Saturday, December 17, 2011

ಮಾಯಾವತಿಯವರ ಉತ್ತರಪ್ರದೇಶ ವಿಭಜನೆ ಯೋಜನೆಯಲ್ಲಿ ತಪ್ಪೇನಿದೆ..?

ಉತ್ತರ ಪ್ರದೇಶವನ್ನು 4 ರಾಜ್ಯಗಳನ್ನಾಗಿ ವಿಭಜಿಸಲು ಆ ರಾಜ್ಯದ ಮುಖ್ಯಮಂತ್ರಿ ಕು.ಮಾಯಾವತಿ ನಿರ್ಧರಿಸಿದ್ದಾರೆ ಒಂದರ್ಥದಲಿ ಮಾಯಾವತಿಯವರ ಈ ನಿಧರ್ಾರ ಎಲ್ಲರಿಗೂ ಆಶ್ಚರ್ಯಕರ. ಹಾಗೆ ಕೆಲವರಿಗೆ ಆಘಾತಕಾರಿಯಾಗಿಯೂ ಪರಿಣಮಿಸಿದೆ! ಅರೆರೆ..! ಇದೇನಿದು? ಮಾಯಾವತಿ ಸ್ವತಃ ತಾವು ಆಳ್ವಿಕೆ ನಡೆಸುತ್ತಿರುವ ದೇಶದ ಬೃಹತ್ರಾಜ್ಯವನ್ನು ಸ್ವತಃ ತಾವೇ ವಿಭಜಿಸಲು ಹೊರಟಿದ್ದಾರಲ್ಲ ಎಂದು ಕೆಲವರಿಗೆ ಆಶ್ಚರ್ಯಕರವೆನಿಸಿದರೆ. ಇನ್ನೂ ಕೆಲವರಿಗೆ ಇದೇನಿದು ಮಾಯಾವತಿಯವರ ಹೊಸ ವರಸೆ? ಇದನ್ನು ಬೆಂಬಲಿಸಬೇಕೋ ಬೇಡವೋ ಎಂಬ ಗೊಂದಲ ಕಾಡುತ್ತಿದೆ. ಅಂದಹಾಗೆ ಈ ಸಂಧರ್ಭದಲ್ಲಿ ಮಾಯಾವತಿಯವರ ಈ ನಿಧರ್ಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಯಾವತಿಯವರು ತಮ್ಮ ರಾಜ್ಯವನ್ನು ನಾಲ್ಕು ಹೋಳುಗಳಾಗಿ ವಿಭಜಿಸುವುದನ್ನು ಇದ್ದಕ್ಕಿದಂತೆ ಮಾಡಿದರೆ? ಯಾರನ್ನೋ ಗೊಂದಲಕ್ಕೆ ನೂಕಬೇಕು, ಆ ಗೊಂದಲದಲ್ಲಿ ತನ್ನ ಬೇಳೆ ಬೆಯಿಸಿಕೊಳ್ಳಬೇಕು ಎಂದು ಇದನ್ನು ಮಾಡಿದರೆ? ಎಂಬುವುವೇ ಆ ಪ್ರಶ್ನೆಗಳು. ಕಾರಣವಿಷ್ಟೆ ರಾಜ್ಯವನ್ನು 4 ಹೋಳುಗಳಾಗಿ ವಿಭಜಿಸಲು ನಿಧರ್ಾರಕೈಗೊಂಡು ಮಾರನೇ ದಿನಕ್ಕೆ ಎಲ್ಲರೂ ಹೇಳುತ್ತಿರುವುದು, ವಿಶೇಷವಾಗಿ ಮಾಯಾವತಿಯವರ ಶೈಲಿಯಲ್ಲೇ ಹೇಳುವುದಾದರೆ ಮನುವಾದಿಗಳು ಹೇಳುತ್ತಿರುವುದು ಆಢಳಿತ ವಿರೋಧಿ ಅಲೆಯಿಂದ ಹೊರಬರಲು ಭ್ರಷ್ಟಾಚಾರದ ಪ್ರಕರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು, ವಿರೋಧಿಗಳ ಬಾಯಿ ಮುಚ್ಚಿಸಲು ಮಾಯಾವತಿ ಈ ನಿಧರ್ಾರ ಕೈಗೊಂಡಿದ್ದಾರೆ. ಹಾಗೆ ಹೀಗೆ. ಒಂದಂತು ನಿಜ ಒಂದೊಂದು ಕಡೆಯಿಂದಲೂ ಒಂದೊಂದು ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ .ಆದರೆ? ಪ್ರಶ್ನೆ ಏನೆಂದರೆ ಇದೇ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದರೆ? ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಕ್ಷಣ ಉತ್ತರಪ್ರದೇಶವನ್ನು ನಾಲ್ಕು ರಾಜ್ಯವನ್ನಾಗಿ ವಿಭಜಿಸುವುದು ಎಂದು ರಾಹುಲ್ ಆಶ್ವಾಸನೆ ನೀಡಿದ್ದರೆ? ಖಂಡಿತ ಅದು ಚಾಣಾಕ್ಷ ನಿಧರ್ಾರವಾಗುತ್ತಿತ್ತು. ರಾಹುಲ್ ಬುದ್ಧಿವಂತ ರಾಜಕಾರಣಿ ಎನಿಸಿಕೊಳ್ಳುತ್ತಿದ್ದರು! ಆದರೆ ಈಗ? ಮಾಯಾವತಿಯವರ ಈ ದೂರದೃಷ್ಟಿಯ ನಿಧರ್ಾರಕ್ಕೆ ಕಲ್ಲೆಸೆಯುವ ಕೆಲಸ ನಡೆಯುತ್ತಿದೆ.
ಏನು ತೆಲಂಗಾಣ, ವಿಧರ್ಭ, ಗೂಖರ್ಾಲ್ಯಾಂಡ್ ಇತ್ಯಾದಿ ಪ್ರತ್ಯೇಕ ರಾಜ್ಯಗಳ ಬೇಡಿಕೆಗಳ ಹೋರಾಟಗಳಿಗೆಲ್ಲ ಇನ್ನಿಲ್ಲದ ಪ್ರಚಾರ, ಬೆಂಬಲ ನೀಡಲಾಗುತ್ತಿದೆಯೋ, ಅದೇ ಕೆಲಸವನ್ನು ದಲಿತ ಹೆಣ್ಣು ಮಗಳೊಬ್ಬಳು ಯಾವುದೇ ರಕ್ತಪಾತವಿಲ್ಲದೆ, ಪ್ರತಿಭಟನೆ, ರಸ್ತೆ ತಡೆ, ರೈಲುಗಳಿಗೆೆ ಬೆಂಕಿ ಹಚ್ಚುವುದು ಇತ್ಯಾದಿ ಪ್ರಭುತ್ವ ವಿರೋಧಿ ಕೃತ್ಯಗಳಿಲ್ಲದೆ ಮಾಡಿದರೆ ಅದರಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಡೆಯುತ್ತಿರುವುದು ದುರಂತವೇ ಸರಿ. ಮೇಲ್ಜಾತಿಗಳು ಒಳ್ಳೆಯ ಕೆಲಸ ಮಾಡಿದರೆ ಅದು ಶ್ರೇಷ್ಠ. ಅದೇ ಕೆಲಸವನ್ನು ಮಾಯಾವತಿಯಂತಹ ದಲಿತ ಹೆಣ್ಣು ಮಗಳು ಮಾಡುತ್ತಿರುವುದು ತಪ್ಪಾಗಿ ಕಾಣಿಸುತ್ತಿದೆ. ಅದೇನೆ ಇರಲಿ, ಮಾಯಾವತಿಯವರು ಮಾಡಹೊರಟಿರುವುದು ತಪ್ಪೇ? ಅವರ ಎದುರಾಳಿಗಳು ಬೆಹನ್ಜೀಯ ಆ ನಿಧರ್ಾರದ ವಿರುದ್ಧ ನೀಡುತ್ತಿರುವ ಸಬೂಬುಗಳು ಸರಿಯೇ? ಎಂಬುವು ಮಾತ್ರ ತುತರ್ಿನ ಪ್ರಶ್ನೆಗಳಾಗಿವೆ.

ಮೊದಲಿಗೆ ಉತ್ತರಪ್ರದೇಶವನ್ನು ನಾಲ್ಕು ರಾಜ್ಯಗಳನ್ನಾಗಿ ವಿಭಜಿಸುವ ಕನಸು ಮತ್ತು ಅಭಿಪ್ರಾಯ ಯಾರದ್ದಾಗಿತ್ತು ಎಂದು ತಿಳಿಯುವುದು ಸೂಕ್ತ. ವಾಸ್ತವವಾಗಿ ಮಾಯಾವತಿಯವರು ಹಿಂದೆ ಅಂಬೇಡ್ಕರರು ಹೇಳಿದ್ದ ಮಾತುಗಳನ್ನು ಈಗ ಪಾಲಿಸುತ್ತಿದ್ದಾರಷ್ಟೇ..

ಉತ್ತರ ಪ್ರದೇಶದಲ್ಲಿ ಮಾಯಾವತಿ ಎಂದಾಕ್ಷಣ ಎಲ್ಲರಿಗೆ ಗೋಚರವಾಗುವುದು ಅವರುಗಳು ಅಲ್ಲಿ ನಿಮರ್ಿಸಿರುವ ಅಂಬೇಡ್ಕರ್, ಕಾನ್ಸಿರಾಂ, ಬುದ್ದ, ಪೆರಿಯಾರರ ಪ್ರತಿಮೆಗಳು. ಆದರೆ ಮಾಯಾವತಿಯವರು ಬರೀ ಪ್ರತಿಮೆಗಳನ್ನಷ್ಟೆ ಉತ್ತರ ಪ್ರದೇಶದಲ್ಲಿ ನಿಮರ್ಿಸಿಲ್ಲ! ಆ ಪ್ರತಿಮೆಗಳ ಸಿದ್ದಾಂತಗಳನ್ನೂ ಆ ರಾಜ್ಯದಲ್ಲಿ ನಿಮರ್ಿಸಿದ್ದಾರೆ. ಬರೀ ಅವುಗಳು ಪ್ರತಿಮೆಗಳೇ ಆಗಿದ್ದರೆ ಅವರು ಯಾವೊತ್ತೊ ಆ ರಾಜ್ಯದಿಂದ ಹೇಳ ಹೆಸರಿಲ್ಲದಂತಾಗಿರುತ್ತಿದ್ದರು. ಅಧಿಕಾರ ಕಳೆದುಕೊಳ್ಳುತ್ತಿದ್ದರು. ಆದರೆ ಆ ಪ್ರತಿಮೆಗಳಲ್ಲಿನ ದಾರ್ಶನಿಕರ ಸಿದ್ದಾಂತವನ್ನು ಆ ರಾಜ್ಯದಲ್ಲಿ ಅವರು ಜಾರಿಗೆ ತಂದಿರುವುದು ಅವರನ್ನು ಉತ್ತರಪ್ರದೇಶದಲ್ಲಿ ಭದ್ರವಾಗಿ ಉಳಿಯುವಂತೆ ಮಾಡಿದೆ. ಇದೇ ಕಾರಣಕ್ಕೆ ಮಾಯಾವತಿ ಉತ್ತರಪ್ರದೇಶದಲ್ಲಿ ಬೆಳೆದುನಿಂತಿರುವುದು.

ಉತ್ತರಪ್ರದೇಶದಲ್ಲಿ ಪ್ರತಿಮೆಗಳು ಎಂದಾಕ್ಷಣ ಮೇರುಸ್ಥಾನದಲ್ಲಿ ನೆನಪಿಗೆ ಬರುವುದು ಅಂಬೇಡ್ಕರ್ ಪ್ರತಿಮೆ ಮತ್ತು ಅವರ ಸಿದ್ದಾಂತ. ಹೌದು, ಮಾಯಾವತಿ ಉತ್ತರ ಪ್ರದೇಶದಲ್ಲಿ ಪ್ರತಿಯೊಂದು ಹಂತದಲ್ಲೂ ಅಂಬೇಡ್ಕರ್ ಸಿದ್ದಾಂತವನ್ನು ಅವರ ಆಸೆ ಆಕಾಂಕ್ಷೆಗಳನ್ನು ಜಾರಿಗೊಳಿಸಲು ಹೊರಟಿದ್ದಾರೆ. ರಾಜ್ಯದಲ್ಲಿನ ಶಾಂತಿ ಸುವ್ಯವಸ್ಥೆ, ದಲಿತರ ಸಬಲೀಕರಣ ಎಲ್ಲವನ್ನು ಮಾಯಾವತಿಯವರು ಅಂಬೇಡ್ಕರ್ರ ಸಿದ್ದಾಂತದ ಅನ್ವಯ ಜಾರಿ ಮಾಡಲು ಹೊರಟಿದ್ದಾರೆ.

ಅದರ ಮುಂದುವರೆದ ಭಾಗವಾಗಿ ಈಗ ಉತ್ತರಪ್ರದೇಶದ ವಿಭಜನೆ ನಡೆದಿದೆ. ಅಂದೇ ಉತ್ತರಪ್ರದೇಶವನ್ನು ಜನಸಂಖ್ಯಾ ಆದಾರದ ಮೇಲೆ ವಿಭಜನೆ ಮಾಡಬೇಕೆಂದು ಅಂಬೇಡ್ಕರ್ ಹೇಳಿದ್ದರು. ಅದು ಈಗ ಜಾರಿಯಾಗುತ್ತಿದೆಯಷ್ಟೇ..

ಅರೆ! ಇದೇನಿದು ಅಂಬೇಡ್ಕರ್ ಕನಸು? ಉತ್ತರಪ್ರದೇಶದ ವಿಭಜನೆಗೂ ಅಂಬೇಡ್ಕರ್ರ ಹೊರಾಟಕ್ಕೂ ಎತ್ತಣಿದಿಂದೆತ್ತಣ ಸಂಬಂಧ ಎಂದು ಕೆಲವರಿಗಾದರೂ ಅನಿಸಬಹುದು. ಆದರೆ ಈ ದೇಶದ ಸಂವಿಧಾನ ಶಿಲ್ಪಿ ಯಾರು ಎಂದರೆ? ಖಂಡಿತ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

ದೇಶದ ಸಂವಿಧಾನ ರಚನೆಯ ಹೊಣೆ ಹೊತ್ತ ಅಂಬೇಡ್ಕರ್ರ ಮುಂದೆ ಭಾಷಾವಾರು ರಾಜ್ಯಗಳ ರಚನೆಯ ಪ್ರಶ್ನೆಯೂ ಬಂತು. ಆ ಸಂದರ್ಭದಲ್ಲಿ ಅಂಬೇಡ್ಕರ್ರು ತಮ್ಮ ಭéಾಷಾವಾರು ರಾಜ್ಯಗಳು ಎಂಬ ಕೃತಿಯನ್ನು ಬರೆದಿದ್ದಾರೆ. ಆ ಕೃತಿಯಲ್ಲಿ ಅಂಬೇಡ್ಕರ್ರು ಭಾಷಾವಾರು ರಾಜ್ಯ ರಚನೆಯ ಆಗುಹೊಗುಗಳು, ಅಂತಹ ಭಾಷಾವಾರು ರಾಜ್ಯಗಳ ನಕ್ಷೆಗಳು, ಅದರ ಸಾಧಕ-ಭಾಧಕಗಳು, ಅಂಕಿಅಂಶಗಳು ಇತ್ಯಾದಿಗಳನ್ನು ಸಮಗ್ರವಾಗಿ ಚಚರ್ಿಸಿದ್ದಾರೆ. ಮಾಯಾವತಿಯವರ ರಾಜ್ಯ ವಿಭಜನೆ ಹಿಂದೆ ಕೆಲಸ ಮಾಡಿರುವುದೇ ಅಂಬೇಡ್ಕರ್ರ ಆ ಕೃತಿ.

ಹಾಗಿದ್ದರೆ ಭಾಷಾವಾರು ಪ್ರಾಂತ್ಯದ ರಚನೆಯ ಬಗ್ಗೆ ಅಂಬೇಡ್ಕರರು ಅಂದು ಹೇಳಿದ್ದಾದರೂ ಏನು? ಉತ್ತರ ಪ್ರದೇಶ ರಾಜ್ಯ ವಿಭಜನೆಗೆ ಅವರ ಸಲಹೆಯಾದರೂ ಏನು? ಅಂಬೇಡ್ಕರರ ಪ್ರಕಾರ ಸಂವಿದಾನದ ವಿಧಿ 3ನೇ ನಿಯಮದ ಅನ್ವಯ ರಾಜ್ಯ ಪುನವರ್ಿಂಗಡಣಾ ಆಯೋಗವನ್ನು ಆಗಿನ ನೆಹರೂರವರ ಸಕರ್ಾರ ನೇಮಿಸಿತ್ತು. ಮತ್ತು ಹಾಗೆ ನೇಮಿಸಲ್ಪಟ್ಟ ಆಯೋಗ ತನ್ನ ವರದಿಯನ್ನೂ ಸಹ ಸಲ್ಲಿಸಿತು. ಅಂದಹಾಗೆ ಆ ವರದಿ 16 ಭಾಷಾವಾರು ಪ್ರಾಂತ್ಯಗಳನ್ನು ರಚಿಸಲು ಶಿಫಾರಸ್ಸು ಮಾಡಿತು. ಬೇರೆ-ಬೇರೆ ಭಾಷೆಗಳಿಗೆ 13 ರಾಜ್ಯಗಳಾದರೆ, ಹಿಂದಿ ಭಾಷೆಗೆ ಕೇವಲ 3 ರಾಜ್ಯಗಳನ್ನು ಆ ಆಯೋಗ ಸೃಷ್ಟಿಸಿತು! ವಾಸ್ತವವೆಂದರೆ, ಈ ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ. 48, ಆದರೆ ಆ ಭಾಷೆಗೆ ಕೇವಲ ಮೂರೇ ರಾಜ್ಯಗಳು! ಅದೂ ಎಂತಹ ರಾಜ್ಯಗಳೆಂದರೆ, ಅವುಗಳು ಬೃಹತ್ ಗಾತ್ರದ, ಬೃಹತ್ ಜನಸಂಖ್ಯೆಯ ರಾಜ್ಯಗಳಾಗಿದ್ದವು. ಉತ್ತರ ಪ್ರದೇಶ, ಮದ್ಯಪ್ರದೇಶ, ಬಿಹಾರವೇ ಆ ಮೂರು ರಾಜ್ಯಗಳು.

ಉತ್ತರ ಪ್ರದೇಶ 1,13,410 ಚದರ ಮೈಲು ವಿಸ್ತೀರ್ಣ, 6.32ಕೋಟಿ ಜನಸಂಖ್ಯೆ. ಮದ್ಯಪ್ರದೇಶ 1,71,200 ಚದರ ಮೈಲು ವಿಸ್ತೀರ್ಣ, 2.61 ಕೋಟಿ ಜನಸಂಖ್ಯೆ. ಬಿಹಾರ 66,530 ಚದರ ಮೈಲು ವಿಸ್ತೀರ್ಣ, 3.83 ಕೋಟಿ ಜನಸಂಖ್ಯೆ (1941 ಜನಗಣತಿ ಆಧಾರ). ಒಟ್ಟಾರೆ ಮೂರು ರಾಜ್ಯಗಳು ವಿಸ್ತೀರ್ಣ ಮತ್ತು ಜನಸಂಖ್ಯೆ ದೃಷ್ಟಿಯಿಂದ ಬೃಹತ್ ರಾಜ್ಯಗಳು.

ಅಂಬೇಡ್ಕರರು ಪ್ರಶ್ನಿಸಿರುವುದೇ ಇದನ್ನು.. ರಾಜ್ಯಗಳ ವಿಂಗಡಣಾ ಆಯೋಗ ರಾಜ್ಯಗಳ ಗಾತ್ರವನ್ನು ಜನಸಂಖ್ಯೆಯ ಸಮಾನತೆಯ ಆಧಾರದ ಮೇಲೆ ವಿಂಗಡಿಸಲು ಹೋಗಿಲ್ಲ ಎಂಬುದು ಅವರ ಅಕ್ಷೇಪಣೆಯಾಗಿತ್ತು. ಅವರ ಪ್ರಕಾರ ರಾಜ್ಯಗಳನ್ನು ವಿಂಗಡಿಸಲು ಆಯೋಗ 2 ಕೋಟಿ ಜನಸಂಖ್ಯೆಯ ಮಾನದಂಡವನ್ನು ಇಟ್ಟುಕೊಳ್ಳ ಬೇಕಾಗಿತ್ತು ಎಂಬುದಾಗಿತ್ತು. ಆದರೆ ಇದ್ಯಾವುದನ್ನು ಪರಿಗಣಿಸದೆ ಆಯೋಗ ಎ.ಸಿ.ರೂಮಿನಲ್ಲಿ ಕುಳಿತು ಮನಸೋ ಇಚ್ಛೆ ವರದಿ ತಯಾರಿಸಿದೆ ಎಂಬುದು ಅಂಬೇಡ್ಕರರ ಆರೋಪವಾಗಿತ್ತು. ಅಂದಹಾಗೆ ಆಯೋಗದ ಇಂತಹ ಗೊತ್ತು ಗುರಿ ಇಲ್ಲದ ವರದಿಯಿಂದ ಉತ್ತರ ಭಾರತದಲ್ಲಿ ದೊಡ್ಡ ದೊಡ್ಡ ರಾಜ್ಯಗಳೂ ಹಾಗೂ ದಕ್ಷಿಣ ಭಾರತದಲ್ಲಿ ಸಣ್ಣ ಸಣ್ಣ ರಾಜ್ಯಗಳು ನಿಮರ್ಾಣವಾಗಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಒಂದು ಹೊಸ ಸಮಸ್ಯೆಯೇ ಸೃಷ್ಟಿಯಾಗಿದೆ ಎಂಬುದು ಕೂಡ ಆ ಸಂದರ್ಭದಲ್ಲಿ ಅಂಬೇಡ್ಕರರ ಗಂಭೀರ ಆರೋಪವಾಗಿತ್ತು. ಅದರಲ್ಲೂ ಉತ್ತರ ಪ್ರದೇಶವನ್ನು ಒಂದು ಬೃಹತ್ ರಾಜ್ಯವಾಗಿ ಇರಲು ಬಿಟ್ಟಿದ್ದನ್ನು ಅವರು ಅಂತಹ ರಾಜ್ಯ ಕೇಂದ್ರದ ಮೇಲೆ ವಿಪರೀತ ಪ್ರಭಾವ ಬೀರುತ್ತದೆ ಮತ್ತು ಅದು ನಿಜಕ್ಕು ಅಪಾಯಕಾರಿ ಸಂಗತಿ ಎಂದು ಆ ಕಾಲದಲ್ಲೆ ತಮ್ಮ ಆತಂಕ ವ್ಯಕ್ತಪಡಿಸಿದ್ದರು!

ಅಂದಹಾಗೆ, ಅಂಬೇಡ್ಕರರ ಅಂದಿನ ಆತಂಕ ಸುಳ್ಳಾ ಯಿತೇ? ಖಂಡಿತ ಇಲ್ಲ. ಏಕೆಂದರೆ ಉತ್ತರ ಪ್ರದೇಶವೆಂಬ ಬೃಹತ್ ರಾಜ್ಯ ಇದುವರೆಗೆ ಈ ದೇಶಕ್ಕೆ ಬರೋಬ್ಬರಿ 8 ಪ್ರಧಾನಮಂತ್ರಿಗಳನ್ನು ಕೊಟ್ಟಿದೆ. ಅಲ್ಲದೆ ಈ ದೇಶದ ಮುಂದಿನ ಪ್ರಧಾನ ಮಂತ್ರಿಗಳಾಗಿ ಬಿಂಬಿತರಾಗುತ್ತಿರುವವರಾದರೂ ಯಾರು? ಅವರುಗಳು ಕೂಡ ಉತ್ತರ ಪ್ರದೇಶದವರೆ! ಸ್ವತಃ ಮಾಯಾವತಿ ಅವರಲ್ಲೊಬ್ಬರಾದರೆ ಸೋನಿಯಾಗಾಂಧಿ ಪುತ್ರ ರಾಹುಲ್ ಗಾಂಧಿ ಮತ್ತೊಬ್ಬರು. ಹೀಗಿರುವಾಗ ಉತ್ತರ ಪ್ರದೇಶವೆಂಬ ಆ ಬೃಹತ್ ರಾಜ್ಯ ಕೇಂದ್ರದ ಮೇಲೆ ಈ ಪರಿಯ ಪ್ರಭಾವ ಬೀರುತ್ತಿರುವಾಗ ಅಂಬೇಡ್ಕರ್ರವರು ಅಂದು ವ್ಯಕ್ತಪಡಿಸಿದ ಆತಂಕದಲ್ಲಿ ತಪ್ಪಾದರು ಏನಿದೆ?

ಉತ್ತರ ಭಾರತದ ರಾಜ್ಯಗಳು ದಕ್ಷಿಣ ಭಾರತದ ರಾಜ್ಯಗಳ ಮೇಲೆ ದಬ್ಬಾಳಿಕೆ ನಡೆಸಬಹುದೆಂದು ಆ ಕಾಲದಲ್ಲೇ ಸ್ವತಃ ಕಾಂಗ್ರೆಸ್ ನಾಯಕರಾದ ಸಿ. ರಾಜಗೋಪಾಲಚಾರಿಯವರು ಅನುಮಾನ ವ್ಯಕ್ತಪಡಿಸಿದ್ದರು. ರಾಜಗೋಪಾಲಚಾರಿಯವರ ಆ ಅಭಿಪ್ರಾಯಗಳನ್ನು ಅಂಬೇಡ್ಕರರು ತಮ್ಮ ಆ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಒಂದು ಸಂದರ್ಭದಲ್ಲಿ ರಾಜಗೋಪಾಲಚಾರಿಯವರು ಅಂಬೇಡ್ಕರ್ರವರ ಜೊತೆಯಲ್ಲಿ ಮಾತನಾಡುತ್ತಾ ಹೀಗೆ ಹೇಳುತ್ತಾರೆ. ನೀವು ತುಂಬಾ ದೊಡ್ಡತಪ್ಪು ಮಾಡುತ್ತಿದ್ದೀರಿ. ಇಡೀ ಭಾರತಕ್ಕೆ ಎಲ್ಲಾ ಪ್ರದೇಶಗಳಿಗೂ ಸಮಾನ ಪ್ರಾತಿನಿದ್ಯ ವಿರುವ ಒಂದೇ ಗಣರಾಜ್ಯವಿರುವುದು ವ್ಯಾವಹಾರಿಕವಲ್ಲ. ಅಂತಹ ಗಣ ರಾಜ್ಯದಲ್ಲಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಾ ಧ್ಯಕ್ಷರಿಬ್ಬರೂ ಯಾವಾಗಲೂ ಹಿಂದೀ ಮಾತನಾಡುವ ಪ್ರದೇಶದವರೇ ಆಗಿರುತ್ತಾರೆ. ಆ ಕಾರಣದಿಂದ ನೀವು ಎರಡು ಗಣರಾಜ್ಯಗಳನ್ನು ರೂಪಿಸಬೇಕು. ಒಂದು ಉತ್ತರ ಭಾರತದ ಗಣರಾಜ್ಯ. ಮತ್ತೊಂದು ದಕ್ಷಿಣ ಭಾರತದ ಗಣರಾಜ್ಯ. ಅವೆರ ಡನ್ನು ಸೇರಿಸಿ ಒಂದು ಸಂಯುಕ್ತ ಗಣರಾಜ್ಯವನ್ನು ನಿಮರ್ಿಸ ಬೇಕು. ಅದರಲ್ಲಿ ಮೂರು ಪ್ರಮುಖ ವಿಷಯಗಳ ಬಗ್ಗೆ (ರಕ್ಷಣೆ, ಹಣಕಾಸು, ಗೃಹ) ಮಾತ್ರ ಆ ಸಂಯುಕ್ತ ಆಡಳಿತ ಗಮನಹರಿಸ ಬೇಕು. ಆ ಸಂಯುಕ್ತ ಗಣರಾಜ್ಯದಲ್ಲಿ ಉತ್ತರ ಮತ್ತು ದಕ್ಷಿಣ ಎರಡೂ ಗಣ ರಾಜ್ಯಗಳಿಗೂ ಸಮಾನ ಪ್ರಾತಿನಿದ್ಯವಿರಬೇಕು. ಇದು ರಾಜಾಜಿಯವರ ಪ್ರ್ರಾಮಾಣಿಕ ಅಭಿಪ್ರಾಯ.

ಇದನ್ನೇ ಅಂಬೇಡ್ಕರ್ರವರು ನಾವು ಉತ್ತರವನ್ನು ಬಲಪಡಿಸಿ ದಕ್ಷಿಣವನ್ನು ಒಡೆಯುವ ಪ್ರಯತ್ನದಲ್ಲಿ ಕೇವಲ ಭಾಷಾ ಸಮಸ್ಯೆಯನ್ನು ಮಾತ್ರ ಪರಿಗಣಿಸಬಾರದು, ರಾಜಕೀಯ ಸಮಸ್ಯೆಯನ್ನೂ ಸಹ ಗಣನೆಗೆ ತೆಗೆದುಕೊಳ್ಳಬೇಕು ಎಂದು ರಾಜ್ಯಗಳ ಪುನರ್ ವಿಂಗಡಣಾ ಆಯೋಗಕ್ಕೆ ಎಚ್ಚರಿಕೆ ನೀಡಿ ದ್ದರು! ಹಾಗೆಯೇ ಉತ್ತರ ಮತ್ತು ದಕ್ಷಿಣದವರ ಮದ್ಯೆ ಏಳಬಹು ದಾದ ಅಂತಹ ರಾಜಕೀಯ ಸಂಘರ್ಷಕ್ಕೆ ಈಗಿಂದೀಗಲೇ ಸೂಕ್ತಕ್ರಮಕೈಗೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದರು.

ಹಾಗಿದ್ದರೆ ಅಂದರೆ ಉತ್ತರ ಮತ್ತು ದಕ್ಷಿಣ ಭಾರತದ ಮಧ್ಯೆ ಏಳಬಹುದಾದ ರಾಜಕೀಯ ಸಂಘರ್ಷದ ಪರಿಹಾರಕ್ಕೆ ಅಂಬೇಡ್ಕರ್ರವರು ಅಂದು ನೀಡಿದ ಸಲಹೆಯಾದರೂ ಏನು ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೋದರೆ, ನಮಗೆ ಸಿಗುವುದು ಉತ್ತರದ ವಿಭಜನೆ ಎಂಬುದು.

ಹೌದು, ಅಂಬೇಡ್ಕರ್ರವರು ಅಂದು ಹೇಳಿದ್ದು, ಉತ್ತರ ಭಾರತದ ಮೂರು ಬೃಹತ್ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳನ್ನು ವಿಭಜಿಸಬೇಕು ಎಂಬುದು. ಸ್ವತಃ ಅಬೇಂಡ್ಕರ್ರವರ ಮಾತುಗಳನ್ನು ಇಲ್ಲಿ ಹೇಳುವುದಾದರೆ ನಾನು ಈಗಾಗಲೇ ಹೇಳಿರುವಂತೆ ಭಾಷಾವಾರು ರಾಜ್ಯಗಳ ರೂಪುರೇಖೆ ಹಾಕವುದರಲ್ಲಿ ಆಯೋಗ ಉತ್ತರವನ್ನು ಬಲಪಡಿಸಿ ದಕ್ಷಿಣವನ್ನು ಒಡೆದಿದೆ. ನನಗೆ ಗೊತ್ತು ಆಯೋಗವು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಆದರೆ ಉದ್ದೇಶಪೂರ್ವಕ ವೋ ಅಥವಾ ಇಲ್ಲವೋ ತಪ್ಪು ಆಗಿರುವುದಂತೂ ಸತ್ಯ. ಹಾಗೆ ಅದರ ಕೆಟ್ಟಪರಿಣಾಮಗಳೂ ಕೂಡ ಅಷ್ಟೇ ಸುಸ್ಪಷ್ಟ. ಆದ್ದರಿಂದ ಈ ಪರಿಸ್ಥಿತಿಯನ್ನು ಸರಿಪಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಇದಕ್ಕಿರುವ ಏಕೈಕ ಮಾರ್ಗವೆಂದರೆ ಉತ್ತರ ಭಾರತದ ಮೂರು ಬೃಹತ್ ರಾಜ್ಯಗಳಾದ 1. ಉತ್ತರಪ್ರದೇಶ, 2. ಮಧ್ಯಪ್ರದೇಶ, 3. ಬಿಹಾರಗಳನ್ನು ಸಣ್ಣಸಣ್ಣ ಭಾಗಗಳಾಗಿ ವಿಭಜಿಸುವುದು. ಇದು ಉತ್ತರ ಭಾರತದ ವಿಭಜನೆಗೆ ಸಂಬಂದಿಸಿದಂತೆ ಅಂಬೇಡ್ಕರರ ಅಭಿಪ್ರಾಯ.

ಅವರ ಅಭಿಪ್ರಾಯದಂತೆ ಈಗಾಗಲೇ ಬಿಹಾರ ಮತ್ತು ಮಧ್ಯಪ್ರದೇಶಗಳನ್ನು ವಿಭಜಿಸಲಾಗಿದೆ. ಬಿಹಾರವನ್ನಂತೂ ಅಂಬೇಡ್ಕರ್ರವರು ಹೇಗೆ ಹೇಳಿದ್ದರೋ ಹಾಗೆಯೇ ವಿಭಜಿಸಲಾಗಿದೆ!. ವ್ಯತ್ಯಾಸವೆಂದರೆ ಅಂಬೇಡ್ಕರ್ ವಿಭಜಿತ ಬಿಹಾರವನ್ನು ದಕ್ಷಿಣ ಬಿಹಾರವೆಂದಿದ್ದರು. ಆದರೆ, ಈಗ ಅದನ್ನು ಜಾರ್ಖಂಡ್ ರಾಜ್ಯವೆಂದು ಕರೆಯಲಾಗಿದೆ. ಅಂಬೇ ಡ್ಕರ್ರವರು ಹೇಳಿದ್ಧ ಹಾಗೆ ರಾಂಚಿಯನ್ನೇ ಅದರ ರಾಜಧಾನಿ ಯನ್ನಾಗಿ ಮಾಡಲಾಗಿದೆ! ಮಧ್ಯಪ್ರದೇಶವನ್ನೂ ಅಷ್ಟೆ. ಅಂಬೇ ಡ್ಕರ್ರವರು ಅದನ್ನು ಉತ್ತರ ಮಧ್ಯಪ್ರದೇಶ ಮತ್ತು ದಕ್ಷಿಣ ಮಧ್ಯಪ್ರದೇಶ ಎಂಬ ಎರಡು ರಾಜ್ಯಗಳಾಗಿ ವಿಭಜಿಸಲು ಸಲಹೆ ನೀಡಿದ್ದರು. ಅದರಂತೆ ವಿಭಜಿಸಿ ದಕ್ಷಿಣ ಮಧ್ಯಪ್ರದೇಶಕ್ಕೆ ಛತ್ತೀಸ್ಗಢ ಎಂದು ಹೆಸರಿಡಲಾಗಿದೆ. ಉತ್ತರ ಪ್ರದೇಶವನ್ನು ಮಾತ್ರ ಹಾಗೇಯೇ ಕರೆಯಲಾಗಿದೆ.

ಈ ದೇಶದಲ್ಲಿ ಉತ್ತರಪ್ರದೇಶವೊಂದೇ ಅಂತಹ ವಿಭಜನೆ ಕಾಣದ ಬೃಹತ್ ರಾಜ್ಯ. ಕೆಲವೇವರ್ಷಗಳ ಹಿಂದೆ ಉತ್ತರಖಂಡ ಎಂಬ ಸಣ್ಣ ರಾಜ್ಯ ಅದರಿಂದ ಪ್ರತ್ಯೇಕವಾಯಿ ತಾದರೂ ಒಟ್ಟಾರೆ ಅದರ ಗಾತ್ರ ಮತ್ತು ಜನಸಂಖ್ಯೆಯಲ್ಲಿ ಅಂತಹ ವ್ಯತ್ಯಾಸವೇನು ಕಂಡು ಬಂದಿಲ್ಲ. ಅಲ್ಲದೆ ಅಂಬೇ ಡ್ಕರರು ಅಂದು ಸಲಹೆ ನೀಡಿದ ಪ್ರಕಾರ ಅದರ ವಿಭಜನೆ ನಡೆದಿಲ್ಲ. ಹಾಗಿದ್ದರೆ ಉತ್ತರಪ್ರದೇಶದ ನಿಖರ ವಿಭಜನೆಗೆ ಅಂಬೇಡ್ಕರ್ರವರು ಹೇಳಿದ್ದಾದರೂ ಏನು? ಅವರ ಅಭಿಪ್ರಾ ಯಗಳನ್ನು ಯಥಾವತ್ತಾಗಿ ದಾಖಲಿಸುವುದಾದರೆ ಉತ್ತರ ಪ್ರದೇಶವನ್ನು ಮೂರು ಭಾಗಗಳಾಗಿ ವಿಭಜಿಸಬೇಕು. ಈ 3 ರಾಜ್ಯಗಳಲ್ಲಿ ಪ್ರತಿಯೊಂದರಲ್ಲಿಯೂ ಎರಡು ಕೋಟಿ ಜನಸಂಖ್ಯೆ ಇರಬೇಕು (ಏಕೆಂದರೆ ಆಗಿನ ಉತ್ತರ ಪ್ರದೇಶದ ಜನಸಂಖ್ಯೆ 6.3ಕೋಟಿ). ಸಮರ್ಥ ಆಡಳಿತಕ್ಕಾಗಿ 1 ರಾಜ್ಯದ ಜನಸಂಖ್ಯೆ ಸುಮಾರು ಎರಡು ಕೋಟಿ ಇರಬೇಕೆಂಬುದನ್ನು ಒಂದು ಅಳತೆ ಗೋಲಾಗಿ ಪರಿಗಣಿಸಬೇಕು.

(ಅಂಬೇಡ್ಕರ್ರವರು ಉತ್ತರಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಆ 3 ರಾಜ್ಯಗಳನ್ನು ವಿಭಜಿಸುವ ಭೂಪಟಗಳನ್ನು ತಮ್ಮ ಆ ಕೃತಿಯಲ್ಲಿ ನೀಡಿದ್ದಾರೆ. ಲೇಖಕರು). ಉತ್ತರ ಪ್ರದೇಶದ 3 ರಾಜ್ಯಗಳು 1.ಮೀರತ್, 2.ಕಾನ್ಪುರ, 3.ಅಲಹಾಬಾದ್ಗಳನ್ನು ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಳ್ಳಬೇಕು. ಈ 3ರಾಜ್ಯಗಳಲ್ಲಿ ಪ್ರತಿಯೊಂದರ ಮಧ್ಯಭಾಗದಲ್ಲಿ ಆ ನಗರಗಳು ಇವೆ.

ಉತ್ತರಪ್ರದೇಶದ ವಿಭಜನೆಗೆ ಸಂಬಂದಿಸಿದಂತೆ ಅಂಬೇಡ್ಕರ ರಿಗಿದ್ದ ನಿಲುವನ್ನೇ ಇಂದು ಮಾಯಾವತಿ ಪ್ರಸ್ತಾಪಿಸಲು ಹೊರಟಿದ್ದಾರೆ. ಅಂಬೇಡ್ಕರರ ಅಭಿಪ್ರಾಯವನ್ನು, ಕನಸ್ಸನ್ನು ನನಸುಗೊಳಿಸುವ ಹಿನ್ನೆಲೆಯಲ್ಲಿಯೇ ಕು.ಮಾಯಾವತಿಯವರು ಸಣ್ಣರಾಜ್ಯಗಳ ರಚನೆಗೆ ಅಂಬೇಡ್ಕರರು ಒಲವು ತೋರಿದ್ದರು ಎಂಬ ಪ್ರಮುಖ ಸಮರ್ಥನೆಯನ್ನು ತಮ್ಮ ರಾಜ್ಯ ವಿಭಜನೆ ಯನ್ನು ವಿರೋಧಿಸುವವರಿಗೆ ನೀಡುತ್ತಿದ್ದಾರೆ. ಹಾಗೆಯೇ ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದ್ದಾರೆ.

ಮಾಯಾವತಿಯವರ ಕಾರ್ಯಚರಣೆಯಲ್ಲಿ ಸಣ್ಣ ವ್ಯತ್ಯಾಸವೊಂದಿದೆ. ಅದೆಂದರೆ ಅಂಬೇಡ್ಕರ್ರವರು ಉತ್ತರ ಪ್ರದೇಶವನ್ನು ಪಶ್ಚಿಮ ಭಾಗ, ಮಧ್ಯಭಾಗ, ಮತ್ತು ಪೂರ್ವಭಾಗ ಎಂದು 3 ಭಾಗವಾಗಿ ವಿಂಗಡಿಸಲು ಸಲಹೆ ನೀಡಿದ್ದರು ಆದರೆ, ಬದಲಾದ ಪರಿಸ್ಥಿತಿಯಲ್ಲಿ ಮಾಯಾವತಿಯವರು ಅದನ್ನು 4 ಭಾಗಗಳಾಗಿ ವಿಂಗಡಿಸಲು ಹೊರಟಿದ್ದಾರೆ. ಪಶ್ಚಿಮ ಪ್ರದೇಶ, ಅವಧ್ ಪ್ರಾಂತ್ಯ, ಪೂವರ್ಾಂಚಲ ಮತ್ತು ಬುಂದೇಲ ಖಂಡ, ಎಂಬುವುವೇ ಆ ನಾಲ್ಕು ರಾಜ್ಯಗಳು.

ಒಂದಂತು ನಿಜ, ತಮ್ಮ 4 ಅವದಿಗಳ ಆಡಳಿತದಲ್ಲಿ ಮಾಯಾವತಿಯವರು ದಲಿತರಿಗೆ ಮೀಸಲಾತಿಯನ್ನು ಪರಿ ಪೂರ್ಣವಾಗಿ ಜಾರಿಗೊಳಿಸಿದ್ದಾರೆ. ಬ್ಯಾಕ್ಲಾಗ್ ಹುದ್ದೆಗಳನ್ನೂ ಸಹ ಸಂಪೂರ್ಣವಾಗಿ ಭತರ್ಿಮಾಡಿದ್ದಾರೆ. ಖಾಸಗೀ ಕ್ಷೇತ್ರದಲ್ಲಿ ಶೇ10ರಷ್ಟು ಮೀಸಲಾತಿ ಜಾರಿಗೆ ತಂದಿದ್ದಾರೆ. ಅದರ ಜೊತೆ ಯಲ್ಲಿ ಅಂಬೇಡ್ಕರರ ಸಹಸ್ರಾರು ಪ್ರತಿಮೆಗಳನ್ನು ರಾಜ್ಯಾದ್ಯಂತ ನಿಮರ್ಿಸಿದ್ದಾರೆ. ಇತ್ತೀಚೆಗಷ್ಟೇ 700 ಕೋಟಿ ವೆಚ್ಚದ ವಿಶ್ವದಲ್ಲಿಯೇ ಬೃಹತ್ ಅಂಬೇಡ್ಕರ್ ಉದ್ಯಾನವನ್ನು ದೆಹಲಿಯ ಬಳಿಯ ನೊಯ್ಡಾ (ಗೌತಮಬುದ್ದ ನಗರ)ದಲ್ಲಿ ಉದ್ಘಾಟಿಸಿದ್ದಾರೆ. ಒಟ್ಟಾರೆ ತಮ್ಮ ಪ್ರತಿಯೊಂದು ಯೋಜನೆಗಳಲ್ಲಿ, ಆಲೋಚನೆಗಳಲ್ಲಿ ಮಾಯವತಿಯವರು ಅಂಬೇಡ್ಕರರ ಸಿದ್ದಾಂತ ಮತ್ತು ಹೆಸರನ್ನು ಸಾಕಾರಗೊಳಿಸುತ್ತಿದ್ದಾರೆ. ಹೀಗಿರುವಾಗ ಅಂಬೇಡ್ಕರರ ಆ ಕನಸಿನ ಉತ್ತರ ಪ್ರದೇಶ ರಾಜ್ಯ ವಿಭಜನೆಯ ಕಾರ್ಯವನ್ನು ಮಾಯಾವತಿ ಮಾಡಿದರೇ ತಪ್ಪೇನಿದೆ.

ಮಾಯಾವತಿಯವರ ಈ ನಡೆಯನ್ನು ಆಡಳಿತ ವಿರೋಧಿ ಅಲೆ ತಗ್ಗಿಸಲು, ಭ್ರಷ್ಟಾಚಾರ ಪ್ರಕರಣಗಳಿಂದ ಜನರ ಗಮನ ಬೇರೆಡೆ ಸೆಳೆಯಲು, ಮುಂಬರುವ ಚುನಾವಣೆ ದೃಷ್ಟಿಕೋನ, ರಾಜಕೀಯ ಗಿಮಿಕ್, ಹಾಗೆ ಹೀಗೆ ಏನೆಲ್ಲಾ ಅಂದರೂ ಅದು ಹಾಗೆ ಅನ್ನುವವರ ಮೂರ್ಖತನವಾಗುತ್ತದಷ್ಟೆ.

ರಘೋತ್ತಮ ಹೊ.ಬ

No comments:

Post a Comment

Thanku