Friday, July 6, 2012

ನಂದಿಕೋಲ್ಮಠರಿಗೆ ರಾಜ್ಯಪ್ರಶಸ್ತಿಯ ಗರಿ

ಕಳೆದ 16 ವರ್ಷಗಳಿಂದ ಪ್ರಜಾವಾಣಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತ ಬಂದಿರುವ ವೃತ್ತಿಯಿಂದ ವಕೀಲರಾದ ಬಿ.ಎ. ನಂದಿಕೋಲಮಠ ಅವರು ತಮ್ಮದೆ ಆದ ಬರವಣಿಗೆಯ ಶೈಲಿಯನ್ನು ಹೊಂದಿದ್ದಾರೆ. ಅವರ ದಿಟ್ಟತನ ಹಾಗೂ ವೈಜ್ಞಾನಿಕ ವರದಿಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಹಲವು ಸಂಘಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
    ಗ್ರಾಮೀಣ ವರದಿಗಾರಿಕೆ, ನಮ್ಮ ಊರು ನಮ್ಮ ಜಿಲ್ಲೆ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಸುದ್ದಿಗಳನ್ನು ಬರೆಯುತ್ತಾ ಜನರ ಮನದಲ್ಲಿದ್ದಾರೆ. ಅವರ ಬರವಣಿಗೆಯ ಶೈಲಿಗೆ ಸಾಕಷ್ಟು ಓದುಗರು ಮಾರುಹೋಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮೀಣ, ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಮಾಡಿದ್ದಾರೆ. ಅವರ ನಿಷ್ಟುರತೆಗೆ ಸಂದ ಗೌರವವಾಗಿ ಈಗ ಮತ್ತೊಮ್ಮೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
    ಒಂದು ಬಾರಿ ಕ್ಯಾಮೆರಾ ಕ್ಲಿಕ್ ಆದರೆ ಅದಕ್ಕೆ ಸಂಬಂಧಿಸಿದ ಸುದ್ದಿ ಸಂಗ್ರಹಿಸಿ ವರದಿ ಮಾಡುವ ಅವರ ಕಠಿಣ ಪರಿಶ್ರಮಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ ದಿಟ್ಟತನಕ್ಕೆ ಸಂದ ಗೌರವವಾಗಿದೆ ಎಂಬುದು ಅವರ ಸ್ನೇಹಿತರ ನುಡಿ.
    1966ರಲ್ಲಿ ಲಿಂಗಸುಗೂರ ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ವೈದ್ಯ ಅಮರಯ್ಯ ನಂದಿಕೋಲಮಠ, ಸಂಗನಬಸಮ್ಮ ಅವರ ಮಗನಾಗಿ ಬಸವರಾಜು ಬೆಳೆದು ನಿಂತಿದ್ದಾರೆ. ಅವರ ತಂದೆಯವರ ಸಮಯ ಪ್ರಜ್ಞೆ, ನಿಷ್ಠುರತೆಗಳನ್ನೆ ಮೈಗೂಡಿಸಿಕೊಂಡು ಬಂದಿರುವ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಮುಗಿಸಿ, ಲಿಂಗಸುಗೂರಿನಲ್ಲಿ ಕಾಲೇಜು ಶಿಕ್ಷಣ ಪಡೆದು, ಕಾನೂನು ಪದವಿಯನ್ನು ಗುಲಬರ್ಗ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
    1992ರಲ್ಲಿ ಲಿಂಗಸುಗೂರಿನಲ್ಲಿ ಹಿರಿಯ ನ್ಯಾಯವಾದಿ ಎಸ್.ಪಿ. ಪಾಟೀಲ ಅವರಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದರು. 1994-95 ರಿಂದ ಹಲವು ಸ್ಥಳೀಯ ಪತ್ರಿಕೆಗಳಿಗೆ ಹವ್ಯಾಸಿ ಪತ್ರಕರ್ತರಾಗಿ ಕೆಲಸ ಮಾಡುತ್ತಾ, 1997 ರಿಂದ ರಾಜ್ಯಮಟ್ಟದ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಪ್ರಜಾವಾಣಿಯಲ್ಲಿ ವರದಿಗಾರರಾಗಿ ನೇಮಕಗೊಂಡರು. ಪ್ರಜಾವಾಣಿ ಪತ್ರಿಕೆಯ ಸಿದ್ಧಾಂತಗಳನ್ನು ಮನಸಾರೆ ಒಪ್ಪಿಕೊಂಡ ಅವರು ಜನಸಾಮಾನ್ಯರ ಧ್ವನಿಯಾಗಿ, ಸಮಸ್ಯೆಗಳನ್ನು ಹುಡುಕಿಕೊಂಡು ಹೋಗುತ್ತಾ, ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮೂಲಕ ತಮ್ಮ ಪತ್ರಿಕಾ ವರದಿಗಾರರ ವೃತ್ತಿಯನ್ನು ಆರಂಭಿಸಿದರು. ಕೆಲವೊಂದು ಬಾರಿ ತಮ್ಮ ನೈಜ ವರದಿಗಳಿಂದ ಕೆಲವು ಪ್ರತಿಷ್ಠಿತರ ಕೆಂಗೆಣ್ಣಿಗೆ ಗುರಿಯಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಸಂಗಗಳು ಬಂದವು.
    ಯಾವುದೇ ಒಂದು ಸುದ್ದಿ ಮಾಡಬೇಕಾದರೆ ಸ್ವತಃ ಆ ಸ್ಥಳಗಳಿಗೆ ಭೇಟಿ ನೀಡಿ, ಖುದ್ದಾಗಿ ವರದಿ ಸಂಗ್ರಹಿಸಿ ಜನಸಾಮಾನ್ಯರಿಗೆ ತಿಳಿಯುವ ಹಾಗೆ ವರದಿ ಮಾಡುತ್ತ ಬಂದಿರುವ ಇವರಿಗೆ ಕನರ್ಾಟಕ ರಕ್ಷಣಾ ವೇದಿಕೆ, ಕನರ್ಾಟಕ ದಲಿತ ಸಂಘರ್ಷ ಸಮಿತಿ, ಟಿಪ್ಪುಸುಲ್ತಾನ ಸಂಘಟನೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಇವರ ವರದಿಗಾರಿಕೆಯನ್ನು  ಮೆಚ್ಚಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸುತ್ತಾ ಬಂದಿವೆ. ಪತ್ರಿಕೋದ್ಯಮದ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉಪನ್ಯಾಸ ನೀಡುವ ಮೂಲಕ ವಾಕ್ಚಾತುರ್ಯತೆಯಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ.
    ಕನರ್ಾಟಕ ಮೀಡಿಯಾ ಆ್ಯಂಡ್ ನ್ಯೂಸ್ ಸೆಂಟರ್ ಪತ್ರಕರ್ತರ ವೇದಿಕೆ ಪ್ರತಿ ವರ್ಷ ಕೊಡ ಮಾಡುವ "ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ"ಗೆ ಪ್ರಸಕ್ತ ವರ್ಷ ಬಿ.ಎ ನಂದಿಕೋಲಮಠ ಅವರನ್ನು ಆಯ್ಕೆ ಮಾಡಿ, ಜುಲೈ 1ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

No comments:

Post a Comment

Thanku