Saturday, December 17, 2011

ದಲಿತರ ನಿರಂತರ ದೌರ್ಜನ್ಯಕ್ಕೆ ಕೊನೆ ಎಂದು..?

ಬುದ್ಧ, ಬಸವ, ಅಂಬೇಡ್ಕರರು ಹುಟ್ಟಿದ ಭಾರತದಲ್ಲಿ ದಲಿತರ ನಿರಂತರ ದೌರ್ಜನ್ಯಕ್ಕೆ ಕೊನೆ ಎಂದು..?

ಪ್ರಜಾಪ್ರಭುತ್ವದ 3ಅಂಗಗಳು, ಬೃಹತ್ ಪೊಲೀಸ್ ವ್ಯವಸ್ಥೆ, ಕಠಿಣ ಕಾನೂನುಗಳು ಎಲ್ಲವೂ ಇದ್ದರೂ, 1995 ರಿಂದ 2007ರವರೆಗೆ ದಲಿತರ ಮೇಲೆ ದೇಶಾಧ್ಯಂತ 4,41,424 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದರೆ, ದಲಿತರ ಸ್ಥಿತಿಗತಿಗಳು ಈ ದೇಶದಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿವೆ ಎಂದು ವಿಶ್ಲೇಷಿಸುತ್ತಾರೆ ರಘೋತ್ತಮ ಹೊ.ಬ

ಪ್ರಜಾಪ್ರಭುತ್ವ ಹೊಂದಿದ ಈ ದೇಶದಲ್ಲಿ ಜನಸಮೂಹವೊಂದು ಸ್ವಾಭಿಮಾನಿಯಾಗಿ ಬದುಕಲು ಬಯಸುವುದು, ಸ್ಚತಂತ್ರವಾಗಿ ಬಾಳಲು ಇಚ್ಛಿಸುವುದು ಖಂಡಿತ ತಪ್ಪಾಗಿ ಪರಿಣಮಿಸಿದೆ! ಏಕೆಂದರೆ ಅಂತಹ ಪ್ರಯತ್ನಶೀಲ ಸಮೂಹದ ಮೇಲೆ ಅನೇಕ ದಬ್ಬಾಳಿಕೆ, ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಸ್ವಾಭಿಮಾನಿ ಮಾರ್ಗದ ಮುಖಾಂತರ ನಡೆಸುವ ಇವರುಗಳು ಹೋರಾಟಕ್ಕೆೆೆ ತಡೆಯೊಡ್ಡಲಾಗುತ್ತದೆ!

ವ್ಯವಸ್ಥೆಯಲ್ಲಿನ ಅನಿಷ್ಟ ಪದ್ದತಿಗಳನ್ನು ಒಪ್ಪಿಕೊಳ್ಳದಿದ್ದರೆ, ಬಹಿಷ್ಕಾರ ಹಾಕಿ ಬೀದಿಯಿಂದ ಹೊರ ಅಟ್ಟಲಾಗುತ್ತಿದೆ. ಅಂದಹಾಗೆ ಸ್ವಾಭಿಮಾನದ ನಿರಂತರ ತುಡಿತದಲ್ಲಿ ಬದುಕುವ ಅಂತಹ ಪ್ರಯತ್ನಶೀಲ ಸಮೂಹ ಬೇರ್ಯಾವುದು ಅಲ್ಲ. ಅವರೇ ಭರತ ಖಂಡವನ್ನು ಕಟ್ಟಿದ ದಲಿತರು.

ದಲಿತರ ಮೇಲೆ ನಡೆಸುವ ದಬ್ಬಾಳಿಕೆ, ದೌರ್ಜನ್ಯಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಕಾನೂನಿನ ಅನ್ವಯ ಎಷ್ಟೇ ಕಠಿಣಕ್ರಮಗಳನ್ನು ಒಂದೆಡೆ ಜಾರಿಮಾಡುತ್ತಿದ್ದರೂ, ದೌರ್ಜನ್ಯಗಳೇನು ಕಡಿಮೆಯಾಗುತ್ತಿಲ್ಲ. ಅದಕ್ಕೆ ಮೂಲಭೂತ ಕೊರೆತೆ ಇರುವುದು ದಲಿತರಿಗೆ ವಿಶೇಷ ಸಲವತ್ತುಗಳನ್ನು ನೀಡದೇ, ಅವರನ್ನು ಜಾಗೃತಗೊಳಿಸದೇ, ಇರುವುದು. ಜಾಗೃತಿ ಕಾರ್ಯ ದೇಶದಲ್ಲಿ ಸಮರ್ಪಕವಾಗಿ ನಡೆಯದಿದ್ದಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ, ದಲಿತರ ಮೇಲಿನ ದೌರ್ಜನ್ಯಕ್ಕೆ ಕೊನೆ ಸಿಗುತ್ತಿಲ್ಲ.

ಅಂದಹಾಗೆ ದಲಿತರ ಮೇಲೆ ಎಸಗುವ ಇಂತಹ ದೌರ್ಜನ್ಯ ಶೀಕ್ಷಾರ್ಹ ಅಪರಾಧವಾಗಿದೆ. ಆದರೆ ನಡೆಯುತ್ತಿರುವುದೇ ಬೇರೆ? ಶಿಕ್ಷೆ ನೀಡಿದರೂ ನಾವು ದಲಿತರ ವಿರುದ್ಧದ ದೌರ್ಜನ್ಯ ನಿಲ್ಲಿಸುವುದಿಲ್ಲ ಎಂಬುದು ವ್ಯವಸ್ಥೆಯ ನಿಲುವಾಗಿದೆ! ಹಾಗಿದ್ದರೆ ದಲಿತರೇನು ಈ ದೇಶದಲ್ಲಿ ಬದುಕಬಾರದೇ..? ದಶಕಗಳು ಕಳೆದರೂ ದಲಿತರು ಮುಖ್ಯವಾಹಿನಿಗೆ ಬರಲು ಹೆಣಗಾಡುತ್ತಿದ್ದಾರೆ. ಎಷ್ಟು ದಿನ ಅಂತ ಹೀಗೆ ದೌರ್ಜನ್ಯವನ್ನು ಸಹಿಸಿಕೊಂಡಿರಬೇಕು? ಎಂಬಿತ್ಯಾದಿ ಪ್ರಶ್ನೆಗಳು ಪ್ರಗತಿಪರ ದಲಿತವರ್ಗವನ್ನು ಇಂದು ಕಾಡುತ್ತಿವೆ.

ಏಕೆಂದರೆ ರಾಷ್ಟ್ರೀಯ ಅಪರಾಧ ಇಲಾಖೆಯ ದಾಖಲೆಯ ಪ್ರಕಾರ ನಮ್ಮ ಮಕ್ಕಳನ್ನು ಅಂದರೆ ದಲಿತರ ಮಕ್ಕಳನ್ನು ಶೇ.37.8 ಹಳ್ಳಿಗಳಲ್ಲಿ ಶಾಲೆಗಳಲ್ಲಿ ಪ್ರತ್ಯೇಕ ಕೂರಿಸಲಾಗುತ್ತಿದೆ. ಶೇ.33 ರಷ್ಟು ಹಳ್ಳಿಗಳಲ್ಲಿ ಸಕರ್ಾರಿ ಆರೋಗ್ಯ ಸಹಾಯಕರು ದಲಿತರ ಮನೆಗಳಿಗೆ ಭೇಟಿ ನೀಡುತ್ತಿಲ್ಲ. ಶೇ.48.4 ದಲಿತರಿಗೆ ಕುಡಿಯುವ ನೀರನ್ನು ನಿರಾಕರಿಸಲಾಗುತ್ತಿದೆ. ಶೇ23.5ರಷ್ಟು ದಲಿತರ ಮನೆಗಳಿಗೆ ಅಂಚೆ ಪೇದೆ ಅಂಚೆ ತಲುಪಿಸುವುದಿಲ್ಲ. ಶೇ.64 ರಷ್ಟು ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ.

ಇವೆಲ್ಲದಕ್ಕಿಂತ ದುರಂತವೆಂದರೆ, ಈ ದೇಶದಲ್ಲಿ ಪ್ರತಿದಿನ ಇಬ್ಬರು ದಲಿತರ ಕಗ್ಗೊಲೆ ನಡೆಯುತ್ತಿದೆ. ಪ್ರತಿದಿನ ಮೂವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಪ್ರತಿ 18 ನಿಮಿಷಕ್ಕೆ ಒಬ್ಬನೆಂಬತೆ ದಲಿತರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ! ಇದನ್ನೆಲ್ಲ ನೋಡಿದರೆ, ಗಿನ್ನೆಸ್ ಬುಕ್ ದಾಖಲೆಗಳನ್ನೂ ದಲಿತರ ಮೇಲಿನ ಈ ದೌರ್ಜನ್ಯದ ದಾಖಲೆಗಳು ಮೀರಿಸುತ್ತಿವೆ ಎನ್ನಬಹುದು!

ಏಕೆಂದರೆ 1995 ರಿಂದ 2007 ರವರೆಗೆ ದಲಿತರ ಮೇಲೆ ದೇಶದಾದ್ಯಂತ 4,41,424 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ರಾಜ್ಯದ ಪಾಲು 21,352 ಪ್ರಕರಣಗಳು! 2010ರ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 1632 ಪ್ರಕರಣಗಳು ದಾಖಲಾಗಿವೆ. ಅಂದಹಾಗೆ ಇದು ದಾಖಲಾದ ಪ್ರಕರಣಗಳ ಕಥೆ. ಇನ್ನು ದಾಖಲಾಗದೆ ದಿನನಿತ್ಯ ನಡೆಯುವ ದೌರ್ಜನ್ಯಗಳ ಕಥೆಗಳು, ಕಥೆಯಾಗದೇ ನಿತ್ಯ ವ್ಯಥೆಯಾಗಿವೆ.

ಯಾಕೆಂದರೆ ಮೊನ್ನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಎಂಬಲ್ಲಿ ದಲಿತನೋರ್ವನಿಗೆ ಕ್ಷೌರ ಮಾಡಲು ನಿರಾಕರಿಸಿ ಬ್ಲೇಡಿನಿಂದ ಆತನ ಮೂಗು ಕುಯ್ಯಲಾಗಿದೆ.

ಅದೇ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಸುವಿನಹಳ್ಳಿ ಎಂಬಲ್ಲಿ ಗಣೇಶೋತ್ಸವದ ಸಂಧರ್ಭದಲ್ಲಿ ತಮಟೆ ಬಡಿಯಲು ದಲಿತರು ಕೂಲಿ ಕೇಳಿದರು ಎಂಬ ಕಾರಣಕ್ಕಾಗಿ ಅವರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಹಾಸನ ಜಿಲ್ಲೆಯಲ್ಲೂ ಅಷ್ಟೆ ತಮಟೆ ಬಾರಿಸಲು ನಿರಾಕರಿಸಿದ ಕೆರೆಗೋಡು ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಮಸವತ್ತೂರು ಎಂಬಲ್ಲಿಯೂ ಹೆಣ ಹೂಳಲು ಗುಂಡಿ ತೆಗೆಯಲು ನಿರಾಕರಿಸಿದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಂಬೇಡ್ಕರ್ ನಾಮ ಫಲಕ ಹಾಕಿದರು ಎಂಬ ಕಾರಣಕ್ಕೆ ಬೆಳವಾಡಿ ಎಂಬ ಗ್ರಾಮದಲ್ಲಿ ದಲಿತರ ಮೇಲೆ ಭೀಭತ್ಸ ಹಲ್ಲೆ ನಡೆಸಲಾಗಿದೆ.

ಇಂತಹ ಹತ್ತಾರು ಪ್ರಕರಣಗಳು ನಮ್ಮ ಮುಂದೆ ನಡೆಯುತ್ತಲೇ ಇವೆ. ವ್ಯವಸ್ಥೆಯ ಆಡಳಿತ ಮಾತ್ರ ಮೂಕಪ್ರೇಕ್ಷಕನಾಗಿ ಎಲ್ಲವನ್ನೂ ನೋಡುತ್ತಿದೆ. ರಾಜಕಾರಣಿಗಳು ತಮ್ಮತಮ್ಮ ಅನುಕೂಲಕ್ಕೆ ತಕ್ಕಂತೆ ದಲಿತ ವರ್ಗವನ್ನು ಬಳಸಿಕೊಳ್ಳುತ್ತಿದ್ದಾರೆ.

ದಲಿತರ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆಬರಲೆಂದು ಮೀಸಲಾತಿಯನ್ನು ನೀಡಿದರೂ, ಅದು ಕೂಡ ದುರ್ಬಳಕೆಯಾಗುತ್ತಿದೆ. ಇಂದು ಮೀಸಲು ಕ್ಷೇತ್ರಗಳು ಉಳ್ಳವರ ಹಿಡಿತದಲ್ಲಿದ್ದು, ಅಲ್ಲಿ ದಲಿತರು ಹೆಸರಿಗೆ ಮಾತ್ರ ಆ ಕ್ಷೇತ್ರದ ಪ್ರತಿನಿಧಿಗಳಾಗಿದ್ದಾರೆ.

ದಲಿತರ ಶಾಸಕಾಂಗದ ಕಥೆ ಹಾಗಿದ್ದರೆ, ಇನ್ನೂ ಕಾಯರ್ಾಂಗದ ಸ್ಥಿತಿ ವಿಭಿನ್ನ. ದಲಿತ ಅಧಿಕಾರಿಗಳು ಎಲ್ಲಿಯಾದರೂ, ಉನ್ನತ ಸ್ಥಾನದಲ್ಲಿದ್ದರೆ, ಆತನ ಪಕ್ಕಕ್ಕೆ ಕೆಳದಜರ್ೆಯಲ್ಲಿ ಕಾರ್ಯನಿರ್ವಹಿಸುತ್ತಿರುವವನಿಗೆ ಹೆಚ್ಚಿನ ಮಾನ್ಯತೆಯನ್ನು ಕೊಟ್ಟು, ದಲಿತರನ್ನು ದಲಿತರಿಗೆ ಎತ್ತಿಕಟ್ಟಿ ತೊಂದರೆ ನೀಡುವಂತಹ ವಾತಾವರಣ ಸೃಷ್ಟಿಯಾಗಿದೆ. ಕನರ್ಾಟಕದಲ್ಲಿರುವ ಅದೆಷ್ಟು ದಲಿತ ಅಧಿಕಾರಿಗಳಿಗೆ ದಿನನಿತ್ಯ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಸಮೀಕ್ಷೆಯೂ ನಡೆಯುವ ಕಾಲ ದೂರವಿಲ್ಲ. ಮೀಸಲಾತಿಯನ್ನು ಪಡೆದು ಅದೆಷ್ಟೋ ಮಂದಿ ಮುಖ್ಯವಾಹಿನಿಗೆ ಬರಬೇಕೆಂದು ಪ್ರಯತ್ನಿಸುತ್ತಿದ್ರೆ, ಅದಕ್ಕೆ ಅಡ್ಡಗಾಲು ಹಾಕುವ ಮಂದಿಯೇ ಹೆಚ್ಚಾಗಿದ್ದಾರೆ.

ಪ್ರಜಾಪ್ರಭುತ್ವದ ಕೊನೆಯ ಅಂಗವಾದ ನ್ಯಾಯಾಂಗದಲ್ಲಿ ದಲಿತರು ಇರುವುದು ಬೆರಳಣಿಕೆಯಷ್ಟು..? ದಲಿತ ನ್ಯಾಯಮೂತರ್ಿಗಳು ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೆ, ವಿನಾಕಾರಣ ಅವರಿಗೆ ತೊಂದರೆ ನೀಡುವುದು.. ಅವರ ವಿರುದ್ಧ ಇಲ್ಲಸಲ್ಲದ ಭ್ರಷ್ಟಾಚಾರದ ಆರೋಪಗಳನ್ನು ಮಾಡಿ, ಮಾನಸಿಕವಾಗಿ ಜರ್ಝರಿತರಾಗುವಂತೆ ಮಾಡುವುದು ವ್ಯವಸ್ಥಿತವಾಗಿ ನಡೆದಿದೆ. ಕನರ್ಾಟಕ ಲೋಕಾಯುಕ್ತಕ್ಕೆ ದಲಿತ ನ್ಯಾಯಮೂತರ್ಿಗಳನ್ನು ನೇಮಕ ಮಾಡಬೇಕೆಂದು ಪ್ರಸ್ತಾವ ಹೊರಬಿದ್ದದ್ದೇ ತಡ, ಎಲ್ಲರಿಗೆ ಇರುಸು ಮುರುಸು.

ಕೊನೆಯದಾಗಿ ತಾನೇ ಸ್ವಯಂ ಅಂಗವೆಂದುಕೊಂಡಿರುವುದು ಪತ್ರಿಕಾರಂಗ. ಈ ಪತ್ರಿಕಾರಂಗವು ಮೊದಲಿನಿಂದಲೂ ಮೇಲ್ವರ್ಗದ ಹಿಡಿತದಲ್ಲಿದೆ. ಇಲ್ಲಿ ದಲಿತರ್ಯಾಕೆ, ಬೇರೊಂದು ವರ್ಗದವರು ಕೂಡ ಭದ್ರವಾಗಿ ಉಳಿಯಲು ಆಗಿಲ್ಲ. ಇನ್ನೂ ದಲಿತರ ಮಾತು ಒತ್ತಟೆಗುಳಿಯಿತು. ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಟ ಮಾಡುವ ಮಂದಿಯನ್ನು ಖರೀಧಿ ಮಾಡಲಾಗಿದೆ. ಅವರಲ್ಲಿಯೇ ವಿವಾದಗಳನ್ನು ಸೃಷ್ಟಿಸಿ ಒಂದಿದ್ದ ದಲಿತ ಸಂಘವನ್ನು ಡಜನ್ಗಟ್ಟಲೇ ಹೊಡೆದುಹಾಕಲಾಗಿದೆ. ಸಾಹಿತಿಗಳು, ಬುದ್ದಿಜೀವಿಗಳು ಎಷ್ಟೇ ಮಂದಿ ಇದ್ದರೂ, ಅವುಗಳಿಗೆ ಎಡ, ಬಲವೆಂಬ ಹುಚ್ಚು ನೆತ್ತೀಗೇರಿದೆ.

ಪರಿಸ್ಥಿತಿ ಹೀಗಿರುವಾಗ ಈ ದೇಶದಲ್ಲಿ ದಲಿತರ ಮೇಲಿನ ನಿರಂತರ ದೌರ್ಜನ್ಯಕ್ಕೆ ಮುಕ್ತಿಯಾದರೂ ಎಂದು ಸಿಗುತ್ತದೆ. ಇದಕ್ಕೆ ಪ್ರಜ್ಞಾವಂತ ನಾಗರೀಕ ಸಮಾಜವೇ ಉತ್ತರಿಸಬೇಕಷ್ಟೆ.

No comments:

Post a Comment

Thanku