಯೂ ಸಮಾಜದ ಅಭಿವೃದ್ಧಿಗಾಗಿ ಹೆಚ್ಚೆಚ್ಚು ಶ್ರಮಿಸಲಿ ಎಂದು ಈ ಸಂದರ್ಭದಲ್ಲಿ ಪತ್ರಿಕೆಯ ಬಳಗದ ವತಿಯಿಂದ ಹಾರೈಸೋಣ.

ನರಸಿಂಹ ಗುಂಜಳ್ಳಿ,
ಸಂಶೋಧನಾ ವಿದ್ಯಾಥರ್ಿ,
ಮಂಗಳೂರು ವಿಶ್ವವಿದ್ಯಾಲಯ

No comments:

Post a Comment

Thanku